ಬೀದರ್, ಜೂನ್ 28: ರಾಮಮಂದಿರದಲ್ಲಿ (Ram Mandir Theft Case) ದೇಣಿಗೆ ಲೂಟಿಗೂ ಕರ್ನಾಟಕದ ಬೀದರ್ಗೂ ನಂಟು ಏರ್ಪಟ್ಟಿದೆ. ಈ ಕೇಸ್ಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಎಸ್ಐಟಿಗೆ ಔರಾದ್ನ ದೀಪಕ್ ಎಂಬುವವರು ದೂರು ದಾಖಲಿಸಿದ್ದಾರೆ. ಎಸ್ಐಟಿ ಮುಖ್ಯಸ್ಥ ವಿಜಯ್ ವಿಶ್ವಾಸ್ ಪಂತ್ಗೆ ಅವರು ದೂರು ನೀಡಿದ್ದು, ಬಿಜೆಪಿ ಶಾಸಕ ಪ್ರಭು ಚೌಹಾಣ್, ಆರ್ಎಸ್ಎಸ್ನ ಗೋಪಾಲ್ ಹಣ ಸಂಗ್ರಹಿಸಿದ್ದಾರೆ. ರಾಮಮಂದಿರದ ಹೆಸರಲ್ಲಿ ಗುತ್ತಿಗೆದಾರರಿಂದ ಮೊದಲು 5 ಲಕ್ಷ ರೂ. ದೇಣಿಗೆ ಸಂಗ್ರಹಿಸಿದ್ದು, ಯಾವುದೇ ದಾಖಲಾತಿ ನೀಡಿಲ್ಲ. ಸಂಗ್ರಹಿಸಿದ ಹಣವನ್ನು ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡಿದ್ದು, ಈ ಬಗ್ಗೆ ದಾಖಲೆಗಳಿವೆ. ಎಸ್ಐಟಿ ಮುಂದೆ ದಾಖಲೆಗಳನ್ನು ಸಲ್ಲಿಸಲು ಸಿದ್ಧರಿದ್ದೇವೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಔರಾದ್ ತಾಲೂಕಿನ ದೀಪಕ್ ಎಂಬ ವ್ಯಕ್ತಿ ಬಿಜೆಪಿ ಶಾಸಕ ಪ್ರಭು ಚೌಹಾಣ್ ವಿರುದ್ಧ ಎಸ್ಐಟಿಗೆ ದೂರು ನೀಡಿದ್ದಾರೆ. ಶಾಸಕ ಪ್ರಭು ಚೌಹಾಣ್ ಮತ್ತು ಆರ್ಎಸ್ಎಸ್ ನಾಯಕ ಗೋಪಾಲ್ ಇಬ್ಬರೂ ಔರಾದ್ ತಾಲೂಕಿನ ಗುತ್ತಿಗೆದಾರರಿಂದ ರಾಮಮಂದಿರದ ಹೆಸರಿನಲ್ಲಿ ಕೋಟ್ಯಂತರ ರೂ. ದೇಣಿಗೆ ಹಣ ಸಂಗ್ರಹಿಸಿದ್ದರು. ಆ ಹಣವನ್ನು ಅವರಿಬ್ಬರೂ ರಾಮ ಮಂದಿರ ಟ್ರಸ್ಟ್ಗೆ ನೀಡದೆ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
