All posts by nagaraj11081993

ದಲಿತ ಅತಿಥಿ ಉಪನ್ಯಾಸಕಿಗೆ ಪ್ರಾಂಶುಪಾಲನಿಂದ ಲೈಂಗಿಕ ಕಿರುಕುಳ ಆರೋಪ: ಸಂತ್ರಸ್ತೆ ಹೇಳಿದ್ದೇನು? – Kannada News | Police Complaint Filed Against Bhadravathi Principal Over Harassment of Dalit Guest Lecturer

ಶಿವಮೊಗ್ಗ, ಜನವರಿ 13: ಭದ್ರಾವತಿಯ ಎನ್​ಇಎಸ್ ಶಿಕ್ಷಣ ಸಂಸ್ಥೆಯಲ್ಲಿ ದಲಿತ ಅತಿಥಿ ಉಪನ್ಯಾಸಕಿಗೆ ಪ್ರಾಂಶುಪಾಲನೇ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಶ್ರೀಪಾದ್ ಹೆಗಡೆ ವಿರುದ್ಧ ಸಂತ್ರಸ್ತೆ ಜಾತಿ ನಿಂದನೆ ಆರೋಪವನ್ನೂ ಮಾಡಿದ್ದು, ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ಅನೇಕ ಮಹನೀಯರ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆಂದೇ ಸ್ಥಾಪಿಸಿರುವ ರಾಷ್ಟ್ರೀಯ ಶಿಕ್ಷಣ ಸಮಿತಿ ಶಿಕ್ಷಣ ಸಂಸ್ಥೆಯಲ್ಲೇ ಇಂತಹ ಆರೋಪ ಕೇಳಿಬಂದಿರೋದು ಜನ ಹುಬ್ಬೇರಿಸುವಂತೆ ಮಾಡಿದೆ.

ಸಂತ್ರಸ್ತ ಉಪನ್ಯಾಸಕಿ ಆರೋಪವೇನು?

ಕಾರಿನಲ್ಲಿ ಕರೆದುಕೊಂಡು ಹೋಗುವಾಗ ತನ್ನ ಮೇಲೆ ಪ್ರಾಂಶುಪಾಲ ಶ್ರೀಪಾದ್ ಹೆಗಡೆ ಲೈಂಗಿಕ ದೌರ್ಜನ್ಯ ಯತ್ನ ನಡೆಸಿದ್ದಾರೆ. ನಿಮ್ಮ ಜಾತಿಯಲ್ಲಿ ಅನೈತಿಕ ಸಂಬಂಧ ಇಟ್ಟುಕೊಳ್ಳುತ್ತಾರೆ. ನಿಮ್ಮ ಜಾತಿಯಲ್ಲಿ ಇವೆಲ್ಲಾ ಮಾಮೂಲಿಯಾಗಿದ್ದು ನನ್ನ ಜೊತೆ ಚೆನ್ನಾಗಿರಿ ಎಂದು ದೌರ್ಜನ್ಯ ನಡೆಸಿದ್ದಾರೆ. ನಿನ್ನ ಗಂಡ ಇಲ್ಲದಿದ್ದರೆ ನನ್ನನ್ನು ಕರಿ ಎಂದು ಹೇಳಿರೋದಾಗಿ ಅತಿಥಿ ಉಪನ್ಯಾಸಕಿ ಗಂಭೀರ ಆರೋಪ ಮಾಡಿದ್ದಾರೆ. ಅದೇ ಕಾಲೇಜಿನ ಇಬ್ಬರು ಮಹಿಳಾ ಸಿಬ್ಬಂದಿ ವಿರುದ್ಧವೂ ಕ್ಷುಲ್ಲಕ ಕಾರಣಕ್ಕೆ ಜಾತಿ ನಿಂದನೆ ಆರೋಪವನ್ನು ಸಂತ್ರಸ್ತೆ ಮಾಡಿದ್ದಾರೆ.

ಇದನ್ನೂ ಓದಿ: ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ; ಮತ್ತೆ ದರೋಡೆ ಮಾಡಿ ಲಾಕ್​​ ಆದ ಗ್ಯಾಂಗ್

‘ಪ್ರಕರಣ ದಾಖಲಿಸಿ 21 ದಿನಗಳಾದ್ರೂ ಕ್ರಮವಿಲ್ಲ’

ಘಟನೆ ಬಗ್ಗೆ ಸಂತ್ರಸ್ತೆ ಪ್ರಕರಣ ದಾಖಲಿಸಿ 21 ದಿನಗಳು ಕಳೆದರೂ ಆರೋಪಿ ಪ್ರಾಂಶುಪಾಲನನ್ನು ಬಂಧಿಸಿಲ್ಲ. ಸಂಸ್ಥೆಯ ಆಡಳಿತ ಮಂಡಳಿಯೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ ಸಂಸ್ಥೆಯಿಂದ ತನ್ನನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ಸಂತ್ರಸ್ತ ಉಪನ್ಯಾಸಕಿ ಅಲವತ್ತುಕೊಂಡಿದ್ದಾರೆ. ಆರೋಪಿ ಪ್ರಾಂಶುಪಾಲ ಶ್ರೀಪಾದ್ ಹೆಗಡೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಅಡುಗೆಗೆ ಮಾತ್ರವಲ್ಲ, ಗೃಹಪಯೋಗಿ ವಸ್ತುಗಳ ಸ್ವಚ್ಛತೆಗೂ ಬಳಸಬಹುದು ಉಪ್ಪು – Kannada News | Use salt to clean these items effectively

ಸಾಮಾನ್ಯವಾಗಿ ಮನೆ ಕ್ಲೀನ್‌ ಮಾಡಲು, ದುಬಾರಿ ಕ್ಲೀನರ್‌ಗಳನ್ನು ಬಳಸುತ್ತೇವೆ. ಇನ್ನೂ ಗೃಹಪಯೋಗಿ ವಸ್ತುಗಳ ಕಲೆ, ಕೊಳೆಗಳನ್ನು ತೆಗೆದುಹಾಕಲು ಹಲವಾರು ಸರ್ಕಸ್‌ಗಳನ್ನು ಮಾಡುತ್ತೇವೆ. ಇದರ ಬದಲು ಗೃಹಯಪಯೋಗಿ ವಸ್ತುಗಳನ್ನು ಸ್ವಚ್ಛಗೊಳಿಸಲು ಉಪ್ಪನ್ನು (Salt) ಬಳಸಬಹುದು. ಉಪ್ಪು ಅಡುಗೆಯ ರುಚಿ ಹೆಚ್ಚಿಸುವುದು ಮಾತ್ರವಲ್ಲದೆ, ಸುಟ್ಟ ಪ್ಯಾನ್‌ಗಳು, ಕೊಳೆಯಾಗಿರುವ ಇಸ್ತ್ರಿ ಪೆಟ್ಟಿಗೆ, ಕಲೆ ಹಾಗೂ ತಳ ಹಿಡಿದಿರುವ ಪಾತ್ರೆಗಳನ್ನು ಸುಲಭವಾಗಿ ಸ್ವಚ್ಛಗೊಳಿಸುತ್ತದೆ. ಇದು ನೈಸರ್ಗಿಕ ಹಾಗೆಯೇ ಅಗ್ಗದ ಕ್ಲೀನರ್‌ ಆಗಿದ್ದು, ಗೃಹಪಯೋಗಿ ವಸ್ತುಗಳನ್ನು ಕ್ಲೀನ್‌ ಮಾಡಲು ಉಪ್ಪು ಹೇಗೆ ಸಹಕಾರಿ ಎಂಬುದನ್ನು ತಿಳಿಯಿರಿ.

ಗೃಹಪಯೋಗಿ ವಸ್ತುಗಳನ್ನು ಸ್ವಚ್ಛಗೊಳಿಸಲು ಸಹಕಾರಿ ಉಪ್ಪು:

ಚಾಕುಗಳ ಸ್ವಚ್ಛತೆ: ಸಾಮಾನ್ಯವಾಗಿ, ಚಾಕುಗಳು ಬಳಸಿದ ನಂತರ ತುಕ್ಕು ಹಿಡಿಯಬಹುದು. ಈ ತುಕ್ಕು ತೆಗೆದುಹಾಕಲು, ನೀವು ಉಪ್ಪನ್ನು ಬಳಸಬಹುದು. ಚಾಕುವಿನ ಮೇಲೆ ಸ್ವಲ್ಪ ಉಪ್ಪು ಸಿಂಪಡಿಸಿ, ಅದರ ಮೇಲೆ ವಿನೆಗರ್ ಸುರಿಯಿರಿ ಮತ್ತು  ಅದನ್ನು ಒಂದು ಬಟ್ಟೆಯಿಂದ ಮುಚ್ಚಿ ಕೆಲವು ನಿಮಿಷಗಳ ಕಾಲ ಹಾಗೆಯೇ ಬಿಡಿ, ನಂತರ ಒರೆಸಿ. ನೀರಿನಿಂದ ತೊಳೆಯಿರಿ. ಇದು ತುಕ್ಕನ್ನು ಹೋಗಲಾಡಿಸುತ್ತದೆ.

ಬಿಳಿ ಬಟ್ಟೆಗಳ ಸ್ವಚ್ಛತೆ: ಬಿಳಿ ಶರ್ಟ್ ಅಥವಾ ಟಿ-ಶರ್ಟ್ ಹಳೆಯದಾಗಿ ಅಥವಾ ಮಸುಕಾಗಿ ಕಾಣಲು ಪ್ರಾರಂಭಿಸಿದರೆ,  ಅದನ್ನು ಬಕೆಟ್‌ನಲ್ಲಿ ಹಾಕಿ ನಂತರ ಸ್ವಲ್ಪ ಟೂತ್‌ಪೇಸ್ಟ್, 1 ಟೀಚಮಚ ಉಪ್ಪು, ಸ್ವಲ್ಪ ಡಿಟೆರ್ಜಂಟ್ ಲಿಕ್ವಿಡ್‌  ಮತ್ತು ಸ್ವಲ್ಪ ಬೆಚ್ಚಗಿನ ನೀರನ್ನು ಸೇರಿಸಿ. ಹತ್ತು ಹದಿನೈದು ನಿಮಿಷಗಳ ಕಾಲ ಹಾಗೆಯೇ ಬಿಡಿ. ಈಗ ಅದನ್ನು ನಿಮ್ಮ ಕೈಗಳಿಂದ ಸ್ಕ್ರಬ್ ಮಾಡಿ ನಂತರ ಶುದ್ಧ ನೀರಿನಿಂದ ತೊಳೆಯಿರಿ. ಇದು ಬಟ್ಟೆಗೆ ಹೊಳಪನ್ನು ನೀಡುತ್ತದೆ.

ಬಟ್ಟೆಗಳ ಮೇಲಿನ ಎಣ್ಣೆಯ ಕಲೆ ತೆಗೆದುಹಾಕುತ್ತದೆ: ನಿಮ್ಮ ಬಟ್ಟೆಗಳ ಮೇಲೆ ಎಣ್ಣೆಯ ಕಲೆ ಇದ್ದರೆ, ಅದನ್ನು ತೊಡೆದುಹಾಕಲು ನೀವು ಉಪ್ಪನ್ನು ಬಳಸಬಹುದು. ಎಣ್ಣೆ ಅಂಟಿದ ಜಾಗದ ಮೇಲೆ ಸ್ವಲ್ಪ ಉಪ್ಪು ಮತ್ತು ಡಿಟೆರ್ಜಂಟ್ ಲಿಕ್ವಿಡ್‌ ಹಾಕಿ, ಅದನ್ನು ಕೈಗಳಿಂದ ಉಜ್ಜಿದರೆ, ಎಣ್ಣೆಯ ಕಲೆ ಮಾಯವಾಗುತ್ತದೆ.

ಪಾತ್ರೆಗಳನ್ನು ಸ್ವಚ್ಛಗೊಳಿಸುತ್ತದೆ: ಸುಟ್ಟ ಪ್ಯಾನ್‌ಗಳನ್ನು ಉಪ್ಪಿನಿಂದ ಸುಲಭವಾಗಿ ಸ್ವಚ್ಛಗೊಳಿಸಬಹುದು. ಅಡುಗೆ  ಪಾತ್ರೆಗಳು ತಳ ಹಿಡಿಯುತ್ತವೆ ಮತ್ತು ಅವುಗಳ ಮೇಲಿನ ಕಪ್ಪು ಲೇಪನವನ್ನು ತೆಗೆದುಹಾಕಲು ಕಷ್ಟವಾಗುತ್ತದೆ. ಹಾಗಿರುವಾಗ ಉಪ್ಪನ್ನು ಬಳಸಿ ಪಾತ್ರೆಯನ್ನು ಸ್ವಚ್ಛಗೊಳಿಸಬಹುದು. ಇದಕ್ಕಾಗಿ ತಳ ಹಿಡಿದ ಪಾತ್ರೆಗೆ ಉಪ್ಪನ್ನು ಹಾಕಿ ಅದನ್ನು ನಿಂಬೆ ಹೋಳಿನಿಂದ ಉಜ್ಜಿಕೊಳ್ಳಿ. ಇದು ಕಲೆಯನ್ನು ಬಲು ಸುಲಭವಾಗಿ ತೆಗೆದುಹಾಕುತ್ತದೆ.

ಇದನ್ನೂ ಓದಿ: ಸೊಳ್ಳೆಗಳ ಕಾಟದಿಂದ ಮುಕ್ತಿ ಪಡೆಯಲು ನೆಲ ಒರೆಸುವ ನೀರಿಗೆ ಎರಡು ವಸ್ತುಗಳನ್ನು ಸೇರಿಸಿ

ಇಸ್ತ್ರಿ ಪೆಟ್ಟಿಗೆಗಳನ್ನು ಸ್ವಚ್ಛಗೊಳಿಸುತ್ತದೆ: ಪದೇ ಪದೇ ಉಪಯೋಗ ಮಾಡುವ ಕಾರಣ ಇಸ್ತ್ರಿ ಪೆಟ್ಟಿಗೆಗಳಲ್ಲಿ ಕಲೆಗಳು ಹಾಗೆಯೇ ಉಳಿದುಬಿಡುತ್ತದೆ. ಇದನ್ನು ತೆಗೆದುಹಾಕಲು ಉಪ್ಪನ್ನು ಬಳಸಬಹುದು. ಇದಕ್ಕಾಗಿ ಇಸ್ತ್ರಿ ಪೆಟ್ಟಿಗೆ ಕಬ್ಬಿಣದ ತಟ್ಟೆಯ ಮೇಲೆ ಸ್ವಲ್ಪ ಉಪ್ಪನ್ನು ಸಿಂಪಡಿಸಿ ದಪ್ಪ ಬಟ್ಟೆಯಿಂದ ನಿಧಾನವಾಗಿ ಉಜ್ಜಿಕೊಳ್ಳಿ, ಇದು ನಿಮಿಷಗಳಲ್ಲಿ ಕಲೆ ತೆಗೆದುಹಾಕುತ್ತದೆ.

ಕಾಫಿ ಮಗ್‌ಗಳ ಕಲೆಯನ್ನು ತೆಗೆದುಹಾಕುತ್ತದೆ: ಕಾಫಿ ಅಥವಾ ಟೀ ಕುಡಿದ ನಂತರ, ಮಗ್‌ಗಳಲ್ಲಿ ಮೊಂಡುತನದ ಕಲೆಗಳು ಕಾಣಿಸಿಕೊಳ್ಳುತ್ತವೆ, ಇವುಗಳು ಅಷ್ಟು ಸುಲಭವಾಗಿ ಹೋಗುವುದಿಲ್ಲ. ಹೀಗಿರುವಾಗ ನೀವು ಉಪ್ಪನ್ನು ಬಳಸಬಹುದು.  ಮಗ್‌ನಲ್ಲಿ ಕಲೆಯಾದ ಜಾಗಕ್ಕೆ ಸ್ವಲ್ಪ ಉಪ್ಪನ್ನು ಸಿಂಪಡಿಸಿ ಮತ್ತು ಸ್ಪಂಜು ಅಥವಾ ಬಟ್ಟೆಯಿಂದ ನಿಧಾನವಾಗಿ ಉಜ್ಜಿಕೊಳ್ಳಿ. ಉಪ್ಪಿನ ಅಪಘರ್ಷಕ ಕ್ರಿಯೆಯು ಕಲೆಗಳನ್ನು ಸಡಿಲಗೊಳಿಸುತ್ತದೆ ಮತ್ತು ಕಪ್ ಸ್ವಲ್ಪ ಸಮಯದೊಳಗೆ ಅದರ ಸ್ವಚ್ಛ, ಹೊಳೆಯುವ ಸ್ಥಿತಿಗೆ ಮರಳುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಶಿಕಾ ಬಟ್ಟೆಗೆ ಖರ್ಚಾಗಿದ್ದು ಇಷ್ಟೊಂದಾ? ವಿವರಿಸಿದ ಬಿಗ್ ಬಾಸ್ ಸ್ಪರ್ಧಿ – Kannada News | Bigg Boss Rashika Shetty’s Wardrobe Budget: 1 and half Lakhs Spent on Clothes

ರಾಶಿಕಾ ಶೆಟ್ಟಿ (Rashika Shetty) ಅವರು ಕಳೆದ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಫಿನಾಲೆ ತಲುಪುವ ಮೊದಲೇ ಅವರು ದೊಡ್ಮನೆಯಿಂದ ಹೊರ ಹೋಗಿದ್ದಾರೆ. ಈ ವಿಷಯ ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ರಾಶಿಕಾಗೂ ಈ ವಿಷಯದಲ್ಲಿ ಕೊಂಚ ಬೇಸರ ಇದೆ. ಆ ವಾರ ಉಳಿದುಕೊಂಡಿದ್ದರೆ ಫಿನಾಲೆ ತಲುಪಬಹುದಿತ್ತಲ್ಲ ಎಂಬ ಕೊರಗು ಅವರನ್ನು ಕಾಡುತ್ತಿದೆ. ಈಗ ರಾಶಿಕಾ ಶೆಟ್ಟಿ ಅವರು ತಮ್ಮ ಖರ್ಚು ವೆಚ್ಚಗಳ ಬಗ್ಗೆ ಮಾತನಾಡಿದ್ದಾರೆ.ಅವರು ಬಿಗ್ ಬಾಸ್ ಮನೆಯಲ್ಲಿ ಬಟ್ಟೆಗಾಗಿ ಸಾಕಷ್ಟು ಹಣ ವ್ಯಯಿಸಿದ್ದಾರೆ.

ರಾಶಿಕಾ ಶೆಟ್ಟಿ ಅವರು ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಕ್ವೀನ್ ಎಂದೇ ಫೇಮಸ್ ಆದವರು. ಅವರು ಸಿನಿಮಾಗಳಲ್ಲಿ ಗುರುತಿಸಿಕೊಂಡು, ನಂತರ ಬಿಗ್ ಬಾಸ್ ಪ್ರವೇಶಿಸಿದರು. ಅವರು ಸಂಭಾವನೆ ವಿಷಯ ಮಾತನಾಡಲು ನಿರಾಕರಿಸಿದ್ದಾರೆ. ಆದರೆ, ಹೊರಗೆ ಹರಿದಾಡುತ್ತಿರುವ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಅವರು ಬಟ್ಟೆಗಾಗಿ ಲಕ್ಷ ಲಕ್ಷ ಸುರಿದಿದ್ದಾರೆ.

‘ಸಂಭಾವನೆ ಬಗ್ಗೆ ಸಾಕಷ್ಟು ಸುದ್ದಿ ಹರಿದಾಡುತ್ತಿದೆ. ತುಂಬಾ ಸಂಭಾವನೆ ತೆಗೆದುಕೊಂಡಿದ್ದೇನೆ ಎಂದು ಸುದ್ದಿ ಹಬ್ಬಿಸಿದ್ದಾರೆ. ಎಲ್ಲರೂ ಹಾಗೆಯೇ ಅಂದುಕೊಳ್ಳಲಿ. ಆದರೆ, ಸಂಭಾವನೆ ವಿಷಯವನ್ನು ಎಲ್ಲಿಯೂ ರಿವೀಲ್ ಮಾಡುವಂತೆ ಇಲ್ಲ. ಹೀಗಾಗಿ, ಸಂಭಾವನೆ ಬಗ್ಗೆ ಹೇಳಲ್ಲ’ ಎಂದಿದ್ದಾರೆ ಅವರು.

ಇದನ್ನೂ ಓದಿ: ಹೊರಗೆ ಗಿಲ್ಲಿ ಫ್ಯಾನ್​ ಬೇಸ್ ನೋಡಿ ಶಾಕ್ ಆದ ರಾಶಿಕಾ ಶೆಟ್ಟಿ

‘ಹೋಗುವಾಗ ಸಾಕಷ್ಟು ಶಾಪಿಂಗ್ ಮಾಡಿಕೊಂಡು ಹೋಗಿದ್ದೆ. ಅದಕ್ಕೆ ಒಂದೂವರೆ ಲಕ್ಷ ಖರ್ಚಾಗಿತ್ತು. ನಂತರ ಅಮ್ಮ ಹಾಗೂ ತಮ್ಮನೇ ನೋಡಿಕೊಂಡರು. ಅವರು ಕಳುಹಿಸುತ್ತಿದ್ದ ಬಟ್ಟೆಗಳು ನನ್ನ ಸ್ಟೈಲ್​​ಗೆ ಸೆಟ್ ಆಗುತ್ತಿರಲಿಲ್ಲ. ಹೀಗಾಗಿ, ನನಗೆ ಸೆಟ್​ ಆಗುವಂತಹದ್ದು ಕಳಿಸಿ ಎಂದು ಕೇಳಿಕೊಳ್ಳುತ್ತಿದೆ. ಅದರ ಮೇಲೆ ಅವರು ತುಂಬಾ ವರ್ಕ್​ ಮಾಡಿದ್ದಾರೆ’ ಎಂದು ರಾಶಿಕಾ ಹೇಳಿದ್ದಾರೆ.

ರಾಶಿಕಾ ಅವರು ಫಿನಾಲೆವರೆಗೆ ಇರುತ್ತಾರೆ ಎಂಬ ನಂಬಿಕೆ ಅವರ ಕುಟುಂಬದ್ದಾಗಿತ್ತು. ಹೀಗಾಗಿ ಫಿನಾಲೆಗೂ ಒಂದು ಡ್ರೆಸ್​​ನ ಸಿದ್ಧ ಮಾಡಲಾಗುತ್ತಿತ್ತು. ಆದರೆ, ಅವರು ಎಲಿಮಿನೇಟ್ ಆದರು. ಆದರೆ, ಫಿನಾಲೆ ದಿನ ರಾಶಿಕಾ ಅತಿಥಿಯಾಗಿ ತೆರಳಲಿದ್ದಾರೆ. ಆ ದಿನ ಈ ಡ್ರೆಸ್​​ನ ಧರಿಸಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಲಕ್ಕುಂಡಿಯಲ್ಲಿ ನಿಧಿ ಸಿಕ್ಕ ಕುಟುಂಬಕ್ಕೆ ಸರ್ಪದ ಭಯದ ನಡುವೆಯೂ ಶುಕ್ರದೆಸೆ – Kannada News | Lakkundi Gold treasure: Prajwal Gets Free Education offer And Family Waiting For Government compensation

ಗದಗ, (ಜನವರಿ 13): ನೂರೊಂದು ಬಾವಿ. ನೂರೊಂದು ದೇವಸ್ಥಾನಗಳ ಸ್ವರ್ಗ. ಐತಿಹಾಸಿಕ ಗ್ರಾಮ ಲಕ್ಕುಂಡಿಯಲ್ಲಿ ನಿಧಿಯದ್ದೇ (Lakkundi Gold treasure) ಚರ್ಚೆ. ದಿನಬೆಳಗಾದ್ರೆ ನಿಧಿ ನಿಧಿ ಎಂಬ ಮಾತು ಗಲ್ಲಿ ಗಲ್ಲಿಯಲ್ಲೂ ಚರ್ಚೆ ನಡೆಯುತ್ತಿದೆ. ಹೌದು.. ಗದಗದ (Gadag) ಲಕ್ಕುಂಡಿಯಲ್ಲಿ ಮನೆ ನಿರ್ಮಾಣಕ್ಕೆ ಪಾಯ ತೆಗೆಯುವಾಗ ನಿಧಿ ಸಿಕ್ಕಿದ್ದು, ಕುಟುಂಬ ಪ್ರಮಾಣಿಕತೆ ಮೆರೆದಿದೆ. ಆದ್ರೆ. ನಿಧಿಯಲ್ಲ, ನಿಧಿ ಅಂತಾ ಅಧಿಕಾರಿಗಳು ಧ್ವಂದ್ವ ಹೇಳಿಕೆ ನೀಡಿದ ಬಳಿಕ ಕುಟುಂಬಕ್ಕೆ ಮತ್ತಷ್ಟು ಗೊಂದಲ ಉಂಟಾಗಿದೆ. ನಿಧಿಯಲ್ಲ ಅಂದ್ರೆ ನಮ್ಮ ಚಿನ್ನ ನಮಗೆ ಕೊಡಿ ಎಂದ ಕುಟುಂಬ, ಬಳಿಕ ನಿಧಿ ಬೇಡ ನಮಗೆ ಮನೆ ಕೊಡಿ ಎಂದಿತ್ತು. ಆದ್ರೆ ಇದೀಗ ಅರ್ಧ ಕೆ.ಜಿಯಷ್ಟು ಜಿನ್ನ ಸಿಕ್ಕರೂ ಕುಟುಂಬಕ್ಕ ನೆಮ್ಮದಿಯೇ ಇಲ್ಲದಂತಾಗಿದೆ. ಕುಟುಂಬ ಗೊಂದಲಕ್ಕೆ ಸಿಲುಕುವುದಕ್ಕೂ ಕಾರಣವಿದೆ. ಅದೇನಂದ್ರೆ, ಈವರೆಗೂ ಲಕ್ಕುಂಡಿಯಲ್ಲಿ ನಿಧಿ ಸಿಕ್ಕವರಿಗೆ ಒಳ್ಳೆಯದೇ ಆಗಿಲ್ಲ. ಹೀಗಾಗಿ ಕುಟುಂಬ ಆತಂಕಕ್ಕಿಡಾಗಿದೆ. ಲಕ್ಕುಂಡಿ ಗ್ರಾಮದ ಹಿರಿಯರು ಈ ಹಿಂದೆ ನಿಧಿ ಪತ್ತೆ ಬಳಿಕ ಗ್ರಾಮದಲ್ಲಿ ಏನೇಲ್ಲಾ ಆಯ್ತು ಎಂಬ ವಿಚಾರವನ್ನ ಬಿಚ್ಚಿಟ್ಟಿದ್ದಾರೆ.

ಸಿಕ್ಕ ನಿಧಿ ಸರ್ಕಾರಕ್ಕೆ ಕೊಟ್ಟ ಬಾಲಕನಿಗೆ ಶುಕ್ರದೆಸೆ

ಮನೆ ಪಾಯ ಅಗೆಯುವಾಗ ಸಿಕ್ಕ ಬರೋಬ್ಬರಿ 65 ಲಕ್ಷ ರೂಪಾಯಿಗಿಂದ ಅಧಿಕ ಮೌಲ್ಯದ ನಿಧಿಯನ್ನು ಆಸೆ ಪಡದೇ ಸರ್ಕಾರಕ್ಕೆ ಒಪ್ಪಿಸಿ ದೇಶಕ್ಕೇ ಮಾದರಿಯಾಗಿದ್ದ ಲಕ್ಕುಂಡಿಯ ಬಾಲಕ ಪ್ರಜ್ವಲ್ ರಿತ್ತಿಗೆ ಇದೀಗ ಲಕ್ ಶುರುವಾಗಿದೆ. ಸರ್ಕಾರಕ್ಕೆ ನಿಧಿ ಕೊಟ್ಟು ಪ್ರಮಾಣಿಕತೆ ಮೆರೆದ ಪ್ರಜ್ವಲ್ ರಿತ್ತಿಗೆ ಬಿ.ಹೆಚ್‌ ಪಾಟೀಲ್ ಪದವಿ ಪೂರ್ವ ಕಾಲೇಜು ಶಿಕ್ಷಣ ಸಂಸ್ಥೆ ನೆರವಿನ ಹಸ್ತ ನೀಡಿದೆ. ಟಿವಿ9 ವರದಿಗೆ ಸ್ಪಂದಿಸಿದ ಶಿಕ್ಷಣ ಸಂಸ್ಥೆ, ಪ್ರಜ್ವಲ್‌ಗೆ ಪಿಯುಸಿವರೆಗೂ ಉಚಿತ ಶಿಕ್ಷಣ ನೀಡುವುದಾಗಿ ಘೋಷಿಸಿದೆ. ಪಿಯುಸಿ ಓದಿದ ಬಳಿಕ ಪೊಲೀಸ್ ಇಲಾಖೆ ಸೇರ್ತೀನಿ ಎಂದಿರೋ ಪ್ರಜ್ವಲ್, ಪೊಲೀಸ್ ಕಾನ್ಸ್‌ಸ್ಟೇಬಲ್ ಆಗುವ ಕನಸು ಬಿಚ್ವಿಟ್ಟಿದ್ದಾನೆ.

ಇದನ್ನೂ ಓದಿ: ಲಕ್ಕುಂಡಿಯಲ್ಲಿ ಸಿಕ್ಕ ನಿಧಿಯಲ್ಲಿ ಏನೇನು ಚಿನ್ನಾಭರಣಗಳಿದ್ದವು ಗೊತ್ತೇ? ಕೊನೆಗೂ ಸಿಕ್ತು ಅಧಿಕೃತ ಮಾಹಿತಿ

ಸದ್ಯ ನಿಧಿಯನ್ನ ಏನು ಮಾಡಬೇಕು ಎಂಬ ಬಗ್ಗೆ ಜಿಲ್ಲಾಡಳಿತ ಪರಿಶೀಲನೆ ಮಾಡುತ್ತಿದೆ.ಜಾಗ ವಶಕ್ಕೆ ಪುರಾತತ್ವ ಇಲಾಖೆ ಅಭಿಪ್ರಾಯ ಪಡೆದ ಬಳಿಕ ಮುಂದಿನ ನಿರ್ಧಾರವನ್ನ ಜಿಲ್ಲಾಡಳಿತ ಕೈಗೊಳ್ಳಲಿದೆ. ಲಕ್ಕುಂಡಿ ಗ್ರಾಮಕ್ಕೆ ಭೇಟಿ ನೀಡಿದ ಕಾನೂನು ಸಚಿವ ಹೆಚ್‌.ಕೆ ಪಾಟೀಲ್ ಪರಿಶೀಲನೆ ನಡೆಸಿದ್ದಾರೆ.ಬಳಿಕ ಮನೆ ಮಾಲೀಕರಾದ ಕಸ್ತೂರೆವ್ವ ರಿತ್ತಿ‌ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಕುಟುಂಬಕ್ಕೆ ಮನೆ, ನೌಕರಿ ಭರವಸೆ

ಬಳಿಕ ಮಾಧ್ಯಗಳಿಗೆ ಪ್ರತಿಕ್ರಿಯಿಸಿರುವ ಎಚ್​ಕೆ ಪಾಟೀಲ್, ಲಕ್ಕುಂಡಿ ಗ್ರಾಮದಲ್ಲಿ ಇತಿಹಾಸ ಸೃಷ್ಟಿಯಾಗಿದೆ. ಲಕ್ಕುಂಡಿಯಲ್ಲಿ‌ ಮಳೆಗಾಲದಲ್ಲಿ ಮುತ್ತು ರತ್ನ ಹವಳಗಳು ಸಿಗುತ್ತವೆ. ಈ ಸ್ಥಳದಲ್ಲಿ ಅನೇಕ ಅದ್ಭುತ ಘಟನೆಗಳು ನಡೆದಿವೆ. ಲಕ್ಕುಂಡಿಯನ್ನು ವಿಶ್ವಪಾರಂಪರಿಕ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನ ನಡೆದಿದೆ. 2 ದಿನದ ಹಿಂದೆ 466 ಗ್ರಾಂ ಚಿನ್ನ, 634 ಗ್ರಾಂ ತಾಮ್ರ ತಂಬಿಗೆ ಸಿಕ್ಕಿದೆ. ಲಕ್ಕುಂಡಿಯಲ್ಲಿ ಸಿಕ್ಕಿದ ಚಿನ್ನವನ್ನು ಗದಗ ಜಿಲ್ಲಾಡಳಿತಕ್ಕೆ ಒಪ್ಪಿಸಲಾಗಿದೆ. ಕಾನೂನು ಪ್ರಕಾರ ಈ ನಿಧಿಯನ್ನು ಎಲ್ಲಿ ಇಡಬೇಕೆಂದು ಚರ್ಚೆ ನಡೆಯುತ್ತಿದೆ ಎಂದು ಹೇಳಿದರು.

ಪ್ರಜ್ವಲ್ ಕುಟುಂಬಕ್ಕೆ ನೆರವು ನೀಡಬೇಕೆಂದು ಹಿರಿಯರು ಮನವಿ ಮಾಡಿದ್ದಾರೆ. ಮನೆ, ಜಾಗ, ಬಾಲಕನ ತಾಯಿಗೆ ಕೆಲಸ ಕೊಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಈ 3 ವಿಚಾರವನ್ನು ಸಿಎಂ ಜೊತೆ ಚರ್ಚಿಸುತ್ತೇನೆ. ಕಾನೂನು ಪ್ರಕಾರ ಏನ್ ಕೊಡಬೇಕು ಎಲ್ಲವೂ ಕುಟುಂಬಕ್ಕೆ ಮಾಡಲಾಗುತ್ತೆ. ಪ್ರಾಮಾಣಿಕತೆಗೆ ಗೌರವ ನೀಡುವ ಉದ್ದೇಶದಿಂದ ಮನೆ, ನೌಕರಿ ಕೊಡಲಾಗುತ್ತೆ.ಹೂವು ಕಟ್ಟಿ‌ಮಾರಾಟ ಮಾಡಿದಾಗ‌‌ ಮಾತ್ರ ಬದುಕು. ಇಂಥ ಬಡತನದಲ್ಲೂ ಬಂಗಾರ ನಮ್ಮದಲ್ಲ ಅಂತ ನೀಡಿದ್ದಾರೆ. ಕುಟುಂಬದ ಪ್ರಾಮಾಣಿಕತೆಗೆ ಗೌರವ ನೀಡಲಾಗುತ್ತೆ ಎಂದು ಸ್ಪಷ್ಟಪಡಿಸಿದರು.

ಒಟ್ಟಿನಲ್ಲಿ ತಮ್ಮ ಮನೆ ಪಾಯಾ ಅಗೆಯುವಾಗ ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿ ಪ್ರಮಾಣಿಕತೆ ಮರೆದಿರುವ ಕುಟುಂಬಕ್ಕೆ ಮೆಚ್ಚುಗೆಗಳ ಮಹಾಪೂರವೇ ಹರಿದುಬರುತ್ತಿದ್ದರೆ, ಮತ್ತೊಂದೆಡೆ ಸರ್ಕಾರದಿಂದ ಸೂಕ್ತ ಪರಿಹಾರ ಸಿಗುವ ಭರವಸೆಯಲ್ಲಿ ಕುಟುಂಬ ಇದೆ. ಆದ್ರೆ, ಊರಿನ ಹಿರಿಯ ಮಾತುಗಳಿಂದಾಗಿ ಆತಂಕಗೊಂಡಿರುವ ಕುಟುಂಬಸ್ಥರು, ಯಾಕಾದರೂ ನಿಧಿ ಸಿಕ್ಕಿತೋ ಎನ್ನುವಂತಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಜಮೌಳಿಯ ‘ವಾರಣಾಸಿ’ಗಿಂತ ಮೂರು ಪಟ್ಟು ಹೆಚ್ಚು ವೀವ್ಸ್ ಪಡೆದ ‘ಟಾಕ್ಸಿಕ್’ ಟೀಸರ್ – Kannada News | Toxic Movie Teaser: Yash’s Film Shatters Records with 8.5 Crore Views Breaks Varanasi Teaser Record

‘ಟಾಕ್ಸಿಕ್’ ಸಿನಿಮಾ (Toxic Movie) ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಚಿತ್ರದ ಟೀಸರ್​​ನಿಂದ ಏನಾದರೂ ವಿಷಯ ತಿಳಿಯಬಹುದು ಎಂದು ಫ್ಯಾನ್ಸ್ ಅಂದುಕೊಂಡಿದ್ದರು. ಆದರೆ, ಟೀಸರ್ ತುಂಬಾನೇ ಬೋಲ್ಡ್ ಆಗಿ ಮೂಡಿ ಬಂತು. ಇದರಿಂದ ಸಾಕಷ್ಟು ಚರ್ಚೆಗಳು ನಡೆದವು.ಈ ಕಾರಣದಿಂದಲೋ ಏನೋ ಸಿನಿಮಾದ ಟೀಸರ್ ನಿರೀಕ್ಷೆಗೂ ಮೀರಿದ ವೀವ್ಸ್ ಪಡೆದಿದೆ. ರಿಲೀಸ್ ಆದ ಐದು ದಿನಕ್ಕೆ ಈ ಟೀಸರ್ ಬರೋಬ್ಬರಿ 85 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ. ಇದು ‘ವಾರಣಾಸಿ’ ಟೀಸರ್​​ಗಿಂತ ಮೂರು ಪಟ್ಟು ಹೆಚ್ಚು.

‘ವಾರಣಾಸಿ’ ಟೀಸರ್ ರಿಲೀಸ್ ಮಾಡಲು ರಾಜಮೌಳಿ ದೊಡ್ಡ ಪ್ಲ್ಯಾನ್ ಮಾಡಿದ್ದರು. ಈ ಟೀಸರ್ ಲಾಂಚ್ ಮಾಡಲು ರಾಮೋಜಿ ಫಿಲ್ಮ್ ಸಿಟಿಯಲ್ಲಿ ದೊಡ್ಡ ಈವೆಂಟ್ ಮಾಡಲಾಯಿತು. ಈ ಈವೆಂಟ್​ಗಾಗಿ ಕೋಟಿ ಕೋಟಿ ಹಣವನ್ನು ಖರ್ಚು ಮಾಡಲಾಯಿತು. ಟೀಸರ್ ರಿಲೀಸ್ ಆಗಿ ಕೆಲವು ತಿಂಗಳು ಕಳೆದಿವೆ. ಆದರೆ, ಇದು ವೀಕ್ಷಣೆ ಕಂಡಿದ್ದು 25 ಮಿಲಿಯನ್ ಅಥವಾ ಎರಡೂವರೆ ಕೋಟಿ ಮಾತ್ರ.

ಆದರೆ, ‘ಟಾಕ್ಸಿಕ್’ ಟೀಸರ್ ರಿಲೀಸ್ ಆಗಿ ಕೆಲವೇ ದಿನಕ್ಕೆ ಬರೋಬ್ಬರಿ 8.5 ಕೋಟಿ ವೀಕ್ಷಣೆ ಕಂಡಿದೆ. ಇದು ಯಶ್ ಜನಪ್ರಿಯತೆಯನ್ನು ತೋರಿಸುತ್ತದೆ. ಅಲ್ಲದೆ, ಹಸಿಬಿಸಿ ದೃಶ್ಯಗಳನ್ನು ಟೀಸರ್​​ನಲ್ಲಿ ಇಡಲಾಗಿದ್ದು, ಈ ಕಾರಣದಿಂದಲೂ ಜನರು ಮುಗಿಬಿದ್ದು, ‘ಟಾಕ್ಸಿಕ್’ ಟೀಸರ್ ವೀಕ್ಷಿಸಿದ್ದಾರೆ ಎಂದೇ ಹೇಳಬಹುದು.

‘ಧುರಂಧರ್ 2’ ಸಿನಿಮಾ ಹಾಗೂ ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ರಂದು ರಿಲೀಸ್ ಆಗುತ್ತಿವೆ. ಎರಡೂ ಸಿನಿಮಾಗಳು ದೊಡ್ಡ ಬಜೆಟ್ ಚಿತ್ರಗಳು. ಕೆಲವು ಬಾಲಿವುಡ್ ಮಂದಿ ‘ಟಾಕ್ಸಿಕ್’ ಸಿನಿಮಾ ಬಗ್ಗೆ ನೆಗೆಟಿವ್ ಮಾಡುವ ಕೆಲಸ ಮಾಡುತ್ತಿದ್ದಾರೆ. ಆದರೆ, ಸದ್ಯದ ಟೀಸರ್ ವೀವ್ಸ್ ನೋಡಿದರೆ ಚಿತ್ರ ಅದ್ಭುತ ಯಶಸ್ಸು ಪಡೆಯೋ ಎಲ್ಲಾ ಲಕ್ಷಣ ಕಾಣಿಸುತ್ತಿದೆ.

ಇದನ್ನೂ ಓದಿ:  ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿದ್ರೆ ಎಲ್ಲ ಗೊತ್ತಾಗತ್ತೆ: ವಿನಯ್ ಗೌಡ

‘ಟಾಕ್ಸಿಕ್’ ಚಿತ್ರಕ್ಕೆ ಯಶ್ ಹೀರೋ. ಕಿಯಾರಾ ಅಡ್ವಾಣಿ, ನಯನತಾರಾ, ರುಕ್ಮಿಣಿ ವಸಂತ್ ಸೇರಿದಂತೆ ಐವರು ನಾಯಕಿಯರು ಇದ್ದಾರೆ. ಗೀತು ಮೋಹನ್​ ದಾಸ್ ಅವರು ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ: ಮತ್ತೆ ದರೋಡೆ ಮಾಡಿ ಲಾಕ್​​ ಆದ ಗ್ಯಾಂಗ್ – Kannada News | Bengaluru Robbery Gang Caught, Kengeri Police Arrest Repeat Offenders

ಬೆಂಗಳೂರು, ಜನವರಿ 13: ಮೂವತ್ತು ಹೆಚ್ಚು ರಾಬರಿ ಮಾಡಿದ್ದ ಖತರ್ನಾಕ್​​ ಗ್ಯಾಂಗ್​​ನ ಖೆಡ್ಡಾಕೆ ಕೆಡವುವಲ್ಲಿ ಬೆಂಗಳೂರಿನ ಕೆಂಗೇರಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ಹೊಸ ವರ್ಷದ ಹಿಂದಿನ ದಿನ ವ್ಯಕ್ತಿಯೋರ್ವನನ್ನು ಅಡ್ಡಗಟ್ಟಿದ್ದ 1 ಲಕ್ಷ ರೂಪಾಯಿ ದರೋಡೆ ಮಾಡಿತ್ತು. ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳು ಈ ಹಿಂದೆ ಇಂತಹುದೇ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಸೇರಿದ್ದರು ಎಂಬುದು ಕೂಡ ತನಿಖೆ ವೇಳೆ ಬಯಲಾಗಿದೆ.

 ಗ್ಯಾಂಗ್​​ಗಿದೆ ಕರಾಳ ಇತಿಹಾಸ!

ಬಂಧಿತ ಆರೋಪಿಗಳಾದ ಸುರೇಶ್ ಅಲಿಯಾಸ್​​ ಸೂರಿ, ಶಶಿಕುಮಾರ್ ಮತ್ತು ಅಕಿಲ್ ಅಲಿಯಾಸ್​ ಕೋಜ ಚಿಕ್ಕ ವಯಸ್ಸಿನಲ್ಲಿಯೇ ದರೋಡೆ ನಡೆಸಲು ಆರಂಭಿಸಿದ್ದರು. ಹಣ ನೀಡದಿದ್ರೆ ಚಾಕು, ಚೂರಿಯಿಂದ ಹಲ್ಲೆ ನಡೆಸಿ ಗ್ಯಾಂಗ್​​ ಎಸ್ಕೇಪ್​​ ಆಗುತ್ತಿತ್ತು. ನಗರದ ಹೊರವಲಯಗಳಲ್ಲಿ ರಾತ್ರಿ ವೇಳೆ ರಾಬರಿ ಮಾಡುತ್ತಿದ್ದ ಆರೋಪಿಗಳು, ಹಲವರನ್ನು ಬೆದರಿಸಿ ಸುಲಿಗೆ ಮಾಡಿದ್ದರು. ಸೂರ್ಯ ಸಿಟಿ, ಮಾದನಾಯಕನಹಳ್ಳಿ, ಹೆಬ್ಬಗೋಡಿ, ಬ್ಯಾಡರಹಳ್ಳಿ, ಸೇರಿದಂತೆ ಹಲವು ಕಡೆ ತಮ್ಮ ಬುದ್ಧಿ ತೋರಿದ್ದರು. ಬ್ಯಾಡರಹಳ್ಳಿ ಲಾರಿ ಚಾಲಕ, ಮಾದನಾಯಕನಹಳ್ಳಿಯಲ್ಲಿ ವಕೀಲರೋರ್ವರನ್ನೂ ಗ್ಯಾಂಗ್​​ ದೋಚಿತ್ತು. ಸಾಲದ್ದಕ್ಕೆ ಮಹದೇಶ್ವರ ಬೆಟ್ಟಕ್ಕೆ ಜಾಲಿ ಟ್ರಿಪ್ ಹೋಗಿದ್ದ ಆರೋಪಿಗಳು ಅಲ್ಲಿಯೂ ಪ್ರೇಮಿಗಳನ್ನ ಹೆದರಿಸಿ ದರೋಡೆ ಮಾಡಿದ್ದರು. ಕಳೆದ ಸೆಪ್ಟೆಂಬರ್​​ನಲ್ಲಿ ಬ್ಯಾಡರಹಳ್ಳಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಬಾಲ ಕಾರಾಗೃಹಕ್ಕೆ ಕಳುಹಿಸಿದ್ದರು.

ಇದನ್ನೂ ಓದಿ: ಶಬರಿಮಲೆಗೆ ಹೋಗಿ ಬಂದ, ಬಳಿಕ ಪತ್ನಿ ಕೊಂದ; ಸಿನಿಮಾ ಸ್ಟೈಲ್​​ನಲ್ಲಿ ನಡೀತು ಹತ್ಯೆ!

ಜೈಲಿಗೆ ಹೋಗಿ ಬಂದರೂ ಬುದ್ಧಿ ಕಲಿಯದ ಆರೋಪಿಗಳು ಮತ್ತೆ ತಮ್ಮ ಹಳೇ ಚಾಳಿ ಮುಂದುವರಿಸಿದ್ದಾರೆ. ಇದರ ಭಾಗವಾಗಿ ಹೊಸ ವರ್ಷದ ಹಿಂದಿನ ದಿನವೂ ದರೋಡೆ ನಡೆಸಿ, ಈಗ ಮತ್ತೆ ಖಾಕಿ ಕೈಲಿ ತಗಲಾಕಿಕೊಂಡಿದ್ದಾರೆ. ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಕರಣ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ. ಅಪರಾಧ ಕೃತ್ಯಗಳನ್ನು ಎಸಗಿ ಒಮ್ಮೆ ಶಿಕ್ಷೆ ಅನುಭವಿಸಿದರೂ ಗ್ಯಾಂಗ್​​ ಬುದ್ಧಿ ಕಲಿಯದೇ ಇರೋದು ನಿಜಕ್ಕೂ ದುರ್ದೈವವೇ ಸರಿ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Blinkit:ಹತ್ತು ನಿಮಿಷಗಳಲ್ಲಿ ಮನೆ ಮನೆಗೆ ಡೆಲಿವರಿ ವ್ಯವಸ್ಥೆ ಕೈಬಿಟ್ಟ ಬ್ಲಿಂಕಿಟ್ – Kannada News | Speed Meets Scrutiny: Blinkit Drops 10 Minute Promise After Govt Nudge

ನವದೆಹಲಿ, ಜನವರಿ 13: ಕೇವಲ ಹತ್ತು ನಿಮಿಷಗಳಲ್ಲಿ ಮನೆ ಮನೆಗೆ ವಸ್ತುಗಳನ್ನು ಡೆಲಿವರಿ ಮಾಡುವ ವ್ಯವಸ್ಥೆಯನ್ನು ಬ್ಲಿಂಕಿಟ್(Blinkit) ಕೈಬಿಟ್ಟಿದೆ. ಉದ್ಯೋಗ ಮತ್ತು ಸಾಮಾಜಿಕ ಭದ್ರತೆಗೆ ಒತ್ತಾಯಿಸಿ ಇತ್ತೀಚಿಗೆ ಡಿ. 31ರಂದು ಸ್ವಿಗ್ಗಿ, ಜೊಮ್ಯಾಟೋ, ಪ್ಲಿಪ್​ಕಾರ್ಟ್, ಬ್ಲಿಂಕಿಟ್ ಸೇರಿ ಆನ್​ಲೈನ್​ ಆ್ಯಪ್​ಗಳ ಗಿಗ್​ ಕಾರ್ಮಿಕರು ಮುಷ್ಕರ ನಡೆಸಿದ್ದರು.

ಮುಷ್ಕರ ಅಷ್ಟೇನೂ ಪ್ರಭಾವ ಬೀರದಿದ್ದರು, ಕೆಲವು ಬದಲಾವಣೆ ಮಾಡಲು ಕಂಪನಿಗಳು ಒಪ್ಪಿಕೊಂಡಿತ್ತು. ಇನ್ನು ಕಾರ್ಮಿಕರು 10 ನಿಮಿಷಗಳ ವಿತರಣಾ ಆಯ್ಕೆಯನ್ನು ತೆಗೆಯುವಂತೆ ಬೇಡಿಕೆಯನ್ನು ಇಟ್ಟಿದ್ದರು.
ಹತ್ತು ನಿಮಿಷಗಳ ವಿತರಣಾ ಮಾದರಿಯಿಂದಾಗಿ ಸವಾರರು ತೀವ್ರ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಅವರ ಸುರಕ್ಷತೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಸಾರ್ವಜನಿಕರಿಂದ ಈ ಬಗ್ಗೆ ಚರ್ಚೆ ನಡೆದಿತ್ತು.

ಈ ವಿಚಾರದಲ್ಲಿ ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವೀಯ ಮಧ್ಯ ಪ್ರವೇಶಿಸಿದ್ದು, ನಂತರ ಬ್ಲಿಂಕಿಟ್ ಎಲ್ಲಾ ಬ್ರ್ಯಾಂಡ್ ಪ್ಲ್ಯಾಟ್​ಫಾರಂಗಳಿಂದ ತನ್ನ 10 ನಿಮಿಷಗಳ ಡೆಲಿವರಿ ವ್ಯವಸ್ಥೆಯನ್ನು ತೆಗೆದುಹಾಕಿದೆ. ಮಾಂಡವಿಯಾ ಅವರು ಬ್ಲಿಂಕಿಟ್, ಜೆಪ್ಟೊ, ಸ್ವಿಗ್ಗಿ ಮತ್ತು ಜೊಮಾಟೊ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ನಂತರ, ಕಾರ್ಮಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಕಟ್ಟುನಿಟ್ಟಾದ ವಿತರಣಾ ಸಮಯದ ಮಿತಿಗಳನ್ನು ತೆಗೆದುಹಾಕುವಂತೆ ಕಂಪನಿಗಳಿಗೆ ಸಲಹೆ ನೀಡಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ಮತ್ತಷ್ಟು ಓದಿ: ತಡರಾತ್ರಿ ಇಲಿ ಪಾಷಾಣ ಆರ್ಡರ್ ಮಾಡಿದ ಮಹಿಳೆಯ ಜೀವ ಉಳಿಸಿದ ಡೆಲಿವರಿ ಬಾಯ್!

ನಾಲ್ಕು ಕಂಪನಿಗಳು ತಮ್ಮ ಬ್ರ್ಯಾಂಡ್ ಜಾಹೀರಾತುಗಳು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ವಿತರಣಾ ಸಮಯದ ಬದ್ಧತೆಗಳನ್ನು ತೆಗೆದುಹಾಕುವುದಾಗಿ ಸರ್ಕಾರಕ್ಕೆ ಭರವಸೆ ನೀಡಿವೆ. ಹೊಸ ವರ್ಷದ ದಿನದಂದು ಗಿಗ್ ಕಾರ್ಮಿಕರ ಮುಷ್ಕರದ ನಡುವೆಯೂ ಜೊಮಾಟೊ ಮತ್ತು ಬ್ಲಿಂಕಿಟ್ ಒಟ್ಟಾಗಿ ದಾಖಲೆಯ 75 ಲಕ್ಷ ಆರ್ಡರ್‌ಗಳನ್ನು ಗ್ರಾಹಕರಿಗೆ ತಲುಪಿಸಿವೆ ಎನ್ನಲಾಗಿದೆ.

ಬ್ಲಿಂಕಿಟ್‌ನಲ್ಲಿ ಸ್ವೀಕರಿಸಿದ ಆರ್ಡರ್ ಅನ್ನು ಪ್ಯಾಕ್ ಮಾಡಲು 2.5 ನಿಮಿಷಗಳು ಬೇಕಾಗುತ್ತದೆ. ಅಲ್ಲಿಂದ ವಿತರಣೆಯ ಅಂತರ 2 ಕಿ.ಮೀ ಇದೆ. ನೀವು ಗಂಟೆಗೆ 15 ಕಿ.ಮೀ ವೇಗದಲ್ಲಿ ಪ್ರಯಾಣಿಸಿದರೂ, ನೀವು 8 ನಿಮಿಷಗಳಲ್ಲಿ ಸ್ಥಳವನ್ನು ತಲುಪಬಹುದು. ಇದಲ್ಲದೆ, ತಡವಾಗಿ ವಿತರಣೆ ಮಾಡಿದರೆ ತಮ್ಮ ಏಜೆಂಟರಿಗೆ ದಂಡ ವಿಧಿಸಲಾಗುವುದಿಲ್ಲ ಎಂದು ಹೇಳಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 2:39 pm, Tue, 13 January 26

Source link

ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ: ನೋಡುತ್ತಾ ನಿಂತ ವಾಹನ ಸವಾರರು! – Kannada News | Massive Lone Elephant Walks Onto Road Near Male Mahadeshwara Hills, Motorists Stop to Watch

ಚಾಮರಾಜನಗರ, ಜನವರಿ 13: ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದ ರಾಮಾಪುರ ರಸ್ತೆಯಲ್ಲಿ ಬೃಹತ್ ಗಾತ್ರದ ಒಂಟಿ ಸಲಗ ರಸ್ತೆ ದಾಟುತ್ತಿರುವ ದೃಶ್ಯ ಕಂಡು ಬಂದಿದೆ. ಏಕಾಏಕಿ ಬಂದ ಒಂಟಿ ಸಲಗವನ್ನು ನೋಡಲು ಕೆಲಕಾಲ ವಾಹನ ಸವಾರರು ಮತ್ತು ಮಾದಪ್ಪನ ಭಕ್ತರು ರಸ್ತೆಯಲ್ಲೇ ನಿಂತಿದ್ದಾರೆ. ಹನೂರಿನಿಂದ ರಾಮಾಪುರಕ್ಕೆ ತೆರಳುವ ಮಾರ್ಗದಲ್ಲಿ ಪ್ರತಿದಿನವೂ ಒಂಟಿ ಸಲಗ ಸೇರಿದಂತೆ ಕೆಲ ಕಾಡಾನೆಗಳ ಹಿಂಡು ರಸ್ತೆ ದಾಟುತ್ತಿರುವುದು ಸಾಮಾನ್ಯವಾಗಿದೆ. ಕಾಡಾನೆಗಳು ಪ್ರತಿದಿನ ನೀರು ಕುಡಿಯಲು ಈ ಭಾಗಕ್ಕೆ ಆಗಮಿಸುತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಆದರೆ, ಆನೆಗಳನ್ನು ನೋಡಲು ವಾಹನ ಸವಾರರು ರಸ್ತೆಯಲ್ಲೇ ನಿಂತು ವಿಡಿಯೋ ತೆಗೆಯುತ್ತಿರುವುದು ಅಪಾಯಕಾರಿಯಾಗಿದೆ. ಸ್ವಲ್ಪ ಅಜಾಗರೂಕತೆ ನಡೆದರೂ ಬೈಕ್ ಸವಾರರು ಹಾಗೂ ಇತರ ವಾಹನ ಚಾಲಕರಿಗೆ ಅಪಾಯ ಎದುರಾಗುವ ಸಾಧ್ಯತೆ ಇದೆ. ಇಂತಹ ಸಂದರ್ಭಗಳಲ್ಲಿ ಕಾಡಾನೆಗಳು ಏಕಾಏಕಿ ದಾಳಿ ಮಾಡುವ ಭೀತಿಯೂ ಇದ್ದು, ಅಪಘಾತ ಸಂಭವಿಸುವ ಆತಂಕವೂ ಹೆಚ್ಚಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಟಾಕ್ಸಿಕ್’ಗೆ ಮತ್ತೊಂದು ಸಂಕಷ್ಟ: ಸಿಬಿಎಫ್​​ಸಿಗೆ ದೂರು ಸಲ್ಲಿಕೆ – Kannada News | Complaint to CBFC about Yash starrer Toxic movie teaser

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾದ ಟೀಸರ್ ಕೆಲವೇ ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ. ಟೀಸರ್ ಬಗ್ಗೆ ನಾನಾ ರೀತಿಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಟೀಸರ್ ತುಂಬಾ ಹಾಟ್ ಆಯ್ತೆಂದು ಕೆಲವರು, ಅನವಶ್ಯಕ ಹಾಟ್ ದೃಶ್ಯ ಸೇರಿಸಲಾಗಿದೆ ಎಂದು ಮತ್ತೊಬ್ಬರು. ಇನ್ನು ಕೆಲವರು ಟೀಸರ್​ನ ಪರವಾಗಿಯೂ ವಾದ ಮಂಡಿಸುತ್ತಿದ್ದಾರೆ. ಇದೆಲ್ಲದರ ಮಧ್ಯೆ, ಸಿನಿಮಾದ ವಿರುದ್ಧ ದೂರುಗಳು ದಾಖಲಾಗಲು ಆರಂಭವಾಗಿವೆ. ನಿನ್ನೆ ‘ಟಾಕ್ಸಿಕ್’ ಸಿನಿಮಾ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ದಾಖಲಾಗಿತ್ತು. ಮಕ್ಕಳ ಆಯೋಗವು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದೆ. ಇದೀಗ ಸಿಬಿಎಫ್​​ಸಿ (ಸೆನ್ಸಾರ್ ಮಂಡಳಿ)ಗೆ ದೂರು ದಾಖಲಾಗಿದೆ.

‘ಟಾಕ್ಸಿಕ್’ ಸಿನಿಮಾದ ಟೀಸರ್​​ನಲ್ಲಿ ಅಶ್ಲೀಲ ಹಾಗೂ ನೈತಿಕತೆಗೆ ವ್ಯತಿರಿಕ್ತವಾದ ದೃಶ್ಯಗಳಿವೆ ಎಂದು ಆರೋಪಿಸಲಾಗಿದ್ದು, ಸಾಮಾಜಿಕ ಕಾರ್ಯಕರ್ತರ ದಿನೇಶ್ ಕಲ್ಲಹಳ್ಳಿ, (ಸಿಬಿಎಫ್​​ಸಿ) ಸೆನ್ಸಾರ್ ಮಂಡಳಿಗೆ ಈ ಬಗ್ಗೆ ದೂರು ದಾಖಲಿಸಿದ್ದು, ‘ಟಾಕ್ಸಿಕ್’ ಸಿನಿಮಾಕ್ಕೆ ಪ್ರಮಾಣ ಪತ್ರ ನೀಡಬಾರದೆಂದು ಆಗ್ರಹಿಸಿದ್ದಾರೆ. ಟೀಸರ್‌ನಲ್ಲಿ ಲೈಂಗಿಕವಾಗಿ ಪ್ರಚೋದಿಸುವ ಹಾಗೂ ಅಶ್ಲೀಲ ದೃಶ್ಯಗಳಿವೆ, ಅವು ಅಪ್ರಾಪ್ತ ವಯಸ್ಕರ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಎಂದು ಕಳವಳ ವ್ಯಕ್ತಪಡಿಸಿರುವ ದಿನೇಶ್ ಕಲ್ಲಹಳ್ಳಿ, ಸಿನೆಮಾದ ಟೀಸರ್ ಸಾಮಾಜಿಕ ನೈತಿಕತೆಯ ಮಿತಿಯನ್ನು ಮೀರಿದೆ, ಆದ್ದರಿಂದ ಕೂಡಲೇ ಈ ದೃಶ್ಯಗಳನ್ನು ತೆಗೆದುಹಾಕಬೇಕು, ಚಿತ್ರದ ನಿರ್ದೇಶಕರು ಹಾಗೂ ನಿರ್ಮಾಪಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಹೇಳಿದೆ.

ಇದನ್ನೂ ಓದಿ:ಯಶ್ ಜೊತೆ ಕಾರಿನಲ್ಲಿದ್ದ ಯುವತಿ ಯಾರು? ಖಾತ್ರಿ ಪಡಿಸಿದ ನಿರ್ದೇಶಕಿ

‘ಟಾಕ್ಸಿಕ್’ ಸಿನಿಮಾದ ವಿರುದ್ಧ ಕರ್ನಾಟಕ ಎಎಪಿಯ ಮಹಿಳಾ ಘಟಕವು ಮಹಿಳಾ ಆಯೋಗಕ್ಕೆ ದೂರು ನೀಡಿದೆ. ಈ ಚಿತ್ರದ ಟೀಸರ್‌ನಲ್ಲಿ ಕೆಲವು ದೃಶ್ಯಗಳು ಅಶ್ಲೀಲವಾಗಿದ್ದು, ಮಹಿಳೆಯರು ಮತ್ತು ಮಕ್ಕಳ ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆ ಉಂಟು ಮಾಡುತ್ತಿವೆ. ಯಾವುದೇ ವಯೋಮಾನದ ಎಚ್ಚರಿಕೆ ಇಲ್ಲದೆ ಸಾರ್ವಜನಿಕ ವಲಯದಲ್ಲಿ ಬಿಡುಗಡೆಯಾದ ಈ ದೃಶ್ಯಗಳು ಮಹಿಳೆಯರ ಘನತೆಯನ್ನು ಕುಗ್ಗಿಸುತ್ತವೆ ಮತ್ತು ಕನ್ನಡ ಸಂಸ್ಕೃತಿಯನ್ನು ಅವಮಾನಿಸುತ್ತವೆ” ಎಂದು ಎಎಪಿ ರಾಜ್ಯ ಕಾರ್ಯದರ್ಶಿ ಉಷಾ ಮೋಹನ್ ಅವರು ದೂರಿನಲ್ಲಿ ತಿಳಿಸಿದ್ದಾರೆ.

‘ಟಾಕ್ಸಿಕ್’ ಸಿನಿಮಾದ ಟೀಸರ್ ಜನವರಿ 08 ರಂದು ಬಿಡುಗಡೆ ಆಗಿದೆ. ಟೀಸರ್​​ನಲ್ಲಿ ಲೈಂಗಿಕತೆಗೆ ಸಂಬಂಧಿಸಿದ ಕೆಲ ದೃಶ್ಯಗಳು ಇದ್ದು, ಇವು ಟೀಸರ್​​ನ ಬಗ್ಗೆ ಚರ್ಚೆ ಹೆಚ್ಚಾಗಲು ಕಾರಣವಾಗಿವೆ. ಸಿನಿಮಾದ ಟೀಸರ್ ಈಗಾಗಲೇ 300 ಮಿಲಿಯನ್​​ಗೂ ಹೆಚ್ಚು ಬಾರಿ ವೀಕ್ಷಣೆಗೆ ಒಳಗಾಗಿದೆ. ‘ಟಾಕ್ಸಿಕ್’ ಸಿನಿಮಾವನ್ನು ಗೀತು ಮೋಹನ್​​ದಾಸ್ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ನಯನತಾರಾ, ರುಕ್ಮಿಣಿ ವಸಂತ್, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ಹುಮಾ ಖುರೇಷಿ ಅವರುಗಳು ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 2:26 pm, Tue, 13 January 26

Source link

Video: ನಾಯಿ ಮರಿಗಳ ಹೆಜ್ಜೆ ಗುರುತಿನಿಂದ ಮನೆ ಬಾಗಿಲನ್ನು ಅಲಂಕರಿಸಿದ ಯುವತಿಯರು – Kannada News | Young woman find different ways to decorate their doorsteps

ಮನೆಯನ್ನು ಸುಂದರವಾಗಿ ಅಲಂಕರಿಸುವುದರಲ್ಲಿ ಹೆಂಗಳೆಯರು ಎತ್ತಿದ ಕೈ. ಹೀಗಾಗಿ ಬಿಸಾಡುವ ವಸ್ತುಗಳನ್ನು ಬಳಸಿ ಸುಂದರವಾದ ಅಲಂಕಾರಿಕ ಸಾಮಗ್ರಿಗಳನ್ನು (decorative items) ತಯಾರಿಸುತ್ತಾರೆ. ಆದರೆ ಈ ಯುವತಿಯರು (young woman’s) ಮನೆ ಬಾಗಿಲನ್ನು ಅಲಂಕರಿಸಲು ಮನೆಯ ಮುದ್ದಿನ ನಾಯಿಮರಿಗಳನ್ನು ಬಳಸಿದ್ದಾರೆ. ಅದೇಗೆ ಅಂತೀರಾ?, ಈ ಕುರಿತಾದ ಸ್ಟೋರಿ ಓದಿ.

Puran8200singh ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಯುವತಿಯರಿಬ್ಬರೂ ತಮ್ಮ ಮನೆಯ ಬಾಗಿಲನ್ನು ಅಲಂಕರಿಸುತ್ತಿರುವುದನ್ನು ತೋರಿಸಲಾಗಿದೆ. ಆದರೆ ಈ ಇಬ್ಬರೂ ಯುವತಿಯರು ಅಳವಡಿಸಿಕೊಂಡ ವಿಧಾನದ ಬಗ್ಗೆ ನೀವು ಊಹೆ ಮಾಡಿರಲು ಸಾಧ್ಯವಿಲ್ಲ. ನಾಯಿ ಮರಿಗಳನ್ನು ಹಿಡಿದುಕೊಂಡು ಅದರ ಪಾದಗಳನ್ನು ಬಣ್ಣದಲ್ಲಿ ಅದ್ದಿದ್ದಾರೆ. ಆ ಬಳಿಕ ಬಣ್ಣದಲ್ಲಿ ಅದ್ದಿದ ಪಾದಗಳನ್ನು ಮನೆ ಬಾಗಿಲಿಗೆ ಒತ್ತಿ ಹಿಡಿದು ಸುಂದರವಾದ ವಿನ್ಯಾಸ ಬರುವಂತೆ ಮಾಡಿದ್ದಾರೆ. ಮನೆ ಬಾಗಿಲಿನ ಮೇಲೆ ನಾಯಿ ಮರಿಗಳ ಹೆಜ್ಜೆ ಗುರುತುಗಳು ಮೂಡಿರುವುದನ್ನು ಕಾಣಬಹುದು. ಈ ರೀತಿ ವಿಧಾನಗಳನ್ನು ಬಳಸಿದ್ದು ಇದೇ ಮೊದಲಾಗಿದ್ದು, ಈ ಯುವತಿಯರ ಬುದ್ಧಿವಂತಿಕೆಯನ್ನು ನೀವಿಲ್ಲಿ ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ:ನೀವು ಕೂಡ ಮನೆ ಮುಂದೆ ಈ ದೊಡ್ಡ ಕಣ್ಣುಗಳ ಮಹಿಳೆಯ ಫೋಟೋ ನೋಡಿದ್ದೀರಾ?

ಈ ವಿಡಿಯೋ 1.8 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ದೋಗೇಶ್ ಭಾಯ್ ಅವರನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಇಂತಹ ಐಡಿಯಾ ನಮಗೂ ಹೊಳೆಯಲಿಲ್ಲ ಎಂದಿದ್ದಾರೆ. ಮತ್ತೊಬ್ಬರು ಪಾಪ ಆ ನಾಯಿಮರಿಗಳು ಮನಸ್ಸಲ್ಲಿ ಎಷ್ಟು ಬೈದುಕೊಳ್ಳುತ್ತಿವೆ ದೇವರಿಗೆ ಗೊತ್ತು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link