ರಾಜ್ಯದ ಸಾರಿಗೆ ಪ್ರಯಾಣಿಕರಿಗೆ ಗುಡ್​ನ್ಯೂಸ್: 4,500 ಹೊಸ ಬಸ್‌ಗಳ ಖರೀದಿಗೆ ಭೈರತಿ ಸುರೇಶ್ ಸೂಚನೆ – Kannada News | Good News for Karnataka Transport Passengers: Byrathi Suresh Approves Purchase of 4,500 New Buses

ಬಿಎಂಟಿಸಿ, ಕೆಎಸ್​ಆರ್​ಟಿಸಿImage Credit source: tv9 kannada

ಬೆಂಗಳೂರು, ಜುಲೈ 26: ಶಕ್ತಿ ಯೋಜನೆ ಆರಂಭವಾದ ಮೇಲೆ ಕೆಎಸ್ಆರ್​​ಟಿಸಿ (KSRTC), ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮದ ಬಸ್​​​ಗಳಲ್ಲಿ ಕಾಲಿಡಲು ಜಾಗವಿಲ್ಲದಷ್ಟು ರಶ್​​ ಆಗುತ್ತಿದೆ. ಇತ್ತ ಈ ವರ್ಷ 6 ಸಾವಿರ ಹಳೆಯ ಬಸ್​​ಗಳು ಗುಜರಿಗೆ ಹೋಗಲಿವೆ ಎನ್ನಲಾಗುತ್ತಿದೆ. ಹಾಗಾಗಿ ಸಾರಿಗೆ ಸಚಿವ ಭೈರತಿ ಸುರೇಶ್ (Byrathi Suresh)​​ 4500 ಹೊಸ ಬಸ್​ಗಳ ಖರೀದಿಗೆ ಸಾರಿಗೆ ಇಲಾಖೆಗೆ ಸೂಚನೆ ನೀಡಿದ್ದಾರೆ.

ನಿತ್ಯ 1.80 ಕೋಟಿಯಷ್ಟು ಪ್ರಯಾಣಿಕರು ಸಂಚಾರ

ಶಕ್ತಿ ಯೋಜನೆ ಆರಂಭವಾದ ಮೇಲೆ ಪ್ರತಿದಿನ ನಾಲ್ಕು ನಿಗಮದ ಬಸ್​​ಗಳಲ್ಲಿ 1.50 ಕೋಟಿಯಿಂದ 1.80ಕೋಟಿಯಷ್ಟು ಪ್ರಯಾಣಿಕರು ಸಂಚಾರ ಮಾಡುತ್ತಿದ್ದಾರೆ. ಇದರಿಂದ ಪ್ರಯಾಣಿಕರಿಗೆ ಸರಿಯಾದ ಸಮಯಕ್ಕೆ ಬಸ್​​ಗಳು ಸಿಗುತ್ತಿಲ್ಲ. ಜೊತೆಗೆ ಪ್ರಯಾಣಿಕರಿಗೆ ಬಸ್​​ಗಳಲ್ಲಿ ಕೂರಲು, ನಿಲ್ಲಲು ಆಗುವುದಿಲ್ಲ. ಏಕೆಂದರೆ ಅಷ್ಟರಮಟ್ಟಿಗೆ ಜನರು ತುಂಬಿರುತ್ತಾರೆ.

ಇದನ್ನೂ ಓದಿ: ನಿಂತಿದ್ದ ಆಟೋಗೆ ಬಿಎಂಟಿಸಿ ಎಲೆಕ್ಟ್ರಿಕ್​​ ಬಸ್​​ ಡಿಕ್ಕಿ: ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಚಾಲಕ

ಇನ್ನು ಈ ವರ್ಷ ನಾಲ್ಕು ಸಾರಿಗೆ ನಿಗಮದಿಂದ ಬರೋಬ್ಬರಿ 6000 ಬಸ್​​ಗಳನ್ನು ಗುಜರಿಗೆ ಹಾಕಬೇಕಿರುವ ಹಿನ್ನೆಲೆ, ಸಾರಿಗೆ ಸಚಿವ ಭೈರತಿ ಸುರೇಶ್ ಕೆಎಸ್ಆರ್​ಟಿಸಿ, ಬಿಎಂಟಿಸಿಯ, NWKRTC, KKRTC ನಿಗಮಕ್ಕೆ 4500 ಬಸ್​​ಗಳ ವ್ಯವಸ್ಥೆ ಮಾಡಲು ಕ್ರಮಕೈಗೊಳ್ಳಿ ಎಂದು ಸಾರಿಗೆ ಇಲಾಖೆಯ ಕಾರ್ಯದರ್ಶಿಗೆ ಪತ್ರದ ಮೂಲಕ ಸೂಚನೆ ನೀಡಿದ್ದಾರೆ. ‘ಹೊಸ ಬಸ್​ಗಳನ್ನು ಖರೀದಿ ಮಾಡುವುದರಿಂದ ಹಳೆಯ ಗುಜರಿ ಬಸ್​​ಗಳಿಗೆ ಮುಕ್ತಿ ಸಿಗಲಿದೆ’ ಎಂದು ಪ್ರಯಾಣಿಕರಾದ ರಾಜು ಅವರ ಮಾತು.

ಒಂದು ಸಾವಿರ ಹೊಸ ಬಸ್​​ ಖರೀದಿಗೆ ಸರ್ಕಾರ ಅನುಮತಿ 

ಫ್ಲೈ ಬಸ್, ಅಂಬಾರಿ, ಐರಾವತ, ಅಂಬಾರಿ ಡ್ರೀಮ್ ಕ್ಲಾಸ್, ಐರಾವತ ಕ್ಲಬ್ ಕ್ಲಾಸ್, ರಾಜಹಂಸ, ಪಲಕ್ಕಿ ಉತ್ಸವ ಸೇರಿದಂತೆ 3500 ಡೀಸೆಲ್ ಬಸ್​​ಗಳು ಮತ್ತು ರಾಜ್ಯದಲ್ಲಿ ಬಸ್ ಸೇವೆ ಇಲ್ಲದ ಊರುಗಳಿಗೆ, ಒಂದು ಸಾವಿರ ಹೊಸ ಬಸ್ ವ್ಯವಸ್ಥೆ ಮಾಡಲು ಸಾರಿಗೆ ಸಚಿವರು ಸೂಚನೆ ನೀಡಿದ್ದಾರೆ. ಈಗಾಗಲೇ ಒಂದು ಸಾವಿರ ಹೊಸ ಬಸ್​​ಗಳನ್ನು ಖರೀದಿಸಲು ಸರ್ಕಾರ ಅನುಮತಿ ನೀಡಲಾಗಿದೆ.

ಸರ್ಕಾರ ಕೂಡಲೇ ಡೀಸೆಲ್​ ಬಸ್ ಖರೀದಿಗೆ ಮುಂದಾಗಬೇಕು: ಸಾರಿಗೆ ನೌಕರರ ಮುಖಂಡ ಜಗದೀಶ್

‘ಕೆಎಸ್ಆರ್​ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮದಲ್ಲಿ ಒಟ್ಟು 23,989 ಸಾವಿರ ಬಸ್​​ಗಳಿವೆ. ಅದರಲ್ಲಿ ಈ ವರ್ಷ 6 ಸಾವಿರ ಬಸ್​​​ಗಳು ಗುಜರಿಗೆ ಹೋದರೆ ಸಾರಿಗೆ ನಿಗಮಗಳಲ್ಲಿ 17,989 ಸಾವಿರ ಬಸ್​ಗಳು ಮಾತ್ರ ಸಂಚಾರ ಮಾಡಿಲಿದ್ದು, ಇದರಿಂದ ಪ್ರಯಾಣಿಕರಿಗೆ ತುಂಬಾ ದೊಡ್ಡ ಮಟ್ಟದಲ್ಲಿ ಸಮಸ್ಯೆ ಆಗಲಿದೆ. ಕೂಡಲೇ ಸರ್ಕಾರ ಡೀಸೆಲ್​ ಬಸ್ ಖರೀದಿಗೆ ಮುಂದಾಗಬೇಕು’ ಎಂದು ಸಾರಿಗೆ ನೌಕರರ ಮುಖಂಡ ಜಗದೀಶ್ ಹೇಳಿದ್ದಾರೆ.

ಇದನ್ನೂ ಓದಿ: ಚಂದಾಪುರದಲ್ಲಿ ಅಗ್ನಿ ದುರಂತ: ಏಕಾಏಕಿ ಹೊತ್ತಿ ಉರಿದ 4 ಖಾಸಗಿ ಬಸ್‌ಗಳು

ಒಟ್ಟಿನಲ್ಲಿ ಬಿಎಂಟಿಸಿ, ಕೆಎಸ್ಆರ್​​ಟಿಸಿ ಸೇರಿದಂತೆ ನಾಲ್ಕು ನಿಗಮಗಳಿಂದ ಈ ವರ್ಷ, ಆರು ಸಾವಿರ ಬಸ್​ಗಳು ಗುಜರಿಗೆ ಹೋಗುತ್ತಿರುವುದರಿಂದ ಹೊಸ ಬಸ್​ಗಳ ಅತ್ಯವಶ್ಯಕವಾಗಿದೆ. ಒಂದು ವೇಳೆ ಸರ್ಕಾರ ಹೊಸ ಬಸ್​​​ಗಳ ಖರೀದಿಗೆ ಮುಂದಾಗಲಿಲ್ಲ ಅಂದರೆ ಪ್ರಯಾಣಿಕರು ಪರದಾಡುವುದಂತು ಸುಳ್ಳಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *