ಧರ್ಮೇಂದ್ರ ಪ್ರಧಾನ್ ರಾಜೀನಾಮೆ ತನಕ ಹೋರಾಡಿ ಸಿಜೆಪಿಯ ಮುಂದಿನ ನಡೆ ಏನು? – Kannada News | Dharmendra Pradhan resignation: If you accept our three demands in writing, we will go home says CJP Spokesperson Ashutosh Ranka

ನವದೆಹಲಿ, (ಜುಲೈ 25): ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದ್ರೆ, ಸಿಜೆಪಿ ತನ್ನ ಪ್ರತಿಭಟನೆ ಇಲ್ಲಿಗೆ ನಿಲ್ಲಿಸುತ್ತಾ ಅಥವಾ ಮುಂದುವರೆಸುತ್ತಾ ಎನ್ನುವ ಬಗ್ಗೆ ಇನ್ನೂ ಗೊಂದಲದಲ್ಲಿದೆ.  ಈ ಬಗ್ಗೆ ಕಾಕ್ರೋಚ್ ಜನತಾ ಪಕ್ಷದ ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಮಾತನಾಡಿ, “ನಮ್ಮ ಮೂರು ಬೇಡಿಕೆಗಳನ್ನು ನೀವು (ಕೇಂದ್ರ ಸರ್ಕಾರ) ಲಿಖಿತವಾಗಿ ಬರೆದುಕೊಟ್ಟರೆ ಪ್ರತಿಭಟನೆ ನಿಲ್ಲಿಸಿ ನಾವು ಮನೆಗೆ ಹೋಗುತ್ತೇವೆ. ದೇಶಾದ್ಯಂತ ಶಾಂತಿಯುತವಾಗಿ ಮೇಣದಬತ್ತಿ ಮೆರವಣಿಗೆ ನಡೆಸಲು ನಾವು ಅನುಮತಿ ಕೋರಿದ್ದೇವೆ. ಸಂಜೆ 6:00 ಗಂಟೆಗೆ ದೇಶಾದ್ಯಂತ ಮೇಣದಬತ್ತಿ ಮೆರವಣಿಗೆ ನಡೆಸಬೇಕು” ಎಂದು ತಮ್ಮ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಇನ್ನೊಂದೆಡೆ  ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುತ್ತಿದ್ದಂತೆಯೇ ಸಿಜೆಪಿ ಕಾರ್ಯಕರ್ಯಕರ್ತರು, ಮುಖಂಡರು ಸಂಭ್ರಮಾಚರಣೆ ಮಾಡಿದ್ದಾರೆ. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ, ಧರ್ಮೇಂದ್ರ ಪ್ರಧಾನ್ ಕೊನೆಗೂ ರಾಜೀನಾಮೆ ನೀಡಿದ್ದಾರೆ. ಇದು ನಮ್ಮ ಧೈರ್ಯಕ್ಕೆ ಹೋರಾಟಕ್ಕೆ ಸಿಕ್ಕ ಜಯ, ನಾವು ನಿರ್ಭಯದಿಂದ ಹೋರಾಡಿದರೆ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಯಾರಿಗೂ ಭಯಪಡಬೇಕಿಲ್ಲ. ನಿರ್ಭೀತ ಹೋರಾಟದಿಂದ ನಾವು ಯಾರ ರಾಜೀನಾಮೆಯನ್ನು ಬೇಕಾದರೂ ಪಡೆಯಬಹುದು ಎನ್ನುವುದಕ್ಕೆ ಇದು ಪುರಾವೆ ಎಂದಿದ್ದಾರೆ.

ಇದನ್ನೂ ನೋಡಿ: ಧರ್ಮೇಂದ್ರ ಪ್ರಧಾನ್ ಖಾತೆಯನ್ನು ನುಂಗಿದ ‘ಜಿರಲೆ’, ಕೊನೆಗೂ ರಾಜೀನಾಮೆ ಸಲ್ಲಿಕೆ

Source link

Cockroach Janta Party: ಏನಿದು ‘ಕಾಕ್ರೋಚ್ ಜನತಾ ಪಾರ್ಟಿ’? ಇಂಟರ್‌ನೆಟ್ ಮೀಮ್‌ನಿಂದ ಶಿಕ್ಷಣ ಸಚಿವರ ರಾಜೀನಾಮೆಯವರೆಗೆ ಯುವ ಕ್ರಾಂತಿಯ ಪೂರ್ಣ ವರದಿ – Kannada News | Dharmendra Pradhan Resigns; Everything You Need to Know About the Cockroach Janta Party

ದೆಹಲಿಯ ಜಂತರ್ ಮಂತರ್‌ನಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ನಡೆಸಿದ ಬೃಹತ್ ಪ್ರತಿಭಟನೆಗಳ ಬೆನ್ನಲ್ಲೇ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ವಿವಾದಕ್ಕೆ ಸಂಬಂಧಿಸಿದಂತೆ ಧರ್ಮೇಂದ್ರ ಪ್ರಧಾನ್ ಅವರು ಇಂದು ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಶಿಕ್ಷಣ ವ್ಯವಸ್ಥೆಯಲ್ಲಿ ಉಂಟಾಗಿರುವ ತೀವ್ರ ವಿಫಲತೆ ಹಾಗೂ ಪರೀಕ್ಷೆಗಳ ಭದ್ರತೆಯಲ್ಲಿ ಆದ ಲೋಪಗಳಿಗೆ ನೈತಿಕ ಹೊಣೆ ಹೊತ್ತು ಅವರು ತಮ್ಮ ಹುದ್ದೆಯನ್ನು ತೊರೆದಿದ್ದು, ಈ ಬೆಳವಣಿಗೆಯು ಯುವಜನರ ಹೋರಾಟಕ್ಕೆ ಸಿಕ್ಕ ದೊಡ್ಡ ಜಯವೆಂದು ವಿಶ್ಲೇಷಿಸಲಾಗುತ್ತಿದೆ.

‘ಕಾಕ್ರೋಚ್ ಜನತಾ ಪಾರ್ಟಿ’ ಉಗಮ ಮತ್ತು ಹಿನ್ನೆಲೆ:

ಈ ಇಡೀ ಯುವ ಕ್ರಾಂತಿಯ ಹಿಂದೆ ‘ಕಾಕ್ರೋಚ್ ಜನತಾ ಪಾರ್ಟಿ’ (Cockroach Janta Party – CJP) ಎಂಬ ಚಳವಳಿಯ ಕೈಯಿದೆ. ಪ್ರಮುಖ ಪರೀಕ್ಷಾ ಅಕ್ರಮಗಳ ನಂತರ ಹುಟ್ಟಿಕೊಂಡ ಈ ಚಳವಳಿಯನ್ನು ಮೇ 16 ರಂದು ಅಭೀಜಿತ್ ದೀಪ್ಕೆ (Abhijeet Dipke) ಎಂಬ 30 ವರ್ಷದ ಯುವಕ ಪ್ರಾರಂಭಿಸಿದರು. ಬೋಸ್ಟನ್ ವಿಶ್ವವಿದ್ಯಾಲಯದ ಪಿಆರ್ ಪದವೀಧರ ಹಾಗೂ ಆಮ್ ಆದ್ಮಿ ಪಾರ್ಟಿಯ ಮಾಜಿ ಸೋಶಿಯಲ್ ಮೀಡಿಯಾ ತಂತ್ರಜ್ಞರಾಗಿರುವ ಅಭೀಜಿತ್, ಸುಪ್ರೀಂ ಕೋರ್ಟ್ ವಿಚಾರಣೆಯೊಂದರ ವೇಳೆ ಹಿರಿಯ ನ್ಯಾಯಮೂರ್ತಿಯೊಬ್ಬರು ಯುವ ಉದ್ಯೋಗಿಗಳ ಕುರಿತು ನೀಡಿದರೆನ್ನಲಾದ ಹೇಳಿಕೆಗಳಿಗೆ ಪ್ರತಿಯಾಗಿ, “ಸೋಮಾರಿಗಳ ಮತ್ತು ನಿರುದ್ಯೋಗಿಗಳ ಧ್ವನಿ” ಎಂಬ ಶೀರ್ಷಿಕೆಯಡಿ ಈ ಡಿಜಿಟಲ್ ಚಳವಳಿಯನ್ನು ರೂಪಿಸಿದರು.

ಸೋಶಿಯಲ್ ಮೀಡಿಯಾದಲ್ಲಿ ಸೃಷ್ಟಿಯಾದ ಕ್ರಾಂತಿ:

ಆರಂಭದಲ್ಲಿ ಕೇವಲ ವಿಡಂಬನಾತ್ಮಕ (satirical) ಮೀಮ್ ಆಂದೋಲನವಾಗಿ ಶುರುವಾದ CJP, ಕೆಲವೇ ದಿನಗಳಲ್ಲಿ ಡಿಜಿಟಲ್ ಜಗತ್ತಿನಲ್ಲಿ ಧೂಳೆಬ್ಬಿಸಿತು. ಸ್ಥಾಪನೆಯಾದ ಒಂದೇ ವಾರದಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಬರೋಬ್ಬರಿ 2.05 ಕೋಟಿಗೂ ಹೆಚ್ಚು ಫಾಲೋವರ್ಸ್‌ಗಳನ್ನು ಸಂಪಾದಿಸಿತು. ಸರ್ಕಾರದ ಕಾನೂನು ಕ್ರಮಗಳಿಂದಾಗಿ ‘X’ (ಟ್ವಿಟರ್) ಖಾತೆ ಭಾರತದಲ್ಲಿ ತಾತ್ಕಾಲಿಕವಾಗಿ ಬ್ಲಾಕ್ ಆಗಿದ್ದರೂ, 3 ಲಕ್ಷಕ್ಕೂ ಹೆಚ್ಚು ಜನರು ಇದನ್ನು ಬೆಂಬಲಿಸಿದರು. “ವ್ಯವಸ್ಥೆಯು ಎಣಿಸಲು ಮರೆತುಹೋದ ಜನರ ರಾಜಕೀಯ ಪಕ್ಷ” ಎಂಬ ಘೋಷಣೆಯೊಂದಿಗೆ ಪ್ರತ್ಯೇಕ ವೆಬ್‌ಸೈಟ್ ಮತ್ತು ಮ್ಯಾನಿಫೆಸ್ಟೋ ಬಿಡುಗಡೆ ಮಾಡಿ ಲಕ್ಷಾಂತರ ಯುವಕರನ್ನು ತನ್ನತ್ತ ಸೆಳೆಯಿತು.

ಬೀದಿಗಿಳಿದ ಯುವಜನತೆ;ಸಂಸತ್ ಚಲೋ ಮತ್ತು ಲಾಠಿ ಪ್ರಹಾರ:

ಸಾಮಾಜಿಕ ಜಾಲತಾಣಗಳಿಗೆ ಸೀಮಿತವಾಗಿದ್ದ ಈ ಆಕ್ರೋಶ ಶೀಘ್ರದಲ್ಲೇ ಬೀದಿಗಿಳಿಯಿತು. ರಾಜಧಾನಿ ದೆಹಲಿಯಲ್ಲಿ ವಾರಗಳ ಕಾಲ ನಡೆಸಿದ ಧರಣಿ ಸತ್ಯಾಗ್ರಹವು ಅಂತಿಮವಾಗಿ ಸಂಸತ್ ಭವನದತ್ತ ಬೃಹತ್ ಮೆರವಣಿಗೆಯಾಗಿ ಮಾರ್ಪಟ್ಟಿತು. ಈ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಅಶ್ರುವಾಯು (Tear gas) ಮತ್ತು ಲಾಠಿ ಪ್ರಹಾರ ನಡೆಸಿದ್ದು ತೀವ್ರ ಉದ್ವಿಗ್ನತೆಗೆ ಕಾರಣವಾಯಿತು. ವ್ಯವಸ್ಥೆಯ ವಿರುದ್ಧ ಯುವ ಪೀಳಿಗೆ (Gen Z) ನಡೆಸಿದ ಈ ಬೃಹತ್ ಹೋರಾಟವು ಅಂತಿಮವಾಗಿ ಕೇಂದ್ರ ಸರ್ಕಾರ ಧರ್ಮೇಂದ್ರ ಪ್ರಧಾನ್ ಅವರಿಂದ ರಾಜೀನಾಮೆ ಪಡೆದಿದೆ. ಅಲ್ಲಿಗೆ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ಪ್ರತಿಭಟನೆ ಮಾಡುತ್ತಿರುವವರ ಎಲ್ಲ ಬೇಡಿಕೆಗಳೂ ಈಡೇರಿದಂತಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs ZIM: ಕೇವಲ 2 ರನ್​ ಬೇಕು; ದಿಗ್ಗಜರ ಪಟ್ಟಿ ಸೇರಲಿದ್ದಾರೆ ಇಶಾನ್ ಕಿಶನ್

Source link

ಈ ವಾರ ಒಟಿಟಿಗೆ ಬಂದಿವೆ ಆಸಕ್ತಿಕರ ಸಿನಿಮಾಗಳು, ನಿಮ್ಮ ಆಯ್ಕೆ ಯಾವುದು? – Kannada News | OTT Release this week, here is the list of the movies

ಹಾಸ್ಯಪ್ರಧಾನ ಥ್ರಿಲ್ಲರ್ ಕತೆಯನ್ನು ಒಳಗೊಂಡ ತಮಿಳು ಸಿನಿಮಾ ‘ಕಾನ್ ಸಿಟಿ’ ಈ ವಾರ ಒಟಿಟಿಗೆ ಬಂದಿದೆ. ಅರ್ಜುನ್ ದಾಸ್, ಅನ್ನಾ ಬೆನ್, ಯೋಗಿ ಬಾಬು ನಟನೆಯ ಈ ಸಿನಿಮಾವನ್ನು ನೆಟ್​​ಫ್ಲಿಕ್ಸ್​ನಲ್ಲಿ ವೀಕ್ಷಿಸಬಹುದಾಗಿದೆ.

Source link

Dharmendra Pradhan: ಸಿಜೆಪಿ ಬೇಡಿಕೆಗೆ ಮಣಿದ ಸರ್ಕಾರ; ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ – Kannada News | Dharmendra Pradhan submits his resignation as Union Education Minister amid Massive Protest over NEET Paper Leak

ನವದೆಹಲಿ, ಜುಲೈ 25: ದೆಹಲಿಯ ಜಂತರ್ ಮಂತರ್‌ನಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ನಡೆಸಿದ ಬೃಹತ್ ಪ್ರತಿಭಟನೆಗಳ ಬೆನ್ನಲ್ಲೇ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ವಿವಾದಕ್ಕೆ ಸಂಬಂಧಿಸಿದಂತೆ ಧರ್ಮೇಂದ್ರ ಪ್ರಧಾನ್ (Dharmendra Pradhan Resignation) ಇಂದು ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಶುಕ್ರವಾರ ಕೇಂದ್ರ ಸಚಿವರಾದ ಜೆಪಿ ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರನ್ನು ಭೇಟಿಯಾಗಿದ್ದ ಸಿಜೆಪಿ ವಕ್ತಾರರು ತಮ್ಮ 3 ಬೇಡಿಕೆಗಳನ್ನು ಸಲ್ಲಿಸಿದ್ದರು. ಅದರಲ್ಲಿ ಧರ್ಮೇಂದ್ರ ಪ್ರಧಾನ್ ರಾಜೀನಾಮೆಯೇ ಮೊದಲ ಮತ್ತು ಮುಖ್ಯವಾದ ಬೇಡಿಕೆಯಾಗಿತ್ತು. ಸಂಧಾನ ಮಾತುಕತೆಯ ವೇಳೆ ಉಳಿದ ಎರಡು ಬೇಡಿಕೆಗಳಿಗೆ ಕೂಡಲೇ ಒಪ್ಪಿಗೆ ಸೂಚಿಸಿದ್ದ ಕೇಂದ್ರ ಸಚಿವರು ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕುರಿತು ನಿರ್ಧಾರ ತೆಗೆದುಕೊಳ್ಳಲು ಇಂದು (ಶನಿವಾರ) ಮಧ್ಯಾಹ್ನದವರೆಗೆ ಸಮಯ ಕೋರಿದ್ದರು.

ಇದೀಗ ಕೊನೆಗೂ ಸಿಜೆಪಿ ಹಾಗೂ ಪ್ರತಿಭಟನಾಕಾರರ ಬೇಡಿಕೆಗೆ ಮಣಿದಿರುವ ಕೇಂದ್ರ ಸರ್ಕಾರ ಧರ್ಮೇಂದ್ರ ಪ್ರಧಾನ್ ಅವರಿಂದ ರಾಜೀನಾಮೆ ಪಡೆದಿದೆ. ಅಲ್ಲಿಗೆ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ಪ್ರತಿಭಟನೆ ಮಾಡುತ್ತಿರುವವರ ಎಲ್ಲ ಬೇಡಿಕೆಗಳೂ ಈಡೇರಿದಂತಾಗಿದೆ.

ಇದನ್ನೂ ಓದಿ: ‘ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ನಾಳೆಯವರೆಗೆ ಸಮಯ ಕೇಳಿದ ಸರ್ಕಾರ’; ಸಚಿವರ ಜೊತೆ ಸಭೆ ಬಳಿಕ ಸಿಜೆಪಿ ಮಾಹಿತಿ

ರಾಜೀನಾಮೆ ಬಳಿಕ ಧರ್ಮೇಂದ್ರ ಪ್ರಧಾನ್ ಹೇಳಿದ್ದೇನು?:

ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಧರ್ಮೇಂದ್ರ ಪ್ರಧಾನ್, “ಜಂತರ್ ಮಂತರ್‌ನಲ್ಲಿ ಹಾಗೂ ದೇಶಾದ್ಯಂತ ಇರುವ ಪರಿಸ್ಥಿತಿಯ ಲಾಭವನ್ನು ದೇಶವಿರೋಧಿ ಶಕ್ತಿಗಳು ಪಡೆಯಬಾರದು. ದೇಶವು ಒಗ್ಗಟ್ಟಿನಿಂದ ಇರಬೇಕು. ಭಾರತದ ವಿದ್ಯಾರ್ಥಿಗಳು ಕಾನೂನು ಸಂಕಷ್ಟದಲ್ಲಿ ಸಿಲುಕಿಕೊಳ್ಳದೆ ತಮ್ಮ ಅಧ್ಯಯನ ಮತ್ತು ವೃತ್ತಿಜೀವನದ ಮೇಲೆ ಗಮನ ಹರಿಸಬೇಕು ಎಂಬ ಕಾರಣಕ್ಕಾಗಿ ನಾನು ಪ್ರಧಾನಮಂತ್ರಿಯವರಿಗೆ ನನ್ನ ರಾಜೀನಾಮೆಯನ್ನು ಸಲ್ಲಿಸಿದ್ದೇನೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಇಂದು ಮಧ್ಯಾಹ್ನ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ‘ಸಿಜೆಪಿ’ ನೀಡಿದ ಡೆಡ್‌ಲೈನ್ ಅಂತ್ಯ

ಸಿಜೆಪಿ ಪ್ರತಿಕ್ರಿಯೆ:

ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಬಳಿಕ ಎಕ್ಸ್​ನಲ್ಲಿ ಪ್ರತಿಕ್ರಿಯಿಸಿದ ಸಿಜೆಪಿ, “ಶಿಕ್ಷಣ ಸಚಿವರು ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ, ವಿದ್ಯಾರ್ಥಿ ಶಕ್ತಿಗೆ ಜಯವಾಗಲಿ” ಎಂದು ಬರೆದುಕೊಂಡಿದೆ.

ಇದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸಿಜೆಪಿ ವಕ್ತಾರ ಅಶುತೋಷ್ ರಾಂಕಾ, “ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರೊಂದಿಗಿನ ಭೇಟಿ ಫಲಪ್ರದವಾಗಿದೆ. ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ವಿಷಯದಲ್ಲಿ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಿದ ನಂತರ ಸಿಜೆಪಿ ತನ್ನ ಮುಂದಿನ ನಡೆಯನ್ನು ನಿರ್ಧರಿಸಲಿದೆ” ಎಂದು ಹೇಳಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:42 pm, Sat, 25 July 26

Source link

ಗದಗ ಪೊಲೀಸರಿಂದ ಭರ್ಜರಿ ಬೇಟೆ: ಮೂವರು ಅಂತಾರಾಜ್ಯ ಕಳ್ಳರ ಬಂಧನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ವಶಕ್ಕೆ – Kannada News | Gadag Police Bust Interstate Masked Robbery Gang, Recover 42.73 Lakh Worth of Gold, Silver and Cars

ಗದಗ, ಜುಲೈ 25: ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಅಂತಾರಾಜ್ಯ ‘ಮಾಸ್ಕ್ ಗ್ಯಾಂಗ್’ನ (mask gang) ಮೂವರು ಆರೋಪಿಗಳನ್ನು ಗದಗ (gadag) ಶಹರ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮಹಮ್ಮದ್ ರಫೀಕ್ (36), ಬೆಳಗಾವಿ ಜಿಲ್ಲೆಯ ಇಮ್ರಾನ್ ತಿಗಡಿ (40) ಹಾಗೂ ಹಾವೇರಿ ಜಿಲ್ಲೆಯ ಮೌಲಾಅಲಿ ದರ್ಗಾ (34) ಬಂಧಿತ ಆರೋಪಿಗಳು. ಬಂಧಿತರಲ್ಲಿ ಓರ್ವ ತರಕಾರಿ ಹಾಗೂ ಗುಜರಿ ವ್ಯಾಪಾರಿಗಳಾಗಿದ್ದು, ಮತ್ತೋರ್ವ ಚಾಲಕನಾಗಿ ಕೆಲಸ ಮಾಡುತ್ತಿದ್ದರು.

ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ದೋಚಿದ್ದ ಖದೀಮರು

ಕಳೆದ ಮೇ 8 ರಂದು ಗದಗ ನಗರದ ಮಂಜುನಾಥ್ ಬಸವಾ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಮುಖಕ್ಕೆ ಮಾಸ್ಕ್ ಹಾಗೂ ಕೈಗೆ ಗ್ಲೌಸ್ ಧರಿಸಿ ಬಂದಿದ್ದ ಗ್ಯಾಂಗ್, ಸ್ಥಳದಲ್ಲಿ ಯಾವುದೇ ಸಾಕ್ಷ್ಯಾಧಾರಗಳು ಸಿಗದಂತೆ ಅತ್ಯಂತ ಚಾಣಾಕ್ಷತನದಿಂದ ಮನೆ ದೋಚಿದ್ದರು. ಕಳ್ಳರು ಮನೆಯಲ್ಲಿದ್ದ 34.20 ಲಕ್ಷ ರೂ ಮೌಲ್ಯದ 342 ಗ್ರಾಂ ಚಿನ್ನಾಭರಣ, 2.2 ಲಕ್ಷ ರೂ ಮೌಲ್ಯದ ಬೆಳ್ಳಿ ವಸ್ತುಗಳು ಹಾಗೂ 8.50 ಲಕ್ಷ ರೂ ನಗದು ದೋಚಿದ್ದರು.

42.73 ಲಕ್ಷ ರೂ ಮೌಲ್ಯದ ಸ್ವತ್ತು ವಶಕ್ಕೆ

ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಗದಗ ಪೊಲೀಸರು, ಸಿಸಿಟಿವಿ ಕ್ಯಾಮೆರಾದಲ್ಲಿ ಕಂಡುಬಂದ ಅನುಮಾನಾಸ್ಪದ ಕಾರನ್ನು ಬೆನ್ನಟ್ಟಿ ಇಡೀ ಪ್ರಕರಣದ ಜಾಲವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳಿಂದ ಒಟ್ಟು 42.73 ಲಕ್ಷ ರೂ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ 33.33 ಲಕ್ಷ ರೂ ಮೌಲ್ಯದ ಚಿನ್ನಾಭರಣ, 90 ಸಾವಿರ ರೂ ಮೌಲ್ಯದ ಬೆಳ್ಳಿ ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ 8 ಲಕ್ಷ ರೂ ಮೌಲ್ಯದ ಎರ್ಟಿಗಾ ಮತ್ತು ಆಲ್ಟೋ ಕಾರುಗಳು ಸೇರಿವೆ.

ಇದನ್ನೂ ಓದಿ:

ಇದೇ ವೇಳೆ, ಗದಗ ನಗರದ ಹಾತಲಗೇರಿ ನಾಕಾ ಬಳಿಯಿರುವ ಶ್ರೀ ಮಹಾಲಕ್ಷ್ಮಿ ದೇವಾಲಯದಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನೂ ಪೊಲೀಸರು ಭೇದಿಸಿದ್ದು, ದೇವಿಗೆ ಹಾಕುತ್ತಿದ್ದ 1.25 ಲಕ್ಷ ರೂ ಮೌಲ್ಯದ ಚಿನ್ನದ ತಾಳಿ, ಬೆಳ್ಳಿಯ ಕಿರೀಟವನ್ನು ವಶಪಡಿಸಿಕೊಂಡಿದ್ದಾರೆ.

ಎಸ್​​ಪಿ ರೋಹನ್ ಜಗದೀಶ್ ಹೇಳಿದ್ದಿಷ್ಟು 

ಇನ್ನು ಈ ಬಗ್ಗೆ ಎಸ್​​ಪಿ ರೋಹನ್ ಜಗದೀಶ್ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ್ದು, ‘‘ಲಾಕ್ ಮಾಡಿದ್ದ ಮನೆಯನ್ನು ಗುರಿಯಾಗಿಸಿಕೊಂಡು, ಯಾವುದೇ ಸಾಕ್ಷ್ಯಗಳು ಸಿಗದಂತೆ ಮಾಸ್ಕ್ ಮತ್ತು ಗ್ಲೌಸ್ ಧರಿಸಿ ಕಳ್ಳತನ ಮಾಡುತ್ತಿದ್ದ ಮೂವರು ಅಂತಾರಾಜ್ಯ ಖದೀಮರನ್ನು ಬಂಧಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡುಬಂದ ಅನುಮಾನಾಸ್ಪದ ಕಾರಿನ ಸುಳಿವು ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಹೆಡೆಮುರಿ ಕಟ್ಟಲಾಗಿದೆ. ಬಂಧಿತರಲ್ಲಿ ಮಹ್ಮದರಫೀಕ್​ ಮೇಲೆ ಕರ್ನಾಟಕ ಸೇರಿದಂತೆ 68 ಪ್ರಕರಣಗಳು ದಾಖಲಾಗಿವೆ. ಸದ್ಯ ಬಂಧಿತರಿಂದ ನಗದು, ಆಭರಣಗಳು ಹಾಗೂ ವಾಹನಗಳು ಸೇರಿದಂತೆ ಲಕ್ಷಾಂತರ ರೂ ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಲಾಗಿದೆ’’ ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಟಾಕ್ಸಿಕ್’ ಸಿನಿಮಾದ ಮತ್ತೊಂದು ಸಾಂಗ್​​ ರಿಲೀಸ್​​ಗೆ ಕೌಂಟ್​​ಡೌನ್; ಈ ಬಾರಿಯೂ ರೊಮ್ಯಾಂಟಿಕ್ ಹಾಡು – Kannada News | Toxic Movie Third Song Countdown Begins Yash Kiara Romantic Chemistry Set to Rule Again

‘ಟಾಕ್ಸಿಕ್’ ಸಿನಿಮಾದ (Toxic Movie)  ‘ತಬಾಹಿ..’ ಹಾಗೂ ‘ಮನಮೋಹಕ..’ ಹಾಡು ಇತ್ತೀಚೆಗೆ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಈಗ ಮೂರನೇ ಸಾಂಗ್ ರಿಲೀಸ್​​ಗೆ ಕೌಂಟ್​​ಡೌನ್ ಶುರುವಾಗಿದೆ. ಈ ಬಾರಿಯೂ ರೊಮ್ಯಾಂಟಿಕ್ ಸಾಂಗ್ ತೆರೆಗೆ ಬರಲಿದೆ ಎಂದು ಹೇಳಲಾಗುತ್ತಾ ಇದೆ. ವಿಶಾಲ್ ಮಿಶ್ರಾ ಸಂಗೀತ ಸಂಯೋಜನೆಯಲ್ಲಿ ಈ ಹೊಸ ಹಾಡು ತೆರೆಗೆ ಬರಲಿದೆ ಅನ್ನೋದು ವಿಶೇಷ.

‘ಟಾಕ್ಸಿಕ್’ ಸಿನಿಮಾ ಗ್ಯಾಂಗ್​ಸ್ಟರ್ ಸಿನಿಮಾ. ಇದರಲ್ಲಿ ಡ್ರಗ್ಸ್ ಕಥೆ ಇದೆ. ಅಂದರೆ ಸಿನಿಮಾದಲ್ಲಿ ಮಾಸ್ ಹಾಡುಗಳು ಹೆಚ್ಚಿರಬಹುದು ಎಂಬುದು ಅಭಿಮಾನಿಗಳ ಊಹೆ ಆಗಿತ್ತು. ಆದರೆ, ಆ ಊಹೆ ತಪ್ಪಾಗಿದೆ. ಈಗ ರಿಲೀಸ್ ಆಗಿರೋ ಎರಡು ಹಾಡುಗಳು ರೊಮ್ಯಾಂಟಿಕ್ ಶೈಲಿಯಲ್ಲಿವೆ. ಮೂರನೇ ಹಾಡು ಕೂಡ ರೊಮ್ಯಾಂಟಿಕ್ ಶೈಲಿಯಲ್ಲೇ ಇರಲಿದೆಯಂತೆ.

ಕಿಯಾರಾ ಹಾಗೂ ಯಶ್ ಲವ್ ಸ್ಟೋರಿ ‘ಟಾಕ್ಸಿಕ್’ ಚಿತ್ರದ ಹೈಲೈಟ್ ಎನ್ನುವ ಮಾತು ಕೇಳಿ ಬಂದಿದೆ. ಈಗಾಗಲೇ ಯಶ್ ಹಾಗೂ ಕಿಯಾರಾ ಪ್ರಣಯವನ್ನು ಸೆರೆಹಿಡಿಯುವ ಗೀತೆ ರಿಲೀಸ್ ಆಗಿದೆ. ಈಗ ರಿಲೀಸ್ ಆಗೋ ಹಾಡು ಕೂಡ ಕಿಯಾರಾ ಹಾಗೂ ಯಶ್ ಕಾಂಬಿನೇಷನ್ ಅಲ್ಲೇ ಮೂಡಿ ಬರಲಿದೆ ಎಂದು ವರದಿ ಆಗಿದೆ.

‘ಟಾಕ್ಸಿಕ್’ ಚಿತ್ರದಲ್ಲಿ ಒಟ್ಟೂ ಆರು ಹಾಡುಗಳು ಇರಲಿವೆ ಎನ್ನಲಾಗಿದೆ. ವಿಶಾಲ್ ಮಿಶ್ರಾ ಅವರ ಸಂಗೀತ ಸಂಯೋಜನೆಯಲ್ಲಿ ನಾಲ್ಕು ಮಧುರವಾದ ಹಾಡುಗಳು ಮೂಡಿ ಬಂದಿವೆ. ತನಿಷ್ಕ್ ಬಾಗ್ಚಿ ಅವರು ಫಹೀಮ್ ಅಬ್ದುಲ್ಲಾ ಮತ್ತು ಅಸ್ಲಾನ್ ನಿಜಾಮಿ ಅವರೊಂದಿಗೆ ಸೇರಿ ಒಂದು ವಿಶೇಷವಾದ ಹಾಡನ್ನು ಸಂಯೋಜಿಸಿದ್ದಾರೆ. ರವಿ ಬಸ್ರೂರು ಅವರು ಚಿತ್ರದ ಹಿನ್ನೆಲೆ ಸಂಗೀತವನ್ನು ಸಂಪೂರ್ಣವಾಗಿ ನಿರ್ವಹಿಸುವುದರ ಜೊತೆಗೆ, ಒಂದು ಹೈ-ಎನರ್ಜಿ ಹಾಡನ್ನು ಕೂಡ ಸಂಯೋಜಿಸಿದ್ದಾರೆ.

