ವಿಧಾನಸಭೆ ಚುನಾವಣೆ ಲೈವ್ (ಸಾಂದರ್ಭಿಕ ಚಿತ್ರ)
ಬೆಂಗಳೂರು/ನವದೆಹಲಿ, ಏಪ್ರಿಲ್ 9: ಕರ್ನಾಟಕದ ದಾವಣಗೆರೆ ದಕ್ಷಿಣ, ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ (Karnataka By-Election) ನಡೆಯುತ್ತಿದೆ. ಮತ್ತೊಂದೆಡೆ, ಕೇರಳದ 140 ಕ್ಷೇತ್ರ, ಅಸ್ಸಾಂನ 126 ಕ್ಷೇತ್ರ, ಪುದುಚೇರಿಯ 30 ಕ್ಷೇತ್ರಗಳಿಗೆ (Assembly Elections) ವೋಟಿಂಗ್ ನಡೆಯುತ್ತಿದೆ. ಬಾಗಲಕೋಟೆಯಲ್ಲಿ 322 ಮತಗಟ್ಟೆ ತೆರೆಯಲಾಗಿದ್ದು, ದಾವಣಗೆರೆ ದಕ್ಷಿಣದಲ್ಲಿ 284 ಮತಗಟ್ಟೆಗಳಿವೆ. ಸುಮಾರು ಎರಡೂವರೆ ಸಾವಿರ ಚುನಾವಣಾ ಸಿಬ್ಬಂದಿಯನ್ನ ಬಾಗಲಕೋಟೆಯಲ್ಲಿ ನಿಯೋಜಿಸಲಾಗಿದ್ದು, ದಾವಣಗೆರೆಯಲ್ಲಿ 1ಸಾವಿರದ 489 ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ಬಾಗಲಕೋಟೆ ಕಣದಲ್ಲಿ ಒಟ್ಟು 9 ಅಬ್ಯರ್ಥಿಗಳಿದ್ರೆ, ದಾವಣಗೆರೆ ದಕ್ಷಿಣದಲ್ಲಿ ಬರೋಬ್ಬರಿ 25 ಅಭ್ಯರ್ಥಿಗಳಿದ್ದಾರೆ. ಹಾಗೆಯೇ ಬಾಗಲಕೋಟೆಯಲ್ಲಿ ಒಟ್ಟು 2ಲಕ್ಷದ 59 ಸಾವಿರದ 797 ಮತದಾರರಿದ್ರೆ, ದಾವಣಗೆರೆಯಲ್ಲಿ 2ಲಕ್ಷದ 31 ಸಾವಿರದ 72 ಮತದಾರರಿದ್ದಾರೆ. ಬಾಗಲೋಟೆಯಲ್ಲಿ 1ಲಕ್ಷದ 26ಸಾವಿರದ 999 ಪುರುಷ ಮತದಾರರಿದ್ರೆ, ದಾವಣಗೆರೆಯಲ್ಲಿ 1ಲಕ್ಷದ 13 ಸಾವಿರದ 399 ಮತದಾರರಿದ್ದಾರೆ. ಹಾಗೆಯೇ ಬಾಗಲಕೋಟೆಯಲ್ಲಿ 1ಲಕ್ಷದ 32ಸಾವಿರದ 775 ಮಹಿಳಾ ಮತದಾರರಿದ್ದು, ದಾವಣಗೆರೆಯಲ್ಲಿ 1ಲಕ್ಷದ 17 ಸಾವಿರದ 690 ಮಹಿಳಾ ಮತದಾರರಿದ್ದಾರೆ.
ಇನ್ನು ಕೇರಳ, ಅಸ್ಸಾಂ, ಪುದುಚೇರಿಯಲ್ಲಿ ಇಂದು ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿದೆ. ಕೇರಳದ 140 ವಿಧಾನಸಭಾ ಸ್ಥಾನಗಳು, ಅಸ್ಸಾಂನಲ್ಲಿ 126 ಮತ್ತು ಪುದುಚೇರಿಯ 30 ವಿಧಾನಸಭಾ ಸ್ಥಾನಗಳಿಗೆ ಬೆಳಿಗ್ಗೆ 7 ರಿಂದ ಸಂಜೆ 5 ರವರೆಗೆ ಮತದಾನ ನಡೆಯಲಿದೆ. ಕೇರಳದಲ್ಲಿ, 2.71 ಕೋಟಿ ಮತದಾರರು 883 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಇದರಲ್ಲಿ 1.32 ಕೋಟಿ ಪುರುಷರು, 1.39 ಕೋಟಿ ಮಹಿಳೆಯರು ಮತ್ತು 273 ಟ್ರಾನ್ಸ್ಜೆಂಡರ್ ಮತದಾರರು ಸೇರಿದ್ದಾರೆ. ಅಸ್ಸಾಂನಲ್ಲಿ ಒಟ್ಟು 2.50 ಕೋಟಿ ಮತದಾರರಿದ್ದು, ಅವರು 31,490 ಮತಗಟ್ಟೆಗಳಲ್ಲಿ ತಮ್ಮ ಮತ ಚಲಾಯಿಸಲಿದ್ದಾರೆ. ಮೇ 4 ರಂದು ಮತ ಎಣಿಕೆ ನಡೆಯಲಿದೆ.
ಚುನಾವಣೆ ಸಂಬಂಧಿತ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
