ಪುಣೆ, ಜೂನ್ 29: ತನ್ನ ಮೊಮ್ಮಗಳ ವಯಸ್ಸಿನ ಮಗುವಿನ ಮೇಲೆ ಅತ್ಯಾಚಾರವೆಸಗಿ ಕಾಮತೃಷೆ ತೀರಿಸಿಕೊಂಡು, ಬಳಿಕ ಆ ಮಗುವನ್ನು ನಿರ್ದಾಕ್ಷಿಣ್ಯವಾಗಿ ಕೊಲೆ ಮಾಡಿದ್ದ 65 ವರ್ಷದ ವ್ಯಕ್ತಿಗೆ ಪುಣೆ ಕೋರ್ಟ್ (Pune) ಗಲ್ಲುಶಿಕ್ಷೆ ವಿಧಿಸಿದೆ. ಮೂರು ವರ್ಷದ ಹೆಣ್ಣು ಮಗುವಿನ ಮೇಲೆ ಭೀಕರವಾಗಿ ಅತ್ಯಾಚಾರ ಎಸಗಿ, ನಂತರ ಆಕೆಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಮಹಾರಾಷ್ಟ್ರದ ಪುಣೆ ನ್ಯಾಯಾಲಯವು ಇಂದು ಆರೋಪಿಗೆ ಮರಣದಂಡನೆ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಪುಣೆಯ ವೇಗಧೂತ ನ್ಯಾಯಾಲಯ ಘಟನೆ ನಡೆದ 2 ತಿಂಗಳಲ್ಲೇ ಈ ತೀರ್ಪು ನೀಡಿದೆ.
ಈ ಘೋರ ಅಪರಾಧವು ಇದೇ ವರ್ಷ ಮೇ 1ರಂದು ಪುಣೆ ಜಿಲ್ಲೆಯ ಭೋರ್ ತಹಸಿಲ್‌ನಲ್ಲಿರುವ ನಸ್ರಾಪುರ ಗ್ರಾಮದಲ್ಲಿ ನಡೆದಿತ್ತು. ಭೀಮರಾವ್ ಕಾಂಬ್ಳೆ ಎಂಬ 65 ವರ್ಷದ ಆರೋಪಿಯು 3 ವರ್ಷದ ಮಗುವನ್ನು ಅಪಹರಿಸಿ, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದನು. ನಂತರ ಮಗು ಯಾರಿಗಾದರೂ ವಿಷಯ ತಿಳಿಸಬಹುದು ಎಂಬ ಭಯದಿಂದ ಮಗುವಿನ ತಲೆಗೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದನು. ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕೇವಲ 24 ಗಂಟೆಗಳ ಒಳಗೆ ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು.
ಇದನ್ನೂ ಓದಿ: ಅತ್ಯಾಚಾರ ನಡೆಸಿದ ತಂದೆ ವಿರುದ್ಧ ಒಬ್ಬಂಟಿಯಾಗಿ ಕಾನೂನು ಹೋರಾಟ ಗೆದ್ದ ಅಪ್ರಾಪ್ತೆ!: ಆರೋಪಿಗೆ 20 ವರ್ಷ ಜೈಲು ಶಿಕ್ಷೆ
“ಈ ಅಪರಾಧವನ್ನು ಅತ್ಯಂತ ಕ್ರೂರವಾಗಿ ಎಸಗಲಾಗಿದ್ದು, ಇದರಲ್ಲಿ ಸಂತ್ರಸ್ತ ಮಗುವಿಗೆ ಅಮಾನವೀಯ ಹಿಂಸೆ ನೀಡಲಾಗಿದೆ. ಸಂತ್ರಸ್ತೆ ಅತ್ಯಂತ ನಿರಪರಾಧಿ ಮತ್ತು ಅಸಹಾಯಕ ಮಗುವಾಗಿದ್ದಳು. ಕಾಮದ ಹಸಿವನ್ನು ನೀಗಿಸಿಕೊಳ್ಳಲು ಈ ಕೊಲೆ ಮಾಡಲಾಗಿದ್ದು, ಇದು ಸಂಪೂರ್ಣ ನೈತಿಕ ಪತನವನ್ನು ತೋರಿಸುತ್ತದೆ. ಇದು ಯಾವುದೇ ಪ್ರಚೋದನೆಯಿಲ್ಲದೆ ನಡೆದ ಕೊಲೆಯಾಗಿದೆ. ಈ ಅಪರಾಧವನ್ನು ಎಷ್ಟು ಕ್ರೂರವಾಗಿ ಮಾಡಲಾಗಿದೆಯೆಂದರೆ, ಇದು ಕೇವಲ ನ್ಯಾಯಾಂಗದ ಆತ್ಮಸಾಕ್ಷಿಯನ್ನು ಮಾತ್ರವಲ್ಲದೆ ಇಡೀ ಸಮಾಜದ ಆತ್ಮಸಾಕ್ಷಿಯನ್ನೇ ಬೆಚ್ಚಿಬೀಳಿಸಿದೆ” ಎಂದು ನ್ಯಾಯಾಧೀಶ ಸಾಳುಂಖೆ ಉಲ್ಲೇಖಿಸಿದ್ದಾರೆ.
