ಬೆಂಗಳೂರು, ಜುಲೈ 09: ವಾತಾವರಣದ ಬದಲಾವಣೆಗಳಿಗೆ ಅನುಗುಣವಾಗಿ ಭಾರತೀಯ ಹವಾಮಾನ ಇಲಾಖೆಯು (IMD) ಸಾರ್ವಜನಿಕರಿಗೆ ನಿರಂತರವಾಗಿ ಮುನ್ನೆಚ್ಚರಿಕೆಗಳನ್ನು ನೀಡುತ್ತಿರುತ್ತದೆ. ಉಪಗ್ರಹಗಳು ಮತ್ತು ಅತ್ಯಾಧುನಿಕ ರಾಡಾರ್‌ಗಳ ಮೂಲಕ ಹವಾಮಾನವನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡುವ ಇಲಾಖೆಯು, ಮುಂದಿನ ಕೆಲವು ಗಂಟೆಗಳು ಅಥವಾ ದಿನಗಳಲ್ಲಿ ಸಂಭವಿಸಬಹುದಾದ ಭಾರಿ ಮಳೆ, ಬಿರುಗಾಳಿ, ಗುಡುಗು, ಮಿಂಚು ಹಾಗೂ ಚಂಡಮಾರುತಗಳ ಬಗ್ಗೆ ಮುಂಚಿತವಾಗಿಯೇ ಅಲರ್ಟ್‌ಗಳನ್ನು ಪ್ರಕಟಿಸುತ್ತದೆ. ರೆಡ್ ಅಲರ್ಟ್ ತೀವ್ರ ಅಪಾಯಕಾರಿ ಪರಿಸ್ಥಿತಿಯನ್ನು ಸೂಚಿಸುತ್ತದೆ, ಅಲ್ಲಿ ತಕ್ಷಣದ ಕ್ರಮದ ಅಗತ್ಯವಿರುತ್ತದೆ. ಆರೆಂಜ್ ಅಲರ್ಟ್ ಎಂದರೆ ಸಂಭವನೀಯ ಅಪಾಯಕ್ಕೆ ಸಿದ್ಧರಾಗಿರಬೇಕು ಎಂದರ್ಥ. ಯೆಲ್ಲೋ ಅಲರ್ಟ್ ಎಂದರೆ ಎಚ್ಚರದಿಂದಿರಬೇಕು, ಏಕೆಂದರೆ ತೀವ್ರ ಹವಾಮಾನದ ಸಾಧ್ಯತೆ ಇರುತ್ತದೆ. ಗ್ರೀನ್ ಅಲರ್ಟ್ ಯಾವುದೇ ಅಪಾಯವಿಲ್ಲದ ಸ್ಥಿರ ವಾತಾವರಣವನ್ನು ಸೂಚಿಸುತ್ತದೆ. ಈ ಎಚ್ಚರಿಕೆಗಳನ್ನು ನಿರ್ಲಕ್ಷಿಸದೆ, ಸ್ಥಳೀಯ ಆಡಳಿತದ ಸೂಚನೆಗಳನ್ನು ಪಾಲಿಸುವುದು ಪ್ರತಿಯೊಬ್ಬರ ಸುರಕ್ಷತೆಗೆ ಅತಿ ಮುಖ್ಯ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.