3ನೇ ಮದ್ವೆ ಆಸೆಗೆ 2ನೇ ಗಂಡನಿಗೆ ಪರಲೋಕದ ದಾರಿ: ತನಿಖೆಯಲ್ಲಿ ಬಯಲಾಯ್ತು ಖತರ್ನಾಕ್ ಸ್ಟೋರಿ

3ನೇ ಮದ್ವೆ ಆಸೆಗೆ 2ನೇ ಗಂಡನಿಗೆ ಪರಲೋಕದ ದಾರಿ: ತನಿಖೆಯಲ್ಲಿ ಬಯಲಾಯ್ತು ಖತರ್ನಾಕ್ ಸ್ಟೋರಿ

ತುಮಕೂರು, (ಮಾರ್ಚ್ 07): ಜನವರಿ 30ರಂದು ಹೃದಯಾಘಾತದಿಂದ ಸಾವನಪ್ಪಿದ್ದಾನೆ ಎನ್ನಲಾಗಿದ್ದ ತುಮಕೂರು (Tumakuru) ತಾಲ್ಲೂಕಿನ ಹೆಬ್ಬೂರು ಹೊಬಳಿಯ ದಾಸರಹಳ್ಳಿ ನಿವಾಸಿ ಪರಮೇಶ್ ಸಾವು ಪ್ರಕರಣಕ್ಕೆ (Paramesh Murder Case) ಸ್ಪೋಟಕ ಟ್ವಿಸ್ಟ್ ಸಿಕ್ಕಿದೆ. ಹೌದು.. ಪರಮೇಶ್ ಮೃತಪಟ್ಟು ಇನ್ನು ತಿಂಗಳ ಕಾರ್ಯವೂ ಸಹ ನಡೆದಿರಲಿಲ್ಲ. ಆತನ ಸಾವು ಸಂಭವಿಸಿದ ಕೇವಲ 20 ದಿನಕ್ಕೆ ಪತ್ನಿ ಆಶಾ ಇನ್ನೊಂದು ಮದುವೆಯಾಗಿದ್ದೇ ಪರಮೇಶನ ಸಾವಿನ ರಹಸ್ಯ ಬಟಾಬಯಲಾಗಿದೆ. ಅದಾಗಲೇ ಎರಡು ಮದ್ವೆಯಾಗಿದ್ದ ಆಶಾಗೆ ಮೂರನೇ ಮದುವೆ ಆಸೆಗೆ ಬಿದ್ದು ಇದೀಗ ಜೈಲು ಸೇರಿದ್ದಾಳೆ.

ಕೊಲೆ ರಹಸ್ಯ ಬಯಲಿಗೆ ಬಂಂದಿದ್ಹೇಗೆ?

ತುಮಕೂರು ತಾಲೂಕಿನ ಹೆಬ್ಬೂರಿನ ದಾಸರಹಳ್ಳಿ ನಿವಾಸಿ ಮೃತ ಪರಮೇಶ್ , ಆಶಾಳನ್ನ ಎರಡನೇ ಮದುವೆ ಆಗಿದ್ದ. ಮಾಗಡಿ ಮೂಲದ ಆಶಾ ಗಂಡ ಸತ್ತ ಬಳಿಕ ಪರಮೇಶ್​ನ 2ನೇ ಪತಿ ಆಗಿ ಸ್ವೀಕರಿಸಿ 10 ವರ್ಷ ಸಂಸಾರ ಮಾಡಿದ್ದಳು. ಆದ್ರೆ ಜನವರಿ 30ರಂದು ಪರಮೇಶ್ ಮೃತಪಟ್ಟಿದ್ದ. ಹಾರ್ಟ್ ಅಟ್ಯಾಕ್ ಆಗಿದೆ ಎಂದು ಆಶಾ ತರಾತುರಿಯಲ್ಲಿ ಗಂಡನ ಅಂತ್ಯಕ್ರಿಯೆ ಮಾಡಿ ಮುಗಿಸಿದ್ದಳು. ಪರಮೇಶ್ ಸತ್ತಾಗ ಯಾರೊಬ್ಬರಿಗೂ ಸಣ್ಣ ಅನುಮಾನ ಬಂದಿರಲಿಲ್ಲ. ಆದ್ರೆ ಗಂಡ ಸತ್ತ ಇಪ್ಪತ್ತೇ ದಿನಕ್ಕೆ ಆಶಾ 3ನೇ ಮದ್ವೆ ಆಗಿದ್ದಳು. ಆಗಲೇ ನೋಡಿ ಮೃತ ಪರಮೇಶ್ ಸಂಬಂಧಿಕರಿಗೆ ಸೊಸೆ ಮೇಲೆ ಅನುಮಾನ ಬಂದಿದ್ದು, ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಅಲರ್ಟ್ ಆದ ಹೆಬ್ಬೂರು ಪೊಲೀಸ್ರು ತನಿಖೆ ಕೈಗೊಳ್ಳುತ್ತಿದ್ದಂತೆಯೇ ಪರಮೇಶ್ ಕೊಲೆ ಸತ್ಯ ಬಯಲಾಗಿದೆ. ನಿನ್ನ ಗಂಡನನ್ನು ಯಾಕೆ ಹತ್ಯೆ ಮಾಡಿದೆ ತಾಯಿ ಅಂತಿದ್ದಂತೆ ಆಕೆ ಚಂದ್ರಪ್ಪನ ಜೊತೆಗಿನ ಪ್ರಣಯ ಪ್ರಸಂಗ ಬಿಚ್ಚಿಟ್ಟಿದ್ದಾಳೆ.

