All posts by nagaraj11081993

Bidadi Township Project: ಬಿಡದಿ ರೈತರಿಗೆ ಪ್ರತಿ ಎಕರೆಗೆ 2.3 ಕೋಟಿ ರೂ. ಪರಿಹಾರ! ಚೆಕ್ ವಿತರಣೆ ಶುರು – Kannada News | Bidadi Township Project: Compensation of Rs 2.3 Crore Per Acre Starts, MLA HC Balakrishna Hands Over Checks to Farmers

ಶಾಸಕ ಹೆಚ್​ಸಿ ಬಾಲಕೃಷ್ಣ ಹಾಗೂ ಪರಿಹಾರ ಪಡೆದ ರೈತ ಮಹಿಳೆ ಜಾನಕಮ್ಮImage Credit source: tv9

ರಾಮನಗರ, ಜೂನ್ 20: ರಾಜ್ಯ ಸರ್ಕಾರದ ಬಿಡದಿ ಟೌನ್‌ಶಿಪ್ ಯೋಜನೆ (Bidadi Township Project) ಬಗ್ಗೆ ಪರ ಹಾಗೂ ವಿರೋಧದ ಜಟಾಪಟಿ ತಾರಕಕ್ಕೇರಿದೆ. ಸುಮಾರು 516 ಎಕರೆಗೂ ಹೆಚ್ಚು ವ್ಯಾಪ್ತಿಯ ಭೂಸ್ವಾಧೀನ ವಿರೋಧಿಸಿ ಭಾನುವಾರ ಜೆಡಿಎಸ್ ಹಾಗೂ ರೈತ ಸಂಘಟನೆಗಳು ಬೃಹತ್ ಪಾದಯಾತ್ರೆ ಹಮ್ಮಿಕೊಂಡಿವೆ. ಬಿಡದಿ ಟೌನ್‌ಶಿಪ್ ಹೆಸರಿನಲ್ಲಿ ಬರೋಬ್ಬರಿ 33,562 ಕೋಟಿ ರೂ. ರಿಯಲ್ ಎಸ್ಟೇಟ್‌ ದಂಧೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಆದರೆ ಇದೆಲ್ಲದರ ನಡುವೆ, ವಿರೋಧ ಲೆಕ್ಕಿಸದ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಭೂಮಿ ನೀಡುವ ರೈತರಿಗೆ ಪರಿಹಾರದ ಚೆಕ್ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿದೆ. ರಾಮನಗರದ ಕಂದಾಯ ಭವನದಲ್ಲಿರುವ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಶಾಸಕ ಹೆಚ್.ಸಿ.ಬಾಲಕೃಷ್ಣ ನೇತೃತ್ವದಲ್ಲಿ ರೈತರಿಗೆ ಚೆಕ್ ಹಸ್ತಾಂತರಿಲಾಯಿತು. ಕೆಂಪಯ್ಯನಪಾಳ್ಯ, ವಡೇರಹಳ್ಳಿ, ಮುಂಡಹಳ್ಳಿ ಈ 3 ಕಂದಾಯ ಗ್ರಾಮಗಳ ಪೈಕಿ ಈವರೆಗೆ 270 ರೈತರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದು, ಮೊದಲ ಹಂತದಲ್ಲಿ ಕೆಂಪಯ್ಯನಪಾಳ್ಯದ 10ರೈತರಿಗೆ ಸಾಂಕೇತಿಕವಾಗಿ ಚೆಕ್ ನೀಡಲಾಯಿತು. ಕೆಂಪಯ್ಯನ ಪಾಳ್ಯದಲ್ಲಿ 1 ಎಕರೆ ಜಮೀನಿಗೆ 2,07,30,000 ರೂಪಾಯಿ ನಿಗದಿಪಡಿಸಿದೆ.

ಮುಖ್ಯಾಂಶಗಳು

  • ಬಿಡದಿ ಟೌನ್‌ಶಿಪ್ ಯೋಜನೆ ಭೂಸ್ವಾಧೀನ ಪ್ರಕ್ರಿಯೆ ಚುರುಕು
  • ಭೂಮಿ ನೀಡಿದ ರೈತರಿಗೆ ಪರಿಹಾರ ವಿತರಣೆ ಶುರು
  • ಯೋಜನೆ ವಿರೋಧಿಸಿ ಪ್ರತಿಪಕ್ಷಗಳಿಂದ ಭಾನುವಾರ ಪ್ರತಿಭಟನೆ

ರೈತ ಮಹಿಳೆ ಜಾನಕಮ್ಮ ಎಂಬವರು ಸರ್ಕಾರಕ್ಕೆ 1 ಎಕರೆ ಜಮೀನನ್ನು ಬಿಟ್ಟುಕೊಟ್ಟಿದ್ದು, ಈ ಪೈಕಿ 18 ಗುಂಟೆಗೆ 1,00,52,386 ರೂಪಾಯಿ ಪಡೆದಿದ್ದಾರೆ. ಇನ್ನುಳಿದ 22 ಗುಂಟೆಗೆ ನಿವೇಶನ ಪಡೆಯಲು ಒಪ್ಪಿದ್ದಾರೆ. ಪರಿಹಾರದ ಚೆಕ್ ಪಡೆದ ಮಹಿಳೆ ತಮಗೆ ತೃಪ್ತಿಯಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು 6 ಗುಂಟೆ ಜಮೀನನ್ನು ಸರ್ಕಾರ ಬಿಟ್ಟುಕೊಟ್ಟ ಗಿರೀಶ್ ಎಂಬವರಿಗೆ 36,47,083 ರೂಪಾಯಿ ಪರಿಹಾರ ಸಿಕ್ಕಿದೆ.

ಭೂಮಿ ಜೊತೆಗೆ ಜಮೀನಿನಲ್ಲಿ‌ರುವ ವಾಣಿಜ್ಯ ಬೆಳೆಗೂ ಪರಿಹಾರ

  • ತೆಂಗಿನ ಮರಕ್ಕೆ – 40,446
  • ಮಾವಿನ ಮರ – 62,000
  • ಅಡಕೆ ಮರಕ್ಕೆ – 7,440
  • ಬಾಳೆ ಪ್ರತಿ ಎಕರೆಗೆ – 10.86ಲಕ್ಷ
  • ರೇಷ್ಮೆ ಪ್ರತಿ ಎಕರೆಗೆ – 14 ಲಕ್ಷ
  • ಪಪ್ಪಾಯ ಪ್ರತಿ ಎಕರೆಗೆ – 12ಲಕ್ಷ
  • ಹಲಸು ಪ್ರತಿ ಎಕರೆಗೆ – 42,750
  • ಹುಣಸೆ ಪ್ರತಿ ಎಕರೆಗೆ – 53,310
  • ಸಪೋಟ ಪ್ರತಿ ಎಕರೆಗೆ – 43,166

ಪರಿಹಾರ ಕೊಡಿಸದಿದ್ದರೆ ರಾಜಕೀಯ ನಿವೃತ್ತಿ: ಬಿಜೆಪಿ, ಜೆಡಿಎಸ್​ಗೆ ಶಾಸಕ ಬಾಲಕೃಷ್ಣ ಸವಾಲು

ರೈತರಿಗೆ ಪರಿಹಾರ ನೀಡಲು ಸರ್ಕಾರದ ಬಳಿ ಹಣವಿಲ್ಲ ಎಂದ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಶಾಸಕ ಹೆಚ್.ಸಿ.ಬಾಲಕೃಷ್ಣ ತಿರುಗೇಟು ನೀಡಿದ್ದಾರೆ. ಪರಿಹಾರ ಕೊಡಿಸದಿದ್ದರೆ ರಾಜಕೀಯ ನಿವೃತ್ತಿಯಾಗುವೆ ಎಂದಿದ್ದಾರೆ.

ಇದನ್ನೂ ಓದಿ: ಬಿಡದಿ ಟೌನ್‌ಶಿಪ್‌: ಜಮೀನು ಕೊಟ್ಟವರಿಗೆ 2 ಕೋಟಿ ಅಥವಾ 50*50 ನಿವೇಶನ: ರೈತರಿಗೆ ಡಿಕೆಶಿ ಆಫರ್

ಒಟ್ಟಿನಲ್ಲಿ, ವಿರೋಧದ ಮಧ್ಯೆಯೂ ರೈತರಿಗೆ ಪರಿಹಾರ ವಿತರಣೆಗೆ ಚಾಲನೆ ಸಿಕ್ಕಿದೆ. ಯೋಜನೆಯನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರಾ? ಪ್ರತಿಭಟನೆ ಜೋರಾಗಲಿದೆಯಾ ಎಂಬುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ – Kannada News | Aries Zodiac Sign: June 20, 2026 Horoscope and Astrological Predictions.

