ಚಿಕ್ಕಬಳ್ಳಾಪುರ, ಜೂನ್ 22: 1 ರೂಪಾಯಿಗೆ 1 ಟಿ ಶರ್ಟ್ ಕೊಡುವುದಾಗಿ ಆಫರ್ ಹಿನ್ನೆಲೆ ಗ್ರಾಹಕರು ಬಟ್ಟೆ ಅಂಗಡಿಗೆ ಮುಗಿಬಿದ್ದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗರದಲ್ಲಿ ನಡೆದಿದೆ. ಚಿಂತಾಮಣಿ ನಗರದ ಬೆಂಗಳೂರು ಮುಖ್ಯರಸ್ತೆಯಲ್ಲಿರುವ ಅಂಗಡಿ ಎದುರು ಜಮಾಯಿಸಿರುವ ಗ್ರಾಹಕರನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ ಪಟ್ಟಿದ್ದಾರೆ. ಬಟ್ಟೆ ಅಂಗಡಿ ಓಪನಿಂಗ್ಗೆ ಗ್ರಾಹಕರನ್ನು ಸೆಳೆಯಲು ಅಂಗಡಿಯವರು ಆಫರ್ ಘೋಷಿಸಿದ್ದರು ಎನ್ನಲಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