ಇದನ್ನೂ ಓದಿ: ‘ಟಾಕ್ಸಿಕ್’: ‘ಮನಮೋಹಕ’ ಹಾಡಿನಲ್ಲಿ ‘ಕಿರಾತಕ’ನ ಹುಡುಕಿದ ಅಭಿಮಾನಿಗಳು

‘ಟಾಕ್ಸಿಕ್’ ಚಿತ್ರಕ್ಕೆ ಗೀತು ಮೋಹನ್​ದಾಸ್ ನಿರ್ದೇಶನ ಇದೆ. ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ರುಕ್ಮಿಣಿ ವಸಂತ್ ಮೊದಲಾದವರು ನಟಿಸಿದ್ದಾರೆ. ಆಗಸ್ಟ್ 26ಕ್ಕೆ ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಧರ್ಮೇಂದ್ರ ಪ್ರಧಾನ್ ಖಾತೆಯನ್ನು ನುಂಗಿದ ‘ಜಿರಲೆ’, ಕೊನೆಗೂ ರಾಜೀನಾಮೆ ಸಲ್ಲಿಕೆ – Kannada News | Dharmendra Pradhan submits his resignation as Union Education Minister for NEET scam

ಬೆಂಗಳೂರು, (ಜುಲೈ 25): ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ದೇಶದೆಲ್ಲೆಡೆ ಪ್ರತಿಭಟನೆ ಕಾವು ವಿಕೋಪಕ್ಕೆ ಹೋಗುತ್ತಿದ್ದಂತೆಯೇ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಕಾಕ್ರೋಚ್ ಜನತಾ ಪಾರ್ಟಿ ದೆಹಲಿ ಜಂತರ್ ಮಂತರ್​​​ನಲ್ಲಿ ನಿರಂತರ ಪ್ರತಿಭಟನೆ ನಡೆಸುತ್ತಿದ್ದು, ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಲೇಬೇಕೆಂದು ಪಟ್ಟು ಹಿಡಿದಿತ್ತು. ಹೀಗಾಗಿ ಅಂತಿಮವಾಗಿ ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

 ಮತ್ತಷ್ಟು ಸುದ್ದಿಗಾಗಿ ಕ್ಲಿಕ್ ಮಾಡಿ

Source link

ಬಟ್ಲರ್​ ಭರ್ಜರಿ ಬ್ಯಾಟಿಂಗ್​ಗೆ ಕ್ರಿಸ್ ಗೇಲ್ ವಿಶ್ವ ದಾಖಲೆ ಉಡೀಸ್

Source link

ಖಾಸಗಿ ಶಾಲೆಗಳು ಹಳ್ಳಿ ಶಾಲೆಗಳನ್ನು ದತ್ತು ಪಡೆಯುವಂತೆ ಸಿಎಂ ಕರೆ – Kannada News | DK Shivakumar: Karnatakas Vision for Quality Rural Education Through Private School Adoption

ಬೆಂಗಳೂರು, ಜುಲೈ 25: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಜ್ಯದ ಗ್ರಾಮೀಣ ಪ್ರದೇಶದ ಶಿಕ್ಷಣ ಗುಣಮಟ್ಟವನ್ನು ಸುಧಾರಿಸಲು ಖಾಸಗಿ ಶಾಲೆಗಳು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳುವಂತೆ ಕರೆ ನೀಡಿದ್ದಾರೆ. ಬೆಂಗಳೂರಿನಂತಹ ನಗರಗಳಲ್ಲಿ ಲಭ್ಯವಿರುವ ಗುಣಮಟ್ಟದ ಶಿಕ್ಷಣವು ಹಳ್ಳಿಯ ಮಕ್ಕಳಿಗೂ ದೊರೆಯಬೇಕು ಎಂಬುದು ಇದರ ಹಿಂದಿನ ಪ್ರಮುಖ ಉದ್ದೇಶವಾಗಿದೆ.

ಖಾಸಗಿ ಶಾಲೆಗಳ ಸಹಕಾರವನ್ನು ಕೋರಿರುವ ಸಿಎಂ, ದೊಡ್ಡ ಮತ್ತು ಸಂಪನ್ಮೂಲವುಳ್ಳ ಖಾಸಗಿ ಶಾಲೆಗಳು ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಿಗೆ ತಮ್ಮ ಶಿಕ್ಷಕರು, ಪ್ರಯೋಗಾಲಯಗಳು ಹಾಗೂ ಶೈಕ್ಷಣಿಕ ಪರಿಣತಿಯನ್ನು ವಿಸ್ತರಿಸುವ ಮೂಲಕ ನೆರವಾಗಬೇಕು ಎಂದರು. ಖಾಸಗಿ ಶಾಲೆಗಳು ಈ ಉಪಕ್ರಮಕ್ಕೆ ಸಿದ್ಧವಾಗಿವೆ ಎಂದು ಅವರು ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version