Headlines

ಸಂಘ ಪರಿವಾರದ ವಿರುದ್ಧವೇ ಬೇಸರ ಹೊರಹಾಕಿದ ಹಿಂದೂ ಸಂಘಟನೆ ಮುಖಂಡ: ಭಾರಿ ಚರ್ಚೆಗೆ ಗ್ರಾಸವಾದ ಪೋಸ್ಟ್​​ – Kannada News | Backlash in Coastal Karnataka: Sharath Madivala Deatt Related Case Accused Sandeep Poojary Hits Out at BJP Leaders; Post Sparks Row

ಸಂದೀಪ್ ಪೂಜಾರಿ ಪಂಪವೆಲ್ ಮಾಡಿರುವ ಪೋಸ್ಟ್​​

ಬೆಂಗಳೂರು/ಮಂಗಳೂರು, ಜುಲೈ 09: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದಿದ್ದ ಶರತ್​​ ಮಡಿವಾಳ ಕೊಲೆ ಪ್ರಕರಣ ಸಂಬಂಧದ ಗಲಾಟೆಯಲ್ಲಿ ಜೈಲು ಪಾಲಾಗಿದ್ದ ಹಿಂದೂ ಸಂಘಟನೆ ಮುಖಂಡ ಸಂದೀಪ್ ಪೂಜಾರಿ ಪಂಪವೆಲ್ ಸಂಘ ಪರಿವಾರ ಮತ್ತು ಬಿಜೆಪಿ ವಿರುದ್ಧ ಬೇಸರ ಹೊರ ಹಾಕಿ ಮಾಡಿರುವ ಪೋಸ್ಟ್​​ ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕಾನೂನು ಸಂಘರ್ಷದ ಸಮಯದಲ್ಲಿ ಇವರ್ಯಾರೂ ತಮಗೆ ನೆರವಾಗಿಲ್ಲ ಎಂದು ಸಂದೀಪ್​​ ಹೇಳಿಕೊಂಡಿದ್ದು, ಅವರ ಈ ಮಾತಿಗೆ ಮತ್ತಷ್ಟು ಯುವಕರು ದನಿಗೂಡಿಸಿದ್ದಾರೆ.

ಸಂದೀಪ್​​ ಪೋಸ್ಟ್​​ನಲ್ಲಿ ಏನಿದೆ?

ಸಂದೀಪ್​​ ಮಡಿವಾಳ ಹತ್ಯೆಯಾಗಿ 9 ವರ್ಷಗಳು ಕಳೆದಿವೆ. ಅವರ ಪಾಥರ್ಥವ ಶರೀರದ ಮೆರವಣಿಗೆ ಸಂದರ್ಭ ಬಿ.ಸಿ. ರೋಡ್​​ನ ಕೈಕಂಬದಲ್ಲಿ ನಡೆದಿದ್ದ ಗುಂಪು ಘರ್ಷಣೆ ಸಂಬಂಧ 3 ಪ್ರಕರಣ ತನ್ನ ಮೇಲೆ ದಾಖಲಾಗಿದ್ದವು. ಆ ಸಂಬಂಧ ಜೈಲುವಾಸವನ್ನೂ ಅನುಭವಿಸಿದ್ದೇನೆ. ಸಾಮಾಜಿಕ ಜಾಲತಾಣದಲ್ಲಿ ಬಂದು ಬೌದ್ಧಿಕ್​​, ಪ್ರವಚನ ಮಾಡೋದಕ್ಕೂ ಅದನ್ನು ಅನುಭವಿಸುವುದಕ್ಕೂ ಬಹಳ ವ್ಯತ್ಯಾಸವಿದೆ. ಜಿಲ್ಲೆಯಲ್ಲಿ ನಡೆಯುವ ಕೊಲೆಗಳ ಹೆಸರಲ್ಲಿ ಶಾಸಕರಾದವರು ಮಾತ್ರ ಕಳೆದ 9 ವರ್ಷಗಳ ಅವಧಿಯಲ್ಲಿ ತಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಬೇಕಾಗುವಷ್ಟು ಜೋಳಿಗೆ ತುಂಬಿಸಿಕೊಂಡಿದ್ದಾರೆ ಎನ್ನುವುದು ಬೇರೆ ಮಾತು ಎಂದು ಸಂದೀಪ್ ಪೂಜಾರಿ ಪಂಪವೆಲ್ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಆರ್​​ಎಸ್​​ಎಸ್​​ ವಿರುದ್ಧ ಮಾತಾಡಿದ್ರೆ ಕಾಂಗ್ರೆಸ್​​ನಲ್ಲಿ ಬಡ್ತಿ ಸಿಗುತ್ತೆ; ಶಾಸಕ ಯತ್ನಾಳ್​​ ಆರೋಪ

2008ರ ನಂತರ ಮತ್ತು ಅದಕ್ಕಿಂತ ಮುಂಚೆ ಅನೇಕ ಕೋಮು ಸಂಘರ್ಷಗಳು ಕರಾವಳಿಯಲ್ಲಿ ನೆತ್ತರ ಓಕುಳಿಯನ್ನೇ ಹರಿಸಿವೆ. ಯಾವುದೋ ಭಾವಾವೇಶ, ಇನ್ಯಾರದೋ ಮಾತು, ಮತ್ಯಾರದೋ ಭಾಷಣಗಳಿಗೆ ಹುಚ್ಚೆದ್ದು ಹಿಂದುಳಿದ ಬಡ ಮುಗ್ದ ಯುವಕರು ಕಾನೂನು ಕೈಗೆತ್ತಿಕೊಂಡ ಉದಾಹರಣೆಗಳಿವೆ. ಮುಗ್ದ ಹಿಂದುಳಿದ ಹಿಂದೂ ಯುವಕರ‌ನ್ನು ಹಿಂದುತ್ವದ ಪ್ರಯೋಗಶಾಲೆಯಲ್ಲಿ ಬಲಿ ನೀಡಲಾಗುತ್ತಿದೆ ಎಂದು ಕಾಂಗ್ರೆಸ್​​ ಆರೋಪ ಮಾಡುತ್ತಲೇ ಬಂದಿರುವ ಕಾರಣ ಸಂದೀಪ್ ಪೂಜಾರಿ ಅವರ ಈ ಪೋಸ್ಟ್​​ ಮಹತ್ವ ಪಡೆದುಕೊಂಡಿದೆ.

ಗೃಹ ಸಚಿವ ಪ್ರಿಯಾಂಕ್​​ ಖರ್ಗೆ ಕಿಡಿ

ಸಾಮಾಜಿಕ ಜಾಲತಾಣದಲ್ಲಿ RSS ಬಗ್ಗೆ ಕಾರ್ಯಕರ್ತರ ಬೇಸರ ವಿಚಾರ ಸಂಬಂಧ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಹಿಂದೆ ನಾನು ಹೇಳುತ್ತಿದ್ದನ್ನೇ ಇಂದು ಅವರು ಹೇಳುತ್ತಿದ್ದಾರೆ. ಪ್ರಕರಣದಲ್ಲಿ ದಾಖಲಾದವರಿಗೆ RSS ಯಾವುದೇ ಹೆಲ್ಪ್ ಮಾಡಲ್ಲ. ಧರ್ಮ ರಕ್ಷಣೆ, ಗೋವು ರಕ್ಷಣೆಗೆಲ್ಲ ಬಡವರ ಮಕ್ಕಳನ್ನು ಮಾತ್ರ ಬಳಸಿಕೊಳ್ಳುತ್ತಾರೆ. ಬಿಜೆಪಿ ಮತ್ತು ಆರ್​ಎಸ್​​ಎಸ್​ ನಾಯಕರ ಮಕ್ಕಳಲ್ಲಿ ಒಬ್ಬರು ಇವತ್ತು RSS ಫುಲ್ ಟೈಮ್ ಪ್ರಚಾರಕ ಆಗಿದ್ದಾರಾ ತೋರಿಸಿಬಿಡಿ ಎಂದವರು ಸವಾಲು ಹಾಕಿದ್ದಾರೆ. ಇವರೆಲ್ಲಾ ಪರೇಶ್ ಮೇಸ್ತಾ ಹೆಸರಲ್ಲಿ ಎಲೆಕ್ಷನ್ ಗೆದ್ದರಲ್ಲಪ್ಪ, ಆಗ ಯಾರಾದರೂ ಅವರ ಮನೆಗೆ ಹೋಗಿದ್ದರಾ ಹೇಳಲಿ. ಇದೇ ರೀತಿ ಎಷ್ಟೋ ಯುವಕರು ಮೃತಪಟ್ಟಿದ್ದಾರೆ. ಅವರೆಲ್ಲ 22, 25, 28 ವರ್ಷದ ಯುವಕರು. ಈಗಲಾದರೂ ಜಾಗೃತರಾಗಿದ್ದಾರೆ ಎಂಬುದು ಸಂತೋಷದ ವಿಷಯ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 8:40 pm, Thu, 9 July 26

Source link

Leave a Reply

Your email address will not be published. Required fields are marked *