All posts by nagaraj11081993

ಜರ್ಮನಿ ಅಧ್ಯಕ್ಷ ಫ್ರೆಡರಿಚ್ ಮೆರ್ಜ್ ಮತ್ತು ನರೇಂದ್ರ ಮೋದಿಯಿಂದ ಸಿಇಒಗಳ ಸಭೆ – Kannada News | German Chancellor Merz and PM Modi participate in India German CEOs forum at Ahmedabad

ಅಹ್ಮದಾಬಾದ್, ಜನವರಿ 12: ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಜರ್ಮನ್ ಚಾನ್ಸಲರ್ ಫ್ರೆಡರಿಚ್ ಮೆರ್ಜ್ (Friedrich Merz) ಅವರು ಎರಡೂ ದೇಶಗಳ ಸಿಇಒಗಳ ಸಭೆಯಲ್ಲಿ ಪಾಲ್ಗೊಂಡರು. ಗುಜರಾತ್​ನ ಅಹ್ಮದಾಬಾದ್​ನಲ್ಲಿ ನಡೆದ ಭಾರತ ಜರ್ಮನಿ ಸಿಇಒ ಫೋರಂನಲ್ಲಿ ಈ ಸಭೆ ನಡೆದಿದೆ. ಭಾರತ ಮತ್ತು ಜರ್ಮನಿ ನಡುವಿವ ದ್ವಿಪಕ್ಷೀಯ ಸಂಬಂಧವನ್ನು ವಿಸ್ತರಿಸುವ ಸಾಧ್ಯತೆಗಳ ಕುರಿತು ಈ ಸಭೆಯಲ್ಲಿ ಚರ್ಚೆ ನಡೆಸಲಾಗಿರುವುದು ತಿಳಿದುಬಂದಿದೆ.

ಫ್ರೆಡರಿಚ್ ಮೆರ್ಜ್ ಅವರು ಭಾರತಕ್ಕೆ ಎರಡು ದಿನಗಳ ಭೇಟಿ ಮಾಡಿದ್ದಾರೆ. ಮೆರ್ಜ್ ಅವರು ಜರ್ಮನ್ ಚಾನ್ಸಲರ್ ಆಗಿದ್ದು 2025ರ ಮೇ 6ರಂದು. ಚಾನ್ಸಲರ್ ಆಗಿ ಭಾರತಕ್ಕೆ ಮಾತ್ರವಲ್ಲ ಏಷ್ಯಾಗೆ ನೀಡಿರುವ ಮೊದಲ ಭೇಟಿ ಇದು.

ಇದನ್ನೂ ಓದಿ: ಭಾರತ ಅತಿವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ: ಗುಜರಾತ್ ಸಮಿಟ್​ನಲ್ಲಿ ಪ್ರಧಾನಿ ಮೋದಿ ಹೇಳಿಕೆ

ಜರ್ಮನಿ ಮತ್ತು ಭಾರತದ ಸ್ನೇಹ ಸಂಬಂಧದ ಬಗ್ಗೆ ಮೋದಿ ಮಾತು

ಭಾರತ ಮತ್ತು ಜರ್ಮನಿ ದೇಶಗಳ ಸಂಬಂಧಕ್ಕೆ ಪ್ಲಾಟಿನಂ ಜೂಬಿಲಿ (70 ವರ್ಷ) ಸಂಭ್ರಮ ಇದೆ. ಎರಡೂ ದೇಶಗಳ ನಡುವಿನ ಕಾರ್ಯತಂತ್ರಾತ್ಮಕ ಸಹಭಾಗಿತ್ವಕ್ಕೆ ಸಿಲ್ವರ್ ಜೂಬಿಲಿ (25 ವರ್ಷ) ಸಂಭ್ರಮ ಇದೆ ಎಂದು ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

‘ನಮ್ಮ ಸಂಬಂಧಕ್ಕೆ ಪ್ಲಾಟಿಯಂನ ಸ್ಥಾಯತ್ವ ಮತ್ತು ಬೆಳ್ಳಿಯ ಹೊಳಪು ಇದೆ ಎಂದಾಯಿತು. ಭಾರತ ಹಾಗೂ ಜರ್ಮನಿ ನಡುವಿನ ಸಹಭಾಗಿತ್ವ ಸುಲಲಿತವಾದುದು. ಪರಸ್ಪರ ನಂಬಿಕೆ ಮತ್ತು ಮೌಲ್ಯಗಳ ತಳಹದಿಯಲ್ಲಿ ನಿರ್ಮಾಣವಾದಂತಹ ಹೊಂದಾಣಿಕೆ ಅದು. ಪ್ರತಿಯೊಂದು ಸೆಕ್ಟರ್​ನಲ್ಲೂ ಪರಸ್ಪರ ಅನುಕೂಲವಾಗುವ ಅವಕಾಶಗಳಿವೆ. ಮ್ಯಾನುಫ್ಯಾಕ್ಚರಿಂಗ್ ಮತ್ತು ಸಂಶೋಧನೆಗಳಲ್ಲಿ ಜೊತೆಗಾರಿಕೆ ಇದೆ. ಇದರಿಂದ ಹೊಸ ತಂತ್ರಜ್ಞಾನಗಳ ಆವಿಷ್ಕಾರಕ್ಕೆ ಎಡೆ ಆಗುತ್ತಿದೆ’ ಎಂದು ಇಂಡಿಯಾ ಜರ್ಮನಿ ಸಿಇಒ ಫೋರಂ ಸಭೆಯಲ್ಲಿ ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ನವೆಂಬರ್​ನಲ್ಲಿ 0.7 ಪ್ರತಿಶತ ಇದ್ದ ಹಣದುಬ್ಬರ ಡಿಸೆಂಬರ್​ನಲ್ಲಿ ಶೇ. 1.3ಕ್ಕೆ ಏರಿಕೆ

‘ಭಾರತ ಮತ್ತು ಐರೋಪ್ಯ ಒಕ್ಕೂಟ ನಡುವೆ ವ್ಯಾಪಾರ ಒಪ್ಪಂದ ಶೀಘ್ರದಲ್ಲೇ ಅಂತಿಮಗೊಳ್ಳುತ್ತೆ. ನಮ್ಮ ವ್ಯಾಪಾರ, ಹೂಡಿಕೆ ಮತ್ತು ಪಾರ್ಟ್ನರ್​ಶಿಪ್​ಗೆ ಹೊಸ ಅಧ್ಯಾಯ ಆರಂಭವಾಗುತ್ತದೆ. ಇಲ್ಲಿಂದ ನಿಮಗೆ ದಾರಿ ಸ್ಪಷ್ಟವಾಗಿರುತ್ತದೆ. ಜರ್ಮನ್​ನ ಪ್ರಿಸಿಶನ್ ಮತ್ತು ಇನ್ನೋವೇಶನ್​ಗಳೊಂದಿಗೆ ಭಾರತದ ವೇಗ ಮತ್ತು ವ್ಯಾಪಕತೆಯು ಸೇರಬೇಕು. ನೀವು ಭಾರತದಲ್ಲಿ ಉತ್ಪಾದನೆ ಮಾಡಬೇಕು. ಆಂತರಿಕ ಬೇಡಿಕೆಯ ಅನುಕೂಲ ನಿಮಗೆ ಇರುತ್ತದೆ. ತಡೆಯಿಲ್ಲದ ರಫ್ತು ಕೂಡ ಸಾಧ್ಯವಾಗುತ್ತದೆ’ ಎಂದು ಜರ್ಮನ್ ಸಿಇಒಗಳಿಗೆ ಮೋದಿ ಭರವಸೆ ಮತ್ತು ಆಫರ್ ಕೊಟ್ಟಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Bagalkote: ‘ಸುಗ್ಗಿಹುಗ್ಗಿ’ ಹೆಸರಲ್ಲಿ ಸಂಕ್ರಾಂತಿ ಸಂಭ್ರಮ; ಇಲ್ಲಿವೆ ಅಂದದ ಚಿತ್ರಗಳು

Source link

ನಿಮಗೆ ಬೇಕಾದವರಿಗೇ ಕಿಚ್ಚನ ಚಪ್ಪಾಳೆ ಕೊಡೋಕೆ ಆಗತ್ತಾ? ರಜತ್ ಕಿಶನ್ ಖಡಕ್ ಪ್ರಶ್ನೆ – Kannada News | Bigg Boss Kannada Ex contestant Rajath Kishan reaction to Kicchana Chappale controversy

‘ಬಿಗ್ ಬಾಸ್ ಕನ್ನಡ ಸೀಸನ್ 12’ ಫಿನಾಲೆಗೆ ದಿನಗಣನೆ ಶುರುವಾಗಿದೆ. ಕಳೆದ ವಾರದಲ್ಲಿ ಕಿಚ್ಚ ಸುದೀಪ್ (Kichcha Sudeep) ಅವರು ಧ್ರುವಂತ್ ಮತ್ತು ಅಶ್ವಿನಿ ಗೌಡ ಅವರಿಗೆ ಕಿಚ್ಚನ ಚಪ್ಪಾಳೆ (Kicchana Chappale) ನೀಡಿದರು. ಅದನ್ನು ವೀಕ್ಷಕರು ವಿರೋಧಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬಹಳ ಚರ್ಚೆ ಆಗುತ್ತಿದೆ. ಈ ಕುರಿತು ಮಾಜಿ ಬಿಗ್ ಬಾಸ್ ಸ್ಪರ್ಧಿ ರಜತ್ ಕಿಶನ್ ಕೂಡ ಮಾತನಾಡಿದ್ದಾರೆ. ರಜತ್ ಅವರು 12ನೇ ಸೀಸನ್​​ನಲ್ಲಿ ಕೂಡ ಅತಿಥಿಯಾಗಿ ಕೆಲವು ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇದ್ದರು. ಈಗ ‘ಕಿಚ್ಚನ ಚಪ್ಪಾಳೆ’ ವಿವಾದದ ಬಗ್ಗೆ ರಜತ್ (Rajath Kishan) ಅವರು ಪ್ರತಿಕ್ರಿಯೆ ನೀಡಿದ್ದಾರೆ.

‘ಒಳ್ಳೆಯದು ಮಾಡಿದರೂ ಜನರು ಮಾತಾಡುತ್ತಾರೆ, ಕೆಟ್ಟದ್ದು ಮಾಡಿದರೂ ಮಾತನಾಡುತ್ತಾರೆ. ಹಾಗಾದ್ರೆ ಈ ವಾರ ಯಾರಿಗೆ ಕಿಚ್ಚ ಚಪ್ಪಾಳೆ ಕೊಡಬೇಕಿತ್ತಂತೆ? ಅಲ್ಲಿ ಏನು ನಡೆದಿದೆಯೋ ಅದನ್ನು ತೋರಿಸಿದ್ದಾರೆ. ಅದರ ಪ್ರಕಾರ ಇಡೀ ಟೀಮ್ ಹಾಗೂ ಸುದೀಪ್ ಸರ್ ನೋಡಿ ಯಾರಿಗೆ ಕೊಡಬೇಕು, ಯಾರಿಗೆ ಬಿಡಬೇಕು ಎಂಬುದನ್ನು ನಿರ್ಧರಿಸಿಯೇ ಕೊಟ್ಟಿರುತ್ತಾರೆ’ ಎಂದು ರಜತ್ ಹೇಳಿದ್ದಾರೆ.

‘ಕಿಚ್ಚನ ಚಪ್ಪಾಳೆ ಒಂದು ದೊಡ್ಡ ಭಾಗ. ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗುವುದು ಎಷ್ಟು ಮುಖ್ಯವೋ ಅದಕ್ಕಿಂತಲೂ ಹೆಚ್ಚು ದೊಡ್ಡದು, ಮಹತ್ವ ಹೊಂದಿರುವುದು ಕಿಚ್ಚನ ಚಪ್ಪಾಳೆ. ಅದನ್ನು ತುಂಬಾ ಯೋಚನೆ ಮಾಡಿ ಕೊಟ್ಟಿರುತ್ತಾರೆ. ಅಶ್ವಿನಿ ಅವರಿಗಾಗಲಿ, ಧ್ರುವಂತ್ ಅವರಿಗಾಗಲಿ ಸುದೀಪ್ ಅವರು ಕಿಚ್ಚನ ಚಪ್ಪಾಳೆ ಕೊಟ್ಟಿದ್ದಾರೆ ಎಂದರೆ ಅವರು ಅರ್ಹರು ಅಂತ ಅರ್ಥ’ ಎಂದಿದ್ದಾರೆ ರಜತ್.

‘ಅರ್ಹರಿಗೆ ಕಿಚ್ಚನ ಚಪ್ಪಾಳೆ ಕೊಟ್ಟಾಗ ಜನರು ದ್ವೇಷ ಯಾಕೆ ತೋರಿಸಬೇಕು? ಎಲ್ಲದನ್ನೂ ಯೋಚನೆ ಮಾಡಿಯೇ ಕೊಟ್ಟಿರುತ್ತಾರೆ. ಹಾಗಾದ್ರೆ ನಿಮಗೆ ಯಾರಿಗೆ ಬೇಕೋ ಅವರಿಗೇ ಕಿಚ್ಚನ ಚಪ್ಪಾಳೆ ಕೊಟ್ಟುಕೊಂಡು ಹೋಗೋಕೆ ಆಗತ್ತಾ? ಆಗಲ್ಲ ತಾನೇ? ಈಗ ಕಿಚ್ಚನ ಚಪ್ಪಾಳೆ ಕೊಟ್ಟಿರುವುದು ಸರಿ ಇದೆ ಅಂತ ನನಗೆ ಅನಿಸುತ್ತದೆ’ ಎಂದು ರಜತ್ ಅವರು ಹೇಳಿದ್ದಾರೆ.

ಇದನ್ನೂ ಓದಿ: ಕಿಚ್ಚನ ಚಪ್ಪಾಳೆ: ಸುದೀಪ್ ಇನ್​ಸ್ಟಾಗ್ರಾಮ್ ಪೋಸ್ಟ್ ತುಂಬ ಅಸಮಾಧಾನದ ಕಮೆಂಟ್ಸ್

ಇತ್ತೀಚಿನ ದಿನಗಳಲ್ಲಿ ಗಿಲ್ಲಿ ಸ್ವಲ್ಪ ಸೈಲೆಂಟ್ ಆಗಿದ್ದಾರೆ. ಆ ಬಗ್ಗೆ ರಜತ್ ಪ್ರತಿಕ್ರಿಯೆ ನೀಡಿದ್ದಾರೆ. ‘ಎರಡು ವಾರದಿಂದ ಗಿಲ್ಲಿ ಸೈಲೆಂಟ್ ಆಗಿದ್ದಾನೆ ಅಷ್ಟೇ. ಬಿಗ್ ಬಾಸ್ ಮನೆಯಲ್ಲಿ ಈ ರೀತಿ ಏರಿಳಿತ ಸಹಜ. 24 ಗಂಟೆ ಅಲ್ಲಿ ಒಂದೇ ರೀತಿ ಇರೋಕೆ ಆಗಲ್ಲ. ಹೊರಗಡೆಯಾದರೆ ನಮಗೆ ಜನರು ಸಿಗುತ್ತಾರೆ. ಆದರೆ ಬಿಗ್ ಬಾಸ್ ಮನೆಯಲ್ಲಿ ನೋಡಿದ ಮುಖಗಳನ್ನೇ ನೋಡಬೇಕು. ಆದರೂ ಗಿಲ್ಲಿ ಚೆನ್ನಾಗಿ ಆಡಿದ್ದಾನೆ’ ಎಂದು ರಜತ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರರನ್ನ ಕೊಚ್ಚಿ ಕೊಂದ ಕಾರ್ಮಿಕರು – Kannada News | Contractor vitthal rathod Killed By Workers For illicit relationship Woman at Hubballi

ಹುಬ್ಬಳ್ಳಿ, (ಜನವರಿ 12): ನಗರದ ನವನಗರದಲ್ಲಿರುವ ಕಾನೂನು ವಿಶ್ವವಿದ್ಯಾಲಯ ಕ್ಯಾಂಪಸ್ ನಲ್ಲಿ ವ್ಯಕ್ತಿಯೋರ್ವನ ಕೊಲೆಯಾಗಿದೆ. ಮೂಲತ ವಿಜಯಪುರ ಜಿಲ್ಲೆಯ ಅರಕೇರಾ ತಾಂಡಾ ನಿವಾಸಿಯಾಗಿದ್ದ ಆರವತ್ತು ವರ್ಷದ ವಿಠ್ಠಲ್ ರಾಠೋಡ್ ಕೊಲೆಯಾದ ವ್ಯಕ್ತಿ. ಈತ ಕಾನೂನು ವಿವಿಯ ಆಡಳಿತಾತ್ಮಕ ಕಟ್ಟಡ ನಿರ್ಮಾಣ ಕಾಮಗಾರಿಯ ಉಪ ಗುತ್ತಿಗೆಯನ್ನು ಪಡೆದಿದ್ದ. ಆದ್ರೆ ಜನವರಿ 10 ರಂದು ರಾತ್ರಿ ಸಮಯದಲ್ಲಿ ಕ್ಯಾಂಪಸ್ ನಲ್ಲಿಯೇ ಬಿದ್ದಿದ್ದ. ಆರಂಭದಲ್ಲಿ ವಿಠ್ಠಲ್ ಕುಡಿದು ಬಿದ್ದಿದ್ದ ಅಂತ ಕಾರ್ಮಿಕ ಕುಟುಂಬವೊಂದು ಹೇಳಿತ್ತು. ಹೀಗಾಗಿ ಕುಟುಂಬದ ಮಾತು ಕೇಳಿ ಪೊಲೀಸರು ಅಸಹಜವಾದ ಸಾವು ಅಂತಲೇ ಅಂದುಕೊಂಡಿದ್ದರು. ಆದ್ರೆ ಆಸ್ಪತ್ರೆಯಿಂದ ನವನಗರ ಠಾಣೆಗೆ ಮಾಹಿತಿ ಬಂದಿದ್ದರಿಂದ ನವನಗರ ಠಾಣೆ ಪೊಲೀಸರು ವಿಚಾರಣೆ ಆರಂಭಿಸಿದ್ದರು. ಆದ್ರೆ ವಿಚಾರಣೆ ವೇಳೆಗೆ ಗೊತ್ತಾಗಿದ್ದು ವಿಠ್ಠಲ್ ರಾಠೋಡ್ ನದ್ದು ಅಸಹಜ ಸಾವಲ್ಲ, ಬದಲಾಗಿ ಕೊಲೆ ಅನ್ನೋದು ದೃಢಪಟ್ಟಿದೆ. ಕೊಲೆ ಮಾಡಿದ್ದು ಬೇರೆ ಯಾರು ಅಲ್ಲ ಕೊಲೆಯಾದ ವಿಠ್ಠಲ್ ರಾಠೋಡ್ ಕೆಲಸ ನೀಡಿದ್ದ ಕಾರ್ಮಿಕರು. ಹೌದು… ತಾನೇ ಕಟ್ಟಡ ನಿರ್ಮಾಣ ಕೆಲಸಕ್ಕೆ ಕರೆದುಕೊಂಡು ಬಂದಿದ್ದ ಕಾರ್ಮಿಕರೇ ವಿಠ್ಠಲ್ ನನ್ನು ಹೊಡೆದು ಕೊಲೆ ಮಾಡಿದ್ದಾರೆ.

ಛತ್ತೀಸ್ಗಢ ಮೂಲದ ಮೇಘವ್ ಸತನಾಮಿ (50) ಇವನ ಪುತ್ರ ಭಗವಾನ್ ದಾಸ್ ಸತನಾಮಿ (21), ಹಾಗೂ ಪತ್ನಿ ವಿಮಲಾ ಸತನಾಮಿ (40) ವಿಠ್ಠಲ್ ರಾಠೋಡ್ ನನ್ನು ಕೊಲೆ ಮಾಡಿದ್ದಾರೆ. ಈ ಕುಟುಂಬ ಕಳೆದ ಐದು ವರ್ಷಗಳಿಂದ ವಿಠ್ಠಲ್ ಜೊತೆ ಕೆಲಸ ಮಾಡುತ್ತಿತ್ತು. ವಿಠ್ಠಲ್ ಎಲ್ಲೆಲ್ಲಿ ಗುತ್ತಿಗೆ ಕೆಲಸ ಹಿಡಿಯುತ್ತಿದ್ದನೋ ಅಲ್ಲಿ ಹೋಗಿ ವಾಸವಾಗಿ ಕೆಲಸ ಮಾಡುತ್ತಿದ್ದರು. ಇವರ ಸಂಬಂದ ಇಷ್ಟಕ್ಕೆ ಇದ್ದಿದ್ದರೆ ಯಾವುದೇ ಸಮಸ್ಯೆ ಇರ್ತಿರಲಿಲ್ಲ. ಆದ್ರೆ ವಿಠ್ಠಲ್ ರಾಠೋಡ್ ಜೊತೆ ವಿಮಲಾಳ ಸಲುಗೆ ಬೆಳದಿತ್ತು. ನಂತರ ಆದು ಅಕ್ರಮ ಸಂಬಂಧಕ್ಕೆ ತಿರುಗಿತ್ತು. ಈ ವಿಷಯ ವಿಮಲಾ ಗಂಡ ಮೇಘವ ಮತ್ತು ಪುತ್ರ ಭಗವಾನ್ ದಾಸ್ ಗೆ ಗೊತ್ತಾಗಿತ್ತು. ಇದೇ ವಿಚಾರಕ್ಕೆ ವಿಠ್ಠಲ್ ರಾಠೋಡ್ ನನ್ನು ಹೊಡೆದು ಕೊಲೆ ಮಾಡಿದ್ದಾರೆ ಎಂದು ಧಾರವಾಡ ಹುಬ್ಬಳ್ಳಿ ಪೊಲೀಸ್ ಆಯುಕ್ತ ಸ್ಫೋಟಕ ಅಂಶವನ್ನು ಬಿಚ್ಚಿಟ್ಟಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

VHT 2026: ಮತ್ತೆ ಅಬ್ಬರಿಸಿದ ಪಡಿಕ್ಕಲ್; ಮುಂಬೈ ಮಣಿಸಿ ಸೆಮಿಫೈನಲ್​ಗೆ ಎಂಟ್ರಿಕೊಟ್ಟ ಕರ್ನಾಟಕ – Kannada News | Vijay Hazare Trophy: Karnataka Advances to Semis, Defeats Mumbai by VJD in QF

ಬೆಂಗಳೂರಿನಲ್ಲಿರುವ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ನಡೆದ ಮುಂಬೈ ಹಾಗೂ ಕರ್ನಾಟಕ ನಡುವಿನ ವಿಜಯ್ ಹಜಾರೆ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ವಿಜೆಡಿ ನಿಯಮದಡಿಯಲ್ಲಿ 55 ರನ್​ಗಳಿಂದ ಗೆದ್ದು ಸೆಮಿಫೈನಲ್​ಗೆ ಅರ್ಹತೆ ಪಡೆದುಕೊಂಡಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ 8 ವಿಕೆಟ್ ನಷ್ಟಕ್ಕೆ 254 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ 1 ವಿಕೆಟ್ ನಷ್ಟಕ್ಕೆ 187 ರನ್ ಕಲೆಹಾಕಿತ್ತು. ಈ ವೇಳೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಕಾರಣ ವಿಜೆಡಿ ನಿಯಮದ ಪ್ರಕಾರ ಕರ್ನಾಟಕ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು.

Published On – 5:48 pm, Mon, 12 January 26

Source link

ನವೆಂಬರ್​ನಲ್ಲಿ 0.7 ಪ್ರತಿಶತ ಇದ್ದ ಹಣದುಬ್ಬರ ಡಿಸೆಂಬರ್​ನಲ್ಲಿ ಶೇ. 1.3ಕ್ಕೆ ಏರಿಕೆ – Kannada News | Retail Inflation in India rises to 1.33pc in 2025 December

ನವದೆಹಲಿ, ಜನವರಿ 12: ಭಾರತದ ರೀಟೇಲ್ ಹಣದುಬ್ಬರ (Inflation) ಡಿಸೆಂಬರ್ ತಿಂಗಳಲ್ಲಿ ಬಹುತೇಕ ಎರಡು ಪಟ್ಟು ಹೆಚ್ಚಿದೆ. ನವೆಂಬರ್​ನಲ್ಲಿ ಶೇ. 0.71 ಇದ್ದ ಬೆಲೆ ಏರಿಕೆ ಮಟ್ಟ ಡಿಸೆಂಬರ್​ನಲ್ಲಿ 1.33 ಪ್ರತಿಶತ ಆಗಿದೆ. ಕಳೆದ ಮೂರು ತಿಂಗಳಲ್ಲೇ ಡಿಸೆಂಬರ್​ನ ಹಣದುಬ್ಬರ ಗರಿಷ್ಠ ಮಟ್ಟ ಎನಿಸಿದೆ. ಆದರೂ ಕೂಡ ಈ ದರವು ಆರ್​ಬಿಐ ತಾಳಿಕೆ ಮಿತಿಗಿಂತ ಕಡಿಮೆ ಇದೆ. ಮುಂಬರುವ ತಿಂಗಳುಗಳಲ್ಲಿ ಹಣದುಬ್ಬರವು ಮತ್ತಷ್ಟು ಮೇಲೇರುವ ಸಾಧ್ಯತೆ ಇದೆ.

ಡಿಸೆಂಬರ್ ತಿಂಗಳಲ್ಲಿ ಅಧಿಕ ಹಣದುಬ್ಬರಕ್ಕೆ ಕಾರಣವಾಗಿದ್ದು ತರಕಾರಿ, ಮಾಂಸ, ಮಸಾಲೆ, ಬೇಳೆ ಕಾಳುಗಳು ಇತ್ಯಾದಿ ಆಹಾರಪದಾರ್ಥಗಳ ಬೆಲೆಗಳು ಅಧಿಕಗೊಂಡಿದ್ದು. ತರಕಾರಗಳ ಬೆಲೆ ಕಳೆದ ಎರಡು ತಿಂಗಳಲ್ಲಿ ಗಣನೀಯವಾಗಿ ಕಡಿಮೆ ಆಗಿದ್ದರಿಂದ ಆ ಎರಡೂ ತಿಂಗಳು ಹಣದುಬ್ಬರ ದರ ತೀರಾ ಕೆಳಗೆ ಇತ್ತು. ಈಗ ಬೆಲೆ ಚೇತರಿಕೆ ಪಡೆದಿರುವುದರಿಂದ ಹಣದುಬ್ಬರವು ಮೇಲ್ಮಟ್ಟಕ್ಕೆ ಹೋಗಲು ಸಾಧ್ಯವಾಗದೆ.

ಇದನ್ನೂ ಓದಿ: ನವೆಂಬರ್​ನಲ್ಲಿ ಹಣದುಬ್ಬರ ಶೇ. 0.71; ಅಕ್ಟೋಬರ್​ಗಿಂತ 46 ಮೂಲಾಂಕಗಳಷ್ಟು ಬೆಲೆ ಹೆಚ್ಚಳ

ಹಣದುಬ್ಬರ ಮತ್ತಷ್ಟು ಮೇಲೆ ಹೋಗಲು ಆರ್ಬಿಐ ಬಯಸುತ್ತದಾ?

ಹಣದುಬ್ಬರವನ್ನು ಶೇ. 4ರ ಆಸುಪಾಸಿನಲ್ಲಿ ಇರಿಸಬೇಕು ಎಂದು ಆರ್​ಬಿಐಗೆ ಸರ್ಕಾರ ಸೂಚನೆ ಕೊಟ್ಟಿದೆ. ಈ ಮಟ್ಟವನ್ನು ಕಾಯ್ದುಕೊಳ್ಳಲು ಆರ್​ಬಿಐ ಹಣದುಬ್ಬರಕ್ಕೆ ತಾಳಿಕೆ ಮಿತಿಯಾಗಿ ಶೇ. 2ರಿಂದ ಶೇ. 6 ಅನ್ನು ನಿಗದಿ ಮಾಡಿದೆ. ಈ ದರವು ಈ ತಾಳಿಕೆ ಶ್ರೇಣಿಯೊಳಗೆಯೇ ಇರುವಂತೆ ಮಾಡುವುದು ಆರ್​ಬಿಐನ ಗುರಿಯಾಗಿದೆ.

ಕಡಿಮೆ ಹಣದುಬ್ಬರ ಇದ್ದರೆ ಉದ್ಯಮ ಸಂಸ್ಥೆಗಳ ಬೆಳವಣಿಗೆ ಕುಂಠಿತವಾಗುತ್ತದೆ. ಆರ್ಥಿಕತೆ ಒಂದು ಗತಿಯಲ್ಲಿ ಸಾಗಬೇಕಾದರೆ ಹೆಚ್ಚೂ ಅಲ್ಲದ, ಕಡಿಮೆಯೂ ಅಲ್ಲದ ಹಣದುಬ್ಬರ ಸ್ಥಿತಿಯ ವಾತಾವರಣ ಬೇಕು ಎಂಬುದು ಆರ್ಥಿಕ ತಜ್ಞರುಗಳ ಅನಿಸಿಕೆ.

ಇದನ್ನೂ ಓದಿ: ಸತತವಾಗಿ ಕುಸಿಯುತ್ತಿದ್ದ ಷೇರುಪೇಟೆ ದಿಢೀರನೇ ಚೇತರಿಕೆ; ಮಾರುಕಟ್ಟೆ ತಿರುಗಿ ನಿಲ್ಲಲು ಏನು ಕಾರಣ?

ಭಾರತದಲ್ಲಿ ಕಳೆದ 11 ತಿಂಗಳಿಂದಲೂ ಹಣದುಬ್ಬರವು ಶೇ. 4ರ ಮಟ್ಟಕ್ಕಿಂತಲೂ ಕಡಿಮೆ ಇದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ (2025-26) ಹಣದುಬ್ಬರ ಶೇ. 2ರಷ್ಟಾಗಬಹುದು ಎಂಬುದು ಆರ್​ಬಿಐ ಎಂಪಿಸಿ ಸಮಿತಿಯ ಅಂದಾಜು. ಈ ಹಿಂದೆ ಅದು ನಿರೀಕ್ಷೆ ಮಾಡಿದುದಕ್ಕಿಂತಲೂ ಕಡಿಮೆ ಹಣದುಬ್ಬರದ ಸ್ಥಿತಿ ಬರಬಹುದು.

ಭಾರತದ್ದು ಈಗ ಗೋಲ್ಡಿಲಾಕ್ ಅವಧಿ…

ಭಾರತದ ಆರ್ಥಿಕತೆ ವಿಶ್ವದಲ್ಲೇ ಅತಿವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಯಾಗಿದೆ. ಹಾಗೆಯೇ, ಹಣದುಬ್ಬರವೂ ಕೂಡ ನಿಯಂತ್ರಣದಲ್ಲಿದೆ. ಈ ಎರಡನ್ನೂ ಒಮ್ಮೆಗೇ ಹೊಂದಿರುವ ಅಪರೂಪದ ಪರಿಸ್ಥಿತಿ ಭಾರತದ್ದು. ತಜ್ಞರು ಇದನ್ನು ಗೋಲ್ಡಿಲಾಕ್ಸ್ ಪೀರಿಯಡ್ ಎಂದು ಕರೆಯುತ್ತಾರೆ. ಅಧಿಕ ಬೆಳವಣಿಗೆ ಮತ್ತು ಕಡಿಮೆ ಬೆಲೆ ಏರಿಕೆ ಎರಡೂ ಒಟ್ಟಿಗೆ ಬರುವ ಕಾಲವೇ ಇದು. ಇದು ಭಾರತದ ಶುಭಕಾಲವಾ?

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕಿಚ್ಚನ ಚಪ್ಪಾಳೆ: ಸುದೀಪ್ ಇನ್​ಸ್ಟಾಗ್ರಾಮ್ ಪೋಸ್ಟ್ ತುಂಬ ಅಸಮಾಧಾನದ ಕಮೆಂಟ್ಸ್ – Kannada News | Kichcha Sudeep instagram post filled with disappointment comments from Bigg Boss Kannada audience

ಕಿಚ್ಚ ಸುದೀಪ್ (Kichcha Sudeep) ಅವರು ಸತತ 12 ಸೀಸನ್​​ಗಳಿಂದ ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಈ ಶೋ ನಿರೂಪಣೆ ಮಾಡುವುದು ಅಷ್ಟು ಸುಲಭ ಅಲ್ಲ. ಸುದೀಪ್ ಅವರ ನಿರೂಪಣೆ ಎಂದರೆ ಅಭಿಮಾನಿಗಳಿಗೆ ತುಂಬಾ ಇಷ್ಟ. ಸುದೀಪ್ ಅವರನ್ನು ನೋಡಬೇಕು ಎಂಬ ಕಾರಣದಿಂದಲೇ ವೀಕ್ಷಕರು ವೀಕೆಂಡ್​ನಲ್ಲಿ ‘ಬಿಗ್ ಬಾಸ್ ಕನ್ನಡ’ (Bigg Boss Kannada) ಸಂಚಿಕೆಗಳನ್ನು ನೋಡುತ್ತಾರೆ. ಆದರೆ ಕಳೆದ ವಾರ ಸಂಚಿಕೆ ನೋಡಿದ ಬಹುತೇಕ ವೀಕ್ಷಕರಿಗೆ ನಿರಾಸೆ ಆಗಿದೆ. ಅಶ್ವಿನಿ ಗೌಡ ಮತ್ತು ಧ್ರುವಂತ್ ಅವರಿಗೆ ‘ಕಿಚ್ಚನ ಚಪ್ಪಾಳೆ’ (Kicchana Chappale) ಸಿಕ್ಕಿದ್ದೇ ಈ ನಿರಾಸೆಗೆ ಕಾರಣ ಆಗಿದೆ.

ಇಡೀ ಸೀಸನ್​​ನ ಆಟವನ್ನು ಪರಿಗಣಿಸಿ ಧ್ರುವಂತ್ ಅವರಿಗೆ ಸುದೀಪ್ ಅವರು ಕಿಚ್ಚನ ಚಪ್ಪಾಳೆ ನೀಡಿದರು. ಅಲ್ಲದೇ, ಕಳೆದ ವಾರದ ಆಟವನ್ನು ಪರಿಗಣಿಸಿ ಅಶ್ವಿನಿ ಗೌಡ ಅವರಿಗೆ ಕಿಚ್ಚನ ಚಪ್ಪಾಳೆ ನೀಡಲಾಯಿತು. ಇದು ವೀಕ್ಷಕರಿಗೆ ಸರಿ ಎನಿಸಿಲ್ಲ. ಹಾಗಾಗಿ ವೀಕ್ಷಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸುದೀಪ್ ಅವರ ಇನ್​ಸ್ಟಾಗ್ರಾಮ್​ ಪೋಸ್ಟ್​​ಗಳಿಗೆ ಕಮೆಂಟ್ ಮಾಡಿರುವ ವೀಕ್ಷಕರು, ‘ನಿಮ್ಮ ಚಪ್ಪಾಳೆ ಈಗ ಗೌರವ ಕಳೆದುಕೊಂಡಿದೆ’ ಎಂದಿದ್ದಾರೆ.

ಸುದೀಪ್ ಅವರ ಇನ್​ಸ್ಟಾಗ್ರಾಮ್ ಪೋಸ್ಟ್ ಬಹುತೇಕ ಇದೇ ರೀತಿಯ ಕಮೆಂಟ್​ಗಳಿಂದ ತುಂಬಿ ಹೋಗಿದೆ. ‘ನಾನು ನಿಮ್ಮ ದೊಡ್ಡ ಅಭಿಮಾನಿ. ಆದರೆ ನೀವು ನೀಡಿದ ಚಪ್ಪಾಳೆ ನ್ಯಾಯಸಮ್ಮತ ಆಗಿರಲಿಲ್ಲ’ ಎಂದು ವೀಕ್ಷಕರೊಬ್ಬರು ಕಮೆಂಟ್ ಮಾಡಿದ್ದಾರೆ. ‘ಇಡೀ ಸೀಸನ್ ಉತ್ತಮ ಮನರಂಜನೆ ನೀಡಿರುವುದು ಗಿಲ್ಲ. ಧ್ರುವಂತ್ ಅಲ್ಲ. ನೀವು ಸರಿಯಾಗಿ ಎಲ್ಲ ಸಂಚಿಕೆ ನೋಡಿಲ್ಲ’ ಎಂದು ಕೂಡ ವೀಕ್ಷಕರೊಬ್ಬರು ಕಮೆಂಟ್ ಮೂಲಕ ಆರೋಪಿಸಿದ್ದಾರೆ.

‘ಈ ರೀತಿ ಹೇಳುತ್ತಿರುವುದಕ್ಕೆ ಕ್ಷಮೆ ಇರಲಿ.. ಕಳೆದ ಸಂಚಿಕೆ ನಿರಾಸೆ ಮೂಡಿಸಿತು’, ‘ಗಿಲ್ಲಿಗೆ ಕೊಡಬೇಕಾದ ಚಪ್ಪಾಳೆಯನ್ನು ಯಾರಿಗೋ ಕೊಟ್ಟಿದ್ದೀರಿ’, ‘ಗಿಲ್ಲಿಗೆ ನಿಮ್ಮ ಚಪ್ಪಾಳೆ ಸಿಗದೇ ಇದ್ದರೆ ಏನಂತೆ, ಇಡೀ ಕರ್ನಾಟಕದ ಜನತೆಯ ಚಪ್ಪಾಳೆ ಅವರಿಗೆ ಸಿಕ್ಕಿದೆ’ ಎಂಬಿತ್ಯಾದಿ ಕಮೆಂಟ್​​ಗಳು ಕೂಡ ಬಂದಿವೆ. ಇವುಗಳಿಗೆ ಸುದೀಪ್ ಅವರು ಪ್ರತಿಕ್ರಿಯೆ ನೀಡುತ್ತಾರಾ ಎಂಬುದನ್ನು ಕಾದು ನೋಡಬೇಕು.

ಇದನ್ನೂ ಓದಿ: ಬನಿಯನ್ ಹಾಕಿದರೂ ರಾಜನಂತೆ ಬಾಳುತ್ತಿರುವ ಗಿಲ್ಲಿ ನಟ: ಗೆಲುವಿನ ಸೂಚನೆ ಕೊಟ್ಟ ಸುದೀಪ್

ಗಿಲ್ಲಿ ನಟ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಲ್ಲಿ ವೀಕ್ಷಕರಿಗೆ ಕಾಮಿಡಿ ಮೂಲಕ ಸಖತ್ ಮನರಂಜನೆ ನೀಡಿದ್ದಾರೆ. ಅವರಿಗೆ ಸಿಕ್ಕಾಪಟ್ಟೆ ಫ್ಯಾನ್ ಫಾಲೋಯಿಂಗ್ ಜಾಸ್ತಿ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಗಿಲ್ಲಿ ಪರವಾಗಿ ಬರುತ್ತಿರುವ ಕಮೆಂಟ್​​ಗಳೇ ಅದಕ್ಕೆ ಸಾಕ್ಷಿ ಆಗಿದೆ. ಈ ಬಾರಿ ಅವರೇ ಗೆಲ್ಲಬೇಕು ಎಂಬುದು ಬಹುತೇಕ ವೀಕ್ಷಕರ ಆಶಯ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ತುಮಕೂರು: ಮಗಳ ಕಣ್ಣೆದುರೇ ತಂದೆಯನ್ನ ಬರ್ಬರವಾಗಿ ಕೊಂದ ದುಷ್ಕರ್ಮಿಗಳು – Kannada News | Tumakuru: Miscreants Brutally Kill Father in Front of His Daughter

ತುಮಕೂರು, ಜನವರಿ 12: ಅದು ಊರಿನ ಹೊರಗಿರುವ ತೋಟದ ಮನೆ. ಅಪ್ಪ ಅಮ್ಮ ಇಬ್ಬರು ಮಕ್ಕಳು ವಾಸವಾಗಿದ್ದರು. ತಾವಾಯ್ತು ನಮ್ಮ ಬದುಕಾಯ್ತು ಎಂದು ಕುಟುಂಬ ಜೀವನ ನಡೆಸುತ್ತಿತ್ತು. ಹೀಗೆ ನೆಮ್ಮದಿ ಜೀವನ ಮಾಡುತಿದ್ದವರ ಮೇಲೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ರಾತ್ರೋರಾತ್ರಿ ದುಷ್ಕರ್ಮಿಗಳ ಗುಂಪೊಂದು ಮನೆ ಯಜಮಾನನ ಮೇಲೆ ದಾಳಿ ಮಾಡಿದೆ. ಮಗಳ ಕಣ್ಣೆದುರೇ ಮಾರಕಾಸ್ತ್ರದ ದಾಳಿಗೆ ತಂದೆ (father) ಬಲಿಯಾಗಿದ್ದಾರೆ (Murder). ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಹುಳಿಯಾರು ಹೋಬಳಿಯಲ್ಲಿ ನಡೆದ ಕೃತ್ಯಕ್ಕೆ ಊರಿಗೆ ಊರೇ ಬೆಚ್ಚಿ ಬಿದ್ದಿದೆ.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಹುಳಿಯಾರು ಹೋಬಳಿಯ ಕೆಂಕೆರೆ ನಿವಾಸಿ ಮಂಜುನಾಥ್​, ದಿನಸಿ ಅಂಗಡಿ ಹಾಗೂ ಟೆಂಟ್ ಹೌಸ್ ನಡೆಸುತ್ತಿದ್ದರು. ಊರಿನ ಹೊರಗಡೆಯ ತೋಟದ ಮನೆಯಲ್ಲಿ ವಾಸವಿದ್ದರು. ತಾನಾಯ್ತು ತಮ್ಮ ಬದುಕಾಯ್ತು ಅಂತ ನೆಮ್ಮದಿ ಜೀವನ ಸಾಗಿಸುತ್ತಿದ್ದರು. ಆದರೆ ನಿನ್ನೆ ತಡರಾತ್ರಿ ಬರ್ಬರವಾಗಿ ಹತ್ಯೆಯಾಗಿದ್ದಾರೆ.

ನಡೆದದ್ದೇನು? 

ಮಂಜುನಾಥ್ ತನ್ನಿಬ್ಬರು ಮಕ್ಕಳ ಜೊತೆ ಮನೆಯಿಂದ ಹೊರಗೆ ಬಂದಿದ್ದರು. ಟೆಂಟ್ ಹೌಸ್​ನ ಅಂಗಡಿ ಮುಂದೆ ಮಕ್ಕಳ ಜೊತೆ ಮಾತನಾಡುತ್ತಾ ಕುಳಿತಿದ್ದರಂತೆ ಆದರೆ, ಈ ವೇಳೆ ಪ್ರತ್ಯಕ್ಷರಾದ ನಾಲ್ಕೈದು ಜನರ ಗುಂಪು ಮಂಜುನಾಥ್ ಮೇಲೆ ದಾಳಿಗೆ ಮುಂದಾಗಿದ್ದಾರೆ. ಇದನ್ನು ಕಂಡ ಓರ್ವ ಮಗಳು ಮನೆಯೊಳಗೆ ಓಡಿದರೆ, ಮತ್ತೊಬ್ಬಳನ್ನು ದುಷ್ಕರ್ಮಿ ಹಿಡಿದು ಕಿರುಚಾಡದಂತೆ ಬಾಯಿ ಮುಚ್ಚಿಸಿದ್ದಾರೆ. ಆ ಬಳಿಕ ಚಾಕು ತೆಗೆದ ಹಂತಕರು ಮಂಜುನಾಥ್​ನ ಎದೆ ಭಾಗ ಸೇರಿದಂತೆ ಹಲವು ಕಡೆ ಇರಿದು ಎಸ್ಕೇಪ್ ಆಗಿದ್ದಾರೆ.

ಇದನ್ನೂ ಓದಿ: ಅಶ್ಲೀಲವಾಗಿ ಮೆಸೇಜ್​​, ವರದಕ್ಷಿಣೆ ಕಿರುಕುಳ: ಪೊಲೀಸ್​​ ಪತಿ ಕಾಟಕ್ಕೆ ಪತ್ನಿ ಕಂಗಾಲು

ಇನ್ನು ತಂದೆಯ ಹತ್ಯೆಯ ದೃಶ್ಯ ಕಣ್ಣಾರೆ ಕಂಡ ಮಗಳು ಬೆಚ್ಚಿಬಿದಿದ್ದಾಳೆ. ಬಳಿಕ ಆಕೆ ಮನೆಗೆ ಹೊಗಿ ತಾಯಿಗೆ ವಿಚಾರ ತಿಳಿಸಿದ್ದಾಳೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಹಂತಕರು ಮುಖಕ್ಕೆ ಮಾಸ್ಕ್ ಹಾಗೂ ಗ್ಲೌಸ್ ತೊಟ್ಟು ಎಂಟ್ರಿ ಕೊಟ್ಟಿದ್ದು, ಯಾರು ಹಾಗೂ ಯಾವ ಕಾರಣಕ್ಕೆ ಕೃತ್ಯವೆಸಗಿದ್ದಾರೆಂದು  ಪೊಲೀಸರು ತನಿಖೆ ನಡೆಸಿದ್ದಾರೆ.

ಇದನ್ನೂ ಓದಿ: Hubli: ಮರಣ ತಂದ ಮಹಿಳೆ ಸಂಗ; ಕೊನೆಗೂ ಬದುಕಲಿಲ್ಲ ಎಂಜಿನಿಯರ್​​!

ಸದ್ಯ ಘಟನೆ ಸಂಬಂಧ ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಜುನಾಥ್ ಕೊಲೆಗೆ ಕಾರಣ ಏನೆಂಬುದು ಇನ್ನು ಪತ್ತೆಯಾಗಿಲ್ಲ. ಸದ್ಯ ಘಟನಾ ಸ್ಥಳದಲ್ಲಿ ಸಿಕ್ಕಿರುವ ಸಿಸಿಟಿವಿ ಹಾಗೂ ಮಾಹಿತಿಗಳ ಆಧರಿಸಿ ಹುಳಿಯಾರು ಪೊಲೀಸರು ತನಿಖೆ ಆರಂಭಿಸಿದ್ದು, ಆ ಬಳಿಕವಷ್ಟೇ ಮತ್ತಷ್ಟು ಸಂಗತಿಗಳು ತಿಳಿದು ಬರಲಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಶುಕ್ರ ಹಾಗೂ ರವಿಯ ಅಪರೂಪದ ಸಂಯೋಗ, ಗುರುದೃಷ್ಟಿಯ ಯೋಗ – Kannada News | Sun and Venus in Jupiter’s Sign: Astrological Effects on Your Zodiac Signs

ಸೂರ್ಯ ಹಾಗು ಶುಕ್ರರು ಗುರುವಿನ ರಾಶಿಯಲ್ಲಿ ಇರುವುದು ಅಪರೂಪದ ಸಂಯೋಜನ. ಪರಮ‌ಮಿತ್ರರೂ ಪರಮಶತ್ರುಗಳೂ ಒಂದೇ ರಾಶಿಯಲ್ಲಿ ಇದೆ. ಸೂರ್ಯ ಹಾಗೂ ಶುಕ್ರ ಪರಸ್ಪರ ಶತ್ರುಗಳು. ಗುರು ಹಾಗೂ ಸೂರ್ಯರು ಪರಸ್ಪರ ಮಿತ್ರರು. ಶುಕ್ರ ಹಾಗೂ ಗುರು ಶತ್ರುವೂ ಮಿತ್ರರೂ ಅಲ್ಲದವರು. ಮಧ್ಯಮ. ಹೀಗಿರುವಾಗ ಗುರುವಿನ ರಾಶಿಯಲ್ಲಿ ಇರುವ ಈ ಗ್ರಹರು ಮತ್ತು ಗುರುವಿನ ದೃಷ್ಟಿಯುಳ್ಳವರು ಯಾವ ರಾಶಿಯವರಿಗೆ ಏನು ಫಲವನ್ನು ಕೊಟ್ಟಾರು ಎನ್ನುವದನ್ನು ಚಿಂತಿಸಬೇಕಿದೆ. ರವಿ ಹಾಗು ಶುಕ್ರರ ಕಾರಕತ್ವ ಭಿನ್ನ. ಆದರೆ ಒಂದಕ್ಕೊಂದು ಪೂರಕ.

ಸೂರ್ಯನು ರಾಜನಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಇದ್ದರೆ, ಶುಕ್ರನು ಭೋಗವನ್ನು ಪ್ರತಿನಿಧಿಸುವವನು. ಹಾಗಾಗಿ ಪರಸ್ಪರ ಸಾಮರಸ್ಯ ಇದೆ. ಇನ್ನು ಗುರುವಿನ ಪೂರ್ಣ ದೃಷ್ಟಿ ಸೂರ್ಯನ ಮೇಲೆ‌ಬರುವುದರಿಂದ ರಾಜಕೀಯ, ಸರ್ಕಾರದ ಉದ್ಯೋಗ, ಸ್ಥಾನಮಾಮ ಇವುಗಳ ಜೊತೆ, ತಂದೆಯಿಂದ ಪ್ರೀತಿ, ಲಾಭ, ಮಾಡುವ ಕಾರ್ಯದಲ್ಲಿ ಉತ್ಸಾಹ, ಆತ್ಮವಿಶ್ವಾಸ ಇವು ಹೆಚ್ಚಾಗುತ್ತದೆ. ಆದರೆ ಶುಕ್ರನಿಂದ ಅಂತಹ ಪೂರ್ಣ ಫಲವನ್ನು ನಿರೀಕ್ಷಿಸುವಂತಿಲ್ಲ. ಹಲವು ಬಾರಿ ನಿಮ್ಮ ಕನಸು ಭಗ್ನವಾಗಬಹದು ಅಥವಾ ಭಗ್ನವಾದಂತೆ ತೋರುವುದು.

ಮೇಷ ರಾಶಿ :

ನಿಮಗೆ ಭಾಗ್ಯೋದಯದ ಕಾಲ, ಉನ್ನತ ವಿದ್ಯಾಭ್ಯಾಸಕ್ಕೆ ದಾರಿ ತೆರೆಯಲಿದೆ. ವಿದೇಶ ಪ್ರಯಾಣದ ಉತ್ಸಾಹದಲ್ಲಿ ಇರುವಿರಿ. ಆತ್ಮವಿಶ್ವಾಸ ವೃದ್ಧಿ. ಸರ್ಕಾರಿ ಕಾರ್ಯಗಳಲ್ಲಿ ಅನುಕೂಲ, ಗುರುಕೃಪೆ ಲಭಿಸುತ್ತದೆ. ಧೈರ್ಯದಿಂದ ತೆಗೆದುಕೊಳ್ಳುವ ನಿರ್ಧಾರಗಳು ಯಶಸ್ಸು ತರುತ್ತವೆ.

ಸಿಂಹ ರಾಶಿ :

ಈ ರಾಶಿಗೆ ರವಿಯು ಅಧಿಪತಿಯಾದ ಕಾರಣ ನಾಯಕತ್ವ, ಕೀರ್ತಿ, ಸೃಜನಶೀಲತೆ ಹೆಚ್ಚಾಗುತ್ತದೆ. ಪ್ರೇಮ ಹಾಗೂ ಸಂತಾನ ಸುಖ ಲಭಿಸುತ್ತದೆ. ಸಮಾಜದಲ್ಲಿ ಗೌರವ, ಅಧಿಕಾರ ಮತ್ತು ಆಕರ್ಷಣೆ ಹೆಚ್ಚುವ ಕಾಲಘಟ್ಟ.

ಧನು ರಾಶಿ :

ಇದೇ ರಾಶಿಯಲ್ಲಿ ರವಿ ಹಾಗೂ ಶುಕ್ರರಿದ್ದು ವ್ಯಕ್ತಿತ್ವ ಪ್ರಕಾಶಮಾನವಾಗುತ್ತದೆ. ಆತ್ಮವಿಶ್ವಾಸ, ವಿವೇಕ, ಆಧ್ಯಾತ್ಮಿಕ ಚಿಂತನೆ ವೃದ್ಧಿ. ವಿವಾಹ, ಕಲೆ, ಶಿಕ್ಷಣ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳು ದೊರೆಯುತ್ತವೆ.

ಇದನ್ನೂ ಓದಿ: ನವಪಂಚಮ ಯೋಗ: ಯಾರಿಗೆಲ್ಲಾ ಅದೃಷ್ಟ? ಇಲ್ಲಿದೆ ನೋಡಿ

ತುಲಾ ರಾಶಿ :

ಶುಕ್ರನ ಆಧಿಪತ್ಯದ ರಾಶಿಗೆ ಮಾತುಕತೆ, ಸಂಪರ್ಕ, ಪ್ರಯಾಣ, ಕಲಾತ್ಮಕ ಚಟುವಟಿಕೆಗಳಲ್ಲಿ ಲಾಭ. ಸ್ನೇಹ ವಲಯ ವಿಸ್ತರಣೆ. ಅಹಂಕಾರ ನಿಯಂತ್ರಿಸಿದರೆ ಉತ್ತಮ ಯಶಸ್ಸು ಮತ್ತು ಮಾನಸಿಕ ಸಮತೋಲನ ಸಿಗುತ್ತದೆ.

ಮಿಥುನ ರಾಶಿ :

ಶುಕ್ರ ರವಿಯರ ದೃಷ್ಟಿ ಇರಲಿದ್ದು ಸ್ನೇಹಿತರಿಂದ ಲಾಭ, ಆದಾಯ ವೃದ್ಧಿ, ಸಾಮಾಜಿಕ ಗೌರವ ಹೆಚ್ಚಳ. ಸೃಜನಾತ್ಮಕ ಯೋಜನೆಗಳಿಗೆ ಬೆಂಬಲ. ಸಾರ್ವಜನಿಕ ಜೀವನದಲ್ಲಿ ನಿರಂತರ ತೊಡಗಿಕೊಳ್ಳುವಿರಿ.

– ಲೋಹಿತ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸತತವಾಗಿ ಕುಸಿಯುತ್ತಿದ್ದ ಷೇರುಪೇಟೆ ದಿಢೀರನೇ ಚೇತರಿಕೆ; ಮಾರುಕಟ್ಟೆ ತಿರುಗಿ ನಿಲ್ಲಲು ಏನು ಕಾರಣ? – Kannada News | Stock Market updates on Jan 12th, sensex and nifty gain big after successive losses

ನವದೆಹಲಿ, ಜನವರಿ 12: ಇವತ್ತು ಬೆಳಗ್ಗೆ ಟ್ರೇಡಿಂಗ್ ಅವಧಿಯಲ್ಲಿ ಷೇರು ಮಾರುಕಟ್ಟೆ (Stock Market) ಕಳೆಗುಂದಿತ್ತು. ಸತತ ಐದು ಸೆಷನ್ಸ್ ಕುಸಿದಿದ್ದ ಮಾರುಕಟ್ಟೆ, ಇವತ್ತು ಆರನೇ ಸೆಷನ್​ನಲ್ಲೂ ಭರ್ಜರಿ ಇಳಿಕೆಯ ಹಾದಿಯಲ್ಲಿತ್ತು. ಮಾಧ್ಯಮಗಳಲ್ಲೂ ಕೂಡ ಸತತ ಆರು ದಿನ ಷೇರು ಮಾರುಕಟ್ಟೆ ಕುಸಿದಿದೆ ಎನ್ನುವಂತಹ ಸುದ್ದಿ ಪ್ರಕಟವಾಯಿತು. ಆದರೆ, ನೋಡನೋಡುತ್ತಿದ್ದಂತೆಯೇ ಮಾರುಕಟ್ಟೆ ಹಸಿರುಬಣ್ಣಕ್ಕೆ ತಿರುಗಿತು. ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಕೂಡ ಪಾಸಿಟಿವ್ ಆಗಿವೆ.

ಸೆನ್ಸೆಕ್ಸ್ ಇವತ್ತು ಟ್ರೇಡಿಂಗ್ ಕೊನೆಯಲ್ಲಿ 83,878 ಅಂಕಗಳಲ್ಲಿ ಅಂತ್ಯಗೊಂಡಿತು. 302 ಅಂಕ ಅಥವಾ ಶೇ 0.36ರಷ್ಟು ಹೆಚ್ಚಳ ಆಗಿದೆ. ನಿಫ್ಟಿ50 ಸೂಚ್ಯಂಕವು ಶೇ. 0.42 ಅಥವಾ 107 ಅಂಕ ಗಳಿಕೆಯೊಂದಿಗೆ 25,790.25 ಮಟ್ಟದಲ್ಲಿ ಅಂತ್ಯಗೊಂಡಿದೆ.

ಇದನ್ನೂ ಓದಿ: ಸತತ ಆರನೇ ದಿನ ಷೇರು ಮಾರುಕಟ್ಟೆ ಕುಸಿತ; ಹೂಡಿಕೆದಾರರಿಗೆ 17 ಲಕ್ಷ ಕೋಟಿ ರೂ ನಷ್ಟ

ಸೆನ್ಸೆಕ್ಸ್ ಇವತ್ತು ಒಂದು ಹಂತದಲ್ಲಿ 82,861 ಅಂಕಗಳಿಗೆ ಕುಸಿದಿತ್ತು. ದ್ವಿತೀಯಾರ್ಧದಲ್ಲಿ ಚೇತರಿಸಿಕೊಂಡು 700 ಅಂಕಗಳನ್ನು ಗಳಿಸಿ, ಒಟ್ಟಾರೆ 302 ಅಂಕಗಳ ಮುನ್ನಡೆ ಪಡೆದಿದೆ. ಆದರೆ, ಲಾರ್ಜ್ ಕ್ಯಾಪ್ ಇಂಡೆಕ್ಸ್ ಸಕಾರಾತ್ಮಕ ಸ್ಪಂದನೆ ಪಡೆದಿವೆ. ಮಿಡ್​ಕ್ಯಾಪ್ ಮತ್ತು ಸ್ಮಾಲ್​ಕ್ಯಾಪ್ ಷೇರುಗಳು ಹಿನ್ನಡೆ ಕಂಡಿವೆ.

ಷೇರು ಮಾರುಕಟ್ಟೆ ಸೋಮವಾರ ದ್ವಿತೀಯಾರ್ಧದಲ್ಲಿ ಜಿಗಿದಿದ್ದು ಯಾಕೆ?

ಭಾರತ ಮತ್ತು ಅಮೆರಿಕ ದೇಶಗಳು ವ್ಯಾಪಾರ ಒಪ್ಪಂದ ಅಂತಿಮಗೊಳಿಸಲು ಸಕ್ರಿಯವಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ಅಮೆರಿಕದ ರಾಯಭಾರಿ ಸೆರ್ಗಿಯೋ ಗೋರ್ ಅವರು ಹೇಳಿಕೆ ನೀಡಿದ್ದು ಮಾರುಕಟ್ಟೆಗೆ ಸಕಾರಾತ್ಮಕ ಭಾವನೆ ತರಲು ಸಹಾಯವಾಗಿದೆ.

ಇದನ್ನೂ ಓದಿ: ಭಾರತ ಅತಿವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ: ಗುಜರಾತ್ ಸಮಿಟ್​ನಲ್ಲಿ ಪ್ರಧಾನಿ ಮೋದಿ ಹೇಳಿಕೆ

‘ಅಮೆರಿಕಕ್ಕೆ ಭಾರತದಷ್ಟು ಮುಖ್ಯವಾಗಿರುವ ದೇಶ ಮತ್ತೊಂದಿಲ್ಲ. ಟ್ರೇಡ್ ಡೀಲ್ ಅಂತಿಮಗೊಳಿಸಲು ಎರಡೂ ದೇಶಗಳು ಪ್ರಯತ್ನಿಸುತ್ತಿವೆ. ನಿಜವಾದ ಸ್ನೇಹಿತರು ಭಿನ್ನಾಭಿಪ್ರಾಯ ಹೊಂದಿರಬಹುದು. ಆದರೆ, ಕೊನೆಯಲ್ಲಿ ತಮ್ಮ ಭಿನ್ನಾಭಿಪ್ರಾಯಗಳನ್ನು ಶಮನಗೊಳಿಸಲು ಯಶಸ್ವಿಯಾಗುತ್ತಾರೆ’ ಎಂದು ಸರ್ಗಿಯೋ ಗೋರ್ ಹೇಳಿದ್ದಾರೆ. ಇವರ ಈ ಭರವಸೆದಾಯಕ ಮಾತುಗಳು ಮಾರುಕಟ್ಟೆಯ ಉತ್ಸಾಹ ಹೆಚ್ಚಲು ಕಾರಣವಾಗಿರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link