ಆರೋಗ್ಯಕರ ಜೀವನ ನಿಮ್ಮದಾಗಲು ಬೆಳಗಿನ ದಿನಚರಿಯಲ್ಲಿ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ – Kannada News | Follow these habits in your morning routine for a healthy life
ಯಾವುದೇ ರೋಗ ರುಜಿನಗಳಿಲ್ಲದೆ ಆರೋಗ್ಯಕರ ಜೀವನ (healthy life) ನಡೆಸಬೇಕು, ಫಿಟ್ ಆಂಡ್ ಫೈನ್ ಆಗಿರಬೇಕು ಎಂಬ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ. ಆದರೆ ಇಂದಿನ ಬ್ಯುಸಿ ಜೀವನದಲ್ಲಿ ಅನೇಕರಿಗೆ ಇದನ್ನು ಸಾಧಿಸಲು ಸಾಧ್ಯವಾಗುತ್ತಿಲ್ಲ. ಯಾವಾಗಲೂ ಗಡಿಬಿಡಿಯಲ್ಲೇ ಇರುತ್ತಾರೆ. ಇದು ಖಂಡಿತವಾಗಿಯೂ ಒತ್ತಡವನ್ನು ಉಂಟು ಮಾಡುತ್ತದೆ. ಈ ಒತ್ತಡ ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡರ ಮೇಲೂ ಪರಿಣಾಮವನ್ನು ಬೀರುತ್ತದೆ. ಹೀಗಿರುವಾಗ ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡುವ ಮೂಲಕ ಆರೋಗ್ಯಕರ ಜೀವನವನ್ನು ನಡೆಸಬಹುದು. ಮುಖ್ಯವಾಗಿ ಬೆಳಗಿನ ದಿನಚರಿಯಲ್ಲಿ…