82 ವರ್ಷದ ಮಹಿಳೆಗೆ ಅಪ್ಪರ್ ಬರ್ತ್​ ಅಲಾಟ್ ಮಾಡಿದ ರೈಲ್ವೆ ವಿರುದ್ಧ ದೂರು, ಭಾರತೀಯ ರೈಲ್ವೆ ಕೊಟ್ಟ ಉತ್ತರವೇನು? – Kannada News | Indian Railways Lower Berth Policy: Senior Citizen Upper Berth Sparks Clarification

ನವದೆಹಲಿ, ಮಾರ್ಚ್​ 02: ಭಾರತೀಯ ರೈಲ್ವೆ(Indian Railways) ಹಿರಿಯ ನಾಗರಿಕರಿಗೆ ಬರ್ತ್​ಗಳನ್ನು ಹೇಗೆ ನಿಗದಿಪಡಿಸುತ್ತದೆ ಎಂಬುದರ ಕುರಿತು ಎಕ್ಸ್​​ನಲ್ಲಿ ಮಾಡಲಾದ ಪೋಸ್ಟ್​ ಚರ್ಚೆಗೆ ನಾಂದಿ ಹಾಡಿದೆ. ಪ್ರಯಾಣಿಕರೊಬ್ಬರು ತಾವು ಟಿಕೆಟ್ ಬುಕ್ ಮಾಡಿದಾಗ  ಬೇರೆ ಸೀಟುಗಳು ಲಭ್ಯವಿದ್ದರೂ 82 ವರ್ಷದ ಮಹಿಳೆಗೆ ಕೂಡ ಅಪ್ಪರ್ ಬರ್ತ್​ ನಿಗದಿಪಡಿಸಿದ್ದಾರೆ ಎಂದು ವ್ಯಕ್ತಿಯೊಬ್ಬರು ಆರೋಪಿಸಿದ್ದಾರೆ. ಈಗ ಅದೇ ಕೆಳಗಿನ ಬರ್ತ್‌ಗಳನ್ನು ಪ್ರೀಮಿಯಂ ತತ್ಕಾಲ್‌ನಲ್ಲಿ ಹೆಚ್ಚಿನ ದರದಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ವೈರಲ್ ಪೋಸ್ಟ್​ನಲ್ಲಿ ತಿಳಿಸಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿದ ರೈಲ್ವೆ, 45ವರ್ಷಕ್ಕಿಂತ ಮೇಲ್ಪಟ್ಟ ಮಹಿಳಾ ಪ್ರಯಾಣಿಕರಿಗೆ ಲೋವರ್ ಬರ್ತ್​ ಹಂಚಿಕೆಗೆ ಸಂಬಂಧಿಸಿದ ನಿಯಮಗಳನ್ನು ಸ್ಪಷ್ಟಪಡಿಸಿದೆ. ಭಾರತೀಯ ರೈಲ್ವೆಯ ಸೀಟು ಕಾಯ್ದಿರಿಸುವಿಕೆ ವ್ಯವಸ್ಥೆಯಲ್ಲಿ, ಯಾವುದೇ ಆಯ್ಕೆ ನೀಡದಿದ್ದರೂ ಕೂಡ, ಹಿರಿಯ ನಾಗರಿಕರು ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟ ಮಹಿಳಾ ಪ್ರಯಾಣಿಕರಿಗೆ ಸ್ವಯಂ ಚಾಲಿತವಾಗಿ ಕೆಳ ಬರ್ತ್​ ಹಂಚಿಕೆ ಮಾಡುವ ಅವಕಾಶವಿದೆ.

