Headlines

Asian Games 2026: ಏಷ್ಯನ್ ಗೇಮ್ಸ್​ಗೆ 15 ಸದಸ್ಯರ ಯುವ ಅಫ್ಘಾನಿಸ್ತಾನ ತಂಡ ಪ್ರಕಟ – Kannada News | Afghanistan Cricket Squad for 2026 Asian Games Announced: Rasooli to Lead Young Team

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯಲಿರುವ 2026 ರ ಏಷ್ಯನ್ ಕ್ರೀಡಾಕೂಟಕ್ಕೆ (Asian Games 2026) ಅಫ್ಘಾನಿಸ್ತಾನ ತನ್ನ ತಂಡವನ್ನು ಪ್ರಕಟಿಸಿದೆ. 15 ಸದಸ್ಯರ ಈ ಯುವ ತಂಡವನ್ನು ದರ್ವಿಶ್ ರಸೂಲಿ (Darwish Rasooli) ಮುನ್ನಡೆಸಲಿದ್ದಾರೆ. ಹಾಗೆಯೇ ಈ ತಂಡದಲ್ಲಿ ನಜೀಬುಲ್ಲಾ ಜದ್ರಾನ್ ಮತ್ತು ಕರೀಮ್ ಜನತ್ ಅವರಂತಹ ಅನುಭವಿ ಆಟಗಾರರೂ ಇದ್ದಾರೆ. ಅಫ್ಘಾನಿಸ್ತಾನ ತಂಡದಲ್ಲಿರುವ ಹೆಚ್ಚಿನ ಆಟಗಾರರನ್ನು ಇತ್ತೀಚೆಗೆ ಮುಕ್ತಾಯಗೊಂಡ 11ನೇ ಶಪಗೀಜಾ ಕ್ರಿಕೆಟ್ ಲೀಗ್‌ನಿಂದ ಆಯ್ಕೆ ಮಾಡಲಾಗಿದೆ.

ಅನುಭವಿ ಆಟಗಾರರು ಅಲಭ್ಯ

ಆದಾಗ್ಯೂ ನಿಯಮಿತ ನಾಯಕ ರಶೀದ್ ಖಾನ್, ರಹಮಾನುಲ್ಲಾ ಗುರ್ಬಾಜ್ ಮತ್ತು ಅಜ್ಮತುಲ್ಲಾ ಒಮರ್‌ಜೈ ಅವರಂತಹ ಪ್ರಮುಖ ಆಟಗಾರರು ತಂಡದ ಭಾಗವಾಗಿರುವುದಿಲ್ಲ. ಏಷ್ಯನ್ ಕ್ರೀಡಾಕೂಟ ಸೆಪ್ಟೆಂಬರ್ 24 ರಿಂದ ಅಕ್ಟೋಬರ್ 3 ರವರೆಗೆ ನಡೆಯಲಿದೆ. ಅದಕ್ಕೂ ಒಂದು ವಾರದ ಮೊದಲು, ಅಫ್ಘಾನಿಸ್ತಾನ ದೆಹಲಿಯಲ್ಲಿ ಭಾರತದ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಹೀಗಾಗಿ ಪ್ರಮುಖ ಆಟಗಾರರು ಏಷ್ಯನ್ ಗೇಮ್ಸ್ ತಂಡದಲ್ಲಿ ಸ್ಥಾನ ಪಡೆದಿಲ್ಲ.

ಹಾಲಿ ರನ್ನರ್ ಅಪ್ ಅಫ್ಘನ್

ಶ್ಪಗೀಜಾ ಕ್ರಿಕೆಟ್ ಲೀಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಮೊಹಮ್ಮದ್ ಅಕ್ರಮ್​ಗೆ ತಂಡದಲ್ಲಿ ಸ್ಥಾನ ಸಿಕ್ಕಿದೆ. ಈ ಲೀಗ್​ನಲ್ಲಿ ಆಡಿದ ಎಂಟು ಇನ್ನಿಂಗ್ಸ್‌ಗಳಲ್ಲಿ ಅಕ್ರಮ್ ಒಂದು ಶತಕ ಮತ್ತು ಎರಡು ಅರ್ಧಶತಕಗಳು ಸೇರಿದಂತೆ 339 ರನ್ ಕಲೆಹಾಕಿದ್ದರು. ತಂಡದಲ್ಲಿರುವ ಇತರ ಯುವ ಆಟಗಾರರಲ್ಲಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಮೊಹಮ್ಮದ್ ಇಶಾಕ್, ಹಸನ್ ಇಸಾಖಿಲ್, ಖಾಲಿದ್ ತನಿವಾಲ್ ಮತ್ತು ಇಮ್ರಾನ್ ಮಿರ್ ಸೇರಿದ್ದಾರೆ. ಚೀನಾದಲ್ಲಿ ನಡೆದ 2022 ರ ಏಷ್ಯನ್ ಕ್ರೀಡಾಕೂಟದಲ್ಲಿ ಅಫ್ಘಾನಿಸ್ತಾನ ರನ್ನರ್-ಅಪ್ ಆಗಿತ್ತು. ಮಳೆಯಿಂದಾಗಿ ಫೈನಲ್ ಪಂದ್ಯ ರದ್ದಾದ ಕಾರಣ ಶ್ರೇಯಾಂಕದ ಆಧಾರದ ಮೇಲೆ ಭಾರತವನ್ನು ವಿಜೇತವೆಂದು ಘೋಷಿಸಲಾಗಿತ್ತು.

ಏಷ್ಯಾಕಪ್ ಜೊತೆಗೆ ಏಷ್ಯನ್ ಗೇಮ್ಸ್​ನಿಂದಲೂ ಹೊರಬಿದ್ದ ಜೆಮಿಮಾ ರೊಡ್ರಿಗಸ್

ಅಫ್ಘಾನಿಸ್ತಾನ ತಂಡ: ದರ್ವಿಶ್ ರಸೂಲಿ (ನಾಯಕ), ಮೊಹಮ್ಮದ್ ಇಶಾಕ್ (wk), ಮೊಹಮ್ಮದ್ ಅಕ್ರಮ್, ಹಸನ್ ಐಸಾಖಿಲ್, ಖಾಲಿದ್ ತನಿವಾಲ್, ಇಮ್ರಾನ್ ಮಿರ್, ಫೈಸಲ್ ಶಿನೋಜಾದಾ, ನಜಿಬುಲ್ಲಾ ಝದ್ರಾನ್, ಫರ್ಮಾನುಲ್ಲಾ, ಇಸ್ಮತ್ ಆಲಂ, ಕರೀಂ ಜನತ್, ನಂಗ್ಯಾಲ್ ಖರೋಟಿ, ಅರಬ್ ಗುಲ್ ಮೊಮಂಡ್, ಫರಿದೂನ್ ದಾವೂದ್‌ಜಾಯ್, ಅಬ್ದುಲ್ಲಾ ಅಹ್ಮದ್‌ಝೈ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *