ಕ್ರಿಕೆಟ್ ಇತಿಹಾಸದಲ್ಲೇ ಹಿಂದೆಂದೂ ಕಂಡರಿಯದ ಹೊಸ ವಿಶ್ವ ದಾಖಲೆ ನಿರ್ಮಾಣವಾಗಿದೆ. ಈ ವರ್ಲ್ಡ್ ರೆಕಾರ್ಡ್ ನಿರ್ಮಿಸಿದ್ದು ವೆಸ್ಟ್ ಇಂಡೀಸ್ ವೇಗಿ ಜಸ್ಟಿನ್ ಗ್ರೀವ್ಸ್. ಅದು ಕೂಡ 5 ಓವರ್ಗಳಲ್ಲಿ 5 ಮೇಡನ್ ಎಸೆದು 5 ವಿಕೆಟ್ ಕಬಳಿಸುವ ಮೂಲಕ ಎಂಬುದು ವಿಶೇಷ. (PC: Getty Images)
ಟ್ರಿನಿಡಾಡ್ನಲ್ಲಿ ನಡೆಯುತ್ತಿರುವ ಪಾಕಿಸ್ತಾನ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 64ನೇ ಓವರ್ ಎಸೆದ ಜಸ್ಟಿನ್ ಗ್ರೀವ್ಸ್ ಯಾವುದೇ ರನ್ ನೀಡದೇ ಶಾನ್ ಮಸೂದ್ ಅವರ ವಿಕೆಟ್ ಕಬಳಿಸಿದ್ದರು. ಇದಾದ ಬಳಿಕ 66ನೇ ಎಸೆತದ ಎಸೆದ ಗ್ರೀವ್ಸ್ ಮೇಡನ್ ಓವರ್ ಜೊತೆ್ಗೆ, ಪಾಕ್ ಆಲ್ರೌಂಡರ್ ಅಮೀರ್ ಜಮಾಲ್ ಅವರ ವಿಕೆಟ್ ಉಡಾಯಿಸಿದರು. (PC: Getty Images)
ಆ ಬಳಿಕ 68ನೇ ಓವರ್ನಲ್ಲಿ ಒಂದೇ ಒಂದು ರನ್ ಬಿಟ್ಟು ಕೊಡದೇ ಉಸ್ಮಾನ್ ಅಲಿ ಅವರ ವಿಕೆಟ್ ಪಡೆದರು. 70ನೇ ಓವರ್ ಅನ್ನು ಕೂಡ ಮೇಡನ್ ಮಾಡಿದ ಗ್ರೀವ್ಸ್ ಮೊಹಮ್ಮದ್ ರಿಝ್ವಾನ್ ಅವರ ವಿಕೆಟ್ ಕಬಳಿಸಿದರು. 72ನೇ ಓವರ್ನಲ್ಲೂ ಒಂದೇ ಒಂದು ರನ್ ನೀಡದೇ ಮೊಹಮ್ಮದ್ ಅಬ್ಬಾಸ್ ಅವರ ವಿಕೆಟ್ ಪಡೆದರು. (PC: Getty Images)
ಈ ಮೂಲಕ ಕ್ರಿಕೆಟ್ ಇತಿಹಾಸದಲ್ಲೇ ಸತತ 5 ಓವರ್ಗಳನ್ನು ಮೇಡನ್ ಮಾಡಿ 5 ವಿಕೆಟ್ ಕಬಳಿಸಿದ ವಿಶ್ವದ ಮೊದಲ ಬೌಲರ್ ಎಂಬ ವಿಶ್ವ ದಾಖಲೆಯನ್ನು ನಿರ್ಮಿಸಿದರು. ಹಾಗೆಯೇ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಹೆಸರಿನಲ್ಲಿದ್ದ ಭರ್ಜರಿ ದಾಖಲೆಯನ್ನು ಕೂಡ ಅಳಿಸಿ ಹಾಕಿದರು. (PC: Getty Images)
2016 ರಲ್ಲಿ ಜೋಹಾನ್ಸ್ಬರ್ಗ್ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ಸತತ ಓವರ್ಗಳನ್ನು ಮೇಡನ್ ಮಾಡಿ ಸ್ಟುವರ್ಟ್ ಬ್ರಾಡ್ 4 ವಿಕೆಟ್ ಪಡೆದಿದ್ದರು. ಈ ಮೂಲಕ ಸತತ ಮೇಡನ್ ಜೊತೆ 4 ವಿಕೆಟ್ ಕಬಳಿಸಿದ ವಿಶ್ವದ ಮೊದಲ ಬೌಲರ್ ಎನಿಸಿಕೊಂಡಿದ್ದರು. (PC: Getty Images)
ಇದೀಗ ವೆಸ್ಟ್ ಇಂಡೀಸ್ ವೇಗಿ ಜಸ್ಟಿನ್ ಗ್ರೀವ್ಸ್ ಈ ದಾಖಲೆಯನ್ನು ಮುರಿದಿದ್ದಾರೆ. ಅಲ್ಲದೆ 149 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಸತತ 5 ಓವರ್ಗಳನ್ನು ಮೇಡನ್ ಮಾಡಿ, 5 ವಿಕೆಟ್ ಕಬಳಿಸಿದ ವಿಶ್ವದ ಏಕೈಕ ಬೌಲರ್ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. (PC: Getty Images)
