50 ವರ್ಷ ದಾಟಿದ ನಂತರ ದೇಹದಲ್ಲಿ ಹಲವು ಸ್ವಾಭಾವಿಕ ಬದಲಾವಣೆಗಳು ಆರಂಭವಾಗುತ್ತವೆ. ಚಯಾಪಚಯ ಕ್ರಿಯೆ (Metabolism) ನಿಧಾನಗೊಳ್ಳುವುದು, ಸ್ನಾಯುಗಳ ಬಲ ಕಡಿಮೆಯಾಗುವುದು, ಮೂಳೆ ಸಾಂದ್ರತೆ ಕಡಿಮೆಯಾಗುವುದು, ಹಾರ್ಮೋನ್ ಬದಲಾವಣೆಗಳು ಹಾಗೂ ರೋಗನಿರೋಧಕ ಶಕ್ತಿ ಕುಗ್ಗುವುದು ಸಾಮಾನ್ಯ. ಇಂತಹ ಕಾರಣದಿಂದ ಈ ವಯಸ್ಸಿನಲ್ಲಿ ಆರೋಗ್ಯಕರ ಆಹಾರ ಪದ್ಧತಿಯನ್ನು ಅನುಸರಿಸುವುದು ಅತ್ಯಂತ ಮುಖ್ಯ. ತಜ್ಞರ ಪ್ರಕಾರ, ಪೌಷ್ಟಿಕ ಆಹಾರ ಸೇವಿಸುವುದಷ್ಟೇ ಅಲ್ಲ, ಆರೋಗ್ಯಕ್ಕೆ ಹಾನಿ ಉಂಟುಮಾಡುವ ಕೆಲವು ಆಹಾರಗಳನ್ನು ಮಿತಿಗೊಳಿಸುವುದು ಅಥವಾ ಸಾಧ್ಯವಾದಷ್ಟು ದೂರವಿರುವುದು ಹೃದಯ, ಮಧುಮೇಹ, ರಕ್ತದೊತ್ತಡ ಹಾಗೂ ಕಿಡ್ನಿ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.
ಮೈದಾ ಮತ್ತು ರಿಫೈನ್ಡ್ ಕಾರ್ಬೋಹೈಡ್ರೇಟ್ ಆಹಾರಗಳು: ವೈಟ್ ಬ್ರೆಡ್, ಪಾಸ್ತಾ, ಕೇಕ್, ಬಿಸ್ಕತ್ ಹಾಗೂ ಮೈದಾದಿಂದ ತಯಾರಿಸಿದ ಆಹಾರಗಳಲ್ಲಿ ಫೈಬರ್ ಪ್ರಮಾಣ ತುಂಬಾ ಕಡಿಮೆ ಇರುತ್ತದೆ. ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ರಕ್ತದಲ್ಲಿನ ಸಕ್ಕರೆ ಮಟ್ಟ ವೇಗವಾಗಿ ಏರಬಹುದು, ತೂಕ ಹೆಚ್ಚಾಗುವ ಸಾಧ್ಯತೆ, ಟೈಪ್-2 ಮಧುಮೇಹದ ಅಪಾಯ ಹೆಚ್ಚಾಗಬಹುದು, ಜೀರ್ಣಕ್ರಿಯೆ ನಿಧಾನವಾಗಬಹುದು. ಸಂಪೂರ್ಣ ಧಾನ್ಯಗಳು, ಓಟ್ಸ್, ರಾಗಿ, ಜೋಳ, ಬ್ರೌನ್ ರೈಸ್ ಉತ್ತಮ ಆಯ್ಕೆಯಾಗಿದೆ.
ಪ್ರಾಸೆಸ್ಡ್ ಮಾಂಸಾಹಾರ: ಸಾಸೇಜ್, ಬೇಕನ್, ಸಲಾಮಿ, ಕ್ಯಾಂಡ್ ಮೀಟ್ ಮುಂತಾದ ಆಹಾರಗಳಲ್ಲಿ ಹೆಚ್ಚಿನ ಪ್ರಮಾಣದ ಉಪ್ಪು ಮತ್ತು ಸಂರಕ್ಷಕ ರಾಸಾಯನಿಕಗಳು (Preservatives) ಇರುತ್ತವೆ. ಇದರ ಸೇವನೆಯಿಂದ ರಕ್ತದೊತ್ತಡ ಹೆಚ್ಚಾಗುವುದು, ಹೃದಯರೋಗದ ಅಪಾಯ, ಕೊಲೆಸ್ಟ್ರಾಲ್ ಹೆಚ್ಚಾಗುವುದು, ಕಿಡ್ನಿ ಮೇಲಿನ ಒತ್ತಡ ಹೆಚ್ಚಾಗಬಹುದು. ಹಾಗಾಗಿ ತಾಜಾ ಮೀನು, ಚರ್ಮವಿಲ್ಲದ ಕೋಳಿ ಮಾಂಸ ಅಥವಾ ಸಸ್ಯಾಹಾರ ಪ್ರೋಟೀನ್ ಸೇವನೆ ಉತ್ತಮ ಆಯ್ಕೆಯಾಗಿದೆ.
ಕೃತಕ ಸಿಹಿ ಪದಾರ್ಥಗಳು ಮತ್ತು ಪ್ಯಾಕ್ ಮಾಡಿದ ಜ್ಯೂಸ್: ಡಯಟ್ ಸೋಡಾ, ಪ್ಯಾಕ್ ಮಾಡಿದ ಜ್ಯೂಸ್ ಹಾಗೂ ಕೃತಕ ಸಿಹಿ ಪದಾರ್ಥಗಳನ್ನು ಹೊಂದಿರುವ ಪಾನೀಯಗಳು ಆರೋಗ್ಯಕರವೆಂದು ಅನೇಕರು ಭಾವಿಸುತ್ತಾರೆ. ಆದರೆ ಇವುಗಳಲ್ಲಿ ಕೃತಕ ಸಿಹಿಕಾರಕಗಳು ಮತ್ತು ಸಂರಕ್ಷಕಗಳು ಇರಬಹುದು. ಇವುಗಳನ್ನು ಸೇವನೆಯಿಂದ ಕರುಳಿನ ಉತ್ತಮ ಬ್ಯಾಕ್ಟೀರಿಯಾ ಹಾನಿಗೊಳಗಾಗಬಹುದು, ಇನ್ಸುಲಿನ್ ಪ್ರತಿರೋಧ (Insulin Resistance) ಹೆಚ್ಚಾಗಬಹುದು, ಕೊಬ್ಬಿನ ಯಕೃತ್ತಿನ (Fatty Liver) ಅಪಾಯ ಹೆಚ್ಚಾಗಬಹುದು ಜೊತೆಗೆ ಮಧುಮೇಹದ ಅಪಾಯವೂ ಕಡಿಮೆಯಾಗಬಹುದು. ಇವುಗಳ ಬದಲಾಗಿ ತಾಜಾ ಹಣ್ಣು, ನಿಂಬೆ ನೀರು, ಸಕ್ಕರೆ ಇಲ್ಲದ ಮಜ್ಜಿಗೆ, ತೆಂಗಿನಕಾಯಿ ನೀರು ಉತ್ತಮ ಆಯ್ಕೆಯಾಗಿದೆ.
ಹೆಚ್ಚು ಉಪ್ಪು ಮತ್ತು ಎಣ್ಣೆಯಲ್ಲಿ ಕರಿದ ಆಹಾರ: ಚಿಪ್ಸ್, ಬಜ್ಜಿ, ಪಕೋಡಾ, ಫ್ರೆಂಚ್ ಫ್ರೈಸ್ ಹಾಗೂ ಹೆಚ್ಚು ಉಪ್ಪು ಇರುವ ಉಪ್ಪಿನಕಾಯಿ ಸೇವನೆಯನ್ನು ಮಿತಿಗೊಳಿಸಬೇಕು. ಇವು ರಕ್ತದೊತ್ತಡ ಏರಿಕೆ, ದೇಹದಲ್ಲಿ ನೀರು ಸಂಗ್ರಹವಾಗಿ ಕಾಲಿನಲ್ಲಿ ಊತ, ಹೃದಯ ಹಾಗೂ ಕಿಡ್ನಿ ಸಮಸ್ಯೆಗಳ ಅಪಾಯ, ಫ್ರೀ ರಾಡಿಕಲ್‌ಗಳಿಂದ ಜೀವಕೋಶಗಳಿಗೆ ಹಾನಿಯಾಗುತ್ತದೆ.
ಇದನ್ನೂ ಓದಿ: ಪೋಷಕರೇ ಎಚ್ಚರ! ಮಕ್ಕಳಲ್ಲಿ ಜಂಕ್ ಫುಡ್ ಅಭ್ಯಾಸ ಹೆಚ್ಚಿದರೆ ಈ ಗಂಭೀರ ಆರೋಗ್ಯ ಸಮಸ್ಯೆಗಳು ಬರಬಹುದು!
ಫುಲ್ ಫ್ಯಾಟ್ ಡೈರಿ ಉತ್ಪನ್ನಗಳು: ಹಾಲು, ಚೀಸ್, ಬೆಣ್ಣೆ ಮತ್ತು ಕ್ರೀಮ್‌ನಲ್ಲಿ ಸ್ಯಾಚುರೇಟೆಡ್ ಕೊಬ್ಬು ಹೆಚ್ಚಾಗಿ ಇರುತ್ತದೆ. ಇವು ಕೆಟ್ಟ ಕೊಲೆಸ್ಟ್ರಾಲ್ (LDL) ಹೆಚ್ಚಾಗಬಹುದು. ಹೃದಯರೋಗದ ಅಪಾಯ ಮತ್ತು ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ ಇಂತಹ ಸಮಸ್ಯೆ ತಡೆಯಲು ಸ್ಕಿಮ್ಡ್ ಹಾಲು, ಕಡಿಮೆ ಕೊಬ್ಬಿನ ಮೊಸರು, ಮಜ್ಜಿಗೆ ಉತ್ತಮ ಆಯ್ಕೆಯಾಗಿದೆ.
50 ವರ್ಷವಾದವರು ಆಹಾರದಲ್ಲಿ ಸೇರಿಸಬೇಕಾದ ಪೌಷ್ಟಿಕಾಂಶಗಳು
- ಹಸಿರು ಸೊಪ್ಪು
- ಬೇಳೆ ಮತ್ತು ಕಾಳುಗಳು
- ತಾಜಾ ಹಣ್ಣುಗಳು
- ಒಣಹಣ್ಣು ಮತ್ತು ಬೀಜಗಳು
- ಓಟ್ಸ್ ಮತ್ತು ಸಂಪೂರ್ಣ ಧಾನ್ಯಗಳು
- ಮೀನು (ಒಮೆಗಾ-3 ಸಮೃದ್ಧ)
- ಕಡಿಮೆ ಕೊಬ್ಬಿನ ಹಾಲು ಉತ್ಪನ್ನಗಳು
50 ವರ್ಷ ದಾಟಿದವರು ಅನುಸರಿಸಬೇಕಾದ ಆರೋಗ್ಯಕರ ಅಭ್ಯಾಸಗಳು
- ಪ್ರತಿದಿನ ಕನಿಷ್ಠ 30 ನಿಮಿಷ ವಾಕಿಂಗ್ ಮಾಡಿ.
- ವಾರದಲ್ಲಿ 2–3 ಬಾರಿ ಲಘು ವ್ಯಾಯಾಮ ಮಾಡಿ.
- ದಿನಕ್ಕೆ 7–8 ಗಂಟೆ ನಿದ್ರೆ ಮಾಡಿ.
- ದಿನಕ್ಕೆ 2–3 ಲೀಟರ್ ನೀರು ಕುಡಿಯಿರಿ.
- ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರಿ.
- ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ.
ಈ ಪರೀಕ್ಷೆಗಳನ್ನು ನಿಯಮಿತವಾಗಿ ಮಾಡಿಸಿಕೊಳ್ಳಿ
- ರಕ್ತದೊತ್ತಡ (BP)
- ರಕ್ತದಲ್ಲಿನ ಸಕ್ಕರೆ (Blood Sugar)
- HbA1c
- ಲಿಪಿಡ್ ಪ್ರೊಫೈಲ್
- ಕಿಡ್ನಿ ಕಾರ್ಯ ಪರೀಕ್ಷೆ
- ಲಿವರ್ ಕಾರ್ಯ ಪರೀಕ್ಷೆ
- ವಿಟಮಿನ್ D ಮತ್ತು B12
- ಮೂಳೆ ಸಾಂದ್ರತೆ ಪರೀಕ್ಷೆ (Bone Density) – ಅಗತ್ಯವಿದ್ದರೆ
ಗಮನಿಸಿ: ಈ ಲೇಖನವು ಸಾಮಾನ್ಯ ಆರೋಗ್ಯ ಮಾಹಿತಿಗಾಗಿ ಮಾತ್ರ. ನಿಮ್ಮ ಆರೋಗ್ಯ ಸ್ಥಿತಿ, ಮಧುಮೇಹ, ರಕ್ತದೊತ್ತಡ ಅಥವಾ ಇತರ ಕಾಯಿಲೆಗಳಿಗೆ ಅನುಗುಣವಾಗಿ ಆಹಾರ ಯೋಜನೆ ರೂಪಿಸಿಕೊಳ್ಳಲು ವೈದ್ಯರು ಅಥವಾ ಪೌಷ್ಟಿಕ ತಜ್ಞರ ಸಲಹೆ ಪಡೆಯಿರಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
