All posts by nagaraj11081993

ಥೈಲ್ಯಾಂಡ್​ ಬೀಚ್​​ನಲ್ಲಿ ಮಿಂಚಿದ ನಟಿ ಪಾಯಲ್ ಚೆಂಗಪ್ಪ; ಇಲ್ಲಿವೆ ಫೋಟೋಸ್

Source link

ಬೆಂಗಳೂರಿಗೆ ಬಂದಾಗ ಸಿಎಂ ಕಿವಿಯಲ್ಲಿ ಮೋದಿ ಹೇಳಿದ್ದೇನು?: ಸಿದ್ದರಾಮಯ್ಯರಿಂದಲೇ ಸಿಕ್ತು ಉತ್ತರ – Kannada News | Siddaramaiah’s Clarification Over Viral Photo with PM Narendra Modi

ಮೈಸೂರು, ಏಪ್ರಿಲ್​​ 20: ಏಪ್ರಿಲ್ 15ರಂದು ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಮಂತ್ರಿ ಮೋದಿ ಸ್ವಾಗತದ ವೇಳೆ ಅವರ ಜೊತೆಗೆ ಸಿಎಂ ಸಿದ್ದರಾಮಯ್ಯ ಮಾತನಾಡುತ್ತಿರುವ ಫೋಟೋವೊಂದು ಭಾರಿ ವೈರಲ್​​ ಆಗಿತ್ತು. ಈ ಬಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿಗಳು, ಪ್ರಧಾನಮಂತ್ರಿ ಮೋದಿ ಮತ್ತು ನಾನು ಗುಟ್ಟಾಗಿ ಏನೂ ಮಾತನಾಡಿಲ್ಲ. ಮಹಿಳಾ ಮೀಸಲಾತಿ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅಂತಾ ಕೇಳಿದರು. ನಾನು ಮಹಿಳಾ ಮೀಸಲಾತಿ ಪರವಾಗಿದ್ದೇನೆ ಅಂತಾ ಹೇಳಿದೆ ಅಷ್ಟೇ. ಅದು ಬಿಟ್ಟು ಬೇರೆ ಏನೂ ಮಾತನಾಡಿಲ್ಲ ಎಂದು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಹೂಡಿಕೆದಾರರನ್ನು ಸೆಳೆಯುತ್ತಿವೆ ವ್ಯಾಲ್ಯೂ ಮ್ಯೂಚುವಲ್ ಫಂಡ್​ಗಳು; ಏನಿವುಗಳ ವಿಶೇಷತೆ? – Kannada News | Value Mutual Funds can get more value for the investment, know the strategy how they work

ಮ್ಯೂಚುವಲ್ ಫಂಡ್​ಗಳಲ್ಲಿ ಹೂಡಿಕೆ ಮಾಡುವುದು ಬಹಳ ಸುಲಭದ ಸಂಗತಿ. ಷೇರುಗಳನ್ನು ಅಧ್ಯಯನ ಮಾಡುವ ಅಗತ್ಯ ಇರುವುದಿಲ್ಲ. ಸರಿಯಾದ ಮ್ಯೂಚುವಲ್ ಫಂಡ್​ಗಳನ್ನು ಆಯ್ಕೆ ಮಾಡಿಕೊಳ್ಳುವ ಸವಾಲು ಮಾತ್ರವೇ ಇರುತ್ತದೆ. ಮ್ಯೂಚುವಲ್ ಫಂಡ್​ಗಳಲ್ಲಿ ಹಲವಾರು ವಿಧಗಳಿವೆ. ಈಕ್ವಿಟಿ ಫಂಡ್​ಗಳು, ಡೆಟ್ ಫಂಡ್​ಗಳು ಇತ್ಯಾದಿ ಇವೆ. ಈಕ್ವಿಟಿ ಮ್ಯೂಚುವಲ್ ಫಂಡ್​ಗಳಲ್ಲೇ ನಾನಾ ವಿಧಗಳಿವೆ. ಲಾರ್ಜ್ ಕ್ಯಾಪ್, ಮಿಡ್ ಕ್ಯಾಪ್, ಸ್ಮಾಲ್ ಕ್ಯಾಪ್, ಫ್ಲೆಕ್ಸಿ ಕ್ಯಾಪ್ ಇತ್ಯಾದಿ ಇವೆ. ಈಗೀಗ ವ್ಯಾಲ್ಯೂ ಫಂಡ್​ಗಳು (Value Mutual Funds) ಜನಪ್ರಿಯತೆ ಪಡೆಯುತ್ತಿವೆ.

ಏನಿದು ವ್ಯಾಲ್ಯೂ ಮ್ಯೂಚುವಲ್ ಫಂಡ್?

ಬಹಳ ಅಂಡರ್​ವ್ಯಾಲ್ಯೂ ಹೊಂದಿರುವ ಷೇರುಗಳನ್ನು ಗುರುತಿಸಿ ಇದು ಹೂಡಿಕೆ ಮಾಡುತ್ತದೆ. ಮಲ್ಟಿಬ್ಯಾಗರ್ ಆಗಲ್ಲಂತಹ ಷೇರುಗಳನ್ನು ಈ ಫಂಡ್ ಮ್ಯಾನೇಜರ್​ಗಳು ಹುಡುಕುತ್ತಾರೆ. ಕೆಲ ಕಂಪನಿಗಳು ಹಣಕಾಸು ಮತ್ತು ತಾಂತ್ರಿಕತೆಯಲ್ಲಿ ಬಲಿಷ್ಠವಾಗಿದ್ದರೂ ವಿವಿಧ ಕಾರಣಗಳಿಗೆ ಇವುಗಳ ಷೇರುಗಳು ಹಿನ್ನಡೆಯಲ್ಲಿರುತ್ತವೆ. ಮೂಲಭೂತ ಅಂಶಗಳು ಉತ್ತಮವಾಗಿರುವ ಇಂಥ ಸ್ಟಾಕುಗಳಲ್ಲಿ ವ್ಯಾಲ್ಯೂ ಈಕ್ವಿಟಿ ಫಂಡ್​ಗಳು ಹೂಡಿಕೆ ಮಾಡುತ್ತವೆ.

ಇದನ್ನೂ ಓದಿ: ನಾಮಿನಿ ಹೆಸರಿಸದೆಯೇ ಹೂಡಿಕೆದಾರ ಮೃತಪಟ್ಟರೆ ಮ್ಯೂಚುವಲ್ ಫಂಡ್ ಹೂಡಿಕೆಗೆ ಏನಾಗುತ್ತದೆ?

ವ್ಯಾಲ್ಯೂ ಈಕ್ವಿಟಿ ಫಂಡ್​ಗಳು ಯಾವ್ಯಾವ ಮಾನದಂಡ ಅನುಸರಿಸುತ್ತವೆ?

ಕಡಿಮೆ ಬೆಲೆಗೆ ಉತ್ತಮ ಷೇರುಗಳು ಲಭ್ಯ ಇದ್ದರೆ ಅದನ್ನು ಖರೀದಿಸುವುದು ಈ ಫಂಡ್​ನ ಮೂಲಭೂತ ತಂತ್ರ. ಪಿಇ ರೇಶಿಯೋ, ಪಿಬಿ ರೇಶಿಯೋ, ಉತ್ತಮ ಬ್ಯಾಲನ್ಸ್ ಶೀಟ್, ಉತ್ತಮ ಕ್ಯಾಷ್ ಫ್ಲೋ, ಸತತ ಆದಾಯ ಗಳಿಕೆ ಅವಕಾಶ, ಮಾರುಕಟ್ಟೆ ಹಿನ್ನಡೆಯಿಂದ ಬೆಲೆ ಕುಸಿದಿರುವುದು, ದೀರ್ಘಾವಧಿಯಲ್ಲಿ ಹೆಚ್ಚು ಯಶಸ್ಸು ಸಾಧ್ಯತೆ ಇತ್ಯಾದಿ ಲೋ ವ್ಯಾಲ್ಯೂಯೇಶನ್ ರೇಶಿಯೋ ಹೊಂದಿರುವ ಮತ್ತು ವಾಸ್ತವಕ್ಕಿಂತ ಕಡಿಮೆ ಮೌಲ್ಯ ಹೊಂದಿರುವ ಷೇರುಗಳನ್ನು ಆಯ್ಕೆ ಮಾಡಲಾಗುತ್ತದೆ.

ಇಂಥ ಕಂಪನಿಗಳು ಯಾವಾಗ ಬೇಕಾದರೂ ಜಿಗಿತ ಕಾಣುವ ಸಾಮರ್ಥ್ಯ ಹೊಂದಿರುತ್ತವೆ. ಮಾರುಕಟ್ಟೆಯಲ್ಲಿ ಅದಕ್ಕೆ ಪೂರಕವಾದ ವಾತಾವರಣ ಸಿಕ್ಕಿಬಿಟ್ಟರೆ ಈ ಕಂಪನಿಗಳು ಓಡುವ ಕುದುರೆಗಳಾಗುತ್ತವೆ. ಷೇರು ಮಾರುಕಟ್ಟೆಯಲ್ಲಿ ಮಲ್ಟಿಬ್ಯಾಗರ್ ಎನಿಸುತ್ತವೆ.

ಇದನ್ನೂ ಓದಿ: ಆರೂವರೆ ವರ್ಷದಲ್ಲಿ 4 ಪಟ್ಟು ಲಾಭ ಕೊಟ್ಟ ಗೋಲ್ಡ್ ಬಾಂಡ್; ಒಂದು ಲಕ್ಷಕ್ಕೆ 4 ಲಕ್ಷ ರಿಟರ್ನ್ಸ್

ಈಗಿರುವ ವ್ಯಾಲ್ಯೂ ಫಂಡ್​ಗಳು ಮತ್ತವುಗಳ 1 ವರ್ಷದ ಸಿಎಜಿಆರ್

  • ಮಹೀಂದ್ರ ಮನುಲೈಫ್ ವ್ಯಾಲ್ಯೂ ಫಂಡ್: ಶೇ. 16.39
  • ಎಲ್​ಐಸಿ ಎಂಎಫ್ ವ್ಯಾಲ್ಯೂ ಫಂಡ್: ಶೇ. 15.29
  • ಕ್ವಾಂಟ್ ವ್ಯಾಲ್ಯೂ ಫಂಡ್: ಶೇ. 14.53

ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಈ ಫಂಡ್​ಗಳ ಕೆಟಗರಿಯ ಸರಾಸರಿ ಶೇ. 9.35 ಮಾತ್ರವೇ ಇರುವುದು. ಹೆಚ್ಚೂಕಡಿಮೆ ಒಂದೂವರೆ ಪಟ್ಟು ಹೆಚ್ಚು ರಿಟರ್ನ್ ಕೊಡುತ್ತಿವೆ ವ್ಯಾಲ್ಯೂ ಫಂಡ್​ಗಳು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

“ಬ್ರೋ ಕೊನೆಗೂ ಪ್ರೀತಿ ಜಿಂಟಾ ಅಪ್ಪುಗೆ ಸಿಕ್ತು!”; ಅರ್ಶ್‌ದೀಪ್ ಸಿಂಗ್ ಫುಲ್ ಖುಷ್ – Kannada News | IPL Viral Hug: Preity Zinta to Arshdeep Singh, Fans Troll Mohammed Shami

ಮುಂಬೈ, ಏ.20: ಐಪಿಎಲ್ ಅಖಾಡದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಭರ್ಜರಿ ಗೆಲುವು ಸಾಧಿಸಿದ ಬೆನ್ನಲ್ಲೇ, ಮೈದಾನದಲ್ಲಿ ನಡೆದ ಒಂದು ಕ್ಷಣ ಈಗ ಸಖತ್ ವೈರಲ್ ಆಗಿದೆ. ಪಂಜಾಬ್ ತಂಡದ ಮಾಲೀಕಿ, ಬಾಲಿವುಡ್ ನಟಿ ಪ್ರೀತಿ ಜಿಂಟಾ (Preity Zinta) ತಮ್ಮ ತಂಡದ ವೇಗಿ ಅರ್ಷ್‌ದೀಪ್ ಸಿಂಗ್ ಅವರನ್ನು ಆತ್ಮೀಯವಾಗಿ ಅಪ್ಪಿಕೊಂಡು ಗೆಲುವಿನ ಶುಭಾಶಯ ಕೋರಿದ್ದಾರೆ. ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಅರ್ಷ್‌ದೀಪ್ ಸಿಂಗ್, ಪ್ರೀತಿ ಜಿಂಟಾ ಅವರಿಂದ ಹಗ್ (Warm Hug) ಸಿಗುತ್ತಿದ್ದಂತೆ ಅತೀವ ಸಂತೋಷಗೊಂಡರು. ಅರ್ಶ್‌ದೀಪ್ ಅವರ ಮುಖದಲ್ಲಿದ್ದ ಆ ಸಮಾಧಾನ ಮತ್ತು ಸಂಭ್ರಮದ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದೇ ವೇಳೆ ಈ ಫೋಟೋಗಳನ್ನು ಬಳಸಿಕೊಂಡು ನೆಟ್ಟಿಗರು ಟೀಮ್ ಇಂಡಿಯಾದ ಹಿರಿಯ ವೇಗಿ ಮೊಹಮ್ಮದ್ ಶಮಿ (Mohammed Shami) ಅವರನ್ನು ಸಖತ್ ಟ್ರೋಲ್ ಮಾಡುತ್ತಿದ್ದಾರೆ. ಈ ಹಿಂದೆ ಶಮಿ ಅವರು ಪ್ರೀತಿ ಜಿಂಟಾ ಅವರಿಗೆ ಶುಭಾಶಯ ತಿಳಿಸುವಾಗ ಅಥವಾ ಭೇಟಿಯಾದಾಗ ನಡೆದ ಕೆಲವು ಕ್ಷಣಗಳನ್ನು ನೆನಪಿಸಿಕೊಳ್ಳುತ್ತಿರುವ ಅಭಿಮಾನಿಗಳು, “ಅರ್ಷ್‌ದೀಪ್ ಸಿಂಗ್​​​ಗೆ ಅಪ್ಪುಗೆ ಸಿಕ್ಕಿದೆ, ಆದರೆ ಶಮಿ ಅವರು ಅಂತಹ ಒಂದು ಕ್ಷಣಕ್ಕಾಗಿ ಇನ್ನೂ ಕಾಯುತ್ತಿದ್ದಾರೆ” ಎಂದು ತಮಾಷೆ ಮಾಡುತ್ತಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಐಪಿಎಲ್ ಪಾಯಿಂಟ್ಸ್ ಟೇಬಲ್​ನಲ್ಲಿ ಮಹತ್ವದ ಬದಲಾವಣೆ – Kannada News | PL 2026 Points Table After PBKS vs LSG Match

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 29 ಪಂದ್ಯಗಳು ಮುಗಿದಿವೆ. ಈ ಇಪ್ಪತ್ತೊಂದು ಪಂದ್ಯಗಳಲ್ಲಿ ಕೊನೆಯ ಮ್ಯಾಚ್ ಆಡಿರುವುದು ಪಂಜಾಬ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್. ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್​ ತಂಡವು 54 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಪಂಜಾಬ್ ಪಡೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಹಾಗಿದ್ರೆ ನೂತನ ಪಾಯಿಂಟ್ಸ್​ ಟೇಬಲ್​ನಲ್ಲಿ ಯಾವ ತಂಡ ಯಾವ ಸ್ಥಾನದಲ್ಲಿದೆ ಎಂದು ನೋಡೋಣ…

1- ಪಂಜಾಬ್ ಕಿಂಗ್ಸ್: ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡವು ಈವರೆಗೆ 5 ಮ್ಯಾಚ್​ಗಳಲ್ಲಿ ಜಯ ಸಾಧಿಸಿದೆ. ಇನ್ನು ಕೆಕೆಆರ್ ವಿರುದ್ಧದ ಪಂದ್ಯವು ಮಳೆಯ ಕಾರಣ ರದ್ದಾಗಿದೆ. ಅಂದರೆ ಒಟ್ಟು 6 ಮ್ಯಾಚ್​ಗಳ ಮೂಲಕ ಪಂಜಾಬ್ ಕಿಂಗ್ಸ್​ 11 ಅಂಕಗಳನ್ನು ಪಡೆದುಕೊಂಡಿದ್ದು, ಈ ಮೂಲಕ +1.420 ನೆಟ್ ರನ್ ರೇಟ್​ನೊಂದಿಗೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

2- ರಾಯಲ್ ಚಾಲೆಂಜರ್ಸ್ ಬೆಂಗಳೂರು: ಆರ್​ಸಿಬಿ ತಂಡವು ಈವರೆಗೆ ಆಡಿರುವುದು 6 ಪಂದ್ಯಗಳನ್ನು ಮಾತ್ರ. ಈ ಆರು ಮ್ಯಾಚ್​ಗಳಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋತರೆ, ಸಿಎಸ್​ಕೆ, ಎಲ್​ಎಸ್​ಜಿ, ಎಸ್​ಆರ್​ಹೆಚ್ ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು ದಾಖಲಿಸಿದೆ. ಈ ಮೂಲಕ 8 ಅಂಕ ಹಾಗೂ +1.171 ನೆಟ್ ರನ್ ರೇಟ್​ನೊಂದಿಗೆ ಪಾಯಿಂಟ್ಸ್​ ಟೇಬಲ್​ನಲ್ಲಿ ದ್ವಿತೀಯ ಸ್ಥಾನವನ್ನು ಅಲಂಕರಿಸಿದೆ.

3- ರಾಜಸ್ಥಾನ್ ರಾಯಲ್ಸ್: ರಿಯಾನ್ ಪರಾಗ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ತಂಡವು ಈವರೆಗೆ 6 ಪಂದ್ಯಗಳನ್ನಾಡಿದೆ. ಈ ವೇಳೆ ಸಿಎಸ್​ಕೆ, ಮುಂಬೈ ಇಂಡಿಯನ್ಸ್, ಗುಜರಾತ್ ಟೈಟಾನ್ಸ್ ಹಾಗೂ ಆರ್​ಸಿಬಿ ವಿರುದ್ಧ ಜಯ ಸಾಧಿಸಿದೆ. ಇನ್ನು ಕೆಕೆಆರ್​ ಹಾಗೂ ಎಸ್​ಆರ್​ಹೆಚ್ ವಿರುದ್ಧ ಸೋಲು ಕಂಡಿದೆ. ಈ ಮೂಲಕ ಒಟ್ಟು 8 ಅಂಕಗಳೊಂದಿಗೆ +0.599 ನೆಟ್ ರನ್ ರೇಟ್ ಪಡೆಯುವ ಮೂಲಕ ಅಂಕ ಪಟ್ಟಿಯಲ್ಲಿ ಮೂರನೇ ಅಲಂಕರಿಸಿದೆ.

4- ಸನ್​ರೈಸರ್ಸ್ ಹೈದರಾಬಾದ್: ಇಶಾನ್ ಕಿಶನ್ ನಾಯಕತ್ವದಲ್ಲಿ 6 ಪಂದ್ಯಗಳನ್ನಾಡಿರುವ ಸನ್​ರೈಸರ್ಸ್ ಹೈದರಾಬಾದ್ ತಂಡವು ಈವರೆಗೆ 3 ಮೂರು ಮ್ಯಾಚ್​ಗಳಲ್ಲಿ ಗೆಲುವು ದಾಖಲಿಸಿದೆ. ಈ ಮೂಲಕ ಒಟ್ಟು 6 ಅಂಕಗಳನ್ನು ಪಡೆದಿರುವ ಎಸ್​ಆರ್​ಹೆಚ್ +0.566 ನೆಟ್​ ರನ್ ರೇಟ್​ನೊಂದಿಗೆ ನಾಲ್ಕನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

5- ಡೆಲ್ಲಿ ಕ್ಯಾಪಿಟಲ್ಸ್​: ಅಕ್ಷರ್ ಪಟೇಲ್ ಮುಂದಾಳತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಈವರೆಗೆ 5 ಮ್ಯಾಚ್​ಗಳನ್ನು ಆಡಿದ್ದು, ಈ ವೇಳೆ 3 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಅದರಂತೆ ಇದೀಗ ಒಟ್ಟು 6 ಅಂಕಗಳು ಹಾಗೂ +0.310 ನೆಟ್ ರೇಟ್​ ಹೊಂದಿರುವ ಡಿಸಿ ಪಡೆ ಪಾಯಿಂಟ್ಸ್ ಟೇಬಲ್​ನಲ್ಲಿ ಐದನೇ ಸ್ಥಾನದಲ್ಲಿದೆ.

ಇನ್ನು ಗುಜರಾತ್ ಟೈಟಾನ್ಸ್  6ನೇ ಸ್ಥಾನದಲ್ಲಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ 7ನೇ ಸ್ಥಾನ ಪಡೆದುಕೊಂಡಿದೆ. ಹಾಗೆಯೇ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ಕ್ರಮವಾಗಿ 8ನೇ ಮತ್ತು 9ನೇ ಸ್ಥಾನಗಳಲ್ಲಿ ಕಾಣಿಸಿಕೊಂಡಿದೆ. ಇನ್ನು ಈವರೆಗೆ ಒಂದು ಪಂದ್ಯ ಮಾತ್ರ ಗೆದ್ದ ಮುಂಬೈ ಇಂಡಿಯನ್ಸ್ ತಂಡವು ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

Published On – 12:16 pm, Mon, 20 April 26

Source link

SC, ST ಮೇಲಿನ ದೌರ್ಜನ್ಯ ತನಿಖೆ ಮಾಡುವ DCREಯಲ್ಲಿಯೇ ಮೇಲ್ಜಾತಿ ಅಧಿಕಾರಿಗಳಿಂದ ದಲಿತ ಅಧಿಕಾರಿಗೆ ಕಿರುಕುಳ ಆರೋಪ! – Kannada News | Dcre inspector alleges harassment by senior officers files complaint with dg

ಮೇಲ್ಜಾತಿ ಅಧಿಕಾರಿಗಳಿಂದ ದಲಿತ ಅಧಿಕಾರಿಗೆ ಕಿರುಕುಳ ಆರೋಪ
Image Credit source: Tv9 Kannada

ಬೆಂಗಳೂರು, ಏಪ್ರಿಲ್​​ 20: ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡಗಳ (ST) ಮೇಲಿನ ದೌರ್ಜನ್ಯ ಕೇಸ್ ತನಿಖೆ ನಡೆಸುವ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದಲ್ಲಿಯೇ (DCRE) ಮೇಲ್ಜಾತಿ ಅಧಿಕಾರಿಗಳಿಂದ ದಲಿತ ಅಧಿಕಾರಿಗೆ ಕಿರುಕುಳ ಆರೋಪ ಕೇಳಿಬಂದಿದೆ. DCRE ಕೇಂದ್ರ ಕಚೇರಿ SP ಕರಿಬಸನಗೌಡ ಹಾಗೂ DySP ಮಹೇಶ್ವರಗೌಡ ಮೇಲೆ ಆರೋಪ ಮಾಡಲಾಗಿದ್ದು, ಈ ಬಗ್ಗೆ ಪಶ್ಚಿಮ ವಲಯ DCRE ಪೊಲೀಸ್ ಇನ್ಸ್ಪೆಕ್ಟರ್ ಶ್ರೀನಿವಾಸ್ ನೇರವಾಗಿ DCRE ಡಿಜಿ ಉಮೇಶ್ ಕುಮಾರ್ ಅವರಿಗೆ ದೂರು ಸಲ್ಲಿಸಿದ್ದಾರೆ.

ಅಷ್ಟಲ್ಲದೆ ಈ ಬಗ್ಗೆ ಶ್ರೀನಿವಾಸ್ ವೀಡಿಯೋ ಕೂಡ ಮಾಡಿದ್ದು,ಮೇಲ್ವರ್ಗದ ಆರೋಪಿಗಳ ಪರವಾಗಿ ಕೆಲಸ ಮಾಡುವಂತೆ ಕಿರುಕುಳ ನೀಡಲಾಗ್ತಿದೆ. SP ಕರಿಬಸನಗೌಡ ನಿರ್ದೇಶನದಂತೆ ಕೆಲ ಕೇಸ್​​ಗಳಲ್ಲಿ ಮೇಲ್ಜಾತಿ ಆರೋಪಿಗಳ ಪರ ಅಂತಿಮ ವರದಿ ಸಲ್ಲಿಸಲು DySP ಒತ್ತಡ ಹಾಕುತ್ತಿದ್ದರು. ಆ ವೇಳೆ ವಲಯ SP ಅವರಿಂದ ನಿರ್ದೇಶನ ಕೊಡಿಸುವಂತೆ ಹೇಳಿದ್ದ ಕಾರಣ ಅಂದಿನಿಂದ Dysp ಮತ್ತು SP ಕರಿಬಸನಗೌಡ ಕಿರುಕುಳ ನೀಡುತ್ತಿದ್ದಾರೆ. ದೂರುದಾರರಿಂದ ತನ್ನ ವಿರುದ್ಧ ಸುಳ್ಳು ಪಿಟಿಷನ್ ಪಡೆದು ತನಿಖೆ ಹೆಸರಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಇನ್ನು ಕಳೆದ ತಿಂಗಳು ಶ್ರೀನಿವಾಸ್​​ರನ್ನ ವರ್ಗಾವಣೆ ಮಾಡಲಾಗಿತ್ತು. ಆದರೆ KATನಲ್ಲಿ ಅದಕ್ಕೆ ಅವರು ಸ್ಟೇ ತಂದಿದ್ದರು. ಆದರೂ ನಕಲಿ ದಾಖಲೆ ಸೃಷ್ಟಿಸಿ ಷಡ್ಯಂತ್ರ ಮಾಡಿ ಕರ್ತವ್ಯದಿಂದ ಬಿಡುಗಡೆಗೊಳಿಸಿದ್ದಾರೆಂದು ಆರೋಪಿಸಲಾಗಿದೆ. ಈ ರೀತಿ ಕಿರುಕುಳ ನಿಲ್ಲದಿದ್ರೆ ಆತ್ಮಹತ್ಯೆ ಮಾಡಿಕೊಳ್ಳುವ ಎಚ್ಚರಿಕೆಯೂ ಅವರಿಂದ ವ್ಯಕ್ತವಾಗಿದೆ.

ಇದನ್ನೂ ಓದಿ: ಒಳಚರಂಡಿ ತ್ಯಾಜ್ಯದಿಂದ ಕೋಟಿ ಕೋಟಿ ಆದಾಯ! ಬೆಂಗಳೂರಿನಲ್ಲಿ ದೇಶದಲ್ಲೇ ಅತಿ ದೊಡ್ಡ ವೇಸ್ಟ್ ಟು ವೆಲ್ತ್ ಯೋಜನೆಗೆ ಜಲಮಂಡಳಿ ಸಿದ್ಧತೆ

ಆದರೆ ಇನ್ಸ್ಪೆಕ್ಟರ್ ಶ್ರೀನಿವಾಸ್ ಮಾಡಿರುವ ಆರೋಪಗಳನ್ನು SP ಕರಿಬಸನಗೌಡ ನಿರಾಕರಿಸಿದ್ದಾರೆ. ಶ್ರೀನಿವಾಸ್ ಆಪಾದನೆಗಳಿಗೂ ನನಗೂ ಯಾವುದೇ ಸಂಬಂಧ ಇಲ್ಲ . ಆರೋಪಗಳು ಕಪೋಲ ಕಲ್ಪಿತಗಳಾಗಿರುತ್ತವೆ ಅಥವಾ ಬೇರೆಯವರು ಹೇಳಿಕೊಟ್ಟಿರುವಂತದ್ದು. ಮಹೇಶ್ವರಗೌಡರನ್ನ ಎರಡ್ಮೂರು ಸಲ ಅಷ್ಟೇ ಭೇಟಿ ಆಗಿರೋದು. ಅಂತಿಮ ವರದಿಗಳಲ್ಲಿ ಕೇಂದ್ರ ಸ್ಥಾನದ ಪಾತ್ರ ಇರುವುದಿಲ್ಲ. ಅಲ್ಲದೆ ಶ್ರೀನಿವಾಸ್ ವಿರುದ್ಧದ ಯಾವುದೇ ಅರ್ಜಿಗಳನ್ನು ನಾನು ವಿಚಾರಣೆ ಮಾಡುತ್ತಿಲ್ಲ. ನನ್ನ ವಿರುದ್ಧ ಆರೋಪ ಇದ್ದಲ್ಲಿ KATನಲ್ಲಿ ಪಾರ್ಟಿ ಮಾಡಬೇಕಾಗಿತ್ತು. ಹೀಗಾಗಿ ಶ್ರೀನಿವಾಸ್ ಆರೋಪಗಳು ಸುಳ್ಳು ಎಂದು ಕರಿಬಸನಗೌಡ ಮಾಹಿತಿ ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕಾಂಗ್ರೆಸ್ ಶಾಸಕ ಹ್ಯಾರಿಸ್, ಪುತ್ರ ನಲಪಾಡ್ ಮನೆ ಮೇಲೆ ಇ.ಡಿ ದಾಳಿ – Kannada News | ED Raids Congress MLA NA Haris and Son Mohammed Nalapad’s Residences in Bengaluru Over Bitcoin Scam Links

ಬೆಂಗಳೂರು, ಏಪ್ರಿಲ್ 20: ಕಾಂಗ್ರೆಸ್ ಶಾಸಕ ಎನ್​ಎ ಹ್ಯಾರಿಸ್ ಮತ್ತು ಅವರ ಪುತ್ರ ಮೊಹಮ್ಮದ್ ನಲಪಾಡ್ ನಿವಾಸಗಳ ಮೇಲೆ ಸೋಮವಾರ ಬೆಳಗ್ಗೆ ಜಾರಿ ನಿರ್ದೇಶನಾಲಯ (ಇ.ಡಿ.) ದಾಳಿ ನಡೆಸಿದೆ. ಬೆಂಗಳೂರಿನ ಅಶೋಕನಗರದಲ್ಲಿರುವ ಹ್ಯಾರಿಸ್ ನಿವಾಸ ಹಾಗೂ ಮೊಹಮ್ಮದ್ ನಲಪಾಡ್ ಮನೆಯ ಮೇಲೆ ದಾಳಿ ನಡೆದಿದೆ. ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ. ಇ.ಡಿ. ಅಧಿಕಾರಿಗಳು ಬೆಂಗಳೂರು ಸೇರಿದಂತೆ ಒಟ್ಟು 17 ಸ್ಥಳಗಳಲ್ಲಿ ಮಹತ್ವದ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಮೊಹಮ್ಮದ್ ನಲಪಾಡ್ ಹ್ಯಾಕರ್ ಶ್ರೀಕಿ ಜೊತೆ ನಂಟು ಹೊಂದಿದ್ದ ಆರೋಪಗಳು ಈ ಹಿಂದೆ ಕೇಳಿಬಂದಿದ್ದವು. ಈ ನಂಟಿನ ಹಿನ್ನೆಲೆಯಲ್ಲೇ ಇ.ಡಿ. ದಾಳಿ ನಡೆಸಿದೆ ಎನ್ನಲಾಗಿದೆ. ಶ್ರೀಕಿ ಮತ್ತು ನಲಪಾಡ್ ನಡುವೆ 4.5 ಕೋಟಿ ರೂಪಾಯಿಗಳ ಅಕ್ರಮ ವ್ಯವಹಾರ ನಡೆದಿದೆ ಎಂದು ಇಡಿ ಈಗಾಗಲೇ ಆರೋಪಿಸಿದೆ. ಈ ಹಿಂದೆ ರಾಜ್ಯ ಸಿಐಡಿ ಕೂಡ ಬಿಟ್‌ಕಾಯಿನ್ ಪ್ರಕರಣದಲ್ಲಿ ಮೊಹಮ್ಮದ್ ನಲಪಾಡ್ ಅವರನ್ನು ವಿಚಾರಣೆ ನಡೆಸಿತ್ತು. ಸದ್ಯ, ಇ.ಡಿ. ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಗ್ ಬಾಸ್ ವಿನ್ನರ್ ಘೋಷಣೆ ಮಾಡಿದ ನಟ ರಿತೇಶ್ ದೇಶ್​​ಮುಖ್ – Kannada News | Bigg Boss Marathi 6 Winner: Tanvi Kolte Bags Trophy and 15 Lakh Prize

‘ಬಿಗ್ ಬಾಸ್’ ಶೋ ವಿವಿಧ ಭಾಷೆಯಲ್ಲಿ ಪ್ರಸಾರ ಕಾಣುತ್ತಿದೆ. ಅದೇ ರೀತಿ ಮರಾಠಿಯಲ್ಲಿ ‘ಬಿಗ್ ಬಾಸ್ 6′ ಸೀಸನ್ ಪೂರ್ಣಗೊಂಡಿದೆ. ಮೂರು ತಿಂಗಳ ಹಿಂದೆ ಕಲರ್ಸ್ ಮರಾಠಿ ಚಾನೆಲ್‌ನಲ್ಲಿ ಈ ಶೋ ಪ್ರಾರಂಭವಾಯಿತು. ಬಿಗ್ ಬಾಸ್ ಮರಾಠಿಯ ಈ ಸೀಸನ್‌ನಲ್ಲಿ, ಒಟ್ಟು 17 ಸದಸ್ಯರು 100 ದಿನಗಳ ಕಾಲ ಇದ್ದರು. ಈ ಪ್ರಯಾಣವು ಏಪ್ರಿಲ್ 19ರಂದು ಕೊನೆಗೊಂಡಿತು. ‘ಬಿಗ್ ಬಾಸ್ ಮರಾಠಿ ಸೀಸನ್ 6’ ರ ಗ್ರ್ಯಾಂಡ್ ಫಿನಾಲೆಯಲ್ಲಿ ತನ್ವಿ ಕೋಲ್ಟೆ ಪ್ರಶಸ್ತಿಯನ್ನು ಗೆದ್ದರು.

ಕೊನೆಯವರೆಗೂ ಯಾರು ಗೆಲ್ಲುತ್ತಾರೆ ಎಂಬ ಕುತೂಹಲ ಇತ್ತು. ತನ್ವಿ ಗೆಲುವಿನ ನಗೆ ಬೀರಿದರು. ವಿಜೇತರಿಗೆ ಕಲರ್ಸ್ ಮರಾಠಿಯಿಂದ 15 ಲಕ್ಷ ರೂ. ನಗದು ಬಹುಮಾನ ಮತ್ತು ಟ್ರೋಫಿಯನ್ನು ನೀಡಲಾಯಿತು . ವಜ್ರದ ಆಭರಣಗಳನ್ನು ಖರೀದಿಸಲು 10 ಲಕ್ಷ ರೂ.ಗಳ ವೋಚರ್ ಅನ್ನು ನೀಡಲಾಯಿತು. ವಿಜೇತರಿಗೆ ಇ-ಬೈಕ್ ಅನ್ನು ಸಹ ನೀಡಲಾಗಿದೆ. ರಿತೇಶ್ ದೇಶ್​​ಮುಖ್ ಈ ಘೋಷಣೆ ಮಾಡಿದರು.

ಆ ಬಳಿಕ ಮಾತನಾಡಿದ ತನ್ವಿ, ‘ಈ ಪ್ರಯಾಣ ನನಗೆ ತುಂಬಾ ವಿಶೇಷವಾಗಿದೆ. ಈ ಮನೆ ನನ್ನನ್ನು ನಾನು ತಿಳಿದುಕೊಳ್ಳಲು, ಪ್ರತಿಯೊಂದು ಸನ್ನಿವೇಶದಲ್ಲೂ ಬಲವಾಗಿರಲು ನನಗೆ ಕಲಿಸಿದೆ. ಪ್ರೇಕ್ಷಕರು ನೀಡಿದ ಪ್ರೀತಿ ಮತ್ತು ಬೆಂಬಲವೇ ನನ್ನ ನಿಜವಾದ ಶಕ್ತಿ. ನಾನು ಈ ಗೆಲುವನ್ನು ನನ್ನ ಕುಟುಂಬ ಮತ್ತು ನನ್ನಲ್ಲಿ ನಂಬಿಕೆ ಇಡುವ ಎಲ್ಲರಿಗೂ ಅರ್ಪಿಸುತ್ತೇನೆ’ ಎಂದರು.

ಇದನ್ನೂ ಓದಿ: ‘ನಷ್ಟ ಪರಿಹಾರ ಕೊಡಿ’: ಬಿಗ್ ಬಾಸ್​​ಗೆ ನೊಟೀಸ್ ಕಳಿಸಿದ ಮಾಜಿ ಸ್ಪರ್ಧಿ

‘ಮನೆಯಲ್ಲಿ ಎಲ್ಲರೂ ನನ್ನೊಂದಿಗೆ ಮಾತನಾಡುತ್ತಿದ್ದರು. ನಾನು ಏನು ಕೆಲಸ ಮಾಡಿದ್ದೇನೆ. ನಾನು ಯಾರು ಎಂದು ಅನೇಕರು ಕೇಳುತ್ತಿದ್ದರು. ಆಗ ನನಗೆ ಕೆಟ್ಟ ಭಾವನೆ ಬಂತು. ಆದರೆ ನಾನು ಈ ಮನೆಯಿಂದ ಹೊರಬಂದಾಗ, ನನ್ನ ಹೆಸರು ಎಲ್ಲರ ಬಾಯಲ್ಲೂ ಇರುತ್ತದೆ ಎಂದು ನಾನು ನಿರ್ಧರಿಸಿದ್ದೆ. ಬಿಗ್ ಬಾಸ್ ಮರಾಠಿ ನನ್ನ ಹೆಸರನ್ನು ದೊಡ್ಡದಾಗಿಸಿದೆ. ನಾನು ತನ್ವಿ ಕೋಲ್ಟೆಯಾಗಿ ಬಂದಿದ್ದೇನೆ ಮತ್ತು ಈಗ ತನ್ವಿ ಕೋಲ್ಟೆ ಒಂದು ಬ್ರಾಂಡ್ ಆಗಿದೆ’ ಎಂದು ಹೆಮ್ಮೆ ಹೊರಹಾಕಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಯುವತಿ 20ನೇ ಮಹಡಿಯಿಂದ ಹಾರಬೇಕೆನ್ನುವಷ್ಟರಲ್ಲಿ ಬಂದು ಪ್ರಾಣ ಉಳಿಸಿದ ಆಪದ್ಬಾಂಧವ – Kannada News | Edge Rescue: Man Pulls Woman Back from 20th Floor Ledge in Seoul

ಸಿಯೋಲ್, ಏಪ್ರಿಲ್ 20: ಇಪ್ಪತ್ತನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಯುವತಿಯನ್ನು ರಕ್ಷಣೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ದಕ್ಷಿಣ ಕೊರಿಯಾದ ಸಿಯೋಲ್​ನಲ್ಲಿ ನಡೆದಿದೆ. ಯುವತಿಯೊಬ್ಬಳು ಕಟ್ಟಡದ 20ನೇ ಮಹಡಿಯ ಅತ್ಯಂತ ಕಿರಿದಾದ ಅಂಚಿನಲ್ಲಿ ನೇತಾಡುತ್ತಿದ್ದಳು. ಆಕೆ ಜಿಗಿಯಲು ಸಿದ್ಧವಾದ ಕ್ಷಣದಲ್ಲೇ, ಪಕ್ಕದಲ್ಲಿದ್ದ ವ್ಯಕ್ತಿಯೊಬ್ಬರು ಮಿಂಚಿನ ವೇಗದಲ್ಲಿ ಆಕೆಯ ಕೂದಲು ಹಿಡಿದಿದ್ದಾರೆ. ಆಕೆ ಜಾರಿ ಕೆಳಕ್ಕೆ ಬೀಳುತ್ತಿದ್ದಂತೆ ಆ ವ್ಯಕ್ತಿ ಆಕೆಯ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡರು. ಬಳಿಕ ಮತ್ತೋರ್ವ ವ್ಯಕ್ತಿ ಬಂದು ಆಕೆಯನ್ನು ಮೇಲಕ್ಕೆ ಎಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಥಳಕ್ಕೆ ಬರೋಬ್ಬರಿ 71 ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಮತ್ತು 19 ತುರ್ತು ವಾಹನಗಳು ಧಾವಿಸಿದವು. ಅಕಸ್ಮಾತ್ ಆಕೆ ಮೇಲಿಂದ ಬಿದ್ದರೆ ಪ್ರಾಣ ಉಳಿಸಲು ಕಟ್ಟಡದ ಕೆಳಗೆ ಬೃಹತ್ ‘ಗಾಳಿ ಹಾಸಿಗೆ’ಯನ್ನು (Air Mattress) ಅಳವಡಿಸಲಾಗಿತ್ತು. ಇಡೀ ಪ್ರದೇಶವು ಒಂದು ರೀತಿಯ ಯುದ್ಧಭೂಮಿಯಂತೆ ಮಾರ್ಪಟ್ಟಿತ್ತು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

‘ಅದು ಕೊನೆಯ ಸಂದೇಶ’: ವಿಮಾನದೊಳಗೆ ನಡೆದಿದ್ದೇನು? ಸ್ಫೋಟಕ ಹೇಳಿಕೆ ನೀಡಿದ ಪ್ರಯಾಣಿಕ – Kannada News | FLY91 Flight Chaos: Passenger Recounts Hubli Landing Abort, Diversion to Bengaluru and Shocking Staff Behaviour

ಬೆಂಗಳೂರು, ಏ.20: ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಹೊರಟಿದ್ದ FLY91 ವಿಮಾನದಲ್ಲಿ ಪ್ರಯಾಣಿಕರು ಕಂಡ ಆತಂಕದ ಕ್ಷಣಗಳು ಮತ್ತು ನಂತರದ ಕಹಿ ಅನುಭವವು ಇದೀಗ ಚರ್ಚೆಯ ವಿಷಯವಾಗಿದೆ. ನಿನ್ನೆ ಮಧ್ಯಾಹ್ನ ಸುಮಾರು 3 ಗಂಟೆಗೆ ಹೈದರಾಬಾದ್‌ನಿಂದ ಹೊರಟ FLY91 ವಿಮಾನದಲ್ಲಿ ಸುಮಾರು 15ರಿಂದ 20 ಪ್ರಯಾಣಿಕರಿದ್ದರು. ಹುಬ್ಬಳ್ಳಿಗೆ ಸಮೀಪಿಸುತ್ತಿದ್ದಂತೆ ವಿಮಾನವು ತೀವ್ರ ಟರ್ಬುಲೆನ್ಸ್‌ಗೆ ಒಳಗಾಯಿತು. ಈ ಘಟನೆ ಸುಮಾರು 15 ನಿಮಿಷಗಳ ಕಾಲ ನಡೆದಿತ್ತು ಎಂದು ಪ್ರಯಾಣಿಕರೊಬ್ಬರು ವಿವರಿಸಿದ್ದಾರೆ. ಟರ್ಬುಲೆನ್ಸ್‌ನ ತೀವ್ರತೆ ಎಷ್ಟಿತ್ತೆಂದರೆ, ಪ್ರಯಾಣಿಕರು ತಾವು ಬದುಕುಳಿಯುತ್ತೇವೋ ಇಲ್ಲವೋ ಎಂಬ ಭಯಕ್ಕೆ ಒಳಗಾಗಿದ್ದರು. ಕೆಲವು ಪ್ರಯಾಣಿಕರು ತಮ್ಮ ಕುಟುಂಬಸ್ಥರಿಗೆ ‘ಕೊನೆಯ ಸಂದೇಶ’ ಕಳುಹಿಸಲು ವಿಡಿಯೊಗಳನ್ನು ಮಾಡಲು ಪ್ರಾರಂಭಿಸಿದರು. ಒಂದು ಕುಟುಂಬದ ಮಗುವೊಂದು ತೀವ್ರ ಅಲುಗಾಟದಿಂದಾಗಿ ಕೈಯಿಂದ ಕೆಳಗೆ ಬಿದ್ದ ಘಟನೆಯೂ ನಡೆದಿದೆ. ಈ ಸಂದರ್ಭದಲ್ಲಿ ಪೈಲಟ್ ಬಹಳ ಸಂಯಮದಿಂದ ವಿಮಾನವನ್ನು ನಿರ್ವಹಿಸಿ, ಹುಬ್ಬಳ್ಳಿಯಲ್ಲಿ ಲ್ಯಾಂಡ್ ಮಾಡಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ನಂತರ ವಿಮಾನವನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಯಿತು. ವಿಮಾನವು ಸುಮಾರು ನಾಲ್ಕು ಗಂಟೆಗಳ ಕಾಲ ಆಕಾಶದಲ್ಲೇ ಸುತ್ತಾಡಿ, ರಾತ್ರಿ 7 ಗಂಟೆಯ ಸುಮಾರಿಗೆ ಬೆಂಗಳೂರಿನಲ್ಲಿ ಸುರಕ್ಷಿತವಾಗಿ ಇಳಿಯಿತು.

ವಿಮಾನ ಸುರಕ್ಷಿತವಾಗಿ ಇಳಿದ ಕೂಡಲೇ ಪ್ರಯಾಣಿಕರು ಭಯದಿಂದ ನಿಟ್ಟುಸಿರು ಬಿಟ್ಟು ಚಪ್ಪಾಳೆ ತಟ್ಟಿದರು. ವಿಮಾನದಲ್ಲಿದ್ದ ಇಬ್ಬರು ಮಹಿಳಾ ಕ್ಯಾಬಿನ್ ಸಿಬ್ಬಂದಿ ಸಹ ಅಕ್ಷರಶಃ ಅಳುತ್ತಿದ್ದರು ಎಂದು ಪ್ರಯಾಣಿಕರು ಹೇಳಿದ್ದಾರೆ. ಈ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ ಪೈಲಟ್‌ಗೆ ಪ್ರಯಾಣಿಕರು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು. ಪೈಲಟ್ ಯಾವುದೇ ತಾಂತ್ರಿಕ ದೋಷವಿಲ್ಲ, ಕೇವಲ ಟರ್ಬುಲೆನ್ಸ್‌ನಿಂದ ಹೀಗಾಯಿತು ಎಂದು ಸ್ಪಷ್ಟಪಡಿಸಿದರು. ಆದರೆ, ವಿಮಾನ ಇಳಿದ ನಂತರ FLY91 ಏರ್‌ಲೈನ್ಸ್‌ನ ನಿಲ್ದಾಣದ ಸಿಬ್ಬಂದಿಯ ವರ್ತನೆ ಪ್ರಯಾಣಿಕರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನದಿಂದ ಇಳಿಯುತ್ತಿದ್ದಂತೆ, ಇಬ್ಬರಿಂದ ಮೂವರು FLY91 ಸಿಬ್ಬಂದಿ (ಇಂಡಿಗೋ ಅಲ್ಲ, FLY91 ಸಿಬ್ಬಂದಿ ಎಂದು ಪ್ರಯಾಣಿಕರು ಸ್ಪಷ್ಟಪಡಿಸಿದ್ದಾರೆ) ವಾಕಿಟಾಕಿ ಹಿಡಿದುಕೊಂಡು, “ನೀವು ಇಲ್ಲೇ ಕುಳಿತಿರಿ, ಈ ವಿಮಾನ ಮುಂದಿನ ಹುಬ್ಬಳ್ಳಿಗೆ ಹೋಗುತ್ತದೆ, ಹತ್ತಬೇಕಿದ್ದರೆ ಹತ್ತಿ ಇಲ್ಲದಿದ್ದರೆ ಇಳಿದು ಹೋಗಿ” ಎಂಬ ಅಸಭ್ಯ ಧಾಟಿಯಲ್ಲಿ ಮಾತನಾಡಿದರು. ಜೀವ ಉಳಿಸಿಕೊಂಡು ಬಂದ ಪ್ರಯಾಣಿಕರಿಗೆ ಯಾವುದೇ ಸೌಜನ್ಯ ಅಥವಾ ಮಾನವೀಯತೆ ಇಲ್ಲದೆ ಸಿಬ್ಬಂದಿ ವರ್ತಿಸಿದರು ಎಂದು ಪ್ರಯಾಣಿಕರೊಬ್ಬರು ದೂರಿದ್ದಾರೆ.

“ನಾನು ಮತ್ತೆ ಯಾವ ಧೈರ್ಯದ ಮೇಲೆ ಈ ವಿಮಾನವನ್ನು ಹತ್ತಲಿ?” ಎಂದು ಪ್ರಶ್ನಿಸಿದ ಪ್ರಯಾಣಿಕರು, ಇತರ ಏರ್‌ಲೈನ್ಸ್‌ಗಳಿಗಿಂತ FLY91 ಸಿಬ್ಬಂದಿಯ ವರ್ತನೆ ಕೀಳುಮಟ್ಟದ್ದಾಗಿತ್ತು ಎಂದು ಆಪಾದಿಸಿದ್ದಾರೆ. ಇಂತಹ ಘಟನೆಗಳ ನಂತರ ಪ್ರಯಾಣಿಕರಿಗೆ ಸಮಾಧಾನ ಹೇಳಿ, ಅವರಿಗೆ ಧೈರ್ಯ ತುಂಬಬೇಕಾದ ಸಿಬ್ಬಂದಿ ಅಹಂಕಾರದಿಂದ ವರ್ತಿಸಿದ್ದು, ದೇಶದಲ್ಲಿ ಇಷ್ಟೆಲ್ಲ ದೊಡ್ಡ ದುರಂತಗಳು ನಡೆಯುತ್ತಿದ್ದರೂ ಒಂದು ಮಾನವೀಯತೆ ಇಲ್ಲ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link