6 ತಂಡಗಳ ‘ಆಫ್ರಿಕಾ ಕಪ್’ ಆಯೋಜನೆಗೆ ಭರ್ಜರಿ ಪ್ಲ್ಯಾನ್

6 ತಂಡಗಳ ‘ಆಫ್ರಿಕಾ ಕಪ್’ ಆಯೋಜನೆಗೆ ಭರ್ಜರಿ ಪ್ಲ್ಯಾನ್

ಏಷ್ಯಾದಲ್ಲಿ ನಡೆಯುವ ‘ಏಷ್ಯಾ ಕಪ್‘ ಮಾದರಿಯಲ್ಲೇ ಆಫ್ರಿಕಾ ಖಂಡದಲ್ಲೂ ಬಲಿಷ್ಠ ಕ್ರಿಕೆಟ್ ರಾಷ್ಟ್ರಗಳ ನಡುವೆ ಆಫ್ರಿಕಾ ಕಪ್ ಪಂದ್ಯಾವಳಿ ನಡೆಸಲು ಭರ್ಜರಿ ಪ್ಲ್ಯಾನ್ ರೂಪಿಸಲಾಗಿದೆ. 6 ತಂಡಗಳ ಟೂರ್ನಿಯಲ್ಲಿ ಆಫ್ರಿಕಾದ ಅಗ್ರಗಣ್ಯ ತಂಡಗಳಾದ ಸೌತ್ ಆಫ್ರಿಕಾ (South Africa), ಝಿಂಬಾಬ್ವೆ (Zimbabwe) ಮತ್ತು ನಮೀಬಿಯಾ (Namibia) ತಂಡಗಳು ಕಣಕ್ಕಿಳಿಯುವುದು ಖಚಿತವಾಗಿದೆ. ಇವುಗಳ ಜೊತೆಗೆ ಅರ್ಹತಾ ಸುತ್ತಿನ ಮೂಲಕ ಆಯ್ಕೆಯಾದ ಇತರೆ ಮೂರು ಆಫ್ರಿಕನ್ ದೇಶಗಳು ಭಾಗವಹಿಸಲಿವೆ.

ಟೂರ್ನಿಯ ಮುಖ್ಯ ಉದ್ದೇಶ:

ಆಫ್ರಿಕಾ ಕಪ್ ಟೂರ್ನಿಯ ಮುಖ್ಯ ಉದ್ದೇಶ, ಆಫ್ರಿಕನ್ ದೇಶಗಳಲ್ಲಿ ಕ್ರಿಕೆಟ್​ ಅನ್ನು ಜನಪ್ರಿಯಗೊಳಿಸುವುದು.  ಝಿಂಬಾಬ್ವೆ ಕೋಚ್ ಡೇವ್ ಹೌಟನ್ ಅವರಂತಹ ಹಿರಿಯರು ಪ್ರತಿಪಾದಿಸಿದಂತೆ, ಆಫ್ರಿಕಾದಲ್ಲಿ ಕ್ರಿಕೆಟ್ ಅನ್ನು ಫುಟ್‌ಬಾಲ್‌ನಂತೆ ಜನಪ್ರಿಯಗೊಳಿಸುವುದು ಮತ್ತು ಸಣ್ಣ ತಂಡಗಳಿಗೆ ಹೆಚ್ಚಿನ ಎಕ್ಸ್‌ಪೋಷರ್ ನೀಡುವುದು ಇದರ ಮುಖ್ಯ ಗುರಿ.

ಹಾಗೆಯೇ  2027ರ ಐಸಿಸಿ ಪುರುಷರ ಏಕದಿನ ವಿಶ್ವಕಪ್‌ಗೆ ಸೌತ್ ಆಫ್ರಿಕಾ, ಝಿಂಬಾಬ್ವೆ ಮತ್ತು ನಮೀಬಿಯಾ ಜಂಟಿ ಆತಿಥ್ಯ ವಹಿಸುತ್ತಿವೆ. ಈ ಹಿನ್ನೆಲೆಯಲ್ಲಿ ಆಫ್ರಿಕಾ ಕಪ್ ಆ ದೇಶಗಳಿಗೆ ತಾಲೀಮು ನಡೆಸಲು ಉತ್ತಮ ವೇದಿಕೆಯಾಗಲಿದೆ.

6 ತಂಡಗಳಾವುವು?

ಆಫ್ರಿಕಾ ಕಪ್​ ಟೂರ್ನಿಯಲ್ಲಿ ಸೌತ್ ಆಫ್ರಿಕಾ, ಝಿಂಬಾಬ್ವೆ ಹಾಗೂ ನಮೀಬಿಯಾ ಕಾಣಿಸಿಕೊಳ್ಳುವುದು ಖಚಿತವಾಗಿದೆ. ಇದರ ಜೊತೆಗೆ ಅರ್ಹತಾ ಸುತ್ತಿನ ಮೂಲಕ 3 ತಂಡಗಳು ಸೇರ್ಪಡೆಯಾಗಲಿವೆ. ಇಲ್ಲಿ ಅರ್ಹತಾ ಸುತ್ತಿನಲ್ಲಿ ಕಾಣಿಸಿಕೊಳ್ಳಲಿರುವ ತಂಡಗಳಾವುವು ಎಂದು ನೋಡುವುದಾದರೆ…

  • ಉಗಾಂಡ: ಪ್ರಸ್ತುತ ಆಫ್ರಿಕಾ ಕ್ರಿಕೆಟ್‌ನಲ್ಲಿ ವೇಗವಾಗಿ ಬೆಳೆಯುತ್ತಿರುವ ತಂಡಗಳಲ್ಲಿ ಒಂದಾದ ಉಗಾಂಡ, 2024ರ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆಯುವ ಮೂಲಕ ಇತಿಹಾಸ ನಿರ್ಮಿಸಿತ್ತು. ಆದ್ದರಿಂದ ಈ ಟೂರ್ನಿಗೆ ಇವರು ಪ್ರಬಲ ಸ್ಪರ್ಧಿಗಳಾಗಿದ್ದಾರೆ.
  • ಕೀನ್ಯಾ: ಒಮ್ಮೆ ಕ್ರಿಕೆಟ್ ಜಗತ್ತಿನಲ್ಲಿ ಬಲಿಷ್ಠವಾಗಿದ್ದ ಕೀನ್ಯಾ, ಈಗ ಮತ್ತೆ ತನ್ನ ಫಾರ್ಮ್ ಕಂಡುಕೊಳ್ಳಲು ಪ್ರಯತ್ನಿಸುತ್ತಿದೆ. ಆಫ್ರಿಕಾ ಕ್ರಿಕೆಟ್ ಮಂಡಳಿ (ACA) ಆಯೋಜಿಸುವ ಟೂರ್ನಿಗಳಲ್ಲಿ ಇವರು ಪ್ರಮುಖವಾಗಿ ಭಾಗವಹಿಸುತ್ತಾರೆ.
  • ಟಾಂಜಾನಿಯಾ: ಇತ್ತೀಚಿನ ವರ್ಷಗಳಲ್ಲಿ ಐಸಿಸಿ ಪ್ರಾದೇಶಿಕ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಟಾಂಜಾನಿಯಾ ತಂಡವು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು, ಆಫ್ರಿಕಾದ ಉದಯೋನ್ಮುಖ ತಂಡಗಳಲ್ಲಿ ಸ್ಥಾನ ಪಡೆದಿದೆ.
  • ಇತರೆ ಸಂಭಾವ್ಯ ತಂಡಗಳು: ಈ ಟೂರ್ನಿಯ ಸ್ವರೂಪದ ಆಧಾರದ ಮೇಲೆ, ಅರ್ಹತಾ ಸುತ್ತಿನ ಮೂಲಕ ಕೆಳಗಿನ ತಂಡಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಅದರಂತೆ ಬೋಟ್ಸ್ವಾನ, ನೈಜೀರಿಯಾ ಮತ್ತು
    ಘಾನಾ ತಂಡಗಳು ಕೂಡ ಅರ್ಹತಾ ಸುತ್ತಿನಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ.

ಇದನ್ನೂ ಓದಿ: ಕೈ ಸನ್ನೆಯೊಂದಿಗೆ ​ವಿಶ್ಲೇಷಣೆ… ಬಿದ್ದು ಬಿದ್ದು ನಕ್ಕ RCB ಆಟಗಾರರು

ಆಫ್ರಿಕಾ ಕಪ್ ಟೂರ್ನಿಯಿಂದಾಗಿ ಆಫ್ರಿಕನ್ ಕ್ರಿಕೆಟ್‌ನಲ್ಲಿ ಹೊಸ ಪೈಪೋಟಿ ಶುರುವಾಗಲಿದೆ. ಸೌತ್ ಆಫ್ರಿಕಾದಂತಹ ಬಲಿಷ್ಠ ತಂಡದ ವಿರುದ್ಧ ಆಡುವುದರಿಂದ ನಮೀಬಿಯಾ ಮತ್ತು ಇತರ ಉದಯೋನ್ಮುಖ ತಂಡಗಳ ಗುಣಮಟ್ಟ ಸುಧಾರಿಸಲಿದೆ.

Source link

Leave a Reply

Your email address will not be published. Required fields are marked *