Headlines

100 ಕೋಟಿ ರೂ. ಮೌಲ್ಯದ ಆಸ್ತಿ ಬಚ್ಚಿಟ್ಟಿದ್ದಾರಾ ನಟ ವಿಜಯ್? ಏನಿದು ಹೊಸ ಆರೋಪ? – Kannada News | Over Rs 100 Crore Mismatch In TVK Chief Vijay election Affidavit

ಚೆನ್ನೈ, ಏಪ್ರಿಲ್ 20: ಟಿವಿಕೆ ಮುಖ್ಯಸ್ಥ ವಿಜಯ್ (Vijay) ತಮ್ಮ ನಾಮಪತ್ರದಲ್ಲಿ ತಮ್ಮ ಆಸ್ತಿ ವಿವರಗಳನ್ನು ಮರೆಮಾಡಿದ್ದಾರೆ ಎಂದು ಆರೋಪಿಸಿ ಪೆರಂಬೂರು ಮತದಾರ ವಿಘ್ನೇಶ್ ಮದ್ರಾಸ್ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದಾರೆ. 2 ಕ್ಷೇತ್ರಗಳಲ್ಲಿ ಚುನಾವಣೆಗೆ ನಿಂತಿರುವ ವಿಜಯ್ ಎರಡೂ ಕಡೆ ಸಲ್ಲಿಸಿದ ಅಫಿಡವಿಟ್​ನಲ್ಲಿ ಘೋಷಿಸಿದ ಆದಾಯದಲ್ಲಿ 105 ಕೋಟಿ ರೂ. ವ್ಯತ್ಯಾಸ ಕಂಡುಬಂದಿದೆ. ಟಿವಿಕೆ ಮುಖ್ಯಸ್ಥ ಹಾಗೂ ನಟ ವಿಜಯ್ ಅವರ ಚುನಾವಣಾ ಅಫಿಡವಿಟ್‌ಗಳಲ್ಲಿ 100 ಕೋಟಿ ರೂ.ಗಳಿಗೂ ಹೆಚ್ಚು ವ್ಯತ್ಯಾಸವಾಗಿದೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿಗೆ ಪ್ರತಿಕ್ರಿಯಿಸುವಂತೆ ಮದ್ರಾಸ್ ಹೈಕೋರ್ಟ್ ಆದಾಯ ತೆರಿಗೆ ಇಲಾಖೆಗೆ ಆದೇಶಿಸಿದೆ.

ಡಿಎಂಕೆಯ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಆಡಳಿತವಿರುವ ತಮಿಳುನಾಡು ರಾಜ್ಯದಲ್ಲಿ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ವಿಜಯ್ ಮತ್ತು ಅವರ ಹೊಸ ಪಕ್ಷ ತಮಿಳಗ ವೆಟ್ರಿ ಕಳಗಂ (ಟಿವಿಕೆ)ಗೆ ಹೈಕೋರ್ಟ್‌ನ ಈ ಆದೇಶದಿಂದ ಭಾರೀ ಹಿನ್ನಡೆಯಾಗಿದೆ.

ಇದನ್ನೂ ಓದಿ: ತಮಿಳುನಾಡಲ್ಲಿ ಟಿವಿಕೆಗೆ ಕಾಂಗ್ರೆಸ್ ಬೆಂಬಲ ನೀಡಿಲ್ಲ; ವಿಜಯ್ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು

ತಮಿಳುನಾಡು ಚುನಾವಣೆಯಲ್ಲಿ ತಿರುಚ್ಚಿ ಮತ್ತು ಪೆರಂಬೂರು ಎಂಬ 2 ಕ್ಷೇತ್ರಗಳಿಂದ ಸ್ಪರ್ಧಿಸಲು ವಿಜಯ್ ಅರ್ಜಿಗಳನ್ನು ಸಲ್ಲಿಸಿದ್ದರು. ಪೆರಂಬೂರಿನ ಮತದಾರರೊಬ್ಬರು ನ್ಯಾಯಾಲಯದ ಮೊರೆ ಹೋಗಿ ಎರಡು ಸ್ಥಾನಗಳಿಗೆ ಸಲ್ಲಿಸಿದ ಅಫಿಡವಿಟ್‌ಗಳಲ್ಲಿ ವಿಜಯ್ ಅವರ ಆದಾಯದಲ್ಲಿ ಹೊಂದಾಣಿಕೆಯಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ.

ತಿರುಚ್ಚಿ ಸ್ಥಾನಕ್ಕೆ ಸಲ್ಲಿಸಿದ ವಿಜಯ್ ಅವರ ಅಫಿಡವಿಟ್​​ನಲ್ಲಿ 220.15 ಕೋಟಿ ರೂ. ಆದಾಯವನ್ನು ತೋರಿಸಿದ್ದರೆ, ಇನ್ನೊಂದು ಸ್ಥಾನಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ 115.13 ಕೋಟಿ ರೂ. ಆದಾಯವಿದೆ ಎಂದು ದಾಖಲೆ ನೀಡಲಾಗಿದೆ. ಇವೆರಡೂ ಆದಾಯದಲ್ಲಿ 105 ಕೋಟಿ ರೂ.ಗಳ ವ್ಯತ್ಯಾಸವಿದೆ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಅಭಿಮಾನಿ ಎಸೆದ ಹೂವಿನ ಮಾಲೆಯನ್ನು ಬಾಂಬ್ ಎಂದು ತಿಳಿದು ಓಡಿದ ದಳಪತಿ ವಿಜಯ್

ನಟ-ರಾಜಕಾರಣಿಯಾಗಿರುವ ವಿಜಯ್ ತಮಿಳುನಾಡು ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆಯಲ್ಲಿ ತಮ್ಮ ಚೊಚ್ಚಲ ಪ್ರವೇಶ ಮಾಡುವ ಸಾಧ್ಯತೆಯಿದೆ. ತಿರುಚಿರಾಪಳ್ಳಿ ಪೂರ್ವದಲ್ಲಿ ವಿಜಯ್ ಡಿಎಂಕೆಯ ಇನಿಗೋ ಎಸ್. ಇರುದಯರಾಜ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಪೆರಂಬೂರಿನಲ್ಲಿ, ಅವರು ಡಿಎಂಕೆ ಶಾಸಕ ಆರ್.ಡಿ ಶೇಖರ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.

ತಮಿಳುನಾಡಿನಲ್ಲಿ ಏಪ್ರಿಲ್ 23ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ 4ರಂದು ಮತ ಎಣಿಕೆ ನಡೆಯಲಿದೆ. ಕಾಂಗ್ರೆಸ್, ಡಿಎಂಡಿಕೆ ಮತ್ತು ವಿಸಿಕೆ ಒಳಗೊಂಡ ಡಿಎಂಕೆ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ, ಬಿಜೆಪಿ ಮತ್ತು ಪಿಎಂಕೆ ಮೈತ್ರಿಕೂಟಗಳನ್ನು ಹೊಂದಿರುವ ಎಐಎಡಿಎಂಕೆ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ನಡುವೆ ಪ್ರಮುಖ ಸ್ಪರ್ಧೆ ಏರ್ಪಡಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *