Headlines

nagaraj11081993

32 ವರ್ಷದ ಗಳಿಕೆಯನ್ನೆಲ್ಲ ದೋಚಿಬಿಟ್ಟರು ಸರ್​​: 18 ಕೋಟಿ ಸಂಪತ್ತು ಕಳೆದುಕೊಂಡ ಮನೆ ಮಾಲೀಕ ಭಾವುಕ – Kannada News | House Helpers Rob Bengaluru Builder’s Home; Assets Worth 1.8 Crore Stolen

ಬೆಂಗಳೂರು, ಜನವರಿ 28: ಮಾರತ್ತಹಳ್ಳಿಯ ಯಮಲೂರಿನಲ್ಲಿ ಬಿಲ್ಡರ್ ಶಿವಕುಮಾರ್ ಅವರ ಮನೆಯಿಂದ ಸುಮಾರು 18 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ, ವಜ್ರ, ಬೆಳ್ಳಿ ಮತ್ತು ನಗದು ಕಳ್ಳತನವಾಗಿದೆ. ಮನೆ ಮಾಲೀಕರು ನೀಡಿದ ಹೇಳಿಕೆಯ ಪ್ರಕಾರ, ದಿನೇಶ್ ಮತ್ತು ಕಮಲಾ ಎಂಬ ನವದಂಪತಿ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಇವರನ್ನು 20-22 ದಿನಗಳ ಹಿಂದಷ್ಟೇ ಕೆಲಸಕ್ಕೆ ನೇಮಿಸಲಾಗಿತ್ತು. ಕಳ್ಳತನದ ಸಮಯಕ್ಕೆ ಮನೆಯಲ್ಲಿದ್ದ ಇತರರೂ ಭೂಮಿ ಪೂಜೆ ಕಾರ್ಯಕ್ರಮವೊಂದಕ್ಕೆ ಹೋಗಿದ್ದರಿಂದ ಮನೆ ಖಾಲಿಯಾಗಿತ್ತು. ಕಳ್ಳರು ಸಿಸಿಟಿವಿ ಕ್ಯಾಮೆರಾಗಳನ್ನು ನಿಷ್ಕ್ರಿಯಗೊಳಿಸಲು ವಿದ್ಯುತ್ ಸಂಪರ್ಕ,…

Read More

ಕರ್ನಾಟಕ ಸಾರಿಗೆ ನೌಕರರಿಂದ ಜ. 29ರಂದು ‘ಬೆಂಗಳೂರು ಚಲೋ’: ಬೇಡಿಕೆ ಈಡೇರದಿದ್ದರೆ ಮುಷ್ಕರಕ್ಕೂ ಪ್ಲ್ಯಾನ್​​! – Kannada News | Bengaluru Chalo’ Call by Transport Employees Tomorrow; Strike Threat Looms

ಸಾರಿಗೆ ನೌಕರರಿಂದ ‘ಬೆಂಗಳೂರು ಚಲೋಗೆ ಕರೆ ಬೆಂಗಳೂರು, ಜನವರಿ 28: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರಾಜ್ಯ ಸರ್ಕಾರದ ವಿರುದ್ಧ ಸಾರಿಗೆ ನೌಕರರು ಮತ್ತೆ ಡಿದೆದ್ದಿದ್ದು, ನಾಳೆ ‘ಬೆಂಗಳೂರು ಚಲೋ’ಗೆ ಕರೆ ನೀಡಲಾಗಿದೆ. ಸಾರಿಗೆ ನೌಕರರ ಮುಖಂಡ ಅನಂತ್ ಸುಬ್ಬರಾವ್ ನೇತೃತ್ವದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4ರ ವರೆಗೆ ಫ್ರೀಡಂ ಪಾರ್ಕ್​​ನಲ್ಲಿ ಪ್ರತಿಭಟನೆ ನಡೆಯಲಿದ್ದು, ಕಳೆದ ವರ್ಷ ಆಗಸ್ಟ್ 5ರಂದು ಸಾರಿಗೆ ನೌಕರರು ಮುಷ್ಕರ ನಡೆಸಿದ್ದರು. ಆದರೆ ಈ ವರ್ಷದ ಆರಂಭದಲ್ಲೇ ಬೆಂಗಳೂರು ಚಲೋಗೆ ಕರೆ ನೀಡಲಾಗಿದೆ….

Read More

ಪಾಕಿಸ್ತಾನ್ ಸೂಪರ್ ಲೀಗ್​ಗೆ ಮ್ಯಾಕ್ಸ್​ವೆಲ್ ಎಂಟ್ರಿ… ಎಷ್ಟು ಕೋಟಿಗೆ ಗೊತ್ತಾ?

ಇಂಡಿಯನ್ ಪ್ರೀಮಿಯರ್ ಲೀಗ್​ಗೆ (IPL 2026) ಗುಡ್ ಬೈ ಹೇಳಿರುವ ಆಸ್ಟ್ರೇಲಿಯಾದ ಸ್ಫೋಟಕ ದಾಂಡಿಗ ಗ್ಲೆನ್ ಮ್ಯಾಕ್ಸ್​ವೆಲ್ (Glenn Maxwell) ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ (PSL 2026) ಕಣಕ್ಕಿಳಿಯಲಿದ್ದಾರೆ. ಪಿಎಸ್​ಎಲ್​ನ 11ನೇ ಆವೃತ್ತಿಯ ಹರಾಜಿಗೂ ಮುನ್ನ  ಪೇಶಾವರ್ ಝಲ್ಮಿ ಫ್ರಾಂಚೈಸಿಯು ಡೈರೆಕ್ಟನ್ ಸೈನಿಂಗ್ ಆಯ್ಕೆ ಮೂಲಕ ಗ್ಲೆನ್ ಮ್ಯಾಕ್ಸ್​ವೆಲ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಅದರಂತೆ ಪಾಕಿಸ್ತಾನ್ ಸೂಪರ್ ಲೀಗ್​ನ 11ನೇ ಆವೃತ್ತಿಯಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್ ಪೇಶಾವರ್ ಝಲ್ಮಿ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಅಂದರೆ ಬಾಬರ್ ಆಝಂ ಮುನ್ನಡೆಸಲಿರುವ…

Read More

‘ಸು ಫ್ರಮ್ ಸೋ’ ಸುಮೇಧ್ ಬತ್ತಳಿಕೆಯಿಂದ ಬಂತು ‘ತುಳಸಿ’; ಹಾಡು ಕಿವಿಗೆ ಇಂಪು – Kannada News | Sumedh’s ‘Tulasi’ Song: A Hit Music Album Reviving Purandara Dasa’s Devotional Works

‘ಸು ಫ್ರಮ್ ಸೋ’ ಸಿನಿಮಾದ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದು ಸುಮೇಧ್ (Sumedh). ಕಾಲೇಜು ಓದುವಾಗಲೇ ಇಂಪಾದ ಹಾಡುಗಳನ್ನು ನೀಡಿ ಗಮನ ಸೆಳೆದವರು ಅವರು. ಅವರು ಈಗ ತಮ್ಮದೇ ಆದ ಕ್ರಿಯೇಷನ್​​​ಗೆ ಇಳಿದಿದ್ದಾರೆ. ಆಲ್ಬಂ ಹಾಡುಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅದರಲ್ಲೂ ‘ತುಳಸಿ’ ಹಾಡು ಮೆಚ್ಚುಗೆ ಪಡೆದುಕೊಂಡಿದೆ. ನೋಡಲು ಹಾಗೂ ಕೇಳಲೂ ಮುದ ನೀಡುವ ಹಾಡು ಟ್ರೆಂಡ್​​​ನಲ್ಲಿದೆ. ‘ತುಳಸಿ’ ಎಂಬುದು ಪುರಂದರ ದಾಸರ ದಾಸಪದಗಳಿಂದ ತೆಗೆದುಕೊಳ್ಳಲಾಗಿದೆ. ಇದಕ್ಕೆ ಸಂಗೀತ ಸಂಯೋಜನೆ ಮಾಡಿದ್ದು ಸುಮೇಧ್ ಅವರು. ಹಾಡು ಕೇಳಲು…

Read More

ವಿಮಾನ ಪತನದಲ್ಲಿ ಅಜಿತ್ ಪವಾರ್ ಸಾವು: 2023ರಲ್ಲಿ ಕೂಡ ಈ ವಿಮಾನ ಪತನಗೊಂಡಿತ್ತು – Kannada News | Ajit Pawar Plane Crash: Learjet’s Dark History and Flight Safety Concerns Emerge

ನಾಗ್ಪುರ, ಜನವರಿ 28: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್(Ajit Pawar) ಇಂದು ಬೆಳಗ್ಗೆ ವಿಮಾನ ಅಪಘಾತದಲ್ಲಿ ನಿಧನರಾಗಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ಅದೇ ಖಾಸಗಿ ವಿಮಾನವು ಸೆಪ್ಟೆಂಬರ್ 2023 ರಲ್ಲಿ ಕೂಡ ಅಪಘಾತಕ್ಕೀಡಾಗಿತ್ತು ಎನ್ನುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.ಈ ಹಿನ್ನೆಲೆಯಲ್ಲಿ, ವಿಮಾನದ ತಾಂತ್ರಿಕ ಸುರಕ್ಷತೆ ಮತ್ತು ನಿರ್ವಹಣಾ ಕಾರ್ಯವಿಧಾನಗಳ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ. ಬುಧವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಪುಣೆ ಜಿಲ್ಲೆಯ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ , ಲಿಯರ್‌ಜೆಟ್ 45 ಎಂಬ ಖಾಸಗಿ…

Read More

ಮಹಾಂತೇಶ್​​ ಬೀಳಗಿ ಪುತ್ರಿಗೆ ಅನುಕಂಪದ ನೌಕರಿ: ಕೆಲಸ ಎಲ್ಲಿ? ಮಾಹಿತಿ ಇಲ್ಲಿದೆ – Kannada News | Mahantesh Bilagi’s Daughter Appointed to Karnataka Govt Job on Compassionate Grounds

ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಪುತ್ರಿಗೆ ನೌಕರಿ ನೀಡಿ ಆದೇಶ ಬೆಂಗಳೂರು, ಜನವರಿ 28: ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಗೌನಳ್ಳಿ ಕ್ರಾಸ್ ಬಳಿ ಕಾರು ಅಪಘಾತದಲ್ಲಿ ಮೃತಪಟ್ಟಿದ್ದ ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ, ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರ ಪುತ್ರಿ ಚೈತನ್ಯಾ ಬೀಳಗಿಗೆ ಅನುಕಂಪದ ಆಧಾರದಲ್ಲಿ ಕೆಲಸ ನೀಡಿ ರಾಜ್ಯ ಸರ್ಕಾರ ಆದೇಶಿಸಿದೆ. ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿ ಉದ್ಯೋಗ ನೀಡಲಾಗಿದ್ದು, ಜ.2ರಂದು ಸಿಎಂ ನೇತೃತ್ವದಲ್ಲಿ ನಡೆದಿದ್ದ ಸಚಿವ ಸಂಪುಟ…

Read More

ಯೂರೋಪಿಯನ್ ಒಕ್ಕೂಟದೊಂದಿಗಿನ ಒಪ್ಪಂದದಿಂದ ಭಾರತಕ್ಕೆ ಹೆಚ್ಚು ಲಾಭ: ಜೇಮಿಸನ್ – Kannada News | India comes out on top in deal with European Union, says US trade representative Jamieson Greer

ನವದೆಹಲಿ, ಜನವರಿ 28: ಭಾರತ ಮತ್ತು ಯೂರೋಪಿಯನ್ ಯೂನಿಯನ್ ನಡುವಿನ ವ್ಯಾಪಾರ ಒಪ್ಪಂದದ ಬಗ್ಗೆ ಅಮೆರಿಕದವರು ಪ್ರತಿಕ್ರಿಯಿಸಿದ್ದಾರೆ. ಭಾರತಕ್ಕೆ ಒಳ್ಳೆಯ ಒಪ್ಪಂದ ದಕ್ಕಿತು ಎಂದು ಅಮೆರಿಕದ ಟ್ರೇಡ್ ರೆಪ್ರೆಸೆಂಟೇಟಿವ್ ಆದ ಜೇಮೀಸನ್ ಗ್ರೀರ್ (Jamieson Greer) ಅಭಿಪ್ರಾಯಪಟ್ಟಿದ್ದಾರೆ. ‘ಈ ಒಪ್ಪಂದದಲ್ಲಿ ಭಾರತ ಹೆಚ್ಚು ಅನುಕೂಲ ಪಡೆದಿದೆ. ಹೆಚ್ಚು ಮಾರುಕಟ್ಟೆ ಪ್ರವೇಶ ಮತ್ತು ವಲಸೆಗೆ ಅವಕಾಶ ಪಡೆದಿದೆ’ ಎಂದು ಖಾಸಗಿ ವಾಹಿನಿಯೊಂದಕ್ಕೆ ಗ್ರೀರ್ ಪ್ರತಿಕ್ರಿಯಿಸಿದ್ದಾರೆ. ಭಾರತ ಹಾಗೂ ಐರೋಪ್ಯ ಒಕ್ಕೂಟದ ಒಪ್ಪಂದವು ಅಮೆರಿಕದ ಟ್ಯಾರಿಫ್ ಕ್ರಮದ ಪರಿಣಾಮ ಎಂದು…

Read More

ಅರಿಜಿತ್ ಸಿಂಗ್ ಹಾಡು ನಿಲ್ಲಿಸಿದ್ದು ಏಕೆ? ಕೊಟ್ಟ ಕಾರಣ ಏನು? – Kannada News | Why really Arijit Singh quit singing here is the reason

ಅರಿಜಿತ್ ಸಿಂಗ್ (Arijit Singh), ಭಾರತದ ಮಾತ್ರವಲ್ಲ ವಿಶ್ವದ ಅತ್ಯಂತ ಜನಪ್ರಿಯ ಮತ್ತು ಅತಿ ಹೆಚ್ಚು ಕೇಳುಗರನ್ನು ಹೊಂದಿರುವ ಹಾಡುಗಾರರಲ್ಲಿ ಒಬ್ಬರು. ವಿಶ್ವದ ಅತ್ಯಂತ ಜನಪ್ರಿಯ, ದುಬಾರಿ ಗಾಯಕಿ ಟೇಲರ್ವ ಸ್ವಿಫ್ಟ್​ಗಿಂತಲೂ ಅತಿ ಹೆಚ್ಚು ಅಭಿಮಾನಿಗಳನ್ನು ಅವರು ಸ್ಪಾಟಿಫೈ ಹಾಗೂ ಇತರೆ ವೇದಿಕೆಗಳಲ್ಲಿ ಹೊಂದಿದ್ದಾರೆ. ಭಾರತದಲ್ಲಿ ಪ್ರತಿ ವರ್ಷ ಅತಿ ಹೆಚ್ಚು ಕೇಳಲಾಗುವ ಹಾಡುಗಳು ಸಹ ಅರಿಜಿತ್ ಸಿಂಗ್ ಅವರದ್ದೇ ಆಗಿರುತ್ತವೆ. ಅರಿಜಿತ್ ಸಿಂಗ್ ಪ್ರಸ್ತುತ ಭಾರತ ಅತ್ಯಂತ ಬೇಡಿಕೆಯ ಗಾಯಕರು. ವೃತ್ತಿ ಜೀವನದ ಪರಮೋಚ್ಛ ಸ್ಥಿತಿಯಲ್ಲಿ…

Read More

Gold Rate Today: 16,500 ರೂ ಗಡಿದಾಟಿದ ಅಪರಂಜಿ ಚಿನ್ನದ ಬೆಲೆ – Kannada News | Gold Price Today on 28th January 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಜನವರಿ 28: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಯದ್ವಾತದ್ವಾ ಏರುತ್ತಿವೆ. ಚಿನ್ನದ ಬೆಲೆ (Gold Rates) ಗ್ರಾಮ್​ಗೆ 295ರೂನಿಂದ 305 ರೂವರೆಗೆ ಏರಿದೆ. ಬೆಳ್ಳಿ ಬೆಲೆಯಂತೂ ಕಿಲೋಗೆ ನಾಲ್ಕು ಲಕ್ಷ ರೂ ಬೆಲೆ ಮುಟ್ಟಿದೆ. ಆಭರಣ ಚಿನ್ನದ ಬೆಲೆ 15,000 ರೂ ಗಡಿ ದಾಟಿದೆ. ಅಪರಂಜಿ ಚಿನ್ನದ ಬೆಲೆ 16,500 ರೂ ಗಡಿ ದಾಟಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,51,400 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ…

Read More

Video: ಅಜಿತ್ ಪವಾರ್ ಇದ್ದ ವಿಮಾನ ಪತನಗೊಂಡ ದೃಶ್ಯ ಸಿಸಿಟಿವಿಯಲ್ಲಿ ಸೆರೆ – Kannada News | DGCA Investigates Ajit Pawar Plane Crash: Baramati CCTV Footage Key to Unraveling Mystery

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ವಿಮಾನ ಅಪಘಾತದ ಸಿಸಿಟಿವಿ ದೃಶ್ಯಾವಳಿಗಳು ಅಥವಾ ಫೋಟೋಗಳು ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಬಾರಾಮತಿ ವಿಮಾನ ನಿಲ್ದಾಣದ ಸಮೀಪವಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯದಲ್ಲಿ ವಿಮಾನವು ರನ್‌ವೇ ಹತ್ತಿರ ಬರುತ್ತಿದ್ದಂತೆ ದಿಢೀರ್ ನೆಲಕ್ಕೆ ಅಪ್ಪಳಿಸಿ ಬೆಂಕಿ ಹೊತ್ತಿಕೊಳ್ಳುವುದನ್ನಿ ಈ ವಿಡಿಯೋದಲ್ಲಿ ನೋಡಬಹುದು. ವಿಮಾನವು ಎರಡನೇ ಬಾರಿ ಲ್ಯಾಂಡಿಂಗ್ ಮಾಡಲು ಪ್ರಯತ್ನಿಸುತ್ತಿದ್ದಾಗ (Second Approach) ಈ ಘಟನೆ ಸಂಭವಿಸಿದೆ. ಸಿಸಿಟಿವಿ ದೃಶ್ಯದಲ್ಲಿ ವಿಮಾನವು ನಿಯಂತ್ರಣ ಕಳೆದುಕೊಂಡು ವೇಗವಾಗಿ ಭೂಮಿಗೆ ಅಪ್ಪಳಿಸುವುದು…

Read More