ಗಾಂಧಿ ಕುಟುಂಬವನ್ನು ಸಂತೋಷಪಡಿಸಲು ನಿಮ್ಮ ಘನತೆ ಕಳೆದುಕೊಂಡಿರಿ; ಖರ್ಗೆಗೆ ಯಡಿಯೂರಪ್ಪ ತಿರುಗೇಟು – Kannada News | Karnataka Former CM BS Yediyurappa condems Mallikarjun Kharges Terrorist Statement on PM Modi
ಬೆಂಗಳೂರು, ಏಪ್ರಿಲ್ 21: ತಮಿಳುನಾಡಿನ ಚೆನ್ನೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭಯೋತ್ಪಾದಕ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆದಿದ್ದಾರೆ. ಇದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, “ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರೇ, ನಮ್ಮ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಭಯೋತ್ಪಾದಕ’ ಎಂದು ನೀವು ನೀಡಿರುವ ಅತ್ಯಂತ ಹೇಯ ಹೇಳಿಕೆಯು ನಿಮ್ಮ ದುರಹಂಕಾರದ ಪರಮಾವಧಿಯಷ್ಟೇ ಅಲ್ಲ, ನಿಮ್ಮ…