‘ಬಿಗ್ ಬಾಸ್ ಕನ್ನಡ ಸೀಸನ್ 13’ (Bigg Boss Kannada Season 13) ಆರಂಭಕ್ಕೆ ತಯಾರಿ ನಡೆದಿದೆ. ಮಾಜಿ ಸ್ಪರ್ಧಿ ತುಕಾಲಿ ಸಂತು ಅವರು ಈ ಬಗ್ಗೆ ಮಾತನಾಡಿದ್ದಾರೆ. ‘ಬಿಗ್ ಬಾಸ್ ಶುರುವಾಗಲು ಇನ್ನೂ 2 ತಿಂಗಳು ಬಾಕಿ ಇದೆ. ನನಗೆ ಎಗ್ಸೈಟ್ಮೆಂಟ್ ತಡೆಯಲು ಆಗುತ್ತಿಲ್ಲ. ವಿಡಿಯೋ ಮಾಡಿ ಕಳಿಸಿ ಅಂತ ತಲೆಗೆ ಹುಳ ಬಿಟ್ಟಿದ್ದಾರೆ. ಜನರೆಲ್ಲ ಕುತೂಹಲದಿಂದ ಕಾಯುತ್ತಿದ್ದಾರೆ. ಕಳೆದ ಬಾರಿ 18ರ ತನಕ ಟಿಆರ್ಪಿ ಬಂದಿತ್ತು. ಈ ಸಲ 30 ಮುಟ್ಟುತ್ತಾ ಅಂತ ನನಗೆ ಭಯ ಆಗುತ್ತಿದೆ. ಈ ಬಾರಿ ಖಂಡಿತವಾಗಿ ದೊಡ್ಡ ಮಟ್ಟಕ್ಕೆ ರೀಚ್ ಆಗುತ್ತದೆ. ಜನರಲ್ಲಿ ಒಂದು ಅಲೆ ಶುರುವಾಗಿದೆ. ಹಾಗಾಗಿ ಮುಂದಿನ ಹಂತಕ್ಕೆ ಇದು ಹೋಗುತ್ತದೆ. ಈ ಸಲ ವಿದೇಶದಿಂದ ಸ್ಪರ್ಧಿಗಳು ಬಂದರೂ ಅಚ್ಚರಿ ಇಲ್ಲ. ಹಿಂದಿ ಬಿಗ್ ಬಾಸ್ ಕಾರ್ಯಕ್ರಮವನ್ನೂ ಕನ್ನಡದ ಬಿಗ್ ಬಾಸ್ ಮೀರಿಸಿದೆ’ ಎಂದು ತುಕಾಲಿ ಸಂತೋಷ್ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.