Headlines

ರಣಜಿ ಫೈನಲ್​ನಲ್ಲಿ ಕರ್ನಾಟಕ ತಂಡದ ‘ಸೋಲು’ ಕನ್ಫರ್ಮ್​! – Kannada News | Karnataka’s loss in the Ranji Trophy final is all but confirmed

ಹುಬ್ಬಳ್ಳಿಯ ಕೆಎಸ್​ಸಿಎ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡದ ಸೋಲು ಖಚಿತವಾಗಿದೆ. ಅದು ಕೂಡ ಜಮ್ಮು-ಕಾಶ್ಮೀರ ತಂಡದ ಬೃಹತ್ ಮುನ್ನಡೆಯೊಂದಿಗೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಜಮ್ಮು-ಕಾಶ್ಮೀರ ತಂಡವು ಮೊದಲ ಇನಿಂಗ್ಸ್​ನಲ್ಲಿ ಬರೋಬ್ಬರಿ 584 ರನ್ ಕಲೆಹಾಕಿದ್ದರು.

ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಕರ್ನಾಟಕ ತಂಡವು ಕೇವಲ 293 ರನ್​ಗಳಿಸಿ ಆಲೌಟ್ ಆಗಿತ್ತು. ಇತ್ತ 291 ರನ್​ಗಳ ಹಿನ್ನಡೆ ಅನುಭವಿಸಿದರೂ ಕರ್ನಾಟಕ ತಂಡಕ್ಕೆ ನಾಲ್ಕನೇ ದಿನದಾಟದಲ್ಲಿ ಕಂಬ್ಯಾಕ್ ಮಾಡಲು ಅವಕಾಶವಿತ್ತು.

ಆದರೆ ದ್ವಿತೀಯ ಇನಿಂಗ್ಸ್​ನಲ್ಲೂ ಜಮ್ಮು-ಕಾಶ್ಮೀರ ಬ್ಯಾಟರ್​ಗಳು ಕ್ರೀಸ್ ಕಚ್ಚಿ ನಿಂತಿದ್ದಾರೆ. ದ್ವಿತೀಯ ಇನಿಂಗ್ಸ್​ನ ಮೊದಲ ಮೂರು ಓವರ್​ಗಳಲ್ಲೇ 2 ವಿಕೆಟ್ ಕಬಳಿಸಿ ಕರ್ನಾಟಕ ಬೌಲರ್​ಗಳು ಪಂದ್ಯ ಹೊಸ ಭರವಸೆ ಮೂಡಿಸಿದ್ದರು. ಆದರೆ ಈ ಹಂತದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಖಮ್ರಾನ್ ಇಕ್ಬಾಲ್ ಕರ್ನಾಟಕ ತಂಡದ ಎಲ್ಲಾ ಲೆಕ್ಕಾಚಾರಗಳನ್ನು ತಲೆ ಕೆಳಗಾಗಿಸಿದ್ದಾರೆ.

ಇದೀಗ ಜಮ್ಮು-ಕಾಶ್ಮೀರ ತಂಡದ ಮುನ್ನಡೆ 500 ರನ್​ಗಳನ್ನು ದಾಟಿದೆ. ಅಂದರೆ ಕಾಶ್ಮೀರಿ ಪಡೆ ಇನ್ನು ಡಿಕ್ಲೇರ್ ಘೋಷಿಸಿದರೂ ಕರ್ನಾಟಕ ತಂಡಕ್ಕೆ ಈ ಗುರಿ ಬೆನ್ನತ್ತಲು ಸಾಧ್ಯವಾಗುವುದಿಲ್ಲ.

ಏಕೆಂದರೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಯಾವುದೇ ತಂಡ ಕೊನೆಯ ಇನಿಂಗ್ಸ್​ನಲ್ಲಿ 500 ರನ್​ಗಳನ್ನು ಬೆನ್ನತ್ತಿ ಗೆದ್ದ ಚರಿತ್ರೆಯೇ ಇಲ್ಲ. ಹೀಗಾಗಿ ಜಮ್ಮು-ಕಾಶ್ಮೀರ ತಂಡವು ಇನ್ನು ಡಿಕ್ಲೇರ್ ಘೋಷಿಸಿದರೂ ಕರ್ನಾಟಕ ತಂಡವು 500+ ರನ್​ಗಳನ್ನು ಚೇಸ್ ಮಾಡುವುದು ಅಸಾಧ್ಯ.

ಒಂದು ವೇಳೆ ನಾಲ್ಕನೇ ದಿನದಾಟದಲ್ಲೇ ಕರ್ನಾಟಕ ಬೌಲರ್​ಗಳು 4 ರಿಂದ 5 ವಿಕೆಟ್ ಕಬಳಸಿದ್ದರೆ, ಐದನೇ ದಿನದಾಟದ ಮೊದಲ ಸೆಷನ್​ನಲ್ಲಿ ಆಲೌಟ್ ಮಾಡಿ ಪಂದ್ಯದ ಮೇಲೆ ಹಿಡಿತ ಸಾಧಿಸಬಹುದಿತ್ತು. ಈ ಮೂಲಕ ಕೊನೆಯ ಎರಡು ಸೆಷನ್​ಗಳಲ್ಲಿ 400 ರಿಂದ 450 ರನ್​ಗಳ ಗುರಿ ಪಡೆದು ಚೇಸಿಂಗ್ ಪ್ರಯತ್ನಕ್ಕೆ ಕೈ ಹಾಕಬಹುದಿತ್ತು.

ಆದರೆ ಜಮ್ಮು-ಕಾಶ್ಮೀರ ತಂಡದ ಆರಂಭಿಕ ದಾಂಡಿಗ ಖಮ್ರಾನ್ ಇಕ್ಬಾಲ್ ಅವರ ಭರ್ಜರಿ ಶತಕದೊಂದಿಗೆ ಕರ್ನಾಟಕ ತಂಡದ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗಿದೆ. ಅಲ್ಲದೆ ಜಮ್ಮು-ಕಾಶ್ಮೀರ ತಂಡದ ಮುನ್ನಡೆ 500 ರನ್​ಗಳನ್ನು ದಾಟಿರುವ ಕಾರಣ ಈ ಮ್ಯಾಚ್ ಡ್ರಾನಲ್ಲಿ ಅಂತ್ಯಗೊಳ್ಳುವುದು ಸಹ ಖಚಿತವಾಗಿದೆ.

ಡ್ರಾ ಆದರೆ ಯಾರು ಚಾಂಪಿಯನ್:

ರಣಜಿ ಟೂರ್ನಿಯ ಫೈನಲ್ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡರೆ ಮೊದಲ ಇನಿಂಗ್ಸ್​ನಲ್ಲಿ ಮುನ್ನಡೆ ಸಾಧಿಸಿದ ತಂಡವನ್ನು ವಿಜಯಿ ಎಂದು ಪರಿಗಣಿಸಲಾಗುತ್ತದೆ. ಇಲ್ಲಿ ಕರ್ನಾಟಕ ವಿರುದ್ಧ ಜಮ್ಮು-ಕಾಶ್ಮೀರ ಮೊದಲ ಇನಿಂಗ್ಸ್​ನಲ್ಲಿ ಬರೋಬ್ಬರಿ 291 ರನ್​ಗಳ ಮುನ್ನಡೆ ಪಡೆದುಕೊಂಡಿದೆ.

ಹೀಗಾಗಿ ಈ ಬಾರಿಯ ರಣಜಿ ಟೂರ್ನಿಯ ಚಾಂಪಿಯನ್ ಜಮ್ಮು-ಕಾಶ್ಮೀರ. ಇದರೊಂದಿಗೆ 11 ವರ್ಷಗಳ ಬಳಿಕ ಮತ್ತೊಮ್ಮೆ ರಣಜಿ ಟ್ರೋಫಿ ಎತ್ತಿ ಹಿಡಿಯುವ ಕರ್ನಾಟಕ ತಂಡದ ಕನಸು ಕೂಡ ಕಮರಿದೆ.

ಜಮ್ಮು ಮತ್ತು ಕಾಶ್ಮೀರ ಪ್ಲೇಯಿಂಗ್ XI: ಖಮ್ರಾನ್ ಇಕ್ಬಾಲ್, ಯಾವರ್ ಹಸನ್, ಶುಭಂ ಪುಂಡೀರ್, ಪರಸ್ ಡೋಗ್ರಾ (ನಾಯಕ), ಅಬ್ದುಲ್ ಸಮದ್, ಕನ್ಹಯ್ಯಾ ವಾಧವನ್ (ವಿಕೆಟ್ ಕೀಪರ್), ಅಬಿದ್ ಮುಷ್ತಾಕ್, ಆಖಿಬ್ ನಬಿ ದಾರ್, ಯುದ್ವೀರ್ ಸಿಂಗ್ ಚರಕ್, ಸಾಹಿಲ್ ಲೋತ್ರಾ, ಸುನೀಲ್ ಕುಮಾರ್.

ಇದನ್ನೂ ಓದಿ: ವಿರಾಟ್ ಕೊಹ್ಲಿಯ ವಿಶ್ವ ದಾಖಲೆಯನ್ನೇ ಅಳಿಸಿ ಹಾಕಿದ ಬ್ರಿಯಾನ್ ಬೆನ್ನೆಟ್

ಕರ್ನಾಟಕ ಪ್ಲೇಯಿಂಗ್ XI: ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್ (ನಾಯಕ), ಕರುಣ್ ನಾಯರ್, ಸ್ಮರಣ್ ರವಿಚಂದ್ರನ್, ಶ್ರೇಯಸ್ ಗೋಪಾಲ್, ಕೃತಿಕ್ ಕೃಷ್ಣ (ವಿಕೆಟ್ ಕೀಪರ್), ವಿದ್ಯಾಧರ್ ಪಾಟೀಲ್, ವಿಜಯ್ ಕುಮಾರ್ ವೈಶಾಕ್, ಶಿಖರ್ ಶೆಟ್ಟಿ, ಪ್ರಸಿದ್ಧ್ ಕೃಷ್ಣ.

Published On – 10:58 am, Sat, 28 February 26

Source link

Leave a Reply

Your email address will not be published. Required fields are marked *