Pune, Maharashtra: In the Nasrapur rape case, 65-year-old Bhimrao Kamble has been sentenced to death by District and Sessions Court Judge S.R. Salunkhe
Advocate Vipul Dushing says, “In this case, we were representing the victim, who is the original complainant. The accused has… pic.twitter.com/l59WetIyKm
— IANS (@ians_india) June 29, 2026
ವಿಶೇಷ ಪೋಕ್ಸೋ (POCSO) ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾದ ಸಾಳುಂಖೆ ಅವರು ಈ ತೀರ್ಪನ್ನು ಪ್ರಕಟಿಸಿದ್ದಾರೆ. ಈ ಪ್ರಕರಣವನ್ನು “ಅಪರೂಪದಲ್ಲೇ ಅಪರೂಪದ ಪ್ರಕರಣ” ಎಂದು ವರ್ಗೀಕರಿಸಿದ ನ್ಯಾಯಾಲಯ, ಸಮಾಜದಲ್ಲಿ ಇಂತಹ ಘೋರ ಕೃತ್ಯಗಳಿಗೆ ಯಾವುದೇ ಕ್ಷಮೆಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಗಂಗಾವತಿ ಬಿಜೆಪಿ ಮುಖಂಡನ ಹತ್ಯೆ ಪ್ರಕರಣ: ಆರು ಜನ ಹಂತಕರಿಗೆ ಗಲ್ಲು ಶಿಕ್ಷೆ
ನ್ಯಾಯಾಲಯವು ಆರೋಪಿಗೆ ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಪೋಕ್ಸೋ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಮರಣದಂಡನೆ ಹಾಗೂ ಭಾರಿ ದಂಡವನ್ನು ವಿಧಿಸಿದೆ. ತನಿಖೆಯ ಸಂದರ್ಭದಲ್ಲಿ ಪೊಲೀಸರು ಮಂಡಿಸಿದ ಬಲವಾದ ವೈಜ್ಞಾನಿಕ ಮತ್ತು ವೈದ್ಯಕೀಯ ಸಾಕ್ಷ್ಯಾಧಾರಗಳು ಆರೋಪಿಗೆ ಗರಿಷ್ಠ ಶಿಕ್ಷೆಯಾಗುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ.
#WATCH | Pune, Maharashtra | On the case of rape and murder of a minor girl in Nasrapur, Special Public Prosecutor Advocate Ajay Misar says, “Pune Session Judge has passed the final verdict of conviction and sentence of punishment. The accused Bhimrao Kamble is held guilty of all… pic.twitter.com/MS7c7NprxZ
— ANI (@ANI) June 29, 2026
ಏನಿದು ಪ್ರಕರಣ?:
ಈ ಆಘಾತಕಾರಿ ಘಟನೆ 2026ರ ಮೇ 1ರಂದು ಪುಣೆ ಜಿಲ್ಲೆಯ ಭೋರ್ ತಹಸಿಲ್‌ನಲ್ಲಿರುವ ನಸ್ರಾಪುರ ಗ್ರಾಮದಲ್ಲಿ ನಡೆದಿತ್ತು. ಪ್ರಾಸಿಕ್ಯೂಷನ್ ಪ್ರಕಾರ, 3 ವರ್ಷದ ಮಗುವನ್ನು ಕಾಂಬ್ಳೆ ಆಮಿಷ ಒಡ್ಡಿ ಕರೆದೊಯ್ದು, ಕ್ರೂರವಾಗಿ ಲೈಂಗಿಕ ದೌರ್ಜನ್ಯ ನಡೆಸಿ ಕೊಂದಿದ್ದನು. ಆರೋಪಿಯು ಅಪ್ರಾಪ್ತ ಬಾಲಕಿಯ ತಲೆಗೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ, ನಂತರ ಆಕೆಯ ಶವವನ್ನು ಹಸುಗಳ ಕೊಟ್ಟಿಗೆಯಲ್ಲಿ ಬಚ್ಚಿಟ್ಟಿದ್ದನು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
