Headlines

ಸಿ.ಜೆ.ರಾಯ್​​​ ಆತ್ಮಹತ್ಯೆ: ಮೋದಿ, ನಿರ್ಮಲಾ ಸೀತಾರಾಮನ್​ಗೆ ಮೋಹನ್ ದಾಸ್ ಪೈ ವಿಶೇಷ ಮನವಿ – Kannada News | CJ Roy Suicide Case: mohandas pai Requests PM Modi And nirmala Sitharaman about income Tax Official raid

ಬೆಂಗಳೂರು, (ಫೆಬ್ರವರಿ 01): ಪಿಸ್ತೂಲ್​​​ನಿಂದ ಗುಂಡು ಹಾರಿಸಿಕೊಂಡು ರಿಯಲ್ ಎಸ್ಟೇಟ್ ಉದ್ಯಮಿ ಸಿ.ಜೆ.ರಾಯ್​​​ ಆತ್ಮಹತ್ಯೆ (CJ Roy Suicide Case) ಹಿಂದಿನ ಕಾರಣ ನಿಗೂಢವಾಗಿದೆ. ನಿರಂತರ ಐಡಿ ದಾಳಿಯಿಂದಲೇ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇನ್ನು ರಾಯ್ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಉದ್ಯಮಿ ಮೋಹನ್ ದಾಸ್ ಪೈ ( mohandas pai )ಪ್ರತಿಕ್ರಿಯಿಸಿದ್ದು, ರಾಯ್​ ಸಾವಿನ ಬಗ್ಗೆ ಮುಕ್ತ ಪಾರದರ್ಶಕವಾಗಿ ತನಿಖೆಗೆ ಮನವಿ ಮಾಡಿದ್ದಾರೆ. ಅಲ್ಲದೇ ತೆರಿಗೆ ಅಧಿಕಾರಿಗಳ ದಾಳಿ ಬಗ್ಗೆಯೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ಗೆ ಟ್ವೀಟ್ ಮೂಲಕ ವಿಶೇಷ ಮನವಿ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಉದ್ಯಮಿ ಮೋಹನ್ ದಾಸ್ ಪೈ, ತೆರಿಗೆ ಭಯೋತ್ಪಾದನೆಯಿಂದ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥರನ್ನ ಕಳೆದುಕೊಂಡಿದ್ದೇವೆ. ತೆರಿಗೆ ಅಧಿಕಾರಿಗಳಿಂದ ಹಲವಾರು ಜನರು ಭಯಭೀತರಾಗಿದ್ದಾರೆ. ನಾಗರಿಕ ಹಕ್ಕುಗಳ ಮೇಲಿನ ದಾಳಿಯಾಗುತ್ತಿದೆ. ದಯವಿಟ್ಟು ತೆರಿಗೆ ಪಾವತಿದಾರರನ್ನು ಈ ರೀತಿಯ ದಾಳಿಗಳು ಮತ್ತು ನಾಗರಿಕ ಹಕ್ಕುಗಳ ಮೇಲಿನ ದಾಳಿಯಿಂದ ರಕ್ಷಿಸುವಂತೆ ವಿನಂತಿಸಿದ್ದಾರೆ.

ಒಟ್ಟಾರೆಯ ದಾಳಿ ಪ್ರಕ್ರಿಯೆ ತುಂಬಾ ಕ್ರೂರವಾಗಿದೆ. ನಮ್ಮ ವಿತ್ತ ಸಚಿವರು ಇಂತಹ ಅಧಿಕಾರಿಗಳಿಗೆ ಹೆಚ್ಚು ಅಧಿಕಾರ ನೀಡ್ತಿದ್ದಾರೆ. ಆದರೆ ಇದರಿಂದ ನಾಗರಿಕರ ರಕ್ಷಣೆ ಎಲ್ಲಿದೆ? ತಪ್ಪು ದಾಳಿಗೆ ಅಧಿಕಾರಿಗಳಿಗೆ ಶಿಕ್ಷೆಯಾಗಿದೆಯೇ? ಇಲ್ಲ. ಕಳೆದ 3 ವರ್ಷಗಳಲ್ಲಿ ನೇರ ತೆರಿಗೆಗಳ ಮೂಲಕ 72 ಲಕ್ಷ ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿದೆಯೇ? ಇಂತಹ ದಾಳಿಗಳ ಮೂಲಕ ಎಷ್ಟು ಸಂಗ್ರಹಿಸಲಾಗಿದೆ? ಎಂದು ಪ್ರಶ್ನಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *