Headlines

nagaraj11081993

IPL 2026: ಐಪಿಎಲ್ ಪಾಯಿಂಟ್ಸ್ ಟೇಬಲ್​ನಲ್ಲಿ ಮಹತ್ವದ ಬದಲಾವಣೆ – Kannada News | PL 2026 Points Table After PBKS vs LSG Match

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 29 ಪಂದ್ಯಗಳು ಮುಗಿದಿವೆ. ಈ ಇಪ್ಪತ್ತೊಂದು ಪಂದ್ಯಗಳಲ್ಲಿ ಕೊನೆಯ ಮ್ಯಾಚ್ ಆಡಿರುವುದು ಪಂಜಾಬ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್. ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್​ ತಂಡವು 54 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಪಂಜಾಬ್ ಪಡೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಹಾಗಿದ್ರೆ ನೂತನ ಪಾಯಿಂಟ್ಸ್​ ಟೇಬಲ್​ನಲ್ಲಿ ಯಾವ ತಂಡ ಯಾವ ಸ್ಥಾನದಲ್ಲಿದೆ ಎಂದು ನೋಡೋಣ… 1- ಪಂಜಾಬ್ ಕಿಂಗ್ಸ್: ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್…

Read More

SC, ST ಮೇಲಿನ ದೌರ್ಜನ್ಯ ತನಿಖೆ ಮಾಡುವ DCREಯಲ್ಲಿಯೇ ಮೇಲ್ಜಾತಿ ಅಧಿಕಾರಿಗಳಿಂದ ದಲಿತ ಅಧಿಕಾರಿಗೆ ಕಿರುಕುಳ ಆರೋಪ! – Kannada News | Dcre inspector alleges harassment by senior officers files complaint with dg

ಮೇಲ್ಜಾತಿ ಅಧಿಕಾರಿಗಳಿಂದ ದಲಿತ ಅಧಿಕಾರಿಗೆ ಕಿರುಕುಳ ಆರೋಪ Image Credit source: Tv9 Kannada ಬೆಂಗಳೂರು, ಏಪ್ರಿಲ್​​ 20: ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡಗಳ (ST) ಮೇಲಿನ ದೌರ್ಜನ್ಯ ಕೇಸ್ ತನಿಖೆ ನಡೆಸುವ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದಲ್ಲಿಯೇ (DCRE) ಮೇಲ್ಜಾತಿ ಅಧಿಕಾರಿಗಳಿಂದ ದಲಿತ ಅಧಿಕಾರಿಗೆ ಕಿರುಕುಳ ಆರೋಪ ಕೇಳಿಬಂದಿದೆ. DCRE ಕೇಂದ್ರ ಕಚೇರಿ SP ಕರಿಬಸನಗೌಡ ಹಾಗೂ DySP ಮಹೇಶ್ವರಗೌಡ ಮೇಲೆ ಆರೋಪ ಮಾಡಲಾಗಿದ್ದು, ಈ ಬಗ್ಗೆ ಪಶ್ಚಿಮ ವಲಯ DCRE ಪೊಲೀಸ್…

Read More

ಕಾಂಗ್ರೆಸ್ ಶಾಸಕ ಹ್ಯಾರಿಸ್, ಪುತ್ರ ನಲಪಾಡ್ ಮನೆ ಮೇಲೆ ಇ.ಡಿ ದಾಳಿ – Kannada News | ED Raids Congress MLA NA Haris and Son Mohammed Nalapad’s Residences in Bengaluru Over Bitcoin Scam Links

ಬೆಂಗಳೂರು, ಏಪ್ರಿಲ್ 20: ಕಾಂಗ್ರೆಸ್ ಶಾಸಕ ಎನ್​ಎ ಹ್ಯಾರಿಸ್ ಮತ್ತು ಅವರ ಪುತ್ರ ಮೊಹಮ್ಮದ್ ನಲಪಾಡ್ ನಿವಾಸಗಳ ಮೇಲೆ ಸೋಮವಾರ ಬೆಳಗ್ಗೆ ಜಾರಿ ನಿರ್ದೇಶನಾಲಯ (ಇ.ಡಿ.) ದಾಳಿ ನಡೆಸಿದೆ. ಬೆಂಗಳೂರಿನ ಅಶೋಕನಗರದಲ್ಲಿರುವ ಹ್ಯಾರಿಸ್ ನಿವಾಸ ಹಾಗೂ ಮೊಹಮ್ಮದ್ ನಲಪಾಡ್ ಮನೆಯ ಮೇಲೆ ದಾಳಿ ನಡೆದಿದೆ. ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ. ಇ.ಡಿ. ಅಧಿಕಾರಿಗಳು ಬೆಂಗಳೂರು ಸೇರಿದಂತೆ ಒಟ್ಟು 17 ಸ್ಥಳಗಳಲ್ಲಿ ಮಹತ್ವದ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಮೊಹಮ್ಮದ್ ನಲಪಾಡ್ ಹ್ಯಾಕರ್ ಶ್ರೀಕಿ ಜೊತೆ ನಂಟು…

Read More

ಬಿಗ್ ಬಾಸ್ ವಿನ್ನರ್ ಘೋಷಣೆ ಮಾಡಿದ ನಟ ರಿತೇಶ್ ದೇಶ್​​ಮುಖ್ – Kannada News | Bigg Boss Marathi 6 Winner: Tanvi Kolte Bags Trophy and 15 Lakh Prize

‘ಬಿಗ್ ಬಾಸ್’ ಶೋ ವಿವಿಧ ಭಾಷೆಯಲ್ಲಿ ಪ್ರಸಾರ ಕಾಣುತ್ತಿದೆ. ಅದೇ ರೀತಿ ಮರಾಠಿಯಲ್ಲಿ ‘ಬಿಗ್ ಬಾಸ್ 6′ ಸೀಸನ್ ಪೂರ್ಣಗೊಂಡಿದೆ. ಮೂರು ತಿಂಗಳ ಹಿಂದೆ ಕಲರ್ಸ್ ಮರಾಠಿ ಚಾನೆಲ್‌ನಲ್ಲಿ ಈ ಶೋ ಪ್ರಾರಂಭವಾಯಿತು. ಬಿಗ್ ಬಾಸ್ ಮರಾಠಿಯ ಈ ಸೀಸನ್‌ನಲ್ಲಿ, ಒಟ್ಟು 17 ಸದಸ್ಯರು 100 ದಿನಗಳ ಕಾಲ ಇದ್ದರು. ಈ ಪ್ರಯಾಣವು ಏಪ್ರಿಲ್ 19ರಂದು ಕೊನೆಗೊಂಡಿತು. ‘ಬಿಗ್ ಬಾಸ್ ಮರಾಠಿ ಸೀಸನ್ 6’ ರ ಗ್ರ್ಯಾಂಡ್ ಫಿನಾಲೆಯಲ್ಲಿ ತನ್ವಿ ಕೋಲ್ಟೆ ಪ್ರಶಸ್ತಿಯನ್ನು ಗೆದ್ದರು. ಕೊನೆಯವರೆಗೂ ಯಾರು…

Read More

ಯುವತಿ 20ನೇ ಮಹಡಿಯಿಂದ ಹಾರಬೇಕೆನ್ನುವಷ್ಟರಲ್ಲಿ ಬಂದು ಪ್ರಾಣ ಉಳಿಸಿದ ಆಪದ್ಬಾಂಧವ – Kannada News | Edge Rescue: Man Pulls Woman Back from 20th Floor Ledge in Seoul

ಸಿಯೋಲ್, ಏಪ್ರಿಲ್ 20: ಇಪ್ಪತ್ತನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಯುವತಿಯನ್ನು ರಕ್ಷಣೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ದಕ್ಷಿಣ ಕೊರಿಯಾದ ಸಿಯೋಲ್​ನಲ್ಲಿ ನಡೆದಿದೆ. ಯುವತಿಯೊಬ್ಬಳು ಕಟ್ಟಡದ 20ನೇ ಮಹಡಿಯ ಅತ್ಯಂತ ಕಿರಿದಾದ ಅಂಚಿನಲ್ಲಿ ನೇತಾಡುತ್ತಿದ್ದಳು. ಆಕೆ ಜಿಗಿಯಲು ಸಿದ್ಧವಾದ ಕ್ಷಣದಲ್ಲೇ, ಪಕ್ಕದಲ್ಲಿದ್ದ ವ್ಯಕ್ತಿಯೊಬ್ಬರು ಮಿಂಚಿನ ವೇಗದಲ್ಲಿ ಆಕೆಯ ಕೂದಲು ಹಿಡಿದಿದ್ದಾರೆ. ಆಕೆ ಜಾರಿ ಕೆಳಕ್ಕೆ ಬೀಳುತ್ತಿದ್ದಂತೆ ಆ ವ್ಯಕ್ತಿ ಆಕೆಯ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡರು. ಬಳಿಕ ಮತ್ತೋರ್ವ ವ್ಯಕ್ತಿ ಬಂದು ಆಕೆಯನ್ನು ಮೇಲಕ್ಕೆ…

Read More

‘ಅದು ಕೊನೆಯ ಸಂದೇಶ’: ವಿಮಾನದೊಳಗೆ ನಡೆದಿದ್ದೇನು? ಸ್ಫೋಟಕ ಹೇಳಿಕೆ ನೀಡಿದ ಪ್ರಯಾಣಿಕ – Kannada News | FLY91 Flight Chaos: Passenger Recounts Hubli Landing Abort, Diversion to Bengaluru and Shocking Staff Behaviour

ಬೆಂಗಳೂರು, ಏ.20: ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಹೊರಟಿದ್ದ FLY91 ವಿಮಾನದಲ್ಲಿ ಪ್ರಯಾಣಿಕರು ಕಂಡ ಆತಂಕದ ಕ್ಷಣಗಳು ಮತ್ತು ನಂತರದ ಕಹಿ ಅನುಭವವು ಇದೀಗ ಚರ್ಚೆಯ ವಿಷಯವಾಗಿದೆ. ನಿನ್ನೆ ಮಧ್ಯಾಹ್ನ ಸುಮಾರು 3 ಗಂಟೆಗೆ ಹೈದರಾಬಾದ್‌ನಿಂದ ಹೊರಟ FLY91 ವಿಮಾನದಲ್ಲಿ ಸುಮಾರು 15ರಿಂದ 20 ಪ್ರಯಾಣಿಕರಿದ್ದರು. ಹುಬ್ಬಳ್ಳಿಗೆ ಸಮೀಪಿಸುತ್ತಿದ್ದಂತೆ ವಿಮಾನವು ತೀವ್ರ ಟರ್ಬುಲೆನ್ಸ್‌ಗೆ ಒಳಗಾಯಿತು. ಈ ಘಟನೆ ಸುಮಾರು 15 ನಿಮಿಷಗಳ ಕಾಲ ನಡೆದಿತ್ತು ಎಂದು ಪ್ರಯಾಣಿಕರೊಬ್ಬರು ವಿವರಿಸಿದ್ದಾರೆ. ಟರ್ಬುಲೆನ್ಸ್‌ನ ತೀವ್ರತೆ ಎಷ್ಟಿತ್ತೆಂದರೆ, ಪ್ರಯಾಣಿಕರು ತಾವು ಬದುಕುಳಿಯುತ್ತೇವೋ ಇಲ್ಲವೋ ಎಂಬ…

Read More

ಬಸವಣ್ಣನವರೇ ಮಹಿಳಾ ಮೀಸಲಾತಿಯ ಆದ್ಯ ಪ್ರವರ್ತಕ, ಮಹಿಳಾ ಮೀಸಲಾತಿಗೆ ಎಲ್ಲಾ ಪಕ್ಷಗಳು ಕೈಜೋಡಿಸಬೇಕು: ಜಯಮೃತ್ಯುಂಜಯ ಶ್ರೀ – Kannada News | Jayamrutyunjaya Swamiji Backs Women’s Reservation Bill; Claims Harassment Charges are a Conspiracy gainst him

ನವದೆಹಲಿ, ಏಪ್ರಿಲ್ 20: 12ನೇ ಶತಮಾನದಲ್ಲೇ ಬಸವಣ್ಣನವರು ಅನುಭವ ಮಂಟಪದ ಮೂಲಕ ಮಹಿಳೆಯರಿಗೆ ಮೀಸಲಾತಿ ಮತ್ತು ಸಮಾನ ಅವಕಾಶ ನೀಡಿದ ಮೊದಲಿಗರು. ಅವರ ಆಶಯದಂತೆ ಕೇಂದ್ರ ಸರ್ಕಾರದ ಮಹಿಳಾ ಮೀಸಲಾತಿ ಮಸೂದೆಗೆ ಎಲ್ಲಾ ರಾಜಕೀಯ ಪಕ್ಷಗಳು ಒಮ್ಮತದ ಬೆಂಬಲ ನೀಡಬೇಕು ಎಂದು ಜಯಮೃತ್ಯುಂಜಯ ಸ್ವಾಮೀಜಿ ಕರೆ ನೀಡಿದ್ದಾರೆ. ಬಸವ ಜಯಂತಿಯ ಸಂದರ್ಭದಲ್ಲಿ ದೆಹಲಿಯಲ್ಲಿ ಮಾತನಾಡಿದ ಅವರು, ಮಹಿಳೆಯರಿಗೆ ರಾಜಕೀಯ ಮತ್ತು ಸಾಮಾಜಿಕ ಮೀಸಲಾತಿ ಕಲ್ಪಿಸುವ ಭಾರತ ಸರ್ಕಾರದ ಪ್ರಯತ್ನಕ್ಕೆ ಕನ್ನಡಿಗರ ಸಂಪೂರ್ಣ ಬೆಂಬಲವಿದೆ. ಬಸವಣ್ಣನವರ ಹೋರಾಟಕ್ಕೆ ಗೌರವ…

Read More

Gold Rates: ಚಿನ್ನದ ಬೆಲೆ ಗ್ರಾಮ್​ಗೆ 45 ರೂ ಇಳಿಕೆ; ಇಲ್ಲಿದೆ ದರಪಟ್ಟಿ – Kannada News | Gold Price Today on 20th April 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಏಪ್ರಿಲ್ 20: ಚಿನ್ನದ ಬೆಲೆ ಈ ವಾರವನ್ನು ಇಳಿಕೆಯೊಂದಿಗೆ ಆರಂಭಿಸಿದೆ. ಇಂದು ಸೋಮವಾರ ಬಂಗಾರದ ಬೆಲೆ (Gold Rates) ಗ್ರಾಮ್​ಗೆ 45 ರೂನಷ್ಟು ಅಲ್ಪ ಕುಸಿತ ಕಂಡಿದೆ. ಉಳಿದಂತೆ ಅಂತಾರಾಷ್ಟ್ರೀಯವಾಗಿ ಹೆಚ್ಚಿನ ಕಡೆ ಚಿನ್ನದ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಯವಾಗಿಲ್ಲ. ಬೆಳ್ಳಿ ಬೆಲೆಯ ಯಥಾಸ್ಥಿತಿಯೂ ಮುಂದುವರಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,42,350 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,55,290 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ…

Read More

ವರದಕ್ಷಿಣೆ ಕಿರುಕುಳಕ್ಕೆ ಎರಡು ಮಕ್ಕಳ ತಾಯಿ ಬಲಿ: ಕಿಟಕಿಯ ಗ್ರಿಲ್​​ಗೆ ವೇಲ್​​ ಬಿಗಿದುಕೊಂಡು ಆತ್ಮಹತ್ಯೆ – Kannada News | Belagavi Dowry Harassment: Mother of Two Dies Amid Domestic Abuse

ಬೆಳಗಾವಿ, ಏಪ್ರಿಲ್​​ 20: ಕೌಟುಂಬಿಕ ಕಲಹ ಮತ್ತು ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿಯ ಜ್ಯೋತಿ ನಗರದಲ್ಲಿ ನಡೆದಿದೆ. ಶ್ರೀನಿಧಿ ನಾವಿ (28) ಮೃತ ಗೃಹಿಣಿಯಾಗಿದ್ದು, ಮನೆಯ ಕಿಟಕಿಯ ಗ್ರಿಲ್​​ಗೆ ವೇಲ್​​ ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾಳೆ. ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಕೇಸ್ ದಾಖಲಾಗಿದ್ದು, ಪ್ರಕರಣ ಸಂಬಂಧ ಮಹಿಳೆಯ ಪತಿ ಸಂತೋಷ್​​ನನ್ನು ಪೊಲೀಸರು ಬಂಧಿಸಿದ್ದಾರೆ. 2021ರಲ್ಲಿ ಶ್ರೀನಿಧಿ ಮತ್ತು ಸಂತೋಷ್​​ ವಿವಾಹ ನಡೆದಿತ್ತು. ‌ಆರಂಭದಲ್ಲಿ ಸಂಸಾರ ಚೆನ್ನಾಗಿಯೇ ಇದ್ದು, ಇದಕ್ಕೆ…

Read More

ಒಳಚರಂಡಿ ತ್ಯಾಜ್ಯದಿಂದ ಕೋಟಿ ಕೋಟಿ ಆದಾಯ! ಬೆಂಗಳೂರಿನಲ್ಲಿ ದೇಶದಲ್ಲೇ ಅತಿ ದೊಡ್ಡ ವೇಸ್ಟ್ ಟು ವೆಲ್ತ್ ಯೋಜನೆಗೆ ಜಲಮಂಡಳಿ ಸಿದ್ಧತೆ – Kannada News | BWSSB to Generate Rs 120 Crore from Sewage Biogas; Bengaluru Hotels Adopt Waste to Gas Model to Tackle LPG Scarcity

ಬೆಂಗಳೂರು, ಏಪ್ರಿಲ್ 20: ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ತ್ಯಾಜ್ಯ ನೀರು ಇನ್ನು ಮುಂದೆ ಕೇವಲ ಕೊಳಚೆಯಾಗಿ ಉಳಿಯುವುದಿಲ್ಲ, ಬದಲಿಗೆ ಜಲಮಂಡಳಿಯ ಪಾಲಿಗೆ ಆದಾಯದ ಮೂಲವಾಗಲಿದೆ. ಬೆಂಗಳೂರು ಜಲಮಂಡಳಿಯು (BWSSB) ತನ್ನ ಐದು ಬೃಹತ್ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳಿಂದ (STP) ಹೊರಬರುವ ಜೈವಿಕ ಅನಿಲವನ್ನು (Biogas) ಕಂಪ್ರೆಸ್ಡ್ ಬಯೋಗ್ಯಾಸ್ (CBG) ಆಗಿ ಪರಿವರ್ತಿಸಿ ಮಾರಾಟ ಮಾಡಲು ಮುಂದಾಗಿದೆ. ಈ ಮೂಲಕ ಮುಂದಿನ 20 ವರ್ಷಗಳಲ್ಲಿ ಬರೋಬ್ಬರಿ 120 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ಗಳಿಸುವ ಗುರಿ…

Read More