All posts by nagaraj11081993

ಡಿಕೆ ಶಿವಕುಮಾರ್ ತಿನಿಸಿದ ಸ್ವೀಟನ್ನು ಬಾಯಿಂದ ತೆಗೆದು ಎಸೆದ ಸಿಎಂ ಸಿದ್ದರಾಮಯ್ಯ! ವಿಡಿಯೋ ನೋಡಿ – Kannada News | Vijayapura: CM Siddaramaiah Throws Away Sweet Offered by DK Shivakumar, Video Goes Viral

ವಿಜಯಪುರ, ಜನವರಿ 10: ವಿಜಯಪುರದಲ್ಲಿ ಶುಕ್ರವಾರ ನಡೆದ ಸನ್ಮಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿನ್ನಿಸಿದ ಲಡ್ಡನ್ನು ಬಾಯಿಯಿಂದ ತೆಗೆದು ಬಿಸಾಡಿದ್ದಾರೆ. ದೀರ್ಘಾವಧಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ದಾಖಲೆ ನಿರ್ಮಿಸಿದ ಹಿನ್ನೆಲೆಯಲ್ಲಿ ಈ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಚಿವ ಎಂಬಿ ಪಾಟೀಲ್ ಮನೆಯಲ್ಲಿ ತಯಾರಿಸಿದ ಲಡ್ಡನ್ನು ಸಿದ್ದರಾಮಯ್ಯನವರಿಗೆ ಮೊದಲು ನೀಡಿದರು. ನಂತರ ಎಂ.ಬಿ. ಪಾಟೀಲ್ ಅವರು ಅದೇ ಲಾಡುವನ್ನು ಡಿಕೆ ಶಿವಕುಮಾರ್ ಕೈಗೆ ಕೊಟ್ಟು ಮುಖ್ಯಮಂತ್ರಿಗೆ ತಿನ್ನಿಸುವಂತೆ ಕೇಳಿದರು. ಒತ್ತಾಯಕ್ಕೆ ಮಣಿದು ಡಿಸಿಎಂ ಡಿಕೆ ಶಿವಕುಮಾರ್ ಸಿಎಂಗೆ ಸಿಹಿ ತಿನ್ನಿಸಿದರು. ಆದರೆ, ಆ ಲಡ್ಡನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಯಿಂದ ತೆಗೆದು ಎಸೆದಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಜನವರಿ 10ರ ದಿನಭವಿಷ್ಯ

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ನಿಮ್ಮ ನಾಯಕತ್ವದ ಗುಣಕ್ಕೆ ಪರೀಕ್ಷೆಗಳು ಎದುರಾದುವ ದಿನ ಇದಾಗಿರಲಿದೆ. ಸಣ್ಣ ಪುಟ್ಟ ವಿಚಾರಗಳಿಗೆ ಸಿಟ್ಟು ಮಾಡಿಕೊಳ್ಳದೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದಕ್ಕೆ ಹೋದರೆ ಮಾತ್ರ ಹೊಸ ಯೋಜನೆಗಳು ಸಫಲವಾಗುತ್ತವೆ. ಆರ್ಥಿಕವಾಗಿ ಹಳೆಯ ಹೂಡಿಕೆಗಳಿಂದ ಸಣ್ಣ ಮಟ್ಟದ ಲಾಭ ಬರಬಹುದು, ಆದರೆ ಆ ಹಣವನ್ನು ಮತ್ತೆ ಹೊಸ ಸಾಹಸಗಳಿಗೆ ಬಳಸಬೇಡಿ. ಕುಟುಂಬದಲ್ಲಿ ಅಣ್ಣ ಅಥವಾ ತಂದೆಯ ಸಮಾನ ರಾದಂಥ ವ್ಯಕ್ತಿಗಳ ಜೊತೆಗಿನ ಸಂಬಂಧ ಸುಧಾರಿಸಲಿದೆ. ಸೃಜನಶೀಲ ಕೆಲಸಗಳಿಗೆ ಹೆಚ್ಚಿನ ಒತ್ತು ನೀಡಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಇನ್ ಟ್ಯೂಷನ್ ಬಹಳ ಪ್ರಬಲವಾಗಿರುತ್ತದೆ, ಹಾಗಾಗಿ ಮನಸ್ಸಿನ ಮಾತಿಗೆ ಕಿವಿಗೊಡಿ. ಕಚೇರಿಯಲ್ಲಿ ಗುಂಪುಗಾರಿಕೆಯಿಂದ ದೂರವಿರುವುದು ನಿಮ್ಮ ವೃತ್ತಿಜೀವನಕ್ಕೆ ಒಳ್ಳೆಯದು. ಹಣಕಾಸಿನ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವುದು ಬೇಡ, ಅದು ನಿಮ್ಮನ್ನೇ ಇಕ್ಕಟ್ಟಿಗೆ ಸಿಲುಕಿಸಬಹುದು. ಕಲಾತ್ಮಕ ಹವ್ಯಾಸಗಳಿಗೆ ಸಮಯ ಮೀಸಲಿಡುವುದರಿಂದ ಮಾನಸಿಕ ನೆಮ್ಮದಿ ಸಿಗಲಿದೆ. ಪ್ರೀತಿಪಾತ್ರರೊಂದಿಗೆ ಸಣ್ಣ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ, ಆಹಾರದ ವಿಚಾರದಲ್ಲಿ ಸ್ವಲ್ಪ ಜಾಗರೂಕರಾಗಿರಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ನೀವು ಮಾತು ಕಡಿಮೆ ಮಾಡಿ ಕೆಲಸಕ್ಕೆ ಹೆಚ್ಚು ಆದ್ಯತೆ ನೀಡಿ. ಅತಿಯಾದ ಉಪದೇಶ ಮಾಡುವುದರಿಂದ ನಿಮ್ಮ ಆಪ್ತರನ್ನು ನಿಮ್ಮಿಂದ ದೂರ ಮಾಡಬಹುದು. ವೃತ್ತಿ ಕ್ಷೇತ್ರದಲ್ಲಿ ಹೊಸ ಒಪ್ಪಂದಗಳಿಗೆ ಸಹಿ ಹಾಕಲು ಅತ್ಯಂತ ಶುಭ ದಿನ. ಕೌಟುಂಬಿಕವಾಗಿ ಮಂಗಳ ಕಾರ್ಯಗಳ ಬಗ್ಗೆ ಚರ್ಚೆಗಳು ನಡೆಯಲಿವೆ. ಸಾಮಾಜಿಕ ಜವಾಬ್ದಾರಿಗಳು ಹೆಚ್ಚಾಗಲಿದ್ದು, ಸಂಘ-ಸಂಸ್ಥೆಗಳಲ್ಲಿ ಸಕ್ರಿಯರಾಗಿ ಕಾರ್ಯ ನಿರ್ವಹಿಸುತ್ತಾ ಇರುವವರಿಗೆ ಹೊಸ ಜವಾಬ್ದಾರಿ ಸಿಗಲಿದೆ. ಆರ್ಥಿಕವಾಗಿ ಇದು ಸ್ಥಿರತೆಯ ದಿನ.

ಲೇಖನ- ಎನ್‌.ಕೆ.ಸ್ವಾತಿ

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಈಜನ್ಮಸಂಖ್ಯೆಯವರಿಗೆ ಇಂದು ಹಠಾತ್ ಧನಲಾಭ!

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ನೀವು ಅಂದುಕೊಂಡಿದ್ದಕ್ಕಿಂತ ಭಿನ್ನವಾದ ಫಲಿತಾಂಶಗಳು ಸಿಗಲಿವೆ. ಒಂದು ವೇಳೆ ಸೋಲನ್ನು ಕಂಡಲ್ಲಿ ಎದೆಗುಂದಬೇಡಿ, ಅದು ನಿಮಗೆ ಹೊಸ ಪಾಠವನ್ನು ಕಲಿಸಲಿದೆ. ತಾಂತ್ರಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ವಿದೇಶಿ ಮೂಲದಿಂದ ಸಕಾರಾತ್ಮಕ ಸುದ್ದಿ ಸಿಗಬಹುದು. ಆಸ್ತಿ ಖರೀದಿ ಅಥವಾ ಬಾಡಿಗೆ ಮನೆ ಬದಲಾಯಿಸುವ ಆಲೋಚನೆ ಇದ್ದರೆ ಈ ದಿನ ಚಾಲನೆ ನೀಡಿ. ಮಧ್ಯಾಹ್ನದ ನಂತರ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಮನೆಯ ಹಿರಿಯರ ಸಲಹೆಗಳು ನಿಮ್ಮ ಗೊಂದಲಗಳನ್ನು ಪರಿಹರಿಸಲಿವೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ನಿಮ್ಮ ಬುದ್ಧಿವಂತಿಕೆಗೆ ದೊಡ್ಡ ಸವಾಲು ಎದುರಾಗಲಿದೆ. ಯಾವುದೇ ಹೊಸ ಬಿಜಿನೆಸ್ ಐಡಿಯಾ ಇದ್ದರೆ ಅದನ್ನು ಪ್ರಭಾವಿ ವ್ಯಕ್ತಿಗಳ ಮುಂದೆ ಮಂಡಿಸಲು ಇದು ಸರಿಯಾದ ಸಮಯ. ಆರ್ಥಿಕವಾಗಿ ಹಠಾತ್ ಧನಲಾಭದ ಲಕ್ಷಣಗಳಿವೆ, ಆದರೆ ಅದು ನಿಮ್ಮ ಜೇಬಿನಲ್ಲಿ ಉಳಿಯುವುದು ನಿಮ್ಮ ಶಿಸ್ತಿನ ಮೇಲೆ ನಿರ್ಧಾರವಾಗುತ್ತದೆ. ಉದ್ಯೋಗ ಬದಲಾವಣೆಗಾಗಿ ಪ್ರಯತ್ನಿಸುತ್ತಿರುವವರಿಗೆ ಸಂದರ್ಶನ ಕರೆ ಬರಬಹುದು. ಕಣ್ಣಿನ ದೋಷ ಅಥವಾ ತಲೆನೋವು ಈ ದಿ ಸ್ವಲ್ಪ ತೊಂದರೆ ಕೊಡಬಹುದು.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ನಿಮ್ಮ ವ್ಯಕ್ತಿತ್ವದ ಆಕರ್ಷಣೆ ಈ ದಿನ ಹೆಚ್ಚಾಗಲಿದೆ, ಇದರಿಂದ ಹೊಸ ಸ್ನೇಹ ಸಂಬಂಧಗಳು ಏರ್ಪಡುತ್ತವೆ. ಐಷಾರಾಮಿ ವಸ್ತುಗಳ ಮೇಲೆ ಮೋಹ ಹೆಚ್ಚಾಗಲಿದ್ದು, ಬಜೆಟ್ ಮೀರಿ ಖರ್ಚು ಮಾಡುವ ಸಾಧ್ಯತೆ ಇದೆ. ಅವಿವಾಹಿತರಿಗೆ ವಿವಾಹ ಸಂಬಂಧಗಳ ರೆಫರೆನ್ಸ್ ಸಿಗುವ ಸಂಭವವಿದೆ. ಮನೆಯ ಅಲಂಕಾರಕ್ಕಾಗಿ ಅಥವಾ ಗೃಹಪ್ರವೇಶದಂತಹ ಕೆಲಸಗಳಿಗೆ ಈ ದಿ ಸಮಯ ಮೀಸಲಿಡುವಿರಿ. ದೈಹಿಕ ವ್ಯಾಯಾಮಕ್ಕೆ ಮನ್ನಣೆ ನೀಡಿ, ಇಲ್ಲದಿದ್ದರೆ ಆಲಸ್ಯ ನಿಮ್ಮ ಕೆಲಸಗಳನ್ನು ಕೆಡಿಸಬಹುದು.

ಲೇಖನ- ಎನ್‌.ಕೆ.ಸ್ವಾತಿ

Source link

Horoscope Today 10 January : ಇಂದು ಈ ರಾಶಿಯವರಿಗೆ ಹಣಕ್ಕಾಗಿ ಯಾರನ್ನಾದರೂ ಕೇಳುವ ಸ್ಥಿತಿ ಬರಬಹುದು – Kannada News | Horoscope Today: January 10, 2026 Daily Zodiac Predictions and Lucky Signs

ಮೇಷ ರಾಶಿ:

ನೀವು ದೈಹಿಕಪೀಡೆಯಿಂದ ಬಳಲುತ್ತಿದ್ದರೆ ದುಃಖವು ಹೆಚ್ಚಾಗಬಹುದು. ಸಾಮಾಜಿಕ ಚಟುವಟಿಕೆಗಳಲ್ಲಿ ಅಡಚಣೆ ಇರುವುದು. ಮಕ್ಕಳ ಕಡೆಯಿಂದ ಸಂತೋಷದ ಸುದ್ದಿ ಇರುತ್ತದೆ. ಸ್ತ್ರೀಯರು ತಾಳ್ಮೆಯನ್ನು ಕಳೆದುಕೊಳ್ಳುವ ಸಂಭವವಿದೆ. ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೇ ಸರಿಯಾಗಿ ಗೊತ್ತಿಲ್ಲದೇ ಹೋಗಬಹುದು. ಮಕ್ಕಳ ಶುಭವಾರ್ತೆಯು ಸಂತಸಕೊಡಬಹುದು. ಬಂಗಾರದ ಮೇಲೆ‌ ಹೂಡಿಕೆ ಮಾಡುವಿರಿ. ನಿಮ್ಮ ಮೇಲೆ ಯಾವುದಾದರೊಂದು ವಿಷಯ, ವ್ಯಕ್ತಿಗಳು ಪ್ರಭಾವ ಬೀರಬಹುದು. ಸಮಾಜವು ನಿಮ್ಮನ್ನು ಸ್ವಾರ್ಥಿಯಂತೆ ನೋಡಬಹುದು. ಹಿರಿಯರ ನಂಬಿಕೆಯನ್ನು ಗಳಿಸಲು ಕಷ್ಟವಾದೀತು. ಸಿಟ್ಟಾಗಿ ಮನೆಯಿಂದ ಹೊರ ನಡೆಯುವ ಪ್ರಸಂಗವು ಬರಬಹುದು. ಮನಸ್ಸಿಗೆ ಬಾರದ ಕಾರ್ಯವನ್ನು ಮಾಡಲು ಧೈರ್ಯ ಸಾಲದು.

ವೃಷಭ ರಾಶಿ:

ಪ್ರೇಮವು ನೀವಂದುಕೊಂಡಂತೆ ಮುಕ್ತಾಯವಾದುದ್ದು ನಿಮಗೆ ಖುಷಿಕೊಡುವುದು. ಅಂದುಕೊಂಡಂತೆ ಆಗಿದ್ದಕ್ಕೆ ಸಂತೋಷವು ಇರಲಿದೆ. ವಿದೇಶದಲ್ಲಿ ಉದ್ಯೋಗಕ್ಕಾಗಿ ಪ್ರಯತ್ನಿಸುವಿರಿ. ಗೌಪ್ಯವಾಗಿ ವ್ಯವಹಾರವನ್ನು ನಡೆಸುವಿರಿ. ಪ್ರೀತಿಯನ್ನು ತೋರ್ಪಡಿಸುವ ರೀತಿ ಬೇರೆ ರೀತಿಯದ್ದು. ನೀವು ಇತರರ ಒಳ್ಳೆಯದನ್ನು ಯೋಚಿಸುವಿರಿ ಹಾಗೂ ಒಳ್ಲೆಯ ಮನಸ್ಸಿನಿಂದ ಸೇವೆ ಮಾಡುತ್ತೀರಿ. ನಿಮ್ಮ ಮಕ್ಕಳ ಮನೋಭಾವವನ್ನು ಅವರಿಗೆ ಇಷ್ಟವಾದುದನ್ನು ಮಾಡುವಿರಿ. ಇಂದಿನ ವ್ಯಾಪಾರದಿಂದ ಆರ್ಥಿಕತೆಯು ಬಲವಾಗುವುದು. ಮಕ್ಕಳು ಆರ್ಥಿಕತೆಯ ದುರ್ಬಲತೆಯಿಂದ ವಿದ್ಯಾಭ್ಹ್ಯಾಸವನ್ನು ನಿಲ್ಲಿಸಬೇಕಾದೀತು. ಸ್ತ್ರೀಯರಿಂದ ಸಹಾಯ ಪಡೆದರೂ ನೋಡುಗರು ಅದನ್ನು ಅಪಾರ್ಥ ಮಾಡಿಕೊಳ್ಳಬಹುದು. ನಿಮ್ಮ ಹೇಳಿಕೆಗಳು ಮಹತ್ತ್ವದ್ದಾಗಿರದು.

ಮಿಥುನ ರಾಶಿ:

ನಿಮ್ಮ ಕಠಿಣ ಪರಿಶ್ರಮದಿಂದ ನೀವು ಉತ್ತಮ ಫಲಿತಾಂಶವನ್ನು ಪಡೆಯುವಿರಿ. ಇಂದು ತಾಯಿಯ ಕಡೆಯಿಂದ ಪ್ರೀತಿ ಮತ್ತು ವಿಶೇಷ ಬೆಂಬಲದ ಸಾಧ್ಯತೆಯಿದೆ. ಮೋಜಿಗಾಗಿ ಹಣವನ್ನು ಖರ್ಚು ಮಾಡುತ್ತೀರಿ. ಇದು ನಿಮ್ಮ ಶತ್ರುಗಳನ್ನು ಅಸಮಾಧಾನಗೊಳಿಸುತ್ತದೆ. ಇಂದು ಪೋಷಕರ ಬಗ್ಗೆ ವಿಶೇಷ ಕಾಳಜಿ ವಹಿಸಿ. ಅಪರಿಚಿತರ ಮಾತನ್ನು ನೀವು ನಂಬುವಿರಿ. ಪರೀಕ್ಷೆಯ ಸಿದ್ಧತೆಯಲ್ಲಿ ವಿದ್ಯಾರ್ಥಿಗಳಿಗೆ ಗೊಂದಲವಾಗಬಹುದು. ಬಂಧುಗಳ ವಿಯೋಗವೂ ಆಗಬಹುದು. ವಿವಾಹೇತರ ಸಂಬಂಧದಿಂದ ನಿಮಗೆ ಬೇಸರವಾಗುವುದು. ನಿಮ್ಮ ಮಾತಿನಿಂದ ಯಾವ ಲಾಭವೂ ಆಗದು ಎಂಬುದು ಇಂದು ತಿಳಿಯುವುದು. ಸ್ವಂತ ಉದ್ಯೋಗವನ್ನು ಮಾಡಬೇಕು ಎಂದು ಅನ್ನಿಸುವುದು.

ಕರ್ಕಾಟಕ ರಾಶಿ:

ತಾಳ್ಮೆ ಮತ್ತು ಪ್ರತಿಭೆಯಿಂದ ಶತ್ರು ಗೆಲ್ಲುವಲ್ಲಿ ನೀವು ಯಶಸ್ಸನ್ನು ಗಳಿಸುವಿರಿ. ನಿಮ್ಮದಾದ ಚಿಂತನೆ, ಕಾರ್ಯದಿಂದ ಯಶಸ್ಸನ್ನು ಪಡೆಯಲು ನೀವು ಬಹಳ ಸಮಯ ಕಾಯಬೇಕಾಗಬಹುದು. ಸಣ್ಣ ವಿಷಯಕ್ಕೆ ಸ್ನೇಹಿತರ ಜೊತೆಗಿನ ಸಂಬಂಧವು ಹಾಳಾಗಬಹುದು. ನಿಮ್ಮಿಂದ ಕಾರ್ಯವನ್ನು ಮಾಡಿಸಿಕೊಂಡು ಕೈ ಬಿಡಬಹುದು. ಅಂದುಕೊಂಡಂತೆ ಆಗಿದ್ದಕ್ಕೆ ಸಂತೋಷವು ಇರಲಿದೆ. ವಿದೇಶದಲ್ಲಿ ಉದ್ಯೋಗಕ್ಕಾಗಿ ಪ್ರಯತ್ನಿಸುವಿರಿ. ಮುಸುಕಿನ ಗುದ್ದಾಟದಿಂದ ಮೈಕೈ ನೋವಾಗಬಹುದು ಅಷ್ಟೇ. ಚಂಚಲ ಸ್ವಭಾವವು ತಾನಾಗಿಯೇ ಕಡಿಮೆಯಾಗಿದ್ದು ಅಚ್ಚರಿ ಆಗಬಹುದು. ಕಳೆದುಹೋದುದನ್ನು ಮರಳಿ ಪಡೆಯುವುದು ಕಷ್ಟ. ವಾಹನದಿಂದ ಆರ್ಥಿಕ ಸ್ಥಿತಿಗೆ ಹೊಡೆತ.

ಸಿಂಹ ರಾಶಿ:

ಸ್ನೇಹಿತರ ಜೊತೆ ಸುತ್ತಾಟ ಮತ್ತು ಉತ್ತಮ ಭೋಜನವನ್ನು ಮಾಡುವಿರಿ. ನಿಮ್ಮದು ನಿಮಗೇ ಸಿಕ್ಕರೂ ಸಂತೃಪ್ತಿ ಇರದು. ಹಠದ ಸ್ವಭಾವವನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ. ಎಲ್ಲವನ್ನೂ ನಕಾರಾತ್ಮಕವಾಗಿಯೇ ನೋಡುವಿರಿ. ನಿಮ್ಮ ಭಾವನೆಗಳನ್ನು ಇನ್ನೊಬ್ಬರ ಬಳಿ ಹೇಳುಕೊಳ್ಳುವಿರಿ. ಭೂಮಿಯಿಂದ ಇಂದು ಸಂಪತ್ತು ಕಳೆದುಕೊಳ್ಳಬೇಕಾಗುವುದು. ಹಿರಿಯರ ಮಾತುಗಳು ಪೂರ್ಣವಾಗಿ ಇಷ್ಟವಾಗದು. ವಿದ್ಯಾರ್ಥಿಗಳು ಓದಿನ ಬಗ್ಗೆ ಹೆಚ್ಚು ಗಮನ ಹರಿಸುವುದು ಮುಖ್ಯವಾದೀತು. ಯಾವುದನ್ನೇ ಆದರೂ ಚಿಂತಿಸಿ ಮಾತನಾಡಿ. ಹೊಸ ಮನೆಯನ್ನು ಕಟ್ಟುವ ಯೋಚನೆಯನ್ನು ಕಾರಣಾಂತೆಗಳಿಂದ ನಿಲ್ಲಿಸುವಿರಿ. ಭೂಮಿಯ ಉತ್ಪನ್ನದಿಂದ ಲಾಭ.

ಕನ್ಯಾ ರಾಶಿ:

ಇಂದು ನಿಮಗೆ ಏಕಾಂತವೇ ಹೆಚ್ಚು ಸುಖವನ್ನು ಕೊಡುವುದು. ನಿಮ್ಮಲ್ಲಿ ಇಂದು ದಾನ, ಧರ್ಮದ ಪ್ರಜ್ಞೆ ವರ್ಧಿಸಬಹುದು. ಧಾರ್ಮಿಕ ಆಚರಣೆಗಳಲ್ಲಿ ಶ್ರದ್ಧೆಯಿಂದ ಪಾಲ್ಗೊಳ್ಳುವಿರಿ. ಆರ್ಥಿಕ ಪರಿಸ್ಥಿತಿ ಬಲವಾಗಿರುತ್ತದೆ. ಹೊಟ್ಟೆಯ ಸ್ವಾಸ್ಥ್ಯವು ಕೆಡುವ ಸಾಧ್ಯತೆಯಿದೆ. ಜಾಗರೂಕರಾಗಿರಿ ಮತ್ತು ಆಹಾರದ ಮೇಲೆ ಸಂಯಮವಿರಿಸಿ. ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಮನ್ನಣೆ ಸಿಗುವುದು. ಯಂತ್ರಗಳ ವಿಚಾರದಲ್ಲಿ ನಿಮಗೆ ಹೆಚ್ಚಿನ ಆಸಕ್ತಿಯು ಇರಲಿದ್ದು ವಿದ್ಯಾಭ್ಯಾಸಕ್ಕೆ ಆ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವಿರಿ. ಮಕ್ಕಳ ವಿವಾಹದಿಂದ ಚಿಂತೆ ದೂರವಾಗುವುದು. ಹಿರಿಯರ ನಂಬಿಕೆಯನ್ನು ಗಳಿಸಲು ಕಷ್ಟವಾದೀತು. ಮನೆಯಿಂದ ಹೊರ ನಡೆಯುವ ಪ್ರಸಂಗವು ಬರಬಹುದು.

ತುಲಾ ರಾಶಿ:

ಕೃತಜ್ಞತೆಯಿಂದ ನಿಮ್ಮ ವ್ಯವಹಾರವು ಇರಲಿ. ಸಂಪತ್ತಿಗಾಗಿ ನೀವು ಬಹಳ ಶ್ರಮಪಡುವಿರಿ. ಆರ್ಥಿಕತೆಯ ಅಭಿವೃದ್ಧಿಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗುವುದು. ಆದಾಯಕ್ಕೆ ಸ್ವಪ್ರಯತ್ನವು ಸ್ವಲ್ಪವಾದರೂ ಇರಲಿ. ದಿನವನ್ನು ಮನೆಯ ಕೆಲಸದ ಜೊತೆ ಕಳೆಯುವಿರಿ. ಎಂದೋ ಆಗಬೇಕಿದ್ದ ಕೆಲಸಗಳು ಇಂದು ಪೂರ್ಣವಾಗುವುದು‌. ಹಗುರವಾಗಿ ಯಾರ ಬಗ್ಗೆಯೂ ಮಾತನಾಡುವುದು ಬೇಡ. ನಿಮ್ಮ ವ್ಯಕ್ತಿತ್ವದ ಪೂರ್ಣಪರಿಚಯವು ಆಗುವುದು. ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಿರಲಿ. ಭೇಟಿಯನ್ನು ಮಾಡಲು ಕಾದು ಸಮಯವನ್ನು ವ್ಯರ್ಥಮಾಡಿಕೊಳ್ಳುವಿರಿ. ತಾಳ್ಮೆಯಿಂದ ವರ್ತಿಸಲು ನಿಮ್ಮವರಿಂದ ಸಲಹೆ ಸಿಗುವುದು. ವೈವಾಹಿಕ ಜೀವನದಲ್ಲಿ ಶೈಕ್ಷಣಿಕ ತುಲನೆ ನಡೆಯಬಹುದು.

ವೃಶ್ಚಿಕ ರಾಶಿ:

ನೀವು ಯಾವುದೇ ಹೊಸ ಕೆಲಸದಲ್ಲಿ ಹೂಡಿಕೆ ಮಾಡಬೇಕಾದರೆ, ಖಂಡಿತವಾಗಿಯೂ ಮಾಡಿ, ಭವಿಷ್ಯದಲ್ಲಿ ಪ್ರಯೋಜನವಿದೆ. ಅಲ್ಪವನ್ನು ಮಾತ್ರ ಮಾಡಿದರೆ ನಿಮಗೂ ಹೊರೆಯಾಗದು. ಸಾಲವನ್ನು ಹಿಂಪಡೆಯಲು ಇಂದು ತಿರುಗಾಟ ಮಾಡುವಿರಿ. ಇನ್ನೊಬ್ಬರು ಕೊಡುವ ತೊಂದರೆಯಿಂದ ನೀವು ಬೇಸತ್ತುಹೋಗಬಹುದು. ವ್ಯವಹಾರಕ್ಕೆ ಇಂದು ದೂರಪ್ರಯಾಣ ಮಾಡುವಿರಿ. ನಿಮ್ಮ ಮಾತಿನಿಂದ ಯಾವ ಲಾಭವೂ ಆಗದು ಎಂಬುದು ಇಂದು ತಿಳಿಯುವುದು. ಸ್ವಂತ ಉದ್ಯೋಗವನ್ನು ಮಾಡಬೇಕು ಎಂದು ಅನ್ನಿಸುವುದು. ನಿಮ್ಮನ್ನೇ ಒಮ್ಮೆ ನೋಡಿಕೊಳ್ಳಿ. ಇಂದು ಕಲಹವಾಗುವಾಗ ಅಪರಿಚಿತರ ಸಹಾಯವು ಸಿಗಲಿದೆ. ಭಾಗ್ಯದ ಬಾಗಿಲು ತೆಗೆಯುವ ನಿರೀಕ್ಷೆಯಲ್ಲಿ ಇರುವಿರಿ.

ಧನು ರಾಶಿ:

ಭೂಮಿಯಿಂದ ಇಂದು ಸಂಪತ್ತು ಸಿಗಬಹುದು. ಹಿರಿಯರ ಮಾತುಗಳು ಪೂರ್ಣವಾಗಿ ಇಷ್ಟವಾಗದು. ವಿದ್ಯಾರ್ಥಿಗಳು ಓದಿನ ಬಗ್ಗೆ ಹೆಚ್ಚು ಗಮನ ಹರಿಸುವುದು ಮುಖ್ಯವಾಗಬೇಕು. ಯಾರ ಬಳಿಯೇ ಆದರೂ ಚಿಂತಿಸಿ ಮಾತನಾಡಿ. ನಿಮ್ಮ ಮನಸ್ಸಿಗೆ ಹಿಡಿಸದ ವಿಚಾರಗಳ ಚರ್ಚೆಯಿಂದ ನೀವು ದೂರ ಇರುವಿರಿ. ನಿಮ್ಮ ಸ್ವಭಾವದಲ್ಲಿ ಬದಲಾವಣೆ ಇರಲಿದ್ದು ಇತರರಿಗೆ ಇದು ಅನಿರೀಕ್ಷಿತವೂ ಆಗಬಹುದು. ಕುಟುಂಬವು ನಿಮ್ಮ ವಿವಾಹದ ಸಂತೋಷದಲ್ಲಿ ಇರಲಿದೆ. ಕೃತಜ್ಞತೆಯಿಂದ ನಿಮ್ಮ ವ್ಯವಹಾರವು ಇರಲಿ. ಸಂಗಾತಿಯ ಪ್ರೀತಿಯು ಕಡಿಮೆ ಆದೀತು. ಸ್ವಂತ ಕೆಲಸಕ್ಕೆ ಸಮಯವು ಸಿಗದೇ ಎಲ್ಲವನ್ನೂ ಉಳಿಸಿಕೊಳ್ಳುವಿರಿ. ಆರ್ಥಿಕ ವಿಚಾರದಲ್ಲಿ ಸರಿಯಾದ ಹೊಂದಾಣಿಕೆ ಸಿಗದೇ ಕಷ್ಟವಾಗಬಹುದು.

ಮಕರ ರಾಶಿ:

ಕುಟುಂಬ ಸದಸ್ಯರಿಗೆ ನೀವು ವಿಶ್ವಾಸದ್ರೋಹಿ ಆಗುವ ಸಾಧ್ಯತೆಯಿದೆ. ಸಹಾಯ ಸಿಗುವುದಿಲ್ಲ ಬೇಡಿದರೆ ಉತ್ತಮ. ಹಳೆಯ ಸ್ನೇಹಿತನನ್ನು ಯಾವುದಾದರೂ ರೀತಿಯಲ್ಲಿ ಭೇಟಿಯಾಗುವಿರಿ. ಮನೆಯನ್ನು ಬಿಟ್ಟು ಹೋಗಲು ಚೋರ ಭಯವು ಕಾಡಬಹುದು. ಸ್ನೇಹಿತರು ನಿಮ್ಮ ನಿರ್ಲಕ್ಷ್ಯದ ಕಾರಣದಿಂದ ದೂರಾಗಬಹುದು. ಎಂದೋ ಆಗಬೇಕಿದ್ದ ಕೆಲಸಗಳು ಇಂದು ಪೂರ್ಣವಾಗುವುದು‌. ಹಗುರವಾಗಿ ಯಾರ ಬಗ್ಗೆಯೂ ಮಾತನಾಡುವುದು ಬೇಡ. ನಿಮ್ಮ ವ್ಯಕ್ತಿತ್ವದ ಪೂರ್ಣಪರಿಚಯವು ಆಗುವುದು. ಆತ್ಮವಂಚನೆಯೇ ನಿಮ್ಮನ್ನು ಬಹಳ ಕಾಡುವುದು. ಇಂದೂ ಕೂಡ ಮನೆಯಿಂದ ಕಛೇರಿಯ ಕೆಲಸವನ್ನು ಮಾಡುವಿರಿ. ಎಲ್ಲವೂ ಇದ್ದರೂ ಅದನ್ನು ಬಳಸುವ ಕಲೆಯೂ ಗೊತ್ತಿರಬೇಕಾಗುವುದು.

ಕುಂಭ ರಾಶಿ:

ಮಾತಿನಲ್ಲಿ ಮಾಧುರ್ಯ ಇಲ್ಲದಿದ್ದರೆ ಸಂಬಂಧದಲ್ಲಿ ಕಹಿಯಾದೀತು. ವಿವಿಧ ಮೂಲಗಳಿಂದ ನಿಮಗೆ ಆದಾಯವು ಬರಲಿದ್ದು ಹೂಡಿಕೆಯ ಕಡೆ ನಿಮ್ಮ ಗಮನ ಇರುವುದು. ನಿಮ್ಮ ಆಲಸ್ಯವನ್ನು ಹಿತಶತ್ರುಗಳು ಅವಕಾಶವಾಗಿ ತೆಗೆದುಕೊಳ್ಳುವರು. ಯಾರನ್ನೂ ನೀವು ಒಮ್ಮೆಲೆ ನಂಬುವುದು ಕಷ್ಟವಾದರೂ ಇಂದು ನಂಬಿಕೆ ಅನಿವಾರ್ಯ ಆದೀತು. ನಿಮ್ಮ ಸ್ಥಿರಮತಿಯಿಂದ ಕಷ್ಟದ ಸಂದರ್ಭವನ್ನು ಹಿಡಿತಕ್ಕೆ ತರುವಿರಿ. ಸಂಗಾತಿಗೆ ಉಡುಗೊರೆಯನ್ನು ನೀಡಿ ಕೋಪವು ಕಡಿಮೆ ಮಾಡುವಿರಿ. ಇಷ್ಟಪಟ್ಟರ ಜೊತೆ ಸಮಯವನ್ನು ಕಳೆಯಲು ಆಗದು. ಅದಕ್ಕೆ ಅವರಿಗೆ ಬೇಸರವೂ ಆಗುವುದು. ನಿಮ್ಮ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಬಯಸುವಿರಿ. ಪ್ರಣಯದಲ್ಲಿ ಇಂದು ಅತಿಯಾದ ಆಸಕ್ತಿಯು ಇರುವುದು.

ಮೀನ ರಾಶಿ:

ನೀವು ಸದಾ ಸಂತೋಷದಿಂದ ಇರುವ ಕಾರಣ ಜನರು ನಿಮ್ಮೊಂದಿಗೆ ಸಂಬಂಧ ಹೊಂದಲು ಪ್ರಯತ್ನಿಸುತ್ತಾರೆ. ಸಾಮಾಜಿಕ ಗೌರವವನ್ನು ಪಡೆಯುವುದರಿಂದ ನಿಮ್ಮ ಸ್ಥೈರ್ಯ ಹೆಚ್ಚಾಗುತ್ತದೆ. ಮನಸ್ಸಿನಲ್ಲಿ ನಾನಾ ಬಗೆಯ ಗೊಂದಲವು ಇರುವುದು. ವಿದೇಶ ಪ್ರಯಾಣಕ್ಕೆ ಮಿತ್ರನ ಸಹಕಾರವನ್ನು ಅಪೇಕ್ಷಿಸುವಿರಿ. ಕೃಷಿಯ ಬಗ್ಗೆ ಸ್ವಲ್ಪ ಆಸಕ್ತಿಯು ಇರುವುದು. ಹಣಕ್ಕಾಗಿ ಯಾರನ್ನಾದರೂ ಕೇಳುವ ಸ್ಥಿತಿಯು ಬರಬಹುದು. ಆಪ್ತರ ಜೊತೆಗಿದ್ದು ವ್ಯವಹಾರದ ಚಾತುರ್ಯವನ್ನು ನೀವು ಇಂದು ಅರಿತುಕೊಳ್ಳುವಿರಿ. ನಿಮ್ಮ ವಸ್ತುವೇ ಆದರೂ ಅದರ ಮೇಲೆ ಅಧಿಕಾರ ಚಲಾಯಿಸಲಾಗದು. ಆಪ್ತರ ಮೇಲೆ‌ ಸಂಶಯವನ್ನು ಇಟ್ಟುಕೊಳ್ಳುವುದು ಬೇಡ.

ಜನವರಿ 10,​​ 2026ರ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಪೌಷ, ಸೌರ ಮಾಸ : ಧನು, ಮಹಾನಕ್ಷತ್ರ : ಪೂರ್ವಾಷಾಢ, ವಾರ : ಶನಿ, ಪಕ್ಷ : ಕೃಷ್ಣ, ತಿಥಿ : ಅಷ್ಟಮೀ ನಿತ್ಯನಕ್ಷತ್ರ : ಹಸ್ತಾ ಯೋಗ : ಅತಿಗಂಡ, ಕರಣ : ಬವ, ಸೂರ್ಯೋದಯ – 06 – 52 am, ಸೂರ್ಯಾಸ್ತ – 06 – 11 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 09-42 – 11:07, ಯಮಗಂಡ ಕಾಲ 13:57 – 15:22, ಗುಳಿಕ ಕಾಲ 06:53 – 08:18

-ಲೋಹಿತ ಹೆಬ್ಬಾರ್ – 8762924271 (what’s app only)

Source link

WPL 2026: 6,4,6,4..! ಕೊನೆಯ ಓವರ್​ನಲ್ಲಿ ಪಂದ್ಯ ಗೆಲ್ಲಿಸಿದ ನಡಿನ್ ಡಿ ಕ್ಲರ್ಕ್; ವಿಡಿಯೋ ನೋಡಿ – Kannada News | WPL 2026: RCB Edges MI in Thriller; Nadine de Klerk’s All Round Heroics

ಮಹಿಳಾ ಪ್ರೀಮಿಯರ್​ ಲೀಗ್​ನ 4ನೇ ಸೀಸನ್​ಗೆ ಯಾವ ರೀತಿಯ ಆರಂಭದ ಅವಶ್ಯಕತೆಯಿತ್ತೋ, ಅದೇ ರೀತಿಯ ಆರಂಭ ಸಿಕ್ಕಿದೆ. ಕೊನೆಯ ಎಸೆತದವರೆಗೂ ಪ್ರೇಕ್ಷಕರನ್ನು ಸೀಟಿನ ತುದಿಯಲ್ಲಿ ಕೂರಿಸಿದ್ದ ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ತಂಡವನ್ನು ಮಣಿಸಿದ ಆರ್​ಸಿಬಿ ಗೆಲುವಿನ ಶುಭಾರಂಭ ಮಾಡಿದೆ. ವಾಸ್ತವವಾಗಿ ಒಂದು ಹಂತದಲ್ಲಿ ಪಂದ್ಯ ಮುಂಬೈ ಪರ ವಾಲಿತ್ತು. ಆದರೆ ಕೊನೆಯವರೆಗೂ ಹೋರಾಟ ಬಿಟ್ಟುಕೊಡದ ಆರ್​ಸಿಬಿಯ ಸ್ಟಾರ್ ಆಲ್‌ರೌಂಡರ್ ನಡಿನ್ ಡಿ ಕ್ಲರ್ಕ್​ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು.

ವಾಸ್ತವವಾಗಿ ಮುಂಬೈ ನೀಡಿದ 155 ರನ್​ಗಳ ಗುರಿ ಬೆನ್ನಟ್ಟಿದ ಆರ್​ಸಿಬಿ 18ನೇ ಓವರ್​ ಅಂತ್ಯಕ್ಕೆ ಪ್ರಮುಖ 7 ವಿಕೆಟ್ ಕಳೆದುಕೊಂಡು 126 ರನ್ ಕಲೆಹಾಕಿತ್ತು. ಹೀಗಾಗಿ ಕೊನೆಯ 2 ಎಸೆತಗಳಲ್ಲಿ ಆರ್​ಸಿಬಿ ಗೆಲುವಿಗೆ 29 ರನ್ ಬೇಕಿತ್ತು. 19ನೇ ಓವರ್​ನಲ್ಲಿ 11 ರನ್​ಗಳು ಬಂದವು. ಅಂತಿಮವಾಗಿ ಕೊನೆಯ ಓವರ್​ನಲ್ಲಿ ಆರ್​ಸಿಬಿಗೆ 18 ರನ್​ಗಳು ಬೇಕಿದ್ದವು.

ನ್ಯಾಟ್ ಸಿವರ್-ಬ್ರಂಟ್ ಎಸೆದ 20ನೇ ಓವರ್​ನ ಮೊದಲ 2 ಎಸೆತಗಳಲ್ಲಿ ಕ್ಲರ್ಕ್​ಗೆ ಯಾವುದೇ ರನ್ ಕಲೆಹಾಕಲು ಸಾಧ್ಯವಾಗಲಿಲ್ಲ. ಆದರೆ ಉಳಿದ 4 ಎಸೆತಗಳಲ್ಲಿ ಕ್ಲರ್ಕ್​ ಕ್ರಮವಾಗಿ 6,4,6,4 ಬಾರಿಸಿ ಮುಂಬೈ ತಂಡದಿಂದ ಜಯವನ್ನು ಕಸಿದುಕೊಂಡರು. ನಾಡಿನ್ ಡಿ ಕ್ಲರ್ಕ್ ತಮ್ಮ ಇನ್ನಿಂಗ್ಸ್‌ನಲ್ಲಿ ಏಳು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಬಾರಿಸಿದರು. ಡಿ ಕ್ಲರ್ಕ್ ಬ್ಯಾಟಿಂಗ್​ನಲ್ಲಿ ಮಾತ್ರವಲ್ಲದೆ ಬೌಲಿಂಗ್​ನಲ್ಲೂ ನಾಲ್ಕು ಓವರ್​ಗಳಲ್ಲಿ 26 ರನ್ ನೀಡಿ ನಾಲ್ಕು ವಿಕೆಟ್ ಪಡೆದರು.

Source link

WPL 2026: ರಣರೋಚಕ ಪಂದ್ಯದಲ್ಲಿ ಹಾಲಿ ಚಾಂಪಿಯನ್​ಗಳಿಗೆ ಮಣ್ಣು ಮುಕ್ಕಿಸಿದ ಆರ್​ಸಿಬಿ

ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಆರ್​ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಮಹಿಳಾ ಪ್ರೀಮಿಯರ್ ಲೀಗ್​ನ ನಾಲ್ಕನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿದ ಆರ್​ಸಿಬಿ ಲೀಗ್​ನಲ್ಲಿ ಗೆಲುವಿನ ಶುಭಾರಂಭ ಮಾಡಿದೆ. ರಣರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ ಕೊನೆಯ ಎಸೆತದವರೆಗೂ ಯಾವ ತಂಡಕ್ಕೆ ಗೆಲುವು ಸಿಗಲಿದೆ ಎಂಬುದನ್ನು ಹೇಳುವುದು ಕಷ್ಟಕರವಾಗಿತ್ತು. ಆದಾಗ್ಯೂ ಆರ್​​ಸಿಬಿ ಪರ ಆಲ್​ರೌಂಡರ್ ಪ್ರದರ್ಶನ ನೀಡಿದ ನಡಿನ್ ಡಿ ಕ್ಲರ್ಕ್​ ಕೊನೆಯ ಓವರ್​ನಲ್ಲಿ 2 ಸಿಕ್ಸರ್ ಹಾಗೂ 2 ಬೌಂಡರಿ ಬಾರಿಸಿ ತಂಡಕ್ಕೆ ರೋಚಕ ಜಯ ತಂದುಕೊಟ್ಟರು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 154 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆರ್​ಸಿಬಿ ಕೊನೆಯ ಓವರ್​ನ ಕೊನೆಯ ಎಸೆತದಲ್ಲಿ ಗೆಲುವಿನ ದಡ ಮುಟ್ಟಿತು.

Source link

ಮಗನಿಗೆ ಚಳಿಯಾಗುತ್ತೆ! ಹುತಾತ್ಮನಾದ ಸೈನಿಕನ ಪ್ರತಿಮೆಗೆ ಕಂಬಳಿ ಹೊದಿಸಿದ ತಾಯಿ – Kannada News | Mother Drapes martyred Sons Statue With Blanket To Save Him From Cold In Jammu

ಜಮ್ಮು, ಜನವರಿ 9: ಜಮ್ಮುವಿನಲ್ಲಿ ಸೇನಾ ಕಾರ್ಯಾಚರಣೆಯ ವೇಳೆ ಹುತಾತ್ಮನಾಗಿದ್ದ ಸೈನಿಕ ಗುರ್ನಮ್ ಸಿಂಗ್ ಎಂಬುವವರ ಪ್ರತಿಮೆಯನ್ನು ಊರಿನಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಅಲ್ಲಿ ಈಗ ವಿಪರೀತ ಚಳಿ ಇರುವುದರಿಂದ ತನ್ನ ಮಗನ ಪುತ್ಥಳಿಗೂ ಚಳಿಯಾಗುತ್ತಿರಬಹುದು ಎಂದು ಆ ಸೈನಿಕನ ತಾಯಿ ಆ ಪ್ರತಿಮೆಗೆ ದಪ್ಪನೆಯ ಕಂಬಳಿ ಹೊದೆಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಯೂಟ್ಯೂಬ್ ವಿಡಿಯೋ ನೋಡಿಕೊಂಡು ಗರ್ಭಿಣಿಗೆ ಆಪರೇಷನ್ ಮಾಡಿದ ವೈದ್ಯರು; ಹೆರಿಗೆ ವೇಳೆ ತಾಯಿ ಸಾವು! – Kannada News | Bihar fake doctor performed operation to pregnant woman after watching youtube video she died during delivery

ನವದೆಹಲಿ, ಜನವರಿ 9: ಹೊಟ್ಟೆ ನೋವಿನಿಂದ ನರಳುತ್ತಿದ್ದ ಗರ್ಭಿಣಿಗೆ (Pregnant) ನಕಲಿ ವೈದ್ಯರೊಬ್ಬರು ಯೂಟ್ಯೂಬ್ ವಿಡಿಯೋ ನೋಡಿಕೊಂಡು ಆಪರೇಷನ್ ಮಾಡಿದ್ದಾರೆ. ಆ ವೈದ್ಯರ ಹುಚ್ಚಾಟದಿಂದಾಗಿ ಆ ಮಹಿಳೆ ಸಾವನ್ನಪ್ಪಿದ್ದಾರೆ. ಆದರೆ, ಮಗು ಸದ್ಯಕ್ಕೆ ಸುರಕ್ಷಿತವಾಗಿದೆ. ಬಿಹಾರದ ಭಾಗಲ್ಪುರದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ನಕಲಿ ವೈದ್ಯ ಯೂಟ್ಯೂಬ್​​ನಲ್ಲಿ ಪೋಸ್ಟ್ ಮಾಡಲಾಗಿದ್ದ ವಿಡಿಯೋವನ್ನು ನೋಡಿಕೊಂಡು ಹೆರಿಗೆ ನೋವಿನಿಂದ ನರಳುತ್ತಿದ್ದ ಮಹಿಳೆಗೆ ಆಪರೇಷನ್ ಮಾಡಿದ್ದಾರೆ. ಆಪರೇಷನ್ ಸಮಯದಲ್ಲಿ ಮಹಿಳೆ ಸಾವನ್ನಪ್ಪಿದ್ದಾರೆ.

ಈ ವಿಷಯ ತಿಳಿಯುತ್ತಿದ್ದಂತೆ ಮಹಿಳೆಯ ಕುಟುಂಬಸ್ಥರು ಹಾಗೂ ಊರಿನವರು ಆಸ್ಪತ್ರೆಗೆ ಮುತ್ತಿಗೆ ಹಾಕಿ ವೈದ್ಯರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಿಳೆಯ ಶವವನ್ನು ಸ್ವಾಧೀನಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಮೃತ ಮಹಿಳೆಯನ್ನು ಸ್ವಾತಿ ದೇವಿ ಎಂದು ಗುರುತಿಸಲಾಗಿದೆ. ಅವರ ಅತ್ತೆ-ಮಾವ ಜಾರ್ಖಂಡ್‌ನ ಠಾಕೂರ್ಗಂಟಿ ಮೋಧಿಯಾದಲ್ಲಿ ವಾಸಿಸುತ್ತಿದ್ದಾರೆ. ಅವರ ಪತಿ ರೋಷನ್ ಸಹಾ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಗರ್ಭಿಣಿಯಾದ ನಂತರ ಆ ಮಹಿಳೆ ರಸಲ್‌ಪುರದಲ್ಲಿರುವ ತನ್ನ ಹೆತ್ತವರ ಮನೆಯಲ್ಲಿ ವಾಸಿಸುತ್ತಿದ್ದರು. ಅಲ್ಲಿ ಅವರು ಶ್ರೀಮಠ ಸ್ಥಾನದ ಬಳಿಯ ನಕಲಿ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿದ್ದರು.

ಇದನ್ನೂ ಓದಿ: Viral: ಬಾತ್ ರೂಮ್‌ನಲ್ಲೇ ಹೆರಿಗೆ; ನವಜಾತ ಶಿಶುವನ್ನು ಬಕೆಟ್‌ನಲ್ಲೇ ತುಂಬಿಸಿಟ್ಟು ಎಸ್ಕೇಪ್ ಆದ ಬಾಣಂತಿ

ಗುರುವಾರ ರಾತ್ರಿ ಸ್ವಾತಿ ದೇವಿಗೆ ಹಠಾತ್ತನೆ ಹೆರಿಗೆ ನೋವು ಕಾಣಿಸಿಕೊಂಡಿತು. ಆಕೆಯ ಕುಟುಂಬವು ತಕ್ಷಣ ಆಕೆಯನ್ನು ಅದೇ ಕ್ಲಿನಿಕ್​ಗೆ ಕರೆದೊಯ್ದರು. ಆಕೆಯನ್ನು ಪರೀಕ್ಷಿಸಿದ ನಂತರ ವೈದ್ಯರು ತಮ್ಮ ಸಹಾಯಕರೊಂದಿಗೆ ಆಪರೇಷನ್ ಮಾಡಲು ಸಜ್ಜಾದರು. ಆ ಮಹಿಳೆಯ ಕುಟುಂಬದ ಒಪ್ಪಿಗೆಯನ್ನು ಪಡೆದ ನಂತರ ವೈದ್ಯರು ಹೆರಿಗೆಯ ಕಾರ್ಯವಿಧಾನವನ್ನು ಅರ್ಥ ಮಾಡಿಕೊಳ್ಳಲು ಯೂಟ್ಯೂಬ್ ವೀಡಿಯೊವನ್ನು ವೀಕ್ಷಿಸಿದರು. ಬಳಿಕ ಆ ಮೊಬೈಲನ್ನು ಆಪರೇಷನ್ ಮಾಡುವ ಜಾಗದಲ್ಲಿಟ್ಟುಕೊಂಡೇ ಅಗತ್ಯ ವೈದ್ಯಕೀಯ ಸಹಾಯವಿಲ್ಲದೆಯೇ ಆಪರೇಷನ್ ಪ್ರಾರಂಭಿಸಿದರು.

ಇದನ್ನೂ ಓದಿ: Viral News: ಹಾಸಿಗೆಯಲ್ಲಿ ಮೂತ್ರ ಮಾಡಿದ್ದಕ್ಕೆ ಮಗುವಿನ ಗುಪ್ತಾಂಗವನ್ನೇ ಸುಟ್ಟ ತಾಯಿ!

ಈ ವೇಳೆ ಆ ಮಹಿಳೆಗೆ ತೀವ್ರ ರಕ್ತಸ್ರಾವವಾಗಿ ಆಪರೇಷನ್ ನಡೆಯುತ್ತಿದ್ದ ಜಾಗದಲ್ಲೇ ಸಾವನ್ನಪ್ಪಿದರು. ಆದರೂ ಮಗುವನ್ನು ಆಕೆಯ ಹೊಟ್ಟೆಯಿಂದ ಸುರಕ್ಷಿತವಾಗಿ ಹೊರತೆಗೆಯಲಾಯಿತು. ಆದರೆ, ಆಕೆ ಮೃತಪಟ್ಟ ವಿಷಯವನ್ನು ಮುಚ್ಚಿಟ್ಟ ವೈದ್ಯರು ಆಕೆಯ ಸ್ಥಿತಿ ಚೆನ್ನಾಗಿಲ್ಲ, ಅವರನ್ನು ಬೇರೆ ವೈದ್ಯರ ಬಳಿಗೆ ಕರೆದೊಯ್ಯಬೇಕು ಎಂದು ಹೇಳಿದರು. ಬಳಿಕ ಅವರು ಕ್ಲಿನಿಕ್ ಅನ್ನು ಮುಚ್ಚಿ ಆ ಸ್ಥಳದಿಂದ ಓಡಿಹೋದರು. ಬಳಿಕ ಪೊಲೀಸರು ವಿಷಯ ತಿಳಿದ ಬಳಿಕ ಆ ವೈದ್ಯರನ್ನು ವಶಕ್ಕೆ ಪಡೆದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಗ್ ಬಾಸ್ ಕನ್ನಡ 12: ಗಿಲ್ಲಿಗಿಂತಲೂ ಮೊದಲೇ ಫಿನಾಲೆ ತಲುಪಿದ ಧನುಷ್ – Kannada News | Dhanush reaches the finale of Bigg Boss Kannada Season 12 before Gilli Nata

‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಶೋನಲ್ಲಿ ಯಾರು ಗೆಲ್ಲುತ್ತಾರೆ ಎಂಬ ಬಗ್ಗೆ ಜೋರಾಗಿ ಚರ್ಚೆ ನಡೆಯುತ್ತಿದೆ. ಗಿಲ್ಲಿ ನಟ ಅವರ ಮೇಲೆ ವೀಕ್ಷಕರು ಭರವಸೆ ಇಟ್ಟುಕೊಂಡಿದ್ದಾರೆ. ಆದರೆ ಟಾಪ್ 6 ಆಟದಲ್ಲಿ ಗಿಲ್ಲಿ ನಟ (Gilli Nata) ಅವರು ಎಡವಿದ್ದಾರೆ. ಎಲ್ಲರಿಗಿಂತ ಮೊದಲು ಗಿಲ್ಲಿ ನಟ ಅವರೇ ಫಿನಾಲೆ ಪ್ರವೇಶಿಸಬಹುದು ಎಂದು ಊಹಿಸಲಾಗಿತ್ತು. ಆದರೆ ಆಗಿದ್ದೇ ಬೇರೆ. ಗಿಲ್ಲಿ ನಟ ಅವರಿಗಿಂತಲೂ ಮೊದಲು ಧನುಷ್ (Dhanush) ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಫಿನಾಲೆಯನ್ನು ತಲುಪಿದ್ದಾರೆ. ಅವರ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ.

ಕಳೆದ ವಾರ ಧನುಷ್ ಅವರು ಕ್ಯಾಪ್ಟನ್ ಆದರು. ಅವರು ಈ ಸೀಸನ್​ನ ಕೊನೇ ಕ್ಯಾಪ್ಟನ್ ಆದ್ದರಿಂದ ಅವರಿಗೆ ಕೆಲವು ವಿಶೇಷ ಅಧಿಕಾರಗಳು ಸಿಕ್ಕವು. ಟಾಪ್ 6 ಆಟದಲ್ಲಿ ನೇರವಾಗಿ ಸ್ಪರ್ಧಿಸುವ ಚಾನ್ಸ್ ಅವರಿಗೆ ಸಿಕ್ಕಿತ್ತು. ಅದನ್ನು ಅವರು ಚೆನ್ನಾಗಿ ಉಪಯೋಗಿಸಿಕೊಂಡರು. ಕೊನೆಯ ಟಾಸ್ಕ್​​ನಲ್ಲಿ ಜಯಶಾಲಿ ಆಗುವ ಮೂಲಕ ಅವರು ಫಿನಾಲೆ ತಲುಪಿದರು.

ಈ ಟಾಸ್ಕ್​​ನಲ್ಲಿ ಅಶ್ವಿನಿ ಗೌಡ, ಧನುಷ್, ಮ್ಯೂಟೆಂಟ್ ರಘು, ಕಾವ್ಯಾ ಶೈವ ಅವರು ಭಾಗಿ ಆಗಿದ್ದರು. ಎಲ್ಲರ ನಡುವೆ ಟಫ್ ಸ್ಪರ್ಧೆ ಏರ್ಪಟ್ಟಿತ್ತು. ಅತಿ ಕಡಿಮೆ ಸಮಯದಲ್ಲಿ ಟಾಸ್ಕ್ ಪೂರ್ಣಗೊಳಿಸಿದ ಧನುಷ್ ಅವರು ಫಿನಾಲೆಗೆ ಟಿಕೆಟ್ ಪಡೆದರು. ಇನ್ನುಳಿದವರಿಗೆ ಸಹಜವಾಗಿಯೇ ನಿರಾಸೆ ಆಯಿತು. ಧನುಷ್ ಫಿನಾಲೆ ತಲುಪಿದ್ದಕ್ಕೆ ರಾಶಿಕಾ ಶೆಟ್ಟಿ ಅವರು ಹೆಚ್ಚು ಖುಷಿಪಟ್ಟರು.

ಆರಂಭದಲ್ಲಿ ಧನುಷ್ ಅವರು ಹೆಚ್ಚು ಆ್ಯಕ್ಟೀವ್ ಆಗಿರಲಿಲ್ಲ. ಟಾಸ್ಕ್ ಚೆನ್ನಾಗಿ ಆಡಿದ್ದರೂ ಕೂಡ ಮನರಂಜನೆ ನೀಡುವುದರಲ್ಲಿ ಹಿಂದುಳಿದಿದ್ದರು. ಆದರೆ ಟಾಸ್ಕ್​​ನಲ್ಲಿ ಸಿಕ್ಕ ಅವಕಾಶಗಳನ್ನು ಅವರು ಸೂಕ್ತವಾಗಿ ಉಪಯೋಗಿಸಿಕೊಂಡು ಇನ್ನುಳಿದವರನ್ನು ಹಿಂದಿಕ್ಕಿದರು. ಕಿರುತೆರೆಯಲ್ಲಿ ಮಿಂಚಿರುವ ಅವರಿಗೆ ಅಭಿಮಾನಿ ಬಳಗ ಇದೆ. ಅಭಿಮಾನಿಗಳಿಂದ ವೋಟ್ಸ್ ಸಿಗಲಿದೆ.

ಇದನ್ನೂ ಓದಿ: ಬನಿಯನ್ ಹಾಕಿದರೂ ರಾಜನಂತೆ ಬಾಳುತ್ತಿರುವ ಗಿಲ್ಲಿ ನಟ: ಗೆಲುವಿನ ಸೂಚನೆ ಕೊಟ್ಟ ಸುದೀಪ್

‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಲ್ಲಿ ಗಿಲ್ಲಿ ನಟ ಅವರು ಸಿಕ್ಕಾಪಟ್ಟೆ ಹೈಲೈಟ್ ಆಗಿದ್ದಾರೆ. ಹೊರಗಡೆ ಅವರಿಗೆ ಇರುವ ಅಭಿಮಾನಿ ಬಳಗ ಹಿರಿದಾಗಿದೆ. ಇನ್​ಸ್ಟಾಗ್ರಾಮ್​​ನಲ್ಲಿ ಅವರನ್ನು ಹಿಂಬಾಲಿಸುವವರ ಸಂಖ್ಯೆ 10 ಲಕ್ಷ ದಾಟಿದೆ. ಒಂದು ಮಿಲಿಯನ್ ಫಾಲೋವರ್ಸ್ ಆಗಬೇಕು ಎಂಬುದು ಗಿಲ್ಲಿ ಕನಸಾಗಿತ್ತು. ಅದು ನನಸಾಗಿದೆ. ಅವರು ವಿನ್ ಆಗುತ್ತಾರಾ ಇಲ್ಲವಾ ಎಂಬುದನ್ನು ನೋಡಲು ವೀಕ್ಷಕರು ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೇರಳದ ಕನ್ನಡ ಶಾಲೆಗಳಲ್ಲಿ ಮಲಯಾಳಂ ಹೇರಿಕೆ: ಪಿಣರಾಯಿ ವಿಜಯನ್​ಗೆ ಸಿದ್ದರಾಮಯ್ಯ ಎಚ್ಚರಿಕೆ ಸಂದೇಶ – Kannada News | CM Siddaramaiah Opposes Making Malayalam Compulsory in Kannada Schools, Writes to Kerala CM Pinarayi Vijayan

ಸಿಎಂ ಸಿದ್ದರಾಮಯ್ಯ, ಕೇರಳ ಸಿಎಂ ಪಿಣರಾಯಿ ವಿಜಯನ್

ಬೆಂಗಳೂರು, ಜನವರಿ 09: ಕೋಗಿಲು ಲೇಔಟ್ ವಿಚಾರಕ್ಕೆ ಮೂಗು ತೂರಿಸಿದ್ದ ಕೇರಳ ಇದೀಗ ಮಲಯಾಳಂ ಭಾಷಾ ಮಸೂದೆ-2025 (Kerala Malayalam Language Bill) ಮೂಲಕ ಕಿರಿಕ್​ ತೆಗೆದಿದ್ದು, ಕೇರಳದ ಕನ್ನಡ ಶಾಲೆಗಳಲ್ಲಿ ಮಲಯಾಳಂ ಹೇರಿಕೆಗೆ ಮುಂದಾಗಿದೆ. ಸದ್ಯ ಕೇರಳ ಸರ್ಕಾರದ ಈ ನಡೆಯನ್ನ ತೀವ್ರವಾಗಿ ಖಂಡಿಸಿರುವ ಸಿಎಂ ಸಿದ್ದರಾಮಯ್ಯ (Siddaramaiah), ಸಿಎಂ ಪಿಣರಾಯಿ ವಿಜಯನ್​ಗೆ ಪತ್ರ ಬರೆದಿದ್ದಾರೆ. ಆ ಮೂಲಕ ಗಡಿ ಜಿಲ್ಲೆಯಲ್ಲಿ ಕೇರಳದ ಮಲಯಾಳಂ ಭಾಷಾ ಮಸೂದೆ ಜಾರಿಯಾದರೆ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.

ಭಾಷಾ ಮಸೂದೆಯ ಬಗ್ಗೆ ಸಿಎಂ ಕಳವಳ 

ಕೇರಳದಲ್ಲಿ ಮಲಯಾಳಂ ಕಡ್ಡಾಯ ಮಸೂದೆ ಜಾರಿಗೆ ಮುಂದಾಗಿದೆ. ಇದು ಗಡಿಭಾಗದ ಕಾಸರಗೋಡು ಮತ್ತು ಮಂಜೇಶ್ವರ ಭಾಗದ ಕನ್ನಡ ಮಕ್ಕಳ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಕೇರಳ ಸರ್ಕಾರದ ನಡೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಇತ್ತ ಸಿಎಂ ಸಿದ್ದರಾಮಯ್ಯ ಕೂಡ ಭಾಷಾ ಮಸೂದೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಕೇರಳ ಸಿಎಂ ಪಿಣರಾಯಿ ವಿಜಯನ್​ಗೆ ಸಿಎಂ ಸಿದ್ದರಾಮಯ್ಯ ಪತ್ರ

ಕಾಸರಗೋಡಿನಲ್ಲಿ ಕನ್ನಡ ಶಾಲೆಗಳಲ್ಲಿ ಮಲಯಾಳಂ ಮೊದಲ ಭಾಷೆಯಾಗಿ ಕಡ್ಡಾಯಗೊಳಿಸುವುದು ಸರಿಯಲ್ಲ. ​ಗಡಿ ಭಾಗದಲ್ಲಿ ಮಲಯಾಳಂ, ಕನ್ನಡ, ತುಳು, ಬ್ಯಾರಿ ಸೇರಿದಂತೆ ಹಲವು ಭಾಷೆಗಳನ್ನು ಮಾತನಾಡುವವರಿದ್ದಾರೆ. ಹಾಗಾಗಿ ಮಲಯಾಳಂ ಹೇರಿಕೆ ಮಾಡುವುದರಿಂದ ಮಕ್ಕಳಿಗೆ ಹೊರೆಯಾಗುವುದರಿಂದ ಮಕ್ಕಳ ಶೈಕ್ಷಣಿಕ ವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಕೇರಳದ ಮಲಯಾಳ ಭಾಷಾ ಮಸೂದೆಯಲ್ಲೇನಿದೆ? ಕನ್ನಡಿಗರಿಗೆ, ಕನ್ನಡ ಶಾಲೆಗಳಿಗೇಕೆ ಆತಂಕ?

ಸಂವಿಧಾನದ 29, 30, 350A, 350B ಅಡಿ ಶಿಕ್ಷಣ ಪಡೆವ ಹಕ್ಕಿದೆ. ತಮ್ಮ ಸಂಸ್ಕೃತಿ ಉಳಿಸಿಕೊಳ್ಳುವ ಹಕ್ಕಿದೆ. ​ಯಾವುದೇ ಭಾಷೆ ಪ್ರಚಾರ ಇನ್ನೊಂದು ಭಾಷೆಯ ಹೇರಿಕೆ ಆಗಬಾರದು. ಒಂದು ವೇಳೆ ಮಸೂದೆ ಅಂಗೀಕರಿಸಿದರೆ ಕರ್ನಾಟಕವು ಈ ಮಸೂದೆಯನ್ನು ಸಾಂವಿಧಾನಿಕವಾಗಿ ವಿರೋಧಿಸಲಿದೆ. ​ಕೇರಳ ಸರ್ಕಾರವು ಈ ನಿರ್ಧಾರವನ್ನು ಮರುಪರಿಶೀಲಿಸಬೇಕು. ಭಾಷಾ ಅಲ್ಪಸಂಖ್ಯಾತರು ಮತ್ತು ಶಿಕ್ಷಣ ತಜ್ಞರೊಂದಿಗೆ ಚರ್ಚಿಸಬೇಕು ಎಂದು ಪತ್ರದ ಮೂಲಕ ಕೇರಳ ಸಿಎಂ ವಿಜಯನ್​ಗೆ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ವರದಿ: ಈರಣ್ಣ ಬಸವ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 10:02 pm, Fri, 9 January 26

Source link