All posts by nagaraj11081993

ಇರಾನ್​ನಿಂದ ಶಾಂತಿ ಪ್ರಸ್ತಾವನೆ: ಹಾರ್ಮುಜ್ ಜಲಸಂಧಿ ತೆರೆಯಲು ಒಪ್ಪಂದ, ಅಮೆರಿಕದ ಅಂಗಳದಲ್ಲಿ ಈಗ ಚೆಂಡು – Kannada News | Iran’s Peace Proposal to US: Reopening Hormuz Strait for Global Oil Stability

ಟೆಹ್ರಾನ್, ಏಪ್ರಿಲ್ 27: ಜಾಗತಿಕ ಇಂಧನ ಪೂರೈಕೆಯ ಜೀವನಾಡಿಯಾಗಿರುವ ‘ಹಾರ್ಮುಜ್ ಜಲಸಂಧಿ’ಯನ್ನು ಪುನಃ ತೆರೆಯುವ ಮೂಲಕ ಸಮರಕ್ಕೆ ಪೂರ್ಣವಿರಾಮ ಹಾಕಲು ಇರಾನ್(Iran) ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಈ ಸಂಬಂಧ ಅಮೆರಿಕಕ್ಕೆ ಹೊಸ ಪ್ರಸ್ತಾವನೆಯನ್ನು ಕಳುಹಿಸಲಾಗಿದ್ದು, ಯುದ್ಧದ ಕಾರ್ಮೋಡಗಳ ನಡುವೆ ಶಾಂತಿಯ ಕಿರಣ ಮೂಡಿದೆ.

ಇರಾನ್‌ನ ಈ ಪ್ರಸ್ತಾವನೆಯ ಅತ್ಯಂತ ಪ್ರಮುಖ ಅಂಶವೆಂದರೆ ಹಾರ್ಮುಜ್ ಜಲಸಂಧಿಯ ಮೇಲಿನ ದಿಗ್ಬಂಧನವನ್ನು ತೆಗೆದುಹಾಕುವುದು. ವಿಶ್ವದ ತೈಲ ಪೂರೈಕೆಯ ಬಹುಪಾಲು ಈ ಮಾರ್ಗದ ಮೂಲಕವೇ ನಡೆಯುವುದರಿಂದ, ಇರಾನ್‌ನ ಈ ನಿರ್ಧಾರವು ಜಾಗತಿಕ ತೈಲ ಬೆಲೆ ಇಳಿಕೆಗೆ ಮತ್ತು ಆರ್ಥಿಕ ಸ್ಥಿರತೆಗೆ ದೊಡ್ಡ ಮಟ್ಟದಲ್ಲಿ ಸಹಕಾರಿಯಾಗಲಿದೆ. ಪರಮಾಣು ಮಾತುಕತೆಗಳಿಗಿಂತ ಮೊದಲು ವ್ಯಾಪಾರ ಮಾರ್ಗವನ್ನು ಸುಗಮಗೊಳಿಸಲು ಇರಾನ್ ಬಯಸಿದೆ.

ಕೇವಲ ರಸ್ತೆಯನ್ನು ತೆರೆಯುವುದಷ್ಟೇ ಅಲ್ಲದೆ, ಅಮೆರಿಕ ಮತ್ತು ಇರಾನ್ ನಡುವಿನ ಸುದೀರ್ಘ ಸಂಘರ್ಷಕ್ಕೆ ಶಾಶ್ವತ ಅಂತ್ಯ ಹಾಡುವ ಅಥವಾ ದೀರ್ಘಾವಧಿಯ ಕದನ ವಿರಾಮವನ್ನು ಘೋಷಿಸುವ ಪ್ರಸ್ತಾವನೆಯನ್ನೂ ಇರಾನ್ ಮುಂದಿಟ್ಟಿದೆ. ದಿಗ್ಬಂಧನ ತೆರವುಗೊಂಡ ನಂತರವೇ ಪರಮಾಣು ಮಾತುಕತೆಗಳನ್ನು ಆರಂಭಿಸೋಣ ಎಂಬುದು ಇರಾನ್‌ನ ನಿಲುವಾಗಿದೆ.

ಮತ್ತಷ್ಟು ಓದಿ: ಅಮೆರಿಕ-ಇರಾನ್ ನಡುವೆ ಶಾಂತಿ ಮಾತುಕತೆಯ ಪಾಕ್ ಪ್ರಯತ್ನ ವಿಫಲ; ಯುಎಸ್​ ನಿಯೋಗದ ಭೇಟಿಗೆ ಒಪ್ಪದ ಟೆಹ್ರಾನ್

ಈ ಯೋಜನೆಯನ್ನು ಯಶಸ್ವಿಗೊಳಿಸಲು ಇರಾನ್ ಈಗಾಗಲೇ ಈಜಿಪ್ಟ್, ಟರ್ಕಿ ಮತ್ತು ಕತಾರ್ ಸೇರಿದಂತೆ ಪ್ರಮುಖ ರಾಷ್ಟ್ರಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಅವರು ಈ ಕುರಿತು ಮಧ್ಯವರ್ತಿಗಳಿಗೆ ಮಾಹಿತಿ ನೀಡಿದ್ದಾರೆ. ಇರಾನ್‌ನ ಒಳಗೂ ಕೆಲವು ಭಿನ್ನಾಭಿಪ್ರಾಯಗಳಿದ್ದರೂ, ಶಾಂತಿಯುತ ಪರಿಹಾರಕ್ಕಾಗಿ ಪ್ರಯತ್ನಗಳು ತೀವ್ರಗೊಂಡಿವೆ.

ಇರಾನ್‌ನ ಈ ಪ್ರಸ್ತಾವನೆಯು ಈಗಾಗಲೇ ಶ್ವೇತಭವನವನ್ನು ತಲುಪಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಉನ್ನತ ಮಟ್ಟದ ಭದ್ರತಾ ತಂಡದೊಂದಿಗೆ ಈ ಕುರಿತು ಚರ್ಚೆ ನಡೆಸಲಿದ್ದಾರೆ. ಇರಾನ್‌ನ ಮೇಲೆ ಕಠಿಣ ನಿಲುವು ಹೊಂದಿದ್ದರೂ, ಟ್ರಂಪ್ ಅವರು ಮಾತುಕತೆಯ ಬಾಗಿಲನ್ನು ಮುಕ್ತವಾಗಿಟ್ಟಿರುವುದು ಒಪ್ಪಂದದ ಭರವಸೆಯನ್ನು ಹೆಚ್ಚಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಸಿಟಿವಿ ವೈರ್ ಕಟ್ ಮಾಡಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ಅಚ್ಚರಿಯ ಕಾರಣ ಬಹಿರಂಗ – Kannada News | Chinnaswamy Stadium CCTV Breach Twist: Disgruntled Staff Cut Cables Over Unpaid Salaries; Two Arrested

ಸಾಂದರ್ಭಿಕ ಚಿತ್ರ (ಎಐ)Image Credit source: Google Gemini

ಬೆಂಗಳೂರು, ಏಪ್ರಿಲ್ 27: ಆರ್​ಸಿಬಿ (RCB) ಹಾಗೂ ಗುಜರಾತ್ ಟೈಟನ್ಸ್ (RCB vs GT) ನಡುವಿನ ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) 240ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳ ಕೇಬಲ್ ಕಟ್ ಆಗಿರುವುದು ಪೊಲೀಸರಲ್ಲಿ ದೊಡ್ಡ ಆತಂಕ ಮೂಡಿಸಿತ್ತು. ಇದು ಯಾವುದೋ ವಿಧ್ವಂಸಕ ಕೃತ್ಯವಿರಬಹುದು ಎಂಬ ಅನುಮಾನದಲ್ಲಿ ತನಿಖೆ ಕೈಗೊಂಡಿದ್ದ ಕಬ್ಬನ್ ಪಾರ್ಕ್ ಪೊಲೀಸರಿಗೆ ಈಗ ತೀರಾ ವೈಯಕ್ತಿಕ ಮತ್ತು ವಿಚಿತ್ರ ಕಾರಣವೊಂದು ತಿಳಿದುಬಂದಿದೆ.

ಸಂಬಳಕ್ಕಾಗಿ ಸಿಸಿಟಿವಿ ಕಟ್!

ಕ್ರೀಡಾಂಗಣದ ಭದ್ರತೆಗಾಗಿ ಅಳವಡಿಸಲಾಗಿದ್ದ ಸಿಸಿಟಿವಿ ನಿರ್ವಹಣೆಯ ಹೊಣೆಯನ್ನು ‘IVS ಡಿಜಿಟಲ್ ಸೊಲ್ಯೂಷನ್’ ಎಂಬ ಕಂಪನಿಗೆ ಸಬ್ ಕಾಂಟ್ರ್ಯಾಕ್ಟ್ ನೀಡಲಾಗಿತ್ತು. ಈ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಹಾಗೂ ಅಬ್ದುಲ್ ಕಲಾಂ ಎಂಬುವವರು ಈ ಕೃತ್ಯ ಎಸಗಿದ್ದಾರೆ ಎಂಬುದು ಪೊಲೀಸರ ವಿಚಾರಣೆಯಿಂದ ದೃಢಪಟ್ಟಿದೆ. ಆರೋಪಿಗಳಿಬ್ಬರಿಗೂ ಕಂಪನಿಯಿಂದ ಬರಬೇಕಿದ್ದ ಸಂಬಳ ಬಾಕಿ ಇತ್ತು. ಎಷ್ಟು ಕೇಳಿದರೂ ಕಂಪನಿ ಸಂಬಳ ನೀಡದಿದ್ದಕ್ಕೆ ಕೋಪಗೊಂಡಿದ್ದ ಈ ಸಿಬ್ಬಂದಿಗಳು, ಸಂಸ್ಥೆಗೆ ಮತ್ತು ಪೊಲೀಸರಿಗೆ ಪಾಠ ಕಲಿಸಲು ನಿರ್ಧರಿಸಿ ಸಿಸಿಟಿವಿ ಕೇಬಲ್‌ಗಳನ್ನು ಕತ್ತರಿಸಿದ್ದರು!

ಯಾರಿಗೂ ತಿಳಿಯದಂತೆ ಕೃತ್ಯ

ಪಂದ್ಯದ ವೇಳೆ ಭದ್ರತೆ ಎಷ್ಟು ಮುಖ್ಯವೋ ಈ ಆರೋಪಿಗಳಿಗೆ ಚೆನ್ನಾಗಿ ತಿಳಿದಿತ್ತು. ಹಾಗಾಗಿ, ಯಾರಿಗೂ ಅನುಮಾನ ಬಾರದಂತೆ ಹೋಗಿ ಪ್ರಮುಖ ಕೇಬಲ್‌ಗಳನ್ನೇ ಕಟ್ ಮಾಡಿದ್ದರು. ಪಂದ್ಯದ ಸಂಜೆಯ ಹೊತ್ತಿಗೆ ಸಿಸಿಟಿವಿ ಫೀಡ್ ಸ್ಥಗಿತಗೊಂಡಾಗ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಕಂಗಾಲಾಗಿದ್ದರು. ಸಿಸಿಟಿವಿ ನಿಯಂತ್ರಣ ಕೊಠಡಿಯಲ್ಲಿದ್ದ ಪೊಲೀಸರು ತಪಾಸಣೆ ನಡೆಸಿದಾಗ ಕೇಬಲ್ ಕಟ್ ಆಗಿರುವುದು ಪತ್ತೆಯಾಗಿತ್ತು. ನಂತರ ಕಾರ್ಯಾಚರಣೆ ನಡೆಸಿದ ಪೊಲೀಸರು ತಾಂತ್ರಿಕ ಆಧಾರದ ಮೇಲೆ ಮಂಜುನಾಥ್ ಮತ್ತು ಅಬ್ದುಲ್ ಕಲಾಂನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಆರ್​ಸಿಬಿ vs ಜಿಟಿ ಪಂದ್ಯದ ವೇಳೆ ನಡೆದಿತ್ತು ಆಘಾತಕಾರಿ ಘಟನೆ: ಕಂಗೆಟ್ಟು ಕುಳಿತಿದ್ದ ಪೊಲೀಸರು!

ಪಂದ್ಯದ ದಿನವೇ ಸಿಸಿಟಿವಿಗಳು ಆಫ್ ಆಗಿದ್ದರಿಂದ ಭದ್ರತಾ ವ್ಯವಸ್ಥೆ ಬಗ್ಗೆ ಭಾರಿ ಆತಂಕ ವ್ಯಕ್ತವಾಗಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಎಚ್ಚೆತ್ತ ಪೊಲೀಸರು, ತಕ್ಷಣ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ಬದಲಿ ತಾಂತ್ರಿಕ ವ್ಯವಸ್ಥೆ ಮಾಡಿದ್ದರು. ಭದ್ರತಾ ಲೋಪದ ನಡುವೆಯೂ ಪೊಲೀಸರು ಸಮಯಪ್ರಜ್ಞೆಯಿಂದ ಕಾರ್ಯನಿರ್ವಹಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪರಿಸ್ಥಿತಿ ನಿಭಾಯಿಸಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈ ಸಿನಿಮಾ ದಾಖಲೆ ಮುರಿಯೋದು ‘ಧುರಂಧರ್ 2’ ಚಿತ್ರಕ್ಕೆ ಅಸಾಧ್ಯ? – Kannada News | Dhurandhar 2 Box Office: Baahubali 2 and Pushpa 2 Records Will it Surpass

ಕಳೆದ ತಿಂಗಳು ಬಿಡುಗಡೆಯಾದ ಆದಿತ್ಯ ಧಾರ್ ನಿರ್ದೇಶನದ, ರಣವೀರ್ ಸಿಂಗ್ ನಟನೆಯ ‘ಧುರಂಧರ್: ದಿ ರಿವೆಂಜ್’ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಬಿರುಗಾಳಿ ಎಬ್ಬಿಸಿತು. ಬಿಡುಗಡೆಯ ಹಿಂದಿನ ದಿನ ಪೇಯ್ಡ್ ಪ್ರಿವ್ಯೂದಿಂದಲೇ ಪ್ರೇಕ್ಷಕರು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಡಿಸೆಂಬರ್ 5 ರಂದು ಬಿಡುಗಡೆಯಾದ ಧುರಂಧರ್ ಚಿತ್ರವನ್ನು ಜನರು ಕೊಂಡಾಡಿದರು. ಈ ಸಿನಿಮಾ ವಿಶ್ವಾದ್ಯಂತ ದಾಖಲೆಯ ಮೇಲೆ ದಾಖಲೆ ಮಾಡುತ್ತಿದೆ.

‘ಧುರಂಧರ್ 2 ದಿ ರಿವೆಂಜ್’ ಮಾರ್ಚ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಈಗ ಸಿನಿಮಾ ಏಪ್ರಿಲ್ 26ರಂದು 39 ದಿನವನ್ನು ಪೂರೈಸಿದೆ. ಧುರಂಧರ್ ಪ್ರಸ್ತುತ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರಗಳಲ್ಲಿ ಮೂರನೇ ಸ್ಥಾನದಲ್ಲಿದೆ. ಈ ಚಿತ್ರವು ಪ್ರೇಕ್ಷಕರು ಸಿನಿಮಾವನ್ನು ನೋಡುವ ವಿಧಾನವನ್ನು ಬದಲಾಯಿಸಿದೆ.

ಧುರಂಧರ್ 2 ಚಿತ್ರವು ಇಲ್ಲಿಯವರೆಗೆ ವಿಶ್ವಾದ್ಯಂತ 1772.94 ಕೋಟಿ ರೂ. ಗಳಿಸಿದೆ. ಎಸ್.ಎಸ್. ರಾಜಮೌಳಿ ಅವರ ‘ಬಾಹುಬಲಿ 2’ ಚಿತ್ರದ ಜಾಗತಿಕ ಗಳಿಕೆಯನ್ನು ಮೀರಿಸಲು ಈ ಚಿತ್ರಕ್ಕೆ ಇನ್ನೂ 15.72 ಕೋಟಿ ರೂ. ಅಗತ್ಯವಿದೆ. ‘ಬಾಹುಬಲಿ 2’ ವಿಶ್ವಾದ್ಯಂತ 1788.06 ಕೋಟಿ ರೂ. ಗಳಿಸಿದೆ.

