All posts by nagaraj11081993

Hamsa Mahapurusha Yoga: 12 ವರ್ಷಗಳ ನಂತರ ಗುರು-ಹಂಸ ಮಹಾ ಪುರುಷ ರಾಜಯೋಗ; ಈ 3 ರಾಶಿಗೆ ಅದೃಷ್ಟದ ಸುರಿಮಳೆ – Kannada News | Hamsa Mahapurusha Yoga: Jupiter Transit Blesses 3 Zodiacs with Immense Luck and Success

12 ವರ್ಷಗಳ ನಂತರ, ಗುರುವಿನ ಸಂಚಾರದಿಂದಾಗಿ, ಹಂಸ ಮಹಾ ಪುರುಷ ಯೋಗವು ರೂಪುಗೊಳ್ಳಲಿದೆ. ಇದರೊಂದಿಗೆ, ಮೂರು ರಾಶಿಗಳ ಜನರು ಹೆಚ್ಚಿನ ಅದೃಷ್ಟವನ್ನು ಪಡೆಯಲಿದ್ದಾರೆ. ಅವರು ಕೈಗೊಳ್ಳುವ ಕೆಲಸದಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುತ್ತಾರೆ. ವಿಶೇಷವಾಗಿ ಜೂನ್ 2026 ರಿಂದ ಈ ಯೋಗವು ಹೆಚ್ಚು ಸಕ್ರಿಯವಾಗಲಿದೆ. ಹನ್ನೆರಡು ರಾಶಿಗಳ ಪೈಕಿ ಆ ಮೂರು ಅದೃಷ್ಟದ ರಾಶಿಗಳು ಯಾವುವು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಹಂಸ ಮಹಾಪುರುಷ ಯೋಗವು ವೈದಿಕ ಜ್ಯೋತಿಷ್ಯದಲ್ಲಿ ಗುರು ಗ್ರಹದಿಂದ ರೂಪುಗೊಳ್ಳುವ ಒಂದು ಶಕ್ತಿಶಾಲಿ ರಾಜಯೋಗವಾಗಿದ್ದು, ಗುರುವು ತನ್ನ ಸ್ವಕ್ಷೇತ್ರ (ಮೀನ, ಧನು) ಅಥವಾ ಉಚ್ಚ ಕ್ಷೇತ್ರ (ಕರ್ಕ) ರಾಶಿಯಲ್ಲಿ ಕೇಂದ್ರ ಸ್ಥಾನದಲ್ಲಿ (1, 4, 7, 10ನೇ ಮನೆ) ಇದ್ದಾಗ ಉಂಟಾಗುತ್ತದೆ, ಇದು ವ್ಯಕ್ತಿಗೆ ಜ್ಞಾನ, ಸಂಪತ್ತು, ಗೌರವ ಮತ್ತು ಧಾರ್ಮಿಕ ಪ್ರವೃತ್ತಿಯನ್ನು ತರುತ್ತದೆ.

ಕನ್ಯಾ ರಾಶಿ:

ಮಹಾ ಪುರುಷ ರಾಜಯೋಗವನ್ನು ರೂಪಿಸುವ ಗುರುವು ಕನ್ಯಾ ರಾಶಿಯವರಿಗೆ ಆದಾಯದ ವಿಷಯದಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ತರುತ್ತದೆ. ಗುರುವು ನಿಮ್ಮ ರಾಶಿಯಿಂದ 11 ನೇ ಮನೆಯಲ್ಲಿ ಸಾಗುತ್ತಿರುವುದರಿಂದ, ಈ ಸಮಯದಲ್ಲಿ ನಿಮ್ಮ ಆದಾಯ ಗಮನಾರ್ಹವಾಗಿ ಹೆಚ್ಚಾಗಬಹುದು. ನೀವು ಹೊಸ ಮಾರ್ಗಗಳ ಮೂಲಕವೂ ಹಣವನ್ನು ಗಳಿಸುವಿರಿ. ಷೇರು ಮಾರುಕಟ್ಟೆ, ಊಹಾಪೋಹ ಮತ್ತು ಲಾಟರಿ ಮೂಲಕ ನೀವು ಲಾಭ ಗಳಿಸುವ ಸಾಧ್ಯತೆಯಿದೆ. ನಿಮ್ಮ ಗೌರವ ಹೆಚ್ಚಾಗುತ್ತದೆ. ನಿಮ್ಮ ವೃತ್ತಿಜೀವನವು ಉನ್ನತ ಮಟ್ಟವನ್ನು ತಲುಪುತ್ತದೆ. ಉದ್ಯಮಿಗಳು ದೊಡ್ಡ ವ್ಯಾಪಾರ ಒಪ್ಪಂದಗಳನ್ನು ಮಾಡುತ್ತಾರೆ. ಕನ್ಯಾ ರಾಶಿಯವರು ತಮ್ಮ ಮಕ್ಕಳಿಗೆ ಸಂಬಂಧಿಸಿದ ಒಳ್ಳೆಯ ಸುದ್ದಿಗಳನ್ನು ಕೇಳುತ್ತಾರೆ.

ತುಲಾ ರಾಶಿ:

ಗುರು-ಹಂಸ ಮಹಾಪುರುಷ ರಾಜಯೋಗವು ರೂಪುಗೊಳ್ಳಲಿರುವುದರಿಂದ ತುಲಾ ರಾಶಿಯವರಿಗೆ ಅಪಾರ ಲಾಭಗಳು ದೊರೆಯುತ್ತವೆ. ಈ ರಾಜಯೋಗವು ನಿಮ್ಮ ಸಂಚಾರ ಜಾತಕದ ಕರ್ಮ ಮನೆಯಲ್ಲಿ ರೂಪುಗೊಳ್ಳಲಿದೆ. ಆದ್ದರಿಂದ ಈ ಸಮಯದಲ್ಲಿ ನೀವು ನಿಮ್ಮ ಕೆಲಸ ಮತ್ತು ವೃತ್ತಿಜೀವನದಲ್ಲಿ ಉತ್ತಮ ಪ್ರಗತಿಯನ್ನು ನೋಡುತ್ತೀರಿ. ಕೆಲಸ ಮಾಡುವವರು ಕಚೇರಿಯಲ್ಲಿ ತಮ್ಮ ಕೆಲಸಕ್ಕೆ ಮೆಚ್ಚುಗೆಯನ್ನು ಪಡೆಯುತ್ತಾರೆ. ಈ ರಾಶಿಚಕ್ರ ಚಿಹ್ನೆಯ ಜನರು ತಮ್ಮ ಹಿರಿಯರಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ಈ ಸಮಯದಲ್ಲಿ, ಭವಿಷ್ಯದ ಯೋಜನೆಗಳು ಬಹಳ ವ್ಯವಸ್ಥಿತ ಮತ್ತು ಬಲವಾಗಿ ಕಾಣುತ್ತವೆ. ಸಾಮಾಜಿಕ ಬೆಂಬಲವಿರುತ್ತದೆ. ಈ ಸಮಯದಲ್ಲಿ, ಉದ್ಯಮಿಗಳು ಉತ್ತಮ ಆರ್ಥಿಕ ಲಾಭಗಳನ್ನು ಸಾಧಿಸಬಹುದು. ಹೊಸ ಉದ್ಯಮಿಗಳು ಪ್ರಾರಂಭಿಸಲು ಇದು ಒಳ್ಳೆಯ ಸಮಯ.

ಇದನ್ನೂ ಓದಿ: ಮೃತ ವ್ಯಕ್ತಿ ನಿಮ್ಮ ಶತ್ರುವೇ ಆಗಿದ್ದರೂ ಅವರ ಬಗ್ಗೆ ಯಾಕೆ ಕೆಟ್ಟದಾಗಿ ಮಾತನಾಡಬಾರದು?

ವೃಶ್ಚಿಕ ರಾಶಿ:

ಈ ರಾಶಿಯು ಹಂಸ ಮಹಾ ಪುರುಷ ರಾಜಯೋಗದಿಂದ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಈ ರಾಜಯೋಗವು ನಿಮ್ಮ ರಾಶಿಯಿಂದ ಒಂಬತ್ತನೇ ಮನೆಯಲ್ಲಿ ರೂಪುಗೊಳ್ಳಲಿದೆ. ಇಲ್ಲಿ, ಮಂಗಳನ ಸ್ಥಾನವು ತುಂಬಾ ಬಲವಾಗಿರುತ್ತದೆ. ಆದ್ದರಿಂದ, ಈ ಸಮಯದಲ್ಲಿ ನೀವು ಯಾವುದೇ ಕೆಲಸವನ್ನು ಕೈಗೊಂಡರೂ, ನಿಮಗೆ ಅದೃಷ್ಟ ಸಿಗುತ್ತದೆ. ನೀವು ಕೆಲವು ಧಾರ್ಮಿಕ ಅಥವಾ ಶುಭ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಬಹುದು. ಈ ಅವಧಿಯು ಆಧ್ಯಾತ್ಮಿಕ ಮತ್ತು ವೈಯಕ್ತಿಕ ಬೆಳವಣಿಗೆಗೆ ಸಕಾರಾತ್ಮಕವಾಗಿರುತ್ತದೆ. ನೀವು ಸೃಜನಶೀಲ ಚಟುವಟಿಕೆಗಳು ಮತ್ತು ಕಲಾತ್ಮಕ ಪ್ರಯತ್ನಗಳಲ್ಲಿ ಯಶಸ್ಸನ್ನು ಸಾಧಿಸುವಿರಿ. ಈ ಸಮಯದಲ್ಲಿ ಪ್ರಯಾಣ ಅಥವಾ ಹೊಸ ಸಂಬಂಧಗಳು ಹೊಸ ಅವಕಾಶಗಳನ್ನು ತೆರೆಯುತ್ತವೆ. ನಿಮ್ಮ ವರ್ಧಿತ ಸೃಜನಶೀಲತೆಯಿಂದ ನೀವು ನಿಮ್ಮ ಜೀವನದಲ್ಲಿ ಉತ್ತಮ ಯಶಸ್ಸನ್ನು ಸಾಧಿಸುವಿರಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs NZ: ಸಂಕಷ್ಟದಲ್ಲಿದ್ದ ತಂಡಕ್ಕೆ ಅಜೇಯ ಶತಕದ ಮೂಲಕ ಆಸರೆಯಾದ ಕೆಎಲ್ ರಾಹುಲ್ – Kannada News | Rahul’s Unbeaten 112 Rescues India in 2nd ODI vs NZ | Rajkot Match

ರಾಜ್‌ಕೋಟ್‌ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಭರ್ಜರಿ ಶತಕ ಬಾರಿಸಿ ತಂಡಕ್ಕೆ ಆಸರೆಯಾಗಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ ಆರಂಭಿಸಿದ ಟೀಂ ಇಂಡಿಯಾಕ್ಕೆ ಪ್ರಮುಖ ಆಟಗಾರರ ವಿಕೆಟ್ ಪತನ ಆಘಾತವನ್ನುಂಟು ಮಾಡಿತ್ತು. ಆದರೆ ಈ ಪಂದ್ಯದಲ್ಲಿ ತಂಡದ ಪರ ತಾಳ್ಮೆಯ ಇನ್ನಿಂಗ್ಸ್ ಕಟ್ಟಿದ ರಾಹುಲ್, ತಂಡವನ್ನು ಸಂಕಷ್ಟದಿಂದ ಪಾರು ಮಾಡಿದಲ್ಲದೆ, ತಮ್ಮ ಏಕದಿನ ವೃತ್ತಿಜೀವನದ 8ನೇ ಶತಕವನ್ನು ಪೂರ್ಣಗೊಳಿಸಿದರು. ಕೊನೆಯವರೆಗೂ ಅಜೇಯರಾಗಿ ಉಳಿದ ರಾಹುಲ್ ತಂಡವನ್ನು 284 ರನ್​ಗಳಿಗೆ ಕೊಂಡೊಯ್ದಿದ್ದು ಮಾತ್ರವಲ್ಲದೆ ತಾವು ಕೂಡ 92 ಎಸೆತಗಳಲ್ಲಿ ಅಜೇಯ 112 ರನ್ ಬಾರಿಸಿದರು.

Source link

ಬೆಳಗಾವಿಯಲ್ಲಿ ಶ್ವಾನಗಳ ಅಟ್ಟಹಾಸ: ಒಂದೇ ವರ್ಷದಲ್ಲಿ 10 ಜನರನ್ನು ಬಲಿ ಪಡೆದ ಬೀದಿನಾಯಿಗಳು – Kannada News | Belagavi Dog Menace Escalates: 21K Bites, 10 Deaths in a Year, Public Outcry

ಬೆಳಗಾವಿ, ಜನವರಿ 14: ಗಡಿ ಜಿಲ್ಲೆ ಬೆಳಗಾವಿಯಲ್ಲಿ (Belagavi) ಬೀದಿ ನಾಯಿಗಳ (Stray Dog) ಅಟ್ಟಹಾಸ ಜೋರಾಗಿದೆ. ಮಕ್ಕಳ ಮೇಲೆ ನಾಯಿಗಳ ದಾಳಿ ಮುಂದುವರೆದಿದ್ದು, ಅಧಿಕಾರಿಗಳ ವಿರುದ್ಧ ಪೋಷಕರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಇನ್ನೊಂದು ಕಡೆ ಒಂದು ವರ್ಷದ ಅವಧಿಯಲ್ಲಿ ನಾಯಿ ಕಡಿತಕ್ಕೆ 10 ಜನ ಬಲಿಯಾಗಿದ್ದು, ಎಲ್ಲರಲ್ಲಿ ಆತಂಕ ಮೂಡಿಸಿದೆ. ಇನ್ನೂ ಮಹಾನಗರ ಪಾಲಿಕೆಯಲ್ಲಿ ನಾಯಿ ಹಿಡಿಯುವ ಚರ್ಚೆ ಕೂಡ ನಡೆದಿದೆ.

ಬೀದಿ ನಾಯಿಗೆ ನಲುಗಿದ ಜನರು 

ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ಬೀದಿ ನಾಯಿಗಳ ದಾಳಿಗೆ ಜನರು ಅಕ್ಷರಶಃ ನಲುಗಿ ಹೋಗಿದ್ದಾರೆ. ಇಂದು ಚಿಕ್ಕೋಡಿ ಪಟ್ಟಣದ ವೆಂಕಟೇಶ ಗಲ್ಲಿಯಲ್ಲಿ ಬೀದಿ ನಾಯಿಗಳು ಹಿಂಡು ಕಟ್ಟಿಕೊಂಡು ಮನೆ ಮುಂದೆ ಆಟವಾಡುತ್ತಿದ್ದ ಎರಡು ವರ್ಷದ ಮಗುವಿನ ಮೇಲೆ ದಾಳಿ ನಡೆಸಿವೆ. ಸ್ಥಳೀಯರು ಮಗುವನ್ನ ರಕ್ಷಣೆ ಮಾಡಿ ಪ್ರಾಣಾಪಾಯದಿಂದ ಕಾಪಾಡಿದ್ದಾರೆ.

ಇದನ್ನೂ ಓದಿ: ಹಾವೇರಿಯಲ್ಲಿ ಹೆಚ್ಚಿದ ಬೀದಿ ನಾಯಿಗಳ ದಾಳಿ: ಇಬ್ಬರು ಮಕ್ಕಳಿಗೆ ಗಂಭೀರ ಗಾಯ

ರುತ್ವಿಕ್ ಕುದರೆ ಎಂಬ ಮಗುವಿನ ಮೇಲೆ ದಾಳಿ ಮಾಡಿದ್ದ ನಾಯಿಗಳು, ಮುಖ ಕಚ್ಚಿ ಗಾಯಗೊಳಿಸಿದ್ದು ಮಗುವಿಗೆ ಚಿಕಿತ್ಸೆ ಕೊಡಿಸಿ ಮನೆಯಲ್ಲಿ ಆರೈಕೆ ಮಾಡಲಾಗುತ್ತಿದೆ. ಅಂಗನವಾಡಿ ಪಕ್ಕದಲ್ಲೇ ಘಟನೆ ಆಗಿದ್ದು ಹೀಗಾಗಿ ನಾಯಿಗಳನ್ನ ಬೇರೆಡೆ ಸ್ಥಳಾಂತರ ಮಾಡುವಂತೆ ಅಂಗನವಾಡಿ ಶಿಕ್ಷಕಿ ಮನವಿ ಮಾಡಿಕೊಂಡಿದ್ದಾರೆ. ಇತ್ತ ಅಧಿಕಾರಿಗಳ ಗಮನಕ್ಕೆ ತಂದರೂ ನಾಯಿಗಳನ್ನ ಹಿಡಿಯುವ ಕೆಲಸ ಆಗುತ್ತಿಲ್ಲ ಎಂದು ಬಾಲಕನ ತಂದೆ ಆನಂದ ಕುದರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಬೆಳಗಾವಿ ನಗರದಲ್ಲಿ ಒಂದು ಮಗುವಿಗೆ ನಾಯಿ ಕಚ್ಚಿ ಗಾಯಗೊಳಿಸಿತ್ತು. ಹೀಗೆ ಪ್ರತಿಯೊಂದು ಭಾಗದಲ್ಲೂ ನಾಯಿಗಳ ಅಟ್ಟಹಾಸ ಜೋರಾಗಿದ್ದು ಮಹಿಳೆಯರು, ಮಕ್ಕಳು, ವೃದ್ಧರು ಮನೆಯಿಂದ ಹೊರ ಬರಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ.

ಹತ್ತು ಜನರು ಸಾವು 

ಇನ್ನೂ ಬೆಳಗಾವಿ ಜಿಲ್ಲೆಯಲ್ಲಿ 2025 ಒಂದು ವರ್ಷದ ಅವಧಿಯಲ್ಲಿ ಒಂದಲ್ಲಾ, ಎರಡಲ್ಲಾ ಬರೋಬ್ಬರಿ 10 ಜನ ನಾಯಿ ಕಡಿತದಿಂದಲೇ ಸಾವನ್ನಪ್ಪಿದ್ದಾರೆ. ಇದರ ಜೊತೆಗೆ 21,703 ಜನರಿಗೆ ನಾಯಿಗಳು ಕಚ್ಚಿ ಗಾಯಗೊಳಿಸಿವೆ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ನಾಯಿಗಳ ಪರಾಕ್ರಮ ಮೆರೆಯುತ್ತಿದ್ದರು ಜಿಲ್ಲಾಡಳಿತ ಸೈಲೆಂಟ್ ಆಗಿದೆ ಅನ್ನೋ ಕೂಡ ಆಕ್ರೋಶಕ್ಕೆ ಕಾರಣವಾಗಿದೆ.

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದ್ದಿಷ್ಟು 

ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ನೀಡಿದ ದಾಖಲೆಗಳೇ ನಾಯಿಗಳ ದಾಳಿಯ ಭೀಕರತೆ ಬಿಚ್ಚಿಡುತ್ತಿದೆ. ಬೀದಿ ನಾಯಿ ದಾಳಿ ಬಗ್ಗೆ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಕೂಡ ಚರ್ಚೆ ಆಗಿದ್ದು, ನಾಯಿಗಳ ಸ್ಥಳಾಂತರ ಹಾಗೂ ಸಂತಾನಹರಣ ಚಿಕಿತ್ಸೆ ಕುರಿತು ಕೂಡ ಚರ್ಚೆ ಮಾಡಲಾಗಿದ್ದು, ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇತ್ತ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ನಾಯಿಗಳ ಸ್ಥಳಾಂತರಕ್ಕೆ ಪ್ಲ್ಯಾನ್​​ ಮಾಡಿದ್ದು, ಅದಕ್ಕೆ ಬೇಕಾದ ಶೆಲ್ಟರ್ ಕೂಡ ನಿರ್ಮಾಣ ಮಾಡಿ ಸರಿ ಮಾಡುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಬೀದಿ ನಾಯಿ ಸಮೀಕ್ಷೆಗೆ ಶಿಕ್ಷಣ ಸಂಸ್ಥೆಗಳ ವಿರೋಧ; ನಾವೇನು ಪಾಠ ಮಾಡಬೇಕಾ, ನಾಯಿಗಳನ್ನು ಹಿಡಿಯಬೇಕಾ? ಎಂದ ಶಿಕ್ಷಕರು

ಬೆಳಗಾವಿ ನಗರ ಹಾಗೂ ಗ್ರಾಮೀಣ ವ್ಯಾಪ್ತಿಯಲ್ಲಿ ಇತ್ತಿಚೇಗೆ ಬೀದಿ ನಾಯಿಗಳ ಸಂಖ್ಯೆ ಏರಿಕೆಯಾಗಿದೆ. ಹೀಗಾಗಿ ಮಕ್ಕಳು ಸೇರಿದಂತೆ ಹೆಚ್ಚಿನ ಪ್ರಮಾಣದಲ್ಲಿ ಎಲ್ಲರ ಮೇಲೆ ದಾಳಿ ನಡೆಸಿವೆ ಅನ್ನೋದಕ್ಕೆ ಆರೋಗ್ಯ ಇಲಾಖೆ ನೀಡಿದ ಅಂಕಿ ಅಂಶಗಳೇ ಸಾಕ್ಷಿ. ಇತ್ತ ನಾಯಿ ದಾಳಿಯಿಂದ 10 ಜನ ಕಳೆದ ವರ್ಷದಲ್ಲಿ ಸಾವನ್ನಪ್ಪಿರುವುದು ಭಯ ಹುಟ್ಟಿಸಿದೆ. ಸದ್ಯ ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಕೊಂಡು ಹೆಚ್ಚಿರುವ ನಾಯಿಗಳನ್ನ ಬೇರೆಡೆ ಸ್ಥಳಾಂತರ ಮಾಡಬೇಕಿದೆ. ಜೊತೆಗೆ ನಾಯಿ ಕಚ್ಚಿಸಿಕೊಂಡವರು ಕೂಡ ತಕ್ಷಣ ಚಿಕಿತ್ಸೆ ಪಡೆದುಕೊಂಡು ಜೀವ ಉಳಿಸಿಕೊಳ್ಳುವುದು ಒಳಿತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 4:51 pm, Wed, 14 January 26

Source link

BOM Recruitment 2026: ಬ್ಯಾಂಕ್ ಆಫ್ ಮಹಾರಾಷ್ಟ್ರ 600 ಅಪ್ರೆಂಟಿಸ್ ನೇಮಕಾತಿ; ಪದವೀಧರರು ಅರ್ಹರು – Kannada News | Bank of Maharashtra Apprentice Recruitment 2026: Apply for 600 Posts Online

ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ಮಾಡುವ ಕನಸು ಕಾಣುತ್ತಿರುವವರಿಗೆ ಇಲ್ಲಿದೆ ಗುಡ್​​ ನ್ಯೂಸ್​. ಬ್ಯಾಂಕ್ ಆಫ್ ಮಹಾರಾಷ್ಟ್ರ 600 ಅಪ್ರೆಂಟಿಸ್ ಹುದ್ದೆಗಳನ್ನು ಘೋಷಿಸಿದೆ. ಒಂದು ಸಣ್ಣ ಅಧಿಸೂಚನೆಯನ್ನು ಸಹ ಹೊರಡಿಸಲಾಗಿದೆ. ಆನ್‌ಲೈನ್ ಅರ್ಜಿ ಪ್ರಕ್ರಿಯೆಯು ಜನವರಿ 15 ರಿಂದ ಪ್ರಾರಂಭವಾಗಲಿದೆ. ಆಸಕ್ತ ಅಭ್ಯರ್ಥಿಗಳು ಬ್ಯಾಂಕಿನ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

ಅಪ್ರೆಂಟಿಸ್‌ಶಿಪ್ ಎಂದರೇನು?

ಅಪ್ರೆಂಟಿಸ್‌ಶಿಪ್ ಎನ್ನುವುದು ಒಂದು ರೀತಿಯ ತರಬೇತಿಯಾಗಿದ್ದು, ಇದರಲ್ಲಿ ಒಂದು ಸಂಸ್ಥೆಯಲ್ಲಿ ಕೆಲಸ ಮಾಡುತ್ತಾ ತಂತ್ರಗಳನ್ನು ಕಲಿಯುವುದು ಒಳಗೊಂಡಿರುತ್ತದೆ. ಇದು ಸಾಮಾನ್ಯವಾಗಿ ನಿಗದಿತ ಅವಧಿಗೆ, ಸಾಮಾನ್ಯವಾಗಿ ಆರು ತಿಂಗಳು ಅಥವಾ ಒಂದು ವರ್ಷ ಇರುತ್ತದೆ. ಈ ಅವಧಿಯಲ್ಲಿ, ಅಭ್ಯರ್ಥಿಗಳು ಬ್ಯಾಂಕ್ ಕೆಲಸದಲ್ಲಿ ಪ್ರಾಯೋಗಿಕ ತರಬೇತಿಯನ್ನು ಪಡೆಯುತ್ತಾರೆ. ಇದು ಹೊಸಬರಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಇದು ನಿಮ್ಮ ಸಿವಿಯನ್ನು ಬಲಪಡಿಸುತ್ತದೆ ಮತ್ತು ಅದರ ಮೌಲ್ಯವನ್ನು ಹೆಚ್ಚಿಸುತ್ತದೆ. ನೀವು ಪ್ರಾಯೋಗಿಕವಾಗಿ ತತ್ವಗಳನ್ನು ಕಲಿತಿದ್ದರೆ, ನಿಮಗೆ ಉದ್ಯೋಗ ಸಿಗುವ ಸಾಧ್ಯತೆಗಳು ಹೆಚ್ಚಾಗುತ್ತವೆ.

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಪಡೆದಿರಬೇಕು . ಅವರು ಸ್ಥಳೀಯ ಭಾಷೆಯನ್ನು ಅರ್ಥಮಾಡಿಕೊಳ್ಳಲು, ಓದಲು, ಬರೆಯಲು ಮತ್ತು ಮಾತನಾಡಲು ತಿಳಿದಿರಬೇಕು. ಅವರು ಭಾಷೆಯನ್ನು ಅಧ್ಯಯನ ಮಾಡಿದ್ದಾರೆಂದು ತೋರಿಸುವ 10 ನೇ / 12 ನೇ ತರಗತಿಯ ಅಂಕಪಟ್ಟಿ ಅಗತ್ಯವಿದೆ.

ವಯೋಮಿತಿ:

ಅಭ್ಯರ್ಥಿಗಳು ಕನಿಷ್ಠ 20 ವರ್ಷ ವಯಸ್ಸಿನವರಾಗಿರಬೇಕು ಮತ್ತು 28 ವರ್ಷಕ್ಕಿಂತ ಹೆಚ್ಚಿರಬಾರದು. ಆದಾಗ್ಯೂ, ಮೀಸಲಾತಿ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.

ಇದನ್ನೂ ಓದಿ: ಗ್ರಾಮ ಪಂಚಾಯತ್ನಲ್ಲಿ ಬಿಲ್ ಕಲೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ; ಪಿಯುಸಿ ಆಗಿದ್ರೆ ಸಾಕು

ಅರ್ಜಿ ಸಲ್ಲಿಸುವುದು ಹೇಗೆ?

  • ಈ ನೇಮಕಾತಿಗಾಗಿ, ಬ್ಯಾಂಕ್ ತನ್ನ ಅಧಿಕೃತ ವೆಬ್‌ಸೈಟ್ bankofmaharashtra.bank.in ನಲ್ಲಿ ಆನ್‌ಲೈನ್ ಅರ್ಜಿ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ.
  • ನೀವು ಮೊದಲು ನೋಂದಾಯಿಸಿಕೊಳ್ಳಬೇಕು, ನಂತರ ನೀವು ಸ್ವೀಕರಿಸಿದ ಲಾಗಿನ್ ರುಜುವಾತುಗಳನ್ನು ಬಳಸಿಕೊಂಡು ವೆಬ್‌ಸೈಟ್‌ಗೆ ಲಾಗಿನ್ ಆಗಬೇಕು.
  • ನಂತರ ಅರ್ಜಿ ನಮೂನೆಯಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಹಂತ ಹಂತವಾಗಿ ಭರ್ತಿ ಮಾಡಿ.
  • ನಿಮ್ಮ ಇತ್ತೀಚಿನ ಫೋಟೋ ಮತ್ತು ಸಹಿಯನ್ನು ಸರಿಯಾದ ಗಾತ್ರದಲ್ಲಿ ಡಾಕ್ಯುಮೆಂಟ್ ಅಪ್‌ಲೋಡ್ ವಿಭಾಗದಲ್ಲಿ ಅಪ್‌ಲೋಡ್ ಮಾಡಿ.
  • ಅರ್ಜಿ ಶುಲ್ಕವನ್ನು ಪಾವತಿಸಿ ಮತ್ತು ನಮೂನೆಯ ಪ್ರಿಂಟ್ ತೆಗೆದುಕೊಂಡು ಅದನ್ನು ಸುರಕ್ಷಿತವಾಗಿ ಇರಿಸಿ.
  • ಮೆರಿಟ್ ಪಟ್ಟಿಯಲ್ಲಿ ನಿಮ್ಮ ಹೆಸರು ಕಾಣಿಸಿಕೊಂಡ ನಂತರ, ದಾಖಲೆ ಪರಿಶೀಲನೆಗಾಗಿ ನೀವು ಎಲ್ಲಾ ದಾಖಲೆಗಳೊಂದಿಗೆ ಬ್ಯಾಂಕ್ ಅನ್ನು ತಲುಪಬೇಕಾಗುತ್ತದೆ.
  • ಈ ನೇಮಕಾತಿಗೆ ಸಂಬಂಧಿಸಿದಂತೆ ಒಂದು ಕಿರು ಅಧಿಸೂಚನೆಯನ್ನು ಇದೀಗ ಬಿಡುಗಡೆ ಮಾಡಲಾಗಿದೆ. ವಿವರವಾದ ಅಧಿಸೂಚನೆಯು ಶೀಘ್ರದಲ್ಲೇ ಬ್ಯಾಂಕಿನ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಉಗುರು ಕಚ್ಚುವ ಅಭ್ಯಾಸ ನಿಮಗೂ ಇದ್ಯಾ? ಹಾಗಿದ್ರೆ ಈ ವಿಷಯಗಳನ್ನು ತಿಳಿದುಕೊಳ್ಳಿ – Kannada News | Risks of Biting Nails with Teeth

ಉಗುರು ಕಚ್ಚುವುದು (Biting Nails) ಸಾಮಾನ್ಯ. ಆದರೆ ಇದು ಆರೋಗ್ಯಕ್ಕೆ ಬಹಳ ಹಾನಿಕಾರಕ ಅಭ್ಯಾಸ ಎಂಬುದು ನಿಮಗೆ ತಿಳಿದಿದೆಯೇ, ಹೌದು, ಇದು ಒತ್ತಡ, ಆತಂಕ ಅಥವಾ ಬೇಸರದಿಂದ ಪ್ರಾರಂಭವಾಗುತ್ತದೆ. ಅನೇಕರು ಇದನ್ನು ಸಣ್ಣ ಅಭ್ಯಾಸವೆಂದು ನಿರ್ಲಕ್ಷಿಸುತ್ತಾರೆ, ಆದರೆ ಕಾಲಾನಂತರದಲ್ಲಿ ಇದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಉಗುರು ಕಚ್ಚುವುದರಿಂದ ಅದರಲ್ಲಿನ ಕೊಳಕು, ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳು ಬಾಯಿಯ ಮೂಲಕ ನೇರವಾಗಿ ದೇಹವನ್ನು ಪ್ರವೇಶಿಸುತ್ತದೆ. ಇದು ಬಾಯಿ, ಹೊಟ್ಟೆ ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ, ಈ ಅಭ್ಯಾಸ ಹಲ್ಲುಗಳ ರಚನೆ ಮತ್ತು ಒಸಡುಗಳ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹಾಗಾದರೆ ಉಗುರು ಕಚ್ಚುವುದರಿಂದ ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ ಮತ್ತು ಅವುಗಳನ್ನು ತಡೆಯುವುದು ಹೇಗೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಉಗುರು ಕಚ್ಚುವ ಅಭ್ಯಾಸದಿಂದ ದೇಹದಲ್ಲಿ ಯಾವ ರೀತಿಯ ಬದಲಾವಣೆಗಳಾಗುತ್ತೆ?

ಆರ್‌ಎಂಎಲ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕ ಪ್ರೊಫೆಸರ್ ಡಾ. ಸುಭಾಷ್ ಗಿರಿ ಅವರು ಹೇಳುವ ಪ್ರಕಾರ, ಉಗುರು ಕಚ್ಚುವುದರಿಂದ ಹೊಟ್ಟೆಗೆ ಸಂಬಂಧಪಟ್ಟ ಸೋಂಕುಗಳ ಅಪಾಯ ಹೆಚ್ಚಾಗುತ್ತದೆ. ಏಕೆಂದರೆ ಉಗುರುಗಳಲ್ಲಿನ ಕೊಳಕು ಬ್ಯಾಕ್ಟೀರಿಯಾಗಳು ದೇಹವನ್ನು ಪ್ರವೇಶಿಸುತ್ತವೆ. ಇದು ಅತಿಸಾರ, ಹೊಟ್ಟೆ ನೋವು ಮತ್ತು ವಾಂತಿಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಅಷ್ಟು ಮಾತ್ರವಲ್ಲ, ಒಸಡುಗಳ ಊತ, ರಕ್ತಸ್ರಾವ ಮತ್ತು ಹಲ್ಲಿನ ಸೋಂಕುಗಳು ಸಹ ಕಂಡುಬರಬಹುದು. ಜೊತೆಗೆ ನಿರಂತರವಾಗಿ ಉಗುರು ಕಚ್ಚುವುದರಿಂದ ಹಲ್ಲುಗಳಿಗೆ ಹಾನಿಯಾಗಬಹುದು, ಕ್ರಮೇಣ ಹಲ್ಲು ಸವೆಯಬಹುದು, ವಕ್ರ ಹಲ್ಲುಗಳಿಗೆ ಕಾರಣವಾಗಬಹುದು.

ಇದನ್ನೂ ಓದಿ: ಒಸಡುಗಳಲ್ಲಿ ರಕ್ತ ಬರುವುದು ಡಯಾಬಿಟಿಸ್ ಬರುವ ಮುನ್ಸೂಚನೆಯೇ? ಈ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ

ಉಗುರು ಕಚ್ಚುವ ಅಭ್ಯಾಸಕ್ಕೆ ಕಡಿವಾಣ ಹಾಕುವುದು ಹೇಗೆ?

ಉಗುರು ಕಚ್ಚುವ ಅಭ್ಯಾಸವನ್ನು ತಡೆಯಲು ಮೊದಲು ಅದರ ಕಾರಣಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು, ಯೋಗ, ಧ್ಯಾನ ಮತ್ತು ಆಳವಾದ ಉಸಿರಾಟ ಸೇರಿದಂತೆ ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸಿಕೊಳ್ಳಿ. ಜೊತೆಗೆ ಉಗುರು ಕಚ್ಚುವುದನ್ನು ತಡೆಯಲು ಅವುಗಳನ್ನು ಚಿಕ್ಕದಾಗಿ ಕತ್ತರಿಸುತ್ತೀರಿ. ಅಗತ್ಯವಿದ್ದರೆ, ಸಲಹೆಗಾರರು ಅಥವಾ ವೈದ್ಯರಿಂದ ಸಹಾಯ ಪಡೆಯಿರಿ. ಯಾವಾಗಲೂ ಬಾಯಿ ಮತ್ತು ಕೈಗಳ ಶುಚಿತ್ವವನ್ನು ಕಾಪಾಡಿಕೊಳ್ಳಿ. ಒತ್ತಡ ಹೆಚ್ಚಾದಾಗ ವಿರಾಮ ತೆಗೆದುಕೊಳ್ಳಿ. ಮಕ್ಕಳಲ್ಲಿ ಈ ಅಭ್ಯಾಸ ಕಂಡುಬರುವ ಮೊದಲೇ ಈ ಬಗ್ಗೆ ಗಮನ ಕೊಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದೇಗುಲಕ್ಕೆಂದು ಹೋದ ಬಾಲಕ ಕೆರೆಯಲ್ಲಿ ಹೆಣವಾಗಿ ಪತ್ತೆ: ಪ್ರಾಣಿ ದಾಳಿಯೋ? ಕೊಲೆಯೋ? – Kannada News | Beltangady Teen Found Dead in Pond; Murder Suspected

ಮಂಗಳೂರು, ಜನವರಿ 14: ಧನುರ್ಮಾಸ ಹಿನ್ನೆಲೆ ದೇಗುಲಕ್ಕೆಂದು ಮುಜಾನೆಯೇ ಮನೆಯಿಂದ ಹೊರಟಿದ್ದ 9ನೇ ತರಗತಿಯ ಬಾಲಕನೊಬ್ಬ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ನಿವಾಸಿ ಸುಮಂತ್​​ (15) ಮೃತ ದುರ್ದೈವಿಯಾಗಿದ್ದು, ಬಾಲಕನ ಸಾವಿನ ಬಗ್ಗೆ ಹಲವು ಅನುಮಾನಗಳು ಮೂಡಿವೆ. ಹೀಗಾಗಿ ಎಲ್ಲಾ ಆಯಾಮಗಳಲ್ಲಿಯೂ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ.

ಕುವೆಟ್ಟು ಸಮೀಪದ ಸಂಬೋಳ್ಯ ಬರಮೇಲು ನಿವಾಸಿಯಾದ ಸುಬ್ರಹ್ಮಣ್ಯ ನಾಯಕ್ ಅವರ ಮಗ ಸುಮಂತ್​​ ಧನುರ್ಮಾಸದ ಹಿನ್ನಲೆಯಲ್ಲಿ ಬೆಳಗ್ಗೆ 4 ಗಂಟೆಗೆ ಎದ್ದು ನಾಳದಲ್ಲಿರೋ ದೇವಸ್ಥಾನಕ್ಕೆ ಹೋಗಿಬರುತ್ತಿದ್ದ. ಹಾಗೆ ಇಂದು ಕೂಡ ದೇವಸ್ಥಾನಕ್ಕೆ ಅಂತಾ ಹೋಗಿದ್ದಾನೆ. ಆದರೆ ಈತನ ಸಹೋದರ ಸುದರ್ಶನ್​​ಗೆ ಬೆಳಗ್ಗೆ 6.30ರ ಸುಮಾರಿಗೆ ದೇವಸ್ಥಾನದಿಂದ ಸ್ನೇಹಿತರು ಕರೆ ಮಾಡಿ ಸುಮಂತ್ ದೇವಸ್ಥಾನಕ್ಕೆ ಯಾಕೆ ಬರಲಿಲ್ಲ ಅಂತಾ ಕೇಳಿದ್ದಾರೆ. ಆಗ ಸುಮಂತ್​​ ಮಿಸ್ಸಿಂಗ್​​ ಆಗಿರುವ ವಿಚಾರ ಮನೆಯವರಿಗೆ ಗೊತ್ತಾಗಿದೆ. ಮನೆಯಿಂದ ಕಾಲು ದಾರಿಯಲ್ಲಿ ನಡೆದುಕೊಂಡು ಹೋಗಿ ರಸ್ತೆ ಸಮೀಪ ನಿಲ್ಲಿಸಿದ್ದ ಬೈಸಿಕಲ್​​ ತೆಗೆದುಕೊಂಡು ಸುಮಂತ್​​ ದೇಗುಲಕ್ಕೆ ಹೋಗುತ್ತಿದ್ದ. ಅಲ್ಲಿಗೆ ಹೋಗಿ ನೋಡಿದ್ರೆ ಸೈಕಲ್ ನಿಲ್ಲಿಸಿದ್ದಲಿಯೇ ಇತ್ತು. ಇದ್ರಿಂದ ಅನುಮಾನಗೊಂಡು ಆತನನ್ನು ಎಲ್ಲರೂ ಹುಡುಕಿದ್ದಾರೆ. ಈ ವೇಳೆ ರಕ್ತದ ಹನಿಗಳು ಪತ್ತೆಯಾಗಿದ್ದು, ಅವನ್ನು ಹಿಂಬಾಲಿಸಿ ಹೋದಾಗ ಸಮೀಪದ ಕೆರೆ ಪಕ್ಕದಲ್ಲೇ ಇದ್ದ ಕಲ್ಲೊಂದಕ್ಕೆ ರಕ್ತ ಅಂಟಿಕೊಂಡಿರೋದು ಕಾಣಿಸಿದೆ. ಬಳಿಕ ಅಗ್ನಿಶಾಮಕದಳ ಸಿಬ್ಬಂದಿ ಬಂದು ಕೆರೆಯಲ್ಲಿ ಹುಡುಕಾಡಿದಾಗ ಅಲ್ಲಿ ಸುಮಂತ್ ಮೃತದೇಹ ಪತ್ತೆಯಾಗಿದೆ.

ಇದನ್ನೂ ಓದಿ: ತಾಯಿಗೆ ಹೊಡೆದ ಎಂದು ಮಲತಂದೆಯನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ಮಗ

ನಾಯಿ ಅಟ್ಟಿಸಿಕೊಂಡು ಬಂದು ಕಚ್ಚಿದ ಕಾರಣ ಬಾಲಕ ಓಡಿ ಹೋಗಿ ಕೆರೆಗೆ ಬಿದ್ದಿದ್ದಾನೆ ಅಂತಾ ಆರಂಭದಲ್ಲಿ ಅನುಮಾನಿಸಲಾಗಿತ್ತು. ಚಿರತೆ ದಾಳಿಯಿಂದ ಸಾವನ್ನಪ್ಪಿರಬಹುದು ಅಂತಲೂ ಅಂದಾಜಿಸಲಾಗಿತ್ತು. ಆದ್ರೆ ಬಾಕಲನ ತಲೆಯ ಮೇಲ್ಭಾಗದಲ್ಲಿ ಮಚ್ಚಿನಲ್ಲಿ ಹೊಡೆದಿರುವ ರೀತಿ ಎರಡು ಕಡೆ ಗಾಯವಾಗಿರೋದು ಕಂಡುಬಂದಿದೆ. ಹಾಗಿ ಇದು ಕೊಲೆಯಾಗಿರಬಹುದೆಂಬ ಅನುಮಾನ ಮೂಡಿದ್ದು, ಎಸ್ಪಿ ಡಾ.ಅರುಣ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡಾಗ್ ಸ್ಕ್ವಾಡ್​ನಿಂದಲೂ ತಪಾಸಣೆ ನಡೆದಿದೆ. ಮರಣೋತ್ತರ ಪರೀಕ್ಷೆ ಬಳಿಕ ಘಟನೆ ಹೇಗಾಯ್ತು ಅಂತಾ ಗೊತ್ತಾಗಲಿದ್ದು, ಎಲ್ಲ ಆಯಾಮದಲ್ಲಿಯೂ ತನಿಖೆ ಮಾಡುತ್ತೇವೆ ಅಂತಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

III Recruitment 2026: ನಿವೃತ್ತಿಯ ನಂತರವೂ ಉದ್ಯೋಗ ಹುಡುಕುತ್ತಿದ್ದೀರಾ? ಇಲ್ಲಿದೆ ಸುವರ್ಣವಕಾಶ – Kannada News | Retired Professionals: III Faculty Jobs Re enter Insurance Sector Career!

ನಿವೃತ್ತಿಯ ನಂತರ ಮನೆಯಲ್ಲಿ ಸಮಯ ಕಳೆಯುವುದು ನಿಮಗೆ ಕಷ್ಟವಾಗಿದ್ದರೆ, ನೀವು ಮತ್ತೆ ಕೆಲಸ ಮಾಡಲು ಪ್ರಾರಂಭಿಸಬಹುದು. ಭಾರತೀಯ ವಿಮಾ ಸಂಸ್ಥೆ (III) ನಿಮಗೊಂದು ಅವಕಾಶವನ್ನು ನೀಡುತ್ತಿದೆ. ನಿವೃತ್ತ ಉದ್ಯೋಗಿಗಳಿಗಾಗಿ ವಿಮಾ ಸಂಸ್ಥೆಯು ಅಧ್ಯಾಪಕರ ಹುದ್ದೆಗಳನ್ನು ಪ್ರಕಟಿಸಿದೆ. ನೀವು ಅರ್ಹರಾಗಿದ್ದರೆ, ನೀವು ಈ ನೇಮಕಾತಿಗೆ ಸಹ ಅರ್ಜಿ ಸಲ್ಲಿಸಬಹುದು.

ಭಾರತೀಯ ವಿಮಾ ಸಂಸ್ಥೆಯು ತನ್ನ ಕೋಲ್ಕತ್ತಾ ಕಚೇರಿಗೆ ಜನರಲ್ ವಿಮಾ ಫ್ಯಾಕಲ್ಟಿ ಹುದ್ದೆಯನ್ನು ಮತ್ತು ತನ್ನ ಮುಂಬೈ ಕಚೇರಿಗೆ ಸಹಾಯಕ ಪ್ರಾಧ್ಯಾಪಕ / ಫ್ಯಾಕಲ್ಟಿ ಹುದ್ದೆಯನ್ನು ಹುಡುಕುತ್ತಿದೆ . ಈ ಉದ್ದೇಶಕ್ಕಾಗಿ, ಸಂಸ್ಥೆಯು ಜನವರಿ 14 ರಂದು ತನ್ನ ಅಧಿಕೃತ ವೆಬ್‌ಸೈಟ್ www.insuranceinstituteofindia.com ನಲ್ಲಿ ಜಾಹೀರಾತು ಸಂಖ್ಯೆಯೊಂದಿಗೆ (Advt./Faculty-G/2026/02) ಖಾಲಿ ಹುದ್ದೆಯ ಅಧಿಸೂಚನೆಯನ್ನು ಬಿಡುಗಡೆ ಮಾಡಿತು.

ಅಗತ್ಯವಿರುವ ಅರ್ಹತೆಗಳು ಯಾವುವು?

ಅಧ್ಯಾಪಕರು (ಸಾಮಾನ್ಯ ವಿಮೆ) ಭಾರತದ ಸಾಮಾನ್ಯ ವಿಮಾ ಕಂಪನಿಗಳಿಂದ ಡೆಪ್ಯೂಟಿ ಜನರಲ್ ಮ್ಯಾನೇಜರ್ (ಜಿಐಸಿ ಮತ್ತು ಪಿಎಸ್‌ಯು ಕಂಪನಿಗಳು) ಅಥವಾ ಅದಕ್ಕಿಂತ ಹೆಚ್ಚಿನ ಅಥವಾ ಸಮಾನ ಹುದ್ದೆಯಿಂದ ನಿವೃತ್ತರಾದ ವ್ಯಕ್ತಿಗಳು ಅರ್ಜಿ ಸಲ್ಲಿಸಬಹುದು. ಅವರು ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು. ಭಾರತೀಯ ವಿಮಾ ಸಂಸ್ಥೆಯ ಅಸೋಸಿಯೇಟ್/ಫೆಲೋಶಿಪ್ ಅಥವಾ ತತ್ಸಮಾನ ಅರ್ಹತೆಯನ್ನು ಹೊಂದಿರಬೇಕು. ಅರ್ಜಿದಾರರು ಸಾಮಾನ್ಯ ವಿಮಾ ಕಂಪನಿಯಲ್ಲಿ ವ್ಯವಸ್ಥಾಪಕ ಮಟ್ಟದಲ್ಲಿ 15 ವರ್ಷಗಳ ಅನುಭವವನ್ನು ಹೊಂದಿರಬೇಕು. ವಯಸ್ಸಿನ ಮಿತಿ ಡಿಸೆಂಬರ್ 31, 2025 ರಂತೆ 55 ರಿಂದ 62 ರೊಳಗಿರಬೇಕು. ಈ ಹುದ್ದೆಯು ಒಪ್ಪಂದದಡಿಯಲ್ಲಿದೆ.

ಅಭ್ಯರ್ಥಿಯು ಸಂಬಂಧಿತ ವಿಷಯದಲ್ಲಿ ಕನಿಷ್ಠ 55 ಪ್ರತಿಶತ ಅಂಕಗಳೊಂದಿಗೆ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು. ಉತ್ತಮ ಶೈಕ್ಷಣಿಕ ದಾಖಲೆಯೊಂದಿಗೆ ವ್ಯವಹಾರ ನಿರ್ವಹಣೆ ಅಥವಾ ಸಮಾಜ ವಿಜ್ಞಾನ ಕ್ಷೇತ್ರದಲ್ಲಿ ಪಿಎಚ್‌ಡಿ ಪದವಿಯನ್ನು ಹೊಂದಿರಬೇಕು. ಯುಜಿಸಿ ನಡೆಸುವ ನೆಟ್ ಅಥವಾ ಸೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಅಭ್ಯರ್ಥಿಯು ಸಾಮಾನ್ಯ ವಿಮಾ ಕಂಪನಿಯಲ್ಲಿ ನಿರ್ವಹಣಾ ಮಟ್ಟದ ಅಥವಾ ಬೋಧನಾ ಅನುಭವವನ್ನು ಹೊಂದಿರಬೇಕು. 35 ರಿಂದ 55 ವರ್ಷದೊಳಗಿನ ಅಭ್ಯರ್ಥಿಗಳು ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಅಧಿಕಾರಾವಧಿ 60 ವರ್ಷ ವಯಸ್ಸಿನವರೆಗೆ ಇರುತ್ತದೆ. ಈ ಹುದ್ದೆಗೆ ಮಾಸಿಕ ವೇತನ ಯುಜಿಸಿ ನಿಯಮಗಳ ಪ್ರಕಾರ ಇರುತ್ತದೆ.

ಇದನ್ನೂ ಓದಿ: ಗ್ರಾಮ ಪಂಚಾಯತ್ನಲ್ಲಿ ಬಿಲ್ ಕಲೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ; ಪಿಯುಸಿ ಆಗಿದ್ರೆ ಸಾಕು

ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿದ ನಂತರ, ಈ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಬಯಸುವ ಅಭ್ಯರ್ಥಿಗಳು ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಮೊದಲು, ಅಧಿಸೂಚನೆಯಲ್ಲಿರುವ ಅರ್ಜಿ ನಮೂನೆಯ ಅನುಬಂಧದಿಂದ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ. ನಂತರ, ನಿಮ್ಮ ಮಾಹಿತಿಯನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ. ಅಗತ್ಯವಿರುವ ದಾಖಲೆಗಳನ್ನು ಸ್ವಯಂ ದೃಢೀಕರಿಸಿ ಮತ್ತು ಅವುಗಳನ್ನು ಅಂಚೆ ಮೂಲಕ ಗೊತ್ತುಪಡಿಸಿದ ವಿಳಾಸಕ್ಕೆ ಕಳುಹಿಸಿ. ನೀವು ಜನವರಿ 31 ರ ಮೊದಲು, ಸಂಜೆ 6 ಗಂಟೆಗೆ recruitment@iii.org.in ಗೆ ಇಮೇಲ್ ಮಾಡಬೇಕು.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಡಿಯರ್ ಹಸ್ಬೆಂಡ್’ ಸಿನಿಮಾಗೆ ಸಿಕ್ತು ಕಿಚ್ಚ ಸುದೀಪ್ ಬೆಂಬಲ; ಟೈಟಲ್ ಟೀಸರ್ ನೋಡಿ.. – Kannada News | Kichcha Sudeep releases Dear Husband Kannada movie Title Teaser

ಟೈಟಲ್ ಟೀಸರ್ ಮೂಲಕ ‘ಡಿಯರ್ ಹಸ್ಬೆಂಡ್’ ಸಿನಿಮಾ ಗಮನ ಸೆಳೆದಿದೆ. ಕಿಚ್ಚ ಸುದೀಪ್ (Kichcha Sudeep) ಅವರು ಇತ್ತೀಚೆಗೆ ಬೆಂಗಳೂರಿನ ‘ಫಿನಿಕ್ಸ್ ಮಾಲ್ ಆಫ್ ಏಷ್ಯಾ’ದಲ್ಲಿ ಈ ಚಿತ್ರದ ಟೀಸರ್ ಬಿಡುಗಡೆ ಮಾಡಿದರು. ‘ಜಿ9 ಕಮ್ಯುನಿಕೇಶನ್ ಆ್ಯಂಡ್ ಮೀಡಿಯಾ’ ಹಾಗೂ ‘ನಿರಂತರ ಪ್ರೊಡಕ್ಷನ್ಸ್’ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಗುರುರಾಜ ಕುಲಕರ್ಣಿ (ನಾಡಗೌಡ) ಅವರು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ‘ಡಿಯರ್ ಹಸ್ಬೆಂಡ್’ (Dear Husband) ಚಿತ್ರದಲ್ಲಿ ಸೂರಜ್ ಗೌಡ, ಶರಣ್ಯಾ ಶೆಟ್ಟಿ, ಪ್ರವೀಣ್ ಅವರು ನಟಿಸುತ್ತಿದ್ದಾರೆ.

ಈ ವೇಳೆ ಕಿಚ್ಚ ಸುದೀಪ್ ಮಾತನಾಡಿದರು. ‘ನಾವು ಚಿತ್ರರಂಗಕ್ಕೆ ಹೊಸಬರಾಗಿ ಬಂದಾಗ ಅನೇಕ ಹಿರಿಯರು ನಮಗೆ ಪ್ರೋತ್ಸಾಹಿಸಿ ಬೆನ್ನು ತಟ್ಟಿದ್ದರು. ಅದೇ ಕೆಲಸವನ್ನು ನಾವು ಈಗ ಹೊಸಬರಿಗೆ ಮಾಡುತ್ತಿದ್ದೇವೆ. ಅಂತಿಮವಾಗಿ ಕನ್ನಡ ಚಿತ್ರರಂಗ ಬೆಳೆಯಬೇಕು. ಇಡೀ ಚಿತ್ರತಂಡಕ್ಕೆ ಶುಭವಾಗಲಿ. ಹೊಸಬರ ತಂಡದ ಮೂಲಕ ಖಂಡಿತವಾಗಿಯೂ ಹೊಸ ರೀತಿಯ ಸಿನಿಮಾ ಬರಲಿದೆ’ ಎಂದು ಹೇಳಿದರು.

ಟೈಟಲ್ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಕಿಚ್ಚ ಸುದೀಪ್ ಅವರ ಜೊತೆ ಕುಮಾರ್ ಬಂಗಾರಪ್ಪ, ಪ್ರವೀಣ್ ತೇಜ್, ವಿ. ಹರಿಕೃಷ್ಣ, ಶಶಾಂಕ್, ಎ.ಪಿ. ಅರ್ಜುನ್, ವೈಶಾಕ್ ವಿಜಯಕುಮಾರ್, ರಿತೇಶ್ ಮುಂತಾದವರು ಆಗಮಿಸಿದ್ದರು. ಈ ಸಿನಿಮಾದ ಪ್ರೀ-ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿವೆ. ಇದೇ ತಿಂಗಳ ಅಂತ್ಯದಿಂದ ಶೂಟಿಂಗ್ ಆರಂಭವಾಗಲಿದೆ. ಬೆಂಗಳೂರು, ಗೋವಾ ಮತ್ತಿತರ ಕಡೆಗಳಲ್ಲಿ ಚಿತ್ರೀಕರಣ ಮಾಡಲಾಗುವುದು.

‘ಡಿಯರ್ ಹಸ್ಬೆಂಡ್’ ಟೈಟಲ್ ಟೀಸರ್:

ಸಚಿನ್ ಬಸ್ರೂರು ಅವರು ಟೈಟಲ್ ಟೀಸರ್​ಗೆ ಹಿನ್ನೆಲೆ ಸಂಗೀತ ನೀಡಿದ್ದಾರೆ. ಹಾಡುಗಳಿಗೆ ವೀರ್ ಸಮರ್ಥ್ ಸಂಗೀತ ಸಂಯೋಜಿಸುತ್ತಿದ್ದಾರೆ. ಪ್ರಮೋದ್ ಮರವಂತೆ ಅವರ ಗೀತರಚನೆ ಹಾಗೂ ರಘು ನಿಡುವಳ್ಳಿ ಅವರ ಸಂಭಾಷಣೆ ಈ ಚಿತ್ರಕ್ಕೆ ಇರಲಿದೆ. ಹರ್ಷ ಕುಮಾರ್ ಗೌಡ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ಬಿ.ಎಸ್. ಕೆಂಪರಾಜ್ ಅವರು ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ.

ಇದನ್ನೂ ಓದಿ: ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದುಗಳು ನೋಡಿ..

ನಿರ್ಮಾಪಕ ಡಾ. ನಿರಂತರ ಗಣೇಶ್ ಅವರು ‘ಐರಾವನ್’ ಬಳಿಕ ನಿರ್ಮಾಣ ಮಾಡುತ್ತಿರುವ 2ನೇ ಸಿನಿಮಾ ಇದು. ಇಂದಿನ ಪ್ರೇಕ್ಷಕರಿಗೆ ಇಷ್ಟವಾಗುವಂತೆ ಸಿನಿಮಾ ಮೂಡಿಬರುತ್ತಿದೆ ಎಂದು ಅವರು ಹೇಳಿದರು. ‘ನೋಡುಗರಿಗೆ ಈ ಸಿನಿಮಾ ಖಂಡಿತವಾಗಿಯೂ ಹೊಸಥರದ ಅನುಭವ ನೀಡಲಿದೆ’ ಎಂದು ನಿರ್ದೇಶಕ ಗುರುರಾಜ ಕುಲಕರ್ಣಿ ಅವರು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮನೆಯಲ್ಲಿ ಹಲ್ಲಿಗಳಿದ್ದರೆ ತುಂಬಾ ಒಳ್ಳೆಯದಂತೆ; ಯಾಕೆ ಗೊತ್ತಾ ? – Kannada News | Do you know what are the benefits of having lizards at home?

ಹಲ್ಲಿಗಳ (lizards) ಕಾಟ ಇಲ್ಲದಿರುವ ಮನೆಯೇ ಇಲ್ಲ. ಮನೆಯ ಗೋಡೆಗಳ ಮೇಲೆ ಇವುಗಳ ಓಡಾಟ ಇದ್ದೇ ಇರುತ್ತದೆ. ಅನೇಕರು ಈ ಪುಟ್ಟ ಜೀವಿಯನ್ನು ಕಂಡು ಸಿಕ್ಕಾಪಟ್ಟೆ ಭಯಪಡುತ್ತಾರೆ. ಅದಕ್ಕಾಗಿಯೇ ಈ ಹಲ್ಲಿಗಳನ್ನು ಓಡಿಸಲು ಹಲವು ಸರ್ಕಸ್‌ಗಳನ್ನು ಮಾಡುತ್ತಾರೆ.  ಆದ್ರೆ ಈ ರೀತಿ ಹಲ್ಲಿಗಳಲ್ಲಿಗೆ ಭಯ ಪಡುವ ಅಥವಾ ಅವುಗಳನ್ನು ಓಡಿಸುವ ಅವಶ್ಯಕತೆಯೇ ಇಲ್ಲ. ಅವುಗಳು ಮನೆಯಲ್ಲಿ ಇದ್ದರೆ ತುಂಬಾ ಒಳ್ಳೆಯಂದೆ. ಹೌದು ಅವು ನಿಮ್ಮ ಮನೆಯನ್ನು ಸ್ವಚ್ಛವಾಗಿ ಮತ್ತು ಸುರಕ್ಷಿತವಾಗಿಡಲು ಸಹಾಯ ಮಾಡುತ್ತವೆ. ಹಲ್ಲಿ ಮನೆಯಲ್ಲಿದ್ದರೆ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ಕಂಡುಕೊಳ್ಳೋಣ ಬನ್ನಿ.

ಹಲ್ಲಿಗಳು ಮನೆಯಲ್ಲಿದ್ದರೆ ಆಗುವ ಪ್ರಯೋಜನಗಳೇನು?

ಜನರು ಸಾಮಾನ್ಯವಾಗಿ ಹಲ್ಲಿಗಳು ಅಪಾಯಕಾರಿ, ಅವುಗಳಿಂದ ಆರೋಗ್ಯಕ್ಕೆ ತೊಂದರೆಗಳಾಗಬಹುದು ಎಂಬ ಭಯದಿಂದ ಅವುಗಳನ್ನು ಓಡಿಸಲು ಪ್ರಯತ್ನಿಸುತ್ತಾರೆ. ಆದರೆ ವಾಸ್ತವದಲ್ಲಿ, ಅವುಗಳಿಂದ ಮನೆಗೆ ತುಂಬಾನೇ ಪ್ರಯೋಜನಗಳಿವೆಯಂತೆ.

ಕೀಟ ನಿಯಂತ್ರಣ: ಹಲ್ಲಿಗಳು ಕೀಟಗಳನ್ನು ತಿನ್ನುವ ಮೂಲಕ ನೈಸರ್ಗಿಕವಾಗಿ  ಅವುಗಳನ್ನು ನಿಯಂತ್ರಿಸುತ್ತವೆ. ನೊಣಗಳು, ಜಿರಳೆಗಳು ಮತ್ತು ಜೇಡಗಳು ಹಲ್ಲಿಗಳ ಪ್ರಾಥಮಿಕ ಆಹಾರವಾಗಿದ್ದು, ಮನೆಯಲ್ಲಿ ಓಡಾಡುವ ಈ ಜಿರಳೆ, ಕೀಟಗಳನ್ನು ತಿನ್ನುವ ಮೂಲಕ ಮನೆಯಲ್ಲಿ ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ. ಜೊತೆಗೆ ಹಲ್ಲಿಗಳಿದ್ದರೆ ಕೀಟಗಳನ್ನು ಓಡಿಸಲು ಕೀಟ ನಾಶಕ ಸ್ಪ್ರೇಗಳನ್ನು ಬಳಸುವ ಅವಶ್ಯಕತೆಯೇ ಇರುವುದಿಲ್ಲ. ಕೀಟನಾಶಕ ಸಿಂಪಡಿಸುವಿಕೆಯು ಗಾಳಿಯನ್ನು ಕಲುಷಿತಗೊಳಿಸುವುದಲ್ಲದೆ, ಸಸ್ಯಗಳು ಮತ್ತು ಜೇನುನೊಣಗಳಂತಹ ಪ್ರಯೋಜನಕಾರಿ ಕೀಟಗಳಿಗೂ ಹಾನಿಕಾರಕವಾಗಬಹುದು. ಹಲ್ಲಿಗಳು ಇದನ್ನು ಹಾನಿಯಾಗದಂತೆ ತಡೆಯುತ್ತವೆ.

ಮನೆಯ ವಾತಾವರಣ ಆರೋಗ್ಯಕರವಾಗಿ ಎಂದರ್ಥ: ಮನೆಯಲ್ಲಿ ಹಲ್ಲಿಗಳಿದ್ದರೆ ನಿಮ್ಮ ಮನೆಯ ಪರಿಸರವು ಸಮತೋಲಿತ ಮತ್ತು ಆರೋಗ್ಯಕರವಾಗಿದೆ ಎಂಬುದ ಸಂಕೇತವಾಗಿದೆ. ಇವು ಮನೆಯ ನೈಸರ್ಗಿಕ ಕೀಟ ವ್ಯವಸ್ಥೆಯಾಗಿದ್ದು, ಮನೆಯೊಳಗೆ ಬರುವ ಕೀಟಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ ಮತ್ತು ಅನಗತ್ಯ ಕೀಟಗಳಿಂದ ನಿಮ್ಮನ್ನು ರಕ್ಷಿಸುತ್ತವೆ. ಆದಾಗ್ಯೂ, ಅವು ನಿಮ್ಮ ಆಹಾರ ಅಥವಾ ಇತರ ವಸ್ತುಗಳ ಹತ್ತಿರ ಬರದಂತೆ ಎಚ್ಚರವಹಿಸಿ.

ಇದನ್ನೂ ಓದಿ: ಅಡುಗೆಗೆ ಮಾತ್ರವಲ್ಲ, ಗೃಹಪಯೋಗಿ ವಸ್ತುಗಳ ಸ್ವಚ್ಛತೆಗೂ ಬಳಸಬಹುದು ಉಪ್ಪು

ಸೊಳ್ಳೆಗಳ ಕಾಟದಿಂದ ಮುಕ್ತಿ ಒದಗಿಸುತ್ತವೆ: ಹಲ್ಲಿಗಳು ಸೊಳ್ಳೆಗಳನ್ನು ಬೇಟೆಯಾಡುವ ಅತ್ಯುತ್ತಮ ಜೀವಿಗಳಾಗಿವೆ. ಅವು ರೋಗಗಳನ್ನು ಹರಡುವ ಸೊಳ್ಳೆಗಳನ್ನು ತಿನ್ನುವ ಮೂಲಕ ನಿಮ್ಮ ಮನೆಯ ಆರೋಗ್ಯವನ್ನು ರಕ್ಷಿಸುತ್ತವೆ.

ಹೀಗೆ ಹಲ್ಲಿಗಳು ಕೀಟ, ನೋಣ, ಸೊಳ್ಳೆಗಳನ್ನು ನಿಮ್ಮ ಮನೆಯಿಂದ ದೂರವಿಡುವುದಲ್ಲದೆ, ಮನೆಯ ವಾತಾವರಣವನ್ನು ಸುರಕ್ಷಿತವಾಗಿ, ಸ್ವಚ್ಛವಾಗಿ ಮತ್ತು ಆರಾಮದಾಯಕವಾಗಿಡಲು ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:54 pm, Wed, 14 January 26

Source link

ಬಿಗ್​​ಬಾಸ್ ಮನೆಯಲ್ಲಿ ಮಿಡ್ ವೀಕ್ ಎಲಿಮಿನೇಷನ್: ಯಾರು ಹೊರಕ್ಕೆ? – Kannada News | Bigg Boss Kannada season 12: Mid week eviction video

ಬಿಗ್​​ಬಾಸ್ ಕನ್ನಡ ಸೀಸನ್ 12ರ (Bigg Boss Kannada) ಫಿನಾಲೆ ವಾರ ನಡೆಯುತ್ತಿದೆ. ಫಿನಾಲೆ ವಾರದಲ್ಲಿ ಮಜಾ, ಮೋಜು ಮಸ್ತಿಗಳ ಜೊತೆಗೆ ಮಿಡ್ ವೀಕ್ ಎಲಿಮಿನೇಷನ್ ಇದ್ದೇ ಇರುತ್ತದೆ. ಪ್ರಸ್ತುತ ಮನೆಯಲ್ಲಿ ಏಳು ಮಂದಿ ಸ್ಪರ್ಧಿಗಳಿದ್ದು, ಇವರಲ್ಲಿ ಒಬ್ಬ ಸ್ಪರ್ಧಿ ಫಿನಾಲೆ ವೇದಿಕೆ ಏರುವ ಮುಂಚೆಯೇ ಮನೆಯಿಂದ ನಿರ್ಗಮಿಸಲಿದ್ದಾರೆ. ಮಿಡ್ ವೀಕ್ ಎಲಿಮಿನೇಷನ್​​ಗೆ ಬಿಗ್​​ಬಾಸ್ ಚಾನಲೆ ನೀಡಿದ್ದಾರೆ. ಮನೆಯ ಎಲ್ಲ ಸದಸ್ಯರು ಆಕ್ಟಿವಿಟಿ ರೂಂನಲ್ಲಿ ಒಟ್ಟಿಗೆ ಸೇರಿದ್ದು, ಎಲ್ಲರನ್ನೂ ಒಬ್ಬೊಬ್ಬರನ್ನಾಗಿ ಹೊರಗೆ ಕಳಿಸಲಾಗಿದೆ. ಈ ಹೊರಗೆ ಕಳಿಸಿದವರಲ್ಲಿ ಯಾರು ಮತ್ತೆ ಮನೆಯ ಒಳಗೆ ಬರುತ್ತಾರೊ ಅವರು ಉಳಿದುಕೊಳ್ಳುತ್ತಾರೆ. ಯಾರು ಬರುವುದಿಲ್ಲವೊ ಅವರು ಮನೆಯಿಂದ ಎಲಿಮಿನೇಟ್ ಆಗುತ್ತಾರೆ. ವಿಡಿಯೋ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link