All posts by nagaraj11081993

G-RAM-G: ಜಿ ರಾಮ್‌ ಜಿ ಕಾಯ್ದೆ- ಮತ್ತಷ್ಟು ಉದ್ಯೋಗ, ಮತ್ತಷ್ಟು ಭದ್ರತೆ – Kannada News | How Viksit Bharat G RAM G act can empower rural community

ಕಳೆದ ಕೆಲ ದಿನಗಳಿಂದ ಸಾಕಷ್ಟು ಸದ್ದು ಮಾಡುತ್ತಿರುವ ಕಾಯಿದೆಗಳಲ್ಲಿ ಒಂದು ಜಿ ರಾಮ್‌ ಜಿ. ಇದರ ಪೂರ್ತಿ ಹೆಸರು ವಿಬಿ-ಜಿ-ರಾಮ್‌-ಜಿ ಅಂದರೆ ವಿಕಸಿತ ಭಾರತ- ರೋಜಗಾರ ಮತ್ತು ಆಜೀವಿಕ ಮಿಷನ್‌ (ಗ್ರಾಮೀಣ) Viksit Bharat – Guaratee Rozgar Azeevika Mission (Gramin) (VB-G-RAM-G) ಎಂಬುದಾಗಿದೆ. ಈ ಕಾಯ್ದೆಯು ಗ್ರಾಮೀಣ ಉದ್ಯೋಗ ವ್ಯವಸ್ಥೆಯನ್ನು ತಳಮಟ್ಟದಿಂದ ಬಲಪಡಿಸುವ ಗುರಿ ಹೊಂದಿದೆ. ಇದು ರೈತರು ಹಾಗೂ ಕಾರ್ಮಿಕರ ಘನತೆಗೆ, ಪಾರದರ್ಶಕತೆ ಹಾಗೂ ನಿಜವಾದ ಗ್ರಾಮೀಣ ಸಬಲೀಕರಣಕ್ಕೆ ಒತ್ತು ನೀಡುತ್ತದೆ.

60 ದಿನಗಳ ವಿರಾಮ

ಕೃಷಿ ಋತುವಿನಲ್ಲಿ ಕಾರ್ಮಿಕರಿಗೆ 60 ದಿನಗಳ ವಿರಾಮ ಕಡ್ಡಾಯವಾಗಿದೆ. ಇದರಿಂದ ರೈತರು ತಮ್ಮ ವೈಯಕ್ತಿಕ ಕೃಷಿ ಕಾರ್ಯಗಳನ್ನು ಮಾಡಿಕೊಳ್ಳಲು ಸಹಾಯವಾಗಲಿದೆ. ಈ 60 ದಿನದ ವಿರಾಮ ಅವಧಿ ಯಾವಾಗ ಇಡಬೇಕೆಂಬುದನ್ನು ಆಯಾ ಪ್ರದೇಶದ ಆಡಳಿತದ ರಾಜ್ಯ ಸರ್ಕಾರ ನಿರ್ಧರಿಸಬಹುದು. ಆಯಾ ಪ್ರದೇಶದ ಬಿತ್ತನೆ ಅಥವಾ ಕೊಯ್ಲು ಅವಧಿಗೆ ನೋಡಿ ಇದನ್ನು ನಿರ್ಧರಿಸಬಹುದು.

ಹಿಂದೆ ಶರದ್ ಪವಾರ್ ಅವರು ಕೃಷಿ ಸಚಿವರಾಗಿದ್ದಾಗ, ವರ್ಷಕ್ಕೆ ಕನಿಷ್ಠ ಮೂರು ತಿಂಗಳಾದರೂ ವಿರಾಮ ಅವಧಿ ಕೊಡಬೇಕು ಎಂದು ಅಂದಿನ ಗ್ರಾಮೀಣಾಭಿವೃದ್ಧಿ ಸಚಿವ ಜೈರಾಮ್ ರಮೇಶ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದರು. ಹೀಗಾಗಿ, ಹೊಸ ಕಾಯ್ದೆಯಲ್ಲಿ 60 ದಿನಗಳ ವಿರಾಮ ಅವಧಿ ನಿಗದಿ ಮಾಡಿರುವುದು ಅಚ್ಚರಿ ಅನಿಸುವುದಿಲ್ಲ.

ರಾಜ್ಯಗಳಿಗೆ ಹೆಚ್ಚಿನ ಹಣಕಾಸು ಬಾಧ್ಯತೆ

ಹಿಂದೆ ಪಿ ಚಿದಂಬರಂ ಹಣಕಾಸು ಸಚಿವರಾಗಿದ್ದಾಗ, ಮನ್ರೇಗಾ ಯೋಜನೆಯ ವೆಚ್ಚದಲ್ಲಿ ರಾಜ್ಯಗಳೂ ನಿರ್ದಿಷ್ಟ ಪ್ರಮಾಣದ ವೆಚ್ಚವನ್ನು ಭರಿಸಬೇಕೆಂದು ಬಯಸಿದ್ದರು. ಆಗ ಸಾಮಗ್ರಿ ವೆಚ್ಚದಲ್ಲಿ ಕೇಂದ್ರ ಸರ್ಕಾರ ಶೇ.75 ಮತ್ತು ರಾಜ್ಯಗಳು ಶೇ. 25 ಹೊತ್ತುಕೊಂಡಿದ್ದವು. ಯೋಜನೆಗಳನ್ನು ಜವಾಬ್ದಾರಿಯಾಗಿ ನಿರ್ವಹಿಸುವುದು ರಾಜ್ಯಗಳ ಕೆಲಸ. ರಾಜ್ಯಗಳ ಹಣದ ಪಾಲುದಾರಿಕೆ ಹೆಚ್ಚಾದಂತೆ, ಯೋಜನೆಗಳ ಮಾಲೀಕತ್ವ ಕೂಡ ಬಲವಾಗುತ್ತದೆ. ಆಸ್ತಿ ಯೋಜನೆ, ನಿರ್ವಹಣೆ ಹಾಗು ಅನುಷ್ಠಾನದಲ್ಲಿ ಹೆಚ್ಚಿನ ಜವಾಬ್ದಾರಿ ಬರುತ್ತದೆ.

ಇದನ್ನೂ ಓದಿ: 2025ರಲ್ಲಿ ಸರ್ಕಾರ ತೆಗೆದುಕೊಂಡ ಪ್ರಮುಖ ಸುಧಾರಣೆಗಳಿವು…

ಬೇಡಿಕೆ ಬದಲು ಪೂರೈಕೆ ಆಧಾರಿತ ಕೆಲಸ ಹಂಚಿಕೆ

ಬೇಡಿಕೆ ಆಧಾರದ ಮೇಲೆ ಕೆಲಸ ಹಂಚಿಕೆ ಮುಕ್ತವಾಗಿತ್ತು, ಆದರೆ, ಅದು ಸರ್ಕಾರದ ಬಜೆಟ್‌ನ ಮಿತಿಯಲ್ಲೇ ಇರಬೇಕಿತ್ತು. ಈಗ ಪೂರೈಕೆ ಆಧಾರಿತ ವ್ಯವಸ್ಥೆ ಹೆಚ್ಚು ಯೋಜಿತವಾಗಿದೆ. ‘ವಿಕಸಿತ ಗ್ರಾಮ ಪಂಚಾಯತ್ ಯೋಜನೆ’ಗಳ ಮೂಲಕ ಕೆಲಸವನ್ನು ಬ್ಲಾಕ್, ಜಿಲ್ಲೆ, ರಾಜ್ಯ ಮಟ್ಟದಲ್ಲಿ ಯೋಜನೆ ಮಾಡಿ ವಿಕಸಿತ ಭಾರತ್ ರಾಷ್ಟ್ರೀಯ ಗ್ರಾಮೀಣ ಮೂಲಸೌಕರ್ಯ ಸ್ಟಾಕ್‌ಗೆ ಸೇರಿಸಲಾಗುತ್ತದೆ. ಈಗ, ನಿರ್ದಿಷ್ಟ, ಅನುಮೋದಿತ ಕಾರ್ಯಭಾರ ಇದ್ದಾಗ ಮಾತ್ರ ಕೆಲಸ ನೀಡುತ್ತಾರೆ. ರಾಜ್ಯಗಳು ಕನಿಷ್ಠ 125 ದಿನಗಳ ಕೆಲಸ ಕೊಡಬೇಕು. ಸಾಮರ್ಥ್ಯ ಇದ್ದರೆ ಅವು ಹೆಚ್ಚು ದಿನ ನೀಡಬಹುದು. 15 ದಿನಗಳಲ್ಲಿ ಕೆಲಸ ಸಿಗದಿದ್ದರೆ, ಭತ್ಯೆ ಕೊಡುತ್ತಾರೆ. ಈ ಕಾಯ್ದೆಯ ಮೂಲಕ ಕಾರ್ಮಿಕರು ಮತ್ತಷ್ಟು ಬಲಿಷ್ಠರಾಗಿದ್ದಾರೆ.

ಕೆಲಸ ಸಿಗದಿದ್ದರೆ ನಿರುದ್ಯೋಗ ಭತ್ಯೆ

ಕೆಲಸಗಾರನು ಕೆಲಸ ಕೇಳಿದರೂ ನಿಗದಿತ ಅವಧಿಯಲ್ಲಿ ಕೆಲಸ ಸಿಗದಿದ್ದರೆ, ಅವನಿಗೆ ನಿರುದ್ಯೋಗ ಭತ್ಯೆ ಸಿಗುತ್ತದೆ. ಒಂದು ರಾಜ್ಯವು ನಿರ್ದಿಷ್ಟ ಹಂಚಿಕೆಗೆ ಮೀರಿ ಕೆಲಸ ನೀಡಿದರೆ, ಅದು ಆ ರಾಜ್ಯದ ನೀತಿ ಆಯ್ಕೆಯಾಗಿರುತ್ತದೆ, ಹಾಗಂತ ಯಾವುದೇ ಕಾನೂನು ಒತ್ತಾಯವಿಲ್ಲ. ಹಾಗೆ ಮಾಡಿದರೂ ಕಾರ್ಮಿಕರ ಹಕ್ಕುಗಳಿಗೆ ಯಾವುದೇ ಚ್ಯುತಿ ಬರದಂತೆ ಕಾಪಾಡಲಾಗುತ್ತದೆ.

ರಾಷ್ಟ್ರೀಯ ಗ್ರಾಮೀಣ ಮೂಲಸೌಕರ್ಯ ವ್ಯವಸ್ಥೆ ಅಡಿಯಲ್ಲಿ ಕೆಲಸ ಹಂಚಿಕೆ ಹೆಚ್ಚು ವ್ಯವಸ್ಥಿತವಾಗಿದೆ. ಡೇಟಾ ಆಧಾರಿತ ಹಂಚಿಕೆ ವಂಚನೆ ಮತ್ತು ಸ್ಥಳೀಯ ಭ್ರಷ್ಟಾಚಾರಕ್ಕೆ ಅವಕಾಶ ಕಡಿಮೆ ಮಾಡುತ್ತದೆ. ಇದರಿಂದ ಯೋಜನೆ ಹೆಚ್ಚು ಪಾರದರ್ಶಕವಾಗಿ ಹಾಗೂ ನಿಯಂತ್ರಿತವಾಗಿ ನಡೆಯುತ್ತದೆ.

ಇದನ್ನೂ ಓದಿ: ಜಲಶಕ್ತಿ ಸುಜಲಾಂ ಭಾರತ್: ನೀರಿನ ಸಮಸ್ಯೆ, ಸಂರಕ್ಷಣೆ ಮತ್ತು ಸಮುದಾಯ ಸಹಭಾಗಿತ್ವ

ಬಯೋಮೆಟ್ರಿಕ್ ಹಾಜರಾತಿಯಿಂದ ಏನು ಉಪಯೋಗ?

ಗ್ರಾಮೀಣ ಬಡತನ 2011-12ರಲ್ಲಿ ಶೇ 25.7 ರಷ್ಟಿತ್ತು. 2023-24ಕ್ಕೆ ಅದು ಶೇ. 4.86 ಕ್ಕೆ ಇಳಿದಿದೆ. ಹೀಗಾಗಿ ಉದ್ಯೋಗ ವ್ಯವಸ್ಥೆಯನ್ನು ಪುನರ್‌ರಚನೆ ಮಾಡಬೇಕಾಗುತ್ತಿದೆ. ಸಾವು, ವಲಸೆ ಇತ್ಯಾದಿ ಕಾರಣದಿಂದ ಹಲವಾರು ಫಲಾನುಭವಿಗಳ ಜಾಬ್ ಕಾರ್ಡ್​ಗಳು ನಿಷ್ಕ್ರಿಯವಾಗುತ್ತಿವೆ. ಇವನ್ನು ದುರುಪಯೋಗಪಡಿಸಿಕೊಳ್ಳುವ ಅವಕಾಶ ಇರುತ್ತದೆ. ಹೀಗಾಗಿ, ಕೆಲಸದ ಸ್ಥಳದಲ್ಲಿ ಬಯೋಮೆಟ್ರಿಕ್ ಹಾಜರಾತಿ ನಿಯಮಗಳನ್ನು ಜಾರಿ ಮಾಡಲಾಗುತ್ತದೆ. ಇದರಿಂದ ಫಂಡ್ ಹಣ ಪೋಲಾಗುವುದು ತಪ್ಪುತ್ತದೆ.

ಗಾಂಧೀಜಿ ಹೆಸರು ಇಲ್ಲವೆಂದಾಕ್ಷಣ ಕಾಯ್ದೆ ಬದಲಾಗಿಲ್ಲ…

ಈ ಕಾಯ್ದೆಯಲ್ಲಿ ಹೆಸರು ಮಾತ್ರವೇ ಬದಲಾಗಿದೆ. ಉದ್ಯೋಗ ಖಾತರಿ, ಕಾರ್ಮಿಕರ ಹಕ್ಕುಗಳು, ಕುಂದುಕೊರತೆ ಪರಿಹಾರ ಅಥವಾ ಸುರಕ್ಷತಾ ಕ್ರಮಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಮಹಾತ್ಮ ಗಾಂಧಿಯವರ ಹೆಸರನ್ನು ತೆಗೆದುಹಾಕುವುದರಿಂದ ನೈತಿಕ ಅಧಿಕಾರ ದುರ್ಬಲಗೊಳ್ಳುತ್ತದೆ ಎಂದು ಕೇಳಿಬರುತ್ತಿರುವ ಟೀಕೆಗಳು ಗಂಭೀರ ಎನಿಸುವುದಿಲ್ಲ.

ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುತ್ತೆ ಹೊಸ ಕಾಯಿದೆ

ಹಿಂದೆ ಈ ವ್ಯವಸ್ಥೆಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿತ್ತು. ಫಲಾನುಭವಿಗಳಿಗೆ ಬಂದ ಹಣವನ್ನು ಮಧ್ಯವರ್ತಿಗಳೇ ನುಂಗಿ ಹಾಕುತ್ತಿದ್ದರು. ಕೇವಲ 76 ಲಕ್ಷ ಕಾರ್ಮಿಕರ ಆಧಾರ್ ಸೀಡಿಂಗ್‌ ಮಾಡಲಾಗಿತ್ತು. ಈಗ ವ್ಯವಸ್ಥೆ ಸುಧಾರಣೆಯಾಗಿದೆ. ರಾಷ್ಟ್ರೀಯ ಎಲೆಕ್ಟ್ರಾನಿಕ್ ನಿಧಿ ನಿರ್ವಹಣಾ ವ್ಯವಸ್ಥೆ 28 ರಾಜ್ಯ ಹಾಗೂ 8 ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೆ ಬಂದಿದೆ. ಈಗ ವೇತನ ನೇರವಾಗಿ ಕಾರ್ಮಿಕರ ಬ್ಯಾಂಕ್ ಖಾತೆಗೆ ಹೋಗುತ್ತದೆ.

ಇದನ್ನೂ ಓದಿ: ನೈಸರ್ಗಿಕ ಕೃಷಿಗಾರಿಕೆ ಭಾರತದ ಕೃಷಿ ಕ್ಷೇತ್ರದ ಭವಿಷ್ಯದ ಹಾದಿ: ನರೇಂದ್ರ ಮೋದಿ

ವೇತನ ಮೇಲೇರದೇ ವಿಧಿಯಿಲ್ಲ…

ವೇತನದ ದರವು ಪ್ರಸ್ತುತ ದರಕ್ಕಿಂತ ಕಡಿಮೆ ಇರಲು ಸಾಧ್ಯವಿಲ್ಲ. ಹೀಗಾಗಿ, ವೇತನ ದರ ಮೇಲೇರಬೇಕೆ ಹೊರತು ಕಡಿಮೆ ಆಗಲು ಸಾಧ್ಯವಾಗದಂತೆ ಮಾಡಿದೆ ಈ ಪರಿಷ್ಕೃತ ಕಾಯ್ದೆ. ಹಾಗಾಗಿ, ಕಾರ್ಮಿಕರಿಗೆ ವೇತನ ಕಡಿಮೆ ಆಗುವ ಆತಂಕವಿಲ್ಲ. ವೇತನ ದರವನ್ನು ಸಮರ್ಪಕವಾಗಿ ನಿಗದಿ ಮಾಡಲು ಕೇಂದ್ರ ಸರ್ಕಾರ ಹೆಚ್ಚು ನಿಖರವಾದ ಹಣದುಬ್ಬರ ಸೂಚ್ಯಂಕಗಳನ್ನು ಬಳಸಬಹುದು. ಹೀಗೆ ಮಾಡಲು ಪದೇ ಪದೇ ಕಾಯ್ದೆಗೆ ತಿದ್ದುಪಡಿ ತರುವ ಅವಶ್ಯಕತೆ ಇರುವುದಿಲ್ಲ.

ಉದ್ಯೋಗ ಖಾತರಿ ದಿನಗಳ ಸಂಖ್ಯೆ ಹೆಚ್ಚಳ

ಕಾಯಿದೆಯು ಉದ್ಯೋಗ ಖಾತರಿಯನ್ನು ವಾರ್ಷಿಕವಾಗಿ 100 ರಿಂದ 125 ದಿನಗಳಿಗೆ ಹೆಚ್ಚಿಸುತ್ತದೆ, ಗ್ರಾಮೀಣ ಜೀವನೋಪಾಯ ಭದ್ರತೆಯನ್ನು ಬಲಪಡಿಸುತ್ತದೆ.

ಕಾಯಿದೆಯಡಿಯಲ್ಲಿನ ಪ್ರಸ್ತುತ ಬದಲಾವಣೆ ಜವಾಬ್ದಾರಿಯುತ ಬಳಕೆ, ಹಣಕಾಸಿನ ಶಿಸ್ತು ಮತ್ತು ಫಲಿತಾಂಶ ಆಧಾರಿತ ಖರ್ಚನ್ನು ಉತ್ತೇಜಿಸುತ್ತದೆ. ರಾಜ್ಯ, ಜಿಲ್ಲಾ ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿ ಕೆಲಸಗಳ ಉತ್ತಮ ಯೋಜನೆ ಮತ್ತು ಅನುಕ್ರಮವನ್ನು ಸಕ್ರಿಯಗೊಳಿಸುತ್ತದೆ. ಸಾರ್ವಜನಿಕ ಹಣವನ್ನು ಉತ್ಪಾದಕವಾಗಿ, ಪಾರದರ್ಶಕವಾಗಿ ಮತ್ತು ಬಾಳಿಕೆ ಬರುವ ಕಾರ್ಯಕ್ರಮ ರೂಪಿಸಲು ಬಳಸುವುದನ್ನು ಖಚಿತಪಡಿಸುತ್ತದೆ. ಕಾಯಿದೆಯಡಿ ಪ್ರಧಾನ ಮಂತ್ರಿ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್‌ನ ಏಕೀಕರಣವು ಸ್ಥಳೀಯ ಅಭಿವೃದ್ಧಿಯ ಸಮಗ್ರ ಮತ್ತು ಸಮಗ್ರ ನೋಟವನ್ನು ಖಚಿತಪಡಿಸುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆಯನ್ನು ಕಾಪಾಡಿದ ಅರಣ್ಯ ಇಲಾಖೆ ಸಿಬ್ಬಂದಿ, ವಿಡಿಯೋ ನೋಡಿ – Kannada News | Forest Department Staff Rescues Leopard From Well at At Ramanagara

ರಾಮನಗರ, (ಜನವರಿ 09): ಆಹಾರ ಅರಸಿ ಬಂದು ಬಾವಿಗೆ ಬಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿ ಸಿಂಗರಾಜಿಪುರ ಗ್ರಾಮದ 30 ಅಡಿ ಆಳದ ಬಾವಿಗೆ ಚಿರತೆ ಬಿದ್ದು ಒದ್ದಾಡಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ದೌಡಾಯಿಸಿ ಚಿರತೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪ್ರತ್ಯೇಕ ಘಟನೆ: ಭೂಸ್ವಾಧೀನ ಪರಿಹಾರ ನೀಡದಕ್ಕೆ NHAI ಕಚೇರಿ, ಡಿಸಿ ಕಾರು ಜಪ್ತಿ – Kannada News | Land Compensation Row: Dharwad NHAI Office and Hassan DC Car Seized by Court Order

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಚೇರಿ ಜಪ್ತಿ

ಧಾರವಾಡ/ಹಾಸನ: ರೈತರಿಗೆ ಭೂಸ್ವಾಧೀನ ಪರಿಹಾರ ನೀಡದ ಹಿನ್ನೆಲೆ ಧಾರವಾಡ ಜಿಲ್ಲಾ ಪ್ರಧಾನ ನ್ಯಾಯಾಲಯದ ಆದೇಶದ ಅನ್ವಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಧಾರವಾಡ ಕಚೇರಿ ಜಪ್ತಿ ಮಾಡಲಾಗಿದೆ. ರೈತರಿಗೆ ನೀಡಬೇಕಿದ್ದ 10 ಕೋಟಿ ರೂ. ಬಡ್ಡಿ ಹಣ ಪಾವತಿ ಮಾಡದ ಕಾರಣ, ನಗರದ ವಿದ್ಯಾಗಿರಿ ಬಡಾವಣೆಯಲ್ಲಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರ ಕಚೇರಿಯ ಪೀಠೋಪಕರಣ, ಕಂಪ್ಯೂಟರ್, ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

ರಾಷ್ಟ್ರೀಯ ಹೆದ್ದಾರಿ 63ಕ್ಕೆಂದು 2012ರಲ್ಲಿ ಗದಗ ನಗರದ ಹೊರಭಾಗದಲ್ಲಿನ ಜಮೀನು ಸ್ವಾಧೀನ ಪ್ರಕ್ರಿಯೆ ನಡೆದಿತ್ತು. ಸ್ವಾಧೀನಪಡಿಸಿಕೊಂಡಿದ್ದ ಕೃಷಿಯೇತರ ಜಮೀನಿನ ಪ್ರತಿ ಚದರ್​​ ಮೀಟರ್‌ಗೆ 1,800 ರೂ. ದರವನ್ನು ನಿಗದಿಪಡಿಸಲಾಗಿತ್ತು. ಇದನ್ನು ಪ್ರಶ್ನಿಸಿ 20 ರೈತರು ಜಿಲ್ಲಾ ದಂಡಾಧಿಕಾರಿಗಳ ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಲಯ ಪ್ರತಿ ಚದರ್​​ ಮೀಟರ್‌ಗೆ 3,400 ರೂ. ನೀಡುವಂತೆ ಆದೇಶಿಸಿತ್ತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಆದೇಶವನ್ನು ಧಾರವಾಡ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರೂ ಕೋರ್ಟ್​​, ಡಿಸಿ ಕೋರ್ಟ್​​ ತೀರ್ಪನ್ನು ಎತ್ತಿ ಹಿಡಿದಿತ್ತು. ಕೋರ್ಟ್​​ ಆದೇಶದ ಅನ್ವಯ ಹೆದ್ದಾರಿ ಪ್ರಾಧಿಕಾರ ಪರಿಹಾರದ ಹಣವನ್ನು ನೀಡಿದ್ದರೂ 2012ರಿಂದ ಬಡ್ಡಿ ಹಣ ನೀಡಲು ಹಿಂದೇಟು ಹಾಕಿತ್ತು. ಹೀಗಾಗಿ ಇದನ್ನು ಪ್ರಶ್ನಿಸಿ ರೈತರು ಮತ್ತೆ ಕೋರ್ಟ್​​ ಮೊರೆ ಹೋಗಿದ್ದರು.

ಇದನ್ನೂ ಓದಿ: ಹಳೆ ವಾಹನ ಹೊಂದಿರುವವರಿಗೆ ಶಾಕ್​​ ಕೊಟ್ಟ ಸಾರಿಗೆ ಸಚಿವರು; 15 ವರ್ಷ ಮೀರಿದ ವೆಹಿಕಲ್ಸ್​​ ಜಪ್ತಿ

ಹಾಸನ ಜಿಲ್ಲಾಧಿಕಾರಿ ಕಾರು ಜಪ್ತಿ

ಜಪ್ತಿ ಮಾಡಲಾದ ಕಾರು

ಇತ್ತ ಹಾಸನದಲ್ಲೂ ಭೂ ಪರಿಹಾರ ನೀಡದ ಹಿನ್ನೆಲೆ ಹಿರಿಯ ಸಿವಿಲ್ ನ್ಯಾಯಾಧೀಶರ ಆದೇಶದಂತೆ ಜಿಲ್ಲಾಧಿಕಾರಿ ಅವರ ಕಾರು ಜಪ್ತಿ ಮಾಡಲಾಗಿದೆ. ಸುಮಾರು‌ 20 ವರ್ಷಗಳ ಹಿಂದೆ ಯಗಚಿ ನಾಲೆಗಾಗಿ ಕಳೆದುಕೊಂಡಿದ್ದ ಭೂಮಿಗೆ 11 ಲಕ್ಷ 22 ಸಾವಿರ ಪರಿಹಾರದ ಮೊತ್ತ ಬಾಕಿ ಇರುವ ಕಾರಣ, ಸಂತ್ರಸ್ತರು ಕೋರ್ಟ್ ಮೆಟ್ಟಿಲೇರಿದ್ದರು.​ ಗುಂಟೆಗೆ 40 ಸಾವಿರದಂತೆ 10.5 ಗುಂಟೆಗೆ ಪರಿಹಾರ ನಿಗದಿಯಾಗಿತ್ತು. ಪರಿಹಾರ ನೀಡುವಂತೆ 2 ವರ್ಷದ ಹಿಂದೆಯೇ ಕೋರ್ಟ್ ಆದೇಶಿಸಿದ್ದರೂ ಹಣ ನೀಡದ ಹಿನ್ನೆಲೆ ಡಿಸಿ ಕಾರು ಜಪ್ತಿ ಮಾಡಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 6:22 pm, Fri, 9 January 26

Source link

RCB vs MI Live Score, WPL 2026: ಕೆಲವೇ ಕ್ಷಣಗಣಲ್ಲಿ ಉದ್ಘಾಟನಾ ಸಮಾರಂಭ ಆರಂಭ

ಮಹಿಳಾ ಪ್ರೀಮಿಯರ್ ಲೀಗ್​ನ ನಾಲ್ಕನೇ ಸೀಸನ್ ಇಂದಿನಿಂದ ಪ್ರಾರಂಭವಾಗುತ್ತಿದೆ. ಮೆಗಾ ಹರಾಜಿನ ನಂತರ ಎಲ್ಲಾ ತಂಡಗಳು ಪ್ರಮುಖ ಬದಲಾವಣೆಗಳಾಗಿದ್ದು ಕೆಲವು ತಂಡಗಳು ಹೊಸ ನಾಯಕಿಯರನ್ನು ನೇಮಿಸಿವೆ. ಇದರೊಂದಿಗೆ ಈ ಸೀಸನ್ ಹಲವು ವಿಧಗಳಲ್ಲಿ ವಿಶೇಷವಾಗಿದ್ದು, ಅದರಲ್ಲಿ ಪ್ರಮುಖವಾಗಿ ಇದೇ ಮೊದಲ ಬಾರಿಗೆ ಜನವರಿ-ಫೆಬ್ರವರಿಯಲ್ಲಿ ನಡೆಯುತ್ತಿದೆ. ಲೀಗ್​ನ ಮೊದಲ ಪಂದ್ಯ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸುತ್ತಿದೆ.

Source link

ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ

ಬೆಂಗಳೂರು, ಜನವರಿ 09: ಮಹಿಳೆಯರು ವಾಸಿಸಲು ಬೆಂಗಳೂರು ಸುರಕ್ಷಿತ ನಗರ ಎಂದು ವರದಿಯೊಂದು ಬಹಿರಂಗವಾಗಿದೆ. ಈ ಬಗ್ಗೆ ಬೆಂಗಳೂರಿನ ಕೆಲ ಮಹಿಳಾ ಮಣಿಗಳು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಬೆಂಗಳೂರು ತುಂಬಾ ಸುರಕ್ಷಿತ ನಗರ ಅನ್ನಿಸುತ್ತದೆ. ಏಕೆಂದರೆ ಬೆಂಗಳೂರು ಮಹಿಳಾ ಪೋಲಿಸರು ನಮಗಾಗಿ ಹಗಲು ರಾತ್ರಿ ಕೆಲಸ ಮಾಡುತ್ತಾರೆ, ಹಾಗಾಗಿ ನಾವು ಸೇಫ್ ಆಗಿದ್ದೇವೆ. ಮಹಿಳೆಯರಿಗಾಗಿ ಸುರಕ್ಷಾ ಆ್ಯಪ್ ಕೂಡ ಇದೆ. ಬೇರೆ ರಾಜ್ಯದಿಂದ ಬಂದಿರುವ ನಮ್ಮ ಸ್ನೇಹಿತೆಯರು ಬೆಂಗಳೂರು ತುಂಬಾ ಸುರಕ್ಷಿತ ನಗರ ಅಂತ ಹೇಳುತ್ತಾರೆ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

 

Source link

Nava Panchama Raj Yoga 2026: ನವಪಂಚಮ ಯೋಗ: ಯಾರಿಗೆಲ್ಲಾ ಅದೃಷ್ಟ? ಇಲ್ಲಿದೆ ನೋಡಿ – Kannada News | Nava Panchama Raj Yoga 2026 to take place during June 2026; Check effects on few zodiac sisgns

ವೈದಿಕ ಜ್ಯೋತಿಷ್ಯದಲ್ಲಿ ಏಳು ಗ್ರಹಗಳ ಉಲ್ಲೇಖ ಇದೆ- ರವಿ, ಚಂದ್ರ, ಕುಜ, ಬುಧ, ಗುರು, ಶುಕ್ರ ಮತ್ತು ಶನಿಯದು. ಯುರೇನಸ್, ನೆಪ್ಚೂನ್ ಇವುಗಳನ್ನು ಗಣನೆಗೆ ತೆಗೆದುಕೊಂಡು ಫಲ ಹೇಳುವ ಪದ್ಧತಿ ಇಲ್ಲ. ಪ್ರತಿ ರಾಶಿಯಲ್ಲಿ 7 ವರ್ಷ ಇರುವಂಥ ಗ್ರಹ ಇದು. ಈ ವರ್ಷ ಅಂದರೆ 2026ರಲ್ಲಿ ಜೂನ್ ಒಂದನೇ ತಾರೀಕಿನ ನಂತರ ಮುಖ್ಯವಾದ ನವ-ಪಂಚಮ ಯೋಗ (Nava Panchama Raj Yoga )ಸೃಷ್ಟಿ ಆಗುತ್ತದೆ. ಈ ಹಿಂದೆ 2025ರಲ್ಲಿ ಅಕ್ಟೋಬರ್ ಹದಿನೆಂಟರಿಂದ ಡಿಸೆಂಬರ್ ಐದನೇ ತಾರೀಕಿನವರೆಗೆ ಈ ಯೋಗವಿತ್ತು.

ನವಪಂಚಮ ಯೋಗ ಎಂದರೇನು:

ಪ್ರಮುಖವಾದ ಗ್ರಹಗಳು ಪರಸ್ಪರ ಒಂಬತ್ತು ಹಾಗೂ ಐದನೇ ಮನೆಯಲ್ಲಿ ಇರುವುದು ನವಪಂಚಮ ಯೋಗ. ಈಗ ಮೀನ ರಾಶಿಯಲ್ಲಿ ಶನೈಶ್ಚರ ಇದ್ದಾನೆ. 2026ರಲ್ಲಿ ಜೂನ್ 2ರಿಂದ ಕರ್ಕಾಟಕ ರಾಶಿಯಲ್ಲಿ ಗುರು ಸಂಚಾರ ಆಗುತ್ತದೆ. ಮೀನ ರಾಶಿಯಲ್ಲಿರುವ ಶನಿಗೆ ಕರ್ಕಾಟಕ ರಾಶಿಯು ಐದನೇ ಮನೆ (ಪಂಚಮ). ಅಲ್ಲಿ ಗುರು ಗ್ರಹ ಇರುತ್ತದೆ. ಕರ್ಕಾಟಕ ರಾಶಿಯಿಂದ ಮೀನ ರಾಶಿ ಒಂಬತ್ತನೇ ಮನೆ (ನವಮ) ಆಗಿ, ಅಲ್ಲಿ ಶನಿ ಇರುತ್ತದೆ. ಇದನ್ನು ನವಪಂಚಮ ಯೋಗ ಎನ್ನಲಾಗುತ್ತದೆ.

ಕರ್ಕಾಟಕ ರಾಶಿಯಲ್ಲಿ ಜೂನ್ ಗೆ ಉಚ್ಚ ಸ್ಥಿತಿಯಲ್ಲಿ ಬರುವಂಥ ಗುರು, ತಾನು ಇರುವ ಸ್ಥಾನದಿಂದ ಒಂಬತ್ತನೇ ಮನೆ- ಅಂದರೆ ತನ್ನದೇ ಸ್ವಕ್ಷೇತ್ರವಾದ ಮೀನ ರಾಶಿಯನ್ನು, ಆ ಮನೆಯಲ್ಲಿ ಇರುವ ಶನಿಯ ವೀಕ್ಷಣೆ ಮಾಡುತ್ತಾನೆ. ಇದು ಬಹಳ ವಿಶೇಷ. ದಶಾ-ಭುಕ್ತಿಯ ಪ್ರಭಾವವೂ ಉತ್ತಮವಾಗಿದ್ದಲ್ಲಿ ವ್ಯಕ್ತಿಗೆ ಈ ಯೋಗದ ಸಂಪೂರ್ಣ ಫಲ ದೊರೆಯಲಿದೆ.

ಇದನ್ನೂ ಓದಿ: ಈ ಮೂರು ಸಂಖ್ಯೆಯಲ್ಲಿ ಹುಟ್ಟಿದವರು ಜನವರಿಯಲ್ಲಿ ಅತ್ಯಂತ ಜಾಗರೂಕರಾಗಿರಿ!

ನವಪಂಚಮ ಯೋಗದ ಪ್ರಭಾವ:

ಮೇಷ ರಾಶಿ: ಈ ಯೋಗವು ಆರ್ಥಿಕ ಲಾಭವನ್ನು ತರುತ್ತದೆ. ದೀರ್ಘಕಾಲದ ಹೂಡಿಕೆಗಳಿಂದ ಉತ್ತಮ ಆದಾಯ ಬರಲಿದೆ. ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳು ಸಿಗುವ ಸಾಧ್ಯತೆಯಿದೆ.

ಮಿಥುನ ರಾಶಿ: ವ್ಯಾಪಾರ ಮತ್ತು ವ್ಯವಹಾರದಲ್ಲಿರುವವರಿಗೆ ಈ ಸಮಯ ಲಾಭದಾಯಕ. ಹೊಸ ಯೋಜನೆಗಳನ್ನು ಆರಂಭಿಸಲು ಸುಸಮಯ. ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ.

ಕರ್ಕಾಟಕ ರಾಶಿ: ಗುರುವು ಕರ್ಕಾಟಕ ರಾಶಿಯಲ್ಲಿ ಉಚ್ಚ ಸ್ಥಾನದಲ್ಲಿ ಬರುವುದರಿಂದ, ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ಸ್ಥಿರ ಆಸ್ತಿಯಲ್ಲಿ ಹೂಡಿಕೆ ಮಾಡಲು ಇದು ಒಳ್ಳೆಯ ಸಮಯ.

ತುಲಾ ರಾಶಿ: ವೃತ್ತಿಜೀವನದಲ್ಲಿ ಎದುರಿಸುತ್ತಿದ್ದ ಅಡೆತಡೆಗಳು ನಿವಾರಣೆಯಾಗಲಿವೆ. ಹೊಸ ಉದ್ಯೋಗದ ಹುಡುಕಾಟದಲ್ಲಿರುವವರಿಗೆ ಅವಕಾಶಗಳು ಕೈಬರಲಿವೆ. ಆರ್ಥಿಕವಾಗಿ ಸಬಲರಾಗುತ್ತೀರಿ.

ವೃಶ್ಚಿಕ ರಾಶಿ: ಭಾಗ್ಯ ಸ್ಥಾನದಲ್ಲಿ ಗುರುವಿನ ಪ್ರಭಾವದಿಂದಾಗಿ ಬಾಕಿ ಉಳಿದ ಕೆಲಸಗಳು ಪೂರ್ಣಗೊಳ್ಳಲಿವೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ ವಿದೇಶ ಪ್ರಯಾಣದ ಯೋಗವೂ ಇದೆ.

ಮೀನ ರಾಶಿ: ಆತ್ಮವಿಶ್ವಾಸ ಹೆಚ್ಚಾಗಲಿದೆ. ಜೀವನದಲ್ಲಿ ಹೊಸ ಸವಾಲುಗಳನ್ನು ಎದುರಿಸಲು ಸಿದ್ಧರಾಗುತ್ತೀರಿ. ಶನಿ ಮತ್ತು ಗುರುವಿನ ಅನುಗ್ರಹದಿಂದ ಆರ್ಥಿಕ ಬಿಕ್ಕಟ್ಟುಗಳು ದೂರವಾಗಲಿವೆ.

ನವಪಂಚಮದ ಕೆಲವು ಉದಾಹರಣೆ

ಮೀನದಲ್ಲಿ ಶನಿ- ವೃಶ್ಚಿಕದಲ್ಲಿ ಕುಜ

ಕರ್ಕಾಟಕದಲ್ಲಿ ಗುರು- ವೃಶ್ಚಿಕದಲ್ಲಿ ಕುಜ

ಮೀನದಲ್ಲಿ ಶನಿ- ಕರ್ಕಾಟಕದಲ್ಲಿ ಗುರು

ಮಕರದಲ್ಲಿ ಶನಿ- ವೃಷಭದಲ್ಲಿ ಶುಕ್ರ

ಮೇಷದಲ್ಲಿ ಚಂದ್ರ- ಧನುಸ್ಸು ಗುರು

ಮೀನದಲ್ಲಿ ಗುರು- ಕರ್ಕಾಟಕದಲ್ಲಿ ಚಂದ್ರ

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ: ದೂರು ದಾಖಲು, Y ಭದ್ರತೆ ಆಗ್ರಹ – Kannada News | KS Eshwarappa receives Life threat call from abroad, Case Book

ಶಿವಮೊಗ್ಗ, (ಜನವರಿ 09) : ಮಾಜಿ ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಅವರಿಗೆ ವಿದೇಶದಿಂದ ಮತ್ತೊಮ್ಮೆ ಬೆದರಿಕೆ ಕರೆ ಬಂದಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಈಶ್ವರಪ್ಪ ಅವರು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ನಿಖಿಲ್ ಅವರನ್ನು ಭೇಟಿ ಮಾಡಿ ಅಧಿಕೃತ ದೂರು ಸಲ್ಲಿಸಿದ್ದಾರೆ. ಜ.7ರಂದು ವಿದೇಶದಿಂದ ಈಶ್ವರಪ್ಪ ಅವರಿಗೆ ಬೆದರಿಕೆ ಕರೆ ಬಂದಿದ್ದು, ಇದರಿಂದ ಅವರ ಭದ್ರತೆ ಕುರಿತಾಗಿ ಮತ್ತೆ ಆತಂಕ ಉಂಟಾಗಿದೆ. ಈ ಹಿಂದೆ ಕೂಡ ಬೆದರಿಕೆ ಕರೆಗಳ ಹಿನ್ನೆಲೆಯಲ್ಲಿ ಈಶ್ವರಪ್ಪ ಅವರಿಗೆ ಪೊಲೀಸ್ ಭದ್ರತೆ ಹಾಗೂ ಎಸ್ಕಾರ್ಟ್ ವ್ಯವಸ್ಥೆ ಒದಗಿಸಲಾಗಿತ್ತು. ಆದರೆ ಇತ್ತೀಚೆಗೆ ರಾಜ್ಯ ಸರ್ಕಾರ ಎಸ್ಕಾರ್ಟ್ ಹಾಗೂ ಪೊಲೀಸ್ ಭದ್ರತೆಯನ್ನು ಹಿಂಪಡೆದಿತ್ತು . ಇದೀಗ ಮತ್ತೆ ತಮಗೆ Y ಸೆಕ್ಯೂರಿಟಿ ನೀಡಬೇಕೆಂದು ಆಗ್ರಹಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ತಡರಾತ್ರಿ ಇಲಿ ಪಾಷಾಣ ಆರ್ಡರ್ ಮಾಡಿದ ಮಹಿಳೆಯ ಜೀವ ಉಳಿಸಿದ ಡೆಲಿವರಿ ಬಾಯ್! – Kannada News | Tamil Nadu woman orders rat poison at late night Blinkit delivery agent refuses to deliver and Saved Life

ಚೆನ್ನೈ, ಜನವರಿ 9: ಕೆಲವೊಮ್ಮೆ ನಮ್ಮ ಬದುಕಿನಲ್ಲಿ ಒಬ್ಬೊಬ್ಬರು ನಾನಾ ರೀತಿಯಲ್ಲಿ ಹೀರೋಗಳಾಗಿ ಪ್ರವೇಶ ಮಾಡುತ್ತಾರೆ. ಹೀರೋ ಎಂದರೆ ಹೀಗೇ ಇರಬೇಕು ಎಂಬುದು ಸಿನಿಮಾಗೆ ಮಾತ್ರ ಸೀಮಿತ. ನಿಜ ಜೀವನದ ಹೀರೋಗಳು ಯಾವ ರೂಪದಲ್ಲಿ ಬೇಕಾದರೂ ಇರಬಹುದು. ತಮಿಳುನಾಡಿನ ಮಹಿಳೆಯೊಬ್ಬರ ಪಾಲಿಗೆ ಬ್ಲಿಂಕಿಟ್ ಡೆಲಿವರಿ ಬಾಯ್ ಹೀರೋ ರೂಪದಲ್ಲಿ ಬಂದು ಕಾಪಾಡಿದ್ದಾರೆ. ಆಕೆ ತಡರಾತ್ರಿ ಬ್ಲಿಂಕಿಟ್​​ನಲ್ಲಿ 3 ಇಲಿ ಪಾಷಾಣದ ಪ್ಯಾಕೆಟ್ ಆರ್ಡರ್ ಮಾಡಿದ್ದರು. ಇದನ್ನು ನೋಡಿದಾಗ ಆ ಡೆಲಿವರಿ ಬಾಯ್​​ಗೆ ವಿಚಿತ್ರವೆನಿಸಿತ್ತು. ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಈ ಪಾಷಾಣ ಆರ್ಡರ್ ಮಾಡಿರಬಹುದಾ? ಎಂಬ ಅನುಮಾನ ಅವರನ್ನು ಕಾಡಿತ್ತು. ಹೀಗಾಗಿ, ಅವರು ಆ ಪಾಷಾಣವನ್ನು ಆಕೆಗೆ ಡೆಲಿವರಿ ನೀಡಲಿಲ್ಲ. ಅವರು ತೆಗೆದುಕೊಂಡ ಆ ಒಂದು ನಿರ್ಧಾರದಿಂದಾಗಿ ಆ ಮಹಿಳೆಯ ಪ್ರಾಣ ಉಳಿಯಿತು!

ಆ ಡೆಲಿವರಿ ಬಾಯ್ ತನಗೇ ಅರಿವಿಲ್ಲದಂತೆ ಒಂದು ದುರಂತವನ್ನು ತಪ್ಪಿಸಿದ್ದಾರೆ. ತಡರಾತ್ರಿಯಲ್ಲಿ ಯಾರೂ 3 ಪ್ಯಾಕೆಟ್ ಇಲಿ ಪಾಷಾಣ ಆರ್ಡರ್ ಮಾಡುತ್ತಾರೆ ಎಂಬ ಅನುಮಾನ ಬಂದಿದ್ದರಿಂದಾಗಿಯೇ ಆಕೆಯ ಪ್ರಾಣ ಉಳಿದಿದೆ. ಆ ಪಾಷಾಣವನ್ನು ಡೆಲಿವರಿ ನೀಡಲು ಆಕೆಯ ಮನೆಗೆ ಹೋದಾಗ ಅಲ್ಲಿನ ಪರಿಸ್ಥಿತಿ ನೋಡಿ ಡೆಲಿವರಿ ಬಾಯ್​​ಗೆ ಏನೋ ಸರಿಯಿಲ್ಲ ಎನಿಸಿತ್ತು. ಹೀಗಾಗಿ, ಪಾಷಾಣವನ್ನು ನೀಡದೆ ವಾಪಾಸ್ ಬಂದಿದ್ದರು.

ಇದನ್ನೂ ಓದಿ: ಪ್ರೇಯಸಿಯನ್ನು ಮದುವೆಯಾಗಲು ಅಪಘಾತದ ನಾಟಕವಾಡಿದ ಯುವಕನ ಪ್ಲಾನ್ ಉಲ್ಟಾ ಆಗಿದ್ದು ಹೇಗೆ?

ಕೊನೆಗೆ ಅವರು ಈ ಘಟನೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡರು. “ಒಟ್ಟು 3 ಇಲಿ ಪಾಯ್ಸನ್ ಪ್ಯಾಕೆಟ್ ಆರ್ಡರ್ ಮಾಡಿದ್ದರು. ಅವರು ಅದನ್ನು ಆರ್ಡರ್ ಮಾಡಿದಾಗ ಅವರು ಏನು ಯೋಚಿಸುತ್ತಿದ್ದರು ಎಂದು ನನಗೆ ತಿಳಿದಿರಲಿಲ್ಲ. ಆದರೆ ಅವರು ತುಂಬಾ ಅಳುತ್ತಿರುವುದನ್ನು ನೋಡಿ ಅವರಿಗೆ ಏನೋ ಸಮಸ್ಯೆ ಆಗಿದೆ ಎಂದು ನನಗೆ ಅನಿಸಿತು. ಅದೇ ಕಾರಣಕ್ಕೆ ನಾನು ಆ ಆರ್ಡರ್​ ಅನ್ನು ಅವರಿಗೆ ನೀಡಲಿಲ್ಲ. ನಾನು ಆ ಮಹಿಳೆಯ ಬಳಿ ನಿಮಗೇನೇ ಸಮಸ್ಯೆಯಿದ್ದರೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ಹೇಳಿದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ದಂಪತಿ ಸರಸದಲ್ಲಿದ್ದಾಗ ಮಾಸ್ಟರ್​​ ಕೀ ಬಳಸಿ ರೂಂಗೆ ಬಂದ ಸಿಬ್ಬಂದಿ; ಲೀಲಾ ಪ್ಯಾಲೇಸ್​​​ ಹೋಟೆಲ್​ಗೆ 10 ಲಕ್ಷ ರೂ. ದಂಡ!

ಡೆಲಿವರಿ ನೀಡಲು ಹೋದಾಗ ‘ನೀವು ಆತ್ಮಹತ್ಯೆ ಮಾಡಿಕೊಳ್ಳಲು ಇದನ್ನು ಆರ್ಡರ್ ಮಾಡಿದ್ದೀರಾ?’ ಎಂದು ಕೇಳಿದೆ. ಅವರು ‘ಇಲ್ಲ, ಬ್ರದರ್ ಹಾಗಲ್ಲ’ ಎಂದು ತಡವರಿಸಿದರು. ಅದಕ್ಕೆ ನಾನು ‘ಇಲ್ಲ, ಸುಳ್ಳು ಹೇಳಬೇಡಿ. ನೀವು ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ದೀರಿ ಅಲ್ಲವೇ? ನಿಮಗೆ ನಿಜಕ್ಕೂ ಮನೆಯಲ್ಲಿ ಇಲಿಯ ಸಮಸ್ಯೆ ಇದ್ದರೆ ನೀವು ಅದನ್ನು ಸಂಜೆಯೇ ಆರ್ಡರ್ ಮಾಡಬಹುದಿತ್ತು. ನಾಳೆ ಬೆಳಗ್ಗೆಯೂ ಮಾಡಬಹುದಿತ್ತು. ಇಷ್ಟು ರಾತ್ರಿ ವೇಳೆ ಯಾಕೆ ಆರ್ಡರ್ ಮಾಡಿದಿರಿ?’ ಎಂದು ಕೇಳಿದೆ. ಕೊನೆಗೆ ನಾನು ಅವರ ಮನವೊಲಿಸಿ ಆರ್ಡರ್ ಅನ್ನು ಕ್ಯಾನ್ಸಲ್ ಮಾಡಿಸಿದೆ. ಆಕೆಯ ಜೀವ ಉಳಿಸಿದ ತೃಪ್ತಿ ನನಗಿದೆ” ಎಂದು ಆ ಡೆಲಿವರಿ ಬಾಯ್ ಹೇಳಿದ್ದಾರೆ. ಅವರ ಈ ಕಾರ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Null Stern Hotel: ಈ ಹೋಟೆಲ್​​​ಗೆ ಗೋಡೆ ಇಲ್ಲ, ಛಾವಣಿಯೂ ಇಲ್ಲ, ಎಲ್ಲ ಓಪನ್​; ಆದ್ರೂ ಕೂಡ ಪ್ರೇಮಿಗಳ ನೆಚ್ಚಿನ ತಾಣವಿದು – Kannada News | Null Stern Hotel Switzerland: Experience a Wall Free Open Air Mountain Escape

ಗೋಡೆಗಳೂ ಇಲ್ಲ, ಛಾವಣಿಯೂ ಇಲ್ಲದ ಹೋಟೆಲ್ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ ಎಂಬ ಪ್ರಶ್ನೆಯೇ ಅಚ್ಚರಿ ಮೂಡಿಸುವಂತದ್ದು. ಹೆಸರಿಗಷ್ಟೇ ಇದೊಂದು ಹೋಟೆಲ್ ರೂಮ್ ಆಗಿದ್ದರೂ, ಇಲ್ಲಿ ಸಾಮಾನ್ಯ ಹೋಟೆಲ್‌ಗಳಲ್ಲಿ ಕಾಣುವ ಗೋಡೆಗಳು, ಬಾಗಿಲುಗಳು ಅಥವಾ ಛಾವಣಿಯೇ ಇಲ್ಲ. ವಿಶಾಲವಾದ ಬೆಟ್ಟದ ತಪ್ಪಲಿನಲ್ಲಿ ಪ್ರಕೃತಿಯ ಮಧ್ಯೆ ಒಂದೇ ಒಂದು ಹಾಸಿಗೆಯನ್ನು ಇಟ್ಟು ನಿರ್ಮಿಸಲಾದ ಈ ತಾಣವು ಜಗತ್ತಿನ ಅತ್ಯಂತ ರೋಮ್ಯಾಂಟಿಕ್ ಸ್ಥಳಗಳಲ್ಲೊಂದು ಎಂಬ ಖ್ಯಾತಿ ಗಳಿಸಿದೆ. ಪ್ರತೀ ವರ್ಷ ಅನೇಕ ಪ್ರವಾಸಿಗರು ತಮ್ಮ ಸಂಗಾತಿಯೊಂದಿಗೆ ಏಕಾಂತವನ್ನು ಅನುಭವಿಸಲು ಈ ವಿಶಿಷ್ಟ ಹೋಟೆಲ್‌ಗೆ ಭೇಟಿ ನೀಡುತ್ತಾರೆ.

ಈ ರೀತಿಯ ಅಸಾಮಾನ್ಯ ಹೋಟೆಲ್ ವಿಶ್ವದ ಅತ್ಯಂತ ಸುಂದರ ದೇಶಗಳಲ್ಲಿ ಒಂದಾದ ಸ್ವಿಟ್ಜರ್ಲೆಂಡ್‌ನಲ್ಲಿದೆ. ಇದಕ್ಕೆ ‘ನಲ್ ಸ್ಟರ್ನ್’ ಎಂಬ ಹೆಸರಿದ್ದು, ಈ ಪದ ಜರ್ಮನ್ ಭಾಷೆಯಿಂದ ಬಂದಿದ್ದು “ಶೂನ್ಯ ನಕ್ಷತ್ರ” ಎಂಬ ಅರ್ಥವನ್ನು ಹೊಂದಿದೆ. ಸ್ವಿಟ್ಜರ್‌ಲ್ಯಾಂಡ್‌ನ ಗೋಬ್ಸಿ ಎಂಬ ಪರ್ವತ ಶಿಖರದ ಮೇಲೆ ಹಸಿರು ಬೆಟ್ಟಗಳ ಮಧ್ಯೆ ಈ ಹೋಟೆಲ್ ಅನ್ನು ನಿರ್ಮಿಸಲಾಗಿದ್ದು, ಇಲ್ಲಿ ಒಂದು ಹಾಸಿಗೆಯ ಹೊರತು ಬೇರೆ ಯಾವುದೇ ಕಟ್ಟಡದ ರಚನೆ ಇಲ್ಲ. ಪ್ರಕೃತಿಯ ಮಡಿಲಲ್ಲಿ ನಕ್ಷತ್ರಗಳನ್ನು ಎಣಿಸುತ್ತಾ, ಮೌನದ ಸೌಂದರ್ಯವನ್ನು ಅನುಭವಿಸುತ್ತಾ, ಜೋಡಿಗಳು ತಮ್ಮ ಅಮೂಲ್ಯ ಕ್ಷಣಗಳನ್ನು ಕಳೆಯಲು ಸಾಧ್ಯವಾಗುವಂತೆ ಈ ಕಲ್ಪನೆಯನ್ನು ರೂಪಿಸಲಾಗಿದೆ.

ಸಮುದ್ರ ಮಟ್ಟಕ್ಕಿಂತ ಸುಮಾರು 6,463 ಅಡಿ ಎತ್ತರದಲ್ಲಿರುವ ಈ ಸ್ಥಳದಲ್ಲಿ ಸುಂದರವಾದ ಕ್ವೀನ್ ಸೈಸ್ ಬೆಡ್ ಅನ್ನು ಅಳವಡಿಸಲಾಗಿದೆ. ಬಿಳಿ ಬಣ್ಣದ ಮೃದುವಾದ ಬೆಡ್‌ಶೀಟ್‌ಗಳಿಂದ ಹಾಸಿಗೆಯನ್ನು ಸಜ್ಜುಗೊಳಿಸಲಾಗಿದ್ದು, ಸುತ್ತಲೂ ಲ್ಯಾಂಪ್ ಸೆಟ್‌ಗಳಿಂದ ಅಲಂಕಾರ ಮಾಡಲಾಗಿದೆ. ರಾತ್ರಿ ಸಮಯದಲ್ಲಿ ಈ ಬೆಳಕುಗಳು ಪ್ರಕೃತಿಯೊಂದಿಗೆ ಬೆರೆತು ವಿಶೇಷವಾದ ರೋಮ್ಯಾಂಟಿಕ್ ವಾತಾವರಣವನ್ನು ಸೃಷ್ಟಿಸುತ್ತವೆ. ಇದೇ ಕಾರಣಕ್ಕೆ ಈ ತಾಣವನ್ನು ಪ್ರಪಂಚದ ಅತ್ಯಂತ ರೋಮ್ಯಾಂಟಿಕ್ ಪ್ರವಾಸಿ ಸ್ಥಳಗಳ ಪೈಕಿ ಒಂದೆಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: ಈ ನಗರದಲ್ಲಿ ಬಟ್ಟೆ ಧರಿಸಿ ಹೊರ ಬಂದರೆ ಬೀಳುತ್ತೆ ಭಾರೀ ದಂಡ

