10 ಲಕ್ಷ ರೂ.ಗೆ ಹೊಸ ತಂಡ ಸೇರಿದ ಅರ್ಜುನ್ ತೆಂಡೂಲ್ಕರ್ – Kannada News | Arjun Tendulkar Joins Mumbai T20 League for ₹10 Lakh Amidst IPL 2024 Wait

ಲೆಜೆಂಡರಿ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್​ಗೆ (Arjun Tendulkar) ಈ ಬಾರಿಯ ಐಪಿಎಲ್‌ನಲ್ಲಿ (IPL 2026) ಇದುವರೆಗೆ ಆಡುವ ಅವಕಾಶ ಸಿಕ್ಕಿಲ್ಲ. ಪ್ರಸ್ತುತ ಲಕ್ನೋ ಸೂಪರ್ ಜೈಂಟ್ಸ್‌ ತಂಡದ ಭಾಗವಾಗಿರುವ ಅರ್ಜುನ್ ತೆಂಡೂಲ್ಕರ್ ಮೊದಲ ಪಂದ್ಯಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆ ಅರ್ಜುನ್ ತೆಂಡೂಲ್ಕರ್ ಹೊಸ ತಂಡವನ್ನು ಕೂಡಿಕೊಂಡಿದ್ದಾರೆ. ವಾಸ್ತವವಾಗಿ ಮುಂಬರುವ ದಿನಗಳಲ್ಲಿ ಮುಂಬೈನಲ್ಲಿ ಮುಂಬೈ ಟಿ20 ಲೀಗ್ ನಡೆಯಲಿದ್ದು, ಈ ಲೀಗ್​ಗೆ ನಡೆದ ಹರಾಜಿನಲ್ಲಿ ಅರ್ಜುನ್ ಅವರನ್ನು 10 ಲಕ್ಷ ರೂಗಳಿಗೆ ಖರೀದಿ ಮಾಡಲಾಗಿದೆ.

ಮೇ 2 ರ ಶನಿವಾರದಂದು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಟಿ20 ಲೀಗ್‌ಗಾಗಿ ಆಟಗಾರರ ಹರಾಜು ನಡೆಸಿತು. ಈ ಹರಾಜಿನಲ್ಲಿ ಅರ್ಜುನ್ ತೆಂಡೂಲ್ಕರ್ ಪ್ರಮುಖ ಗಮನ ಸೆಳೆದಿದ್ದರು. ಏಕೆಂದರೆ ಅರ್ಜುನ್ ದೇಶೀಯ ಸರ್ಕ್ಯೂಟ್‌ನಲ್ಲಿ ಗೋವಾ ತಂಡಕ್ಕಾಗಿ ಆಡುತ್ತಾರೆ. ಆದರೆ ಟಿ20 ಮುಂಬೈ ಲೀಗ್ MCA ಯ ಭಾಗವಾಗಿರುವ ಆಟಗಾರರಿಗೆ ಮಾತ್ರ ಅವಕಾಶ ನೀಡುತ್ತದೆ. ಆದಾಗ್ಯೂ ಅರ್ಜುನ್​ಗೆ ಲೀಗ್‌ನಲ್ಲಿ ಆಡಲು ಅನುಮೋದನೆ ನೀಡಲಾಗಿದೆ.

10 ಲಕ್ಷಕ್ಕೆ ಅರ್ಜುನ್ ಮಾರಾಟ

26 ವರ್ಷದ ಅರ್ಜುನ್ ತೆಂಡೂಲ್ಕರ್ ಲೀಗ್‌ನಲ್ಲಿ ಆಡಲು ಅವಕಾಶ ಪಡೆದಿದ್ದಲ್ಲದೆ, ಹರಾಜಿನಲ್ಲಿ ARCS ಅಂಧೇರಿ ತಂಡವನ್ನುಕೂಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅರ್ಜುನ್ ಅವರನ್ನು ಈ ತಂಡ 10 ಲಕ್ಷ ರೂ.ಗೆ ಬಿಡ್ ಮಾಡಿ ತನ್ನ ತೆಕ್ಕೆಗೆ ಹಾಕಿಕೊಂಡಿತು. ವಾಸ್ತವವಾಗಿ 2 ಲಕ್ಷ ರೂ. ಮೂಲ ಬೆಲೆಯೊಂದಿಗೆ ಹರಾಜಿಗೆ ಬಂದಿದ್ದ ಅರ್ಜುನ್ ಅವರನ್ನು 5 ಪಟ್ಟು ಹೆಚ್ಚು ಮೊತ್ತ ನೀಡಿ ಖರೀದಿ ಮಾಡಲಾಗಿದೆ. ಅರ್ಜುನ್ ತೆಂಡೂಲ್ಕರ್ ಜೊತೆಗೆ, ARCS ಅಂಧೇರಿ ಯುವ ಸ್ಟಾರ್ ಬ್ಯಾಟ್ಸ್‌ಮನ್ ಮುಶೀರ್ ಖಾನ್ ಅವರನ್ನು 11 ಲಕ್ಷ ರೂ.ಗೆ ಖರೀದಿಸಿತು.

5 ಲಕ್ಷ ರೂ. ಮೂಲ ಬೆಲೆಯೊಂದಿಗೆ ಹರಾಜಿಗೆ ಬಂದ ಅರ್ಜುನ್ ತೆಂಡೂಲ್ಕರ್

ಐಪಿಎಲ್​ನಲ್ಲಿ ಆಡುವ ಅವಕಾಶ ಸಿಕ್ಕಿಲ್ಲ

ಕಳೆದ ಕೆಲವು ತಿಂಗಳುಗಳು ಅರ್ಜುನ್‌ಗೆ ಏರಿಳಿತಗಳಿಂದ ತುಂಬಿವೆ. ಕಳೆದ ವರ್ಷ, ಅವರನ್ನು ಮೊದಲ ಬಾರಿಗೆ ಮುಂಬೈ ಇಂಡಿಯನ್ಸ್ ಬಿಡುಗಡೆ ಮಾಡಿತು ಆದರೆ ಮರುಖರೀದಿ ಮಾಡಲಿಲ್ಲ. ಹರಾಜಿನಲ್ಲಿ, ಲಕ್ನೋ ಸೂಪರ್ ಜೈಂಟ್ಸ್ ಅವರನ್ನು 30 ಲಕ್ಷ ರೂ. ಮೂಲ ಬೆಲೆಗೆ ಖರೀದಿಸಿತು. ಆದಾಗ್ಯೂ, ಅವರು ಐಪಿಎಲ್ 19 ರಲ್ಲಿ ಇನ್ನೂ ಒಂದೇ ಒಂದು ಪಂದ್ಯವನ್ನು ಆಡಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:27 pm, Sat, 2 May 26

Source link

Leave a Reply

Your email address will not be published. Required fields are marked *