All posts by nagaraj11081993

‘ಆ ಸಿನಿಮಾ ಬಳಿಕ ಮಹಿಳಾ ಫ್ಯಾನ್ಸ್ ಹೆಚ್ಚಾಗಿದ್ದಾರೆ’; ವಿನೋದ್ ರಾಜ್ – Kannada News | My Lady Fans count increased After Madeva Movie Says Vinod Raj

‘ಬಲರಾಮನ ದಿನಗಳು’ ಸಿನಿಮಾವು ಇತ್ತೀಚೆಗೆ ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಕುತೂಹಲ ಮೂಡಿಸಿರುವ ಸಿನಿಮಾ. ಇದು ಹಳ್ಳಿಯ ಸೊಗಡು ಅಥವಾ ಕೌಟುಂಬಿಕ ಸಂಬಂಧಗಳ ಹಿನ್ನೆಲೆಯಲ್ಲಿ ಮೂಡಿಬರುತ್ತಿರುವ ಕಥೆಯಾಗಿದ್ದು, ನೈಜ ಘಟನೆಗಳು ಹಾಗೂ ಭಾವನಾತ್ಮಕ ಅಂಶಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ . ಈ ಸಿನಿಮಾ ಬಗ್ಗೆ ಮಾತನಾಡುವಾಗ ‘ಮಾದೇವ’ ಸಿನಿಮಾ ನೆನಪಿಸಿಕೊಂಡಿದ್ದಾರೆ. ಈ ಚಿತ್ರ ರಿಲೀಸ್ ಆದ ಬಳಿಕ ಮಹಿಳಾ ಫ್ಯಾನ್ಸ್ ಹೆಚ್ಚಾಗಿದ್ದಾರೆ ಎಂದು ಅವರು ಹೇಳಿದ್ದಾರೆ. 2025ರಲ್ಲಿ ‘ಮಾದೇವ’ ಸಿನಿಮಾ ತೆರೆಗೆ ಬಂದಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವಿಶ್ವ ದಾಖಲೆಯ ಶತಕ ಸಿಡಿಸಿದ ಫಾಫ್ ಡುಪ್ಲೆಸಿಸ್ – Kannada News | Faf Du Plessis Creates New World Record in T20 Cricket

2017 ರಲ್ಲಿ ಕೌಂಟಿ ಕ್ರಿಕೆಟ್​ನಲ್ಲಿ ಡರ್ಹಾಮ್ ತಂಡದ ಪರ ಕಣಕ್ಕಿಳಿದಿದ್ದ ಪೌಲ್ ಕಾಲಿಂಗ್​ವುಡ್ ಭರ್ಜರಿ ಸೆಂಚುರಿ ಸಿಡಿಸಿದ್ದರು. ಈ ವೇಳೆ ಅವರ ವಯಸ್ಸು 41 ವರ್ಷ, 65 ದಿನಗಳಾಗಿತ್ತು. ಈ ಮೂಲಕ ಟಿ20 ಕ್ರಿಕೆಟ್​ನಲ್ಲಿ ಶತಕ ಬಾರಿಸಿದ ಅತ್ಯಂತ ಹಿರಿಯ ಬ್ಯಾಟರ್ ಎಂಬ ವಿಶ್ವ ದಾಖಲೆ ನಿರ್ಮಿಸಿದ್ದರು. (PC: SportsInfo)

Source link

‘ಮುನ್ನಾಭಾಯ್ ಎಂಬಿಬಿಎಸ್ ಸಿನಿಮಾ ಒಂದು ಡಿಸಾಸ್ಟರ್ ಅಂದಿದ್ದರು’; ರಾಜಕುಮಾರ್ ಹಿರಾನಿ – Kannada News | Munna Bhai MBBS: Rajkumar Hirani Recalls “Disaster” Tag Before Blockbuster Success

ಚಿತ್ರರಂಗದಲ್ಲಿ ಕೆಲವು ಸಿನಿಮಾಗಳು ಬಿಡುಗಡೆಗೂ ಮುನ್ನ ಭಾರಿ ನೆಗೆಟಿವ್ ವಿಮರ್ಶೆ ಎದುರಿಸುತ್ತವೆ, ಆದರೆ ಥಿಯೇಟರ್‌ಗೆ ಬಂದ ಬಳಿಕ ಬಾಕ್ಸ್ ಆಫೀಸ್ ಇತಿಹಾಸವನ್ನೇ ಬದಲಾಯಿಸುತ್ತವೆ. ಅಂತಹದ್ದೇ ಒಂದು ಟ್ರೆಂಡ್ ಸೆಟ್ಟರ್ ಸಿನಿಮಾ ಬಾಲಿವುಡ್‌ನ ‘ಮುನ್ನಾಭಾಯ್ M.B.B.S’. ಇಂದು ಈ ಚಿತ್ರಕ್ಕೆ ಕ್ಲಾಸಿಕ್ ಪಟ್ಟ ಸಿಕ್ಕಿರಬಹುದು, ಆದರೆ ಸಿನಿಮಾ ರಿಲೀಸ್ ಆಗುವ ಮುನ್ನ ಉದ್ಯಮದವರೇ ಇದನ್ನು ‘ಫ್ಲಾಪ್’ ಎಂದು ಭವಿಷ್ಯ ನುಡಿದಿದ್ದರಂತೆ. ಈ ಆಸಕ್ತಿದಾಯಕ ಕಥೆಯನ್ನು ಖ್ಯಾತ ನಿರ್ದೇಶಕ ರಾಜಕುಮಾರ್ ಹಿರಾನಿ ಇತ್ತೀಚಿನ ಸಂದರ್ಶನವೊಂದರಲ್ಲಿ ನೆನಪಿಸಿಕೊಂಡಿದ್ದಾರೆ.

ಅಂದು ಆ್ಯಕ್ಷನ್ ಹೀರೊ ಆಗಿ ಅಬ್ಬರಿಸುತ್ತಿದ್ದ ಸಂಜಯ್ ದತ್ ಅವರನ್ನು ಹಿಡಿದು, ಆಸ್ಪತ್ರೆ ಹಿನ್ನೆಲೆಯಲ್ಲಿ ಕಾಮಿಡಿ ಸಿನಿಮಾ ಮಾಡಲು ಹೊರಟಾಗ ಹಿರಾನಿ ಅವರಿಗೆ ಎಲ್ಲರಿಂದಲೂ ಅಪಸ್ವರವೇ ಕೇಳಿಬಂದಿತ್ತಂತೆ.

ಚಿತ್ರದ ಮೊದಲ ಪ್ರದರ್ಶನದ ದಿನಗಳನ್ನು ನೆನಪಿಸಿಕೊಂಡ ಹಿರಾನಿ, ‘ಸಿನಿಮಾ ಮುಗಿದ ಮೇಲೆ ಚಿತ್ರರಂಗದ ಕೆಲವು ಪ್ರಮುಖರಿಗಾಗಿ ಶೋ ಇಟ್ಟಿದ್ದೆವು. ಸಿನಿಮಾ ನೋಡಿ ಹೊರಬಂದ ಒಬ್ಬ ಪ್ರಸಿದ್ಧ ನಿರ್ದೇಶಕರು ನನ್ನ ಬಳಿ ಬಂದು, ‘ಏನ್ ಗುರು ಇಂಥ ಸಿನಿಮಾ ಮಾಡಿದ್ದೀಯಾ? ಇದೊಂದು ಬಿಗ್ ಡಿಸಾಸ್ಟರ್ ಆಗಲಿದೆ. ಸಂಜಯ್ ದತ್ ಒಬ್ಬ ಆ್ಯಕ್ಷನ್ ಹೀರೊ, ಅವನನ್ನು ತಂದು ಆಸ್ಪತ್ರೆಯಲ್ಲಿ ನಿಲ್ಲಿಸಿದ್ದೀಯಾ. ಚಿತ್ರದ ಹಾಡುಗಳನ್ನಾದರೂ ವಿದೇಶದಲ್ಲಿ ಶೂಟ್ ಮಾಡಬೇಕಿತ್ತು, ಅದನ್ನೂ ಇಲ್ಲೇ ಮಾಡಿದ್ದೀಯಾ’ ಎಂದು ಬೇಸರ ಹೊರಹಾಕಿದ್ದರು’ ಎಂದಿದ್ದಾರೆ. ಅಷ್ಟೇ ಅಲ್ಲದೆ, ಸಿನಿಮಾ ಕಲರ್‌ಫುಲ್ ಆಗಿಲ್ಲ, ಎಲ್ಲರಿಗೂ ಆಸ್ಪತ್ರೆಯ ಯೂನಿಫಾರ್ಮ್ ಹಾಕಿ ಕೂರಿಸಿದ್ದೀಯಾ ಎಂದು ಆ ನಿರ್ದೇಶಕರು ಹಿರಾನಿ ಅವರನ್ನು ತರಾಟೆಗೆ ತಗೆದುಕೊಂಡಿದ್ದರಂತೆ.

ಚಿತ್ರ ಬಿಡುಗಡೆಯಾದ ಮೊದಲ ದಿನ ಮುಂಬೈನ ಪ್ರಖ್ಯಾತ ‘ಗೈಟಿ ಗ್ಯಾಲಕ್ಸಿ’ ಥಿಯೇಟರ್‌ಗೆ ಹಿರಾನಿ ಭೇಟಿ ನೀಡಿದ್ದರು. ‘ನಾನು ಥಿಯೇಟರ್ ಒಳಗಡೆ ಹೋಗುವಾಗ ಅಲ್ಲಿದ್ದ ಗೇಟ್‌ಕೀಪರ್‌ನ ಕೇಳಿದೆ. ಅವನು ಹೆಬ್ಬೆರಳು ಕೆಳಗೆ ತೋರಿಸಿ (Thumbs-down) ಸನ್ನೆ ಮಾಡಿದ. ಅದನ್ನು ನೋಡಿ ನನ್ನ ಹೃದಯ ಒಂದು ಕ್ಷಣ ನಿಂತಂತಾಯಿತು, ಸಿನಿಮಾ ಮುಗಿಯಿತು ಅಂದುಕೊಂಡೆ. ಆದರೆ ಒಳಗೆ ಹೋದಾಗ ಕೇವಲ ಶೇ. 50 ರಷ್ಟು ಸೀಟುಗಳು ಮಾತ್ರ ಭರ್ತಿಯಾಗಿದ್ದವು. ಟಿಕೆಟ್ ಮಾರುವ ಅವನಿಗೆ ಹೌಸ್‌ಫುಲ್ ಆಗದಿದ್ದರೆ ಸಿನಿಮಾ ಫ್ಲಾಪ್ ಎಂದರ್ಥ. ಆದರೆ ಒಳಗಿದ್ದ ಪ್ರೇಕ್ಷಕರು ಮಾತ್ರ ಪ್ರತಿ ದೃಶ್ಯಕ್ಕೂ ನಕ್ಕು ನಕ್ಕು ಬಿದ್ದು ಒದ್ದಾಡುತ್ತಿದ್ದರು. ಅದೇ ದಿನ ಸಂಜೆಯಷ್ಟರಲ್ಲಿ ಸಿನಿಮಾ ಸೂಪರ್ ಹಿಟ್ ಎಂಬ ಟಾಕ್ ಹರಡಿ, ರಾತ್ರಿಯ ಶೋಗಳೆಲ್ಲ ಹೌಸ್‌ಫುಲ್ ಪ್ರದರ್ಶನ ಕಂಡವು’ ಎಂದು ಹಿರಾನಿ ಆ ದಿನದ ನೆನಪನ್ನು ಹಂಚಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಜಾಗತಿಕ ವೇದಿಕೆಯಲ್ಲಿ ನೋರಾ ಫತೇಹಿ ಅಬ್ಬರ; ಆಲಿಯಾ, ದೀಪಿಕಾರನ್ನು ಹಿಂದಿಕ್ಕಿದ ನಟಿ – Kannada News | Nora Fatehi Dazzles at FIFA World Cup 2026 Opening, Tops Google Trends

2026ರ ಫಿಫಾ ವಿಶ್ವಕಪ್ ಉದ್ಘಾಟನಾ ಸಮಾರಂಭದಲ್ಲಿ ನೋರಾ ಫತೇಹಿ ತಮ್ಮ ಹೈ-ವೋಲ್ಟೇಜ್ ನೃತ್ಯದ ಮೂಲಕ ಜಾಗತಿಕ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ್ದಾರೆ. ಈ ಬೆನ್ನಲ್ಲೇ ಗೂಗಲ್ ಟ್ರೆಂಡ್ಸ್‌ನಲ್ಲಿ ಬಾಲಿವುಡ್‌ನ ಪ್ರಿಯಾಂಕಾ ಚೋಪ್ರಾ, ಆಲಿಯಾ ಭಟ್ ಮತ್ತು ದೀಪಿಕಾ ಪಡುಕೋಣೆ ಅವರನ್ನೇ ಹಿಂದಿಕ್ಕಿ, ಸದ್ಯ ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್ ಮಾಡಲ್ಪಟ್ಟ ನಟಿಯಾಗಿ ನೋರಾ (Nora Fatehi) ಹೊರಹೊಮ್ಮಿದ್ದಾರೆ.

ಜೂನ್ 12ರ ಧಮಾಕಾ, ಸೋಶಿಯಲ್ ಮೀಡಿಯಾ ಉಡೀಸ್

ಜೂನ್ 12ರಂದು ನಡೆದ ಫಿಫಾ ಉದ್ಘಾಟನಾ ಪಂದ್ಯದ ವೇಳೆ ನೋರಾ ಸ್ಟೇಜ್ ಮೇಲೆ ಬರುತ್ತಿದ್ದಂತೆ ಕ್ರೀಡಾಂಗಣದಲ್ಲಿ ಉತ್ತಮ ವೈಬ್ ಸೃಷ್ಟಿಯಾಗಿತ್ತು. ಅವರ ಪರ್ಫಾಮೆನ್ಸ್‌ನ ಸಣ್ಣ ಸಣ್ಣ ಕ್ಲಿಪ್‌ಗಳು ಇಂಟರ್ನೆಟ್‌ಗೆ ಲಗ್ಗೆ ಇಡುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಬಿರುಗಾಳಿಯೇ ಎದ್ದಿತು. ವಿಶ್ವದಾದ್ಯಂತ ಲಕ್ಷಾಂತರ ಅಭಿಮಾನಿಗಳು ಈ ವಿಡಿಯೋಗಳನ್ನು ಶೇರ್ ಮಾಡಿದ್ದಲ್ಲದೆ, ನೋರಾ ನೃತ್ಯಕ್ಕೆ ಫಿದಾ ಆಗಿದ್ದಾರೆ.

ಈ ಐತಿಹಾಸಿಕ ಸಾಧನೆಯ ಬೆನ್ನಲ್ಲೇ ನೋರಾ ಫತೇಹಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಭಾವುಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ತಮ್ಮ ಯಶಸ್ಸಿನ ಹಿಂದಿರುವ ಆಪ್ತರ ಚಿತ್ರಗಳನ್ನು ಪೋಸ್ಟ್ ಮಾಡಿರುವ ಅವರು, ಧನ್ಯವಾದ ಹೇಳಿದ್ದಾರೆ.

ಇದನ್ನೂ ಓದಿ: ಫುಟ್​​ಬಾಲ್ ವಿಶ್ವಕಪ್ ಉದ್ಘಾಟನೆಯಲ್ಲಿ ಹೀಗಿತ್ತು ನೋರಾ ಫತೇಹಿ ಪ್ರದರ್ಶನ

ಯೂಟ್ಯೂಬ್‌ನಲ್ಲೂ ರೆಕಾರ್ಡ್ ಬ್ರೇಕ್ ಗಳಿಕೆ

ನೋರಾ ಫತೇಹಿ ಅವರಿಗೆ ಫಿಫಾ ವೇದಿಕೆ ಹೊಸದೇನಲ್ಲ. ಇದಕ್ಕೂ ಮುನ್ನ 2022ರ ವಿಶ್ವಕಪ್‌ನಲ್ಲೂ ಅವರು ಕಾಣಿಸಿಕೊಂಡು ಭಾರಿ ಸದ್ದು ಮಾಡಿದ್ದರು. ಆದರೆ ಈ ಬಾರಿ ಕೆನಡಾದ ಟೊರಾಂಟೊದಲ್ಲಿರುವ ‘ಬಿಎಂಒ ಫೀಲ್ಡ್’ ಮೈದಾನದಲ್ಲಿ ಅವರು ನೀಡಿದ ಪ್ರದರ್ಶನ ನೆಕ್ಸ್ಟ್ ಲೆವೆಲ್‌ನಲ್ಲಿದೆ. ವಿಶೇಷವೆಂದರೆ, ಅವರ ‘ಸೀರ್ ಸೀರ್’ ಟ್ರ್ಯಾಕ್ ಪ್ರದರ್ಶನ ಬಿಡುಗಡೆಯಾದ ಕೇವಲ 24 ಗಂಟೆಗಳಲ್ಲಿ ಯೂಟ್ಯೂಬ್‌ನಲ್ಲಿ ಬರೊಬ್ಬರಿ 2 ಕೋಟಿಗೂ ಅಧಿಕ ವೀಕ್ಷಣೆಗಳನ್ನು ಪಡೆದು ಡಿಜಿಟಲ್ ಲೋಕದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಟೀಮ್ ಇಂಡಿಯಾಗೆ ಹರ್ಷಿತ್ ರಾಣಾ ಎಂಟ್ರಿ: ತಂಡದಿಂದ ಯಾರು ಔಟ್? – Kannada News | Harshit Rana joins Team India squad

ಭಾರತ ಮತ್ತು ಅಫ್ಘಾನಿಸ್ತಾನ್ ನಡುವಣ ಮೂರನೇ ಏಕದಿನ ಪಂದ್ಯಕ್ಕೂ ಮುನ್ನ ಯುವ ವೇಗಿ ಹರ್ಷಿತ್ ರಾಣಾ (Harshit Rana) ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದಾರೆ. ಗಾಯದ ಸಮಸ್ಯೆಯ ಕಾರಣ ಕಳೆದ ಕೆಲ ತಿಂಗಳಿಂದ ಹೊರಗುಳಿದಿದ್ದ ಹರ್ಷಿತ್ ಇದೀಗ ಚೆನ್ನೈನಲ್ಲಿ ಭಾರತ ತಂಡವನ್ನು ಕೂಡಿಕೊಂಡಿದ್ದಾರೆ.

  • ಹರ್ಷಿತ್ ರಾಣಾ ಟಿ20 ವಿಶ್ವಕಪ್​ ವೇಳೆ ಗಾಯಗೊಂಡಿದ್ದರು.
  • ಮೊಣಕಾಲಿನ ಗಾಯದ ಕಾರಣ ಅವರು ಟಿ20 ವಿಶ್ವಕಪ್​ ಟೂರ್ನಿಯನ್ನು ಅರ್ಧದಲ್ಲೇ ತೊರೆದಿದ್ದರು.
  • ಈ ಗಾಯದ ಕಾರಣ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲೂ ಕಣಕ್ಕಿಳಿದಿರಲಿಲ್ಲ.

ಅತ್ತ ಫಿಟ್​ನೆಸ್ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ ಹರ್ಷಿತ್ ರಾಣಾ ಅವರನ್ನು ಈ ಮೊದಲು  ಅಫ್ಘಾನಿಸ್ತಾನ್ ವಿರುದ್ಧದ ಸರಣಿಗೆ ಆಯ್ಕೆ ಮಾಡಿರಲಿಲ್ಲ. ಇದಾಗ್ಯೂ ಅವರು ಐರ್ಲೆಂಡ್ ಹಾಗೂ ಇಂಗ್ಲೆಂಡ್​ ವಿರುದ್ಧದ ಸರಣಿಗೆ ಪ್ರಕಟಿಸಲಾದ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು.

ಇದೀಗ ಸಂಪೂರ್ಣ ಫಿಟ್​ನೆಸ್ ಸಾಧಿಸಿರುವ ಕಾರಣ ಅವರನ್ನು ಅಫ್ಘಾನ್ ವಿರುದ್ಧದ ಕೊನೆಯ ಪಂದ್ಯಕ್ಕೂ ಮುನ್ನ ಭಾರತ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಅದರಂತೆ ಇಂದಿನ ಪಂದ್ಯದಲ್ಲಿ ಯುವ ವೇಗಿ ಕಣಕ್ಕಿಳಿಯುವುದು ಬಹುತೇಕ ಖಚಿತ ಎನ್ನಬಹುದು.

ಟೀಮ್ ಇಂಡಿಯಾದಿಂದ ಯಾರು ಔಟ್?

ಹರ್ಷಿತ್ ರಾಣಾ ಎಂಟ್ರಿಯಿಂದಾಗಿ ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್​ನಲ್ಲಿ ಮಹತ್ವದ ಬದಲಾವಣೆಯಾಗುವ ಸಾಧ್ಯತೆಯಿದೆ. ಈ ಬದಲಾವಣೆಯೊಂದಿಗೆ ಎಡಗೈ ವೇಗಿ ಅರ್ಷದೀಪ್ ಸಿಂಗ್ ಆಡುವ ಬಳಗದಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚು.

ಏಕೆಂದರೆ ಅಪ್ಘಾನಿಸ್ತಾನ್ ವಿರುದ್ಧದ 3ನೇ ಏಕದಿನ ಪಂದ್ಯಕ್ಕೂ ಮುನ್ನ ಭಾರತ ತಂಡದ ಸಹಾಯಕ ಕೋಚ್ ರಯಾನ್ ಟೆನ್ ಡಾಸ್ಚೇಟ್ ಅವರು ಅರ್ಷದೀಪ್ ಸಿಂಗ್ ಅವರಿಗೆ ವಿಶ್ರಾಂತಿ ನೀಡುವ ಬಗ್ಗೆ ಸುಳಿವು ನೀಡಿದ್ದಾರೆ.

ಇತ್ತ ಅರ್ಷದೀಪ್ ಸಿಂಗ್ ಹೊರಗುಳಿದರೆ ಅವರ ಸ್ಥಾನದಲ್ಲಿ ಹರ್ಷಿತ್ ರಾಣಾ ಅವರನ್ನು ಕಣಕ್ಕಿಳಿಸಬಹುದು. ಹೀಗಾಗಿ ರಾಣಾ ಎಂಟ್ರಿಯೊಂದಿಗೆ ಅರ್ಷದೀಪ್ ಸಿಂಗ್ ಆಡುವ ಬಳಗದಿಂದ ಹೊರಬೀಳುವ ಸಾಧ್ಯತೆ ಹೆಚ್ಚು.

ಭಾರತ ಏಕದಿನ ತಂಡ: ಶುಭ್​ಮನ್ ಗಿಲ್ (ನಾಯಕ) , ಕೆಎಲ್ ರಾಹುಲ್ (ವಿಕೆಟ್ ಕೀಪರ್), ರೋಹಿತ್ ಶರ್ಮಾ , ಯಶಸ್ವಿ ಜೈಸ್ವಾಲ್ , ಇಶಾನ್ ಕಿಶನ್ , ಶ್ರೇಯಸ್ ಅಯ್ಯರ್ , ವಾಷಿಂಗ್ಟನ್ ಸುಂದರ್ , ನಿತೀಶ್ ಕುಮಾರ್ ರೆಡ್ಡಿ , ಹರ್ಷ್ ದುಬೆ , ಕುಲ್ದೀಪ್ ಯಾದವ್ , ಅರ್ಷದೀಪ್ ಸಿಂಗ್ , ಗುರ್ನೂರ್ ಬ್ರಾರ್ , ಪ್ರಸಿದ್ಧ್ ಕೃಷ್ಣ , ಪ್ರಿನ್ಸ್ ಯಾದವ್, ಹರ್ಷಿತ್ ರಾಣಾ.

ಕ್ಲೀನ್ ಸ್ವೀಪ್ ಪ್ಲ್ಯಾನ್:

ಭಾರತ ಮತ್ತು ಅಫ್ಘಾನಿಸ್ತಾನ್ ನಡುವಣ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಧರ್ಮಶಾಲಾದಲ್ಲಿ ನಡೆದ ಮೊದಲ ಪಂದ್ಯದಲ್ಲಿ 7 ವಿಕೆಟ್​ಗಳ ಜಯ ಸಾಧಿಸಿದ್ದ ಭಾರತ ತಂಡವು ಲಕ್ನೋನಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ 170 ರನ್​ಗಳ ಅಮೋಘ ಗೆಲುವು ದಾಖಲಿಸಿತ್ತು.

ಇದನ್ನೂ ಓದಿ: ಕ್ರಿಸ್ಟಿಯಾನೊ ರೊನಾಲ್ಡೊ ವಿಶ್ವ ದಾಖಲೆ ಮುರಿದ ಲಿಯೋನೆಲ್ ಮೆಸ್ಸಿ

ಇದೀಗ ಮೂರನೇ ಪಂದ್ಯದಲ್ಲೂ ಜಯ ಸಾಧಿಸುವ ಮೂಲಕ 3-0 ಅಂತರದಿಂದ ಸರಣಿ ಕ್ಲೀನ್ ಸ್ವೀಪ್ ಮಾಡಿಕೊಳ್ಳಲು ಟೀಮ್ ಇಂಡಿಯಾ ಪ್ಲ್ಯಾನ್ ರೂಪಿಸಿದೆ. ಅದರಂತೆ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲೂ ಭಾರತ ತಂಡದ ಅಮೋಘ ಗೆಲುವನ್ನು ಎದುರು ನೋಡಬಹುದು.

Published On – 7:28 am, Sat, 20 June 26

Source link

ಇಂದಿನ ವಾಯು ಗುಣಮಟ್ಟ ವರದಿ: ರಾಜ್ಯದ ಈ ನಗರದಲ್ಲಿದೆ ಅತ್ಯಂತ ಸ್ವಚ್ಛ ವಾತಾವರಣ; ನಿಮ್ಮ ಊರಿನ AQI ಮಟ್ಟ ಚೆಕ್ ಮಾಡಿ – Kannada News | Rain Boosts Karnataka Air Quality: Bengaluru, Mysuru See ‘Good’ AQI, Health Advisory

ಬೆಂಗಳೂರು, ಜೂ.20: ರಾಜ್ಯದಲ್ಲಿ ನಿರಂತರವಾಗಿ ಬೀಸುತ್ತಿರುವ ತಂಪು ಗಾಳಿ ಮತ್ತು ಮಳೆಯ ಕಾರಣದಿಂದಾಗಿ ವಾತಾವರಣದಲ್ಲಿದ್ದ ಧೂಳಿನ ಕಣಗಳು ಮತ್ತು ಮಾಲಿನ್ಯಕಾರಕಗಳು ಗಣನೀಯವಾಗಿ ಕಡಿಮೆಯಾಗಿವೆ. ಪರಿಣಾಮವಾಗಿ ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಗಾಳಿಯ ಗುಣಮಟ್ಟ ‘ಉತ್ತಮ’ (Good) ಹಾಗೂ ‘ತೃಪ್ತಿಕರ’ (Satisfactory) ಮಟ್ಟದಲ್ಲಿದೆ.

ಸಿಲಿಕಾನ್ ಸಿಟಿಯ ಹೆಬ್ಬಾಳ, ಸಿಲ್ಕ್ ಬೋರ್ಡ್, ಜಯನಗರ ಮತ್ತು ಮೈಸೂರು ರಸ್ತೆ ಸೇರಿದಂತೆ ಎಲ್ಲಾ ಪ್ರಮುಖ ವಲಯಗಳಲ್ಲಿ ಗಾಳಿಯು ಅತ್ಯಂತ ಶುದ್ಧವಾಗಿದೆ. ಯಾವುದೇ ಆರೋಗ್ಯದ ಅಪಾಯಗಳಿಲ್ಲ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರಾಜ್ಯದಲ್ಲೇ ಅತ್ಯಂತ ಸ್ವಚ್ಛ ಹಾಗೂ ಶುದ್ಧ ಗಾಳಿ ದಾಖಲಾಗಿದೆ. ಇನ್ನು ಕರಾವಳಿ ಭಾಗದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ವಾಯು ಮಾಲಿನ್ಯ ಶೂನ್ಯ ಮಟ್ಟಕ್ಕೆ ಕುಸಿದಿದೆ. ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಧೂಳಿನ ವಾತಾವರಣವಿದ್ದರೂ ಗಾಳಿಯ ಗುಣಮಟ್ಟ ನಿಯಂತ್ರಣದಲ್ಲಿದೆ.

ಕರ್ನಾಟಕದ ಪ್ರಮುಖ ನಗರಗಳ ಇಂದಿನ ವಾಯು ಗುಣಮಟ್ಟ

ನಗರ / ಜಿಲ್ಲೆ ಇಂದಿನ AQI ಮಟ್ಟ ಗಾಳಿಯ ಗುಣಮಟ್ಟದ ಸ್ಥಿತಿ (Status)
ಕೊಪ್ಪಳ 44 ಅತ್ಯಂತ ಉತ್ತಮ (Good)
ಬಳ್ಳಾರಿ 18 ಅತ್ಯಂತ ಉತ್ತಮ (Good)
ದಾವಣಗೆರೆ 51 ತೃಪ್ತಿಕರ (Satisfactory)
ಚಿಕ್ಕಮಗಳೂರು 58 ತೃಪ್ತಿಕರ (Satisfactory)
ಚಾಮರಾಜನಗರ 62 ತೃಪ್ತಿಕರ (Satisfactory)
ಶಿವಮೊಗ್ಗ 67 ತೃಪ್ತಿಕರ (Satisfactory)
ವಿಜಯಾಪುರ 69 ತೃಪ್ತಿಕರ (Satisfactory)
ತುಮಕೂರು 71 ತೃಪ್ತಿಕರ (Satisfactory)
ಗೌರಿಬಿದನೂರು / ಚಿಕ್ಕಬಳ್ಳಾಪುರ 84 ಸಾಧಾರಣ (Moderate)
ರಾಮನಗರ 84 ಸಾಧಾರಣ (Moderate)
ಹುಬ್ಬಳ್ಳಿ – ಧಾರವಾಡ 82 – 131 ಸಾಧಾರಣದಿಂದ ಕಳಪೆ (Moderate to Poor)

ಪ್ರಸುತ್ತ ವಾಯು ಗುಣಮಟ್ಟವು ಮನುಷ್ಯರು ಹಾಗೂ ಪ್ರಾಣಿಗಳಿಗೆ ಸಂಪೂರ್ಣ ಸುರಕ್ಷಿತವಾಗಿದೆ. ಉಸಿರಾಟದ ಸಮಸ್ಯೆ ಅಥವಾ ಅಸ್ತಮಾ ಇರುವವರು ಕೂಡ ಮುಕ್ತವಾಗಿ ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದು. ಬಳ್ಳಾರಿ, ಕೊಪ್ಪಳ ಮತ್ತು ಕರಾವಳಿಯ ಮಂಗಳೂರು ಭಾಗಗಳಲ್ಲಿ ವಾಯು ಮಾಲಿನ್ಯ ಅತ್ಯಂತ ಕನಿಷ್ಠ ಮಟ್ಟದಲ್ಲಿದ್ದು, ಹಸಿರು ವಲಯದಲ್ಲಿದೆ. ಉತ್ತರ ಕರ್ನಾಟಕದ ಈ ಭಾಗದಲ್ಲಿ ಕೈಗಾರಿಕಾ ಪ್ರದೇಶ ಹಾಗೂ ಧೂಳಿನ ವಾತಾವರಣದ ಕಾರಣದಿಂದಾಗಿ ಗಾಳಿಯ ಗುಣಮಟ್ಟ ಸ್ವಲ್ಪ ‘ಕಳಪೆ’ (Poor) ಮಟ್ಟ ತಲುಪಿದೆ. ಅಸ್ತಮಾ ಅಥವಾ ಅಲರ್ಜಿ ಸಮಸ್ಯೆ ಇರುವವರು ಮುಂಜಾಗ್ರತೆ ವಹಿಸುವುದು ಒಳಿತು.

ಇದನ್ನೂ ಓದಿ: ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆ; ಬೆಂಗಳೂರಿನಲ್ಲಿ ವೀಕೆಂಡ್ ಕೂಲ್ ಕೂಲ್

ಹುಬ್ಬಳ್ಳಿ – ಧಾರವಾಡದಲ್ಲಿ ರಸ್ತೆ ಕಾಮಗಾರಿಗಳು, ಕಟ್ಟಡ ನಿರ್ಮಾಣದ ಧೂಳು ಮತ್ತು ಹೆದ್ದಾರಿಯಲ್ಲಿ ಸಂಚರಿಸುವ ಭಾರಿ ವಾಹನಗಳ ಹೊಗೆಯಿಂದ ಅಲ್ಲಿನ ಗಾಳಿ ಗುಣಮಟ್ಟದಲ್ಲಿ ಸ್ವಲ್ಪ ವ್ಯಾತ್ಯಾಸ ಕಾಣುಬಹುದು. ಕಲಬುರಗಿಯಲ್ಲಿ ಸಿಮೆಂಟ್ ಕಾರ್ಖಾನೆಗಳ ಧೂಳು ಮತ್ತು ಪ್ರಸ್ತುತ ಇರುವ ಒಣ ಹವಾಮಾನದ ಗಾಳಿಯಿಂದ ಅಲ್ಲಿಯೂ ಗಾಳಿಯ ಗುಣಮಟ್ಟದಲ್ಲಿ ಕಳಪೆ ಕಾಣಿಸಬಹುದು. ಮಾಲಿನ್ಯ ಹೆಚ್ಚಿರುವ ಕೈಗಾರಿಕಾ ವಲಯಗಳಲ್ಲಿ ಓಡಾಡುವಾಗ N95 ಮಾಸ್ಕ್ ಧರಿಸುವುದು ಗಾಳಿಯಲ್ಲಿನ ಸೂಕ್ಷ್ಮ ಕಣಗಳನ್ನು (PM 2.5) ತಡೆಯಲು ನೆರವಾಗುತ್ತದೆ. AQI ಮಟ್ಟ 100 ದಾಟಿರುವ ಪ್ರದೇಶಗಳಲ್ಲಿ ಮುಂಜಾನೆಯ ವಾಕಿಂಗ್ ಅಥವಾ ಹೊರಾಂಗಣ ವ್ಯಾಯಾಮಗಳನ್ನು ಮಾಡಬೇಡಿ. ಮನೆಯ ಒಳಗೇ ಯೋಗ ಅಥವಾ ಲಘು ವ್ಯಾಯಾಮ ಮಾಡಿ ಎಂಬ ಎಚ್ಚರಿಕೆಯನ್ನು ಕೂಡ ನೀಡಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:29 am, Sat, 20 June 26

Source link

ಕೆಲಸದ ಒತ್ತಡದಿಂದ ನಿದ್ದೆಯಿಲ್ಲದ ರಾತ್ರಿ ಕಳೆಯುತ್ತಿದ್ದಾರೆ ಅಮಿತಾಭ್ ಬಚ್ಚನ್ – Kannada News | Amitabh Bachchan: Sleepless Nights, Intense Work Ethic and Kalki 2898 AD Sequel Details

ಸಿನಿಮಾ ರಂಗದಲ್ಲಿ ಬರೋಬ್ಬರಿ ಐದು ದಶಕಗಳಿಗೂ ಹೆಚ್ಚು ಕಾಲ ಸುದೀರ್ಘ ಪ್ರಯಾಣ ಬೆಳೆಸಿರುವ ಬಾಲಿವುಡ್‌ನ ಹಿರಿಯ ನಟ ಅಮಿತಾಭ್ ಬಚ್ಚನ್ ಅವರಿಗೆ ಈಗಲೂ ಕೆಲಸದ ಮೇಲಿನ ಶ್ರದ್ಧೆ ಹಾಗೆಯೇ ಇದೆ. ಸಿನಿಮಾ ಕೆಲಸದಿಂದ ಆಗುವ ಒತ್ತಡವು ರಾತ್ರಿ ಇಡೀ ನಿದ್ದೆ ಬರದಂತೆ ಮಾಡುತ್ತಿದೆಯಂತೆ. ಚಿತ್ರರಂಗದ ದಣಿವರಿಯದ ನಾಯಕ ಎಂದೇ ಹೆಸರಾಗಿರುವ ಅಮಿತಾಭ್ (Amitabh), ಶೂಟಿಂಗ್ ಮುಗಿದು ಮನೆಗೆ ಬಂದ ಮೇಲೂ ಸಿನಿಮಾದ ಆಲೋಚನೆಗಳೇ ತಲೆಯಲ್ಲಿ ಓಡುತ್ತಿರುತ್ತವೆ ಎಂದು ಒಪ್ಪಿಕೊಂಡಿದ್ದಾರೆ.

ಇತ್ತೀಚಿನ ತಮ್ಮ ಬ್ಲಾಗ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಬಿಗ್ ಬಿ, ಬಿಡುವಿಲ್ಲದ ಕೆಲಸದ ವೇಳಾಪಟ್ಟಿ ಹಾಗೂ ಅದರಿಂದಾಗಿ ತಮಗೆ ಎದುರಾಗುತ್ತಿರುವ ನಿದ್ರಾಹೀನತೆಯ ಬಗ್ಗೆ ಹೇಳಿಕೊಂಡಿದ್ದಾರೆ. ಮುಂಬರುವ ಶೂಟಿಂಗ್‌ಗಳು, ತಮಗಿರುವ ಜವಾಬ್ದಾರಿಗಳ ಬಗ್ಗೆಯೇ ಸದಾ ಯೋಚಿಸುವುದರಿಂದ ಸರಿಯಾಗಿ ವಿಶ್ರಾಂತಿ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಆದಾಗ್ಯೂ, ಈ ವಯಸ್ಸಿನಲ್ಲೂ ಅವರು ಸಿನಿಮಾಗಾಗಿ ಶ್ರಮಿಸುತ್ತಿದ್ದಾರೆ.

‘ಬೆಳಗಾಗಿದ್ದೇ ಗೊತ್ತಾಗಲಿಲ್ಲ’ ಎಂದ ನಟ:

ಶುಕ್ರವಾರ ಮುಂಜಾನೆ ಹಿಂದಿಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಬಿಗ್ ಬಿ, ‘ಕೆಲಸದ ನಡುವೆ ಸಿಕ್ಕ ಕೆಲವು ಕ್ಷಣಗಳಿವು. ಶೂಟಿಂಗ್ ಮುಗಿಸಿದ ಬಳಿಕ, ಅದನ್ನು ಇನ್ನೂ ಚೆನ್ನಾಗಿ ಮಾಡಬಹುದಿತ್ತು ಎನಿಸಿತು. ಅದಕ್ಕೆ ಅನುಮತಿ ಪಡೆದು ಮತ್ತೊಮ್ಮೆ ಆ ದೃಶ್ಯವನ್ನು ಮಾಡಿದೆ. ಈಗ ಅದು ಮೊದಲಗಿಂತ ಚೆನ್ನಾಗಿ ಮೂಡಿಬಂದಿದೆಯೋ ಇಲ್ಲವೋ ಗೊತ್ತಿಲ್ಲ, ಪ್ರೇಕ್ಷಕರೇ ನಿರ್ಧರಿಸಬೇಕು. ಇದೇ ಯೋಚನೆಯಲ್ಲಿ ರಾತ್ರಿ ಇಡೀ ನಿದ್ದೆ ಬರಲಿಲ್ಲ, ಮುಂಜಾನೆಯಾಗಿದ್ದೇ ತಿಳಿಯಲಿಲ್ಲ’ ಎಂದು ಬರೆದುಕೊಂಡು ತಮ್ಮ ಅಭಿಮಾನಿಗಳಿಗೆ ಪ್ರೀತಿ ಪೂರ್ವಕ ಧನ್ಯವಾದ ತಿಳಿಸಿದ್ದಾರೆ.

ಇದನ್ನೂ ಓದಿ: ಅಮಿತಾಭ್ ಬಚ್ಚನ್-ಮಾಧುರಿ ಒಟ್ಟಿಗೆ ಕೆಲಸ ಮಾಡದಿರಲು ಕಾರಣವಾದ ಆ ಹೀರೋ ಯಾರು?

36 ಗಂಟೆಗಳ ದಿನ ಬೇಕಂತೆ!

ಅಮಿತಾಭ್ ಸದ್ಯ ‘ಕಲ್ಕಿ 2898 ಎಡಿ’ ಚಿತ್ರದ ಸೀಕ್ವೆಲ್ ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಕುರಿತು ಮತ್ತೊಂದು ಪೋಸ್ಟ್‌ನಲ್ಲಿ ತಮಾಷೆಯಾಗಿ ಬರೆದುಕೊಂಡಿದ್ದ ಅವರು, ‘ದಿನದ 24 ಗಂಟೆಗಳಲ್ಲಿ ಮಾಡಲು ತುಂಬಾ ಕೆಲಸಗಳಿವೆ, ಸಮಯವೇ ಸಾಲುತ್ತಿಲ್ಲ. ದಿನಕ್ಕೆ 36 ಗಂಟೆಗಳಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ಒಂದು ವೇಳೆ 36 ಗಂಟೆ ಸಿಕ್ಕರೆ, ಆಗ ಮನುಷ್ಯ 48 ಗಂಟೆ ಬೇಕು ಎನ್ನಬಹುದು, ಅದು ಜೀವನದ ತತ್ವ. ಆದರೆ ಕಲಿಯಲು, ಸಾಧಿಸಲು ತುಂಬಾ ಇದೆ, ಸಮಯ ಮಾತ್ರ ಕಡಿಮೆ’ ಎಂದು ಬರೆದಿದ್ದಾರೆ. ಅಲ್ಲದೆ, ಸದಾ ನಮ್ಮನ್ನು ನಾವು ಶ್ರೇಷ್ಠ ಅಂದುಕೊಳ್ಳಬಾರದು, ನಮ್ಮನ್ನು ಮೀರಿಸುವವರು ಜಗತ್ತಿನಲ್ಲಿ ಇರುತ್ತಾರೆ, ಪರರ ಕೆಲಸವನ್ನು ಗೌರವಿಸಬೇಕು ಎಂಬ ಜೀವನದ ತತ್ವವನ್ನೂ ಅವರು ಹಂಚಿಕೊಂಡಿದ್ದಾರೆ.

‘ಕಲ್ಕಿ 2’ ಚಿತ್ರದಲ್ಲಿ ಮತ್ತೆ ಅಶ್ವತ್ಥಾಮ:

ನಾಗ್ ಅಶ್ವಿನ್ ನಿರ್ದೇಶನದ ‘ಕಲ್ಕಿ 2898 ಎಡಿ’ ಚಿತ್ರದ ಎರಡನೇ ಭಾಗದ ಕೆಲಸಗಳು ಈಗಾಗಲೇ ಆರಂಭವಾಗಿವೆ ಎಂದು ಬಿಗ್ ಬಿ ಖಚಿತಪಡಿಸಿದ್ದಾರೆ. ಈ ಚಿತ್ರದಲ್ಲಿ ಅವರು ಮತ್ತೊಮ್ಮೆ ಅಶ್ವತ್ಥಾಮನಾಗಿ ಅಬ್ಬರಿಸಲಿದ್ದಾರೆ. ಈ ಸೀಕ್ವೆಲ್‌ನಲ್ಲಿ ಅಮಿತಾಭ್ ಜೊತೆಗೆ ಪ್ರಭಾಸ್ ಹಾಗೂ ಕಮಲ್ ಹಾಸನ್ ಕಾಣಿಸಿಕೊಳ್ಳಲಿದ್ದಾರೆ. ಆದರೆ, ಮೊದಲ ಭಾಗದಲ್ಲಿದ್ದ ದೀಪಿಕಾ ಪಡುಕೋಣೆ ಈ ಚಿತ್ರದಲ್ಲಿ ಇರುವುದಿಲ್ಲ ಎನ್ನಲಾಗಿದ್ದು, ಅವರ ಜಾಗಕ್ಕೆ ಸಾಯಿ ಪಲ್ಲವಿ ಬರಲಿದ್ದಾರೆ ಎಂಬ ವದಂತಿ ಇದೆ. ಆದರೆ ಈ ಬಗ್ಗೆ ಚಿತ್ರತಂಡ ಇನ್ನು ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಸದ್ಯ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:33 am, Sat, 20 June 26

Source link

ಮಹಿಳೆಯರೇ, ಇನ್ಮುಂದೆ ಉಚಿತವಾಗಿ ಬಸ್ಸಲ್ಲಿ ಹೋಗ್ಬೇಕಿದ್ರೆ ವೋಟರ್ ಐಡಿ ಬೇಕೇಬೇಕು! ಶಕ್ತಿ ಯೋಜನೆ ದುರ್ಬಳಕೆ ತಡೆಗೆ ಸರ್ಕಾರ ಕ್ರಮ – Kannada News | Shakti Scheme Revision: Karnataka Govt to Issue Smart Cards with Voter ID Mandatory to Stop Misuse by Other State Women

ಬಿಎಂಟಿಸಿ ಬಸ್ (ಸಾಂದರ್ಭಿಕ ಚಿತ್ರ)Image Credit source: tv9

ಬೆಂಗಳೂರು, ಜೂನ್ 20: ರಾಜ್ಯದ ಮಹಿಳಾ ಪ್ರಯಾಣಿಕರಿಗಾಗಿ ಕೆಎಸ್ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ಬಸ್ಸುಗಳಲ್ಲಿ ಉಚಿತವಾಗಿ ಸಂಚಾರ ಮಾಡಲು ಅವಕಾಶ ಕಲ್ಪಿಸಿರುವ ‘ಶಕ್ತಿ’ ಯೋಜನೆಗೆ (Shakti Scheme) ಈಗ ದೊಡ್ಡ ಮಟ್ಟದ ಪರಿಷ್ಕರಣೆ ತರಲು ಸರ್ಕಾರ ಮುಂದಾಗಿದೆ. ಯೋಜನೆ ಜಾರಿಯಾದ ದಿನದಿಂದಲೂ ನಕಲಿ ಆಧಾರ್ ಕಾರ್ಡ್‌ಗಳನ್ನು ಸೃಷ್ಟಿಸಿ, ಬೇರೆ ರಾಜ್ಯಗಳ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿರುವ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಇದರಿಂದ ಸಾರಿಗೆ ನಿಗಮಗಳಿಗೆ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗುತ್ತಿದ್ದು, ಇದಕ್ಕೆ ಶಾಶ್ವತ ಕಡಿವಾಣ ಹಾಕಲು ಸಾರಿಗೆ ಇಲಾಖೆಯು ಸ್ಮಾರ್ಟ್ ಕಾರ್ಡ್ ವಿತರಣಾ ಪ್ರಕ್ರಿಯೆಯನ್ನು ಚುರುಕುಗೊಳಿಸಿದೆ.

ಮುಖ್ಯಾಂಶಗಳು

  • ಶಕ್ತಿ ಯೋಜನೆ ದುರ್ಬಳಕೆಗೆ ಬ್ರೇಕ್.
  • ವೋಟರ್ ಐಡಿ ಇದ್ದವರಿಗಷ್ಟೇ ಸ್ಮಾರ್ಟ್ ಕಾರ್ಡ್.
  • ಪ್ರಾಯೋಗಿಕವಾಗಿ ಬಿಎಂಟಿಸಿಯಲ್ಲಿ ಮೊದಲು ಜಾರಿ.

ವೋಟರ್ ಐಡಿ ಕಡ್ಡಾಯ, ದುರ್ಬಳಕೆಗೆ ಬ್ರೇಕ್

ಬೇರೆ ರಾಜ್ಯಗಳ ಮಹಿಳೆಯರ ಉಚಿತ ಪ್ರಯಾಣಕ್ಕೆ ಬ್ರೇಕ್ ಹಾಕಲು ರಾಜ್ಯದ ವೋಟರ್ ಐಡಿ (ಮತದಾರರ ಗುರುತಿನ ಚೀಟಿ) ಹೊಂದಿರುವವರಿಗೆ ಮಾತ್ರ ಈ ಸ್ಮಾರ್ಟ್ ಕಾರ್ಡ್ ನೀಡಲು ಸರ್ಕಾರ ಪ್ಲಾನ್ ಮಾಡಿದೆ. ಫಲಾನುಭವಿಗಳು ತಮ್ಮ ವೋಟರ್ ಐಡಿ ಮತ್ತು ಆಧಾರ್ ಕಾರ್ಡ್ ಸಲ್ಲಿಸಿ ಸ್ಮಾರ್ಟ್ ಕಾರ್ಡ್‌ಗಳನ್ನು ಪಡೆದುಕೊಳ್ಳಬಹುದು. ಈ ಸ್ಮಾರ್ಟ್ ಕಾರ್ಡ್‌ನಲ್ಲಿ ಫಲಾನುಭವಿಯ ಹೆಸರು, ಭಾವಚಿತ್ರ, ಆಧಾರ್ ಸಂಖ್ಯೆ ಮತ್ತು ವಿಳಾಸದ ಸಂಪೂರ್ಣ ವಿವರಗಳನ್ನು ಮುದ್ರಿಸಲಾಗಿರುತ್ತದೆ. ಅತ್ಯಂತ ಪ್ರಮುಖವಾಗಿ, ಈ ಕಾರ್ಡ್ ಅನ್ನು ಇತರರಿಗೆ ವರ್ಗಾಯಿಸಲು (Transfer) ಯಾವುದೇ ಅವಕಾಶವಿರುವುದಿಲ್ಲ. ರಾಜ್ಯಾದ್ಯಂತ ಒಟ್ಟು 3 ಕೋಟಿ ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಿಸುವ ಬೃಹತ್ ಗುರಿಯನ್ನು ಸರ್ಕಾರ ಹೊಂದಿದೆ.

ಮೆಟ್ರೋದಲ್ಲೂ ಸಂಚಾರ ಲಭ್ಯ: ಬಿಎಂಟಿಸಿಯಲ್ಲಿ ಮೊದಲ ಪ್ರಯೋಗ

ಈ ಸ್ಮಾರ್ಟ್ ಕಾರ್ಡ್ ವಿತರಣಾ ಪ್ರಕ್ರಿಯೆಯು ಪ್ರಾಯೋಗಿಕವಾಗಿ ಮೊದಲು ಬೆಂಗಳೂರಿನ ಬಿಎಂಟಿಸಿ (BMTC) ವ್ಯಾಪ್ತಿಯಲ್ಲಿ ಜಾರಿಗೆ ಬರಲಿದ್ದು, ತದನಂತರ ಉಳಿದ ಮೂರು ಸಾರಿಗೆ ನಿಗಮಗಳ ಮಹಿಳಾ ಪ್ರಯಾಣಿಕರಿಗೂ ವಿಸ್ತರಿಸಲಾಗುವುದು. ಬಿಎಂಟಿಸಿ ಈಗಾಗಲೇ ಗುತ್ತಿಗೆ ಆಧಾರದ ಮೇಲೆ 11,000 ಸುಧಾರಿತ ಇಟಿಎಂ (ETM) ಯಂತ್ರಗಳನ್ನು ಪಡೆದುಕೊಂಡಿದೆ. ಈ ಸ್ಮಾರ್ಟ್ ಕಾರ್ಡ್‌ಗಳಲ್ಲಿ ಅತ್ಯಾಧುನಿಕ ಎನ್‌ಎಫ್‌ಸಿ (NFC – Near Field Communication) ತಂತ್ರಜ್ಞಾನವನ್ನು ಬಳಸಲಾಗುತ್ತಿದ್ದು, ಬಸ್ಸುಗಳ ಜೊತೆಗೆ ‘ನಮ್ಮ ಮೆಟ್ರೋ’ ಸಂಚಾರಕ್ಕೂ ಇವುಗಳನ್ನು ಬಳಸಲು ಅವಕಾಶ ಕಲ್ಪಿಸಲಾಗಿದೆ.

ಉಚಿತ ವಿತರಣೆ: ಅರ್ಜಿ ಸಲ್ಲಿಕೆ ಹೇಗೆ?

ಅರ್ಹ ಮಹಿಳೆಯರಿಗೆ ಹಾಗೂ ತೃತೀಯ ಲಿಂಗಿಗಳಿಗೆ ಈ ಸ್ಮಾರ್ಟ್ ಕಾರ್ಡ್‌ಗಳನ್ನು ಸಂಪೂರ್ಣ ಉಚಿತವಾಗಿ ವಿತರಣೆ ಮಾಡಲಾಗುತ್ತದೆ. ಸಾರ್ವಜನಿಕರು ಬೆಂಗಳೂರು ಒನ್, ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರ ಹಾಗೂ ಸೈಬರ್ ಸೆಂಟರ್‌ಗಳಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಕಾರ್ಡ್‌ಗಳನ್ನು ಪಡೆದುಕೊಳ್ಳಬಹುದು. ಇದಲ್ಲದೆ ರಾಜ್ಯದ ಎಲ್ಲಾ ಪ್ರಮುಖ ಬಸ್ ನಿಲ್ದಾಣಗಳಲ್ಲೂ ಸ್ಮಾರ್ಟ್ ಕಾರ್ಡ್ ವಿತರಣಾ ಕೌಂಟರ್‌ಗಳನ್ನು ತೆರೆಯಲಾಗುತ್ತದೆ. ಸರ್ಕಾರದ ಈ ಕಠಿಣ ಕ್ರಮವನ್ನು ಮಹಿಳಾ ಪ್ರಯಾಣಿಕರು ಸ್ವಾಗತಿಸಿದ್ದು, ನಿಜವಾದ ಫಲಾನುಭವಿಗಳಿಗೆ ಇದರಿಂದ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೊದಲ ದಿನವೇ ಕೋಟಿ ಕೋಟಿ ಲೂಟಿ ಮಾಡಿದ ‘ಕಾಕ್‌ಟೇಲ್ 2’ ಮತ್ತು ‘ಮಾ ಇಂಟಿ ಬಂಗಾರಂ’ – Kannada News | Cocktail 2 and Ma Inti Bangaram: Stupendous Day 1 Box Office Collections Post IPL Fever

ಐಪಿಎಲ್ ಜ್ವರ ಮುಗಿದ ಬೆನ್ನಲ್ಲೇ ದೊಡ್ಡ ದೊಡ್ಡ ಸಿನಿಮಾಗಳು ರಿಲೀಸ್ ಆಗುತ್ತಿವೆ. ಪ್ರೇಕ್ಷಕರು ಕೂಡ ಚಿತ್ರಮಂದಿರಗಳತ್ತ ನಿಧಾನವಾಗಿ ಮುಖ ಮಾಡುತ್ತಿದ್ದಾರೆ. ಸದ್ಯ ಬಾಕ್ಸ್ ಆಫೀಸ್‌ನಲ್ಲಿ ಒಂದೇ ದಿನ ಎರಡು ಬಹುನಿರೀಕ್ಷಿತ ಸಿನಿಮಾಗಳು ತೆರೆಕಂಡಿವೆ. ಹಿಂದಿಯಲ್ಲಿ ಶಾಹಿದ್ ಕಪೂರ್, ರಶ್ಮಿಕಾ ಮಂದಣ್ಣ (Rashmika Mandanna), ಕೃತಿ ಸನೋನ್ ನಟನೆಯ ‘ಕಾಕ್​​ಟೇಲ್ 2’, ತೆಲುಗಿನಲ್ಲಿ ಸಮಂತಾ ನಟನೆಯ ‘ಮಾ ಇಂಟಿ ಬಂಗಾರಂ’ ತೆರೆಗೆ ಬಂದಿವೆ. ಭರ್ಜರಿ ಪೈಪೋಟಿಯ ನಡುವೆಯೂ ಎರಡೂ ಚಿತ್ರಗಳು ಮೊದಲ ದಿನವೇ ಪ್ರೇಕ್ಷಕರನ್ನು ಸೆಳೆದು ಅತ್ಯುತ್ತಮ ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿವೆ.

10 ಸಾವಿರಕ್ಕೂ ಅಧಿಕ ಶೋಗಳಲ್ಲಿ ‘ಕಾಕ್‌ಟೇಲ್ 2’ ಅಬ್ಬರ!

ಭಾರಿ ನಿರೀಕ್ಷೆ ಮೂಡಿಸಿದ್ದ ‘ಕಾಕ್‌ಟೇಲ್ 2’ ಸಿನಿಮಾ ಮೊದಲ ದಿನ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದೆ. ದೇಶಾದ್ಯಂತ ಬರೋಬ್ಬರಿ 10,835 ಶೋಗಳನ್ನು ಪಡೆದುಕೊಂಡಿದ್ದ ಈ ಚಿತ್ರ, ಕೆಲವು ಕಡೆ ಹೌಸ್‌ಫುಲ್ ಪ್ರದರ್ಶನ ಕಂಡಿದೆ. ಈ ಚಿತ್ರಕ್ಕೆ ಹೆಚ್ಚಿನ ಶೋ ಸಿಕ್ಕಿದ್ದರಿಂದ ಗಳಿಕೆ ಜೋರಾಗಿದೆ. ಈ ಸಿನಿಮಾ ಅಕ್ಯುಪೆನ್ಸಿ ಕೇವಲ 21 ಪರ್ಸೆಂಟ್ ಮಾತ್ರ ಇತ್ತು ಎಂಬುದು ಆತಂಕದ ವಿಷಯ. ಅಂದರೆ 100 ಚೇರ್​​ಗಳಿದ್ದ ಚಿತ್ರಮಂದಿರಕ್ಕೆ ಬಂದಿದ್ದು ಕೇವಲ 21 ಜನರು ಮಾತ್ರ.

ಮೊದಲ ದಿನವೇ ಈ ಸಿನಿಮಾ ಭಾರತದಲ್ಲಿ ಒಟ್ಟು 13.50 ಕೋಟಿ ನೆಟ್ ಕಲೆಕ್ಷನ್ ಮಾಡುವಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ ಭಾರತದ ಒಟ್ಟು ಗ್ರಾಸ್ ಕಲೆಕ್ಷನ್ 16.20 ಕೋಟಿ ರೂಪಾಯಿ ತಲುಪಿದೆ. ಇನ್ನು ವಿದೇಶದಲ್ಲೂ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಒಟ್ಟು 4.00 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಆಗಿದೆ. ಈ ಮೂಲಕ ‘ಕಾಕ್‌ಟೇಲ್ 2’ ಮೊದಲ ದಿನವೇ ವಿಶ್ವಾದ್ಯಂತ ಒಟ್ಟು 20.20 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ.

‘ಮಾ ಇಂಟಿ ಬಂಗಾರಂ’ ಗಳಿಕೆ

‘ಕಾಕ್‌ಟೇಲ್ 2’ ಚಿತ್ರದ ಭಾರಿ ಪೈಪೋಟಿಯ ನಡುವೆಯೂ ‘ಮಾ ಇಂಟಿ ಬಂಗಾರಂ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅದ್ಭುತ ಗಳಿಕೆ ಮಾಡಿದೆ. ಕಡಿಮೆ ಶೋಗಳು ಸಿಕ್ಕಿದ್ದರೂ ಸಹ ಪ್ರೇಕ್ಷಕರು ಚಿತ್ರಮಂದಿರಕ್ಕೆ ಮುಗಿಬಿದ್ದಿದ್ದಾರೆ.

ಇದನ್ನೂ ಓದಿ:  ‘ಕಾಕ್‌ಟೇಲ್ 2’ ಚಿತ್ರದಲ್ಲಿ ಸಲಿಂಗಿಗಳ ಪಾತ್ರ ಮಾಡಿದ್ದಾರಾ ರಶ್ಮಿಕಾ ಮಂದಣ್ಣ, ಕೃತಿ ಸನನ್?

ದೇಶಾದ್ಯಂತ ಒಟ್ಟು 2,658 ಶೋಗಳಲ್ಲಿ ಪ್ರದರ್ಶನ ಕಂಡ ಈ ಸಿನಿಮಾ, ಮೊದಲ ದಿನವೇ ಭಾರತದಲ್ಲಿ 5.35 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಇದರಿಂದ ಭಾರತದ ಒಟ್ಟು ಗ್ರಾಸ್ ಗಳಿಕೆ 6.20 ಕೋಟಿ ರೂಪಾಯಿ ಆಗಿದೆ. ವಿಶೇಷವೆಂದರೆ, ವಿದೇಶಿ ಮಾರುಕಟ್ಟೆಯಲ್ಲಿ ಈ ಚಿತ್ರಕ್ಕೆ ಅಭೂತಪೂರ್ವ ಬೆಂಬಲ ಸಿಕ್ಕಿದ್ದು, ಬರೋಬ್ಬರಿ 4.50 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಇದರೊಂದಿಗೆ ಚಿತ್ರದ ಮೊದಲ ದಿನದ ಒಟ್ಟು ವಿಶ್ವವ್ಯಾಪಿ ಗ್ರಾಸ್ ಗಳಿಕೆ 10.70 ಕೋಟಿ ರೂಪಾಯಿ ದಾಟಿದೆ. ಈ ಚಿತ್ರಕ್ಕೆ 37ರಷ್ಟು ಆಕ್ಯುಪೆನ್ಸಿ ಇತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆ; ಬೆಂಗಳೂರಿನಲ್ಲಿ ವೀಕೆಂಡ್ ಕೂಲ್ ಕೂಲ್ – Kannada News | Karnataka Rain Alert: Monsoon Intensifies, Bangalore to See Heavy Rain and Wind Today

ಬೆಂಳೂಗರಿನಲ್ಲಿ ಇಂದು ಮಳೆ Image Credit source: Tv9 kannada

ಬೆಂಗಳೂರು, ಜೂ.20: ರಾಜಧಾನಿ ಬೆಂಗಳೂರಿನಲ್ಲಿ ಇಂದು ವಾರಾಂತ್ಯದ ಮಜಾವನ್ನು ಹೆಚ್ಚಿಸುವಂತಹ ತಂಪಾದ ವಾತಾವರಣವಿರಲಿದೆ. ನೈಋತ್ಯ ಮುಂಗಾರು ಚುರುಕಾಗಿರುವುದರಿಂದ ನಗರದ ಹಲವು ಭಾಗಗಳಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಇದರ ಜತೆಗೆ ಇಂದು ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಅದೇ ರೀತಿ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಬಿರುಗಾಳಿ ಹಾಗೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲಿ ಇಂದು ಗರಿಷ್ಠ ತಾಪಮಾನ 29°C ರಿಂದ 30°C (ಸಾಮಾನ್ಯಕ್ಕಿಂತ 1 ಡಿಗ್ರಿ ಕಡಿಮೆ) ಇರಲಿದೆ. 21°C ರಿಂದ 22°C (ರಾತ್ರಿಯ ವೇಳೆ ತಂಪು ಗಾಳಿ ಹೆಚ್ಚಿರಲಿದೆ). ಕನಿಷ್ಠ ತಾಪಮಾನ ಇದೆ. ಹಗಲಿನಲ್ಲಿ ಶೇ. 40 ರಷ್ಟು ಹಾಗೂ ಸಂಜೆ/ರಾತ್ರಿಯ ವೇಳೆ ಶೇ. 65 ರಷ್ಟು ಮಳೆಯಾಗಲಿದೆ ಎಂದು ಹೇಳಲಾಗಿದೆ. ಪಶ್ಚಿಮ ದಿಕ್ಕಿನಿಂದ ಗಂಟೆಗೆ ಸುಮಾರು 15 ರಿಂದ 25 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಕೆಲವು ಸಂದರ್ಭಗಳಲ್ಲಿ ಗಾಳಿಯ ವೇಗ ಗಂಟೆಗೆ 40 ಕಿ.ಮೀ ತಲುಪಬಹುದು. ಆಕಾಶವು ಸಾಮಾನ್ಯವಾಗಿ ಮೋಡ ಕವಿದ ವಾತಾವರಣದಿಂದ ಕೂಡಿರಲಿದ್ದು, ಅಲ್ಲಲ್ಲಿ ಹಗುರವಾದ ತುಂತುರು ಮಳೆಯಾಗಬಹುದು. ಬಿಸಿಲಿನ ಬೇಗೆ ಇರುವುದಿಲ್ಲ. ಸಂಜೆಯಾಗುತ್ತಲೇ ನಗರದ ಹಲವು ಪ್ರದೇಶಗಳಲ್ಲಿ (ವಿಶೇಷವಾಗಿ ಎಂ.ಜಿ. ರಸ್ತೆ, ವೈಟ್‌ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ, ಜಯನಗರ, ಯಶವಂತಪುರ ಭಾಗಗಳಲ್ಲಿ) ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ರಾತ್ರಿಯ ವೇಳೆಗೆ ಚಳಿ ಮತ್ತು ತಂಪಾದ ಗಾಳಿ ಹೆಚ್ಚಾಗಲಿದೆ.

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಈ ಮೂರೂ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಇಂದು ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಸಮುದ್ರ ತೀರದಲ್ಲಿ ಗಾಳಿಯ ವೇಗ ಹೆಚ್ಚಿರಲಿದ್ದು, ನಾಳೆಯಿಂದ (ಜೂನ್ 21) ಕರಾವಳಿಯಲ್ಲಿ ‘ಭಾರೀ ಮಳೆ’ಯ ಮುನ್ಸೂಚನೆ ನೀಡಲಾಗಿದೆ.

ಇದನ್ನೂ ಓದಿ: ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ

ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಬೀದರ್, ಕಲ್ಬುರ್ಗಿ, ಯಾದಗಿರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಬೀಸುವ ಬಲವಾದ ಗಾಳಿ ಹಾಗೂ ಗುಡುಗು-ಮಿಂಚು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ ಮತ್ತು ವಿಜಯಾಪುರ ಜಿಲ್ಲೆಗಳಲ್ಲಿ ಒಣ ಹವಾಮಾನದೊಂದಿಗೆ ಕೆಲವು ಕಡೆಗಳಲ್ಲಿ ಹಗುರ ತುಂತುರು ಮಳೆಯಾಗಬಹುದು. ಜೊತೆಗೆ ಸೆಖೆಯ ವಾತಾವರಣ ಇದರಲಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:52 am, Sat, 20 June 26

Source link