ಗೋಡೆಗಳೂ ಇಲ್ಲದ, ಛಾವಣಿಯೂ ಇಲ್ಲದ ಈ ಹೋಟೆಲ್‌ನಲ್ಲಿ ಒಂದು ರಾತ್ರಿ ತಂಗಲು ಸುಮಾರು 337 ಅಮೆರಿಕನ್ ಡಾಲರ್, ಅಂದರೆ ಭಾರತೀಯ ಕರೆನ್ಸಿಯಲ್ಲಿ ಸುಮಾರು 29,300 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಈ ವೆಚ್ಚದಲ್ಲಿ ಒಂದು ರಾತ್ರಿಯ ವಾಸ್ತವ್ಯಕ್ಕೆ ಅಗತ್ಯವಿರುವ ಆಹಾರ ಹಾಗೂ ಇತರ ಸೌಲಭ್ಯಗಳೂ ಒಳಗೊಂಡಿರುತ್ತವೆ. ಈ ಅನನ್ಯ ಹೋಟೆಲ್ ಅನ್ನು ಸ್ವಿಟ್ಜರ್‌ಲ್ಯಾಂಡ್‌ನ ಇಬ್ಬರು ಕಲಾವಿದರಾದ ಫ್ರಾಂಕ್ ಮತ್ತು ರಿಕ್ಲಿನ್ ವಿನ್ಯಾಸಗೊಳಿಸಿದ್ದು, ಅವರ ವಿಭಿನ್ನ ಹಾಗೂ ಧೈರ್ಯಶಾಲಿ ಕಲ್ಪನೆ ಇಂದು ವಿಶ್ವದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ದಿನದಿಂದ ದಿನಕ್ಕೆ ಇದರ ಜನಪ್ರಿಯತೆ ಹೆಚ್ಚುತ್ತಿದ್ದು, ಪ್ರಕೃತಿಯೊಂದಿಗೆ ಒಂದಾಗುವ ಅಪರೂಪದ ಅನುಭವವನ್ನು ಹುಡುಕುವವರಿಗೆ ಇದು ಕನಸಿನ ತಾಣವಾಗುತ್ತಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:44 pm, Fri, 9 January 26

Source link

ಐಪಿಎಸ್ ಅಧಿಕಾರಿ ಹೆಸರಲ್ಲಿ ವಂಚನೆಗೆ ಯತ್ನ: ಫೇಕ್​​ ಅಕೌಂಟ್​​ನಿಂದ ಹಣಕ್ಕೆ ಡಿಮ್ಯಾಂಡ್​ – Kannada News | Online Fraud Alert: Fake Account Demands Money in IPS Officer Hakke’s Name

ಐಪಿಎಸ್ ಅಧಿಕಾರಿ ಹೆಸರಲ್ಲಿ ವಂಚನೆಗೆ ಯತ್ನ

ಬೆಂಗಳೂರು, ಜನವರಿ 09: ಇತ್ತೀಚೆಗೆ ಆನ್​​ಲೈನ್​​ ವಂಚನೆ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಲೇ ಇವೆ. ಜನ ಸಾಮಾನ್ಯರು ಮಾತ್ರವಲ್ಲದೆ ಗಣ್ಯರು, ಅಧಿಕಾರಿಗಳ ಸಾಮಾಜಿಕ ಜಾಲತಾಣಗಳ ಅಕೌಂಟ್​​ ಮತ್ತು ವಾಟ್ಯಾಪ್​​ಗಳನ್ನೂ ಹ್ಯಾಕ್​​ ಮಾಡಿ ಹಣ ಪೀಕುವವರ ಸಂಖ್ಯೆ ಹೆಚ್ಚುತ್ತಿದೆ. ಇವುಗಳ ನಡುವೆ ಐಪಿಎಸ್ ಅಧಿಕಾರಿ ಅಕ್ಷಯ್ ಎಂ. ಹಾಕೆ ಹೆಸರಿನಲ್ಲಿಯೇ ವಂಚನೆಗೆ ಯತ್ನ ನಡೆಸಿರೋದು ಬೆಳಕಿಗೆ ಬಂದಿದೆ.

ವಾಟ್ಸಾಪ್​ನಲ್ಲಿ ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿಯಾಗಿರುವ ಅಕ್ಷಯ್ ಅವರ ಫೋಟೋ, ಹೆಸರು ಬಳಸಿಕೊಂಡು ವಂಚಕರು ಹಣ ಕೇಳುತ್ತಿದ್ದು, ಬೇರೆ ನಂಬರ್​ನಿಂದ ಅಕೌಂಟ್ ರಚಿಸಿರೋದು ಗೊತ್ತಾಗಿದೆ. ಹಣ ನೀಡುವಂತೆ IPS ಅಧಿಕಾರಿ ಸ್ನೇಹಿತರಿಗೆ ಮೆಸೇಜ್ ಮಾಡಿದ್ದು, ವಿಷಯವನ್ನು ಸ್ನೇಹಿತರು ಡಿಸಿಪಿ ಅಕ್ಷಯ್ ಗಮನಕ್ಕೆ ತಂದಿದ್ದಾರೆ. ಈಗಾಗಲೇ 3-4 ಸ್ನೇಹಿತರಿಗೆ ವಂಚಕರು ಮೆಸೇಜ್ ಕಳುಹಿಸಿದ್ದು, ವಂಚಕರ ಸಂದೇಶಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದಂತೆ ಅಕ್ಷಯ್ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಆನ್​ಲೈನ್ ವ್ಯವಹಾರದ ವೇಳೆ ವಂಚನೆಯಿಂದ ತಪ್ಪಿಸಿಕೊಳ್ಳುವ ಕ್ರಮಗಳಿವು

ವಂಚಕರ ಮೆಸೇಜ್​​ನಲ್ಲಿ ಏನಿದೆ?

ತುರ್ತಾಗಿ ಒಂದು ಪ್ರಾಸ್ಪೆಕ್ಟ್‌ ಖಾತೆಗೆ ಹಣ ಜಮಾ ಮಾಡಬೇಕಿದ್ದು, ನನ್ನ ಆನ್‌ಲೈನ್ ಬ್ಯಾಂಕ್ ವರ್ಗಾವಣೆಯಲ್ಲಿ ಸಮಸ್ಯೆ ಎದುರಾಗಿದೆ. ಅಲ್ಲದೆ ಪ್ರಸ್ತುತ ನಾನು ಒಂದು ಸಭೆಯಲ್ಲಿ ಭಾಗವಹಿಸಬೇಕಿರುವ ಕಾರಣ ನೀವು ಹಣ ವರ್ಗಾಯಿಸಲು ಸಾಧ್ಯವೇ? ಹಾಗಿದ್ದರೆ ನಾನು ಮುಂದಿನ ವಿವರಗಳನ್ನು ನೀಡುತ್ತೇನೆ. ನೀವು ನೀಡಿದ ಹಣವನ್ನು ದಿನದ ಅಂತ್ಯದೊಳಗೆ ನಾನು ನಿಮಗೆ ಮರುಪಾವತಿಸುತ್ತೇನೆ ಎಂಬ ಸಂದೇಶವನ್ನು ವಂಚಕರು ಕಳುಹಿಸಿದ್ದಾರೆ. ವಂಚನೆ ಯತ್ನ ವಿಷಯವನ್ನು ಸ್ವತಃ ಅಧಿಕಾರಿಯೇ ಹಂಚಿಕೊಂಡಿದ್ದು, ವಾಟ್ಸ್ಯಾಪ್​​ನ ನಕಲಿ ಖಾತೆಯಿಂದ ಕೆಲ ನನ್ನ ಪರಿಚಿತರಿಗೆ ಹಣ ಕೇಳಿ ಸಂದೇಶ ಬಂದಿದೆ ಎಂದಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link