All posts by nagaraj11081993

Gold Rates: ಚಿನ್ನದ ಬೆಲೆ ಗ್ರಾಮ್​ಗೆ 45 ರೂ ಇಳಿಕೆ; ಇಲ್ಲಿದೆ ದರಪಟ್ಟಿ – Kannada News | Gold Price Today on 20th April 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಏಪ್ರಿಲ್ 20: ಚಿನ್ನದ ಬೆಲೆ ಈ ವಾರವನ್ನು ಇಳಿಕೆಯೊಂದಿಗೆ ಆರಂಭಿಸಿದೆ. ಇಂದು ಸೋಮವಾರ ಬಂಗಾರದ ಬೆಲೆ (Gold Rates) ಗ್ರಾಮ್​ಗೆ 45 ರೂನಷ್ಟು ಅಲ್ಪ ಕುಸಿತ ಕಂಡಿದೆ. ಉಳಿದಂತೆ ಅಂತಾರಾಷ್ಟ್ರೀಯವಾಗಿ ಹೆಚ್ಚಿನ ಕಡೆ ಚಿನ್ನದ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಯವಾಗಿಲ್ಲ. ಬೆಳ್ಳಿ ಬೆಲೆಯ ಯಥಾಸ್ಥಿತಿಯೂ ಮುಂದುವರಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,42,350 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,55,290 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 27,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,42,350 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 27,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 28,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಏಪ್ರಿಲ್ 20ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,529 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,235 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,647 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 275 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,529 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,235 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 275 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,235 ರೂ
  • ಚೆನ್ನೈ: 14,300 ರೂ
  • ಮುಂಬೈ: 14,235 ರೂ
  • ದೆಹಲಿ: 14,250 ರೂ
  • ಕೋಲ್ಕತಾ: 14,235 ರೂ
  • ಕೇರಳ: 14,235 ರೂ
  • ಅಹ್ಮದಾಬಾದ್: 14,240 ರೂ
  • ಜೈಪುರ್: 14,250 ರೂ
  • ಲಕ್ನೋ: 14,250 ರೂ
  • ಭುವನೇಶ್ವರ್: 14,235 ರೂ

ಇದನ್ನೂ ಓದಿ: ಮೆಷಿನ್​ಗಳು ಮನುಷ್ಯನ ಮಟ್ಟದ ಬುದ್ಧಿವಂತಿಕೆ ಹೊಂದಲು ಇನ್ನೆಷ್ಟು ವರ್ಷ ಬೇಕು? ಎಜಿಐ ಪಿತಾಮಹ ಬೆನ್ ಗರ್ಟ್ಜೆಲ್ ಹೇಳೋದಿದು

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 588 ರಿಂಗಿಟ್ (13,790 ರುಪಾಯಿ)
  • ದುಬೈ: 539 ಡಿರಾಮ್ (13,613 ರುಪಾಯಿ)
  • ಅಮೆರಿಕ: 150.50 ಡಾಲರ್ (13,963 ರುಪಾಯಿ)
  • ಸಿಂಗಾಪುರ: 190.70 ಸಿಂಗಾಪುರ್ ಡಾಲರ್ (13,848 ರುಪಾಯಿ)
  • ಕತಾರ್: 535.50 ಕತಾರಿ ರಿಯಾಲ್ (13,625 ರೂ)
  • ಸೌದಿ ಅರೇಬಿಯಾ: 548 ಸೌದಿ ರಿಯಾಲ್ (13,552 ರುಪಾಯಿ)
  • ಓಮನ್: 57.15 ಒಮಾನಿ ರಿಯಾಲ್ (13,771 ರುಪಾಯಿ)
  • ಕುವೇತ್: 44.65 ಕುವೇತಿ ದಿನಾರ್ (13,520 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 275 ರೂ
  • ಚೆನ್ನೈ: 280 ರೂ
  • ಮುಂಬೈ: 275 ರೂ
  • ದೆಹಲಿ: 275 ರೂ
  • ಕೋಲ್ಕತಾ: 275 ರೂ
  • ಕೇರಳ: 280 ರೂ
  • ಅಹ್ಮದಾಬಾದ್: 275 ರೂ
  • ಜೈಪುರ್: 275 ರೂ
  • ಲಕ್ನೋ: 275 ರೂ
  • ಭುವನೇಶ್ವರ್: 280 ರೂ
  • ಪುಣೆ: 275

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ವರದಕ್ಷಿಣೆ ಕಿರುಕುಳಕ್ಕೆ ಎರಡು ಮಕ್ಕಳ ತಾಯಿ ಬಲಿ: ಕಿಟಕಿಯ ಗ್ರಿಲ್​​ಗೆ ವೇಲ್​​ ಬಿಗಿದುಕೊಂಡು ಆತ್ಮಹತ್ಯೆ – Kannada News | Belagavi Dowry Harassment: Mother of Two Dies Amid Domestic Abuse

ಬೆಳಗಾವಿ, ಏಪ್ರಿಲ್​​ 20: ಕೌಟುಂಬಿಕ ಕಲಹ ಮತ್ತು ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿಯ ಜ್ಯೋತಿ ನಗರದಲ್ಲಿ ನಡೆದಿದೆ. ಶ್ರೀನಿಧಿ ನಾವಿ (28) ಮೃತ ಗೃಹಿಣಿಯಾಗಿದ್ದು, ಮನೆಯ ಕಿಟಕಿಯ ಗ್ರಿಲ್​​ಗೆ ವೇಲ್​​ ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾಳೆ. ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಕೇಸ್ ದಾಖಲಾಗಿದ್ದು, ಪ್ರಕರಣ ಸಂಬಂಧ ಮಹಿಳೆಯ ಪತಿ ಸಂತೋಷ್​​ನನ್ನು ಪೊಲೀಸರು ಬಂಧಿಸಿದ್ದಾರೆ.

2021ರಲ್ಲಿ ಶ್ರೀನಿಧಿ ಮತ್ತು ಸಂತೋಷ್​​ ವಿವಾಹ ನಡೆದಿತ್ತು. ‌ಆರಂಭದಲ್ಲಿ ಸಂಸಾರ ಚೆನ್ನಾಗಿಯೇ ಇದ್ದು, ಇದಕ್ಕೆ ಸಾಕ್ಷಿ ಎಂಬಂತೆ ದಂಪತಿಗೆ ಇಬ್ಬರು ಮಕ್ಕಳೂ ಇದ್ದಾರೆ. ಆದರೆ ಇತ್ತೀಚೆಗೆ ಕೌಟುಂಬಿಕ ಕಲಹ ಆರಂಭವಾಗಿದ್ದು, ತವರು ಮನೆಯವರೊಂದಿಗೆ ಮಾತಾಡದಂತೆ ಪತಿ ಸಂತೋಷ ಶ್ರೀನಿಧಿ ಬಳಿಯಿದ್ದ ಮೊಬೈಲ್ ಪೋನ್ ಕಿತ್ತುಕೊಂಡಿದ್ದ ಎನ್ನಲಾಗಿದೆ. ಶ್ರೀನಿಧಿ ಆತ್ಮಹತ್ಯೆ ಸಂಬಂಧ ಆಕೆಯ ಗಂಡ, ಅತ್ತೆ, ಮತ್ತು ಇನ್ನಿಬ್ಬರು ಸಂಬಂಧಿಕರ ವಿರುದ್ಧ ಕುಟುಂಬಸ್ಥರು ದೂರು ನೀಡಿದ್ದು, ಆಕೆಯದ್ದು ಆತ್ಮಹತ್ಯೆ ಅಲ್ಲ. ಬದಲಾಗಿ ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಮರ್ಯಾದಾ ಹತ್ಯೆ; ಪ್ರೀತಿಸಿದವನ ಜೊತೆ ಹೋಗಿದ್ದಕ್ಕೆ ವಿಷ ಹಾಕಿದ ಅಣ್ಣ!

ಯುವಕ‌ ಆತ್ಮಹತ್ಯೆ

ಊರಿಗೆ ಹೋಗಲು ಬಿಡಲಿಲ್ಲ ಎಂಬ ಕಾರಣಕ್ಕೆ ಮನನೊಂದು ಬಿಹಾರ ಮೂಲದಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೇವನಹಳ್ಳಿ ತಾಲೂಕಿನ ‌ವಿಜಯಪುರ ಪಟ್ಟಣದಲ್ಲಿ ನಡೆದಿದೆ. ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಗೋವಿಂದ ಯಾದವ್ ಮೃತಪಟ್ಟಿದ್ದು, ಕಳೆದ ಆರು‌ ತಿಂಗಳ ಹಿಂದೆ ಸಹೋದರನ ಜೊತೆ‌ ಸೆಂಟ್ರಿಂಗ್ ಕೆಲಸಕ್ಕೆಂದು ಈತ ಬಂದಿದ್ದ. ಆದ್ರೆ ಕಳೆದ‌‌‌‌ ಕೆಲ ತಿಂಗಳುಗಳಿಂದ ಕೆಲಸ‌ ಬೇಡ ಊರಿಗೆ ಹೋಗಬೇಕು ಎಂದು ಗೋವಿಂದ ಹೇಳುತ್ತಿದ್ದರೂ, ಇನ್ನು ಎರಡು ತಿಂಗಳು‌ ಬೇಡ ಎಂದು ಆತನನ್ನು ಊರಿಗೆ ಹೋಗದಂತೆ ಸಹೋದರ ತಡೆದಿದ್ದ. ಇದೇ ವಿಚಾರಕ್ಕೆ ಆತ ತೀವ್ರ ನೊಂದಿದ್ದ ಎನ್ನಲಾಗಿದ್ದು, ಪ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಒಳಚರಂಡಿ ತ್ಯಾಜ್ಯದಿಂದ ಕೋಟಿ ಕೋಟಿ ಆದಾಯ! ಬೆಂಗಳೂರಿನಲ್ಲಿ ದೇಶದಲ್ಲೇ ಅತಿ ದೊಡ್ಡ ವೇಸ್ಟ್ ಟು ವೆಲ್ತ್ ಯೋಜನೆಗೆ ಜಲಮಂಡಳಿ ಸಿದ್ಧತೆ – Kannada News | BWSSB to Generate Rs 120 Crore from Sewage Biogas; Bengaluru Hotels Adopt Waste to Gas Model to Tackle LPG Scarcity

ಬೆಂಗಳೂರು, ಏಪ್ರಿಲ್ 20: ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ತ್ಯಾಜ್ಯ ನೀರು ಇನ್ನು ಮುಂದೆ ಕೇವಲ ಕೊಳಚೆಯಾಗಿ ಉಳಿಯುವುದಿಲ್ಲ, ಬದಲಿಗೆ ಜಲಮಂಡಳಿಯ ಪಾಲಿಗೆ ಆದಾಯದ ಮೂಲವಾಗಲಿದೆ. ಬೆಂಗಳೂರು ಜಲಮಂಡಳಿಯು (BWSSB) ತನ್ನ ಐದು ಬೃಹತ್ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳಿಂದ (STP) ಹೊರಬರುವ ಜೈವಿಕ ಅನಿಲವನ್ನು (Biogas) ಕಂಪ್ರೆಸ್ಡ್ ಬಯೋಗ್ಯಾಸ್ (CBG) ಆಗಿ ಪರಿವರ್ತಿಸಿ ಮಾರಾಟ ಮಾಡಲು ಮುಂದಾಗಿದೆ. ಈ ಮೂಲಕ ಮುಂದಿನ 20 ವರ್ಷಗಳಲ್ಲಿ ಬರೋಬ್ಬರಿ 120 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ಗಳಿಸುವ ಗುರಿ ಹೊಂದಿದೆ.

ದೇಶದಲ್ಲೇ ಅತಿ ದೊಡ್ಡ ಯೋಜನೆ

ಈ ಮಹತ್ವಾಕಾಂಕ್ಷೆಯ ಯೋಜನೆಗೆ ರಾಜ್ಯ ಸಚಿವ ಸಂಪುಟ ಈಗಾಗಲೇ ಅನುಮೋದನೆ ನೀಡಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (PPP) ಮಾದರಿಯಲ್ಲಿ ಈ ಯೋಜನೆ ಜಾರಿಯಾಗಲಿದ್ದು, ಖಾಸಗಿ ಸಂಸ್ಥೆಯು 85 ಕೋಟಿ ರೂ. ವೆಚ್ಚ ಮಾಡಲಿದೆ. ಸೂರತ್‌ನಂತಹ ನಗರಗಳಲ್ಲಿ ಇಂತಹ ಪ್ರಯತ್ನಗಳು ನಡೆದಿದ್ದರೂ, ಬೆಂಗಳೂರಿನ ಯೋಜನೆ ಅತ್ಯಂತ ದೊಡ್ಡದಾಗಿದೆ. ಇಲ್ಲಿ ಭವಿಷ್ಯದಲ್ಲಿ ಪ್ರತಿದಿನ 550 ಎಂಎಲ್‌ಡಿ (MLD) ತ್ಯಾಜ್ಯ ನೀರನ್ನು ಬಳಸಿಕೊಂಡು ಇಂಧನ ತಯಾರಿಸಲಾಗುತ್ತದೆ.

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ‘ತ್ಯಾಜ್ಯದಿಂದ ಸಂಪತ್ತು’ ಎಂಬ ಆಶಯದಡಿ ಈ ಯೋಜನೆ ರೂಪಿಸಲಾಗಿದೆ ಎಂದು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ. ಇಲ್ಲಿ ತಯಾರಾಗುವ ಗ್ಯಾಸ್ ಅನ್ನು ಸಾರಿಗೆ ಇಂಧನವಾಗಿ ಅಥವಾ ಗ್ಯಾಸ್ ವಿತರಣಾ ಜಾಲಕ್ಕೆ ನೀಡಲಾಗುವುದು ಎಂದು ಅವರು ಹೇಳೀದ್ದಾರೆ.

ಎಲ್‌ಪಿಜಿ ಕೊರತೆ ಮತ್ತು ಹೋಟೆಲ್ ಉದ್ಯಮದ ಹೊಸ ಹಾದಿ

ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಕೊರತೆ ಮತ್ತು ಬೆಲೆ ಏರಿಕೆ ಹೋಟೆಲ್ ಉದ್ಯಮಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಗ್ಯಾಸ್ ದರ ಏರಿಕೆಯಿಂದಾಗಿ ಹೋಟೆಲ್ ಮಾಲೀಕರು ಗ್ರಾಹಕರ ಮೇಲೆ ಆರ್ಥಿಕ ಹೊರೆ ಹೇರಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದರು. ಈ ಸಮಸ್ಯೆಗೆ ಸೆಡ್ಡು ಹೊಡೆಯಲು ಬೆಂಗಳೂರಿನ ಹೋಟೆಲ್ ಮಾಲೀಕರು ವಿಭಿನ್ನ ಹಾದಿ ಹಿಡಿದಿರುವ ಬಗ್ಗೆ ಕೆಲವು ದಿನಗಳ ಹಿಂದೆ ವರದಿಯಾಗಿತ್ತು. ಹೋಟೆಲ್‌ಗಳಲ್ಲಿ ಉತ್ಪತ್ತಿಯಾಗುವ ಆಹಾರದ ತ್ಯಾಜ್ಯ ಮತ್ತು ಕಸವನ್ನು ನೀಡಿ, ಬದಲಿಗೆ ಅಡುಗೆಗೆ ಬಳಸಬಹುದಾದ ಬಯೋಗ್ಯಾಸ್ ಪಡೆಯುವ ನವೀನ ಮಾದರಿಯನ್ನು ಹೋಟೆಲ್‌ಗಳು ಅಳವಡಿಸಿಕೊಳ್ಳುತ್ತಿ ಎಂದು ಮೂಲಗಳು ತಿಳಿಸಿದ್ದವು.

ಇದನ್ನೂ ಓದಿ: ಎಲ್‌ಪಿಜಿ ಕೊರತೆ, ದರ ಏರಿಕೆಗೆ ಸೆಡ್ಡು: ಹೋಟೆಲ್ ಕಸ ನೀಡಿ ಬಯೋಗ್ಯಾಸ್ ಪಡೆಯಲು ಮುಂದಾದ ಬೆಂಗಳೂರಿನ ಹೋಟೆಲ್‌ಗಳು!

ಇದೀಗ ಜಲಮಂಡಳಿ ಕೂಡ ಒಳಚರಂಡಿ ತ್ಯಾಜ್ಯದಿಂದ ಬಯೋಗ್ಯಾಸ್ ಉತ್ಪಾದನೆಗೆ ಹೊರಟಿರುವುದು ಇಂಧನ ಕ್ಷೇತ್ರದಲ್ಲಿ ಸ್ವಾವಲಂಬಿಯಾಗುವ ನಿಟ್ಟಿನಲ್ಲಿ ಬೆಂಗಳೂರಿಗೆ ಹಾಗೂ ರಾಜ್ಯಕ್ಕೆ ಮಹತ್ವದ ಕೊಡುಗೆ ನೀಡಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಜ್ಯದಲ್ಲಿ ಹೀಟ್​ ಸ್ಟ್ರೋಕ್​ಗೆ ಮೊದಲ ಬಲಿ! ಬೀದರ್​ನಲ್ಲಿ ಬಿಸಿಲ ಝಳ ತಾಳಲಾರದೆ ಕುಸಿದು ಬಿದ್ದ ಯುವಕ ಸ್ಥಳದಲ್ಲೇ ಸಾವು – Kannada News | Bidar Heatstroke Death: Youth collapses Amidst Extreme Karnataka Heatwave

ಬೀದರ್​ನ ಕಡುಬಿಸಿಲಿಗೆ ಹದಿಹರೆಯದ ಯುವಕ ಬಲಿ!Image Credit source: google Gemini

ಬೀದರ್, ಏಪ್ರಿಲ್ 20: ಬೇಸಿಗೆ ಶುರುವಾದಾಗಲಿಂದಲೂ ರಾಜ್ಯದ ಹಲವೆಡೆ ವಿಪರೀತ ಬಿಸಿಲು (Heat wave) ಕಂಡು ಬಂದಿದೆ. ಕರಾವಳಿ, ಉತ್ತರ ಕರ್ನಾಟಕದಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್​ವರೆಗೂ ಹೋಗುವ ಹಂತಕ್ಕೆ ತಪುಪಿದ್ದು, ಹೀಟ್ ವೇವ್ ಅಲರ್ಟ್​ ನೀಡಲಾಗಿದೆ. ಹೀಗಾಗಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಅನಗತ್ಯವಾಗಿ ಹೊರಗೆ ಬರಬೇಡಿ, ಹೆಚ್ಚು ನೀರು ಸೇವಿಸಿ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಈ ನಡುವೆ ಬೀದರ್​ನ ಕಮಲನಗರ ಪಟ್ಟಣದ ಹೊರವಲಯದಲ್ಲಿ ಹೀಟ್ ಸ್ಟ್ರೋಕ್​ನಿಂದಾಗಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ.

ಉತ್ತರ ಪ್ರದೇಶ ಮೂಲದ ಯುವಕ

ಮೃತರನ್ನು ಉತ್ತರ ಪ್ರದೇಶ ಮೂಲದ ಮೊಹಮ್ಮದ್ ಸಮೀರ್ ಲಯಿಕ್ ಅಹ್ಮದ್ (20) ಎಂದು ಗುರುತಿಸಲಾಗಿದೆ. ಆತ ಕಮಲನಗರದಲ್ಲಿ ಸಲೂನ್‌ನಲ್ಲಿ ಕೆಲಸ ಮಾಡುತ್ತಿದ್ದ. ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ತಾಪಮಾನ ಗಣನೀಯವಾಗಿ ಏರಿಕೆಯಾಗಿದ್ದು, ಹೊರಗಡೆ ಸಂಚರಿಸುವುದು ಕಷ್ಟವಾಗುವಷ್ಟು ಬಿಸಿಲಿನ ತೀವ್ರತೆ ಹೆಚ್ಚಾಗಿತ್ತು. ಘಟನೆಯ ದಿನ ಸಮೀರ್ ತಾಪಮಾನ ಹೆಚ್ಚಿದ ಪರಿಣಾಮ ತಲೆ ಸುತ್ತು ಕಾಣಿಸಿಕೊಂಡಿದೆ ಎಂದು ಹೇಳಿಕೊಂಡಿದ್ದ. ಸ್ಥಳೀಯ ಮೆಕ್ಯಾನಿಕ್ ಅಂಗಡಿ ಬಳಿ ನೀರು ಕುಡಿದು ಸ್ವಲ್ಪ ಸಮಯ ವಿಶ್ರಾಂತಿಯನ್ನೂ ಪಡೆದಿದ್ದ ಎನ್ನಲಾಗಿದೆ.

ಇದನ್ನೂ ಓದಿ ಕರ್ನಾಟಕ ಹವಾಮಾನ ವರದಿ: ಇಂದು ಹೀಟ್ ವೇವ್ ಜೊತೆಗೆ ಕರಾವಳಿಯಲ್ಲಿ ವರುಣಾರ್ಭಟ!

ಬಿಸಿಲಿನಲ್ಲಿ ಹೊರಗೆ ಹೋಗದಂತೆ ಅಧಿಕಾರಿಗಳಿಂದ ಎಚ್ಚರಿಕೆ

ಬಳಿಕ ಡಿಗ್ಗಿ ಗ್ರಾಮದ ಕಡೆಗೆ ರಾಷ್ಟ್ರೀಯ ಹೆದ್ದಾರಿ-50 ಮಾರ್ಗವಾಗಿ ತೆರಳುತ್ತಿದ್ದಾಗ ಯುವಕ ಏಕಾಏಕಿ ಕುಸಿದು ಬಿದ್ದಿದ್ದು, ಸ್ಥಳೀಯರು ತಕ್ಷಣ ನೆರವಿಗೆ ಧಾವಿಸಿದರೂ, ಹೀಟ್ ಸ್ಟ್ರೋಕ್​ನಿಂದಾಗಿ ಸ್ಥಳದಲ್ಲೇ ಮೃತಪಟ್ಟಿರುವುದು ತಿಳಿದುಬಂದಿದೆ. ಆದರೆ ಮರಣೋತ್ತರ ಪರೀಕ್ಷೆಯ ವರದಿ ನಂತರ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಕಮಲನಗರ ಪೊಲೀಸ್ ಠಾಣೆಯಲ್ಲಿ ತನಿಖೆ ಮುಂದುವರಿದಿದೆ. ಜನರು ಅಗತ್ಯವಿಲ್ಲದೆ ಬಿಸಿಲಿನಲ್ಲಿ ಹೊರಗೆ ತೆರಳದಂತೆ ಮತ್ತು ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:15 am, Mon, 20 April 26

Source link

ಫೆಮಿನಾ ಮಿಸ್ ಇಂಡಿಯಾ ಪಟ್ಟ ಗೆದ್ದ ಕಾರವಾರ ಶಾಸಕನ ಮಗಳು ಸಾಧ್ವಿ ಸತೀಶ್ ಸೈಲ್​ – Kannada News | Karwar MLA Satish Sail’s Daughter Sadhvi Sail Wins Femina Miss India Crown: to Represent India at Miss World 2026

ಕಾರವಾರ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಮಗಳು ಸಾಧ್ವಿ ಸೈಲ್ ಅವರು 61ನೇ ಸಾಲಿನ ಫೆಮಿನಾ ಮಿಸ್ ಇಂಡಿಯಾ ಕಿರೀಟ ಗೆದ್ದು ಸಾಧನೆ ಮಾಡಿದ್ದಾರೆ. ಏಪ್ರಿಲ್ 18ರಂದು ಒಡಿಶಾದ ಭುವನೇಶ್ವರದಲ್ಲಿರುವ ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿಯಲ್ಲಿ ಫಿನಾಲೆ ನಡೆದಿದೆ. ಸಾಧ್ವಿ ಅವರು ಗೆದ್ದು ಕೀರಿಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಗೆದ್ದ ಬಳಿಕ ತಂದೆಯ ಜೊತೆ ವಿಡಿಯೋ ಕಾಲ್​​​ನಲ್ಲಿ ಮಾತನಾಡಿ ಸಾಧ್ವಿ ಖುಷಿಪಟ್ಟಿದ್ದಾರೆ.

ವಿವಿಧ ರಾಜ್ಯಗಳ ಸ್ಪರ್ಧಿಗಳು ಫಿನಾಲೆಯಲ್ಲಿ ಇದ್ದರು. ಒಟ್ಟೂ 29 ಮಂದಿಯನ್ನು ಹಿಂದಿಕ್ಕಿ ಗೋವಾ ಪ್ರತಿನಿಧಿಸಿದ್ದ ಸಾಧ್ವಿ ಗೆದ್ದಿದ್ದಾರೆ. ಮಹಾರಾಷ್ಟ್ರದ ರಾಜನಂದಿನಿ ಅವರು ಮೊದಲ ರನ್ನರ್ ಅಪ್ ಆದರೆ, ಜಮ್ಮು ಹಾಗೂ ಕಾಶ್ಮೀರದ ಶ್ರೀತಿ ಅದ್ವೈತಾ ಅವರು ಎರಡನೇ ರನ್ನರ್ ಅಪ್ ಆಗಿದ್ದಾರೆ. ಕಳೆದ ವರ್ಷದ ವಿನ್ನರ್ ನಿಕಿತಾ ಪೋರ್ವಾಲ್ ಅವರು ಸಾಧ್ವಿಗೆ ಕಿರೀಟ ತೊಡಿಸಿದರು. ಕರ್ನಾಟಕವನ್ನು ಪ್ರತಿನಿಧಿಸಿದ್ದ ಖುಷಿ ರಮೇಶ್‌ ಅವರು ಟಾಪ್ 15ರಲ್ಲಿ ಸ್ಥಾನ ಪಡೆಯಲಷ್ಟೇ ಶಕ್ತರಾದರು.

‘ನನಗೆ ಈ ಅವಕಾಶ ಸಿಕ್ಕಿದ್ದಕ್ಕೆ ನಾನು ತುಂಬಾ ಕೃತಜ್ಞಳಾಗಿದ್ದೇನೆ. ಇಲ್ಲಿ ಬಂದ ಪ್ರತಿಯೊಬ್ಬರೂ ವಿಜೇತರು. ಭಾರತವನ್ನು ಹೆಮ್ಮೆ ಪಡುವಂತೆ ಮಾಡುವುದು ನನ್ನ ಉದ್ದೇಶ’ ಎಂದು ಸಾಧ್ವಿ ಅವರು ಪ್ರತಿಕ್ರಿಯಿಸಿದ್ದಾರೆ. ಸಾಧ್ವಿ ಅವರು ಕೆನಡಾದ ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಮತ್ತು ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಪದವಿ ಪಡೆದಿದ್ದಾರೆ.

ಇದನ್ನೂ ಓದಿ: ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್

ಸಾಧ್ವಿ ಅವರು ಸ್ಪರ್ಧೆಗೆ ಹೋಗುವುದಕ್ಕೂ ಮೊದಲು 10 ಕೆಜಿ ತೂಕ ಇಳಿಸಿಕೊಂಡಿದ್ದರು ಎಂಬುದು ವಿಶೇಷ. ಸಾಧ್ವಿ ವಿವಿಧ ರೀತಿಯ ಹವ್ಯಾಸ ಹೊಂದಿದ್ದಾರೆ. ಛಾಯಾಗ್ರಹಣ, ಬ್ಯಾಡ್ಮಿಂಟನ್, ಜೇನುಸಾಕಣೆ ಮೊದಲಾದವು ಅವರ ಫೇವರಿಟ್ ಹಾಬಿ. ಸಾಧ್ವಿ ಅವರು 2026ರ ಮಿಸ್‌ ವರ್ಲ್ಡ್‌ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ವಿಯಟ್ನಾಂನಲ್ಲಿ ಸ್ಪರ್ಧೆ ನಡೆಯಲಿದ್ದು, ಸೆಪ್ಟೆಂಬರ್ 5ರಂದು ಫಿನಾಲೆ ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವಿಮಾನದೊಳಗೆ ಪ್ರಯಾಣಿಕರ ಚೀರಾಟ, ಕಣ್ಣೀರು: ತಾಂತ್ರಿಕ ದೋಷದ ನಡುವೆ ಸಾವಿನ ದರ್ಶನ ಮಾಡಿಸಿದ FLY91 ವಿಮಾನ – Kannada News | Hyderabad Hubli FLY91 Flight Panic: Passengers Safely Landed at Kempegowda International Airport

ಬೆಂಗಳೂರು, ಏ.20: ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ FLY91 ವಿಮಾನ (ATR ಟರ್ಬೊಪ್ರಾಪ್ AT7) ಮಧ್ಯಮಾರ್ಗದಲ್ಲಿ ತಾಂತ್ರಿಕ ದೋಷಕ್ಕೆ ಒಳಗಾಗಿತ್ತು. ಈ ಘಟನೆಯಿಂದಾಗಿ ವಿಮಾನದಲ್ಲಿದ್ದ ಪ್ರಯಾಣಿಕರು ತೀವ್ರ ಆತಂಕಕ್ಕೆ ಒಳಗಾದರು. ಹಲವು ಪ್ರಯಾಣಿಕರು ಭಯದಿಂದ ಅಳುತ್ತಿದ್ದು, ಜೀವ ಕೈಯಲ್ಲಿ ಹಿಡಿದುಕೊಂಡು ಕುಳಿತಿದ್ದರು.ಈ ಬಗ್ಗೆ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಸುಮಾರು ನಾಲ್ಕು ಗಂಟೆಗಳ ಕಾಲ ವಿಮಾನ ಆಕಾಶದಲ್ಲಿ ಸುತ್ತಾಡಿ, ಲ್ಯಾಂಡಿಂಗ್‌ಗಾಗಿ ಸೂಕ್ತ ಸ್ಥಳವನ್ನು ಹುಡುಕುತ್ತಿತ್ತು. ವಿಮಾನ ಸಿಬ್ಬಂದಿ ಮತ್ತು ಪೈಲಟ್‌ಗಳು ಪ್ರಯಾಣಿಕರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು, ಸುರಕ್ಷತೆಯು ಪ್ರಮುಖ ಆದ್ಯತೆ ಎಂದು ಭರವಸೆ ನೀಡಿದರು. ಹವಾಮಾನ ಪರಿಸ್ಥಿತಿಗಳು ಮತ್ತು ಲಭ್ಯವಿರುವ ಇಂಧನದ ಬಗ್ಗೆಯೂ ಮಾಹಿತಿ ನೀಡಿದರು. ವಿಮಾನವು ಇನ್ನೂ 30 ರಿಂದ 45 ನಿಮಿಷಗಳ ಹಾರಾಟ ಸಾಮರ್ಥ್ಯವನ್ನು ಹೊಂದಿದೆ ಎಂದು ತಿಳಿಸಲಾಗಿತ್ತು. ಸಕಾಲಿಕ ನಿರ್ಧಾರದ ನಂತರ, ವಿಮಾನವನ್ನು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಯಿತು. ಅಲ್ಲಿ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಯಿತು. ಈ ಘಟನೆಯಿಂದ ಪ್ರಯಾಣಿಕರು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರೂ, ಅಂತಿಮವಾಗಿ ಎಲ್ಲರೂ ಸುರಕ್ಷಿತವಾಗಿ ನೆಲವನ್ನು ತಲುಪಿ ನಿಟ್ಟುಸಿರು ಬಿಟ್ಟರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Jammu Kashmir Bus Accident: ರಾಮನಗರ-ಉಧಂಪುರ ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿ ಬಸ್ ಪಲ್ಟಿ, 10 ಮಂದಿ ಸಾವು – Kannada News | Tragedy on Mountain Road: Bus Overturns in Jammu and Kashmir, Multiple Lives Lost

ಶ್ರೀನಗರ, ಏಪ್ರಿಲ್ 20: ಜಮ್ಮು ಮತ್ತು ಕಾಶ್ಮೀರದ ರಾಮನಗರ-ಉಧಂಪುರ ಹೆದ್ದಾರಿಯಲ್ಲಿ ಎಂದಿನಂತೆ ವಾಹನಗಳ ಸಂಚಾರವಿತ್ತು. ಆದರೆ ಕಾಘೋಟೆ ಎಂಬ ಗ್ರಾಮದ ಬಳಿ ಸಾಗುತ್ತಿದ್ದ ಆ ಒಂದು ಬಸ್ಸಿನ ಪಾಲಿಗೆ ವಿಧಿ ಬೇರೆಯದೇ ಆಟವಾಡಲು ಸಂಚು ರೂಪಿಸಿತ್ತು. ಪ್ರಯಾಣಿಕರಿಂದ ತುಂಬಿದ್ದ ಆ ಬಸ್ ಅತಿ ವೇಗವಾಗಿ ಚಲಿಸುತ್ತಿತ್ತು. ಹಠಾತ್ತನೆ ಚಾಲಕನ ನಿಯಂತ್ರಣ ತಪ್ಪಿದ ಕಾರಣ ಬಸ್, ರಸ್ತೆಯ ಅಂಚಿನಿಂದ ಹೊರಕ್ಕೆ ಉರುಳಿ ಅಪಘಾತ(Accident)ಕ್ಕೀಡಾಯಿತು.

ಕ್ಷಣಾರ್ಧದಲ್ಲಿ ಮೌನವಾದ ಚೀರಾಟ
ಬಸ್ ಉರುಳಿಬಿದ್ದ ಶಬ್ದಕ್ಕೆ ಇಡೀ ಕಾಘೋಟೆ ಗ್ರಾಮವೇ ಬೆಚ್ಚಿಬಿದ್ದಿತು. ಸ್ಥಳೀಯರು ಓಡಿ ಬರುವಷ್ಟರಲ್ಲಿ ಅಲ್ಲಿ ಮೌನ ಮತ್ತು ನೋವಿನ ಚೀರಾಟಗಳು ಮೇಳೈಸಿದ್ದವು. ಬಸ್ಸಿನ ಕಬ್ಬಿಣದ ಚೌಕಟ್ಟಿನೊಳಗೆ ಸಿಲುಕಿದ್ದ ಪ್ರಯಾಣಿಕರನ್ನು ಹೊರತರುವುದು ಸವಾಲಾಗಿತ್ತು. ದುರದೃಷ್ಟವಶಾತ್, ಸ್ಥಳದಲ್ಲೇ ಹತ್ತು ಜನರು ಕೊನೆಯುಸಿರೆಳೆದಿದ್ದರು. ಸುಂದರ ಪಯಣವಾಗಿರಬೇಕಿದ್ದ ಹಾದಿ, ಕ್ಷಣಾರ್ಧದಲ್ಲಿ ಸ್ಮಶಾನ ಸದೃಶವಾಗಿ ಮಾರ್ಪಟ್ಟಿತ್ತು.

ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯ
ಸುದ್ದಿ ತಿಳಿದ ತಕ್ಷಣ ಸ್ಥಳೀಯ ಆಡಳಿತ ಮತ್ತು ತುರ್ತು ಸೇವಾ ತಂಡಗಳು ಸ್ಥಳಕ್ಕೆ ಧಾವಿಸಿದವು. ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (SDM) ಅವರ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ಚುರುಕುಗೊಂಡಿತು. ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದ್ದರಿಂದ, ಉಧಂಪುರದ ಸರ್ಕಾರಿ ವೈದ್ಯಕೀಯ ಕಾಲೇಜು (GMC) ಆಸ್ಪತ್ರೆಗೆ ಕಳುಹಿಸಲಾಯಿತು.

ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ, ಬಸ್ ಚಾಲಕ ಅತಿ ವೇಗವಾಗಿ ವಾಹನ ಚಲಾಯಿಸುತ್ತಿದ್ದುದೇ ಈ ದುರಂತಕ್ಕೆ  ಕಾರಣ. ಚಾಲಕನ ಒಂದು ಸಣ್ಣ ನಿರ್ಲಕ್ಷ್ಯ ಹತ್ತು ಕುಟುಂಬಗಳ ದೀಪವನ್ನು ಆರಿಸಿಬಿಟ್ಟಿತ್ತು.

ಮತ್ತಷ್ಟು ಓದಿ: ಹೊಸಪೇಟೆಯ ಡಾಣಾಪುರ ಬಳಿ ಸರಣಿ ಅಪಘಾತ: ಬೈಕ್, ಕಾರು, ಬಸ್​ಗೆ ಡಿಕ್ಕಿ ಹೊಡೆದು ಲಾರಿ ಪಲ್ಟಿ; ಇಬ್ಬರು ಸಾವು

ವಿಪರ್ಯಾಸವೆಂದರೆ, ಈ ಘಟನೆ ನಡೆಯುವ ಕೇವಲ ಒಂದು ದಿನದ ಹಿಂದಷ್ಟೇ ರಾಜೌರಿ ಜಿಲ್ಲೆಯ ದರ್ಹಾಲ್-ರಾಜೌರಿ ರಸ್ತೆಯಲ್ಲಿ ಇದೇ ರೀತಿಯ ಅಪಘಾತ ಸಂಭವಿಸಿತ್ತು. ಅಲ್ಲಿನ ಟೆಂಪೋ ಟ್ರಾವೆಲರ್ ಉರುಳಿ ಬಿದ್ದ ಪರಿಣಾಮ 18 ಜನರು ಗಾಯಗೊಂಡಿದ್ದರು, ಅದರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ. ಜಮ್ಮು ಮತ್ತು ಕಾಶ್ಮೀರದ ಅಂಕುಡೊಂಕಿನ ರಸ್ತೆಗಳಲ್ಲಿ ವೇಗಕ್ಕಿಂತ ಸುರಕ್ಷತೆ ಮುಖ್ಯ ಎಂಬ ಪಾಠವನ್ನು ಈ ಸಾಲು ಸಾಲು ಅಪಘಾತಗಳು ಮತ್ತೊಮ್ಮೆ ನೆನಪಿಸಿವೆ. ಈಗ ಕಣಿವೆಯಲ್ಲಿ ಉಳಿದಿರುವುದು ಮೃತರ ಕುಟುಂಬಗಳ ಆಕ್ರಂದನ ಮತ್ತು ಗಾಯಾಳುಗಳ ಚೇತರಿಕೆಗಾಗಿ ನಡೆಯುತ್ತಿರುವ ಪ್ರಾರ್ಥನೆಗಳು ಮಾತ್ರ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಸಿಕ್ಸರ್‌ಗಳ ಸುರಿಮಳೆಗೆ ಕಾರಣವಾಯ್ತು ಶ್ರೇಯಸ್ ಅಯ್ಯರ್ ಅವರ ಆ ಒಂದು ಸವಾಲು! – Kannada News | Shreyas Iyer’s ‘Six Hitting’ Challenge Powers PBKS’ Record Run

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 29ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿದೆ. ಮುಲ್ಲನ್​ಪುರ್​ನಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್​ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 254 ರನ್​ಗಳು. ಈ 254 ರನ್​ಗಳಲ್ಲಿ ಬರೋಬ್ಬರಿ 21 ಸಿಕ್ಸರ್​ಗಳಿದ್ದವು ಎಂಬುದು ವಿಶೇಷ. ಹೀಗೆ ಪಂಜಾಬ್ ಕಿಂಗ್ಸ್ ಬ್ಯಾಟರ್​ಗಳು ಸಿಕ್ಸರ್​ ಸುರಿಮಳೆಗೈಯ್ಯಲು ಮುಖ್ಯ ಕಾರಣ ನಾಯಕ ಶ್ರೇಯಸ್ ಅಯ್ಯರ್ ಮುಂದಿಟ್ಟಿರುವ ಒಂದು ಸ್ಪರ್ಧೆ ಎಂದರೆ ನಂಬಲೇಬೇಕು.

ಸಿಕ್ಸರ್ ಸ್ಪರ್ಧೆ:

ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧದ ಪಂದ್ಯದ ನಂತರ ಮಾತನಾಡಿದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್, ತಂಡದ ಆಟಗಾರರಲ್ಲಿ ಉತ್ಸಾಹ ತುಂಬಲು ತಾವು ಒಂದು ವಿಶೇಷ ಸವಾಲನ್ನು ಹೂಡಿರುವುದಾಗಿ ತಿಳಿಸಿದರು. ಈ ಸೀಸನ್‌ನಲ್ಲಿ ಯಾರು ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸುತ್ತಾರೋ, ಅವರಿಗೆ ತಮ್ಮ ಸ್ವಂತ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡುವುದಾಗಿ ಅಯ್ಯರ್ ಭರವಸೆ ನೀಡಿದ್ದಾರೆ. ಈ ಸಣ್ಣ ಸ್ಪರ್ಧೆಯು ಆಟಗಾರರಲ್ಲಿ ಹೊಸ ಚೈತನ್ಯ ಮೂಡಿಸಿದೆ.

ಅಯ್ಯರ್ ನೀಡಿದ ಈ ಸವಾಲನ್ನು ಸ್ವೀಕರಿಸಿರುವ ಪಂಜಾಬ್ ಕಿಂಗ್ಸ್ ಬ್ಯಾಟರ್​ಗಳು ಇದೀಗ ಸಿಕ್ಸರ್​ಗಳ ಸುರಿಮಳೆಗೈಯ್ಯುತ್ತಿದ್ದಾರೆ. ಅದರಂತೆ ಇದೀಗ ಪಂಜಾಬ್ ಕಿಂಗ್ಸ್ ತಂಡದ ನಾಲ್ವರು ಬ್ಯಾಟರ್​ಗಳ ನಡುವೆ ಭರ್ಜರಿ ಸ್ಪರ್ಧೆ ಏರ್ಪಟ್ಟಿದೆ. ಈ ಸ್ಪರ್ಧೆಗಳ ನಡುವೆ ಶ್ರೇಯಸ್ ಅಯ್ಯರ್ ಹೆಸರು ಕೂಡ ಕಾಣಿಸಿಕೊಂಡಿರುವುದು ವಿಶೇಷ.

ಅಂದರೆ ಪಂಜಾಬ್ ಕಿಂಗ್ಸ್ ತಂಡದ ಟಾಪ್-4 ಸಿಕ್ಸರ್​ಗಳ ಪಟ್ಟಿಯಲ್ಲಿ ಶ್ರೇಯಸ್ ಅಯ್ಯರ್ ಕೂಡ ಇದ್ದಾರೆ. ಏಪ್ರಿಲ್ 20, 2026ರಂತೆ ಬ್ಯಾಟ್ ಗೆಲ್ಲುವ ರೇಸ್‌ನಲ್ಲಿ ಯಾವ ಆಟಗಾರ ಮುಂಚೂಣಿಯಲ್ಲಿದ್ದಾರೆ ಎಂದು ನೋಡುವುದಾದರೆ…

  • ಪ್ರಿಯಾಂಶ್ ಆರ್ಯ: 20 ಸಿಕ್ಸರ್‌ಗಳು
  • ಶ್ರೇಯಸ್ ಅಯ್ಯರ್: 14 ಸಿಕ್ಸರ್‌ಗಳು
  • ಕೂಪರ್ ಕಾನೋಲಿ: 14 ಸಿಕ್ಸರ್‌ಗಳು
  •  ಪ್ರಭ್‌ಸಿಮ್ರಾನ್ ಸಿಂಗ್: 11 ಸಿಕ್ಸರ್‌ಗಳು

ಇನ್ನು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದ ಗೆಲುವಿನ ಬಳಿಕ  ಮಾತನಾಡಿದ ಅಯ್ಯರ್, “ಆಟಗಾರರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡುವ ಬದಲು, ಅವರನ್ನು ಮುಕ್ತವಾಗಿ ಆಡಲು ಬಿಟ್ಟಾಗ ಅವರು ಅತ್ಯುತ್ತಮವಾಗಿ ಪ್ರದರ್ಶನ ನೀಡುತ್ತಾರೆ. ಮೈದಾನದಲ್ಲಿ ತಮ್ಮನ್ನು ತಾವು ಎಕ್ಸ್‌ಪ್ರೆಸ್ ಮಾಡಲು ಅವರಿಗೆ ಸ್ವಾತಂತ್ರ್ಯ ನೀಡಿದ್ದೇನೆ. ಈ ಸ್ವಾತಂತ್ರ್ಯದಿಂದಾಗಿ ನಮ್ಮ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ರವೀಂದ್ರ ಜಡೇಜಾನ ಕಡೆಗಣಿಸಿ ಪಂದ್ಯ ಸೋತ ರಾಜಸ್ಥಾನ್ ರಾಯಲ್ಸ್

ಸದ್ಯ 6 ಪಂದ್ಯಗಳಿಂದ 11 ಅಂಕಗಳನ್ನು ಕಲೆಹಾಕಿರುವ ಪಂಜಾಬ್ ಕಿಂಗ್ಸ್ ತಂಡವು ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಅಲ್ಲದೆ ಈ ಬಾರಿ ಕೂಡ ಪ್ಲೇಆಫ್​ಗೇರುವ ಭರವಸೆಯನ್ನು ಹುಟ್ಟುಹಾಕಿದೆ.

Source link

ಹಾರ್ಮುಜ್​ನಲ್ಲಿ ಭಾರತೀಯ ಹಡಗುಗಳ ಮೇಲೆ ಇರಾನ್ ದಾಳಿ, ಭಾರತದ ನಾಲ್ವರು ನಾವಿಕರು ಬಲಿ:, ಭಾರತ ತೀವ್ರ ಆಕ್ರೋಶ – Kannada News | IRGC Attacks Indian Ships in Hormuz: 4 Sailors Dead, India Demands Answers From Iran

ಹಾರ್ಮುಜ್ , ಏಪ್ರಿಲ್ 20: ಹಾರ್ಮುಜ್ ಜಲಸಂಧಿಯಲ್ಲಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಭಾರತದ ಎರಡು ಹಡಗುಗಳ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ನಾಲ್ವರು ಭಾರತೀಯ ನಾವಿಕರು ಬಲಿಯಾಗಿದ್ದು, ಓರ್ವ ನಾವಿಕ ನಾಪತ್ತೆಯಾಗಿದ್ದಾರೆ ಎಂದು ಭಾರತದ ವಿದೇಶಾಂಗ ಇಲಾಖೆ ಅಧಿಕೃತ ಮಾಹಿತಿ ನೀಡಿದೆ. ಈ ಬಗ್ಗೆ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ತ್ರಿ ಕಳವಳ ವ್ಯಕ್ತಪಡಿಸಿದ್ದಾರೆ.

ಈ ದಾಳಿ ಭಾರತದ ‘ಜಾಗರ್ನವ್’ ಮತ್ತು ‘ಸನ್ಮಾರ್ ಹೆರಾಲ್ಡ್’ ಹಡಗುಗಳ ಮೇಲೆ ನಡೆದಿತ್ತು. ಅಮೆರಿಕಾ ಮತ್ತು ಇರಾನ್ ನಡುವೆ ಕದನ ವಿರಾಮ ಘೋಷಣೆಯಾಗಿ ಹಾರ್ಮುಜ್ ಜಲಸಂಧಿಯನ್ನು ವಾಣಿಜ್ಯ ಹಡಗುಗಳಿಗೆ ತೆರೆಯಲಾಗುವುದು ಎಂದು ಇರಾನ್ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಈ ದಾಳಿ ನಡೆದಿದೆ. ಇರಾನ್‌ನ ವಿದೇಶಾಂಗ ಸಚಿವರೇ ಈ ಬಗ್ಗೆ ಹೇಳಿಕೆ ನೀಡಿದ್ದರೂ, ಭಾರತೀಯ ಧ್ವಜವಿದ್ದ ಹಡಗುಗಳ ಮೇಲೆ ದಾಳಿ ನಡೆದಿರುವುದು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಭಾರತ ಸರ್ಕಾರ ಇರಾನ್ ರಾಯಭಾರಿಯನ್ನು ಕರೆಸಿ ಪ್ರತಿಭಟನೆ ದಾಖಲಿಸಿದೆ ಹಾಗೂ ದಾಳಿಯ ಉದ್ದೇಶದ ಬಗ್ಗೆ ಉತ್ತರಿಸುವಂತೆ ಆಗ್ರಹಿಸಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಇರಾನ್, ಅಮೆರಿಕ ನಡುವೆ ಬಿಲ್ಡಪ್ ಕೊಡಲು ಹೋಗಿ ಮುಖಭಂಗ ಅನುಭವಿಸಿದ ಪಾಕಿಸ್ತಾನ – Kannada News | Iran US Standoff Deepens: Pakistans Mediation Fails as Hormuz Strait Becomes Flashpoint

ಇಸ್ಲಾಮಾಬಾದ್​​, ಏಪ್ರಿಲ್​​ 20: ಅಮೆರಿಕ ಮತ್ತು ಇರಾನ್ ನಡುವೆ ಸಂಧಾನ ಮಾತುಕತೆಗಳು ಹದಗೆಟ್ಟಿವೆ. ಪಾಕಿಸ್ತಾನದ ಪ್ರಧಾನಿ ಶಹಬಾಜ್ ಶರೀಫ್ ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸಿದ್ದರೂ, ಇರಾನ್ ಎರಡನೇ ಸುತ್ತಿನ ಮಾತುಕತೆಗೆ ಬರಲು ನಿರಾಕರಿಸಿದೆ. ಅಮೆರಿಕದ ಡೊನಾಲ್ಡ್ ಟ್ರಂಪ್ ಅವರು ಇರಾನ್‌ಗೆ ಕಠಿಣ ಎಚ್ಚರಿಕೆ ನೀಡಿದ್ದು, ಇರಾನ್‌ನನ್ನು ನಾಶ ಮಾಡುವ ಬೆದರಿಕೆ ಹಾಕಿದ್ದಾರೆ. ಮತ್ತೊಂದೆಡೆ, ಅಮೆರಿಕ ಇರಾನ್‌ನ ಹಡಗಿನ ಮೇಲೆ ದಾಳಿ ನಡೆಸಿದ್ದು, ಹಾರ್ಮುಜ್ ಜಲಸಂಧಿ ತನ್ನ ನಿಯಂತ್ರಣದಲ್ಲಿದೆ ಎಂದು ಇರಾನ್ ಪ್ರತಿ ಸವಾಲು ಹಾಕಿದೆ. ಎರಡನೇ ಸುತ್ತಿನ ಸಂಧಾನಕ್ಕೆ ಇರಾನ್ ನಿರಾಕರಿಸಿದ್ದರಿಂದ ಪಾಕಿಸ್ತಾನದ ಮಧ್ಯಸ್ಥಿಕೆ ವಿಫಲವಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link