ಇದನ್ನೂ ಓದಿ: ಹೃದಯಾಘಾತ ಪ್ರಕರಣಕ್ಕೆ ಟ್ವಿಸ್ಟ್: ತಿಂಗಳ ಬಳಿಕ ಕೊಲೆ ರಹಸ್ಯ ಬಯಲು, ಪತ್ನಿಯೇ ಪತಿಗೆ ಚಟ್ಟ ಕಟ್ಟಿದ್ದು

ಮತ್ತೊಬ್ಬನ ಮೇಲಿನ ಆಸೆಗೆ ಗಂಡನನ್ನು ಕೊಂದ್ಲು

ಈ ಸ್ಟೋರಿಯಲ್ಲಿ ಅಸಲಿ ಟ್ವಿಸ್ಟ್ ಇನ್ನೂ ಇದೆ. ಗಂಡನನ್ನೇ ಕೊಂದ ಖತರ್ನಾಕ್ ಆಶಾ, ಚಂದ್ರಪ್ಪ ಎಂಬಾತನ ಮೋಡಿಗೆ ಮರುಳಾಗಿದ್ದಳು. ಕುಣಿಗಲ್ ಮೂಲದ ಚಂದ್ರಪ್ಪ ತನ್ನ ಮೊದಲ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ್ದ. ಗಂಡನ ಕಾಟ ತಾಳದೆ ಪತ್ನಿ ನೇಣಿಗೆ ಕೊರಳೊಡ್ಡಿದ್ದಳು. ಇದೇ ಕೇಸಲ್ಲಿ ಜೈಲಿನಲ್ಲಿ ಕಂಬಿ ಎಣಿಸಿ ಬಂದಿದ್ದ ಚಂದ್ರಪ್ಪ, ಅಡುಗೆ ಭಟ್ಟನಾಗಿ ಕೆಲಸ ಮಾಡಿಕೊಂಡಿದ್ದ.ಈ ಗ್ಯಾಪ್​​​ನಲ್ಲಿ ಆಶಾ ಹಾಗೂ ಚಂದ್ರಪ್ಪನ ನಡುವೆ ಲವ್ವಿಡವ್ವಿ ಶುರುವಾಗಿದ್ದು, ಬಳಿಕ ಇಬ್ಬರು ಮದುವೆ ನಿರ್ಧಾರಕ್ಕೆ ಬಂದಿದ್ದಾರೆ. ಆದ್ರೆ, ತನ್ನ 2ನೇ ಗಂಡ ಇದ್ದರೆ 3ನೇ ಮದುವೆ ಆಗಲು ಆಗಲ್ಲ ಎಂದು ಪ್ಲ್ಯಾನ್ ಮಾಡಿದ್ದ ಆಶಾ, ಉಸಿರುಗಟ್ಟಿಸಿ ಪರಮೇಶ್​ನ ಕಥೆ ಮುಗಿಸಿದ್ದಳು.

ಬಳಿಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಕಥೆ ಕಟ್ಟಿದ್ದಳು. ಇದನ್ನು ಎಲ್ಲರೂ ಸಹ ನಂಬಿ ಕಣ್ಣೀರಿಡುತ್ತ ಪರಮೇಶನ ಅಂತ್ಯಕ್ರಿಯೆ ಮಾಡಿ ಮುಸಿಗಿದ್ದರು. ಇದಾಗಿ ಕೇವಲ ಇಪ್ಪತ್ತೇ ದಿನಕ್ಕೆ ಆಶಾ, ಪ್ರಿಯಕರ ಚಂದ್ರಪ್ಪನನ್ನು ಮದುವೆಯಾಗಿ ಹನಿಮೂನ್​ಗೆ ಹೊರಟಿದ್ದಳು. ಆದ್ರೆ ಏನು ಮಾಡುವುದು ಗ್ರಹಚಾರ ಕೆಟ್ಟು ಈಗ ಇಬ್ಬರೂ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *