ಮಂಗಳೂರು, ಆಗಸ್ಟ್ 07: ‘ರಾಜ್ಯದ ಪಂಚತಾರಾ ಹೋಟೆಲ್‌ಗಳ ಮೇಲೆ ಆಹಾರ ಇಲಾಖೆ ಅಧಿಕಾರಿಗಳ ದಾಳಿ ವೇಳೆ ಕೊಳೆತ ಈರುಳ್ಳಿ, ಡೆನ್ಮಾರ್ಕ್ನ ಹೆಪ್ಪುಗಟ್ಟಿದ ಮಾಂಸ, ಅವಧಿ ಮುಗಿದ ಹಾಲು ಪತ್ತೆ ಆಗಿದೆ. ಎಲ್ಲ ವಸ್ತುಗಳ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. ಮುಂದೆಯೂ ಈ ತಪಾಸಣೆಯನ್ನು ಮುಂದುವರಿಸುತ್ತೇವೆ’ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಜನರಿಗೆ ಆಹಾರದ ಸುರಕ್ಷತೆ ಬಗ್ಗೆ ತಿಳಿಸೋದು ನಮ್ಮ ಕರ್ತವ್ಯ. ಸ್ಟಾರ್ ಹೋಟೆಲ್ಗಳಲ್ಲಿ ಅಧಿಕಾರಿಗಳು ತಪಾಸಣೆ ಮಾಡಲ್ಲ ಅಂತಾ ಭಾವನೆ ಇದೆ. ಆದರೆ ಮೊದಲು ದೊಡ್ಡವರನ್ನು ಹಿಡಿಯಬೇಕು ಆಮೇಲೆ ಎಲ್ಲ ಸರಿ ಆಗುತ್ತದೆ. ಇನ್ನು ಮಾಂಸ ಯಾವಾಗ ತಂದಿರುವುದು, ಫ್ರೆಶ್ ಎಂಬುದರ ಬಗ್ಗೆ ಸೂಚನ ಫಲಕ ಹಾಕಬೇಕು. ಸದ್ಯ ಇದು ತಪಾಸಣೆ ಅಷ್ಟೇ, ಮುಂದೆ ನಿಯಮ ಮೀರಿದರೆ ಕಠಿಣ ಕ್ರಮ ನಿಶ್ಚಿತ’ ಎಂದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
