ಲೂಸ್ ಮಾದ (Loose Mada) ಎಂದೇ ಖ್ಯಾತರಾಗಿರುವ ಯೋಗಿ ಚಿತ್ರರಂಗಕ್ಕೆ ಕಾಲಿಟ್ಟು ದಶಕಗಳೇ ಕಳೆದಿವೆ. ವಿಲನ್ ಪಾತ್ರದ ಮೂಲಕ ಚಿತ್ರರಂಗಕ್ಕೆ ಬಂದ ಯೋಗಿ ಬಹು ಬೇಗ ನಾಯಕನಾಗಿ ನಟಿಸಲು ಆರಂಭಿಸಿದರು. ನೋಡ-ನೋಡುತ್ತಲೇ 49ಸಿನಿಮಾಗಳನ್ನು ಪೂರೈಸಿರುವ ಯೋಗಿ ಇದೀಗ ತಮ್ಮ 50ನೇ ಸಿನಿಮಾದ ಚಿತ್ರೀಕರಣವನ್ನೂ ಸಹ ಮುಗಿಸಿದ್ದಾರೆ. ಯಾವುದೇ ನಟನ ಜೀವನದಲ್ಲಿ 25, 50, 75, 100ನೇ ಸಿನಿಮಾ ಮಹತ್ವದ್ದಾಗಿರುತ್ತದೆ. ಅಂತೆಯೇ ಯೋಗಿ ಅವರಿಗೂ ಸಹ ಅವರ ನಟನೆಯ 50ನೇ ಸಿನಿಮಾ ‘ಕಿಂಗ್’ ಬಹಳ ಮಹತ್ವದ್ದಾಗಿದೆ. ಸಿನಿಮಾ ಬಗ್ಗೆ, ತಮ್ಮ ಇಷ್ಟು ವರ್ಷಗಳ ಜರ್ನಿ ಬಗ್ಗೆ ಯೋಗಿ ಮಾತನಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
