Apply Now: ಕರ್ನಾಟಕ ಅರಣ್ಯ ಇಲಾಖೆಯಲ್ಲಿ 750 ಅರಣ್ಯ ವೀಕ್ಷಕ ಹುದ್ದೆಗಳಿಗೆ ನೇಮಕಾತಿ; 10th ಪಾಸಾಗಿದ್ರೆ ಸಾಕು! – Kannada News | Karnataka Forest Watcher Recruitment 2026: 750 Posts, No Exam, Direct Selection

ಕರ್ನಾಟಕ ಅರಣ್ಯ ಇಲಾಖೆಯಲ್ಲಿ ನೇಮಕಾತಿ

ಕರ್ನಾಟಕ ಅರಣ್ಯ ಇಲಾಖೆಯು 2026ನೇ ಸಾಲಿನ ಅರಣ್ಯ ವೀಕ್ಷಕ (ಫಾರೆಸ್ಟ್ ವಾಚರ್) ಹುದ್ದೆಗಳಿಗೆ ಹೊಸ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಒಟ್ಟು 750 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ರಾಜ್ಯದ ಯುವಕರಿಗೆ ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಳ್ಳಲು ಇದು ಸುವರ್ಣಾವಕಾಶವಾಗಿದೆ. ಈ ನೇಮಕಾತಿಯು ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ, SSLC ಅಂಕಗಳ ಆಧಾರದ ಮೇಲೆ ನೇರ ಆಯ್ಕೆ ಪ್ರಕ್ರಿಯೆಯನ್ನು ಒಳಗೊಂಡಿದೆ.

ವಿದ್ಯಾರ್ಹತೆ:

ಅಭ್ಯರ್ಥಿಗಳು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ SSLC ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ICSE, CBSE, NIOS ವತಿಯಿಂದ ನಡೆಸುವ 10ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಅರ್ಹರಾಗಿರುವುದಿಲ್ಲ.

ಆಯ್ಕೆ ಪ್ರಕ್ರಿಯೆ:

ಆಯ್ಕೆ ಪ್ರಕ್ರಿಯೆಯು ಪ್ರಮುಖವಾಗಿ ಮೂರು ಹಂತಗಳನ್ನು ಒಳಗೊಂಡಿದೆ.

  • SSLC ಮೆರಿಟ್ ಆಧಾರಿತ ಶಾರ್ಟ್‌ಲಿಸ್ಟ್: SSLC ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ 1:20 ಅನುಪಾತದಲ್ಲಿ ಅಭ್ಯರ್ಥಿಗಳನ್ನು ದೈಹಿಕ ಸಾಮರ್ಥ್ಯ ಪರೀಕ್ಷೆಗೆ (ಫಿಸಿಕಲ್ ಸ್ಟ್ಯಾಂಡರ್ಡ್ ಟೆಸ್ಟ್ – PST) ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.
  • ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆಗಳು: ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆ (PST), ದೈಹಿಕ ಸಹಿಷ್ಣುತೆ ಪರೀಕ್ಷೆ (ಫಿಸಿಕಲ್ ಎಂಡ್ಯೂರೆನ್ಸ್ ಟೆಸ್ಟ್ – PET) ಮತ್ತು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ.
  • ಅಂತಿಮ ಆಯ್ಕೆ: ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆಗಳಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳ SSLC ಅಂಕಗಳ ಆಧಾರದ ಮೇಲೆ ಅಂತಿಮ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಿ, ನೇಮಕಾತಿ ಆದೇಶ ನೀಡಲಾಗುತ್ತದೆ. ಮೂಲ ದಾಖಲಾತಿ ಪರಿಶೀಲನೆಯು ಅಂತಿಮ ಹಂತವಾಗಿರುತ್ತದೆ.

ದೈಹಿಕ ಮಾನದಂಡಗಳು:

  • ಪುರುಷ ಅಭ್ಯರ್ಥಿಗಳು: ಕನಿಷ್ಠ ಎತ್ತರ 163 ಸೆಂ.ಮೀ. ಎದೆ ಸುತ್ತಳತೆ 79 ಸೆಂ.ಮೀ. (ಸಾಮಾನ್ಯ ಸ್ಥಿತಿಯಲ್ಲಿ) ಮತ್ತು ಕನಿಷ್ಠ 5 ಸೆಂ.ಮೀ. ಹಿಗ್ಗುವಿಕೆ ಇರಬೇಕು. ಬುಡಕಟ್ಟು ಪುರುಷರಿಗೆ ಕನಿಷ್ಠ ಎತ್ತರ 152 ಸೆಂ.ಮೀ. ಮತ್ತು ಎದೆ ಸುತ್ತಳತೆ 74 ಸೆಂ.ಮೀ. ಹಾಗೂ 5 ಸೆಂ.ಮೀ. ಹಿಗ್ಗುವಿಕೆ ಕಡ್ಡಾಯ.
  • ಮಹಿಳಾ ಅಭ್ಯರ್ಥಿಗಳು: ಕನಿಷ್ಠ ಎತ್ತರ 150 ಸೆಂ.ಮೀ. ಮತ್ತು ಕನಿಷ್ಠ 40 ಕೆ.ಜಿ. ತೂಕ ಇರಬೇಕು. ಬುಡಕಟ್ಟು ಮಹಿಳೆಯರಿಗೆ ಕನಿಷ್ಠ ಎತ್ತರ 145 ಸೆಂ.ಮೀ. ಮತ್ತು ಕನಿಷ್ಠ 38 ಕೆ.ಜಿ. ತೂಕ ಕಡ್ಡಾಯ.

ವೈದ್ಯಕೀಯ ಮಾನದಂಡಗಳು:

ಅಭ್ಯರ್ಥಿಗಳಿಗೆ ದೃಷ್ಟಿ ಸಾಮರ್ಥ್ಯ (6/6 ಅಥವಾ 6/9), ಶ್ರವಣ ಪರೀಕ್ಷೆ, ಹಾಗೂ ತಾಗು ಮಂಡಿ, ಬಾಗಿದ ಕಾಲುಗಳು, ಚಪ್ಪಟೆ ಪಾದ, ನರ ಊತ, ಮಾತನಾಡಲು ಅಥವಾ ಕೇಳಲು ತೊಂದರೆ ಮುಂತಾದ ದೈಹಿಕ ನ್ಯೂನತೆಗಳು ಇರಬಾರದು.

ಹುದ್ದೆಗಳ ವಿವರ (ವೃತ್ತವಾರು):

ಒಟ್ಟು 750 ಹುದ್ದೆಗಳಿದ್ದು, ಅದರಲ್ಲಿ 700 ನಾನ್-ಹೈದರಾಬಾದ್ ಕರ್ನಾಟಕ ಮತ್ತು 50 ಹೈದರಾಬಾದ್ ಕರ್ನಾಟಕ ವೃಂದದ ಹುದ್ದೆಗಳು ಸೇರಿವೆ. ಜಿಲ್ಲಾವಾರು/ವೃತ್ತವಾರು ಹುದ್ದೆಗಳು ಹೀಗಿವೆ: ಬೆಂಗಳೂರು (70 – ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಬನ್ನೇರುಘಟ್ಟ), ಬಳ್ಳಾರಿ (46), ಚಾಮರಾಜನಗರ (169 – ಬಂಡೀಪುರ, ಮಲೆ ಮಹಾದೇಶ್ವರ, BRT ಹುಲಿ ಸಂರಕ್ಷಿತ ಪ್ರದೇಶ), ಚಿಕ್ಕಮಗಳೂರು (56), ಧಾರವಾಡ (12), ಹಾಸನ (30), ಕೆನರಾ (60 – ಕಾರವಾರ, ಹಳಿಯಾಳ, ಯಲ್ಲಾಪುರ, ಶಿರಸಿ, ಹೊನ್ನಾವರ, ದಾಂಡೇಲಿ), ಕೊಡಗು (32), ಕಲಬುರ್ಗಿ (4), ಮಂಗಳೂರು (54), ಮೈಸೂರು (170), ಶಿವಮೊಗ್ಗ (38).

ಅರ್ಜಿ ಸಲ್ಲಿಕೆ ದಿನಾಂಕಗಳು:

ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಆಗಸ್ಟ್ 1 ರಿಂದ ಪ್ರಾರಂಭವಾಗಿ ಆಗಸ್ಟ್ 31 ರಂದು ಕೊನೆಗೊಳ್ಳುತ್ತದೆ. ಆಸಕ್ತರು ಕರ್ನಾಟಕ ಅರಣ್ಯ ಇಲಾಖೆಯ ಅಧಿಕೃತ ವೆಬ್‌ಸೈಟ್ https://aranya.gov.in/ ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಮತ್ತು ಕಾಲಕಾಲಕ್ಕೆ ನೇಮಕಾತಿ ಕುರಿತು ಅಪ್ಡೇಟ್ ಪಡೆಯಬಹುದು.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On – 2:14 pm, Thu, 9 July 26

Source link

Leave a Reply

Your email address will not be published. Required fields are marked *