ಬೆಂಗಳೂರು, ಜೂನ್ 24: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಮತ್ತೆ ಪೋಸ್ಟರ್ ಅಭಿಯಾನ ನಡೆಸಿದ್ದಾರೆ. ಬಿಡದಿ ಮತ್ತು ಬೈರಮಂಗಲ ಸುತ್ತಮುತ್ತಲ ಪ್ರದೇಶಗಳಲ್ಲಿ ಕುಮಾರಸ್ವಾಮಿ ಹಾಗೂ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ವಿರುದ್ಧ ಪೋಸ್ಟರ್ಗಳನ್ನು ಹಾಕಲಾಗಿದೆ. ಈ ಪೋಸ್ಟರ್ಗಳಲ್ಲಿ ಹಲಗೆವಡೇರಹಳ್ಳಿ ಮತ್ತು ಕೇತಗಾನಹಳ್ಳಿ ಭೂ ಹಗರಣದಲ್ಲಿ ಭಾಗಿಯಾದ ಆರೋಪವನ್ನು ಮಾಡಲಾಗಿದ್ದು, “ಜೈಲಿಗೆ ಹೋಗಲು ಸಿದ್ಧರಾಗಿ” ಎಂಬ ಸಂದೇಶವನ್ನು ಪ್ರಮುಖವಾಗಿ ಪ್ರದರ್ಶಿಸಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಬ್ರದರ್ ಕುಮಾರಸ್ವಾಮಿ ಎಂದು ಸಂಬೋಧಿಸುತ್ತಾ, ಪಂಚಾಯತಿಯಿಂದ ವಿಧಾನ ಪರಿಷತ್ ಚುನಾವಣೆಯವರೆಗೆ ಹಣ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಇದು ಹೆಚ್.ಡಿ. ಕುಮಾರಸ್ವಾಮಿ ಎಂದು ಎಲ್ಲರಿಗೂ ಗೊತ್ತು ಎಂದೂ ಪೋಸ್ಟರ್ಗಳಲ್ಲಿ ಉಲ್ಲೇಖಿಸಲಾಗಿದೆ. ಪೋಸ್ಟರ್ಗಳಲ್ಲಿ ಹಾಸ್ಯ ಮಿಶ್ರಿತ ಸಂಭಾಷಣೆಯನ್ನೂ ಚಿತ್ರಿಸಲಾಗಿದೆ. ಈ ಪೋಸ್ಟರ್ ವಾರ್ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