ಇದನ್ನೂ ಓದಿ: ‘ಧುರಂಧರ್’ ಚಿತ್ರಕ್ಕೆ ತಿರುಗೇಟು ನೀಡಲು ‘ಮೇರಾ ಲಿಯಾರಿ’ ಸಿನಿಮಾ ಮಾಡಿದ ಪಾಕಿಸ್ತಾನ

ತೆಲುಗು ನಟ ಅರ್ಜುನ್ ಅವರ ‘ಪುಷ್ಪ 2’ ದೇಶಾದ್ಯಂತ ಭಾರಿ ಹಿಟ್ ಆಯಿತು. ಇದು ಪುಷ್ಪ ಚಿತ್ರದ ಎರಡನೇ ಭಾಗವಾಗಿತ್ತು. ಭಾರತದಲ್ಲಿ ‘ಪುಷ್ಪ 2’ ದಾಖಲೆಯನ್ನು ಮುರಿಯಲು ‘ಧುರಂಧರ್ 2’ಗೆ ಇನ್ನೂ 106 ಕೋಟಿ ಗಳಿಕೆ ಅಗತ್ಯವಿದೆ. ಭಾರತದಲ್ಲಿ ‘ಪುಷ್ಪ 2’ ದಾಖಲೆಯನ್ನು ಮುರಿಯಲು ‘ಧುರಂಧರ್ 2’ ಇನ್ನೂ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಅಥವಾ ಇದು ಅಸಾಧ್ಯ ಆಗಬಹುದು.

‘ಧುರಂದರ್ 2’ ಸಿನಿಮಾ ರಿಲೀಸ್ ಆದ 2 ತಿಂಗಳ ಬಳಿಕ ಒಟಿಟಿಗೆ ಬರಹುದು ಎಂದು ಊಹಿಸಲಾಗಿದೆ. ಜಿಯೋ ಹಾಟ್​ಸ್ಟಾರ್ ಮೂಲಕ ಸಿನಿಮಾ ಪ್ರಸಾರ ಆರಂಭಿಸಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪಾಕಿಸ್ತಾನದಲ್ಲಿ ಲಷ್ಕರ್ ಉಗ್ರ ಅಫ್ರಿದಿ ಹತ್ಯೆ: ಅಪರಿಚಿತರ ಗುಂಡಿಗೆ ಹಫೀಜ್ ಸಯೀದ್ ಆಪ್ತ ಬಲಿ – Kannada News | Pakistan: LeT Commander Sheikh Yusuf Afridi Killed by Unknown Gunmen in Khyber Pakhtunkhwa

ಇಸ್ಲಾಮಾಬಾದ್, ಏಪ್ರಿಲ್ 27: ಪಾಕಿಸ್ತಾನ(Pakistan)ದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಲಷ್ಕರ್-ಎ-ತೊಯ್ಬಾ ಕಮಾಂಡರ್ ಶೇಖ್ ಯೂಸುಫ್ ಅಫ್ರಿದಿಯನ್ನು ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಕೊಂದಿದ್ದಾರೆ. ಈ ಮೂಲಕ ಕಳೆದ ಕೆಲವು ತಿಂಗಳುಗಳಿಂದ ಪಾಕಿಸ್ತಾನದ ಸುರಕ್ಷಿತ ತಾಣಗಳಲ್ಲಿ ಅಡಗಿರುವ ಉಗ್ರರ ಮೇಲೆ ನಡೆಯುತ್ತಿರುವ ದಾಳಿಗಳ ಸರಣಿ ಮತ್ತೊಂದು ತಿರುವು ಪಡೆದಿದೆ.

ಆರಂಭಿಕ ವರದಿಗಳ ಪ್ರಕಾರ, ಅಫ್ರಿದಿ ಮೇಲೆ ದಾಳಿಕೋರರು ಹಲವು ಸುತ್ತು ಗುಂಡು ಹಾರಿಸಿದ್ದಾರೆ. ಅಮೆರಿಕದಿಂದ ನಿಷೇಧಕ್ಕೊಳಗಾಗಿರುವ ಲಷ್ಕರ್ ಸಂಘಟನೆಯ ಕಾರ್ಯಾಚರಣೆಗಳಲ್ಲಿ ಅಫ್ರಿದಿ ಪ್ರಮುಖ ಕೊಂಡಿಯಾಗಿದ್ದ. ತನಿಖಾಧಿಕಾರಿಗಳ ಪ್ರಕಾರ, ಇದು ಪಕ್ಕಾ ಯೋಜಿತ ‘ಟಾರ್ಗೆಟೆಡ್ ಕಿಲ್ಲಿಂಗ್’ ಆಗಿದ್ದು, ದಾಳಿಕೋರರು ಅಫ್ರಿದಿಗೆ ತಪ್ಪಿಸಿಕೊಳ್ಳಲು ಯಾವುದೇ ಅವಕಾಶ ನೀಡಿಲ್ಲ.

ಇತ್ತೀಚಿನ ತಿಂಗಳುಗಳಲ್ಲಿ ಪಾಕಿಸ್ತಾನದ ಪ್ರಮುಖ ನಗರಗಳಲ್ಲಿ ಭಯೋತ್ಪಾದಕರಿಗೆ ಕಾಲ ಕೂಡಿ ಬಂದಂತಿದೆ, ಕಳೆದ ತಿಂಗಳು ಲಾಹೋರ್‌ನಲ್ಲಿ ಲಷ್ಕರ್ ಸ್ಥಾಪಕ ಸದಸ್ಯ ಅಮೀರ್ ಹಮ್ಜಾನನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು.ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್‌ನ ಹಿರಿಯ ಸಹೋದರ ತಾಹಿರ್ ಅನ್ವರ್ ಕೂಡ ನಿಗೂಢ ಸಂದರ್ಭದಲ್ಲಿ ಸಾವನ್ನಪ್ಪಿದ್ದಾನೆ.ರಿಯಾಸಿ ದಾಳಿಯ ಮಾಸ್ಟರ್‌ಮೈಂಡ್ ಕತಲ್ ಸಿಂಧಿಯನ್ನು ಕಳೆದ ವರ್ಷ ಝೇಲಂನಲ್ಲಿ ಹತ್ಯೆ ಮಾಡಲಾಗಿತ್ತು.

ಮತ್ತಷ್ಟು ಓದಿ: ಇರಾನ್ ವಿರುದ್ಧದ ದಾಳಿಗೆ ಸದ್ಯಕ್ಕೆ ‘ಬ್ರೇಕ್’: ಪಾಕಿಸ್ತಾನದ ಮಧ್ಯಸ್ಥಿಕೆಗೆ ಒಪ್ಪಿದ ಟ್ರಂಪ್

2023 ರಿಂದ ಪ್ರಾರಂಭವಾದ ಈ ಮಾದರಿಯ ಹತ್ಯೆಗಳು 2026 ರಲ್ಲಿ ತೀವ್ರಗೊಂಡಿವೆ. ಕೇವಲ ಈ ವರ್ಷವೊಂದರಲ್ಲೇ ಲಷ್ಕರ್-ಎ-ತೊಯ್ಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ನಂತಹ ಸಂಘಟನೆಗಳಿಗೆ ಸಂಬಂಧಿಸಿದ ಕನಿಷ್ಠ 30 ಭಯೋತ್ಪಾದಕರನ್ನು ಲಾಹೋರ್, ಕರಾಚಿ ಮತ್ತು ಗಡಿ ಪ್ರದೇಶಗಳಲ್ಲಿ ಹತ್ಯೆ ಮಾಡಲಾಗಿದೆ. ಈ ‘ಅಪರಿಚಿತ ಬಂದೂಕುಧಾರಿಗಳು’ ಯಾರು ಎಂಬುದು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ರಿಯಾಸಿ ದಾಳಿ ಮತ್ತು ಮುಂಬೈ ದಾಳಿಯ ಸಂಚುಕೋರರಿಗೆ ಆಪ್ತರಾಗಿದ್ದ ಕಮಾಂಡರ್‌ಗಳು ಒಬ್ಬೊಬ್ಬರಾಗಿ ಹತರಾಗುತ್ತಿರುವುದು ಲಷ್ಕರ್ ಮತ್ತು ಜೈಶ್‌ನಂತಹ ಸಂಘಟನೆಗಳ ಬೆನ್ನೆಲುಬು ಮುರಿದಂತಿದೆ. ಪಾಕಿಸ್ತಾನದ ನೆಲದಲ್ಲಿ ತಮಗೆ ರಕ್ಷಣೆ ಇಲ್ಲ ಎಂಬ ಸತ್ಯ ಈಗ ಭಯೋತ್ಪಾದಕರಿಗೆ ಅರಿವಾಗುತ್ತಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಎಲ್ಲವೂ ಉಲ್ಟಾ ಪಲ್ಟಾ… 9 ಪಂದ್ಯಗಳಲ್ಲೂ ಸೋಲು! – Kannada News | Rawalpindiz’s PSL 2026 Nightmare: 9 Losses in 10 Games

ಟಿ20 ಲೀಗ್​ನಲ್ಲಿ ಹೊಸ ತಂಡವೊಂದು ಕಣಕ್ಕಿಳಿದಾಗ ಅಲ್ಲಿ ಸಂಭ್ರಮವಿರುತ್ತದೆ, ಅದರೊಂದಿಗೆ ಹೊಸ ಇತಿಹಾಸ ಬರೆಯುವ ಹಂಬಲವಿರುತ್ತದೆ. ಆದರೆ 2026ರ ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ರಾವಲ್ಪಿಂಡೀಸ್ ತಂಡದ ಪಾಲಿಗೆ ಎಲ್ಲವೂ ಉಲ್ಟಾ ಪಲ್ಟಾ. ಏಕೆಂದರೆ ಆಡಿದ ಚೊಚ್ಚಲ ಟೂರ್ನಿಯಲ್ಲೇ ಅತ್ಯಂತ ಹೀನಾಯ ಪ್ರದರ್ಶನ ನೀಡಿದೆ. ಅದು ಸಹ ಬರೋಬ್ಬರಿ 9 ಪಂದ್ಯಗಳಲ್ಲಿ ಸೋಲು ಕಾಣುವ ಮೂಲಕ.

ಸೋಲಿನ ಸರಪಳಿ:

ಮೊಹಮ್ಮದ್ ರಿಝ್ವಾನ್ ನೇತೃತ್ವದಲ್ಲಿ ಕಣಕ್ಕಿಳಿದ ರಾವಲ್ಪಿಂಡೀಸ್ ತಂಡವು ಟೂರ್ನಿಯ ಆರಂಭದಲ್ಲೇ ಸತತ 7 ಪಂದ್ಯಗಳನ್ನು ಸೋಲನುಭವಿಸಿತ್ತು. ಈ ಸೋಲಿನೊಂದಿಗೆ ಆರಂಭದಲ್ಲೇ ನಾಕೌಟ್ ರೇಸ್​ನಿಂದ ಹೊರಬಿದ್ದಿದ್ದರು. ಹೀಗೆ ಮೊದಲಾರ್ಧದಲ್ಲೇ ಹೊರಬಿದ್ದ ಮೊದಲ ತಂಡ ಎಂಬ ಅಪಖ್ಯಾತಿಗೂ ರಾವಲ್ಪಿಂಡಿ ತಂಡ ಗುರಿಯಾಯಿತು.

ಹೀಗೆ ಸತತ ಸೋಲುಗಳಿಂದ ಕಂಗೆಟ್ಟಿದ್ದ ತಂಡಕ್ಕೆ ಏಪ್ರಿಲ್ 23 ರಂದು ಇಸ್ಲಾಮಾಬಾದ್ ಯುನೈಟೆಡ್ ವಿರುದ್ಧ ನಡೆದ ಪಂದ್ಯವು ತುಸು ನಿರಾಳತೆ ನೀಡಿತು. ಈ ಪಂದ್ಯದಲ್ಲಿ ಇಸ್ಲಾಮಾಬಾದ್ ನೀಡಿದ್ದ 138 ರನ್‌ಗಳ ಗುರಿಯನ್ನು ಬೆನ್ನಟ್ಟಿದ ರಾವಲ್ಪಿಂಡಿ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಇದು ಇಡೀ ಟೂರ್ನಿಯಲ್ಲಿ ರಾವಲ್ಪಿಂಡಿ ತಂಡಕ್ಕೆ ಲಭಿಸಿದ ಏಕೈಕ ಗೆಲುವಾಗಿದೆ.

ಅಂದರೆ ಆಡಿದ 10 ಪಂದ್ಯಗಳಲ್ಲಿ ರಾವಲ್ಪಿಂಡೀಸ್ ತಂಡ ಗೆದ್ದಿರುವುದು ಕೇವಲ ಒಂದು ಮ್ಯಾಚ್ ಮಾತ್ರ. ಇನ್ನುಳಿದ 9 ಪಂದ್ಯಗಳಲ್ಲಿ ಹೀನಾಯ ಸೋಲುಂಡು ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ರಾವಲ್ಪಿಂಡಿ ತಂಡದ ಪ್ರದರ್ಶನದ ಸಂಕ್ಷಿಪ್ತ ವಿವರ ಈ ಕೆಳಗಿನಂತಿದೆ…

  • ಆಡಿದ ಪಂದ್ಯಗಳು: 10
  • ಗೆಲುವು: 01
  • ಸೋಲು: 09
  • ನೆಟ್​ ರನ್ ರೇಟ್ (NRR): -1.760
  • ಅಂಕಪಟ್ಟಿ ಸ್ಥಾನ: 8ನೇ ಸ್ಥಾನ (ಕೊನೆಯ ಸ್ಥಾನ)

ಸೋಲಿಗೆ ಕಾರಣಗಳೇನು?

ರಾವಲ್ಪಿಂಡೀಸ್ ತಂಡದಲ್ಲಿ ಅನುಭವವಿರುವ ಆಟಗಾರರಿದ್ದರೂ, ಪಂದ್ಯದ ನಿರ್ಣಾಯಕ ಹಂತಗಳಲ್ಲಿ ಒತ್ತಡ ನಿಭಾಯಿಸಲು ವಿಫಲರಾದದ್ದು ದೊಡ್ಡ ಹಿನ್ನಡೆಯಾಯಿತು. ವಿಶೇಷವಾಗಿ ಪವರ್‌ಪ್ಲೇ ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳುವುದು ಮತ್ತು ಬೌಲಿಂಗ್‌ನಲ್ಲಿ ರನ್ ನಿಯಂತ್ರಿಸಲು ಸಾಧ್ಯವಾಗದಿದ್ದುದು ತಂಡದ ಸೋಲಿಗೆ ಕಾರಣವಾಯಿತು. ಪರಿಣಾಮ ಬ್ಯಾಕ್ ಟು ಬ್ಯಾಕ್ 8 ಮ್ಯಾಚ್​ಗಳಲ್ಲಿ ಸೋಲನುಭವಿಸಿದ್ದಾರೆ. ಇದಾದ ಬಳಿಕ ಒಂದು ಮ್ಯಾಚ್​ ಗೆದ್ದರೂ ಕೊನೆಯ ಪಂದ್ಯಗಳಲ್ಲಿ ಮತ್ತೆ ಮುಗ್ಗರಿಸಿದ್ದಾರೆ.

ಇದನ್ನೂ ಓದಿ: RCB ಪಾಲಿಗೆ ಕನ್ನಡಿಗನೇ ಕಂಟಕ..!

ರಾವಲ್ಪಿಂಡೀಸ್ ತಂಡ: ಮೊಹಮ್ಮದ್ ರಿಝ್ವಾನ್ (ನಾಯಕ), ನಸೀಮ್ ಶಾ, ಡೇರಿಲ್ ಮಿಚೆಲ್,
ಸ್ಯಾಮ್ ಬಿಲ್ಲಿಂಗ್ಸ್, ಜಲತ್ ಖಾನ್, ಯಾಸಿರ್ ಖಾನ್, ರಿಶಾದ್ ಹೊಸೈನ್, ಮೊಹಮ್ಮದ್ ಅಮೀರ್, ಅಬ್ದುಲ್ಲಾ ಫಜಲ್, ಅಮದ್ ಬಟ್, ಡಯಾನ್ ಫಾರೆಸ್ಟರ್, ಲಾರಿ ಇವಾನ್ಸ್, ಆಸಿಫ್ ಅಫ್ರಿದಿ, ಕಮ್ರಾನ್ ಗುಲಾಮ್, ಫವಾದ್ ಖಾನ್, ಫವಾದ್ ಅಮಿರ್ ಮೆಕಾಂಚಿ, ಸಾದ್ ಮಸೂದ್.

Source link

Reliance Jio: ಜಿಯೋ ಬಳಕೆದಾರರಿಗೆ ಅಚ್ಚರಿ ವೈಶಿಷ್ಟ್ಯ: ತಪ್ಪು ಸಂಖ್ಯೆಗೆ ರೀಚಾರ್ಜ್ ಮಾಡಿದರೆ ಹಣ ವಾಪಸ್ – Kannada News | Surprise feature for Jio users Money back even if recharged to wrong number

ಬೆಂಗಳೂರು (ಏ. 27): ನೀವು ನಿಮ್ಮ ಫೋನ್ ಅನ್ನು ರೀಚಾರ್ಜ್ ಮಾಡಿದಾಗ ಅದು ತಪ್ಪು ಸಂಖ್ಯೆಗೆ ರೀಚಾರ್ಜ್ ಆಗಿದೆಯೇ? ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ನೂರಾರು ರೂಪಾಯಿಗಳು ವ್ಯರ್ಥವಾಗುತ್ತವೆ. ಏಕೆಂದರೆ ರೀಚಾರ್ಜ್ ಮಾಡಬೇಕಾದ ವ್ಯಕ್ತಿಯ ಬದಲಿಗೆ, ನೀವು ಬೇರೆಯವರಿಗೆ ರೀಚಾರ್ಜ್ ಮಾಡಿರುತ್ತೀರಿ. ಆದಾಗ್ಯೂ, ಈಗ ಅಂತಹ ತಪ್ಪಿನ ನಂತರವೂ, ನಿಮ್ಮ ಹಣ ವ್ಯರ್ಥವಾಗುವುದಿಲ್ಲ ಏಕೆಂದರೆ ರಿಲಯನ್ಸ್ ಜಿಯೋ (Reliance Jio) ತನ್ನ ಗ್ರಾಹಕರಿಗೆ ವಿಶೇಷ ವೈಶಿಷ್ಟ್ಯವನ್ನು ತಂದಿದೆ, ಇದರ ಮೂಲಕ ತಪ್ಪು ರೀಚಾರ್ಜ್ ಅನ್ನು ಸಮಯಕ್ಕೆ ಸರಿಯಾಗಿ ಅರಿತುಕೊಂಡರೆ ಹಣವನ್ನು ಮರುಪಡೆಯಬಹುದು. ತಪ್ಪು ಸಂಖ್ಯೆಗೆ ರೀಚಾರ್ಜ್ ಮಾಡಿದರೆ ನಿರ್ದಿಷ್ಟ ಸಮಯದೊಳಗೆ ನಿಮ್ಮ ಹಣವನ್ನು ಮರುಪಾವತಿಸಲಾಗುತ್ತದೆ.

ಜಿಯೋ ಗ್ರಾಹಕರು ಈ ವೈಶಿಷ್ಟ್ಯವನ್ನು ಪಡೆಯುತ್ತಾರೆ

ಈ ವೈಶಿಷ್ಟ್ಯದ ಬಗ್ಗೆ ಅತ್ಯಂತ ಮುಖ್ಯವಾದ ವಿಷಯವೆಂದರೆ ನೀವು ಆಕಸ್ಮಿಕವಾಗಿ ಯಾರಿಗಾದರೂ ರೀಚಾರ್ಜ್ ಮಾಡಿದರೆ, ಅವರೊಂದಿಗೆ ಮಾತನಾಡದೆಯೇ ನಿಮ್ಮ ಹಣವನ್ನು ಮರಳಿ ಪಡೆಯಬಹುದು. ಇದಕ್ಕೆ ಒಂದೇ ಷರತ್ತು ಎಂದರೆ ನಿಮ್ಮ ರೀಚಾರ್ಜ್ ಅನ್ನು MyJio ಆ್ಯಪ್ ಮೂಲಕ ಮಾಡಿರಬೇಕು. ನೀವು Paytm, PhonePe, ಅಥವಾ Google Pay ನಂತಹ ಇತರ ಅಪ್ಲಿಕೇಶನ್‌ಗಳ ಮೂಲಕ ತಪ್ಪಾಗಿ ರೀಚಾರ್ಜ್ ಮಾಡಿದರೆ ನಿಮಗೆ ಮರುಪಾವತಿ ಸಿಗುವುದಿಲ್ಲ.

ಜಿಯೋ ತಪ್ಪು ರೀಚಾರ್ಜ್‌ ಮಾಡಿದರೆ ಹಣವನ್ನು ಹೇಗೆ ಹಿಂಪಡೆಯುವುದು?

  • ಇದಕ್ಕಾಗಿ, ಮೊದಲು MyJio ಅಪ್ಲಿಕೇಷನ್ ತೆರೆಯಿರಿ ಮತ್ತು ಅದರಲ್ಲಿ ವಹಿವಾಟು ಹಿಸ್ಟರಿಗೆ ಹೋಗಿ.
  • ತಪ್ಪಾದ ರೀಚಾರ್ಜ್ ಸಂಭವಿಸಿದ ವಹಿವಾಟು ಇತಿಹಾಸವನ್ನು ವೀಕ್ಷಿಸಿ.
  • ಈ ವಿಭಾಗದಲ್ಲಿ, 3 ದಿನಗಳ ವಹಿವಾಟು ಇತಿಹಾಸದವರೆಗೆ ಯೋಜನೆಯನ್ನು ರದ್ದುಗೊಳಿಸುವ ಆಯ್ಕೆಯನ್ನು ನೀವು ಪಡೆಯುತ್ತೀರಿ.
  • ಈ ರದ್ದುಮಾಡು ಯೋಜನೆ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ಇದರ ನಂತರ ನಿಮ್ಮನ್ನು ರದ್ದತಿಗೆ ಕಾರಣ ಮತ್ತು ಮರುಪಾವತಿಯ ಮೂಲವನ್ನು ಕೇಳಲಾಗುತ್ತದೆ.
  • ಅಗತ್ಯ ಉತ್ತರಗಳನ್ನು ಒದಗಿಸಿ ಮತ್ತು ರೀಚಾರ್ಜ್ ಅನ್ನು ರದ್ದುಗೊಳಿಸಿ. ಸ್ವಲ್ಪ ಸಮಯದ ನಂತರ ನಿಮ್ಮ ಹಣವನ್ನು ನಿರ್ದಿಷ್ಟ ಮೂಲಕ್ಕೆ ಮರುಪಾವತಿಸಲಾಗುತ್ತದೆ.
  • ನೀವು ಆಕಸ್ಮಿಕವಾಗಿ ತಪ್ಪು ಸಂಖ್ಯೆಗೆ ರೀಚಾರ್ಜ್ ಮಾಡಿದರೆ ಈ ಹ್ಯಾಕ್ ಅಥವಾ ಟ್ರಿಕ್ ನಿಮಗೆ ಮರುಪಾವತಿ ಪಡೆಯಲು ಸಹಾಯ ಮಾಡುತ್ತದೆ. ಆದಾಗ್ಯೂ, ರೀಚಾರ್ಜ್ ಮಾಡಿದ 3 ಗಂಟೆಗಳ ಒಳಗೆ ಮಾತ್ರ ನೀವು ಈ ಹಣವನ್ನು ಮರಳಿ ಪಡೆಯಬಹುದು ಎಂಬುದನ್ನು ನೆನಪಿನಲ್ಲಿಡಿ.

WhatsApp Plus: ಬರುತ್ತಿದೆ ಹೊಸ ವಾಟ್ಸ್ಆ್ಯಪ್ ಪ್ಲಸ್: ಇದಕ್ಕೆ ಹಣ ಪಾವತಿಸಬೇಕೇ?, ಏನೆಲ್ಲ ಫೀಚರ್ಸ್ ಇದೆ ನೋಡಿ

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರೇಮ್​ಗೆ ಸಿನಿಮಾ ಆಫರ್ ಮಾಡಿದ ಸಲ್ಮಾನ್ ಖಾನ್ ; ಕನ್ನಡ ಹಿಟ್ ಚಿತ್ರದ ರಿಮೇಕ್ – Kannada News | Jogi Prem reveals Salman Khan sought ‘Jogi’ remake; Why Prem said no

ಜೋಗಿ ಪ್ರೇಮ್ ಅವರು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದವರು. ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಈಗ ಅವರ ನಿರ್ದೇಶನದಲ್ಲಿ ‘ಕೆಡಿ’ ಸಿನಿಮಾ ಮೂಡಿ ಬರುತ್ತಿದೆ. ಈ ವಾರಾಂತ್ಯಕ್ಕೆ ಸಿನಿಮಾ ತೆರೆಗೆ ಬರುತ್ತಿದೆ. ಈಗ ಅವರು ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದು, ಈ ವೇಳೆ ಅವರು ‘ಜೋಗಿ’ ಹಿಂದಿ ರಿಮೇಕ್ ಬಗ್ಗೆ ಮಾತನಾಡಿದ್ದಾರೆ. ಈಗಲೂ ಆ ಬಗ್ಗೆ ಸಾಜಿದ್ ಕೇಳುತ್ತಾರೆ ಎಂದು ಅವರು ಹೇಳಿದ್ದಾರೆ.

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಬಾಲಿವುಡ್ ಜೊತೆ  ದಕ್ಷಿಣ ಭಾರತದ ನಿರ್ದೇಶಕರ ಬಗ್ಗೆ ಒಲವು ಬಂದಿದೆ. ಇಲ್ಲಿಯ ನಿರ್ದೇಶಕರು ಹೆಚ್ಚು ಮಸಾಲಭರಿತ ಸಿನಿಮಾ ಮಾಡುತ್ತಾರೆ ಎಂಬುದನ್ನು ಅವರು ಬಲವಾಗಿ ನಂಬಿದ್ದಾರೆ. ಜೋಗಿ ಪ್ರೇಮ್ ಜೊತೆ ಕೆಲಸ ಮಾಡಬೇಕು ಎಂಬ ಆಸೆ ಅವರಿಗೆ ಇದೆ. ಈ ಬಗ್ಗೆ ಪ್ರೇಮ್ ಮಾಹಿತಿ ನೀಡಿದ್ದಾರೆ.

‘ಸಾಜಿದ್ ನಾಡಿಯದ್ವಾಲಾ ಕರೆದು ಸಿನಿಮಾ ಮಾಡೋಣ ಎಂದಿದ್ದರು. ಜೋಗಿ ರಿಮೇಕ್ ಮಾಡೋಣ ಎಂಬುದು ಅವರ ಆಸೆ ಆಗಿತ್ತು. ಸಲ್ಮಾನ್ ಖಾನ್ ಕೇಳ್ತಾ ಇದಾರೆ ಎಂದೂ ಹೇಳಿದ್ದರು. ನಾನು ಅದು ಸಾಧ್ಯವಿಲ್ಲ ಎಂದು ಹೇಳಿದ್ದೇನೆ. ಜೋಗಿ ರಿಲೀಸ್ ಆಗಿ 2 ದಶಕ ಕಳೆದಿದೆ. ಈಗ ಅದನ್ನು ರಿಮೇಕ್ ಮಾಡೋದು ಅಸಾಧ್ಯ ಎಂದು ನಾನು ಹೇಳಿದ್ದೇನೆ’ ಎಂಬುದಾಗಿ ಪ್ರೇಮ್ ವಿವರಿಸಿದ್ದಾರೆ.

ಸಲ್ಮಾನ್ ತಂಡದಿಂದ ಜೋಗಿ ಪ್ರೇಮ್​​ಗೆ ಈ ರೀತಿಯ ಬೇಡಿಕೆ ಬಂದಿತ್ತು ಎಂಬ ಸುದ್ದಿ ಈ ಮೊದಲೇ ವೈರಲ್ ಆಗಿತ್ತು. ಆದರೆ, ಪ್ರೇಮ್ ಅವರು ಈ ವಿಷಯದಲ್ಲಿ ಮುಂದುವರಿದಿರಲಿಲ್ಲ. ಈಗ ಅವರಿಗೆ ಪದೇ ಪದೇ ಈ ವಿಷಯದಲ್ಲಿ ಬೇಡಿಕೆ ಬರುತ್ತಿದೆ ಎಂಬ ವಿಷಯ ರಿವೀಲ್ ಆಗಿದೆ.

ಇದನ್ನೂ ಓದಿ: ಪ್ರಭಾಸ್ ವಿರುದ್ಧ ಸಲ್ಮಾನ್ ಖಾನ್​​ನ ಎತ್ತಿಕಟ್ಟಿದ ಟಾಲಿವುಡ್ ಮಂದಿ

‘ಕೆಡಿ’ ಸಿನಿಮಾ ಏಪ್ರಿಲ್ 30ಕ್ಕೆ ರಿಲೀಸ್ ಆಗುತ್ತಿದೆ. ಈ ಚಿತ್ರದ ಬಗ್ಗೆ ಪ್ರೇಕ್ಷಕರಿಗೆ ಸಾಕಷ್ಟು ನಿರೀಕ್ಷೆ ಇದೆ. ವಿವಾದಗಳ ಮೂಲಕ ಈ ಸಿನಿಮಾ ಸಾಕಷ್ಟು ಚರ್ಚೆ ಆಗುತ್ತಿದೆ. ಈ ಚಿತ್ರದ ಬಳಿಕ ಪ್ರೇಮ್ ಯಾವ ಸಿನಿಮಾ ನಿರ್ದೇಶನ ಮಾಡುತ್ತಾರೆ ಎನ್ನುವ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 11:08 am, Mon, 27 April 26

Source link

ಬ್ಲಡ್ ಬ್ಯಾಂಕ್​ಗಳಿಗೂ ತಟ್ಟಿದ ಬಿಸಿಲಿನ ಬೇಗೆ: ರಕ್ತ ಸಿಗದೇ ರೋಗಿಗಳ ಪರದಾಟ – Kannada News | Hubballi Blood Banks Face Severe Shortage Due to Heatwave; Blood Donations Drop Drastically

ಹುಬ್ಬಳ್ಳಿ, ಏಪ್ರಿಲ್ 27: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನ ತಾಪ ಜನಜೀವನವನ್ನು ತತ್ತರಿಸಿಸಿದೆ. ಇದರ ಪರಿಣಾಮವಾಗಿ, ರಾಜ್ಯದ ಹಲವು ರಕ್ತ ನಿಧಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ತಾಪಮಾನ ಏರಿಕೆಯಿಂದಾಗಿ ರಕ್ತದಾನ ಮಾಡಲು ಹೆಚ್ಚಿನ ಜನರು ಹಿಂದೇಟು ಹಾಕುತ್ತಿದ್ದಾರೆ. ಹುಬ್ಬಳ್ಳಿ ನಗರದ ರಾಷ್ಟ್ರೋತ್ಥಾನ ಬ್ಲಡ್ ಬ್ಯಾಂಕ್‌ನಲ್ಲಿ ಪ್ರತಿದಿನ 90 ರಿಂದ 100 ಯೂನಿಟ್ ರಕ್ತ ಸಂಗ್ರಹವಾಗುತ್ತಿತ್ತು. ಆದರೆ, ಪ್ರಸ್ತುತ ಬೇಸಿಗೆಯ ಹಿನ್ನೆಲೆಯಲ್ಲಿ ಈ ಸಂಖ್ಯೆ 10 ರಿಂದ 15 ಯೂನಿಟ್‌ಗಳಿಗೆ ಕುಸಿದಿದೆ. ಬಿಸಿಲಿನಲ್ಲಿ ಸುಸ್ತು, ತಲೆಸುತ್ತು ಬರುವ ಸಾಧ್ಯತೆಗಳ ಭಯದಿಂದ ದಾನಿಗಳು ಹಿಂಜರಿಯುತ್ತಿದ್ದಾರೆ. ರೋಗಿಗಳಿಗೆ ರಕ್ತದ ಬೇಡಿಕೆ ಹೆಚ್ಚಾಗಿದ್ದರೂ, ಪೂರೈಕೆ ತೀವ್ರವಾಗಿ ಕಡಿಮೆಯಾಗಿದೆ.

ರಾಷ್ಟ್ರೋತ್ಥಾನ ಬ್ಲಡ್ ಬ್ಯಾಂಕಿನ ಟ್ರಸ್ಟಿಗಳ ಪ್ರಕಾರ, ರಕ್ತದಾನ ಮಾಡಿದ ನಂತರ ಒಂದು ಗಂಟೆ ವಿಶ್ರಾಂತಿ ಪಡೆದರೆ ಯಾವುದೇ ಸಮಸ್ಯೆಯಾಗುವುದಿಲ್ಲ. ಬಿಸಿಲಿದ್ದರೂ ರಕ್ತದಾನ ಮಾಡುವುದು ಸುರಕ್ಷಿತವಾಗಿದ್ದು, ಕೇವಲ ವಿಶ್ರಾಂತಿ ಪಡೆಯುವುದು ಅವಶ್ಯಕ ಎಂದು ತಿಳಿಸಲಾಗಿದೆ. ಹೀಗಾಗಿ, ದಾನಿಗಳು ಮುಂದೆ ಬಂದು ರಕ್ತದಾನ ಮಾಡುವ ಮೂಲಕ ಅನೇಕ ಜೀವಗಳನ್ನು ಉಳಿಸಲು ಸಹಾಯ ಮಾಡಬೇಕು ಎಂದು ಮನವಿ ಮಾಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

RCB ಪಾಲಿಗೆ ಕನ್ನಡಿಗನೇ ಕಂಟಕ..! – Kannada News | KL Rahul: The RCB Destroyer

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇತಿಹಾಸದಲ್ಲಿ ಕೆಲವು ಬ್ಯಾಟರ್‌ಗಳು ನಿರ್ದಿಷ್ಟ ತಂಡಗಳ ವಿರುದ್ಧ ಅಕ್ಷರಶಃ ಅಬ್ಬರಿಸುತ್ತಾರೆ. ಅಂತಹ ಸಾಲಿನಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಮೊದಲಿಗರು. ಇಲ್ಲಿ ಕೆಎಲ್​ಆರ್​ ಅಬ್ಬರಿಸುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಎಂಬುದೇ ವಿಶೇಷ. ಅಂದರೆ ತನ್ನ ತವರು ತಂಡದ ವಿರುದ್ಧವೇ ರಾಹುಲ್ ತೋರುವ ಬ್ಯಾಟಿಂಗ್ ಪರಾಕ್ರಮ ಈ ಬಾರಿ ಕೂಡ ಮುಂದುವರೆದಿದೆ.

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆರ್​ಸಿಬಿ ವಿರುದ್ಧದ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದ ರಾಹುಲ್ 57 ರನ್ ಬಾರಿಸಿದ್ದರು. ಈ ಅರ್ಧಶತಕದ ನೆರವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆರ್​ಸಿಬಿ ವಿರುದ್ಧ 6 ವಿಕೆಟ್​ಗಳ ಜಯ ಸಾಧಿಸಿತ್ತು.

ಇದೀಗ ಆರ್​ಸಿಬಿ ಮತ್ತು ಡಿಸಿ ಎರಡನೇ ಮುಖಾಮುಖಿಗೆ ಸಜ್ಜಾಗಿದೆ. ಈ ಬಾರಿ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅತೀ ದೊಡ್ಡ ಚಿಂತೆ ಕೆಎಲ್ ರಾಹುಲ್. ಏಕೆಂದರೆ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಕೆಎಲ್​ಆರ್​ ಅಬ್ಬರಕ್ಕೆ ಈ ಕೆಳಗಿನ ಅಂಕಿ ಅಂಶಗಳೇ ಸಾಕ್ಷಿ.

  • ಆರ್‌ಸಿಬಿ ವಿರುದ್ಧ ಕೆಎಲ್ ರಾಹುಲ್ 18 ಇನಿಂಗ್ಸ್​ ಆಡಿದ್ದಾರೆ. ಈ ವೇಳೆ ಅವರು 69.91ರ ಸರಾಸರಿಯಲ್ಲಿ ಒಟ್ಟು 839 ರನ್ ಕಲೆಹಾಕಿದ್ದಾರೆ.
  • ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೆಎಲ್ ರಾಹುಲ್ ಒಂದು ಭರ್ಜರಿ ಶತಕ ಹಾಗೂ 5 ಅರ್ಧಶತಕಗಳನ್ನು ಸಹ ಬಾರಿಸಿದ್ದಾರೆ.
  • ಐಪಿಎಲ್ 2020 ರಲ್ಲಿ ಆರ್‌ಸಿಬಿ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ್ದ ರಾಹುಲ್, ಕೇವಲ 69 ಎಸೆತಗಳಲ್ಲಿ ಅಜೇಯ 132 ರನ್ ಚಚ್ಚಿದ್ದರು.
  • ಈ ಹಿಂದೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಿದ 7 ಪಂದ್ಯಗಳಲ್ಲಿ ಕೆಎಲ್ ರಾಹುಲ್ 151.68ರ ಸ್ಟ್ರೈಕ್ ರೇಟ್ನಲ್ಲಿ 270 ರನ್ ಗಳಿಸಿದ್ದಾರೆ.
  • ಈ ಬಾರಿಯ ಮೊದಲ ಮುಖಾಮುಖಿಯಲ್ಲಿ ಆರ್​ಸಿಬಿ ವಿರುದ್ಧ ಕೆಎಲ್ ರಾಹುಲ್ ಕೇವಲ 34 ಎಸೆತಗಳಲ್ಲಿ 57 ರನ್​ ಚಚ್ಚಿದ್ದರು.

ದೆಹಲಿಯಲ್ಲೂ ಕನ್ನಡಿಗನ ದರ್ಬಾರ್:

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದ ಪಿಚ್‌ನಲ್ಲಿ ಕೆಎಲ್. ರಾಹುಲ್ ಅವರ ಪ್ರದರ್ಶನ ಅತ್ಯಂತ ಪ್ರಭಾವಶಾಲಿಯಾಗಿದೆ. ವಿಶೇಷವಾಗಿ ಈ 2026ರ ಐಪಿಎಲ್ ಸೀಸನ್​ನಲ್ಲಿ ಅವರು ಇದೇ ಅಂಗಳದಲ್ಲಿ ಐತಿಹಾಸಿಕ ದಾಖಲೆ ಬರೆದಿದ್ದಾರೆ.

  • ಐತಿಹಾಸಿಕ 152 ರನ್:* ಏಪ್ರಿಲ್ 25, 2026 ರಂದು ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಹುಲ್ ಅಜೇಯ 152 ರನ್ (67 ಎಸೆತ) ಸಿಡಿಸಿದ್ದಾರೆ. ಇದು ಐಪಿಎಲ್ ಇತಿಹಾಸದಲ್ಲಿ ಭಾರತೀಯ ಬ್ಯಾಟರ್ ಒಬ್ಬರು ದಾಖಲಿಸಿದ ಗರಿಷ್ಠ ಸ್ಕೋರ್. ಈ ಮೂಲಕ ಐಪಿಎಲ್​ ಪಂದ್ಯವೊಂದರಲ್ಲಿ 150 ರನ್ ಗಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
  • ದೆಹಲಿ ದರ್ಬಾರ್: ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಕೆಎಲ್ ರಾಹುಲ್ ಈವರೆಗೆ 14 ಇನ್ನಿಂಗ್ಸ್‌ ಆಡಿದ್ದಾರೆ. ಈ ವೇಳೆ  52.0 ಸರಾಸರಿಯೊಂದಿಗೆ 520 ರನ್ ಗಳಿಸಿದ್ದಾರೆ. ಇಲ್ಲಿ ಅವರ ಸ್ಟ್ರೈಕ್ ರೇಟ್ 160.99 ರಷ್ಟಿರುವುದು ವಿಶೇಷ. ಇದು ದೆಹಲಿಯ ಪಿಚ್​ನಲ್ಲಿ ಅವರು ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸುತ್ತಿರುವುದಕ್ಕೆ ಸಾಕ್ಷಿ.
  • ಇತ್ತೀಚಿನ ಫಾರ್ಮ್: ಇದೇ ಕ್ರೀಡಾಂಗಣದಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲೂ ಅವರು 52 ಎಸೆತಗಳಲ್ಲಿ 92 ರನ್ ಸಿಡಿಸಿದ್ದರು. ಇನ್ನು ಪಂಜಾಬ್ ಕಿಂಗ್ಸ್ ವಿರುದ್ಧ 152 ರನ್​ ಚಚ್ಚಿದ್ದರು.

ಇದನ್ನೂ ಓದಿ: RCB ಪ್ಲೇಯಿಂಗ್ ಇಲೆವೆನ್​ನಲ್ಲಿ 2 ಬದಲಾವಣೆ ಬಹುತೇಕ ಖಚಿತ!

ಅತ್ತ ಮೊದಲ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಆಕರ್ಷಕ ಅರ್ಧಶತಕ ಬಾರಿಸಿರುವ ಕೆಎಲ್ ರಾಹುಲ್, ಇದೀಗ ದ್ವಿತೀಯ ಪಂದ್ಯದಲ್ಲೂ ಅಬ್ಬರಿಸುವ ವಿಶ್ವಾಸದಲ್ಲಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಆರ್​ಸಿಬಿ ತಂಡ ಗೆಲುವು ದಾಖಲಿಸಬೇಕಿದ್ದರೆ ಕೆಎಲ್ ರಾಹುಲ್ ಅವರನ್ನು ಬೇಗನೆ ಔಟ್ ಮಾಡುವುದು ಅನಿವಾರ್ಯ. ಒಂದು ವೇಳೆ ಕನ್ನಡಿಗ ಕ್ರೀಸ್ ಕಚ್ಚಿ ನಿಂತರೆ ಆರ್​ಸಿಬಿ ಪಾಲಿಗೆ ಕಂಟಕವಾಗಲಿದ್ದಾರೆ ಎಂಬುದಕ್ಕೆ ಈ ಹಿಂದಿನ ಅಂಕಿ ಅಂಶಗಳೇ ಸಾಕ್ಷಿ.

Source link

DC vs RCB: ದೆಹಲಿಯಲ್ಲಿ ಇತಿಹಾಸ ರಚಿಸಲು ಸಿದ್ಧವಾದ ವಿರಾಟ್ ಕೊಹ್ಲಿ – Kannada News | Virat Kohli all set to create history in Delhi in DC vc RCB IPL 2026 Match

ಏಪ್ರಿಲ್ 27, ಸೋಮವಾರ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ 2026 ರ ದೊಡ್ಡ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದ್ದು, ರನ್‌ಗಳ ಮಳೆ ಮತ್ತು ದಾಖಲೆಗಳ ಸುರಿಮಳೆಯಾಗುವ ಸಾಧ್ಯತೆಯಿದೆ. ಈ ಪಂದ್ಯದಲ್ಲಿ ಅನೇಕ ವೈಯಕ್ತಿಕ ಸಾಧನೆಗಳು ಪಣಕ್ಕಿಡಲಾಗಿದೆ, ಈ ಪೈಕಿ ದೊಡ್ಡ ಆಕರ್ಷಣೆ ಕಿಂಗ್ ಕೊಹ್ಲಿ. ಪ್ರಸಿದ್ಧ ದೆಹಲಿ ಪಿಚ್‌ನಲ್ಲಿ ವಿರಾಟ್ ಕೊಹ್ಲಿ (Virat Kohli) ಐಪಿಎಲ್ ಇತಿಹಾಸದಲ್ಲೇ ಶಾಶ್ವತವಾಗಿಡಲು ಕೆಲವು ದಾಖಲೆಗಳನ್ನು ಸ್ಥಾಪಿಸುವ ಹೊಸ್ತಿಲಲ್ಲಿದ್ದಾರೆ.

ವಿರಾಟ್ ಐಪಿಎಲ್‌ನಲ್ಲಿ 9,000 ರನ್‌ಗಳ ಸಮೀಪದಲ್ಲಿದ್ದಾರೆ

ಐಪಿಎಲ್ ಇತಿಹಾಸದಲ್ಲಿ ವಿರಾಟ್ ಕೊಹ್ಲಿ ಅತಿ ದೊಡ್ಡ ಮೈಲಿಗಲ್ಲು ತಲುಪುವ ಸನಿಹದಲ್ಲಿದ್ದಾರೆ. ಐಪಿಎಲ್‌ನಲ್ಲಿ 9,000 ರನ್‌ಗಳನ್ನು ತಲುಪಿದ ವಿಶ್ವದ ಮೊದಲ ಆಟಗಾರನಾಗಲು ಕೊಹ್ಲಿಗೆ ಕೇವಲ 111 ರನ್‌ಗಳು ಬೇಕಾಗಿವೆ. ಬೇರೆ ಯಾವುದೇ ಬ್ಯಾಟ್ಸ್‌ಮನ್ ಈ ಅಂಕಿ ಅಂಶದ ಹತ್ತಿರವೂ ಬಂದಿಲ್ಲ. ಕೊಹ್ಲಿ ದೆಹಲಿ ವಿರುದ್ಧ ದೊಡ್ಡ ಇನ್ನಿಂಗ್ಸ್ ಆಡುವಲ್ಲಿ ಯಶಸ್ವಿಯಾದರೆ, ಲೀಗ್‌ನಲ್ಲಿ 9,000 ರನ್‌ಗಳನ್ನು ದಾಟಿದ ಏಕೈಕ ಬ್ಯಾಟ್ಸ್‌ಮನ್ ಆಗುವ ಸಾಧ್ಯತೆ ಇದೆ.

ಒಂದೇ ದೇಶದ ಪರ 10,000 ಟಿ20 ರನ್ ಗಳಿಸಿದ ಅಪರೂಪದ ದಾಖಲೆ

ಕೊಹ್ಲಿ ಐಪಿಎಲ್‌ನಲ್ಲಿ ಮಾತ್ರವಲ್ಲದೆ ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿಯೂ ಐತಿಹಾಸಿಕ ಮೈಲಿಗಲ್ಲು ಸಾಧಿಸುವ ಹಾದಿಯಲ್ಲಿದ್ದಾರೆ. ಭಾರತದಲ್ಲಿ 10,000 ಟಿ20 ರನ್‌ಗಳನ್ನು ತಲುಪಲು ಅವರಿಗೆ ಕೇವಲ 68 ರನ್‌ಗಳು ಬೇಕಾಗಿವೆ. ದೆಹಲಿ ಕೊಹ್ಲಿಯ ತವರು ಮೈದಾನವಾಗಿದೆ, ಆದ್ದರಿಂದ ಇಲ್ಲಿ 68 ರನ್‌ಗಳನ್ನು ಗಳಿಸುವುದು ಇವರಿಗೆ ದೊಡ್ಡ ಕಷ್ಟವೇನಲ್ಲ.

Abhishek Sharma: ಹೋಟೆಲ್​ನಲ್ಲಿ ಅಭಿಷೇಕ್ ಶರ್ಮಾ ಅವರ ಕೈ ಹಿಡಿದು ತನ್ನತ್ತ ಎಳೆದ ಅಪರಿಚಿತ ಹುಡುಗಿ: ವಿಡಿಯೋ ವೈರಲ್

ದಾಖಲೆಗಳ ಸುನಾಮಿ ಮತ್ತು ದೈತ್ಯರ ಮೇಲೆ ಕಣ್ಣುಗಳು

ವಿರಾಟ್ ಕೊಹ್ಲಿ ಮಾತ್ರವಲ್ಲದೆ, ಎರಡೂ ತಂಡಗಳ ಹಲವಾರು ಆಟಗಾರರು ಸಹ ಈ ಪಂದ್ಯದಲ್ಲಿ ಮಹತ್ವದ ಮೈಲಿಗಲ್ಲುಗಳನ್ನು ತಲುಪುವ ಸನಿಹದಲ್ಲಿದ್ದಾರೆ. ಅರುಣ್ ಜೇಟ್ಲಿ ಕ್ರೀಡಾಂಗಣದ ಸಣ್ಣ ಬೌಂಡರಿಗಳು ಮತ್ತು ಸಮತಟ್ಟಾದ ಪಿಚ್ ಅನ್ನು ಗಮನಿಸಿದರೆ, ಪಂದ್ಯವು ಅನೇಕ ಐತಿಹಾಸಿಕ ಸಾಧನೆಗಳಿಗೆ ಸಾಕ್ಷಿಯಾಗುವ ನಿರೀಕ್ಷೆಯಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:23 am, Mon, 27 April 26

Source link