Union Budget 2026: ಹಲ್ವಾ ಕಾರ್ಯಕ್ರಮದಲ್ಲಿ ನಿರ್ಮಲಾ ಸೀತಾರಾಮನ್ ಭಾಗಿ; ಬಜೆಟ್ಗೆ ಮುಂಚೆ ನಡೆಯುವ ಇದರ ವಿಶೇಷತೆ ಏನು? – Kannada News | Union budget 2026 halwa ceremony held on jan 27th know its significance
ನವದೆಹಲಿ, ಜನವರಿ 27: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಇಂದು (ಜ. 27) ಮಂಗಳವಾರ ಹಲ್ವಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ದೆಹಲಿಯ ನಾರ್ತ್ ಬ್ಲಾಕ್ನಲ್ಲಿರುವ ಬಜೆಟ್ ಪ್ರೆಸ್ ಕಟ್ಟಡದಲ್ಲಿ ಈ ಕಾರ್ಯಕ್ರಮ ನಡೆಯಿತು. ಬಜೆಟ್ (Union Budget 2026) ಸಿದ್ಧತೆಯ ಅಂತಿಮ ಹಂತದ ಕ್ರಿಯೆ ಈ ಹಲ್ವಾ ಕಾರ್ಯಕ್ರಮದ ಮೂಲಕ ಆಗುತ್ತದೆ. ಬಜೆಟ್ ತಯಾರಿಕೆಯಲ್ಲಿ ತೊಡಗಿರುವ ಹಣಕಾಸು ಸಚಿವಾಲಯದ ಅಡಿಯ ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳು ಹಾಗು ಹಿರಿಯ ಅಧಿಕಾರಿಗಳು ಇದರಲ್ಲಿ ಭಾಗವಹಿಸಿದ್ದರು. ಫೆಬ್ರುವರಿ 1ರಂದು…