25 ದಿನ ಪೂರೈಸಿ ಸೂಪರ್ ಹಿಟ್ ಎನಿಸಿಕೊಂಡ ‘ರಕ್ಕಸಪುರದೋಳ್’ ಸಿನಿಮಾ

25 ದಿನ ಪೂರೈಸಿ ಸೂಪರ್ ಹಿಟ್ ಎನಿಸಿಕೊಂಡ ‘ರಕ್ಕಸಪುರದೋಳ್’ ಸಿನಿಮಾ

ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹೊಂದಿರುವ ‘ರಕ್ಕಸಪುರದೋಳ್’ (Raj B Shetty) ಸಿನಿಮಾವನ್ನು ಜನರು ಮೆಚ್ಚಿಕೊಂಡಿದ್ದಾರೆ. ಫೆಬ್ರವರಿ 6ರಂದು ಬಿಡುಗಡೆ ಆಗಿದ್ದ ಈ ಸಿನಿಮಾ ಸೂಪರ್ ಹಿಟ್ ಆಗಿದೆ. ಯಶಸ್ವಿಯಾಗಿ 25 ದಿನಗಳನ್ನು ಪೂರೈಸಿದೆ. ಅಲ್ಲದೇ, ಸುಮಾರು ಕಡೆಗಳಲ್ಲಿ 50ನೇ ದಿನದತ್ತ ಮುನ್ನುಗುತ್ತಿದೆ. ಆ ಮೂಲಕ 2026ರ ಮೊದಲ‌ ಸೂಪರ್ ಹಿಟ್ ಕನ್ನಡ ಸಿನಿಮಾ ಖ್ಯಾತಿಗೆ ‘ರಕ್ಕಸಪುರದೋಳ್’ ಪಾತ್ರವಾಗಿದೆ. ಈ ಸಿನಿಮಾದಿಂದ ನಟ ರಾಜ್ ಬಿ. ಶೆಟ್ಟಿ (Rakkasapuradhol) ಅವರ ಖಾತೆಗೆ ಇನ್ನೊಂದು ಹಿಟ್ ಸೇರ್ಪಡೆ ಆದಂತಾಗಿದೆ.

ರವಿ ಸಾರಂಗ ನಿರ್ದೇಶನದ ಹಾಗೂ ಸಾಹಸ ನಿರ್ದೇಶಕ ರವಿವರ್ಮಾ ಚೊಚ್ಚಲ ನಿರ್ಮಾಣದ ‘ರಕ್ಕಸಪುರದೋಳ್’ ಸಿನಿಮಾದ ಕ್ಲೈಮ್ಯಾಕ್ಸ್ ನೋಡಿ ಜನರು ಭೇಷ್ ಎಂದಿದ್ದಾರೆ. ಸಾಲು ಸಾಲು‌ ಸಿನಿಮಾಗಳು ಬಿಡುಗಡೆ ಆದರೂ ಕೂಡ ‘ರಕ್ಕಸಪುರದೋಳ್’ ಚಿತ್ರದ ಕ್ರೇಜ್ ಮಾತ್ರ ಕಡಿಮೆ ಆಗಿಲ್ಲ. ರಾಜ್ಯಾದ್ಯಂತ ಮಲ್ಟಿಪ್ಲೆಕ್ಸ್​ಗಳಲ್ಲಿ ವಾರಾಂತ್ಯದಲ್ಲಿ ಹೌಸ್ ಫುಲ್ ಪ್ರದರ್ಶನಗಳು ಕಾಣುತ್ತಿರುವುದು ವಿಶೇಷ.

ಈ ಸಿನಿಮಾದಲ್ಲಿ ರಾಜ್ ಬಿ. ಶೆಟ್ಟಿ, ಅನಿರುದ್ಧ್ ಭಟ್, ಅರ್ಚನಾ ಕೊಟ್ಟಿಗೆ, ಸ್ವಾತಿಷ್ಟ ಕೃಷ್ಣ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಈ ಸಿನಿಮಾದ ಕಥೆ ಮತ್ತು ಪಾತ್ರಗಳನ್ನು ಜನರು ಇಷ್ಟಪಟ್ಟಿದ್ದಾರೆ. ವಿಶೇಷವಾಗಿ ವಿಲನ್ ಪಾತ್ರ ಮಾಡಿರುವ ಅನಿರುದ್ಧ್ ಭಟ್ ಅವರಿಗೆ ಭಾರಿ ಮೆಚ್ಚುಗೆ ಸಿಕ್ಕಿದೆ. ಹಲವು ಚಿತ್ರಮಂದಿರಗಳಿಗೆ ಅವರು ಭೇಟಿ ನೀಡಿದ್ದಾರೆ.

ನಟನೆ ಮಾತ್ರವಲ್ಲೇ ಸಿನಿಮಾದ ಸಂಗೀತ, ಛಾಯಾಗ್ರಹಣಕ್ಕೂ ಜನರು ಫುಲ್ ಮಾರ್ಕ್ಸ್ ನೀಡಿದ್ದಾರೆ. ಕನ್ನಡ ಹಾಗೂ ಇತರೆ ಭಾಷೆಯ ಹಲವು ಹೊಸ ಸಿನಿಮಾಗಳ ನಡುವೆ ‘ರಕ್ಕಸಪುರದೋಳ್’ ಚಿತ್ರ ಟಫ್ ಪೈಪೋಟಿ ನೀಡಿದೆ. ಈ ಕಾಲದಲ್ಲಿ ಯಾವುದೇ ಸಿನಿಮಾ ಎರಡು ವಾರ ಪೂರೈಸುವುದೇ ಕಷ್ಟ ಎಂಬಂತಿದೆ. ಹಾಗಿರುವಾಗ ‘ರಕ್ಕಸಪುರದೋಳ್’ ಸಿನಿಮಾ 50ನೇ ದಿನದತ್ತ ಮುನ್ನುಗ್ಗುತ್ತಿದೆ.

ಇದನ್ನೂ ಓದಿ: ‘ರಕ್ಕಸಪುರದೋಳ್’ ವಿಲನ್ ಅನಿರುದ್ಧ್ ಭಟ್ ಬಗ್ಗೆ ಇಂಟರೆಸ್ಟಿಂಗ್ ವಿಷಯಗಳು

‘ರಕ್ಕಸಪುರದೋಳ್’ ಸಿನಿಮಾದ ಗೆಲುವಿನಿಂದ ಕನ್ನಡ ಚಿತ್ರರಂಗಕ್ಕೆ ಹೊಸ ಚೈತನ್ಯ ಸಿಕ್ಕಂತಾಗಿದೆ. ಹಾಕಿದ ಬಂಡವಾಳಕ್ಕಿಂತ ದುಪ್ಪಟ್ಟು ಕಲೆಕ್ಷನ್ ಆಗಿದೆ ಎಂಬ ಮಾಹಿತಿ ಸಿಕ್ಕಿದೆ. ಶೀಘ್ರದಲ್ಲೇ ಚಿತ್ರತಂಡದವರು ಸಕ್ಸಸ್ ಮೀಟ್ ಮಾಡಲಿದ್ದಾರೆ. ಆಗ ಬಾಕ್ಸ್ ಆಫೀಸ್ ಲೆಕ್ಕದ ಬಗ್ಗೆ ಅಧಿಕೃತ ಹೇಳಿಕೆ ಹೊರಬೀಳುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *