IPL 2026: ಐಪಿಎಲ್ ಪಾಯಿಂಟ್ಸ್ ಟೇಬಲ್​ನಲ್ಲಿ ಮಹತ್ವದ ಬದಲಾವಣೆ – Kannada News | PL 2026 Points Table After PBKS vs LSG Match

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 29 ಪಂದ್ಯಗಳು ಮುಗಿದಿವೆ. ಈ ಇಪ್ಪತ್ತೊಂದು ಪಂದ್ಯಗಳಲ್ಲಿ ಕೊನೆಯ ಮ್ಯಾಚ್ ಆಡಿರುವುದು ಪಂಜಾಬ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್. ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್​ ತಂಡವು 54 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಪಂಜಾಬ್ ಪಡೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಹಾಗಿದ್ರೆ ನೂತನ ಪಾಯಿಂಟ್ಸ್​ ಟೇಬಲ್​ನಲ್ಲಿ ಯಾವ ತಂಡ ಯಾವ ಸ್ಥಾನದಲ್ಲಿದೆ ಎಂದು ನೋಡೋಣ…

1- ಪಂಜಾಬ್ ಕಿಂಗ್ಸ್: ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡವು ಈವರೆಗೆ 5 ಮ್ಯಾಚ್​ಗಳಲ್ಲಿ ಜಯ ಸಾಧಿಸಿದೆ. ಇನ್ನು ಕೆಕೆಆರ್ ವಿರುದ್ಧದ ಪಂದ್ಯವು ಮಳೆಯ ಕಾರಣ ರದ್ದಾಗಿದೆ. ಅಂದರೆ ಒಟ್ಟು 6 ಮ್ಯಾಚ್​ಗಳ ಮೂಲಕ ಪಂಜಾಬ್ ಕಿಂಗ್ಸ್​ 11 ಅಂಕಗಳನ್ನು ಪಡೆದುಕೊಂಡಿದ್ದು, ಈ ಮೂಲಕ +1.420 ನೆಟ್ ರನ್ ರೇಟ್​ನೊಂದಿಗೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

2- ರಾಯಲ್ ಚಾಲೆಂಜರ್ಸ್ ಬೆಂಗಳೂರು: ಆರ್​ಸಿಬಿ ತಂಡವು ಈವರೆಗೆ ಆಡಿರುವುದು 6 ಪಂದ್ಯಗಳನ್ನು ಮಾತ್ರ. ಈ ಆರು ಮ್ಯಾಚ್​ಗಳಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋತರೆ, ಸಿಎಸ್​ಕೆ, ಎಲ್​ಎಸ್​ಜಿ, ಎಸ್​ಆರ್​ಹೆಚ್ ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು ದಾಖಲಿಸಿದೆ. ಈ ಮೂಲಕ 8 ಅಂಕ ಹಾಗೂ +1.171 ನೆಟ್ ರನ್ ರೇಟ್​ನೊಂದಿಗೆ ಪಾಯಿಂಟ್ಸ್​ ಟೇಬಲ್​ನಲ್ಲಿ ದ್ವಿತೀಯ ಸ್ಥಾನವನ್ನು ಅಲಂಕರಿಸಿದೆ.

3- ರಾಜಸ್ಥಾನ್ ರಾಯಲ್ಸ್: ರಿಯಾನ್ ಪರಾಗ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ತಂಡವು ಈವರೆಗೆ 6 ಪಂದ್ಯಗಳನ್ನಾಡಿದೆ. ಈ ವೇಳೆ ಸಿಎಸ್​ಕೆ, ಮುಂಬೈ ಇಂಡಿಯನ್ಸ್, ಗುಜರಾತ್ ಟೈಟಾನ್ಸ್ ಹಾಗೂ ಆರ್​ಸಿಬಿ ವಿರುದ್ಧ ಜಯ ಸಾಧಿಸಿದೆ. ಇನ್ನು ಕೆಕೆಆರ್​ ಹಾಗೂ ಎಸ್​ಆರ್​ಹೆಚ್ ವಿರುದ್ಧ ಸೋಲು ಕಂಡಿದೆ. ಈ ಮೂಲಕ ಒಟ್ಟು 8 ಅಂಕಗಳೊಂದಿಗೆ +0.599 ನೆಟ್ ರನ್ ರೇಟ್ ಪಡೆಯುವ ಮೂಲಕ ಅಂಕ ಪಟ್ಟಿಯಲ್ಲಿ ಮೂರನೇ ಅಲಂಕರಿಸಿದೆ.

4- ಸನ್​ರೈಸರ್ಸ್ ಹೈದರಾಬಾದ್: ಇಶಾನ್ ಕಿಶನ್ ನಾಯಕತ್ವದಲ್ಲಿ 6 ಪಂದ್ಯಗಳನ್ನಾಡಿರುವ ಸನ್​ರೈಸರ್ಸ್ ಹೈದರಾಬಾದ್ ತಂಡವು ಈವರೆಗೆ 3 ಮೂರು ಮ್ಯಾಚ್​ಗಳಲ್ಲಿ ಗೆಲುವು ದಾಖಲಿಸಿದೆ. ಈ ಮೂಲಕ ಒಟ್ಟು 6 ಅಂಕಗಳನ್ನು ಪಡೆದಿರುವ ಎಸ್​ಆರ್​ಹೆಚ್ +0.566 ನೆಟ್​ ರನ್ ರೇಟ್​ನೊಂದಿಗೆ ನಾಲ್ಕನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

5- ಡೆಲ್ಲಿ ಕ್ಯಾಪಿಟಲ್ಸ್​: ಅಕ್ಷರ್ ಪಟೇಲ್ ಮುಂದಾಳತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಈವರೆಗೆ 5 ಮ್ಯಾಚ್​ಗಳನ್ನು ಆಡಿದ್ದು, ಈ ವೇಳೆ 3 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಅದರಂತೆ ಇದೀಗ ಒಟ್ಟು 6 ಅಂಕಗಳು ಹಾಗೂ +0.310 ನೆಟ್ ರೇಟ್​ ಹೊಂದಿರುವ ಡಿಸಿ ಪಡೆ ಪಾಯಿಂಟ್ಸ್ ಟೇಬಲ್​ನಲ್ಲಿ ಐದನೇ ಸ್ಥಾನದಲ್ಲಿದೆ.

ಇನ್ನು ಗುಜರಾತ್ ಟೈಟಾನ್ಸ್  6ನೇ ಸ್ಥಾನದಲ್ಲಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ 7ನೇ ಸ್ಥಾನ ಪಡೆದುಕೊಂಡಿದೆ. ಹಾಗೆಯೇ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ಕ್ರಮವಾಗಿ 8ನೇ ಮತ್ತು 9ನೇ ಸ್ಥಾನಗಳಲ್ಲಿ ಕಾಣಿಸಿಕೊಂಡಿದೆ. ಇನ್ನು ಈವರೆಗೆ ಒಂದು ಪಂದ್ಯ ಮಾತ್ರ ಗೆದ್ದ ಮುಂಬೈ ಇಂಡಿಯನ್ಸ್ ತಂಡವು ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

Published On – 12:16 pm, Mon, 20 April 26

Source link

Leave a Reply

Your email address will not be published. Required fields are marked *