200 ಕೋಟಿ ರೂ. ಗಳಿಸಿದ ‘ಭೂತ್ ಬಂಗ್ಲ’ ಹಿಟ್ ಅಥವಾ ಫ್ಲಾಪ್? ಬಜೆಟ್ ಲೆಕ್ಕಾಚಾರ ಇಲ್ಲಿದೆ – Kannada News | Akshay Kumar Bhooth Bangla movie Box Office Collection Rs 200 Crore milestone

ಖ್ಯಾತ ನಟ ಅಕ್ಷಯ್ ಕುಮಾರ್ (Akshay Kumar) ಅವರಿಗೆ ಈ ವರ್ಷ ಅದೃಷ್ಟ ಒಲಿದು ಬಂದಂತಿದೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ಅವರಿಗೆ ಈಗ ‘ಭೂತ್ ಬಂಗ್ಲ’ (Bhooth Bangla) ಸಿನಿಮಾ ಕೈ ಹಿಡಿದಿದೆ. ಏಪ್ರಿಲ್ 17ರಂದು ತೆರೆಕಂಡ ಈ ಹಾರರ್-ಕಾಮಿಡಿ ಸಿನಿಮಾ, ಕೇವಲ 13 ದಿನಗಳಲ್ಲಿ ವಿಶ್ವಾದ್ಯಂತ 200 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಅಬ್ಬರಿಸುತ್ತಿದೆ. ಅಕ್ಷಯ್ ಕುಮಾರ್ ಅವರ ವೃತ್ತಿಜೀವನದಲ್ಲಿ 200 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ 12ನೇ ಸಿನಿಮಾ ಇದಾಗಿದೆ.

ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಈ ಸಿನಿಮಾ ಸ್ಥಿರವಾಗಿ ಮುನ್ನುಗ್ಗುತ್ತಿದೆ. ಕಳೆದ 13 ದಿನಗಳಲ್ಲಿ ಈ ಚಿತ್ರ ಭಾರತದಲ್ಲಿ 124.50 ಕೋಟಿ ರೂಪಾಯಿ ನೆಟ್ ಕಲೆಕ್ಷನ್ (147.90 ಕೋಟಿ ಗ್ರಾಸ್) ಮಾಡಿದೆ. ಮೊದಲ ವಾರಾಂತ್ಯದಲ್ಲಿ 58 ಕೋಟಿ ರೂಪಾಯಿ ಗಳಿಸಿದ್ದ ಈ ಸಿನಿಮಾ, ಎರಡನೇ ವಾರಾಂತ್ಯದಲ್ಲೂ 27 ಕೋಟಿ ರೂಪಾಯಿ ಲೂಟಿ ಮಾಡುವಲ್ಲಿ ಯಶಸ್ವಿಯಾಗಿದೆ. ವಿದೇಶಿ ಮಾರುಕಟ್ಟೆಯಲ್ಲಿ ಸುಮಾರು 5.6 ಮಿಲಿಯನ್ ಡಾಲರ್ (ಅಂದಾಜು 46 ಕೋಟಿ ರೂಪಾಯಿ) ಗಳಿಸುವ ಮೂಲಕ ಒಟ್ಟಾರೆ ಮೊತ್ತ 200 ಕೋಟಿ ರೂಪಾಯಿಯ ಗಡಿ ದಾಟಿದೆ.

ಟ್ರೆಡ್ ರಿಪೋರ್ಟ್‌ಗಳ ಪ್ರಕಾರ, ‘ಭೂತ್ ಬಂಗ್ಲ’ ಚಿತ್ರದ ನಿರ್ಮಾಣ ವೆಚ್ಚ ಸುಮಾರು 100 ಕೋಟಿ ರೂಪಾಯಿ ಮಾತ್ರ. ಪ್ರಚಾರ ಮತ್ತು ಮಾರ್ಕೆಟಿಂಗ್ ವೆಚ್ಚ ಸೇರಿ ಒಟ್ಟು 120 ಕೋಟಿ ರೂಪಾಯಿ ಬಜೆಟ್‌ನಲ್ಲಿ ಈ ಸಿನಿಮಾ ಸಿದ್ಧವಾಗಿದೆ. ಸಿನಿಮಾ ಲಾಭದ ಹಾದಿಗೆ ಬರಲು 120 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಬೇಕಿತ್ತು. ಚಿತ್ರವು 12ನೇ ದಿನವೇ ಈ ಮೈಲಿಗಲ್ಲನ್ನು ದಾಟಿದ್ದು, ಈಗ ಅಧಿಕೃತವಾಗಿ ಹಿಟ್ ಪಟ್ಟಿಗೆ ಸೇರಿದೆ. ಚಿತ್ರದ ಅಂತಿಮ ಪ್ರದರ್ಶನದ ವೇಳೆಗೆ ಭಾರತದಲ್ಲಿ 150 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ.

ಈವರೆಗಿನ ಭಾರತದ ಹಾರರ್-ಕಾಮಿಡಿ ಸಿನಿಮಾಗಳ ಪಟ್ಟಿಯಲ್ಲಿ ‘ಭೂತ್ ಬಂಗ್ಲ’ ಈಗ 5ನೇ ಸ್ಥಾನಕ್ಕೇರಿದೆ. ‘ಸ್ತ್ರೀ 2’ (875 ಕೋಟಿ), ‘ಭೂಲ್ ಭುಲಯ್ಯ 3’ (424 ಕೋಟಿ), ‘ಭೂಲ್ ಭುಲಯ್ಯ 2’ (266 ಕೋಟಿ) ‘ದಿ ರಾಜಾ ಸಾಬ್’ (208 ಕೋಟಿ) ‘ಭೂತ್ ಬಂಗ್ಲ’ (200 ಕೋಟಿ) ಸಿನಿಮಾಗಳು ಟಾಪ್ 5 ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಇದನ್ನೂ ಓದಿ: ‘ನನಗೆ ಆ ರೀತಿ ಮೀಸೆ ಬರಲ್ಲ’: ನೇರವಾಗಿ ಒಪ್ಪಿಕೊಂಡು ಜನರ ಕ್ಷಮೆ ಕೇಳಿದ ಅಕ್ಷಯ್ ಕುಮಾರ್

ಪ್ರಭಾಸ್ ನಟನೆಯ ‘ದ ರಾಜಾ ಸಾಬ್’ ಚಿತ್ರದ ದಾಖಲೆಯನ್ನು ಈ ವಾರಾಂತ್ಯದಲ್ಲಿ ‘ಭೂತ್ ಬಂಗ್ಲ’ ಮುರಿಯುವ ಸಾಧ್ಯತೆ ದಟ್ಟವಾಗಿದೆ. ಆದರೆ, ‘ದ ಡೆವಿಲ್ ವೇರ್ಸ್ ಪ್ರಾಡಾ 2’ ಮತ್ತು ‘ರಾಜಾ ಶಿವಾಜಿ’ ಅಂತಹ ಹೊಸ ಸಿನಿಮಾಗಳ ಪೈಪೋಟಿಯ ನಡುವೆ ‘ಭೂತ್ ಬಂಗ್ಲ’ ಹೇಗೆ ಪ್ರದರ್ಶನ ಕಾಣಲಿದೆ ಎಂಬುದನ್ನು ಕಾದುನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *