13 ಎಸೆತಗಳಲ್ಲಿ ಭರ್ಜರಿ ದಾಖಲೆ ಬರೆದ ಜೇಕಬ್ ಡಫಿ

13 ಎಸೆತಗಳಲ್ಲಿ ಭರ್ಜರಿ ದಾಖಲೆ ಬರೆದ ಜೇಕಬ್ ಡಫಿ

ಐಪಿಎಲ್​ ಸೀಸನ್-19 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶುಭಾರಂಭ ಮಾಡಿದೆ. ಈ ಶುಭಾರಂಭಕ್ಕೆ ಮುಖ್ಯ ಕಾರಣ ಆರ್​ಸಿಬಿ ತಂಡದ ನೂತನ ವೇಗಿ ಜೇಕಬ್ ಡಫಿ ಎಂದರೆ ತಪ್ಪಾಗಲಾರದು. ಏಕೆಂದರೆ ಈ ಮ್ಯಾಚ್​ನಲ್ಲಿ ಕರಾರುವಾಕ್ ದಾಳಿ ಸಂಘಟಿಸಿದ ಡಫಿ 4 ಓವರ್​ಗಳಲ್ಲಿ ನೀಡಿದ್ದು ಕೇವಲ 22 ರನ್​ಗಳು ಮಾತ್ರ.

ಅಷ್ಟೇ ಅಲ್ಲದೆ ಪಂದ್ಯದ ಆರಂಭದಲ್ಲೇ ಡೇಂಜರಸ್ ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್ ಹಾಗೂ ನಿತೀಶ್ ಕುಮಾರ್ ರೆಡ್ಡಿ ಅವರ ವಿಕೆಟ್ ಕಬಳಿಸುವ ಮೂಲಕ ಆರ್​ಸಿಬಿ ತಂಡಕ್ಕೆ ಅತ್ಯುತ್ತಮ ಆರಂಭ ಒದಗಿಸಿದ್ದರು.  ಈ ಭರ್ಜರಿ ಆರಂಭದೊಂದಿಗೆ ಡಫಿ ವಿಶೇಷ ದಾಖಲೆಯನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ.

ಈ ಪಂದ್ಯದಲ್ಲಿ 4 ಓವರ್​ಗಳನ್ನು ಎಸೆದಿದ್ದ ಜೇಕಬ್ ಡಫಿ 13 ಡಾಟ್ ಬಾಲ್ ಮಾಡಿದ್ದರು. ಅಂದರೆ 24 ಎಸೆತಗಳಲ್ಲಿ ಡಫಿ 11 ಬಾಲ್​ಗಳಲ್ಲಿ ಮಾತ್ರ ರನ್ ನೀಡಿದ್ದರು. ಇನ್ನುಳಿದ 13 ಬಾಲ್​ಗಳನ್ನು ಡಾಟ್ ಮಾಡುವ ಮೂಲಕ ಐಪಿಎಲ್ ಇತಿಹಾಸದಲ್ಲೇ ಪಾದಾರ್ಪಣೆ ಪಂದ್ಯದಲ್ಲೇ ಅತ್ಯಧಿಕ ಡಾಟ್ ಬಾಲ್ ಎಸೆದ ಬೌಲರ್ ಎನಿಸಿಕೊಂಡಿದ್ದಾರೆ.

ಈ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್​ನ ಚೊಚ್ಚಲ ಪಂದ್ಯದಲ್ಲೇ ಹೊಸ ಇತಿಹಾಸ ನಿರ್ಮಿಸುವಲ್ಲಿ ನ್ಯೂಝಿಲೆಂಡ್​ನ ಜೇಕಬ್ ಡಫಿ ಯಶಸ್ವಿಯಾಗಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್​ರೈಸರ್ಸ್ ಹೈದರಾಬಾದ್ ತಂಡವು 20 ಓವರ್​ಗಳಲ್ಲಿ 201 ರನ್ ಕಲೆಹಾಕಿದ್ದರು. ಈ ಕಠಿಣ ಗುರಿಯನ್ನು ಆರ್​ಸಿಬಿ ತಂಡ ಕೇವಲ 15.4 ಓವರ್​ಗಳಲ್ಲಿ ಚೇಸ್ ಮಾಡಿ 6 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಯಲ್ಲಾಗಿಯೇ ಐಪಿಎಲ್ ಅಭಿಯಾನ ಆರಂಭಿಸಿದ್ದಾರೆ.

Source link

Leave a Reply

Your email address will not be published. Required fields are marked *