ತಮಿಳು ಚಿತ್ರರಂಗದ ನಟ, ಸಿಎಂ ದಳಪತಿ ವಿಜಯ್ ಅಭಿನಯದ ಕೊನೆಯ ಸಿನಿಮಾ ‘ಜನ ನಾಯಗನ್’ ಈಗ ಒಟಿಟಿ ಪ್ಲಾಟ್ಫಾರ್ಮ್ಗೆ ಬರಲು ಸಂಪೂರ್ಣ ಸಜ್ಜಾಗಿದೆ. ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಂಡ ನಂತರ ಈ ಸಿನಿಮಾ ಡಿಜಿಟಲ್ ವೇದಿಕೆಗೆ ಹೆಜ್ಜೆ ಇಡುತ್ತಿದೆ. ವಿಜಯ್ ಅವರ ರಾಜಕೀಯ ಪ್ರವೇಶದ ಮುನ್ನ ಮೂಡಿಬಂದ ಕೊನೆಯ ಚಿತ್ರ ಇದಾಗಿದೆ. ಈ ಹಿನ್ನೆಲೆಯಲ್ಲಿ ಕೋಟ್ಯಂತರ ಅಭಿಮಾನಿಗಳು ಒಟಿಟಿ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದಾರೆ.
ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ ಹಾಗೂ ರಿಲೀಸ್ ದಿನಾಂಕ
‘ಜನ ನಾಯಗನ್’ ಸಿನಿಮಾ ಬರುವ ಆಗಸ್ಟ್ 21ರಿಂದ ಜೀ5 ಒಟಿಟಿಯಲ್ಲಿ ಪ್ರಸಾರವಾಗಲಿದೆ. ಈ ಬಗ್ಗೆ ಜೀ ತಮಿಳು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಎಐ ಟೀಸರ್ ಹಂಚಿಕೊಂಡು ಈ ವಿಷಯ ತಿಳಿಸಿದೆ. ಹೆಚ್ ವಿನೋದ್ ನಿರ್ದೇಶನದ ಈ ಚಿತ್ರದಲ್ಲಿ ಪೂಜಾ ಹೆಗ್ಡೆ, ಬಾಬಿ ಡಿಯೋಲ್ ಮತ್ತು ಮಮಿತಾ ಬೈಜು ಮುಖ್ಯ ಭೂಮಿಕೆಯಲ್ಲಿದ್ದಾರೆ. ಗೌತಮ್ ವಾಸುದೇವ್ ಮೆನನ್, ಪ್ರಕಾಶ್ ರಾಜ್ ಹಾಗೂ ನರೇನ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
Thangamey! Thalapathy #Jananayagan is all set to meet you all on 21st August only on Zee 5🔥
The Hon’ble Chief Minister @actorvijay @TheKVNofficial @KvnProductions #HVinoth @hegdepooja @anirudhofficial @thedeol @_mamithabaiju @Jagadishbliss @LohithNK01 @RamVJ2412 @TSeries… pic.twitter.com/4mwfq7fDcS
— Zee 5 Tamil (@ZEE5Tamil) August 17, 2026
ಸೆನ್ಸಾರ್ ವಿಳಂಬ ಹಾಗೂ ಥಿಯೇಟರ್ ರಿಲೀಸ್
ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಒಂದು ತಿಂಗಳ ಒಳಗಾಗಿಯೇ ಈ ಸಿನಿಮಾ ಒಟಿಟಿಗೆ ಆಗಮಿಸುತ್ತಿದೆ. ಜನವರಿ 9ಕ್ಕೆ ತೆರೆಗೆ ಬರಬೇಕಿದ್ದ ಈ ಚಿತ್ರ ಸೆನ್ಸಾರ್ ಮಂಡಳಿಯ (CBFC) ಕಾರಣದಿಂದ ತಡವಾಗಿತ್ತು. ಕಾನೂನು ಹೋರಾಟಗಳ ನಂತರ ಚಿತ್ರಕ್ಕೆ ‘ಎ’ ಸರ್ಟಿಫಿಕೇಟ್ ದೊರೆತಿತ್ತು. ಅಂತಿಮವಾಗಿ ಜುಲೈ 23ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಮಿಶ್ರಪ್ರತಿಕ್ರಿಯೆ ಪಡೆದಿತ್ತು. ಅಲ್ಲದೆ, ಸಿನಿಮಾ ಮೊದಲೇ ಲೀಕ್ ಆಗಿದ್ದರಿಂದ ಅಂದುಕೊಂಡಂತೆ ಗಳಿಕೆ ಮಾಡಿಲ್ಲ.
ಇದನ್ನೂ ಓದಿ: ದಳಪತಿ ವಿಜಯ್ ಹಾದಿಯಲ್ಲಿ ಧನುಷ್; ರಾಜಕೀಯ ಪ್ರವೇಶದ ಸುಳಿವು ನೀಡಿದ ನಟ
ಸಿನಿಮಾ ವಿಮರ್ಶೆ ಮತ್ತು ವಿಜಯ್ ವಿದಾಯ
ಈ ಸಿನಿಮಾಗೆ ವಿಮರ್ಶಕರಿಂದ ಸಾಧಾರಣ ವಿಮರ್ಶೆ ದೊರೆತಿದೆ. ಇದು ವಿಜಯ್ ಅವರ ಸುದೀರ್ಘ ಸಿನಿಮಾ ಜೀವನಕ್ಕೆ ವಿದಾಯ ಹೇಳಿದ ಸಿನಿಮಾ. ಪೂರ್ಣಪ್ರಮಾಣದ ರಾಜಕೀಯ ಜೀವನಕ್ಕೆ ಕಾಲಿಟ್ಟ ವಿಜಯ್ ಅವರಿಗೆ ಇದು ಸೂಕ್ತ ಕಟ್-ಆಫ್ ಸಿನಿಮಾ ಆಗಿಲ್ಲ ಎಂಬ ಮಾತು ಕೇಳಿ ಬಂದಿದೆ. ಮನೆಯಲ್ಲಿಯೇ ಕುಳಿತು ಸಿನಿಮಾ ನೋಡಲು ಬಯಸುವ ಅಭಿಮಾನಿಗಳಿಗೆ ಇದು ಅತ್ಯುತ್ತಮ ಅವಕಾಶವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.