ಬೆಂಗಳೂರು, ಜೂ.20: ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಇಂದು, 20-06-2026, ಶನಿವಾರ, ಪರಾಭವ ನಾಮ ಸಂವತ್ಸರ, ಉತ್ತರಾಯಣ, ಜೇಷ್ಠ ಮಾಸ, ಗ್ರೀಷ್ಮ ಋತು, ಶುಕ್ಲ ಪಕ್ಷ, ಷಷ್ಠಿ, ಮಖಾ ನಕ್ಷತ್ರ, ವಜ್ರ ಯೋಗ, ಕೌಲವ ಕರಣ ಇರತಕ್ಕಂತ ಮಂಗಳಕರ ದಿನವಾಗಿದೆ. ಈ ದಿನದ ರಾಹುಕಾಲ ಬೆಳಿಗ್ಗೆ 9 ಗಂಟೆ 7 ನಿಮಿಷದಿಂದ 10 ಗಂಟೆ 43 ನಿಮಿಷದವರೆಗೆ ಇರುತ್ತದೆ. ಸರ್ವ ಸಿದ್ಧಿ, ಸಂಕಲ್ಪ ಮತ್ತು ಶುಭ ಕಾರ್ಯಗಳಿಗೆ ಸೂಕ್ತವಾದ ಶುಭ ಕಾಲ ಮಧ್ಯಾಹ್ನ 1 ಗಂಟೆ 57 ನಿಮಿಷದಿಂದ 3 ಗಂಟೆ 34 ನಿಮಿಷದವರೆಗೆ ಇರುತ್ತದೆ. ಇಂದು ಶನೇಶ್ವರ, ವೆಂಕಟೇಶ್ವರ ಮತ್ತು ಹನುಮಂತನಿಗೆ ಮೀಸಲಾದ ವಿಶೇಷ ದಿನವಾಗಿದ್ದು, ಈ ಮೂರು ದೇವರಲ್ಲಿ ಯಾವುದನ್ನಾದರೂ ಆರಾಧಿಸಲು ಅತ್ಯಂತ ಪವಿತ್ರವಾಗಿದೆ. ಅರಣ್ಯ ಗೌರಿ ವ್ರತ ಮತ್ತು ಕಾಳಿಕಾ ವ್ರತವನ್ನು ಆಚರಿಸಲು ಇದು ಉತ್ತಮ ದಿನವಾಗಿದೆ. ಚಳ್ಳಕೆರೆಯಲ್ಲಿ ಎರ್ರಿಸ್ವಾಮಿಗಳ ರಥೋತ್ಸವ ಕೂಡ ನಡೆಯುವ ದಿನವಾಗಿದೆ. ರವಿ ಮಿಥುನ ರಾಶಿಯಲ್ಲಿ ಮತ್ತು ಚಂದ್ರ ಸಿಂಹ ರಾಶಿಯ ಮಖಾ ನಕ್ಷತ್ರದಲ್ಲಿ ಸಂಚರಿಸುತ್ತಿದ್ದಾನೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಸುಲಭದ ವಿಧಾನ! – Kannada News | Astrology Tips to Recover Pledged Gold: Dr Basavaraja Guruji Explains Simple Friday Ritual to Get Back Mortgaged Ornaments

ಜೀವನದಲ್ಲಿ ಕಷ್ಟಗಳು ಬಂದಾಗ ಆಭರಣಗಳನ್ನು ಅಡವಿಡುವುದು ಸಾಮಾನ್ಯ. ಆದರೆ, ಇಟ್ಟ ಚಿನ್ನಾಭರಣಗಳನ್ನು ಮರಳಿ ಪಡೆಯುವುದು ಹಲವರಿಗೆ ಸವಾಲಾಗಿದೆ. ಇಂತಹ ಸಂದರ್ಭದಲ್ಲಿ ಶಾಸ್ತ್ರಗಳ ಪ್ರಕಾರ ಒಂದು ವಿಶಿಷ್ಟ ವಿಧಾನವನ್ನು ಅನುಸರಿಸುವ ಮೂಲಕ ಅಡವಿಟ್ಟ ಆಭರಣಗಳನ್ನು ಸುಲಭವಾಗಿ ಬಿಡಿಸಿಕೊಳ್ಳಬಹುದು ಎಂದು ಖ್ಯಾತ ಜ್ಯೋತಿಷಿ ಹಾಗೂ ವಾಸ್ತು ತಜ್ಞ ಡಾ. ಬಸವರಾಜ ಗುರೂಜಿ ‘ಟಿವಿ9’ನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ.

ಶುಕ್ರವಾರದಂದು ಬ್ರಾಹ್ಮೀ ಮುಹೂರ್ತದಲ್ಲಿ (ಬೆಳಗ್ಗೆ 6:30ರ ಒಳಗೆ) ಸ್ನಾನ ಮಾಡಿ ಶುಚಿಯಾಗಬೇಕು. ನಂತರ, ಹಳದಿ ಬಟ್ಟೆಯೊಂದನ್ನು ತೆಗೆದುಕೊಂಡು ಅದರಲ್ಲಿ ಎರಡು ಅರಿಶಿನ ಕೊಂಬುಗಳು, ಒಂದು ರೂಪಾಯಿ ನಾಣ್ಯ ಮತ್ತು ಸ್ವಲ್ಪ ಬಿಳಿ ಸಾಸಿವೆಯನ್ನು ಇಟ್ಟು ಗಂಟು ಕಟ್ಟಬೇಕು. ಈ ಗಂಟನ್ನು ಕೈಯಲ್ಲಿ ಹಿಡಿದುಕೊಂಡು ನಿಮ್ಮ ಇಷ್ಟದೇವರು ಅಥವಾ ಕುಲದೇವರಿಗೆ ಪ್ರಾರ್ಥನೆ ಸಲ್ಲಿಸಬೇಕು. ನಂತರ ಅಡವಿಟ್ಟ ಆಭರಣಗಳ ರಸೀದಿಯ ಮೇಲೆ ಈ ಮುಡುಪನ್ನು ಇಟ್ಟು ಪೂರ್ವ ದಿಕ್ಕಿಗೆ ಅಭಿಮುಖವಾಗಿ ಕುಳಿತು, 90 ದಿನಗಳೊಳಗೆ ಆಭರಣಗಳನ್ನು ಬಿಡಿಸಿಕೊಳ್ಳುವ ಶಕ್ತಿಯನ್ನು ಕರುಣಿಸುವಂತೆ ಬೇಡಿಕೊಳ್ಳಬೇಕು.

ಈ ಮುಡುಪನ್ನು ಬೀರು ಅಥವಾ ದೇವರ ಹತ್ತಿರ ಇಡಬೇಕು. ಪ್ರತಿ ಶುಕ್ರವಾರವೂ ಅದೇ ರೀತಿ ಪ್ರಾರ್ಥನೆ ಮಾಡಬೇಕು. ಇದನ್ನು ಮೂರು ಅಥವಾ ಆರು ಶುಕ್ರವಾರಗಳ ಕಾಲ ಮಾಡಿದರೆ, ಖಂಡಿತವಾಗಿಯೂ ಅಡವಿಟ್ಟ ಚಿನ್ನಾಭರಣಗಳನ್ನು ಮರಳಿ ಪಡೆಯಲು ಸಾಧ್ಯವಾಗುತ್ತದೆ ಎಂದು ನಂಬಲಾಗಿದೆ. ಕುಲದೇವರು ಗೊತ್ತಿಲ್ಲದವರು ಶ್ರೀ ವಿಷ್ಣು ಅಥವಾ ಕಲಿಯುಗ ವೆಂಕಟನಾಥನನ್ನು ನೆನೆದು ಓಂ ನಮೋ ವೆಂಕಟೇಶಾಯ ಎಂಬ ಮಂತ್ರವನ್ನು ಜಪಿಸಬಹುದು. ಶ್ರದ್ಧೆ ಮತ್ತು ನಂಬಿಕೆಯಿಂದ ಮಾಡಿದಾಗ ಖಂಡಿತ ಉತ್ತಮ ಫಲಿತಾಂಶ ಲಭಿಸುತ್ತದೆ ಎಂದು ಗುರೂಜಿ ತಿಳಿಸಿದ್ದಾರೆ.

Source link

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಸೋಲಿನಿಂದ ಉತ್ಸಾಹ ವೃದ್ಧಿ… – Kannada News | Dina Rashi Bhavishya June 20, 2026: Daily Horoscope Predictions for Satursday

ಮೇಷ ರಾಶಿ:

ಹೊಂದಾಣಿಕೆಯಿಂದ‌ ಕಾರ್ಯವನ್ನು ಪೂರ್ಣಗೊಳಿಸಲು ಪ್ರಯತ್ನಿಸಿ. ಖುಷಿಯಾಗಿರುವಂತೆ ನಿಮ್ಮ ಸುತ್ತಲನ್ನು ರೂಪಿಸಿಕೊಳ್ಳಿ. ಕೆಳಗಿಳಿದ ಚಕ್ರ ಮೇಲೆ ಏರಲೇ ಬೇಕು. ಪೂರ್ಣ ವಿಚಾರವನ್ನು ತಿಳಿದು ಮಾತನಾಡಿ.‌ ಅರ್ಧವಿಷಯವನ್ನು ತಿಳಿದು ಮಾತನಾಡಿದರೆ ಇನ್ನೊಬ್ಬರಿಗೆ ನೋವಾದೀತು. ಅವರ ಶಾಪಕ್ಕೂ ಗುರಿಯಾಗುವಿರಿ. ಒಂದೇ ಕೆಲಸವನ್ನು ನಿರಂತರ ಮಾಡಿ ಶಿಸ್ತನ್ನು ರೂಢಿಸಿಕೊಳ್ಳಿ. ದೊಡ್ಡ ಕನಸನ್ನು ಇಟ್ಟುಕೊಳ್ಳುವುದು ಸೂಕ್ತವಾಗಬಹುದು.

ವೃಷಭ ರಾಶಿ:

ಯಾವುದಕ್ಕೂ ಇಂತಹ ಸನ್ನಿವೇಶ ಎದುರಾದಾಗ ಮೊದಲು ಯೋಚಿಸಿ. ಪಿತ್ರಾರ್ಜಿತ ಸಂಪತ್ತಗಳು ಸಿಗುವ ಸಾಧ್ಯತೆ ಇದೆ. ಪ್ರತಿಭಾನ್ವಿತರಿಗೆ ಯಾವ ಅನುಕೂಲತೆಗಳೂ ಸಿದ್ಧಿಸದು. ಕುತೂಹಲದ ನಿಮ್ಮ ಸ್ವಭಾವವು ಇಂದು ಎಲ್ಲರಿಗೆ ಗೊತ್ತಾಗಬಹುದು. ಸಭ್ಯತೆಯನ್ನು ರೂಢಿಸಿಕೊಳ್ಳುವುದು ಉತ್ತಮ. ಎಲ್ಲರ ಜೊತೆ ಸೇರಿಕೊಳ್ಳುವುದು ಕೂಡಲೇ ಆಗದು. ಯಾರಾದರೂ ಏನನ್ನಾದರೂ ಬಂದು ಕೇಳಿದರೆ ಇಲ್ಲವೆನ್ನದೇ, ಇರುವಷ್ಟರಲ್ಲಿ ಅಲ್ಪವನ್ನಾದರೂ ಕೊಡಿ. ವ್ಯಾಪಾರಸ್ಥರು ಲಾಭವನ್ನು ಗಳಿಸುವತ್ತ ಯೋಜನೆ ರೂಪಿಸಿಕೊಳ್ಳುವುದು.

ಮಿಥುನ ರಾಶಿ:

ಬಲ್ಲವರಾದ ತಾವು ಸದಾ ಪ್ರಯತ್ನಶೀಲರು. ನಿರಂತರ ಪ್ರಯತ್ನಕ್ಕೆ ಫಲವಿಲ್ಲದಿಲ್ಲ. ಸಮಯವನ್ನು ನೀರೀಕ್ಷಿಸುತ್ತ ಕಾಲ ಕಳೆಯಬೇಕು. ನಿಮ್ಮ ಶತ್ರುವಾಗಿ ಯಾರಿದ್ದಾರೆ ಎನ್ನುವುದು ಗೊತ್ತಾಗದು. ಸಾಗುವ ದಾರಿಯು ಎಷ್ಟೇ ಚೆನ್ನಾಗಿದ್ದರೂ ಒಮ್ಮೆ ಹಿಂತಿರುಗಿ ನೋಡುವುದು ಒಳ್ಳೆಯದು. ಅನ್ಯರ ಜೊತೆಗಿನ ಅಸಂಬದ್ಧ ಮಾತುಕತೆಗಳನ್ನು ನಿಲ್ಲಿಸಿ. ದೈವಾನುಗ್ರಹದ ಅವಶ್ಯಕತೆ ಬಹಳ ಇದೆ. ಭವಿಷ್ಯದ ಬಗ್ಗೆ ಏನೇನೋ ಕಲ್ಪನೆಯನ್ನು ಇಟ್ಟುಕೊಂಡು ಹತಾಶರಾಗಬೇಕಾಗುವುದು. ನಿಮ್ಮ ಮನಸ್ಸಿಗೆ ಬಾರದೇ ಇರುವ ಯಾವುದನ್ನೂ ನೀವು ಒಪ್ಪಿಕೊಳ್ಳಲಾರಿರಿ.

ಕರ್ಕಾಟಕ ರಾಶಿ:

ಆಕಾಶದಲ್ಲಿ ಕಾಣುವ ಎಲ್ಲ ಮೋಡಗಳೂ ಮಳೆಗರೆಯವು. ಎಲ್ಲರೂ ನಿಮಗೆ ಬೇಕಾದುದನ್ನು ಕೊಡುವವರಲ್ಲಿ ಮಾತ್ರ ಕೇಳಿ. ನಿಜವನ್ನು ಪ್ರೂವ್ ಮಾಡುವ ಸ್ಥಿತಿ ಬರಲಿದೆ. ಮಾತುಗಳಿಂದ ನಿಮಗೆ ಕಿರಿ ಕಿರಿಯಾಗುವ ಸಾಧ್ಯತೆ ಇದೆ. ಮಕ್ಕಳು ಆಸ್ತಿಯ ವಿಚಾರದಲ್ಲಿ ಮಾನಸಿಕ ಹಿಂಸೆ ಕೊಡಬಹುದು. ಸ್ತ್ರೀಯರು ನಿಮಗೆ ಶತ್ರುವಾಗುವರು. ಒಂದೇ ರೀತಿ ಜೀವನ ಶೈಲಿಯಿಂದ ಆಚೆ ಬರುವುದು ನಿಮಗೆ ಮುಖ್ಯವಾದೀತು. ನಿಮ್ಮ ಮಿತಿಯಲ್ಲಿ ನೀವು ಇರುವುದು ಸೂಕ್ತ.

ಸಿಂಹ ರಾಶಿ:

ಹಣವನ್ನು ಉಳಿಸಿಯೇ ಉಳಿಸುತ್ತೇನೆ ಎಂಬ ಹುಂಬುತನ ಬೇಡ. ಅಮೂಲ್ಯವಾದುದನ್ನು ಕಳೆದುಕೊಳ್ಳಬೇಕಾಗಬಹುದು. ತಲೆಯೊಳಗಿದ್ದ ಭೂಮಿಯ ಭಾರ ತಗ್ಗಲಿದೆ. ನಿಮ್ಮ ಬುದ್ಧಿಯ ಕೌಶಲಕ್ಕೆ ಕಛೇರಿಯಲ್ಲಿ ಬೆರಗಾಗುವರು. ಅಂದುಕೊಂಡ ಕಾರ್ಯವನ್ನು ಆರಂಭಿಸುವ ಮೊದಲೇ ಹಿಂದೆ ಹೆಜ್ಜೆ ಇಡಬೇಡಿ. ಹಿತಶತ್ರುಗಳು ನಿಮಗೆ ಏನನ್ನಾದರೂ ಮಾಡಲು ಇಚ್ಛಿಸುವರು. ಆರ್ಥಿಕ ವಿಚಾರದಲ್ಲಿ ಹಿನ್ನಡೆಯಾಗಲಿದೆ. ಬಾಡಿಗೆ ಮನೆಯಲ್ಲಿ ನೀವಿದ್ದರೆ ಕಿರಿಕಿರಿ ಅತಿಯಾದಂತೆ ಅನಿಸುವುದು.

ಕನ್ಯಾ ರಾಶಿ:

ಉದ್ಯೋಗದಲ್ಲಿ ಲಾಭ ಹೆಚ್ಚಲಿದೆ. ದೈವವೇ ನಿಮ್ಮ ಭವಿಷ್ಯವನ್ನು ಕಂಡು ಪೂರ್ವಭಾವಿಯಾಗಿ ಹಣವನ್ನು ಕೂಡಿಡುವಂತೆ ಪ್ರೇರಿಸಿತ್ತು. ಉದ್ಯಮವನ್ನು ನಡೆಸುತ್ತಿದ್ದರೆ, ಆದಾಯದ ಹೊಸಮಾರ್ಗವನ್ನು ಯೋಚಿಸಬೇಕಾಗುವುದು. ನಿಮ್ಮ ಆಸ್ತಿಯನ್ನು ಮಾರಾಟಮಾಡಲು ಆಲೋಚಿಸಿಸುವಿರಿ. ನಿಮ್ಮ ಅಸಲಿಯತ್ತನ್ನು ತೋರಿಸಲಾಗದು. ನೂತನ ವಾಹನಖರೀದಿಯನ್ನು ಮಾಡಲಿದ್ದೀರಿ. ನಿಮಗೆ ಸಿಗಬೇಕಾದ ಹಣವು ಸಿಗದೇ ಇರುವುದರಿಂದ ಬೇಸರ ಬೇಡ.

ತುಲಾ ರಾಶಿ:

ಇಂದು ಬಂಧುಗಳ ಚುಚ್ಚು ಮಾತು ನಿಮಗೆ ಹಿಡಿಸದು. ಅಲ್ಪ ವ್ಯತ್ಯಾಸದಿಂದ ಹೆಚ್ಚಿನ ಬಾಧೆಯನ್ನು ಪಡಬೇಕಾದೀತು. ಆಪ್ತರಿಗೆ ನೀಡುವ ಉಪದೇಶವು ವ್ಯರ್ಥವಾದೀತು. ಆಪ್ತರು ಹಣವನ್ನು ಕೇಳಿದಾಗ ಇಲ್ಲ ಎನ್ನಲಾಗದು. ಕೊಟ್ಟರೆ ಆರ್ಥಿಕ ಸ್ಥಿತಿಯ ಹದ ಕೆಡುವುದು. ತಾಳ್ಮೆಯಿಂದ ಆದಷ್ಟು ವ್ಯವಹರಿಸಿ. ಮನಸ್ಸನ್ನು ನಕಾರಾತ್ಮಕವಾಗಿ ಹರಿಯಲು ಬಿಡಬೇಡಿ. ಕೃಷಿಗೆ ಸಂಬಂಧಿಸಿದ ಚಟುವಟಿಕೆಲ್ಲಿ ಭಾಗವಹಿಸುವಿರಿ. ಮಕ್ಕಳ ಜೊತೆ ಸಮಯವನ್ನು ಕಳೆಯುವಿರಿ.

ವೃಶ್ಚಿಕ ರಾಶಿ:

ಒತ್ತಾಯದಿಂದ ದೂರದ ಪ್ರಯಾಣಕ್ಕೆ ಹೋಗುವ ಸಾಧ್ಯತೆ ಇದೆ. ನಿಮಗೆ ಇನ್ನಷ್ಟು ಬಲ, ಸ್ಫೂರ್ತಿ ಸಿಗುವುದು. ಇಂದು ನೀವು ಹಲವು ದಿನಗಳಿಂದ ಕಾಡುತ್ತಿರುವ ಅಥವಾ ಅನುಭವಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕಿಕೊಳ್ಳುವಿರಿ. ದುಃಖವನ್ನು ಕಣ್ಣೀರಿನ ಮೂಲಕ ಹೊರಹಾಕಿ ಸಮಾಧಾನ ಮಾಡಿಕೊಳ್ಳುವಿರಿ. ಮೂರ್ಖರಂತೆ ವರ್ತಿಸಿ ಎಲ್ಲರ ನಡುವೆ ನಗೆಪಾಟಲಾಗುವಿರಿ. ಸಂಗಾತಿಯ ಹೆಸರಿನಲ್ಲಿ ಸ್ಥಿರಾಸ್ತಿಯನ್ನು ಖರೀದಿಸುವಿರಿ.

ಧನು ರಾಶಿ:

ಇಂದು ದಂಪತಿಗಳ ನಡುವೆ ಕಲಹವೆದ್ದು ಇಬ್ಬರ ತಪ್ಪುಗಳನ್ನು ಪರಸ್ಪರ ಹೇಳಿ ವಾದ ಮಾಡುವಿರಿ. ಹೂಡಿಕೆಗಳನ್ನು ಮಾಡಿ, ಲಾಭವು ನಿಮ್ಮನ್ನು ಬಂದು ಸೇರುವುದು. ಸ್ನೇಹಿತನಿಗೆ ಧನಸಹಾಯ ಅಥವಾ ಅನುಕೂಲಕರವಾದ ವಾತಾವರಣವನ್ನು ಸೃಷ್ಟಿಸಿಕೊಡುವಿರಿ. ಹೂಡಿಕೆಯ ವಿಚಾರದಲ್ಲಿ ನಂಬಿಕೆ ಉಳಿಯದು. ಮಕ್ಕಳ ವಿದ್ಯಾಭ್ಯಾಸದ ವಿಚಾರಕ್ಕೆ ಸಿಟ್ಟಾಗುವಿರಿ. ಉದ್ಯೋಗದ ಬದಲಾವಣೆಯು ನಿಮಗೆ ಹವ್ಯಾಸದಂತೆ ಆಗುವುದು. ಸರ್ಜನಶೀಲ ವ್ಯಕ್ತಿಗಳಾಗಿದ್ದರೆ ನಿಮಗೆ ಅವಕಾಶಗಳು ಹೆಚ್ಚು ಬರುತ್ತದೆ.

ಇದನ್ನೂ ಓದಿ: ಉದ್ಯೋಗ ಭವಿಷ್ಯ: ಜೂನ್ 14ರಿಂದ 20ರವರೆಗೆ ಈ ರಾಶಿಯವರಿಗೆ ಸಿಗಲಿದೆ ಪ್ರಮೋಷನ್; ನಿಮ್ಮ ರಾಶಿಯ ಉದ್ಯೋಗ ಯೋಗ ಹೇಗಿದೆ?

ಮಕರ ರಾಶಿ:

ನಿಮ್ಮ ರೂಪ ಹಾಗೂ ವ್ಯಕ್ತಿತ್ವ ಸ್ನೇಹಿತರನ್ನು ಗಳಿಸಲು ಸಹಕಾರಿ. ಪರಿಸ್ಥಿತಿಗಳು ಹೇಗೂ ಬರಲಿ, ಮನಸ್ಸು ಮತ್ತು ಬುದ್ಧಿ ದೃಢವಾಗಿರಲಿ. ನಿರೀಕ್ಷಿತವಾದ ಸಂಪತ್ತು ನಿಮಗೆ ಸಿಗಲಿದೆ. ಮಕ್ಕಳು ನಿಮ್ಮ ನಿರೀಕ್ಷೆಯನ್ನು ಹುಸಿಗೊಳಿಸಲಾರರು. ಯಾವುದೇ ವಿಚಾರವನ್ನು ನಿಮ್ಮ ಸಾಮರ್ಥ್ಯ ಹಾಗೂ ವಿದ್ಯೆ ತಕ್ಕಂತೆ ಯೋಚಿಸಿ. ಆಲಸ್ಯದ ಮನೋಭಾವವನ್ನು ನೀವು ಬಿಡಬೇಕಾದೀತು. ಉದ್ವೇಗದಿಂದಾಗಿ ಇಂದಿನ ಉತ್ತಮ ಲಾಭದಾಯಕ ವ್ಯಾಪಾರವನ್ನು ಕಳೆದುಕೊಳ್ಳುವಿರಿ.

ಕುಂಭ ರಾಶಿ:

ನೀವು ನೀಡಿದ ಸಾಲವು ಮರಳಿ ಬರಬಹುದು ಎಂದು ಹೇಳಲು ಸಾಧ್ಯವಿಲ್ಲ. ಪರರ ದುಃಖದಲ್ಲಿ ಭಾಗಿಯಾಗಿ ಮನಸ್ಸನ್ನು ಹಗುರಗೊಳಿಸುವಿರಿ. ಹೇಳಿಸಿಕೊಂಡು ಮಾಡುವುದು ನಿಮಗೆ ಅಭ್ಯಾಸವಾದ ಸಂಗತಿ. ಅಂದುಕೊಂಡಿದ್ದು ಆಗುವುದಿಲ್ಲ ಎಂಬ ನಂಬಿಕೆಯಿಂದ ಹೊರಗೆ ಬನ್ನಿ. ಎಲ್ಲವನ್ನೂ ನಾವಂದು ಕೊಂಡಂತೆ ನಡೆಸಲು ಸಾಧ್ಯವಿಲ್ಲ. ನಿಮ್ಮ ವಿದ್ಯಾರ್ಹತೆಯನ್ನು ಪರೀಕ್ಷಿಸಬಹುದು. ಮಿಶ್ರಫಲವನ್ನು ಪಡೆಯುವಿರಿ. ನಿಮ್ಮ ಸುತ್ತಲಿನ ಜನರು ತಮ್ಮದೇ ಮಿತಿಯಲ್ಲಿ ಇರುವರು.

ಮೀನ ರಾಶಿ:

ಜನರಿಂದ ಕೆಲಸದ ವಿಚಾರದಲ್ಲಿ ಮನ್ನಣೆ ದೊರೆಯಲಿದೆ. ಉಪಕಾರಕ್ಕೆ ಸತ್ಫಲವನ್ನು ಪಡಯಬಹುದಾಗಿದೆ. ಬೇಕಾಗಿರುವುದು ಉಳಿಸಿಕೊಳ್ಳುವುದು ಇಂದು ಕಷ್ಟ. ಕಾರಣಾಂತರಗಳಿಂದ ನಿಂತಿದ್ದ ಕೆಲಸಗಳನ್ನು ಪೂರ್ಣಗೊಳಿಸುವಿರಿ. ಮನೆಯಲ್ಲಿ‌ ಪ್ರಶಾಂತವಾದ ವಾತಾವರಣವಿರಲಿದ್ದು ನಿಮಗೆ ಬಹಳ ಖುಷಿ ಎನಿಸುವುದು. ದಿನದಲ್ಲಿ ಶುಭವು ಹೆಚ್ಚಿರಲಿದೆ. ರಾಜಕೀಯದ ಜೊತೆ ಸಂಪರ್ಕವು ಬೆಳೆಯವಹುದು.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಜ್ಯೇಷ್ಠ, ಸೌರ ಮಾಸ : ಮಿಥುನ, ಮಹಾನಕ್ಷತ್ರ : ಮೃಗಶಿರಾ, ವಾರ : ಶನಿ, ಪಕ್ಷ : ಕೃಷ್ಣ, ತಿಥಿ : ಷಷ್ಠೀ, ನಿತ್ಯನಕ್ಷತ್ರ : ಮಘಾ, ಯೋಗ : ಧ್ರುವ, ಕರಣ : ತೈತಿಲ, ಸೂರ್ಯೋದಯ – 05 – 55 am, ಸೂರ್ಯಾಸ್ತ – 06 – 46 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 09:48 – 10:45, ಯಮಗಂಡ ಕಾಲ 13:58 – 15:34, ಗುಳಿಕ ಕಾಲ 05:56 – 07:32

-ಲೋಹಿತ್ ಹೆಬ್ಬಾರ್ – 8762924271 (what’s app only)

Source link

ಪಶ್ಚಿಮ ಬಂಗಾಳದಲ್ಲಿ ಸ್ವಚ್ಛತಾ ಕ್ರಾಂತಿ; ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆದರೆ, ಉಗುಳಿದರೆ ಸೆ. 1ರಿಂದ ಭಾರಿ ದಂಡ! – Kannada News | West Bengal Government to Fine Littering and Spitting from September 1

ಕೊಲ್ಕತ್ತಾ, ಜೂನ್ 19: ಕೊಲ್ಕತ್ತಾ ಸೇರಿದಂತೆ ಪಶ್ಚಿಮ ಬಂಗಾಳದಾದ್ಯಂತ ಸಾರ್ವಜನಿಕ ಸ್ಥಳಗಳನ್ನು ಸುಂದರ ಹಾಗೂ ಸ್ವಚ್ಛವಾಗಿಡುವ ಉದ್ದೇಶದಿಂದ ಸುವೇಂದು ಅಧಿಕಾರಿ (Suvendu Adhikari) ನೇತೃತ್ವದ ಬಿಜೆಪಿ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಬರುವ ಸೆಪ್ಟೆಂಬರ್ 1ರಿಂದ ಜಾರಿಗೆ ಬರುವಂತೆ ರಸ್ತೆ, ಪಾರ್ಕ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವ ಮತ್ತು ಉಗುಳುವ ಸಾರ್ವಜನಿಕರಿಗೆ ಭಾರಿ ದಂಡ ವಿಧಿಸಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ.

ಪಶ್ಚಿಮ ಬಂಗಾಳದ ಪ್ರಮುಖ ನಗರಗಳು ಮತ್ತು ಪ್ರವಾಸಿ ತಾಣಗಳಲ್ಲಿ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆಯುವುದು, ಗುಟ್ಕಾ-ಪಾನ್ ತಿಂದು ಗೋಡೆ ಹಾಗೂ ರಸ್ತೆಗಳ ಮೇಲೆ ಉಗುಳುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಜೊತೆಗೆ ನಗರಗಳ ಸೌಂದರ್ಯವೂ ಹಾಳಾಗುತ್ತಿದೆ. ಹಲವು ಬಾರಿ ಜಾಗೃತಿ ಮೂಡಿಸಿದರೂ ಪರಿಸ್ಥಿತಿ ಸುಧಾರಿಸದ ಹಿನ್ನೆಲೆಯಲ್ಲಿ, ಈಗ ದಂಡದ ಅಸ್ತ್ರವನ್ನು ಬಳಸಲು ಸರ್ಕಾರ ನಿರ್ಧರಿಸಿದೆ.

ಇದನ್ನೂ ಓದಿ: ದೀದಿ ಕೋಟೆಯನ್ನು ಬಿಜೆಪಿ ಛಿದ್ರಗೊಳಿಸಿದ್ದು ಹೇಗೆ? ಪಶ್ಚಿಮ ಬಂಗಾಳದ ಚುನಾವಣೆ ತಯಾರಿ ಬಗ್ಗೆ ಪ್ರಲ್ಹಾದ್ ಜೋಶಿ ಮಾತು

ಸೆಪ್ಟೆಂಬರ್ 1ರಿಂದ ರಸ್ತೆಗಳು, ಫುಟ್​ಪಾತ್, ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು ಮತ್ತು ಉದ್ಯಾನವನಗಳಲ್ಲಿ ಕಸ ಎಸೆಯುವುದು ಅಥವಾ ಉಗುಳುವುದು ಕಂಡುಬಂದರೆ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ಸ್ಥಳದಲ್ಲೇ ದಂಡ ವಿಧಿಸಲಿದ್ದಾರೆ. ಪ್ರಮುಖ ರಸ್ತೆಗಳು ಮತ್ತು ಜಂಕ್ಷನ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿಗಾ ಇಡಲಾಗುವುದು. ನಿಯಮ ಉಲ್ಲಂಘಿಸುವವರನ್ನು ಗುರುತಿಸಿ ದಂಡದ ನೋಟಿಸ್ ಕಳುಹಿಸುವ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ.

ಮೊದಲ ಬಾರಿಗೆ ತಪ್ಪು ಮಾಡಿದಾಗ ನಿಗದಿಪಡಿಸಿದ ದಂಡದ ಮೊತ್ತವನ್ನು ವಸೂಲಿ ಮಾಡಲಾಗುತ್ತದೆ. ಅದೇ ವ್ಯಕ್ತಿ ಪದೇ ಪದೇ ನಿಯಮ ಉಲ್ಲಂಘಿಸಿದರೆ ದಂಡದ ಮೊತ್ತವನ್ನು ದುಪ್ಪಟ್ಟುಗೊಳಿಸಲಾಗುತ್ತದೆ. ಈ ಹೊಸ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕೊಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ (KMC) ಸೇರಿದಂತೆ ರಾಜ್ಯದ ಎಲ್ಲಾ ಮುನ್ಸಿಪಾಲಿಟಿಗಳು ಮತ್ತು ಪಂಚಾಯತ್‌ಗಳಿಗೆ ಸರ್ಕಾರ ಸಂಪೂರ್ಣ ಅಧಿಕಾರ ನೀಡಿದೆ. ವಾಣಿಜ್ಯ ಪ್ರದೇಶಗಳು, ಮಾರ್ಕೆಟ್‌ಗಳು ಮತ್ತು ಹೋಟೆಲ್‌ಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡದ ಮಾಲೀಕರ ಮೇಲೂ ಕ್ರಮ ಕೈಗೊಳ್ಳಲಾಗುತ್ತದೆ.

ಇದನ್ನೂ ಓದಿ: ಲಡಾಖ್​​ಗೆ ಪ್ರವಾಸ ಹೋಗುತ್ತೀರಾ? ಪ್ಲಾಸ್ಟಿಕ್ ಬಳಸಿದರೆ, ಕಸ ಎಸೆದರೆ ದಂಡ ಕಟ್ಟಬೇಕು!

ಸೆಪ್ಟೆಂಬರ್ 1ರಿಂದ ದಂಡ ಪ್ರಕ್ರಿಯೆ ಆರಂಭವಾಗುವ ಮುನ್ನ, ಇಡೀ ಆಗಸ್ಟ್ ತಿಂಗಳು ರಾಜ್ಯಾದ್ಯಂತ ಜಾಗೃತಿ ಅಭಿಯಾನವನ್ನು ನಡೆಸಲು ಸರ್ಕಾರ ಯೋಜಿಸಿದೆ. ಮೈಕ್‌ಗಳ ಮೂಲಕ ಪ್ರಚಾರ, ಪೋಸ್ಟರ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಜನರಿಗೆ ಹೊಸ ನಿಯಮದ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಸ್ವಚ್ಛ ಭಾರತ ಅಭಿಯಾನದ ಪ್ರಯುಕ್ತ ಬಂಗಾಳದ ಬಿಜೆಪಿ ಸರ್ಕಾರ ಸ್ವಚ್ಛತೆಗಾಗಿ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಧನುಷ್ ನಟನೆಯ ‘ಓಂ’ ಚಿತ್ರದಲ್ಲಿ ‘ಪುಷ್ಪ’ ಸಿನಿಮಾದ ಕಥೆ? ಸ್ಪಷ್ಟನೆ ನೀಡಿದ ನಿರ್ದೇಶಕ – Kannada News | Dhanush OM movie Pushpa Comparisons Director Rajkumar Periasamy Reacts

ಕಾಲಿವುಡ್ ಸ್ಟಾರ್ ನಟ ಧನುಷ್ (Dhanush) ಅಭಿನಯದ ಮುಂಬರುವ ಬಹುನಿರೀಕ್ಷಿತ ಚಿತ್ರ ‘D55’ ಸಿನಿಮಾಗೆ ಟೈಟಲ್ ಅನಾವರಣ ಆಗಿದೆ. ಈ ಚಿತ್ರದ ಗ್ಲಿಂಪ್ಸ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಚಿತ್ರಕ್ಕೆ ‘ಓಂ’ (OM) ಎಂದು ಹೆಸರಿಡಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮೊದಲ ಝಲಕ್ ಭಾರಿ ಸದ್ದು ಮಾಡುತ್ತಿದೆ. ಆದರೆ, ಈ ಗ್ಲಿಂಪ್ಸ್ ನೋಡಿದ ನೆಟ್ಟಿಗರು ಹಾಗೂ ಸಿನಿಪ್ರಿಯರು, ಧನುಷ್ ಅವರ ಈ ಹೊಸ ಚಿತ್ರವನ್ನು ಅಲ್ಲು ಅರ್ಜುನ್ ನಟನೆಯ ಬ್ಲಾಕ್‌ಬಸ್ಟರ್ ಸಿನಿಮಾ ‘ಪುಷ್ಪ’ (Pushpa) ಚಿತ್ರಕ್ಕೆ ಹೋಲಿಸಲು ಶುರು ಮಾಡಿದ್ದಾರೆ.

ಚಿತ್ರತಂಡ ಬಿಡುಗಡೆ ಮಾಡಿರುವ ‘ಓಂ’ ಟೈಟಲ್ ಗ್ಲಿಂಪ್ಸ್‌ನಲ್ಲಿ ಧನುಷ್ ಗಡ್ಡ ಬಿಟ್ಟು, ರಗಡ್ ಲುಕ್‌ನಲ್ಲಿ ಕಾಡಿನ ನಡುವೆ ಕಾಡುಕಳ್ಳನಂತೆ ಕಾಣಿಸಿಕೊಂಡಿದ್ದಾರೆ. ಜೊತೆಗೆ ಈ ವಿಡಿಯೋದಲ್ಲಿ ರಕ್ತಚಂದನದ ದೃಶ್ಯಗಳೂ ಇವೆ. ‘ಪುಷ್ಪ’ ಸಿನಿಮಾ ಸಂಪೂರ್ಣವಾಗಿ ರಕ್ತಚಂದನದ ಕಳ್ಳಸಾಗಣೆ ಹಿನ್ನೆಲೆಯನ್ನು ಹೊಂದಿದ್ದರಿಂದ, ಪ್ರೇಕ್ಷಕರು ತಕ್ಷಣವೇ ‘ಓಂ’ ಚಿತ್ರವನ್ನು ‘ಪುಷ್ಪ’ಗೆ ಹೋಲಿಸಿದ್ದಾರೆ.

ಈ ಕುರಿತು ಸಂದರ್ಶನವೊಂದರಲ್ಲಿ ಪ್ರಶ್ನಿಸಿದಾಗ ಉತ್ತರಿಸಿದ ನಿರ್ದೇಶಕ ರಾಜ್​ಕುಮಾರ್ ಪೆರಿಯಸಾಮಿ, ‘ನಾವು ಚಿತ್ರದ ಕೇವಲ ಒಂದು ಸಣ್ಣ ದೃಶ್ಯವನ್ನು ಮಾತ್ರ ತೋರಿಸಿದ್ದೇವೆ. ‘ಓಂ’ ಸಿನಿಮಾದಲ್ಲಿ ಇನ್ನು ಸಾಕಷ್ಟು ವಿಭಿನ್ನ ಅಂಶಗಳಿವೆ. ಸಿನಿಮಾ ನೋಡಿದಾಗ ಮಾತ್ರ ಅದು ಸಂಪೂರ್ಣವಾಗಿ ತಿಳಿಯುತ್ತದೆ. ಟೈಟಲ್ ಟೀಸರ್ ನೋಡಿದಾಗ ಪ್ರತಿಯೊಬ್ಬರಿಗೂ ಅವರದ್ದೇ ಆದ ವಿಭಿನ್ನ ದೃಷ್ಟಿಕೋನ ಮೂಡುತ್ತದೆ. ನಾವು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಲು ಮತ್ತು ಚರ್ಚೆ ಹುಟ್ಟುಹಾಕಲು ಮಾತ್ರ ಇದನ್ನು ಬಿಡುಗಡೆ ಮಾಡಿದ್ದೇವೆ’ ಎಂದು ಸ್ಪಷ್ಟನೆ ನೀಡಿದ್ದಾರೆ.

‘ಪುಷ್ಪ’ ಸಿನಿಮಾ ರೀತಿಯೇ ‘ಓಂ’ ಚಿತ್ರ ಕೂಡ ಭರ್ಜರಿ ಆ್ಯಕ್ಷನ್ ದೃಶ್ಯಗಳನ್ನು ಹೊಂದಿರಲಿದ್ದು, ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ಮೊದಲ ಭಾಗಕ್ಕೆ ‘ಓಂ ಚಾಪ್ಟರ್ 1: ಉಧಿರಂ – ದಿ ಬ್ಲಡ್ ವುಡ್’ ಎಂದು ಹೆಸರಿಡಲಾಗಿದೆ. ಚಿತ್ರವು ಅಕ್ಟೋಬರ್ 16ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಟೀಸರ್ ಮತ್ತು ಶೀರ್ಷಿಕೆಯಿಂದ ಕೌತುಕ ಮೂಡಿದೆ.

ಇದನ್ನೂ ಓದಿ: ಅಂದು ಶಿವಣ್ಣ, ಇಂದು ಧನುಷ್; ‘ಓಂ’ ಶೀರ್ಷಿಕೆಯಲ್ಲಿ ಹೊಸ ಸಿನಿಮಾ ಘೋಷಣೆ

‘ಓಂ’ ಚಿತ್ರದಲ್ಲಿ ಧನುಷ್ ಜೊತೆಗೆ ಮಲಯಾಳಂ ಸ್ಟಾರ್ ನಟ ಮಮ್ಮುಟ್ಟಿ ಅವರು ಪ್ರಮುಖ ಪಾತ್ರದಲ್ಲಿದ್ದರೆ, ಸಾಯಿ ಪಲ್ಲವಿ ಹಾಗೂ ಶ್ರೀಲೀಲಾ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಯಿ ಅಭ್ಯಂಕರ್ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ‘ಅಮರನ್’ ಖ್ಯಾತಿಯ ರಾಜ್​ಕುಮಾರ್ ಪೆರಿಯಸಾಮಿ ಅವರು ನಿರ್ದೇಶನ ಮಾಡಿರುವುದರಿಂದ ಹೈಪ್ ಹೆಚ್ಚಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಜೀವನದಲ್ಲಿ ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ ತಿರುಗೇಟು – Kannada News | Ram Mandir fund row Those who never visited Ayodhya now talking about Ram bhakti CM Yogi Adityanath said

ಅಯೋಧ್ಯೆ, ಜೂನ್ 19: ಅಯೋಧ್ಯೆಯ (Ayodhya) ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಭೂಮಿ ಖರೀದಿ ವ್ಯವಹಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ವಿರೋಧ ಪಕ್ಷಗಳು ಮಾಡಿದ್ದ ಆರೋಪಗಳಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ತಿರುಗೇಟು ನೀಡಿದ್ದಾರೆ. ತಮ್ಮ ಜೀವನದಲ್ಲಿ ಒಮ್ಮೆಯೂ ಅಯೋಧ್ಯೆಗೆ ಭೇಟಿ ನೀಡದ ಮತ್ತು ಪ್ರಭು ಶ್ರೀರಾಮನ ಅಸ್ತಿತ್ವವನ್ನೇ ಪ್ರಶ್ನಿಸಿದ್ದ ನಾಯಕರು ಇಂದು ರಾಜಕೀಯ ಲಾಭಕ್ಕಾಗಿ ‘ರಾಮಭಕ್ತಿ’ಯ ನಾಟಕವಾಡುತ್ತಿದ್ದಾರೆ. ಜೈ ಶ್ರೀರಾಮ್ ಎಂದು ಘೋಷಣೆ ಕೂಗುವವರ ಮೇಲೆ ಲಾಠಿ ಚಾರ್ಜ್ ಮಾಡುತ್ತಿದ್ದವರು ಈಗ ರಾಮ ಭಕ್ತರ ಬಗ್ಗೆ ಕಾಳಜಿ ವಹಿಸುತ್ತಿರುವಂತೆ ನಟಿಸುತ್ತಿದ್ದಾರೆ ಎಂದು ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

“ಕೆಲವು ನಾಯಕರು ತಮ್ಮ ಇಡೀ ಜೀವನದಲ್ಲಿ ಎಂದಿಗೂ ಅಯೋಧ್ಯೆಗೆ ಹೆಜ್ಜೆ ಇಟ್ಟವರಲ್ಲ. ಅಯೋಧ್ಯೆಯ ಹೆಸರೆತ್ತಲು ಹೆದರುತ್ತಿದ್ದವರು ಮತ್ತು ಶ್ರೀರಾಮ ಕೇವಲ ಒಂದು ಕಾಲ್ಪನಿಕ ಪಾತ್ರ ಎಂದು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದವರು ಇಂದು ರಾಮಮಂದಿರದ ನಿಧಿಯ ಬಗ್ಗೆ ಮಾತನಾಡುತ್ತಿದ್ದಾರೆ.” ಎಂದು ಯೋಗಿ ಆದಿತ್ಯನಾಥ್ ಟೀಕಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs AFG: ಕೊನೆಯ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ 3 ಬದಲಾವಣೆ – Kannada News | India vs Afghanistan 3rd ODI: Key Playing XI Changes

ಭಾರತ ಮತ್ತು ಅಫ್ಘಾನಿಸ್ತಾನ (India vs Afghanistan) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಅಂತಿಮ ಪಂದ್ಯ ಜೂನ್ 20 ರ ಶನಿವಾರ ಚೆನ್ನೈನಲ್ಲಿ ನಡೆಯಲಿದೆ. ಈ ಸರಣಿಯನ್ನು ಈಗಾಗಲೇ ಭಾರತ ತಂಡ 2-0 ಅಂತರದಿಂದ ಗೆದ್ದುಕೊಂಡಿರುವ ಕಾರಣ ಕೊನೆಯ ಏಕದಿನ ಪಂದ್ಯಕ್ಕೆ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಬದಲಾವಣೆ ಮಾಡುವ ಸಾಧ್ಯತೆಗಳಿವೆ. ಅದರಂತೆ ಬೆಂಚ್ ಕಾದ ಕೆಲವು ಆಟಗಾರರಿಗೆ ಈ ಪಂದ್ಯದಲ್ಲಿ ಆಡುವ ಅವಕಾಶ ಸಿಗಬಹುದು. ಇದಕ್ಕೆ ಪೂರಕವಾಗಿ ಬೌಲಿಂಗ್ ಆಲ್‌ರೌಂಡರ್ ಹರ್ಷಿತ್ ರಾಣಾ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಹಾಗೆಯೇ ಕೊನೆಯ ಪಂದ್ಯವನ್ನು ಅರ್ಷ್‌ದೀಪ್ ಸಿಂಗ್ ಆಡುವುದಿಲ್ಲ ಎಂತಲೂ ಹೇಳಲಾಗುತ್ತಿದೆ. ಹೀಗಾಗಿ ತಂಡದಲ್ಲಿ ಕನಿಷ್ಠ ಎರಡರಿಂದ ಮೂರು ಬದಲಾವಣೆಗಳು ಆಗುವುದು ಖಚಿತವಾಗಿದೆ.

ಹರ್ಷಿತ್ ರಾಣಾಗೆ ಅವಕಾಶ

ಮೊಣಕಾಲಿನ ಗಾಯದಿಂದಾಗಿ ಹರ್ಷಿತ್ ರಾಣಾ 2026 ರ ಟಿ20 ವಿಶ್ವಕಪ್ ಮತ್ತು 2026 ರ ಐಪಿಎಲ್ ಅನ್ನು ತಪ್ಪಿಸಿಕೊಂಡಿದ್ದರು. ಈಗ ಅವರು ಸಂಪೂರ್ಣವಾಗಿ ಫಿಟ್ ಆಗಿರುವುದರಿಂದ, ಮುಂಬರುವ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳಿಗೆ ಮುಂಚಿತವಾಗಿ ಅವರಿಗೆ ಪ್ಲೇಯಿಂಗ್ XI ನಲ್ಲಿ ಅವಕಾಶ ನೀಡುವ ಬಗ್ಗೆ ತಂಡದ ಆಡಳಿತ ಮಂಡಳಿ ಪರಿಗಣಿಸುವ ಸಾಧ್ಯತೆಯಿದೆ. ಹರ್ಷಿತ್ ಆಗಮನದಿಂದ ಬೌಲಿಂಗ್ ವಿಭಾಗದಲ್ಲಿ ಒಂದು ಬದಲಾವಣೆಯಾಗುವುದು ಖಚಿತವಾಗಿದೆ. ಹಾಗೆಯೇ ಅರ್ಷದೀಪ್ ಸಿಂಗ್ ಈ ಪಂದ್ಯದಲ್ಲಿ ಆಡದಿದ್ದರೆ, ಮತ್ತೊಬ್ಬ ವೇಗಿಗೆ ಆಡುವ ಅವಕಾಶ ಸಿಗಬಹುದು.

ಯಶಸ್ವಿ ಜೈಸ್ವಾಲ್​ಗೆ ಕೋಕ್

ಎರಡನೇ ಏಕದಿನ ಪಂದ್ಯದಲ್ಲಿ ರೋಹಿತ್ ಜೊತೆ ಯಶಸ್ವಿ ಜೈಸ್ವಾಲ್ ಅವರಿಗೆ ಆರಂಭಿಕರಾಗಿ ಆಡುವ ಅವಕಾಶ ನೀಡಲಾಗಿತ್ತು. ಆದರೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಜೈಸ್ವಾಲ್ ವಿಫಲರಾದರು. ಆದ್ದರಿಂದ, ಮೂರನೇ ಪಂದ್ಯದಲ್ಲಿ ರೋಹಿತ್ ಮತ್ತು ಶುಭಮನ್ ಗಿಲ್ ಮತ್ತೊಮ್ಮೆ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ. ಇಶಾನ್ ಕಿಶನ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರೆ, ಶ್ರೇಯಸ್ ಅಯ್ಯರ್ ನಾಲ್ಕನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಕೆಎಲ್ ರಾಹುಲ್ ಐದನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲಿದ್ದು, ಆಲ್‌ರೌಂಡರ್​ಗಳಾಗಿ ನಿತೀಶ್ ಕುಮಾರ್ ರೆಡ್ಡಿ ಮತ್ತು ವಾಷಿಂಗ್ಟನ್ ಸುಂದರ್ ಆಡುವ ಸಾಧ್ಯತೆಗಳಿವೆ.

IND vs AFG: ಕೊನೆಯ ಏಕದಿನ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಕ್ಕೆ ಯುವ ವೇಗಿಯ ಆಗಮನ

ಭಾರತದ ಸಂಭಾವ್ಯ 11: ರೋಹಿತ್ ಶರ್ಮಾ, ಶುಭ್​ಮನ್ ಗಿಲ್ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಹರ್ಷಿತ್ ರಾಣಾ, ಕುಲ್ದೀಪ್ ಯಾದವ್, ಗುರ್ನೂರ್ ಬ್ರಾರ್, ಪ್ರಸಿದ್ಧ್ ಕೃಷ್ಣ/ಅರ್ಷದೀಪ್ ಸಿಂಗ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಶಾಸಕ ಎಚ್​ಸಿ ಬಾಲಕೃಷ್ಣ ಸವಾಲು – Kannada News | Farmers to Get Compensation Within 15 Days or I’ll retire from Politics: MLA HC Balakrishna

ರಾಮನಗರ, ಜೂನ್​​ 19: ಬಿಡದಿ ಟೌನ್‌ಶಿಪ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಕೆಲ ರೈತರು ತಮ್ಮ ಜಮೀನುಗಳನ್ನು ಯೋಜನೆಗೆ ನೀಡಲು ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ ರಾಮನಗರದ ಜಿಬಿಡಿಎ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಎಚ್.ಸಿ. ಬಾಲಕೃಷ್ಣ ಮತ್ತು ಜಿಬಿಡಿಎ ಅಧ್ಯಕ್ಷ ಗಾಣಕಲ್ ನಟರಾಜ್​​ ಭೂಸ್ವಾಧೀನಕ್ಕೆ ಒಪ್ಪಿದ ರೈತರಿಗೆ ಪರಿಹಾರ ಚೆಕ್‌ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಾಲಕೃಷ್ಣ, ನಮ್ಮ ವಿರೋಧಿಗಳು ಪರಿಹಾರ ನೀಡಲು ಹಣವಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದರು. ಅದಕ್ಕೆ ನಾವು ಇಂದು ಪರಿಹಾರ ಚೆಕ್ ವಿತರಿಸುವ ಮೂಲಕ ಉತ್ತರ ನೀಡಿದ್ದೇವೆ. ನಮ್ಮ ಬಳಿ ಸಾಕಷ್ಟು ಹಣವಿದ್ದು, ಅರ್ಹ ರೈತರಿಗೆ ಒಂದು ವಾರದಿಂದ 15 ದಿನಗಳ ಒಳಗಾಗಿ ಅವರ ಖಾತೆಗಳಿಗೆ ನೇರವಾಗಿ ಚೆಕ್ ತಲುಪಿಸಲಾಗುವುದು. ಇದನ್ನು ನಾವು ಮಾಡದೇ ಹೋದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇವೆ ಎಂದು ಸವಾಲು ಹಾಕಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಮಹಾರಾಷ್ಟ್ರ ರಾಜಕೀಯದಲ್ಲಿ ಹೈಡ್ರಾಮಾ; ರಾಜೀನಾಮೆ ನೀಡಲು ಸಿದ್ಧ ಎಂದ ಉದ್ಧವ್ ಠಾಕ್ರೆ – Kannada News | Uddhav Thackeray says Ready To Resign As UBT Shiv Sena Chief Maharashtra Politics

ಮುಂಬೈ, ಜೂನ್ 19: ಶಿವಸೇನೆಯ ಸಂಸ್ಥಾಪನಾ ದಿನದಂದು ಶಿವಸೇನೆ (Shiv Sena) ಠಾಕ್ರೆ ಬಣದಿಂದ ರ್ಯಾಲಿ ನಡೆಯಿತು. ಇದರಲ್ಲಿ ಭಾಗವಹಿಸಿದ ಉದ್ಧವ್ ಠಾಕ್ರೆ ಶಿವಸೇನೆ ಶಿಂಧೆ ಬಣ, ಬಿಜೆಪಿ ಮತ್ತು ಬಂಡಾಯ ಸಂಸದರ ಮೇಲೆ ದಾಳಿ ನಡೆಸಿದರು. ಈ ವೇಳೆ ಅವರು ತಮ್ಮ ಶಿವಸೇನೆ ಉದ್ಧವ್ ಠಾಕ್ರೆ ಬಣದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧವಿರುವುದಾಗಿ ಘೋಷಿಸಿದರು. “ನಾನು ಹೇಗಿದ್ದೇನೆಂದು ನಿಮಗೆ ತಿಳಿದಿದೆ. ಒಬ್ಬ ವ್ಯಕ್ತಿ ನನ್ನತ್ತ ಬೆರಳು ಮಾಡಿ ತೋರಿಸಿದರೂ ನಾನು ಒಂದು ಕ್ಷಣವೂ ಕಚೇರಿಯಲ್ಲಿ ಉಳಿಯುವುದಿಲ್ಲ. ಅದಕ್ಕಾಗಿಯೇ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ನಾನು ಬಯಸಿದರೆ ವಿಧಾನಸಭೆಯಲ್ಲಿ ಕುಳಿತುಕೊಳ್ಳುತ್ತಿದ್ದೆ. 60 ವರ್ಷಗಳು ಕಳೆದಿವೆ. ನನ್ನ ವಿರುದ್ಧದ ಆರೋಪಗಳು ನಿಜವಾಗಿದ್ದರೆ, ನನಗೆ ಹೇಳಿ. ನಾನು ಈಗಲೇ ರಾಜೀನಾಮೆ ನೀಡಲು ಸಿದ್ಧನಿದ್ದೇನೆ” ಎಂದು ಅವರು ಹೇಳಿದ್ದಾರೆ.

ಶಿವಸೇನೆ ಪಕ್ಷದ ಪ್ರಮುಖ ನಾಯಕರು ಮತ್ತು ಸಂಸದರ ತುರ್ತು ಸಭೆ ನಡೆಸಿದ ಉದ್ಧವ್ ಠಾಕ್ರೆ, ಪಕ್ಷದಲ್ಲಿ ಉಂಟಾಗಿರುವ ಆಂತರಿಕ ಕಲಹದಿಂದ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. “ನನ್ನ ನಾಯಕತ್ವದ ಮೇಲೆ ಯಾರಿಗಾದರೂ ನಂಬಿಕೆ ಇಲ್ಲದಿದ್ದರೆ ನಾನು ಈಗಲೇ ಶಿವಸೇನಾ (UBT) ಮುಖ್ಯಸ್ಥ ಸ್ಥಾನವನ್ನು ತ್ಯಜಿಸಲು ಸಿದ್ಧನಿದ್ದೇನೆ. ಅಧಿಕಾರಕ್ಕಾಗಿ ನಾನು ಎಂದಿಗೂ ಹಪಹಪಿಸಿಲ್ಲ. ನನ್ನ ತಂದೆ ಬಾಳಾಸಾಹೇಬ್ ಠಾಕ್ರೆ ಅವರ ತತ್ವಗಳಿಗಾಗಿ ನಾನು ಹೋರಾಡುತ್ತಿದ್ದೇನೆ” ಎಂದು ಸಭೆಯಲ್ಲಿ ಭಾವುಕರಾಗಿ ನುಡಿದಿದ್ದಾರೆ.

ಇದನ್ನೂ ಓದಿ: ಶಿವಸೇನೆಯಲ್ಲಿ ಮತ್ತೊಂದು ಬಿರುಕು? ಆಪರೇಷನ್ ಟೈಗರ್ ವದಂತಿ ಬೆನ್ನಲ್ಲೇ ಉದ್ಧವ್ ಠಾಕ್ರೆ ತುರ್ತು ಸಭೆ

ಪಕ್ಷಾಂತರ ಮಾಡಲು ಸಂಚು ರೂಪಿಸುತ್ತಿರುವ ಹಾಗೂ ವಿರೋಧಿ ಪಾಳಯದೊಂದಿಗೆ ಕೈಜೋಡಿಸಿರುವ ಬಂಡಾಯ ಸಂಸದರ ವಿರುದ್ಧ ಉದ್ಧವ್ ಠಾಕ್ರೆ ಕಟು ಶಬ್ದಗಳಲ್ಲಿ ವಾಗ್ದಾಳಿ ನಡೆಸಿದ್ದಾರೆ. “ನಮ್ಮ ಚಿಹ್ನೆ ಮತ್ತು ನಮ್ಮ ಪಕ್ಷದ ಟಿಕೆಟ್‌ನಿಂದ ಗೆದ್ದು ಸಂಸತ್ ಪ್ರವೇಶಿಸಿದವರು ಈಗ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ. ಇವರು ಕೇವಲ ಪಕ್ಷದ್ರೋಹಿಗಳಲ್ಲ, ಇಡೀ ಮಹಾರಾಷ್ಟ್ರದ ಜನತೆಗೆ ದ್ರೋಹ ಬಗೆದಿರುವ ದೇಶದ್ರೋಹಿಗಳು” ಎಂದು ಗುಡುಗಿದ್ದಾರೆ.

ಕೆಲವು ವರ್ಷಗಳ ಹಿಂದೆ ಏಕನಾಥ್ ಶಿಂದೆ ಅವರ ನೇತೃತ್ವದಲ್ಲಿ ಶಿವಸೇನೆಯಲ್ಲಿ ಭಾರಿ ಬಿರುಕು ಉಂಟಾಗಿತ್ತು. ಈಗ ಮತ್ತೊಮ್ಮೆ ಉದ್ಧವ್ ಠಾಕ್ರೆ ಬಣದ ಕೆಲವು ಸಂಸದರು ಮತ್ತು ಹಿರಿಯ ನಾಯಕರು ಪಕ್ಷದ ಹೈಕಮಾಂಡ್ ವಿರುದ್ಧ ಅಸಮಾಧಾನಗೊಂಡು ಪ್ರತ್ಯೇಕ ಗುಂಪು ರಚಿಸಲು ಅಥವಾ ಮೈತ್ರಿ ಬದಲಾಯಿಸಲು ಸಿದ್ಧತೆ ನಡೆಸಿದ್ದಾರೆ ಎಂಬ ವದಂತಿಗಳ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಇದನ್ನೂ ಓದಿ: ಕಾಂಗ್ರೆಸ್ ಜೊತೆ ವಿಲೀನಕ್ಕೆ ಉದ್ಧವ್ ಠಾಕ್ರೆ ಪ್ಲಾನ್; ಶಿವಸೇನೆಯ 6 ಬಂಡಾಯ ಸಂಸದರಿಂದ ಸ್ಪೀಕರ್‌ಗೆ ದೂರು

ಉದ್ಧವ್ ಠಾಕ್ರೆ ಅವರ ಈ ರಾಜೀನಾಮೆಯ ಪ್ರಸ್ತಾಪ ಬಂಡಾಯಗಾರರನ್ನು ಹಿಡಿದಿಡಲು ಮತ್ತು ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಒಟ್ಟುಗೂಡಿಸಲು ಕೈಗೊಂಡಿರುವ ರಾಜತಾಂತ್ರಿಕ ನಡೆ ಎಂದೂ ವಿಶ್ಲೇಷಿಸಲಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link