ಇಂಟರ್ನೆಟ್​ ಮೂಲಕ ಕಾಯ್ದಿರಿಸಿದ ಟಿಕೆಟ್‌ಗಳನ್ನು ಬುಕ್ ಮಾಡುವ ಸಮಯದಲ್ಲಿ, ಕೆಳ ಬರ್ತ್ ಲಭ್ಯವಿದ್ದರೆ ಮಾತ್ರ ಬುಕಿಂಗ್ ಅನ್ನು ಆಯ್ಕೆ ಮಾಡಲು ಅವಕಾಶವಿದೆ ಎಂದು ತಿಳಿಸಲಾಗಿದೆ.
ಅಂತಹ ಸಂದರ್ಭದಲ್ಲಿ ಕೆಳ ಬರ್ತ್ ಲಭ್ಯವಿದ್ದರೆ ಮಾತ್ರ ಟಿಕೆಟ್ ಬುಕ್ ಮಾಡಲಾಗುತ್ತದೆ. ಇದಲ್ಲದೆ, ಭಾರತೀಯ ರೈಲ್ವೆಯಲ್ಲಿ, ಕಾಯ್ದಿರಿಸಿದ ಟಿಕೆಟ್​ಗಳನ್ನು ಮೊದಲು ಬಂದವರಿಗೆ ಮೊದಲು ಸೇವೆ ಆಧಾರದ ಮೇಲೆ ಬುಕ್ ಮಾಡಬಹುದು ಮತ್ತು ಆಯ್ಕೆಯ ಬರ್ತ್ ಲಭ್ಯತೆಗೆ ಒಳಪಟ್ಟಿರುತ್ತದೆ.

ಸ್ವಲ್ಪ ದಿನಗಳ ಹಿಂದೆ ಟಿಟಿಇ ಒಬ್ಬರು ಈ ಕುರಿತು ಮಾತನಾಡಿರುವುದು ವೈರಲ್ ಆಗಿತ್ತು, ಲೋವರ್ ಬರ್ತ್​ ಪಡೆಯಬೇಕೆಂದರೆ ಏನು ಮಾಡಬೇಕು ಎಂದು ಮಾಹಿತಿ ನೀಡಿದ್ದರು. ನೀವು ಎಂದಾದರೂ ರೈಲು ಟಿಕೆಟ್ ಬುಕ್ ಮಾಡುವಾಗ ಲೋವರ್ ಬರ್ತ್ ಆದ್ಯತೆ ಆಯ್ಕೆ ಮಾಡಿಕೊಂಡಿದ್ದರೂ ಅಪ್ಪರ್ ಬರ್ತ್ ಪಡೆದಿದ್ದೀರಾ?, ನೀವೊಬ್ಬರೇ ಅಲ್ಲ ಸಾಕಷ್ಟು ಪ್ರಯಾಣಿಕರಿಗೆ ಇದರ ಅನುಭವವಾಗಿದೆ.ಹಿರಿಯ ನಾಗರಿಕ ಪ್ರಯಾಣಿಕರಲ್ಲಿ ಈ ರೀತಿಯ ಘಟನ ಹೆಚ್ಚಾಗಿದೆ.

ಮತ್ತಷ್ಟು ಓದಿ: ದಾವಣಗೆರೆ-ಬೆಂಗಳೂರು ಪ್ರಯಾಣಕ್ಕೆ ಎರಡೂವರೆ ಗಂಟೆ ಸಾಕು! ತುಮಕೂರು-ದಾವಣಗೆರೆ ನೇರ ರೈಲ್ವೆ ಮಾರ್ಗ ಮುಂದಿನ ವರ್ಷ ಸಿದ್ಧ

ನೀವು ಲೋವರ್ ಬರ್ತ್ ಬಯಸಿದರೆ, ಒಂದು ಪಿಎನ್‌ಆರ್‌ನಲ್ಲಿ ಕೇವಲ ಎರಡು ಟಿಕೆಟ್‌ಗಳನ್ನು ಬುಕ್ ಮಾಡಿ. ನೀವು ಮೂರು ಅಥವಾ ನಾಲ್ಕು ಟಿಕೆಟ್‌ಗಳನ್ನು ಒಟ್ಟಿಗೆ ಬುಕ್ ಮಾಡಿದಾಗ, ವ್ಯವಸ್ಥೆಯು ಅದನ್ನು ಗುಂಪು ಬುಕಿಂಗ್ ಎಂದು ಪರಿಗಣಿಸುತ್ತದೆ ಮತ್ತು ಲೋವರ್ ಬರ್ತ್ ಆದ್ಯತೆಯನ್ನು ತೆಗೆದುಹಾಕಲಾಗುತ್ತದೆ. ಅಂದರೆ ಕಡಿಮೆ ಟಿಕೆಟ್‌ಗಳು, ಹೆಚ್ಚು ಲಾಭ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *