Headlines

ರಾಮಮಂದಿರ ದೇಣಿಗೆ ಲೂಟಿ; ಬೀದರ್​ ಶಾಸಕನ ವಿರುದ್ಧವೂ ಎಸ್​ಐಟಿಗೆ ದೂರು – Kannada News | Ram Mandir Donation Theft Case Bidar Man Filed Complaint against BJP MLA

ಬೀದರ್, ಜೂನ್ 28: ರಾಮಮಂದಿರದಲ್ಲಿ (Ram Mandir Theft Case) ದೇಣಿಗೆ ಲೂಟಿಗೂ ಕರ್ನಾಟಕದ ಬೀದರ್​​ಗೂ ನಂಟು ಏರ್ಪಟ್ಟಿದೆ. ಈ ಕೇಸ್​ಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಎಸ್​ಐಟಿಗೆ ಔರಾದ್​ನ ದೀಪಕ್ ಎಂಬುವವರು ದೂರು ದಾಖಲಿಸಿದ್ದಾರೆ. ಎಸ್ಐಟಿ ಮುಖ್ಯಸ್ಥ ವಿಜಯ್ ವಿಶ್ವಾಸ್ ಪಂತ್​ಗೆ ಅವರು ದೂರು ನೀಡಿದ್ದು, ಬಿಜೆಪಿ ಶಾಸಕ ಪ್ರಭು ಚೌಹಾಣ್, ಆರ್​ಎಸ್​ಎಸ್​ನ ಗೋಪಾಲ್ ಹಣ ಸಂಗ್ರಹಿಸಿದ್ದಾರೆ. ರಾಮಮಂದಿರದ ಹೆಸರಲ್ಲಿ ಗುತ್ತಿಗೆದಾರರಿಂದ ಮೊದಲು 5 ಲಕ್ಷ ರೂ. ದೇಣಿಗೆ ಸಂಗ್ರಹಿಸಿದ್ದು, ಯಾವುದೇ ದಾಖಲಾತಿ ನೀಡಿಲ್ಲ. ಸಂಗ್ರಹಿಸಿದ ಹಣವನ್ನು ರಿಯಲ್ ಎಸ್ಟೇಟ್​ನಲ್ಲಿ ಹೂಡಿಕೆ ಮಾಡಿದ್ದು, ಈ ಬಗ್ಗೆ ದಾಖಲೆಗಳಿವೆ. ಎಸ್​ಐಟಿ ಮುಂದೆ ದಾಖಲೆಗಳನ್ನು ಸಲ್ಲಿಸಲು ಸಿದ್ಧರಿದ್ದೇವೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಔರಾದ್ ತಾಲೂಕಿನ ದೀಪಕ್ ಎಂಬ ವ್ಯಕ್ತಿ ಬಿಜೆಪಿ ಶಾಸಕ ಪ್ರಭು ಚೌಹಾಣ್ ವಿರುದ್ಧ ಎಸ್​ಐಟಿಗೆ ದೂರು ನೀಡಿದ್ದಾರೆ. ಶಾಸಕ ಪ್ರಭು ಚೌಹಾಣ್ ಮತ್ತು ಆರ್​ಎಸ್​ಎಸ್​ ನಾಯಕ ಗೋಪಾಲ್ ಇಬ್ಬರೂ ಔರಾದ್ ತಾಲೂಕಿನ ಗುತ್ತಿಗೆದಾರರಿಂದ ರಾಮಮಂದಿರದ ಹೆಸರಿನಲ್ಲಿ ಕೋಟ್ಯಂತರ ರೂ. ದೇಣಿಗೆ ಹಣ ಸಂಗ್ರಹಿಸಿದ್ದರು. ಆ ಹಣವನ್ನು ಅವರಿಬ್ಬರೂ ರಾಮ ಮಂದಿರ ಟ್ರಸ್ಟ್​ಗೆ ನೀಡದೆ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *