ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇತಿಹಾಸದಲ್ಲಿ ಕೆಲವು ಬ್ಯಾಟರ್‌ಗಳು ನಿರ್ದಿಷ್ಟ ತಂಡಗಳ ವಿರುದ್ಧ ಅಕ್ಷರಶಃ ಅಬ್ಬರಿಸುತ್ತಾರೆ. ಅಂತಹ ಸಾಲಿನಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಮೊದಲಿಗರು. ಇಲ್ಲಿ ಕೆಎಲ್ಆರ್ ಅಬ್ಬರಿಸುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಎಂಬುದೇ ವಿಶೇಷ. ಅಂದರೆ ತನ್ನ ತವರು ತಂಡದ ವಿರುದ್ಧವೇ ರಾಹುಲ್ ತೋರುವ ಬ್ಯಾಟಿಂಗ್ ಪರಾಕ್ರಮ ಈ ಬಾರಿ ಕೂಡ ಮುಂದುವರೆದಿದೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆರ್‌ಸಿಬಿ ವಿರುದ್ಧದ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದ ರಾಹುಲ್ 57 ರನ್ ಬಾರಿಸಿದ್ದರು. ಈ ಅರ್ಧಶತಕದ ನೆರವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆರ್‌ಸಿಬಿ ವಿರುದ್ಧ 6 ವಿಕೆಟ್ಗಳ ಜಯ ಸಾಧಿಸಿತ್ತು.
ಇದೀಗ ಆರ್‌ಸಿಬಿ ಮತ್ತು ಡಿಸಿ ಎರಡನೇ ಮುಖಾಮುಖಿಗೆ ಸಜ್ಜಾಗಿದೆ. ಈ ಬಾರಿ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅತೀ ದೊಡ್ಡ ಚಿಂತೆ ಕೆಎಲ್ ರಾಹುಲ್. ಏಕೆಂದರೆ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಕೆಎಲ್ಆರ್ ಅಬ್ಬರಕ್ಕೆ ಈ ಕೆಳಗಿನ ಅಂಕಿ ಅಂಶಗಳೇ ಸಾಕ್ಷಿ.
- ಆರ್‌ಸಿಬಿ ವಿರುದ್ಧ ಕೆಎಲ್ ರಾಹುಲ್ 18 ಇನಿಂಗ್ಸ್ ಆಡಿದ್ದಾರೆ. ಈ ವೇಳೆ ಅವರು 69.91ರ ಸರಾಸರಿಯಲ್ಲಿ ಒಟ್ಟು 839 ರನ್ ಕಲೆಹಾಕಿದ್ದಾರೆ.
- ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೆಎಲ್ ರಾಹುಲ್ ಒಂದು ಭರ್ಜರಿ ಶತಕ ಹಾಗೂ 5 ಅರ್ಧಶತಕಗಳನ್ನು ಸಹ ಬಾರಿಸಿದ್ದಾರೆ.
- ಐಪಿಎಲ್ 2020 ರಲ್ಲಿ ಆರ್‌ಸಿಬಿ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ್ದ ರಾಹುಲ್, ಕೇವಲ 69 ಎಸೆತಗಳಲ್ಲಿ ಅಜೇಯ 132 ರನ್ ಚಚ್ಚಿದ್ದರು.
- ಈ ಹಿಂದೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಿದ 7 ಪಂದ್ಯಗಳಲ್ಲಿ ಕೆಎಲ್ ರಾಹುಲ್ 151.68ರ ಸ್ಟ್ರೈಕ್ ರೇಟ್ನಲ್ಲಿ 270 ರನ್ ಗಳಿಸಿದ್ದಾರೆ.
- ಈ ಬಾರಿಯ ಮೊದಲ ಮುಖಾಮುಖಿಯಲ್ಲಿ ಆರ್‌ಸಿಬಿ ವಿರುದ್ಧ ಕೆಎಲ್ ರಾಹುಲ್ ಕೇವಲ 34 ಎಸೆತಗಳಲ್ಲಿ 57 ರನ್ ಚಚ್ಚಿದ್ದರು.
ದೆಹಲಿಯಲ್ಲೂ ಕನ್ನಡಿಗನ ದರ್ಬಾರ್:
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದ ಪಿಚ್‌ನಲ್ಲಿ ಕೆಎಲ್. ರಾಹುಲ್ ಅವರ ಪ್ರದರ್ಶನ ಅತ್ಯಂತ ಪ್ರಭಾವಶಾಲಿಯಾಗಿದೆ. ವಿಶೇಷವಾಗಿ ಈ 2026ರ ಐಪಿಎಲ್ ಸೀಸನ್ನಲ್ಲಿ ಅವರು ಇದೇ ಅಂಗಳದಲ್ಲಿ ಐತಿಹಾಸಿಕ ದಾಖಲೆ ಬರೆದಿದ್ದಾರೆ.
- ಐತಿಹಾಸಿಕ 152 ರನ್:* ಏಪ್ರಿಲ್ 25, 2026 ರಂದು ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಹುಲ್ ಅಜೇಯ 152 ರನ್ (67 ಎಸೆತ) ಸಿಡಿಸಿದ್ದಾರೆ. ಇದು ಐಪಿಎಲ್ ಇತಿಹಾಸದಲ್ಲಿ ಭಾರತೀಯ ಬ್ಯಾಟರ್ ಒಬ್ಬರು ದಾಖಲಿಸಿದ ಗರಿಷ್ಠ ಸ್ಕೋರ್. ಈ ಮೂಲಕ ಐಪಿಎಲ್ ಪಂದ್ಯವೊಂದರಲ್ಲಿ 150 ರನ್ ಗಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
- ದೆಹಲಿ ದರ್ಬಾರ್: ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಕೆಎಲ್ ರಾಹುಲ್ ಈವರೆಗೆ 14 ಇನ್ನಿಂಗ್ಸ್ ಆಡಿದ್ದಾರೆ. ಈ ವೇಳೆ 52.0 ಸರಾಸರಿಯೊಂದಿಗೆ 520 ರನ್ ಗಳಿಸಿದ್ದಾರೆ. ಇಲ್ಲಿ ಅವರ ಸ್ಟ್ರೈಕ್ ರೇಟ್ 160.99 ರಷ್ಟಿರುವುದು ವಿಶೇಷ. ಇದು ದೆಹಲಿಯ ಪಿಚ್‌ನಲ್ಲಿ ಅವರು ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸುತ್ತಿರುವುದಕ್ಕೆ ಸಾಕ್ಷಿ.
- ಇತ್ತೀಚಿನ ಫಾರ್ಮ್: ಇದೇ ಕ್ರೀಡಾಂಗಣದಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲೂ ಅವರು 52 ಎಸೆತಗಳಲ್ಲಿ 92 ರನ್ ಸಿಡಿಸಿದ್ದರು. ಇನ್ನು ಪಂಜಾಬ್ ಕಿಂಗ್ಸ್ ವಿರುದ್ಧ 152 ರನ್ ಚಚ್ಚಿದ್ದರು.
ಇದನ್ನೂ ಓದಿ: RCB ಪ್ಲೇಯಿಂಗ್ ಇಲೆವೆನ್ನಲ್ಲಿ 2 ಬದಲಾವಣೆ ಬಹುತೇಕ ಖಚಿತ!
ಅತ್ತ ಮೊದಲ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಆಕರ್ಷಕ ಅರ್ಧಶತಕ ಬಾರಿಸಿರುವ ಕೆಎಲ್ ರಾಹುಲ್, ಇದೀಗ ದ್ವಿತೀಯ ಪಂದ್ಯದಲ್ಲೂ ಅಬ್ಬರಿಸುವ ವಿಶ್ವಾಸದಲ್ಲಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಆರ್‌ಸಿಬಿ ತಂಡ ಗೆಲುವು ದಾಖಲಿಸಬೇಕಿದ್ದರೆ ಕೆಎಲ್ ರಾಹುಲ್ ಅವರನ್ನು ಬೇಗನೆ ಔಟ್ ಮಾಡುವುದು ಅನಿವಾರ್ಯ. ಒಂದು ವೇಳೆ ಕನ್ನಡಿಗ ಕ್ರೀಸ್ ಕಚ್ಚಿ ನಿಂತರೆ ಆರ್‌ಸಿಬಿ ಪಾಲಿಗೆ ಕಂಟಕವಾಗಲಿದ್ದಾರೆ ಎಂಬುದಕ್ಕೆ ಈ ಹಿಂದಿನ ಅಂಕಿ ಅಂಶಗಳೇ ಸಾಕ್ಷಿ.
