ಕೊಪ್ಪಳ, (ಫೆಬ್ರವರಿ 18): ಬಿಜೆಪಿ ಮಾಜಿ ಶಾಸಕ ಬಸವರಾಜ್ ಬಸವರಾಜ ದಡೇಸುಗೂರು ಹಾಗೂ ಸಚಿವ ಶಿವರಾಜ್ ತಂಗಡಗಿ ನಡುವೆ ವಾಕ್ಸಮರ ಜೋರಾಗಿದೆ. ನಾನು ರಕ್ತದಲ್ಲಿ ಬರೆದುಕೊಡ್ತೀನಿ ಈ ಬಾರಿ ತಂಗಡಗಿ ಸೋಲುತ್ತಾನೆ. ಇದಕ್ಕೆ 50 ಎಕರೆ ಜಮೀನು ಕೊಡುತ್ತೇನೆ. ಅಕಸ್ಮಾತ್ ನಾನು ಗೆದ್ರೆ ತಂಗಡಗಿ 50 ಎಕರೆ ಜಮೀನು ಕೊಡಬೇಕು ಎಂದು ಬಸವರಾಜ ದಡೇಸುಗೂರು ಸವಾಲು ಹಾಕಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಶಿವರಾಜ್ ತಂಗಡಗಿ, ನಿನ್ನ ಹತ್ರ ಏನೂ ಇಲ್ಲ ಅಂತಿದ್ದಿ. ಐವತ್ತು ಎಕರೆ ಜಮೀನು ಹೇಗೆ ಬಂತು? ನೂರು ಎಕರೆ ಜಮೀನು ಹೇಗೆ ಬಂತು? ನನ್ನ ಬಗ್ಗೆ ಮಾತಾಡೋ ಮುನ್ನ ನಿನ್ನ ಇತಿಹಾಸ ತಿಳಿದುಕೋ ಪುಣ್ಯಾತ್ಮ. ದೇವದಾಸಿಯರಿಗೆ ಚಪ್ಪಲಿಯಿಂದ ಹೊಡೆದಿದ್ದು ಯಾರು? ಶಿವರಾಜ್ ತಂಗಡಗಿ ಏನೂ ಅಂತಾ ಕ್ಷೇತ್ರದ ಜನರಿಗೆ ಗೊತ್ತಿದೆ. ನಿನ್ನೆ ವಿಡಿಯೋ ಅದನ್ನು ಬಿಡ್ಲಾ ಎಂದು ತಿರುಗೇಟು ನೀಡಿದ್ದಾರೆ.
