All posts by nagaraj11081993

ಗೃಹ ಕಾರ್ಮಿಕರ ಕನಿಷ್ಠ ವೇತನ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್​ ನಕಾರ – Kannada News | Supreme Court Declines PIL for Domestic Workers Minimum Wage: State Action Advised

ನವದೆಹಲಿ, ಜನವರಿ 29: ಗೃಹ ಕಾರ್ಮಿಕ(Domestic Worker) ರಿಗೆ ಸಮಗ್ರ ಕಾನೂನು ಚೌಕಟ್ಟು ಮತ್ತು ಕನಿಷ್ಠ ವೇತನ ಜಾರಿಗೊಳಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಕೇಂದ್ರ ಮತ್ತು ರಾಜ್ಯಗಳು ಅಸ್ತಿತ್ವದಲ್ಲಿರುವ ಕಾನೂನುಗಳನ್ನು ತಿದ್ದುಪಡಿ ಮಾಡುವುದನ್ನು ಪರಿಗಣಿಸುವಂತೆ ಕೇಳುವ ರಿಟ್ ಹೊರಡಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಗೃಹ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ಜಾರಿಗೊಳಿಸುವಂತಹ ವಿಷಯಗಳನ್ನು ಸಂಬಂಧಪಟ್ಟ ರಾಜ್ಯ ಅಧಿಕಾರಿಗಳಿಗೆ ಬಿಡುವುದು ಉತ್ತಮ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರ ಪೀಠವು , ಕಡ್ಡಾಯ ಕನಿಷ್ಠ ವೇತನ ನಿಗದಿಯು ಕೆಲಸ ಕೊಡುವವರನ್ನು ಸಂಕಷ್ಟಕ್ಕೆ ತಳ್ಳಬಹುದು ಎಂದು ಕಳವಳ ವ್ಯಕ್ತಪಡಿಸಿತು. ಏಕೆಂದರೆ ಕಾರ್ಮಿಕ ಸಂಘಗಳು ಪ್ರತಿಯೊಂದು ಮನೆಯನ್ನೂ ಮೊಕದ್ದಮೆಗೆ ಎಳೆಯಬಹುದು ಮತ್ತು ಇದು ಗೃಹ ಕಾರ್ಮಿಕರನ್ನು ನೇಮಿಸಿಕೊಳ್ಳುವಲ್ಲಿ ಹಿಂಜರಿಕೆಗೆ ಕಾರಣವಾಗಬಹುದು.

ಕಾನೂನಿನಲ್ಲಿ ಬದಲಾವಣೆಗಳನ್ನು ಒಳಗೊಂಡಿರುವ ವಿಷಯದಲ್ಲಿ ಮಧ್ಯಪ್ರವೇಶಿಸಲು ನ್ಯಾಯಾಲಯಕ್ಕೆ ಸೀಮಿತ ಅಧಿಕಾರವಿದೆ , ಅರ್ಜಿದಾರರು ಪರಿಹಾರಕ್ಕಾಗಿ ಸಂಬಂಧಪಟ್ಟ ರಾಜ್ಯ ಅಧಿಕಾರಿಗಳನ್ನು ಸಂಪರ್ಕಿಸಲು ಪೀಠವು ಅಂತಿಮವಾಗಿ ಸೂಚಿಸಿತು. ಗೃಹ ಕಾರ್ಮಿಕರು ಸಂವಿಧಾನದ 21 ಮತ್ತು 23 ನೇ ವಿಧಿಗಳಿಂದ ರಕ್ಷಿಸಲ್ಪಟ್ಟ ಮತ್ತು ಖಾತರಿಪಡಿಸಲಾದ ಕನಿಷ್ಠ ವೇತನದ ಮೂಲಭೂತ ಹಕ್ಕನ್ನು ಹೊಂದಿದ್ದಾರೆ ಎಂದು ಘೋಷಿಸುವಂತೆ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಲಾಗಿತ್ತು.

ಮತ್ತಷ್ಟು ಓದಿ: ಬಾಕಿ ಬಿಲ್ ಕ್ಲಿಯರ್ ಮಾಡದಿದ್ದರೆ ರಾಜ್ಯಾದ್ಯಂತ ಕಾಮಗಾರಿ ಸ್ಥಗಿತ: ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿಡಿದೆದ್ದ ಗುತ್ತಿಗೆದಾರರ ಸಂಘ

ಏಷ್ಯಾದಲ್ಲಿ, ಸಿಂಗಾಪುರದಲ್ಲಿ, ರಜೆ ಇತ್ಯಾದಿಗಳನ್ನು ನೀಡದೆ ನೀವು ಮನೆಕೆಲಸಗಾರನನ್ನು ನೇಮಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಉದಾಹರಣೆ ನೀಡಲಾಯಿತು. ಕನಿಷ್ಠ ವೇತನವನ್ನು ಜಾರಿಗೊಳಿಸದ ರಾಜ್ಯಗಳಿಗೆ ನಾವು ನೋಟಿಸ್ ಕೊಡಿ ಎಂದು ಕೇಳುತ್ತಿದ್ದೇವೆ, ಆದರೆ ಕೆಲವು ರಾಜ್ಯಗಳು ಈಗಾಗಲೇ ಅದನ್ನು ಜಾರಿಗೊಳಿಸಿವೆ. ದೇಶೀಯ ಉದ್ಯೋಗದ ಸ್ವರೂಪವು ರಾಜ್ಯದಿಂದ ರಾಜ್ಯಕ್ಕೆ ಬದಲಾಗುವುದಿಲ್ಲ. ರಾಜ್ಯಗಳು ನಿರ್ಧಾರ ತೆಗೆದುಕೊಳ್ಳಬೇಕೆಂದು ಒಕ್ಕೂಟ ಹೇಳುತ್ತದೆ ಎಂದು ಹಿರಿಯ ವಕೀಲ ರಾಮಚಂದ್ರನ್ ವಾದಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಚಾರ್ಮ್ ಕಳೆದುಕೊಳ್ಳುತ್ತಿದೆ ಕಪಿಲ್ ಶೋ; ಸುನೀಲ್ ಗ್ರೋವರ್ ಇಲ್ಲವಾದರೆ ಝೀರೋ? – Kannada News | Kapil Sharma Show Losing Charm: Is Sunil Grover Key to Revival? Netflix Viewership Drops

ಕಪಿಲ್ ಶರ್ಮಾ (Kapil Sharma) ಅವರ ಹಾಸ್ಯದ ಶೋಗಳಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಈ ಮೊದಲು ಸೋನಿ ಟಿವಿಯಲ್ಲಿ ಅವರು ಸಾಕಷ್ಟು ಶೋಗಳನ್ನು ಮಾಡುತ್ತಿದ್ದರು. ಆ ಬಳಿಕ ಅವರು ನೆಟ್​​​ಫ್ಲಿಕ್ಸ್​​ಗೆ ಬಂದರು. ಈ ವೇಳೆ ಸುನೀಲ್ ಗ್ರೋವರ್ ಜೊತೆ ಒಂದಾದರು. ಹಾಳಾಗಿದ್ದ ಗೆಳೆತನ ಸರಿ ಆಯಿತು. ಈಗ ಕಪಿಲ್ ಶರ್ಮಾ ಶೋ ತನ್ನ ಚಾರ್ಮ್ ಕಳೆದುಕೊಳ್ಳುತ್ತಿದೆ. ಸುನೀಲ್ ಗ್ರೋವರ್ ಇಲ್ಲವಾದಲ್ಲಿ ಶೋ ಝೀರೋ ಎಂದು ಅನೇಕರು ಮಾತನಾಡಿಕೊಳ್ಳುತ್ತಿದ್ದಾರೆ.

ಕಪಿಲ್ ಶರ್ಮಾ ಹಾಗೂ ಸುನೀಲ್ ಗ್ರೋವರ್ 2017ರಲ್ಲಿ ಬೇರೆ ಆದರು. ನೆಟ್​​ಫ್ಲಿಕ್ಸ್​​ನಲ್ಲಿ 2024ರಲ್ಲಿ ಬಂದ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ಇವರನ್ನು ಒಂದು ಮಾಡಿತು. ಈಗ ಶೋಗೆ ನಾಲ್ಕನೇ ಸೀಸನ್ ನಡೆಯುತ್ತಿದೆ. ಆದರೆ, ಇದಕ್ಕೆ ವೀಕ್ಷಣೆ ಕಡಿಮೆ ಆಗುತ್ತಲೇ ಇದೆ. ಹೀಗಾಗಿ ಹೊಸತನ ಹುಡುಕುವ ಅನಿವಾರ್ಯತೆ ಇದೆ.

2024ರಲ್ಲಿ ಪ್ರಸಾರ ಕಂಡ ಮೊದಲ ಸೀಸನ್ 2.5 ಮಿಲಿಯನ್ ವೀವ್ಸ್ ಪಡೆದುಕೊಂಡಿತ್ತು. ಈ ವೇಳೆ 24 ಲಕ್ಷ ಗಂಟೆ ವೀಕ್ಷಣೆ ಕಂಡಿತ್ತು. ನೆಟ್​​ಫ್ಲಿಕ್ಸ್​​​ನಲ್ಲಿ ಗ್ಲೋಬಲ್ ರ್ಯಾಂಕಿಂಗ್ ಕೂಡ ಪಡೆದುಕೊಂಡಿತ್ತು. ಆ ಸೀಸನ್​ ಅಲ್ಲಿ ವೀಕ್ಷಣೆಯ ಅವಧಿ ಹೆಚ್ಚುತ್ತಲೇ ಹೋಗಿತ್ತು. ಆ ಸೀಸನ್ ಅಲ್ಲಿ 46 ಲಕ್ಷ ಗಂಟೆ ಶೋ ಕಂಡ ಎಪಿಸೋಡ್ ಇತ್ತು.

ಎರಡು ಹಾಗೂ ಮೂರನೇ ಸೀಸನ್​​ ಅಲ್ಲಿ ವೀಕ್ಷಣೆಯ ಅವಧಿ 40-45 ಲಕ್ಷ ಗಂಟೆಯಲ್ಲೇ ಇತ್ತು. ಆದರೆ, ಈ ಸೀಸನ್ ಕೈ ಕೊಟ್ಟಿದೆ. ಈಗಾಗಲೇ ಈ ಸೀಸನ್ 4 ಎಪಿಸೋಡ್ ಪ್ರಸಾರ ಕಂಡಿದೆ. ಇದು ಗ್ಲೋಬಲ್ ಮಟ್ಟದಲ್ಲಿ ರ್ಯಾಂಕ್ ಆಗುತ್ತಿಲ್ಲ. ವೀಕ್ಷಣಾ ಅವಧಿ 40 ಲಕ್ಷ ದಾಟುತ್ತಿಲ್ಲ. ಇದು ಕಪಿಲ್ ಚಿಂತೆಗೆ ಕಾರಣ ಆಗಿದೆ.

ಇದನ್ನೂ ಓದಿ: ಆ ಒಂದು ಶಬ್ದ ಬಳಕೆ ಮಾಡಿದ್ದಕ್ಕೆ ಭುಗಿಲೆದ್ದ ಆಕ್ರೋಶ; ಕಪಿಲ್ ಶರ್ಮಾ ಶೋ ನಿಲ್ಲಿಸೋ ಎಚ್ಚರಿಕೆ

ಸುನೀಲ್ ಗ್ರೋವರ್ ಅವರು ವಿವಿಧ ಸೆಲೆಬ್ರಿಟಿಗಳ ವೇಷದಲ್ಲಿ ಬರುತ್ತಾರೆ. ಅವರ ಮಿಮಿಕ್ರಿ ಮಾಡುತ್ತಾರೆ. ಇದುವೇ ಶೋನ ಜೀವಾಳ ಎನ್ನಲಾಗುತ್ತಿದೆ. ಉಳಿದಂತೆ ಯಾವುದು ಕೂಡ ಜನರ ಗಮನ ಸೆಳೆಯುತ್ತಿಲ್ಲ. ಕಪಿಲ್ ಶರ್ಮಾ ಹಳೆಯ ಟ್ರೆಂಡ್ ಫಾಲೋ ಮಾಡುತ್ತಿರುವುದೇ ಇದಕ್ಕೆ ಕಾರಣ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ವಿವಾಹೇತರ ಸಂಬಂಧ ಹೊಂದುವ ಕಾರ್ಪೊರೇಟ್ ಉದ್ಯೋಗಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟ ಯುವತಿ – Kannada News | Young woman says corporate employees are more likely to have extramarital affairs

ಇಂದಿನ ಯುವಪೀಳಿಗೆಯೂ ದಾಂಪತ್ಯ ಜೀವನಕ್ಕೆ ನಿಷ್ಠಾವಂತರಾಗಿರುವುದು ತುಂಬಾನೇ ಕಡಿಮೆನೇ. ಕೆಲಸ ಮಾಡುವ ಸ್ಥಳಗಳಲ್ಲಿ ಸಂಬಂಧ ಹೊಂದಿ ಪತಿ ಅಥವಾ ಪತ್ನಿಗೆ ಮೋಸ ಮಾಡುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಈ ಕಾರ್ಪೋರೇಟ್ ಜಗತ್ತಿನಲ್ಲಿ (corporate world) ವಿವಾಹೇತರ ಸಂಬಂಧಗಳು ಕಾಮನ್ ಅಂತೆ. ವಿವಾಹೇತರ ಸಂಬಂಧದ ಬಗ್ಗೆ ಯುವತಿಯೊಬ್ಬಳು (young woman) ಖಾರವಾಗಿ ಮಾತನಾಡಿದ್ದಾಳೆ. ಈ ವೇಳೆ ಆಕೆ ಅಚ್ಚರಿಕಾರಿ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾಳೆ. ಈ ಕುರಿತಾದ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್ ಮಾಡಿ ನಾನಾ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

venom ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋಗೆ ಶೇ. 50 ರಷ್ಟು ಕಾರ್ಪೊರೇಟ್ ಉದ್ಯೋಗಿಗಳು ವಿವಾಹೇತರ ಸಂಬಂಧ ಹೊಂದಿದ್ದಾರೆಂದು ಈ ಯುವತಿ ಹೇಳುತ್ತಿದ್ದಾರೆ. ಹಾಗಾದರೆ ಮದುವೆಯ ಅರ್ಥವೇನು? ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ವೈರಲ್ ಪೋಸ್ಟ್ ಇಲ್ಲಿದೆ

ಈ ವಿಡಿಯೋದಲ್ಲಿ ಯುವತಿಯೂ ಕಾರ್ಪೊರೇಟ್ ಉದ್ಯೋಗದ ಸ್ಥಳಗಳಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ವಿವಾಹೇತರ ಸಂಬಂಧಗಳನ್ನು ಹೊಂದಿದ್ದಾರೆ. ಆದರೂ ಜನರು ಏಕೆ ಮದುವೆಯಾಗುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಮದುವೆಯಾಗುವುದಕ್ಕೆ ಮುಖ್ಯ ಕಾರಣವೇ ಅವರಿಗೆ ತಮ್ಮ ಹೆತ್ತವರನ್ನು ನೋಡಿಕೊಳ್ಳಲು ಹಾಗೂ ಮಕ್ಕಳನ್ನು ಪಡೆಯಲು ಯಾರಾದರೂ ಬೇಕಾಗಿರುವುದು ಎಂದು ನೇರವಾಗಿಯೇ ಹೇಳಿದ್ದಾಳೆ. ನೀವು ಮಕ್ಕಳನ್ನು ದತ್ತು ತೆಗೆದುಕೊಳ್ಳಿ. ನಿಮ್ಮ ಪೋಷಕರನ್ನು ನೋಡಿಕೊಳ್ಳಲು ಕೆಲಸಗಾರರನ್ನು ನೇಮಿಸಿಕೊಳ್ಳಿ, ಬದಲಾಗಿ ಮದುವೆಯಾಗುವುದಲ್ಲ ಎಂದು ವಿವಾಹೇತರ ಸಂಬಂಧ ಹೊಂದುವವರಿಗೆ ಖಡಕ್ ವಾರ್ನಿಂಗ್ ನೀಡಿದ್ದಾಳೆ.

ಇದನ್ನೂ ಓದಿ: 100 ರೂ. ಡಿಸ್ಕೌಂಟ್​​ಗಾಗಿ ಫ್ರೀ ಎಂಟರ್ಟೈನ್ಮೆಂಟ್’: ಛೀ.. ಈ ಯುವತಿಯರು ಮಾಡಿದ ಕೆಲಸ ನೋಡಿ

ಈ ಪೋಸ್ಟ್ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಅಕ್ರಮ ಸಂಬಂಧಗಳಿಂದ ಅದೆಷ್ಟೋ ಸಂಸಾರಗಳು ಹಾಳಾಗುತ್ತಿವೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ವಿವಾಹೇತರ ಸಂಬಂಧಗಳು 90% ಕ್ಕಿಂತ ಹೆಚ್ಚು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಇಂದಿನ ಜನರ ಮನಸ್ಥಿತಿಯನ್ನು ಎತ್ತಿ ತೋರಿಸುತ್ತಿದೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕುಡಿದು ಅಪಘಾತ ಮಾಡಿದ ಮಯೂರ್ ಪಟೇಲ್​ಗೆ ಹೆಚ್ಚಿತು ಸಂಕಷ್ಟ – Kannada News | Mayur Patel In Trouble FIR Lodge Against him After Drink Drive Car crash

ಮಯೂರ್ ಪಟೇಲ್ ಅವರು ಕುಡಿದು ಕಾರು ಅಪಘಾತ ಮಾಡಿಕೊಂಡಿದ್ದಾರೆ. ಬೆಂಗಳೂರಿನ ದೊಮ್ಮಲೂರು ಬಳಿಯ ಸಿಗ್ನಲ್ ಅಲ್ಲಿ ತಮ್ಮ ಫಾರ್ಚೂನರ್ ಕಾರನ್ನು ಯದ್ವಾ ತದ್ವಾ ಓಡಿಸಿ ಡಿಕ್ಕಿ ಹೊಡೆಸಿದ್ದಾರೆ. ಈ ಪ್ರಕರಣದಲ್ಲಿ ಅವರ ವಿರುದ್ಧ ಎಫ್​​ಐಆರ್ ದಾಖಲಾಗಿದೆ. ಬಿಎನ್ ಎಸ್ 281,ಮತ್ತು IMA 185 ಆ್ಯಕ್ಟ್ ಅಡಿಯಲ್ಲಿ ಕೇಸ್ ದಾಖಲು ಮಾಡಿಕೊಳ್ಳಲಾಗಿದೆ. ಇದರಿಂದ ಅವರಿಗೆ ಸಂಕಷ್ಟ ಹೆಚ್ಚಿದೆ. ಇನ್ನು, ಸಂತ್ರಸ್ತ ಕಾರು ಚಾಲಕ ಶ್ರೀನಿವಾಸ್ ಮಾತನಾಡಿದ್ದು, ಘಟನೆ ವಿವರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೈಸೂರು ಪ್ರವಾಸಿಗರಿಗೆ ದುಃಖದ ಸುದ್ದಿ: ಇನ್ಮುಂದೆ ಸಿಗಲ್ಲ ಜಿರಾಫೆ ‘ಯುವರಾಜ’ – Kannada News | Mysore Zoo Mourns Yuvaraja: The Legacy of its Oldest Giraffe

ಮೈಸೂರು, ಜ.29: ಮೈಸೂರು ಮೃಗಾಲಯದ ಅತ್ಯಂತ ಹಿರಿಯ ಮತ್ತು ಜನಪ್ರಿಯ ಜಿರಾಫೆ ‘ಯುವರಾಜ’ ಸಾವನ್ನಪ್ಪಿದೆ. ಇದೀಗ ಈ ವಿಚಾರ ಪಾಣಿ ಪ್ರೇಮಿಗಳಿಗೆ ಹಾಗೂ ಮೈಸೂರು ನಿವಾಸಿಗಳಿಗೆ ತೀವ್ರ ಬೇಸರ ತಂದಿದೆ. 25 ವರ್ಷಗಳ ಕಾಲ ಮೃಗಾಲಯದ ಪ್ರಮುಖ ಆಕರ್ಷಣೆಯಾಗಿದ್ದ ಯುವರಾಜ, ವಯೋಸಹಜ ಕಾಯಿಲೆಗಳಿಂದಾಗಿ ಕೊನೆಯುಸಿರೆಳೆದಿದ್ದಾನೆ. ಡಿಸೆಂಬರ್ 7, 2001 ರಂದು ಮೈಸೂರು ಮೃಗಾಲಯದಲ್ಲೇ ಜನಿಸಿದ ಯುವರಾಜ, 1987 ರಲ್ಲಿ ಜರ್ಮನಿಯ ಮೃಗಾಲಯದಿಂದ ಮೈಸೂರಿಗೆ ಕರೆತರಲಾಗಿದ್ದ ಹೆನ್ರಿ ಮತ್ತು ಹನಿ ಎಂಬ ಜಿರಾಫೆ ದಂಪತಿಗಳ ಮರಿ. ಯುವರಾಜ ಹುಟ್ಟಿದ ನಂತರ ಅವನನ್ನು ಮೃಗಾಲಯದ ಪಾಲಕರು (Zoo keepers) ಅತ್ಯಂತ ಪ್ರೀತಿಯಿಂದ ಪೋಷಿಸಿ ಬೆಳೆಸಿದ್ದಾರೆ. ಮೃಗಾಲಯಕ್ಕೆ ಭೇಟಿ ನೀಡುತ್ತಿದ್ದ ಪ್ರವಾಸಿಗರಿಗೆ ಅದರಲ್ಲೂ ವಿಶೇಷವಾಗಿ ಮಕ್ಕಳಿಗೆ ಯುವರಾಜನ ಎತ್ತರದ ನಿಲುವು ಮತ್ತು ಶಾಂತ ಸ್ವಭಾವ ಬಹಳ ಅಚ್ಚುಮೆಚ್ಚಿನದಾಗಿತ್ತು.

ಜಿರಾಫೆಗಳ ಸರಾಸರಿ ಜೀವಿತಾವಧಿ ಸಾಮಾನ್ಯವಾಗಿ 20 ರಿಂದ 25 ವರ್ಷಗಳು. ಯುವರಾಜ ತನ್ನ ಜೀವಿತಾವಧಿಯ ಗರಿಷ್ಠ ಮಿತಿಯವರೆಗೂ ಬದುಕಿದ್ದನು. ಕಳೆದ ಕೆಲವು ದಿನಗಳಿಂದ ವಯೋಸಹಜ ದೌರ್ಬಲ್ಯದಿಂದ ಬಳಲುತ್ತಿದ್ದ ಅವನಿಗೆ ಮೃಗಾಲಯದ ವೈದ್ಯರು ಸೂಕ್ತ ಚಿಕಿತ್ಸೆ ನೀಡುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಮೈಸೂರು ಮೃಗಾಲಯದ ಇತಿಹಾಸದಲ್ಲಿ ‘ಯುವರಾಜ’ನ ಹೆಸರು ಸದಾ ನೆನಪಿನಲ್ಲಿ ಉಳಿಯುತ್ತದೆ. ಮೃಗಾಲಯದ ಸಿಬ್ಬಂದಿ ಮತ್ತು ಅವನನ್ನು ನೋಡಲು ಬರುತ್ತಿದ್ದ ಲಕ್ಷಾಂತರ ಅಭಿಮಾನಿಗಳು ಅವನನ್ನು ಮಿಸ್ ಮಾಡಿಕೊಳ್ಳಲಿದ್ದಾರೆ.

ಇಲ್ಲಿದೆ ವಿಡಿಯೋ:

ಮೈಸೂರು ಮೃಗಾಲಯವು (ಚಾಮರಾಜೇಂದ್ರ ಮೃಗಾಲಯ) ದೇಶದಲ್ಲೇ ಅತಿ ಹೆಚ್ಚು ಜಿರಾಫೆಗಳನ್ನು ಹೊಂದಿರುವ ಮತ್ತು ಅವುಗಳ ಸಂತಾನೋತ್ಪತ್ತಿಯಲ್ಲಿ ಯಶಸ್ವಿಯಾದ ಮೃಗಾಲಯಗಳಲ್ಲಿ ಒಂದಾಗಿದೆ. ‘ಯುವರಾಜ’ನ ಅಗಲಿಕೆಯ ನಂತರವೂ ಅಲ್ಲಿ ಜಿರಾಫೆಗಳ ದೊಡ್ಡ ಕುಟುಂಬವೇ ಇದೆ. ಕೃಷ್ಣ ಮತ್ತು ಸುಧೀರ್, ಬಬೂಲಿ, ಭರತ್ ಸೇರಿದಂತೆ ಮೈಸೂರು ಮೃಗಾಲಯದಲ್ಲಿ ಸದ್ಯ 7 ರಿಂದ 8 ಜಿರಾಫೆಗಳು ಇವೆ.ಮೈಸೂರು ಮೃಗಾಲಯದ ಜಿರಾಫೆಗಳು ದಕ್ಷಿಣ ಆಫ್ರಿಕಾ ಮತ್ತು ಜರ್ಮನಿಯ ತಳಿಗಳ ವಂಶಸ್ಥವಾಗಿವೆ. ಇಲ್ಲಿ ಜಿರಾಫೆಗಳ ಸಂತಾನೋತ್ಪತ್ತಿ ಚೆನ್ನಾಗಿ ನಡೆಯುವುದರಿಂದ, ಇಲ್ಲಿನ ಜಿರಾಫೆಗಳನ್ನು ಹೈದರಾಬಾದ್, ಅಹಮದಾಬಾದ್ ಮತ್ತು ಚೆನ್ನೈನ ಮೃಗಾಲಯಗಳಿಗೆ ಪ್ರಾಣಿ ವಿನಿಮಯ ಯೋಜನೆಯಡಿ ನೀಡಲಾಗಿದೆ.

ಇದನ್ನೂ ಓದಿ: ವಿವಾಹೇತರ ಸಂಬಂಧ ಹೊಂದುವ ಕಾರ್ಪೊರೇಟ್ ಉದ್ಯೋಗಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟ ಯುವತಿ

ಯುವರಾಜ ಕೇವಲ ಪ್ರವಾಸಿಗರ ಆಕರ್ಷಣೆಯಾಗಿರಲಿಲ್ಲ, ಅವನು ಮೃಗಾಲಯದ ಜಿರಾಫೆ ಕುಟುಂಬದ ಹಿರಿಯ ಸದಸ್ಯನಾಗಿದ್ದನು. ಈಗ ಅವನ ಸ್ಥಾನವನ್ನು ಅವನ ನಂತರದ ಪೀಳಿಗೆಯ ಜಿರಾಫೆಗಳಾದ ಕೃಷ್ಣ ಮತ್ತು ಇತರ ಯುವ ಜಿರಾಫೆಗಳು ತುಂಬಲಿವೆ. ಈ ಜಿರಾಫೆಗಳಿಗೆ ಪ್ರತಿದಿನ ಸುಮಾರು 50-60 ಕೆಜಿ ಹಸಿರು ಮೇವು, ಆಲದ ಮರದ ಎಲೆಗಳು, ಮತ್ತು ವಿಶೇಷ ಪೌಷ್ಟಿಕ ಆಹಾರವನ್ನು ನೀಡಲಾಗುತ್ತದೆ. ಇಲ್ಲಿನ ಜಿರಾಫೆಗಳ ಎತ್ತರಕ್ಕೆ ತಕ್ಕಂತೆ ಆಹಾರದ ತೊಟ್ಟಿಗಳನ್ನು ಎತ್ತರದಲ್ಲಿ ಅಳವಡಿಸಲಾಗಿರುವುದು ಇಲ್ಲಿನ ವಿಶೇಷ. ಮೈಸೂರು ಮೃಗಾಲಯವು ಜಿರಾಫೆಗಳ ಸಂರಕ್ಷಣೆಗಾಗಿ ಪ್ರತ್ಯೇಕವಾದ ದೊಡ್ಡ ಆವರಣವನ್ನು ಹೊಂದಿದೆ. ನೀವು ಮೃಗಾಲಯಕ್ಕೆ ಭೇಟಿ ನೀಡಿದಾಗ ಈ ಜಿರಾಫೆ ಕುಟುಂಬವು ಆನೆಯ ಆವರಣದ ಸಮೀಪದಲ್ಲೇ ನಿಮಗೆ ಕಾಣಸಿಗುತ್ತದೆ.

ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಜನೀಕಾಂತ್ ಮೇಲಿನ ಪ್ರೀತಿಗಾಗಿ ವಿಜಯ್ ಸಿನಿಮಾನಲ್ಲಿ ಸಣ್ಣ ಪಾತ್ರ ಮಾಡಿದ ಸ್ಟಾರ್ ನಿರ್ದೇಶಕ – Kannada News | Why Anurag Kashyap acted in 30 seconds cameo in Thalapathy Vijay’s Leo

ಅನುರಾಗ್ ಕಶ್ಯಪ್ (Anurag Kashyap), ಬಾಲಿವುಡ್​​ನ ಸ್ಟಾರ್ ನಿರ್ದೇಶಕ. ಅವರ ಸಿನಿಮಾಗಳು ಭಾರಿ ಬಜೆಟ್, ದೊಡ್ಡ ಸ್ಟಾರ್ ನಟರನ್ನು ಹೊಂದಿರುವುದಿಲ್ಲವಾದರೂ ತಮ್ಮ ವಿಭಿನ್ನ ಶೈಲಿಯಿಂದಾಗಿ ಪ್ರತ್ಯೇಕ ಅಭಿಮಾನಿ ವರ್ಗವನ್ನೇ ಅನುರಾಗ್ ಕಶ್ಯಪ್ ಸಂಪಾದಿಸಿದ್ದಾರೆ. ‘ಗ್ಯಾಂಗ್ಸ್ ಆಫ್ ವಸೇಪುರ್’, ‘ನೋ ಸ್ಮೋಕಿಂಗ್’, ‘ದೇವ್ ಡಿ’ ಇನ್ನೂ ಹಲವು ಕಲ್ಟ್ ಸಿನಿಮಾಗಳನ್ನು ಅನುರಾಗ್ ಕಶ್ಯಪ್ ನೀಡಿದ್ದು, ನಟನೆಯಲ್ಲೂ ಸಹ ತಮ್ಮನ್ನು ತಾವು ಸಾಬೀತುಪಡಿಸಿಕೊಂಡಿದ್ದಾರೆ. ಬಾಲಿವುಡ್ ಮಾತ್ರವಲ್ಲದೆ ದಕ್ಷಿಣ ಚಿತ್ರರಂಗದೊಂದಿಗೂ ಅವಿನಾಭಾವ ಸಂಬಂಧ ಹೊಂದಿರುವ ಅನುರಾಗ್ ಅವರಿಗೆ ದಕ್ಷಿಣದಲ್ಲೂ ಸಾಕಷ್ಟು ಡಿಮ್ಯಾಂಡ್ ಇದೆ. ಆದರೆ ಅನುರಾಗ್ ಅವರು ದಳಪತಿ ವಿಜಯ್ ಸಿನಿಮಾ ಒಂದರಲ್ಲಿ ಕೇವಲ 30 ಸೆಕೆಂಡ್​​ಗಳ ದೃಶ್ಯವೊಂದರಲ್ಲಿ ನಟಿಸಿದ್ದರು. ಅದೇಕೆ ಎಂಬ ಪ್ರಶ್ನೆಗೆ ಅವರು ನೀಡಿರುವ ಉತ್ತರ ರಜನೀ ಅಭಿಮಾನಿಗಳ ಮನಸ್ಸು ಗೆದ್ದಿದೆ.

ಅನುರಾಗ್ ಕಶ್ಯಪ್ ದೊಡ್ಡ ನಿರ್ದೇಶಕ, ಒಳ್ಳೆಯ ನಟ ಸಹ. ಅವರ ಸ್ಥಾನದಲ್ಲಿರುವವರು ಯಾರೂ 10-20 ಸೆಕೆಂಡುಗಳ ಅತಿಥಿ ಪಾತ್ರಗಳನ್ನೆಲ್ಲ ಒಪ್ಪಿಕೊಳ್ಳುವುದಿಲ್ಲ. ಆದರೆ ಅನುರಾಗ್ ಕಶ್ಯಪ್, ದಳಪತಿ ವಿಜಯ್ ನಟನೆಯ ‘ಲಿಯೋ’ ಸಿನಿಮಾನಲ್ಲಿ ಕೇವಲ 30 ಸೆಕೆಂಡುಗಳ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ಅವರು ಹೀಗೆ ಮಾಡಿದ್ದಕ್ಕೆ ಕಾರಣವೂ ಇದೆ. ಅದುವೇ ರಜನೀಕಾಂತ್.

ಅನುರಾಗ್ ಕಶ್ಯಪ್ ಹೇಳಿಕೊಂಡಿರುವಂತೆ ಅವರು ಬಹಳ ಹಿಂದಿನಿಂದಲೂ ರಜನೀಕಾಂತ್ ಅವರ ಅಭಿಮಾನಿ ಅಂತೆ. ರಜನೀಕಾಂತ್ ಅವರು ಹಿಂದಿಯ ‘ಗಿರಫ್ತಾರ್’ ಹೆಸರಿನ ಸಿನಿಮಾನಲ್ಲಿ ನಟಿಸಿದ್ದರು. ಆ ಸಿನಿಮಾನಲ್ಲಿ ರಜನೀಕಾಂತ್ ಸಾಯುತ್ತಾರೆ ಆದರೆ ಸಾಯುವ ಮೊದಲು ಒಂದು ಸಿಗರೇಟು ಸೇರಿ ಬಳಿಕ ಸಾವನ್ನು ಎದುರುಗೊಳ್ಳುತ್ತಾರೆ. ಅನುರಾಗ್ ಕಶ್ಯಪ್ ಅವರಿಗೆ ಆ ಸೀನ್ ಬಹಳ ಇಷ್ಟವಾಗಿತ್ತಂತೆ. ಹಾಗಾಗಿ ತಾವೂ ಸಹ ಅಂಥಹುದ್ದೇ ಸೀನ್​​ನಲ್ಲಿ ನಟಿಸಬೇಕು ಎಂದು ‘ಲಿಯೋ’ ಸಿನಿಮಾದ ಆ ಸಣ್ಣ ಅತಿಥಿ ಪಾತ್ರದಲ್ಲಿ ನಟಿಸಿದರಂತೆ.

ಇದನ್ನೂ ಓದಿ:ಪೆನ್ನು ಹಿಡಿದ ಸ್ಟೈಲ್ ಕಿಂಗ್ ರಜನೀಕಾಂತ್: ಬರೆಯುತ್ತಿರುವುದು ಯಾವ ಪುಸ್ತಕ?

ಆ ಸೀನ್​​ ಅನ್ನು ರೀಕ್ರಿಯೇಟ್ ಮಾಡುವಂತೆ ‘ಲಿಯೋ’ ನಿರ್ದೇಶಕ ಲೋಕೇಶ್ ಕನಗರಾಜ್ ಅವರ ಬಳಿ ಅನುರಾಗ್ ಕೇಳಿದ್ದರಂತೆ. ಅದರಂತೆ ಅವರೂ ಸಹ ಕೇವಲ ಅನುರಾಗ್ ಅವರಿಗಾಗಿ ಆ ಸಣ್ಣ ಸೀನ್ ಸೃಷ್ಟಿ ಮಾಡಿದ್ದಾರೆ. ‘ಗಿರಫ್ತಾರ್’ ಸಿನಿಮಾನಲ್ಲಿ ರಜನೀಕಾಂತ್ ಆ ಸೀನ್​​ನಲ್ಲಿ ಪೊಲೀಸ್ ಸಮವಸ್ತ್ರ ಧರಿಸಿದ್ದರು, ಅನುರಾಗ್ ಸಹ ‘ಲಿಯೋ’ನಲ್ಲಿ ಅದಕ್ಕೆ ಹೋಲುವ ಬಣ್ಣದ ಶರ್ಟ್ ಧರಿಸಿ, ರಜನೀ ಅವರ ಸ್ಟೈಲ್ ಅನ್ನೇ ‘ಲಿಯೋ’ ಸಿನಿಮಾದ ಸೀನ್​​ನಲ್ಲಿ ಅನುರಾಗ್ ಕಶ್ಯಪ್ ಅನುಕರಣೆ ಮಾಡಿದ್ದಾರೆ.

ಅನುರಾಗ್ ಕಶ್ಯಪ್ ಕೆಲವಾರು ದಕ್ಷಿಣದ ಸಿನಿಮಾಗಳಲ್ಲಿ ನಟಿಸಿದ್ದು, ದಕ್ಷಿಣದಲ್ಲಿ ಈಗಲೂ ಬೇಡಿಕೆ ಇರುವ ನಟ ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಆದ ‘ಮಹಾರಾಜ’ ಸಿನಿಮಾನಲ್ಲಿ ಅನುರಾಗ್ ಕಶ್ಯಪ್ ವಿಲನ್. ಅದಕ್ಕೂ ಮುಂಚೆ ತಮಿಳಿನ ‘ಇಮೈಕ್ಕ ನಾಡಿಗಳ್’, ಇತ್ತೀಚೆಗೆ ಬಂದ ‘ವಿಡುದಲೈ ಪಾರ್ಟ್ 2’ಗಳಲ್ಲಿ ನಟಿಸಿದ್ದಾರೆ. ಇದೀಗ ತಮಿಳಿನ ‘ಒನ್ 2 ಒನ್’ ಹಾಗೂ ತೆಲುಗಿನ ‘ಡಕೈಟ್’ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಸಿನಿಮಾ ಸುದ್ದಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

AI’s Dark Side: ಹುಶಾರ್​…. ಮಕ್ಕಳಿಗೆ ಕಂಡ ಕಂಡ ಹಾಗೆ ಚಾಟ್​ ಜಿಪಿಟಿ ಬಳಸಲು ಬಿಡಬೇಡಿ; ಪ್ರಾಣಕ್ಕೆ ಕುತ್ತು ತರಬಹುದು! – Kannada News | AI’s Dark Side: ChatGPT and Youth Mental Health Risks – A Tragic Warning

ಇದು ಎಐ ಯುಗ. ಇಂದು ಪ್ರತಿಯೊಂದು ಕ್ಷೇತ್ರದಲ್ಲಿಯೂ ಕೃತಕ ಬುದ್ಧಿಮತ್ತೆ (AI) ಬಳಕೆಯಾಗುತ್ತಿದೆ. ಅದರಲ್ಲೂ ಎಐ ಆಧಾರಿತ ಟೂಲ್ ಆಗಿರುವ ಚಾಟ್ ಜಿಪಿಟಿ ಯುವಜನತೆಯನ್ನು ಹೆಚ್ಚಾಗಿ ತನ್ನತ್ತ ಸೆಳೆಯುತ್ತಿದೆ. ಮನುಷ್ಯನ ಭಾವನೆಗಳನ್ನು ಅರ್ಥಮಾಡಿಕೊಳ್ಳುವಂತೆ, ಪ್ರತಿಯೊಂದು ಮಾತಿಗೂ ಪ್ರತಿಕ್ರಿಯೆ ನೀಡುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಒಳ್ಳೆಯದಿರಲಿ ಅಥವಾ ಕೆಟ್ಟದಿರಲಿ, ಚಾಟ್ ಜಿಪಿಟಿಯೊಂದಿಗೆ ಮುಕ್ತವಾಗಿ ಮಾತನಾಡಿ ಅದು ನೀಡುವ ಸಲಹೆಗಳನ್ನು ಅನುಸರಿಸುವವರು ಹೆಚ್ಚಾಗುತ್ತಿದ್ದಾರೆ. ಈ ಪ್ರವೃತ್ತಿ ವಿಶೇಷವಾಗಿ ಯುವ ಪೀಳಿಗೆಯಲ್ಲಿ ಹೆಚ್ಚು ಕಾಣಿಸುತ್ತಿದೆ.

ಇದೇ ಹಿನ್ನೆಲೆಯಲ್ಲಿ, ಅಮೆರಿಕದಲ್ಲಿ ಚಾಟ್ ಜಿಪಿಟಿಯ ಸಲಹೆಗಳನ್ನು ಕೇಳಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಎಲಾನ್ ಮಸ್ಕ್ ಅವರು ತಮ್ಮ ಅಧಿಕೃತ ಟ್ವಿಟರ್ (X) ಖಾತೆ @elonmusk ನಲ್ಲಿ ಒಂದು ಪೋಸ್ಟ್ ಅನ್ನು ರೀಟ್ವೀಟ್ ಮಾಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮೇಲಿನ ವಿಡಿಯೋದಲ್ಲಿ, ತಾಯಿಯೊಬ್ಬರು ತಮ್ಮ ಟೀನೇಜ್ ಮಗನ ಸಾವಿಗೆ ಚಾಟ್ ಜಿಪಿಟಿಯೇ ಕಾರಣ ಎಂದು ಆರೋಪಿಸುತ್ತಾರೆ. ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದ ತನ್ನ ಮಗ, ತನ್ನ ಭಾವನೆಗಳನ್ನು ಚಾಟ್ ಜಿಪಿಟಿಯ ಮುಂದೆ ಹಂಚಿಕೊಂಡಿದ್ದ. ಆದರೆ ಆತನ ನಕಾರಾತ್ಮಕ ಆಲೋಚನೆಗಳನ್ನು ತಡೆಯುವ ಬದಲು, ಚಾಟ್ ಜಿಪಿಟಿ ಅವುಗಳನ್ನು ಪ್ರೋತ್ಸಾಹಿಸಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲದೆ, ಪ್ರಾಣ ತೆಗೆಯುವ ವಿಧಾನಗಳ ಬಗ್ಗೆ ಸಹ ಚಾಟ್ ಜಿಪಿಟಿ ಸಲಹೆ ನೀಡಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಘಟನೆ ಬಳಿಕ, ಮಕ್ಕಳು ಮತ್ತು ಯುವಕರು ಎಐ ಟೂಲ್‌ಗಳನ್ನು ಬಳಸುವ ಬಗ್ಗೆ ಆತಂಕಗಳು ಹೆಚ್ಚಾಗಿವೆ.

ಇದನ್ನೂ ಓದಿ: 100 ರೂ. ಡಿಸ್ಕೌಂಟ್​​ಗಾಗಿ ಫ್ರೀ ಎಂಟರ್ಟೈನ್ಮೆಂಟ್’: ಛೀ.. ಈ ಯುವತಿಯರು ಮಾಡಿದ ಕೆಲಸ ನೋಡಿ

ಮಕ್ಕಳು ಚಾಟ್ ಜಿಪಿಟಿ ಬಳಸುತ್ತಿದ್ದರೆ ಪೋಷಕರು ಎಚ್ಚರ ವಹಿಸುವುದು ಅತ್ಯಗತ್ಯ:

ಚಾಟ್ ಜಿಪಿಟಿಯನ್ನು ಮಕ್ಕಳು ತಮ್ಮ ಅಧ್ಯಯನ, ಭಾಷಾ ಅಭ್ಯಾಸ, ಸಾಮಾನ್ಯ ಜ್ಞಾನ ಹಾಗೂ ಸೃಜನಶೀಲ ಬರವಣಿಗೆ ಮುಂತಾದ ಉತ್ತಮ ಉದ್ದೇಶಗಳಿಗೆ ಬಳಸಬಹುದು. ಆದರೆ ಇದು ಪೋಷಕರ ಮೇಲ್ವಿಚಾರಣೆಯೊಂದಿಗೆ ನಡೆಯಬೇಕು. ಚಿಕ್ಕ ಮಕ್ಕಳನ್ನು ಒಬ್ಬಂಟಿಯಾಗಿ ಬಳಸಲು ಬಿಡದೇ, ಅವರು ಏನು ಕೇಳುತ್ತಿದ್ದಾರೆ, ಯಾವ ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದಾರೆ ಎಂಬುದನ್ನು ಗಮನಿಸುವುದು ಮುಖ್ಯ. ಅತಿಯಾದ ಅವಲಂಬನೆ ತಪ್ಪಿಸಲು ಬಳಕೆಗೆ ಸಮಯ ಮಿತಿಯನ್ನೂ ನಿಗದಿಪಡಿಸಬೇಕು.

ಅತ್ಯಂತ ಮುಖ್ಯವಾಗಿ, ಪೋಷಕರು ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಬೇಕು. ಅವರನ್ನು ಸ್ನೇಹಿತರಂತೆ ನೋಡಿಕೊಂಡು, ಮುಕ್ತವಾಗಿ ಮಾತನಾಡುವ ವಾತಾವರಣವನ್ನು ನಿರ್ಮಿಸಬೇಕು. ಮಕ್ಕಳ ಸಮಸ್ಯೆಗಳನ್ನು ಆಲಿಸುವುದು ಮತ್ತು ಅವರ ಮನಸ್ಸಿನ ಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ಪ್ರತಿಯೊಬ್ಬ ಪೋಷಕರ ಆದ್ಯ ಕರ್ತವ್ಯ ಎಂದು ಮನೋವೈದ್ಯರು ಸಲಹೆ ನೀಡುತ್ತಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Economic Survey 2026: ಆರ್ಥಿಕ ಸಮೀಕ್ಷೆ ವರದಿ ಮಂಡನೆ; ಜಿಡಿಪಿ ಶೇ. 6.8-7.2 ಬೆಳೆಯುವ ನಿರೀಕ್ಷೆ – Kannada News | FM presents economic survey 2026 in Lok Sabha, GDP growth for 27fy predicted to be 6.8 7.2pc

ನವದೆಹಲಿ, ಜನವರಿ 29: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2025-26ರ ವರ್ಷದ ಆರ್ಥಿಕ ಸಮೀಕ್ಷೆಯ ವರದಿಯನ್ನು ಲೋಕಸಭೆಯಲ್ಲಿ ಗುರುವಾರ ಮಂಡಿಸಿದ್ದಾರೆ. ಮುಂದಿನ ಹಣಕಾಸು ವರ್ಷದಲ್ಲಿ (2026-27) ಭಾರತದ ಜಿಡಿಪಿ ಶೇ. 6.8-7.2 ಹೆಚ್ಚಬಹುದು ಎಂದು ಈ ವರದಿಯಲ್ಲಿ ಅಂದಾಜಿಸಲಾಗಿದೆ. ಸ್ಥೂಲ ಆರ್ಥಿಕ ಮೂಲಭೂತ ಅಂಶಗಳು ಪ್ರಬಲವಾಗಿರುವುದು ಹಾಗೂ ಸರ್ಕಾರದ ಸುಧಾರಣಾ ಕ್ರಮಗಳು ದೇಶದ ಆರ್ಥಿಕ ವೇಗಕ್ಕೆ ಪುಷ್ಟಿ ಕೊಡುವುದರಿಂದ ಜಿಡಿಪಿ ಉತ್ತಮ ಬೆಳವಣಿಗೆ ಪಡೆಬಹುದು ಎಂದು ಸಮೀಕ್ಷೆಯಲ್ಲಿ ಅಭಿಪ್ರಾಯಪಡಲಾಗಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕ ಸಮೀಕ್ಷಾ ವರದಿಯನ್ನು ಮಂಡಿಸಿರುವರಾದರೂ, ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತ ನಾಗೇಶ್ವರನ್ ನೇತೃತ್ವದಲ್ಲಿ ಈ ಸಮೀಕ್ಷೆ ವರದಿ ರೂಪಿಸಲಾಗಿದೆ.

ಇದನ್ನೂ ಓದಿ: ಸರ್ಕಾರಕ್ಕೆ ಉದ್ಯೋಗ ಸೃಷ್ಟಿ ಗುರಿ; ಬಜೆಟ್​ನಲ್ಲಿ ಈ ಉದ್ದಿಮೆಗಳಿಗೆ ಸಿಗಲಿದೆ ಪುಷ್ಟಿ

ಏನಿದು ಆರ್ಥಿಕ ಸಮೀಕ್ಷಾ ವರದಿ?

ಬಜೆಟ್​ಗೆ ಮುಂಚೆ ಆರ್ಥಿಕ ಸಮೀಕ್ಷಾ ವರದಿಯನ್ನು ರಚಿಸಿ ಬಿಡುಗಡೆ ಮಾಡಲಾಗುತ್ತದೆ. ಪ್ರಸಕ್ತ ವರ್ಷದಲ್ಲಿ ಆರ್ಥಿಕ ಪರಿಸ್ಥಿತಿ ಮತ್ತು ಬೆಳವಣಿಗೆ ಹೇಗಿತ್ತು, ಮುಂಬರುವ ವರ್ಷದಲ್ಲಿ ಹೇಗಿರಲಿದೆ ಎಂಬುದನ್ನು ಈ ವರದಿಯಲ್ಲಿ ಅವಲೋಕಿಸಲಾಗುತ್ತದೆ. ಹಣಕಾಸು ಸಚಿವಾಲಯದ ಅಡಿಯಲ್ಲಿ ಬರುವ ಆರ್ಥಿಕ ವ್ಯವಹಾರಗಳ ಇಲಾಖೆಯ ಅಧಿಕಾರಿಗಳು ಈ ಸಮೀಕ್ಷೆ ನಡೆಸಿದ್ದಾರೆ.

ಜಿಡಿಪಿ, ಹಣದುಬ್ಬರದ ಟ್ರೆಂಡ್ ಹೇಗಿದೆ, ಹಣಕಾಸು ನೀತಿ ಹೇಗಿದ್ದರೆ ಅನುಕೂಲ, ರಫ್ತು, ಆಮದು, ಫಾರೆಕ್ಸ್ ಇತ್ಯಾದಿ ಬಾಹ್ಯ ಕ್ಷೇತ್ರಗಳು ಹೇಗಿವೆ; ಉದ್ಯೋಗ, ಆರೋಗ್ಯ, ಶಿಕ್ಷಣ ಮತ್ತಿತರ ಸಾಮಾಜಿಕ ಸೂಚಕಗಳು ಹೇಗಿವೆ, ಇವೇ ಮುಂತಾದ ಅಂಶಗಳನ್ನೂ ಆರ್ಥಿಕ ಸಮೀಕ್ಷೆಯಲ್ಲಿ ಅವಲೋಕಿಸಲಾಗುತ್ತದೆ.

ಇದನ್ನೂ ಓದಿ: ಹೊಸ ಟ್ಯಾಕ್ಸ್ ರೆಜಿಮ್​ನಲ್ಲಿ ಇನ್ನಷ್ಟು ಡಿಡಕ್ಷನ್ ಕೊಟ್ಟು, ಹಳೆಯ ಟ್ಯಾಕ್ಸ್ ಸಿಸ್ಟಂ ನಿಲ್ಲಿಸಲಾಗುತ್ತಾ?

ಇವತ್ತು ಮಂಡನೆಯಾಗಿರುವ ಆರ್ಥಿಕ ಸಮೀಕ್ಷೆ ಪ್ರಕಾರ ಪ್ರಸಕ್ತ ವರ್ಷದಲ್ಲಿ (2025-26) ಜಿಡಿಪಿ ಶೇ. 7.4ರಷ್ಟು ಹೆಚ್ಚಬಹುದು ಎನ್ನಲಾಗಿದೆ. ಈ ಹಿಂದಿನ ವರ್ಷದ ಸಮೀಕ್ಷೆಯಲ್ಲಿ ಮಾಡಲಾದ ಅಂದಾಜಿಗಿಂತ ಇದು ಹೆಚ್ಚಿದೆ. ದೇಶದ ಆರ್ಥಿಕ ಬೆಳವಣಿಗೆ ವಿಚಾರದಲ್ಲಿ ಇತರ ಏಜೆನ್ಸಿಗಳ ಅನಿಸಿಕೆಗಿಂತ ಎಕನಾಮಿಕ್ ಸರ್ವೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದೆ.

ಬಜೆಟ್​ಗೆ ಕೆಲ ದಿನಗಳ ಮೊದಲು ಆರ್ಥಿಕ ಸಮೀಕ್ಷಾ ವರದಿಯನ್ನು ಸಂಸತ್​ನಲ್ಲಿ ಪ್ರಸ್ತುತಪಡಿಸಲಾಗುತ್ತದೆ. 2026ರ ಫೆಬ್ರುವರಿ 1ರಂದು ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸುತ್ತಾರೆ. ಬಜೆಟ್ ಅಧಿವೇಶನ ಈಗಾಗಲೇ ನಿನ್ನೆಯೇ ಆರಂಭಗೊಂಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬಾಕಿ ಬಿಲ್ ಕ್ಲಿಯರ್ ಮಾಡದಿದ್ದರೆ ರಾಜ್ಯಾದ್ಯಂತ ಕಾಮಗಾರಿ ಸ್ಥಗಿತ: ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿಡಿದೆದ್ದ ಗುತ್ತಿಗೆದಾರರ ಸಂಘ – Kannada News | Karnataka Contractors’ Association Warns Congress Government: Statewide Work Stoppage from March 5 Over Rs 37370 Crore Dues

ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್. ಮಂಜುನಾಥ್Image Credit source: tv9

ಬೆಂಗಳೂರು, ಜನವರಿ 29: ರಾಜ್ಯ ಸರ್ಕಾರವು ಗುತ್ತಿಗೆದಾರರಿಗೆ ಪಾವತಿಸಬೇಕಿರುವ ಸಾವಿರಾರು ಕೋಟಿ ರೂಪಾಯಿಗಳ ಬಾಕಿ ಬಿಲ್ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ, ರಾಜ್ಯ ಗುತ್ತಿಗೆದಾರರ ಸಂಘವು (Karnataka Contractors’ Association) ಸರ್ಕಾರದ ವಿರುದ್ಧ ನೇರ ಸಮರ ಸಾರಿದೆ. ‘ಮಾರ್ಚ್ 5 ರೊಳಗೆ ಬಾಕಿ ಹಣ ಬಿಡುಗಡೆ ಮಾಡದಿದ್ದರೆ ಅಥವಾ ಮುಖ್ಯಮಂತ್ರಿಯವರು ಸಭೆ ಕರೆದು ಚರ್ಚಿಸದಿದ್ದರೆ ರಾಜ್ಯಾದ್ಯಂತ ಎಲ್ಲಾ ಇಲಾಖೆಗಳ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗುವುದು’ ಎಂದು ಸಂಘದ ಅಧ್ಯಕ್ಷ ಆರ್. ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್. ಮಂಜುನಾಥ್, ಬಾಕಿ ಉಳಿದಿರುವ 37,370 ಕೋಟಿ ರೂ.ಗಳ ವಿವರ ಬಿಡುಗಡೆ ಮಾಡಿದರು. ಅವರು ಹೇಳಿದ ಪ್ರಕಾರ ಇಲಾಖಾವಾರು ಬಾಕಿ ವಿವರ ಹೀಗಿದೆ;

ಇಲಾಖೆಯ ಹೆಸರು – ಬಾಕಿ ಮೊತ್ತ (ಕೋಟಿ ರೂ.ಗಳಲ್ಲಿ)

  • ಲೋಕೋಪಯೋಗಿ ಇಲಾಖೆ (PWD) – 13,000
  • ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (RDPR) – 3,800
  • ಸಣ್ಣ ನೀರಾವರಿ ಇಲಾಖೆ – 3,000
  • ನಗರಾಭಿವೃದ್ದಿ ಇಲಾಖೆ – 2,000
  • ವಸತಿ ಮತ್ತು ವಕ್ಫ್ ಇಲಾಖೆ – 2,600
  • ಕಾರ್ಮಿಕ ಇಲಾಖೆ – 2,000
  • ಗಣಿ ಮತ್ತು ಭೂವಿಜ್ಞಾನ (GBA) – 2,600
  • ಒಟ್ಟು – 37,370

ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ ಆರ್. ಮಂಜುನಾಥ್, ಈ ಸರ್ಕಾರದಲ್ಲಿ ಹಣ ಬಿಡುಗಡೆ ವಿಚಾರದಲ್ಲಿ ಭ್ರಷ್ಟಾಚಾರ ಮತ್ತು ಪರ್ಸಂಟೇಜ್ ಪ್ರಮಾಣ ಹೆಚ್ಚಾಗಿದೆ ಎಂದು ಪರೋಪಕ್ಷವಾಗಿ ಉಲ್ಲೇಖಿಸಿದರು. ಈ ಹಿಂದೆ ಕೆಂಪಣ್ಣ ಅವರು 40% ಆರೋಪ ಮಾಡಿದ್ದರು. ಈಗ ನಿಮ್ಮ ಸಹಕಾರ ಇದ್ದರೆ ದಯಮಾಡಿ ಅದನ್ನ ಕಡಿಮೆ ಮಾಡಿಸಿ ಎಂದು ಮಂಜುನಾಥ್ ಆಗ್ರಹಿಸಿದರು.

10 ಮಹಾನಗರ ಪಾಲಿಕೆಗಳಲ್ಲಿ ಮತ್ತು ಕಾರ್ಮಿಕ ಇಲಾಖೆಯಲ್ಲಿ ಸ್ಥಳೀಯ ಗುತ್ತಿಗೆದಾರರಿಗೆ ಅನ್ಯಾಯವಾಗುವಂತೆ ಪ್ಯಾಕೇಜ್ ಟೆಂಡರ್ ಮಾಡಲಾಗುತ್ತಿದೆ. ಆರ್‌ಟಿ ನಗರ ಮತ್ತು ರಾಜಾಜಿನಗರದ ಖಾಸಗಿ ಕಚೇರಿಗಳಲ್ಲಿ ಕುಳಿತು ಟೆಂಡರ್ ಹಂಚಿಕೆ ಮಾಡಲಾಗುತ್ತಿದೆ ಎಂದು ಅವರು ದೂರಿದ್ದಾರೆ.

ನಾವು ಹಣ ಕೇಳಲು ಹೋದರೆ, ‘ಬರೀ ದುಡ್ಡು ಕೇಳ್ತೀರಾ’ ಎಂದು ಅಧಿಕಾರಿಗಳು ಹೀಯಾಳಿಸುತ್ತಾರೆ. ಚಿಕ್ಕಬಳ್ಳಾಪುರದಲ್ಲಿ ಗುತ್ತಿಗೆದಾರ ಮುನೇಗೌಡ ಆತ್ಮಹತ್ಯೆಗೆ ಯತ್ನಿಸಿರುವುದು ನಮ್ಮ ಪರಿಸ್ಥಿತಿಗೆ ಹಿಡಿದ ಕನ್ನಡಿ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

‘ಸತೀಶ್ ಜಾರಕಿಹೊಳಿ, ಡಿಕೆಶಿ ಸ್ಪಂದಿಸಿದರೂ ಹಣಕಾಸು ಇಲಾಖೆಯಿಂದಿಲ್ಲ ಸಹಕಾರ’

ಸಚಿವ ಸತೀಶ್ ಜಾರಕಿಹೊಳಿ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರು ನಮ್ಮ ಸಮಸ್ಯೆಗಳಿಗೆ ಒಂದಿಷ್ಟು ಸ್ಪಂದಿಸುತ್ತಿದ್ದರೂ, ಅಂತಿಮವಾಗಿ ಹಣಕಾಸು ಇಲಾಖೆಯತ್ತ ಕೈ ತೋರಿಸಲಾಗುತ್ತಿದೆ. ಹೀಗಾಗಿ, ಗುತ್ತಿಗೆದಾರರ ಸಂಘವು ಕೆಲವು ನಿರ್ಧಾರಗಳನ್ನು ಕೈಗೊಂಡಿದೆ ಎಂದು ಅವರು ತಿಳಿಸಿದ್ದಾರೆ.

ಗುತ್ತಿಗೆದಾರರ ಸಂಘದ ನಿರ್ಣಯಗಳೇನು?

ಮಾರ್ಚ್ 5 ರ ಗಡುವು ನೀಡಲಾಗಿದ್ದು, ಅಷ್ಟರೊಳಗೆ ಸರ್ಕಾರ ಸ್ಪಂದಿಸದಿದ್ದರೆ ರಾಜ್ಯದ ಎಲ್ಲಾ ಸರ್ಕಾರಿ ಕಾಮಗಾರಿಗಳು ಬಂದ್ ಆಗಲಿವೆ. ಕಾಂಗ್ರೆಸ್ ಹೈಕಮಾಂಡ್ ನಾಯಕ ರಾಹುಲ್ ಗಾಂಧಿ ಅವರ ಗಮನಕ್ಕೆ ಈ ಸಮಸ್ಯೆಯನ್ನು ತರಲು ಸಂಘ ನಿರ್ಧರಿಸಿದೆ.
ಒಂದೇ ಬಾರಿ ಹಣ ನೀಡಲು ಸಾಧ್ಯವಾಗದಿದ್ದರೆ ಕನಿಷ್ಠ ಹಂತ ಹಂತವಾಗಿಯಾದರೂ ಬಿಲ್ ಕ್ಲಿಯರ್ ಮಾಡಿ ಎಂದು ಸಂಘ ಮನವಿ ಮಾಡಿದೆ.

ಇದನ್ನೂ ಓದಿ: ಗುತ್ತಿಗೆದಾರರಿಗೆ ಯಾಕೆ ಬಿಲ್ ಬಿಡುಗಡೆಯಾಗುತ್ತಿಲ್ಲ? ಕಾರಣ ಕೊಟ್ಟ ಹಣಕಾಸು ಇಲಾಖೆ ಕಾರ್ಯದರ್ಶಿ

ಕಳೆದ ಎರಡೂವರೆ ವರ್ಷಗಳಿಂದ ನಾವು ನರಕಯಾತನೆ ಅನುಭವಿಸುತ್ತಿದ್ದೇವೆ. ನಮ್ಮನ್ನು ಕೆಣಕಲು ಹೋಗಬೇಡಿ ಎಂದು ಮುಖ್ಯಮಂತ್ರಿಗಳಲ್ಲಿ ವಿನಂತಿಸುತ್ತೇವೆ ಎಂದು ಮಂಜುನಾಥ್ ಹೇಳಿದ್ದಾರೆ.

ವರದಿ: ಲಕ್ಷ್ಮೀ ನರಸಿಂಹ, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಕೊಲಂಬಿಯಾದಲ್ಲಿ ವಿಮಾನ ಪತನ, ಸಂಸದ ಸೇರಿ 15 ಮಂದಿ ಸಾವು – Kannada News | Fatal Air Crash in Colombia Claims 15 Lives, Including Lawmaker

ಕೊಲಂಬಿಯಾ, ಜನವರಿ 29: ಕೊಲಂಬಿಯಾದಲ್ಲಿ ಭೀಕರ ವಿಮಾನ ಅಪಘಾತ ಸಂಭವಿಸಿದೆ. ಈಶಾನ್ಯ ಕೊಲಂಬಿಯಾದ ನಾರ್ಟೆ ಡಿ ಸ್ಯಾಂಟ್ಯಾಂಡರ್ ಪ್ರಾಂತ್ಯದ ಗ್ರಾಮೀಣ ಪ್ರದೇಶದಲ್ಲಿ ಬುಧವಾರ ಸಣ್ಣ ವಿಮಾನ ಅಪಘಾತಕ್ಕೀಡಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾಂಗ್ರೆಸ್ ಸದಸ್ಯ ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ 15 ಜನರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ವಿಮಾನವನ್ನು ನಿರ್ವಹಿಸಿದ ಸರ್ಕಾರಿ ವಿಮಾನಯಾನ ಸಂಸ್ಥೆ ಸಟೇನಾ. ಬೆಳಗ್ಗೆ 11.42 ಕ್ಕೆ ಕುಕುಟಾ ವಿಮಾನ ನಿಲ್ದಾಣದಿಂದ ಪರ್ವತಗಳಿಂದ ಆವೃತವಾದ ಓಕಾನಾ ನಗರಕ್ಕೆ ಹೊರಟಿತು.

ಹಾರಾಟವು ಸಾಮಾನ್ಯವಾಗಿ ಸುಮಾರು 40 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಸಣ್ಣ ವಿಮಾನವು ಇಬ್ಬರು ಸಿಬ್ಬಂದಿ ಮತ್ತು 13 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ, ಅವರಲ್ಲಿ ಕ್ಯಾಟಟಂಬೊದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸದಸ್ಯ 36 ವರ್ಷದ ಡಯೋಜೆನೆಸ್ ಕ್ವಿಂಟೆರೊ ಸೇರಿದ್ದಾರೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link