ನೈಟ್ ಕ್ಲಬ್ ಫೈಟ್: ಸಹ ಆಟಗಾರರನ್ನು ರಕ್ಷಿಸಲು ಸುಳ್ಳು ಹೇಳಿದ ಬ್ರೂಕ್ – Kannada News | Harry Brook admits to lying about nightclub incident
ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಬ್ರೂಕ್ ಪ್ರಸ್ತುತ ಶ್ರೀಲಂಕಾದಲ್ಲಿದ್ದಾರೆ. ಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸುತ್ತಿರುವ ಬ್ರೂಕ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಹೀಗೆ ಸುದ್ದಿಯಾಗಲು ಮುಖ್ಯ ಕಾರಣ ನೈಟ್ ಕ್ಲಬ್ ಫೈಟ್. ನ್ಯೂಝಿಲೆಂಡ್ ವಿರುದ್ಧದ ಸರಣಿ ವೇಳೆ ಬ್ರೂಕ್ ನೈಟ್ ಕ್ಲಬ್ನಲ್ಲಿ ಗಲಾಟೆ ಮಾಡಿಕೊಂಡಿದ್ದರು. ನ್ಯೂಝಿಲೆಂಡ್ ವಿರುದ್ಧದ ಸರಣಿ ವೇಳೆ ವೆಲ್ಲಿಂಗ್ಟನ್ನಲ್ಲಿನ ನೈಟ್ ಕ್ಲಬ್ಗೆ ತೆರಳಿದ್ದ ಹ್ಯಾರಿ ಬ್ರೂಕ್ ಅಲ್ಲಿನ ಬೌನ್ಸರ್ ಜೊತೆ ಹೊಡೆದಾಡಿಕೊಂಡಿದ್ದಾರೆ ಎಂಬ ಸುದ್ದಿಯೊಂದು ಹರಿದಾಡಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಇಂಗ್ಲೆಂಡ್…