Headlines

8ನೇ ತರಗತಿ ವಿದ್ಯಾರ್ಥಿನಿ ಮೇಲೆ ಸಹಪಾಠಿಗಳಿಂದಲೇ ಅತ್ಯಾಚಾರ, ಗರ್ಭಿಣಿಯಾದಾಗ ಕೃತ್ಯ ಬಹಿರಂಗ – Kannada News | Deoria Shocked as Schoolgirl’s Pregnancy Exposes Alleged Assault by Classmates

ಡಿಯೋರಿಯಾ, ಫೆಬ್ರವರಿ 04: ಎಂಟನೇ ತರಗತಿ ಬಾಲಕಿ(Girl) ಮೇಲೆ ಆಕೆಯ ಸಹಪಾಠಿಗಳೇ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಡಿಯೋರಿಯಾದಲ್ಲಿ ನಡೆದಿದೆ. ಆಕೆಗೆ ಮಾದಕದ್ರವ್ಯ ಕೊಟ್ಟು ಅತ್ಯಾಚಾರವೆಸಗಿದ್ದಾರೆ. ವಿದ್ಯಾರ್ಥಿನಿ ಗರ್ಭಿಣಿಯಾದಾಗ ಕೃತ್ಯ ಬೆಳಕಿಗೆ ಬಂದಿದೆ. ಎರಡು ತಿಂಗಳ ನಂತರ ವೈದ್ಯಕೀಯ ಪರೀಕ್ಷೆಯಲ್ಲಿ ಅಪ್ರಾಪ್ತ ವಯಸ್ಕ ಗರ್ಭಿಣಿಯಾಗಿದ್ದಾಳೆಂದು ದೃಢಪಟ್ಟ ನಂತರ ಈ ಭಯಾನಕ ಅಪರಾಧ ಬೆಳಕಿಗೆ ಬಂದಿದೆ.

ನವೆಂಬರ್​​ನಲ್ಲಿ ಈ ಘಟನೆ ನಡೆದಿತ್ತು, ಅಂದು ಶಿಕ್ಷಕರ ಅನುಪಸ್ಥಿತಿಯ ಲಾಭ ಪಡೆದು ಆಕೆಯ ತರಗತಿಯ ಕೆಲವು ಹುಡುಗರು ಪ್ರಸಾದ್ ಎಂದು ಹೇಳಿ ಮತ್ತು ಬರುವ ಔಷಧಿ ಬೆರೆಸಿದ್ದ ಸಿಹಿತಿಂಡಿಯನ್ನು ಕೊಟ್ಟಿದ್ದರು. ಆಕೆಗೆ ನಿದ್ರಾಜನಕ ಔಷಧಿ ಬೆರೆಸಿದ್ದ ಲಡ್ಡು ಕೊಡಲಾಗಿತ್ತು.

ಆಕೆ ಕ್ರಮೇಣ ಪ್ರಜ್ಞಾಹೀನಳಾದಳು, ಆರೋಪಿಗಳು ಅವಳನ್ನು ಮನೆಗೆ ಕರೆದುಕೊಂಡು ಹೋಗಲು ಮುಂದಾದರು. ಅವರು ಅವಳನ್ನು ಶಂಕಿತರಲ್ಲಿ ಒಬ್ಬರಿಗೆ ಸೇರಿದ ಹತ್ತಿರದ ಮನೆಗೆ ಕರೆದೊಯ್ದರು, ಅಲ್ಲಿ ಅವಳು ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದಳು.

ದುಷ್ಕರ್ಮಿಗಳು ಆಕೆಗೆ ಬೆದರಿಕೆ ಹಾಕಿದರು, ತಾವು ಕೃತ್ಯವನ್ನು ವೀಡಿಯೊದಲ್ಲಿ ರೆಕಾರ್ಡ್ ಮಾಡಿದ್ದೇವೆ ಮತ್ತು ಅವಳು ಹೊರಗೆ ಮಾತನಾಡಿದರೆ ಅದನ್ನು ಆನ್‌ಲೈನ್‌ನಲ್ಲಿ ಸೋರಿಕೆ ಮಾಡುತ್ತೇವೆ ಎಂದು ಹೇಳಿಕೊಂಡರು. ಭಯಭೀತರಾದ ವಿದ್ಯಾರ್ಥಿನಿ ಎರಡು ತಿಂಗಳ ಕಾಲ ಇದನ್ನು ರಹಸ್ಯವಾಗಿಟ್ಟಳು.
ಹುಡುಗಿ ನಿರಂತರ ಹೊಟ್ಟೆ ನೋವಿನಿಂದ ಬಳಲುತ್ತದ್ದಳು, ಪೋಷಕರು ಆಸ್ಪತ್ರೆಗೆ ಕರೆದೊಯ್ದಾಗ ಈ ಕೃತ್ಯ ಬೆಕಿಗೆ ಬಂದಿದೆ.

ಮತ್ತಷ್ಟು ಓದಿ: ಚಾಕೊಲೇಟ್ ಕೊಡುವ ನೆಪದಲ್ಲಿ ಹೇಯ ಕೃತ್ಯ: 8 ವರ್ಷದ ಬಾಲಕಿ ಮೇಲೆ ವೃದ್ಧನಿಂದ ಲೈಂಗಿಕ ದೌರ್ಜನ್ಯ

ಆಕೆಯ ಪೋಷಕರು ಅವಳನ್ನು ಅಲ್ಟ್ರಾಸೌಂಡ್ ಸ್ಕ್ಯಾನ್‌ಗೆ ಕರೆದೊಯ್ದರು, ಮತ್ತು ಫಲಿತಾಂಶಗಳು ಅವರನ್ನು ದಿಗ್ಭ್ರಮೆಗೊಳಿಸಿತ್ತು. ಅಪ್ರಾಪ್ತ ವಯಸ್ಕಳು ಎರಡು ತಿಂಗಳ ಗರ್ಭಿಣಿಯಾಗಿದ್ದಳು. ಬಳಿಕ ಆಕೆ ನಡೆದಿದ್ದೆಲ್ಲವನ್ನು ಪೋಷಕರಿಗೆ ವಿವರಿಸಿದ್ದಾಳೆ.

ಸಂತ್ರಸ್ತೆಯ ತಾಯಿಯ ಔಪಚಾರಿಕ ದೂರಿನ ಮೇರೆಗೆ, ಲಾರ್ ಪೊಲೀಸರು ಜನವರಿ 31 ರಂದು ಎಫ್‌ಐಆರ್ ದಾಖಲಿಸಿದರು. ಪ್ರಮುಖ ಆರೋಪಿ ಶುಭಂ ಸೈನಿ ಮತ್ತು ಅಪ್ರಾಪ್ತ ವಯಸ್ಕ ಸಹಚರನನ್ನು ಬಂಧಿಸಲಾಗಿದೆ  ಎಂದು ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಸಂತೋಷ್ ಕುಮಾರ್ ದೃಢಪಡಿಸಿದ್ದಾರೆ. ಆರೋಪಿಗಳನ್ನು ಬಂಧಿಸಲಾಗಿದೆ ಮತ್ತು ಕಠಿಣ ಕಾನೂನು ಕ್ರಮಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 8:16 am, Wed, 4 February 26

Source link

Leave a Reply

Your email address will not be published. Required fields are marked *