ನವದೆಹಲಿ, ಆಗಸ್ಟ್ 07: ಭಾರತವು ತನ್ನ ಅತ್ಯಾಧುನಿಕ ಹಾಗೂ ಪರಮಾಣು ಸಾಮರ್ಥ್ಯ ಹೊಂದಿರುವ ಮಧ್ಯಮ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿ(Missile) ‘ಅಗ್ನಿ-4’ (Agni-4) ಅನ್ನು ಒಡಿಶಾದ ಚಂಡಿಪುರದಲ್ಲಿರುವ ಸಮಗ್ರ ಪರೀಕ್ಷಾ ಶ್ರೇಣಿಯಿಂದ (ITR) ಯಶಸ್ವಿಯಾಗಿ ಪರೀಕ್ಷಾರ್ಥ ಉಡಾವಣೆ ಮಾಡಿದೆ. ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಹಾಗೂ ಕಾರ್ಯತಂತ್ರದ ಪಡೆಗಳ ಕಮಾಂಡ್ (SFC) ಜಂಟಿಯಾಗಿ ಈ ಕಾರ್ಯಾಚರಣೆಯನ್ನು ನಡೆಸಿದ್ದು, ಕ್ಷಿಪಣಿಯ ಎಲ್ಲಾ ತಾಂತ್ರಿಕ ಹಾಗೂ ಕಾರ್ಯಾಚರಣೆಯ ನಿಯತಾಂಕಗಳನ್ನು ಯಶಸ್ವಿಯಾಗಿ ಮೌಲ್ಯೀಕರಿಸಲಾಗಿದೆ.
ಅಗ್ನಿ-4 ಕ್ಷಿಪಣಿಯ ಪ್ರಮುಖ ವೈಶಿಷ್ಟ್ಯಗಳು
ದಾಳಿಯ ವ್ಯಾಪ್ತಿ: ಇದು ಮೇಲ್ಮೈಯಿಂದ ಮೇಲ್ಮೈಗೆ (Surface-to-Surface) ಹಾರುವ ಎರಡು ಹಂತದ ಘನ-ಇಂಧನ ರಾಕೆಟ್ ಮೋಟಾರ್ ಚಾಲಿತ ಕ್ಷಿಪಣಿಯಾಗಿದ್ದು, 4 ಸಾವಿರ ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ಶತ್ರುಗಳ ಗುರಿಗಳನ್ನು ನಿಖರವಾಗಿ ಧ್ವಂಸಗೊಳಿಸುವ ಸಾಮರ್ಥ್ಯ ಹೊಂದಿದೆ. ಅಗ್ನಿ ಸರಣಿಯ ಕ್ಷಿಪಣಿಗಳಲ್ಲಿ ಅತ್ಯಾಧುನಿಕ ಡಿಜಿಟಲ್ ಏವಿಯಾನಿಕ್ಸ್ ಹಾಗೂ ನ್ಯಾವಿಗೇಷನ್ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಕ್ಷಿಪಣಿಯ ನಿಖರತೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ.
ರಕ್ಷಣಾ ಸಚಿವರ ಶ್ಲಾಘನೆ: ಈ ಅದ್ಭುತ ಸಾಧನೆಗಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಡಿಆರ್‌ಡಿಒ ಹಾಗೂ ಎಸ್‌ಎಫ್‌ಸಿ ವಿಜ್ಞಾನಿಗಳು ಮತ್ತು ಯೋಧರನ್ನು ಅಭಿನಂದಿಸಿದ್ದು, ಇದು ಭಾರತದ ರಕ್ಷಣಾ ಸಿದ್ಧತೆ ಮತ್ತು ರಾಷ್ಟ್ರೀಯ ಭದ್ರತೆಗೆ ನೀಡಿದ ಬೃಹತ್ ಕೊಡುಗೆ ಎಂದು ಬಣ್ಣಿಸಿದ್ದಾರೆ.
ಮತ್ತಷ್ಟು ಓದಿ: ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಖೋರ್ರಮ್‌ಶಹರ್-4 ಕ್ಷಿಪಣಿ ಉಡಾಯಿಸಿದ ಇರಾನ್
ಇತ್ತೀಚಿನ ಸರಣಿ ಕ್ಷಿಪಣಿ ಪರೀಕ್ಷೆಗಳು
ಪಿನಾಕಾ ದೀರ್ಘ-ಶ್ರೇಣಿಯ ಮಾರ್ಗದರ್ಶಿ ರಾಕೆಟ್ : ಜುಲೈ 8, 2026 ರಂದು ಡಿಆರ್‌ಡಿಒ ಕನಿಷ್ಠ 60 ಕಿ.ಮೀ ವ್ಯಾಪ್ತಿಯ ಪಿನಾಕಾ ಮಾರ್ಗದರ್ಶಿ ರಾಕೆಟ್ ಅನ್ನು ಯಶಸ್ವಿಯಾಗಿ ಪರೀಕ್ಷಿಸಿತ್ತು.
ಪೋಸ್ಟ್
The Strategic Forces Command and @DRDO_India carried out successful launch of MRBM Agni-4 from Integrated Test Range, Odisha on 6th August 2026.
I congratulate SFC and DRDO for this textbook mission launch which reaffirmed India’s commitment to defend the Nation with state of…
— Rajnath Singh (@rajnathsingh) August 6, 2026
ದೇಶೀಯ ದೀರ್ಘ-ಶ್ರೇಣಿಯ ಭೂ ದಾಳಿ ಕ್ರೂಸ್ ಕ್ಷಿಪಣಿ : ಜೂನ್ 2026 ರಲ್ಲಿ ಒಡಿಶಾ ಕರಾವಳಿಯಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ LRLACM ಕ್ರೂಸ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪ್ರಯೋಗಿಸಲಾಗಿತ್ತು. ಈ ಯೋಜನೆಯನ್ನು ಬೆಂಗಳೂರಿನ ‘ಏರೋನಾಟಿಕಲ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್’ ಸಂಸ್ಥೆ ಮುನ್ನಡೆಸುತ್ತಿರುವುದು ವಿಶೇಷ.
India test-fires nuclear-capable Agni-4 missile!
The test of the Medium Range Ballistic Missile validated all operational and technical parameters.
Agni-4 has a range of 4,000 km and can carry conventional, thermobaric, and strategic nuclear payloads. pic.twitter.com/SxDqWBWL8S
— Sunny Kavalakat🇮🇳 (@SKavalakat) August 6, 2026
ಭಾರತ ಈಗಾಗಲೇ 700 ಕಿ.ಮೀ ನಿಂದ 3,500 ಕಿ.ಮೀ ವ್ಯಾಪ್ತಿಯ ಅಗ್ನಿ-1 ರಿಂದ ಅಗ್ನಿ-3 ಮತ್ತು ಅಗ್ನಿ-5ಕ್ಷಿಪಣಿಗಳನ್ನು ಸೇನೆಗೆ ಸೇರ್ಪಡೆಗೊಳಿಸಿದೆ.ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿರುವ ಡಿಆರ್‌ಡಿಒ ಪ್ರಯೋಗಾಲಯಗಳು ಮತ್ತು ಭಾರತೀಯ ಉದ್ಯಮ ಪಾಲುದಾರರ ಜಂಟಿ ಸಹಯೋಗದೊಂದಿಗೆ ಈ ಉನ್ನತ ತಂತ್ರಜ್ಞಾನದ ಕ್ಷಿಪಣಿಗಳನ್ನು ಭಾರತದಲ್ಲೇ ವಿನ್ಯಾಸಗೊಳಿಸಿ ತಯಾರಿಸಲಾಗುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
